ಅಯ್ಯೋ..ನನ್ನ ಬಲ ಹಿಂಬದಿ ಕಣ್ಣು ಹೋಯ್ತಲ್ಲ.......
ನನ್ನ ಟೂವೀಲರ್ ಮತ್ತು ಅದರ ಮೇಲೆ ಕುಳಿತ ನಾನು ಟ್ರಾಫಿಕ್ನಲ್ಲಿ ನಿಂತಿದ್ದರೂ ನನ್ನ ತಲೆ ಅಲ್ಲಲ್ಲ ನನ್ನ ತಲೆಯೊಳಗಿನ ಅಲೋಚನೆಗಳು ಎಲ್ಲೆಲ್ಲೋ ಊರೂರು ಸುತ್ತಿ ಬರುತ್ತಿದ್ದವು. ನನ್ನ ಮುಂದೆ ಬಿ.ಎಂ.ಟಿ.ಸಿ ಬಸ್ಸಿತ್ತು. ಅದರ ಮುಂದೆ ಈ ವರ್ಷ ರಾಷ್ಟ್ರದಲ್ಲೇ ಅತ್ಯುತ್ತಮ ಸೇತುವೆ ಅಂತ ರಾಷ್ಟ್ರ ಪ್ರಶಸ್ತಿ ಪಡೆದ ಕೆ.ಅರ್.ಪುರಂ ತೂಗು ಸೇತುವೆಯ ರಸ್ತೆ ಇತ್ತು.
ಕೆ.ಅರ್. ಪುರಂನಲ್ಲಿರುವ ಅಣ್ಣನ ಮನೆಗೆ ಹೋಗುತ್ತಿದ್ದವನು ಆ ಟ್ರಾಫಿಕ್ನಲ್ಲಿ ನಿಂತಿದ್ದೆ. ಇದ್ದಕ್ಕಿದ್ದಂತೆ ಕಾಲೇಜು ಹುಡುಗನೊಬ್ಬ ಹಿಂಬಾಗದಿಂದ ವೇಗವಾಗಿ ಓಡಿಬಂದಿದ್ದು ನನಗೆ ಗೊತ್ತಾಗಲಿಲ್ಲ. ಅವನ ಉದ್ದೇಶ ಮುಂದಿರುವ ಬಸ್ಸನ್ನು ಹತ್ತುವುದು. ಹಿಂದಿನಿಂದ ಜೋರಾಗಿ ಓಡಿಬಂದವನು ನನ್ನ ಪಕ್ಕದಲ್ಲಿ ಸಾಗಿ ಹೋಗಿದ್ದ. ಹಾದುಹೋಗುವಾಗ ಅವನ ವೇಗಕ್ಕೆ ಬೆನ್ನಿಗೆ ಹಾಕಿದ್ದ ಕಾಲೇಜ್ ಬ್ಯಾಗ್ ನನ್ನ ಸ್ಕೂಟಿಯ ಬಲಗಡೆಯ ಮಿರರಿಗೆ ತಗುಲಿ "ಪಟ್" ಅಂತ ಶಬ್ದವಾಯಿತು. ಏನಾಯಿತು ಅಂತ ನೋಡಿಕೊಳ್ಳುವಷ್ಟರಲ್ಲಿ ಆ ಮಿರರ್ ಕಳಚಿ ಕೆಳಗೆ ಬಿದ್ದು ಒಡೆದು ಹೋಗಿತ್ತು. ಅವನು ಅದೇ ವೇಗದಲ್ಲಿ ನನ್ನ ಮುಂದಿದ್ದ ಬಿ.ಎಮ್.ಟಿ.ಸಿ. ಬಸ್ಸನ್ನು ಹತ್ತಿಬಿಟ್ಟಿದ್ದ.
ನನಗೆ ಕೆಳಗೆ ಬಿದ್ದ ಮಿರರ್ ಮತ್ತು ಮುಂದೆ ಬಸ್ಸು ಹತ್ತಿದ್ದ ಹುಡುಗನನ್ನು ನೋಡುತ್ತಾ,. "ಹೇ...ನಿಂತುಕೊಳ್ಳೋ...ನಿನಗೆ ಕಣ್ಣು ಕಾಣೋಲ್ವ".....ಕೂಗಿದೆ...ಅಷ್ಟರಲ್ಲಿ ಬಸ್ಸು ಮುಂದೆ ಸಾಗಿತ್ತು.
ಎಲ್ಲಾ ಕ್ಷಣಮಾತ್ರದಲ್ಲೇ ಆಗಿಹೋಗಿತ್ತು. ಅಣ್ಣನ ಮನೆಗೆ ಹೋಗಿ ವಾಪಸ್ಸು ಬಂದೆ. ಅವತ್ತು ಏನು ಅನ್ನಿಸಲಿಲ್ಲ.
ಮರುದಿನ ಮತ್ತೆ ಎಂದಿನಂತೆ ಮನೆಯಿಂದ ಹೊರಟಾಗ ಮೊದಲ ಟ್ರಾಫಿಕ್ ಸಿಗುವುದು ಶೇಷಾದ್ರಿಪುರಂನಲ್ಲಿ. ಅಲ್ಲಿ ನಿಂತಿದ್ದೆ. ನನ್ನ ಪಕ್ಕ ಸ್ವಲ್ಪ ಹಿಂದೆ ಸುಂದರವಾದ ಹುಡುಗಿ ಆಕ್ಟೀವ್ ಹೋಂಡದ ಮೇಲೆ ಕುಳಿತಿದ್ದಳು. ಒಂದು ಕ್ಷಣ ಹಿಂದೆ ತಿರುಗಿದೆ....! ನೋಡಲು ಸುಂದರವಾಗಿದ್ದಾಳಲ್ಲ...ಕತ್ತನ್ನು ಸ್ವಲ್ಪ ತಿರುಗಿಸಿದೆ....ಯಾಕೋ ಬೇಡವೆನಿಸಿತ್ತು. ಮೊದಲ ಸಲ ಆಚಾನಕ್ಕಾಗಿ ನೋಡಿದರೆ ಆ ಹುಡುಗಿಗೂ ಏನು ಅನ್ನಿಸುವುದಿಲ್ಲ....ಅದ್ರೆ ಈಗ ಮತ್ತೆ ತಿರುಗಿನೋಡಿದರೆ ಅವಳಿಗೆ ಗೊತ್ತಾಗುವುದರ ಜೊತೆಗೆ ಅವಳ ಮನಸ್ಸಿಗೆ ಇರಿಸುಮುರಿಸು ಉಂಟುಮಾಡಿದಂತಾಗುತ್ತದೆ. ಕಿರಿಕಿರಿ ಅಂತ ನನ್ನ ಬಗ್ಗೆ ಅನ್ನಿಸಬಹುದು. ಆದರೆ ಮನಸ್ಸು ಮತ್ತೆ ಮತ್ತೆ ನೋಡಲು ಆಸೆಪಡುತ್ತಿದೆಯಲ್ಲಾ..!! ಈಗ ಬಲಗಡೆಯ ಮಿರರ್ ಇದ್ದಿದ್ದರೇ.... ಹೆಲ್ಮೆಟ್ಟಿನ ಕಪ್ಪುಗ್ಲಾಸನ್ನು ಪೂರ್ತಿ ಮುಚ್ಚಿಕೊಂಡು ನನ್ನ ಕತ್ತನ್ನು ತಿರುಗಿಸದೆ ಬಲಗಡೆಯ ಮಿರರ್ ಮುಖಾಂತರ ಟ್ರಾಫಿಕ್ ಗ್ರೀನ್ ಸಿಗ್ನಲ್ ಬೀಳುವವರೆಗೂ ಆ ಹುಡುಗಿಯನ್ನು ನೋಡಬಹುದಿತ್ತಲ್ಲ.
ಛೇ! ಎಂಥ ಕೆಲಸವಾಯಿತು. ನಿನ್ನೆಯವರೆಗೂ ಬಲಗಡೆಯ ಮಿರರ್ ಇತ್ತು... ಆ ಹುಡುಗ ನನ್ನ ಕೈಗೆ ಸಿಕ್ಕರೇ.....ಅವನ ಮೇಲೆ ಸಿಕ್ಕಾಪಟ್ಟೆ ಕೋಪ ಬಂತು....ಆಷ್ಟರಲ್ಲಿ ಗ್ರೀನ್ ಸಿಗ್ನಲ್ ಬಿತ್ತು. ನಾನು ಮನಸ್ಸಿಲ್ಲದ ಮನಸ್ಸಿನಲ್ಲಿ ಮುಂದೆ ಸಾಗಿದೆ.
ಮೊದಲು ಇದೇ ರೀತಿ ಎಷ್ಟೋ ಟ್ರಾಫಿಕ್ಕುಗಳಲ್ಲಿ ಬಲಗಡೆಯ ಮಿರರ್ನಿಂದ ನೋಡಿರುವ ಹುಡುಗಿಯರೆಷ್ಟು......ಲೆಕ್ಕಹಾಕಲು ಸಾಧ್ಯವಿಲ್ಲ....ಈ ಒಂದು ಕಾರಣಕ್ಕೂ ನನಗೆ ಬೆಂಗಳೂರಿನ ಟ್ರಾಫಿಕ್ ಇಷ್ಟವಾಗುತ್ತೆ.
ಕೆಲವೊಮ್ಮೆ ಟ್ರಾಫಿಕ್ನಲ್ಲಿ ಹಿಂಭಾಗ ಇದೇ ರೀತಿ ಕಂಡ ಹುಡುಗಿಯರನ್ನು ಹಾಗೇ ನೋಡುತ್ತಾ ಡ್ರೈವ್ ಮಾಡಬೇಕೆನಿಸಿದರೆ.....ಅದೇ ಟ್ರಾಫಿಕ್ನಲ್ಲಿ ನಮಗೆ ಬೇಕಾದ ಹಾಗೆ ಬಲಗಡೆಯ ಮಿರರ್ [ಹುಡುಗಿಯ ಮುಖ ಚೆನ್ನಾಗಿ ಕಾಣುವಂತೆ] ಸ್ವಲ್ಪ ಅಕ್ಕಪಕ್ಕ ತಿರುಗಿಸಿ ಸೆಟ್ ಮಾಡಿಕೊಳ್ಳಬಹುದು. ಮುಂದೆ ರಸ್ತೆಯ ಎಡಬದಿಯಲ್ಲೇ ಚಲಿಸುತ್ತಾ ನಮ್ಮ ಹಿಂದೆ ಟೂವೀಲರ್ನಲ್ಲಿ ಬರುತ್ತಿರುವ ಹುಡುಗಿ ರಸ್ತೆಯುದ್ದಕ್ಕೂ ನಮಗೆ ಮಿರರ್ನಲ್ಲಿ ಕಾಣುವಂತೆ ನಿದಾನವಾಗಿ ಒಂದೇ ಅಳತೆಯ ವೇಗದಲ್ಲಿ ಟೂವೀಲರ್ನಲ್ಲಿ ಸಾಗಬಹುದು..
ಹೆಲ್ಮಟ್ಟಿನ ಹಿಂದಿರುವ ಕಣ್ಣು ಮುಂದಿರುವ ರಸ್ತೆ, ಅಕ್ಕಪಕ್ಕ ಇರುವ ವಾಹನಗಳು, ಸಿಗ್ನಲ್, ಪೋಲಿಸ್ ಎಲ್ಲವನ್ನು ಗಮನಿಸುತ್ತಿದ್ದರೇ... ಮನಸೊಳಗಿನ ಕಣ್ಣು ನನ್ನ ಟೂ ವೀಲರ್ನ ಹಿಂಬದಿ ಕಣ್ಣಿನ[ಬಲಗಡೆಯ ಮಿರರ್] ಜೊತೆಸೇರಿ ಹೀಗೆ ಹುಡುಗಿಯರನ್ನು ನೋಡಿ ಆನಂದಿಸಬಹುದಿತ್ತು.
ಇದಿಷ್ಟೇ ಅಲ್ಲದೇ ಎಲ್ಲಾದರೂ ಬಸ್ಸ್ಟಾಂಡಿಗೆ ಸ್ವಲ್ಪ ಮುಂದೆ ಯಾವುದೋ ಕಾರಣಕ್ಕೆ ರಸ್ತೆ ಪಕ್ಕ ಟೂವೀಲರ್ ನಿಲ್ಲಿಸಿಕೊಂಡಿದ್ದಾಗ... ಹಿಂಬಾಗದಲ್ಲಿ ಬಸ್ ಸ್ಟಾಪ್ ಇದ್ದರಂತೂ...ಅಲ್ಲಿ ಬಸ್ಸಿಗೆ ಕಾಯುತ್ತಿರುವ ಹತ್ತಾರು ಹುಡುಗಿಯರನು ಹೋಲ್ಸೇಲಾಗಿ ಈ ಮಿರರ್ ಸಹಾಯದಿಂದ ನೋಡಿ ಖುಷಿಪಡಬಹುದಿತ್ತು.
ಇಂಥ ಅನೇಕ ಮಜಗಳನ್ನು ರಸ್ತೆಯಲ್ಲಿ ನನ್ನ ಹಿಂಬದಿಯ ಕಣ್ಣಿನ ಸಹಾಯದಿಂದ ಅನುಭವಿಸುತ್ತಿದ್ದೆ. ಅರೆರೆ......ಅಯ್ಯೋ ಇದೆಲ್ಲಾ ಸೀಕ್ರೇಟನ್ನು ನಿಮ್ಮತ್ರ ಹೇಳಿಬಿಟ್ಟೆನಲ್ಲ.....ಇದು ಯಾವುದು ನನ್ನ ಹೆಂಡತಿಗೆ ಗೊತ್ತಿಲ್ಲಾರ್ರೀ......ದಯವಿಟ್ಟು ಅವಳಿಗೆ ಹೇಳಬೇಡ್ರೀ......
ಸರಿ ಇವೆಲ್ಲಾ ತಮಾಷೆಯ ವಿಚಾರಗಳಾಯ್ತಲ್ಲ.......ಅನಿರೀಕ್ಷಿತವಾಗಿ ಏನಾದರೂ ಟ್ರ್ಆಫಿಕ್ ಸಿಗ್ನಲ್ ಜಂಪ್ ಮಾಡಿಬಿಟ್ಟಿರೇ......ಅಥವ ಹಾಗೇ ಸಾಗಿ ಬರುತ್ತಿದ್ದರೇ.....ಅಲ್ಲಿ ನಿಂತಿರುವ ಪೋಲಿಸ್ ಗಮನಿಸಿದನಾ....ಗಮನಿಸಿದರೂ ಏನಾದರೂ ನೋಟ್ ಮಾಡಿಕೊಳ್ಳುತ್ತಿದ್ದಾನಾ.....ಆಗ ನಾವೇನು ಮಾಡಬೇಕು....ಇತ್ಯಾದಿಗಳನ್ನು ತಿಳಿಯಬಹುದು.
ಹತ್ತಾರು ವರ್ಷ ನಮ್ಮ ಜೊತೆಗಿದ್ದರೂ ಅದರ ಕಡೆಗೆ ಗಮನ ಕೊಡದೆ ಕಡೆಗಾಣಿಸುವ ನಾವು ಅವು ಒಂದೆರಡು ದಿನ ಇಲ್ಲವಾದಾಗ ಆಗುವ ತೊಂದರೆ...ಅಲ್ಲಲ್ಲ ತಪ್ಪಿಹೋದ ಅನಂದಗಳಿಂದಾಗಿ ಅವುಗಳ ಮಹತ್ವ ಗೊತ್ತಾಗುತ್ತದೆ ಅಲ್ವೇ...
ಸರಿ ಅದು ಇಲ್ಲದಿದ್ದರೇ ಏನಾಯ್ತು...ನಷ್ಟವೇನಾಗುತ್ತೇ.....ನೋಡೇ ಬಿಡುವ ಅಂತ ಒಂದಷ್ಟು ದಿನ ಹಾಗೇ ಓಡಾಡಿದೆ. ನಿಜಕ್ಕೂ ಹೇಳ್ತೀನಿ......ನನಗೆ ರಸ್ತೆಗಳು ಬೇಸರದ ಸಂಗತಿಗಳೇನೋ ಅನ್ನಿಸತೊಡಗಿದವು. ಚಿಕ್ಕರಸ್ತೆಗಳಾದರೂ ಮಿಗಿಯದ ರಸ್ತೆಗಳಂತೆ ಕಾಡತೊಡಗಿದವು. ಅನೇಕ ಬಾರಿ ಹಿಂದೆ ಬರುತ್ತಿರುವ ವಾಹನಗಳನ್ನು ಕತ್ತು ತಿರುಗಿಸಿ ನೋಡಲಾಗದೆ[ಟೂ ವೀಲರ್ ಓಡಿಸುವಾಗ ಹಾಗೆ ನೋಡಲುಬಾರದು] ಮತ್ತು ದೊಡ್ಡ ರಸ್ತೆಗಳಲ್ಲಿ ಯಾವ ವೇಗದಲ್ಲಿ ಹೋಗಬೇಕೆಂದು ಗೊತ್ತಾಗದೇ ಅನೇಕರಿಂದ ಬೈಸಿಕೊಂಡಿದ್ದೇನೆ.
ಇಷ್ಟೆಲ್ಲಾ ಹೇಳಿದ ಮೇಲು ನೀವು ಕೇಳಬಹುದು. "ಅಯ್ಯೋ ಎಡಬದಿಯ ಹಿಂಬದಿಯ ಕಣ್ಣು ಇತ್ತಲ್ಲ, ಅದನ್ನು ಉಪಯೋಗಿಸಬಹುದಿತ್ತಲ್ಲ ಅಂತ" ನಿಮಗನ್ನಿಸಿದ್ದು ಸರಿ....ನಾನು ಹಾಗೆ ಅಂದುಕೊಂಡು ಆ ಕಣ್ಣನ್ನು ಮೇಲೆ ಹೇಳಿದ ಎಲ್ಲಾ ರೀತಿ ಉಪಯೋಗಿಸಲೆತ್ನಿಸಿದೆ........
ಆಗಲಿಲ್ಲ ಕಣ್ರೀ.....ಅದು ಸರಿಯಾಗಿ ವರ್ಕೌಟ್ ಆಗಲೇ ಇಲ್ಲ. ತುಂಬಾ ಪ್ರಯತ್ನಿಸಿದೆ...ಅದೇಕೋ ಏನೋ ಅದರಲ್ಲಿ ಹುಡುಗಿಯರು ಕಾಣೋದೆ ಇಲ್ಲ. ಕಂಡರೂ ಸುಂದರವಾಗಿ ಕಾಣೋದಿಲ್ಲ.. ಮತ್ತೆ ವೇಗವನ್ನು ಅದರಲ್ಲಿ ನೋಡಿ ನಿಯಂತ್ರಿಸಿಕೊಳ್ಳೋಕಂತೂ ಆಗೋದೆ ಇಲ್ಲ. ರಸ್ತೆ ನಿಯಮಗಳನ್ನು ಸರಿಯಾಗಿ ಪಾಲಿಸದೆ ಒಮ್ಮೆ ಪೋಲೀಸಪ್ಪ ದಂಡವನ್ನು ವಸೂಲಿ ಮಾಡಿದ್ದ. ನಮ್ಮಜ್ಜಿ ಹೇಳಿದಂತೆ ಎಡಗೈ ಏನಿದ್ದರೂ ಅದಕ್ಕೆ ಸರಿ ಅನ್ನುವಂತೆ ಇಲ್ಲೂ ಕೂಡ ಈ ಎಡ ಹಿಂಬದಿ ಕಣ್ಣು ತನ್ನ ಬೆಲೆ ಕಳೆದುಕೊಂಡಿತ್ತು.
ಎಡ-ಅಥವ ಬಲ ತಿರುವು ತೆಗೆದುಕೊಳ್ಳುವಾಗ ನನ್ನ ಹಿಂಬದಿ ಕಣ್ಣಿಲ್ಲದೇ ಕತ್ತನ್ನು ಆಗಾಗ ತಿರುಗಿಸಿ....ಕತ್ತು ನೋವು ಬರತೊಡಗಿತ್ತು. ಸುಮಾರು ಒಂದು ವಾರಕ್ಕೆ ಇಷ್ಟೇಲ್ಲಾ ತೊಂದರೆಯಾದರೆ ಮುಂದೆ ಏನೇನು ಆಗುವುದೋ ಅನ್ನುವ ಭಯಕ್ಕೆ ಮರುದಿನವೇ ನನ್ನ ಮೆಚ್ಚಿನ ಇನ್ನೂ ಚೆನ್ನಾಗಿ ಕಾಣುವ ಬಲ ಹಿಂಬದಿಕಣ್ಣನ್ನು ಹಾಕಿಸಿದ್ದೆ.
ಮತ್ತೆ ಹೊಸ ಹಿಂಬದಿ ಕಣ್ಣನ್ನು ಹಾಕಿಸಿದ ಮೇಲೆ........ಮತ್ತದೇ ಖುಷಿ....
ಚಿತ್ರ ಮತ್ತು ಲೇಖನ.
ಶಿವು.ಕೆ ARPS.
91 comments:
ಹ ಹ.. ರಸಿಕತೆಯ ಬರವಣಿಗೆ ಬಹಳ ಸೊಗಸಾಗಿದೆ.
ಫೋಟೋ ಕೂಡ ಸುಂದರವಾಗಿದೆ.
ಆದರೆ ನೀವು, ನಿಮ್ಮ ಗಾಡಿಯ ಮಿರರ್ ಹೊದೆದ ಹುಡುಗನಿಗೆ ಬೈದೇ ಇಲ್ಲ, ನಮ್ಮ ಕಡೆ ಅಷ್ಟು ಒಳ್ಳೆಯ ಪದಗಳಿಂದ ಬೈಯ್ಯುವುದೇ ಇಲ್ಲ. :)
ಶಿವು, ಮನದ ಮಾತು ಕೃತಿಯಾದಾಗ ಅದರ ಸೊಬಗೇ ಅದ್ಭುತ! ಈ ಬ್ಲಾಗಿಗೆ ನಾವು ನೂರೊಂದು ನಮಸ್ಕಾರ ಹಾಕಲೇಬೇಕು. ಏಕೆಂದರೆ ನಮಗೆ ಿದೊಂದು ಅಭಿವ್ಯಕ್ತಿ ಮಾದ್ಯಮವಾಗಿದೆಯಲ್ಲ ಅದಕ್ಕೆ. ಪೋಟೋಗ್ರಾಫರನಿಗೆ ಹಿಂದೆ ಮುಂದೆ ಮೈಯೆಲ್ಲಾ ಕಣ್ಣಿರಬೇಕೆಂದುಕೊಂಡಿದ್ದೆ. ಈಗ ನೋಡಿದರೆ ನಾವು ಓಡಿಸುವ ಗಾಡಿಗೂ ಮೈಯೆಲ್ಲಾ ಕಣ್ಣಿರಬೇಕೆನ್ನಿಸುತ್ತಿದೆ. ಗುಡ್
ನಾನು ಟೂ ವ್ಹೀಲರ್ ನಲ್ಲಿ ಹೋಗೋರನ್ನ ದ್ವೇಷ ಮಾಡೋದು ಅದೇ ಕಾರಣಕ್ಕೆ!!! ಎಲ್ಲ ಸುಂದರ ಹುಡುಗಿರು ಸ್ಕೂಟಿ ನಲ್ಲಿ ಹೋಗ್ತಾರೆ, ನಾವು ಬುಸ್ ನಲ್ಲಿ ನೇತಾಡುತ್ತಾ, ಅವರ ಇವರ ಕಾಲು ಮೇಲೆ ನಿಂತಿದ್ದೀವಿ ಅಂತ ಬೈಸಿಕೊತ, ಅಪ್ಪಿ ತಪ್ಪಿ ಏನಾದ್ರೂ ಆಂಟೀ ಅಥವಾ ಹುಡುಗಿರ ಹತ್ತಿರ ತಳ್ಳಿ ಬಿದ್ರೆ ಅವರ ಕೈಲು ಹಿಡಿ ಶಾಪ ಹಾಕೀಸ್ಕೋತ ಆಫೀಸ್ ಗೆ ಹೋಗಬೇಕು!!!
ಏನೇ ಇರಲಿ ಈಗ ನಿಮ್ಮ ಎಲ್ಲ ಕಣ್ಣು ಗಳು ಸರಿ ಆಗಿರೋದರಿಂದ ಚೆನ್ನಾಗಿ ಎಂಜಾಯ್ ಮಾಡಿ. ಆದರೆ ಹೆಂಡತಿ ಹಿಂದೆ ಕೂತಿದ್ರೆ ಶ್ರೀ ರಾಮ ಚಂದ್ರ ನ ತಮ್ಮ ನ ತರ ಪೋಸ್ ಕೊಡಿ!!!!
ಮಹಾ ರಸಿಕ....!!
ಬ್ರಹ್ಮಚಾರಿಗಳಾದ ನಾವೆಲ್ಲ ಇದನ್ನೇ ಮಾಡುತ್ತಿದ್ದರೂ ಬ್ಲಾಗಲ್ಲಿ ಹೇಳಿಕ್ಕೊಳ್ಳುವಷ್ಟು ಧೈರ್ಯವಿಲ್ಲ... ಮದುವೆಯಾಗಿಯೂ ನೀವು ಮನಸು ಬಿಚ್ಚಿ ಹೇಳಿದ್ದನ್ನು ನೋಡೀದರೆ, ಮೆಚ್ಚಿಕ್ಕೊಳ್ಳಲೇ ಬೇಕು... ಶಬ್ಬಾಸ್ ಮಾರಾಯ್ರೆ....!
ಹಾಸ್ಯದೊಂದಿಗಿನ ಸಮ್ಮಿಳಿತ ಮತ್ತು ಬರಹದ ಸಮರಸಗಳು ಸೇರಿ, ನಿಮ್ಮ ಲೇಖನ ಅದ್ಭ್ಹುತವಾಗಿ ಮೂಡಿಬಂತು. ಆಭಿನಂದನೆಗಳು....
ಮತ್ತೆ, ಆ ನಿಮ್ಮ ಛಾಯಾಚಿತ್ರದಲ್ಲಿರುವ ಬಲಗನ್ನಡಿಯ ಪ್ರತಿಬಿಂಬದ ಲಲನೆಯನ್ನು ನನಗೂ ಸ್ವಲ್ಪ ಪರಿಚಯ ಮಾಡಿ ಕೊಡ್ಥೀರಾ? ಪ್ಲೀಸ್.........
-ಗಿರಿ
Hello,
Nagu barthide nim kathe odie
ha ha ha :)
Nice one......... Yella hudugaru madode idu yaaru helkolola nivu helikondidira thnks for that :)
Keep writing :)
Ranjitha Veena
ರಸಿಕರ ರಾಜನೇ,
ಚೆನ್ನಾಗಿದೆ, ಚಿತ್ರ-ಲೇಖನ. ಹುಷಾರು ತಮ್ಮ ಹುಷಾರು, ಮಿರರಿನಲ್ಲಿನ ಸು೦ದರಿಯ ನೋಡುತ್ತಾ ಮೈಮರೆತರೆ
ಕಷ್ಟ. ಆಮೇಲೆ ಆಸ್ಪತ್ರೆ ವಾಸದ ಯೋಗ ಬರಬಹುದು. ರಸಿಕತೆ ಜೀವನೋತ್ಸಾಹವನ್ನು ಹೆಚ್ಚಿಸುವ ಚಿಲುಮೆಯ೦ತೆ. ಇರಲಿ, ಅದೂ ಬೇಕು. ಅಳತೆ ಮೀರಿದರೆ ಮಾತ್ರ ಆಪತ್ತು. ನಿಮ್ಮ ಬರಹ ಇಷ್ಟವಾಯಿತು.
ಆಹಾ ಶಿವು ಸರ್,
ನಿಮ್ಮ ಬರವಣಿಗೆಯ ಶೈಲಿ ಸ್ವಲ್ಪ ಬದಲಾಗುತ್ತಿದೆ. ಇರಲಿ, ಅದೂ ಇಷ್ಟವಾಯಿತು. ಹುಡುಗಿಯರ ಬಗ್ಗೆ ಬರೆದರೆ ಯಾರಾದರೂ ಇಷ್ಟ ಆಗ್ಲಿಲ್ಲ ಅಂತಾರೆಯೇ :)
ನನ್ನದೊಂದು ಪುಕ್ಕಟೆ ಸಲಹೆ; ನಿಮ್ಮ ಹಿಂಬದಿ ಬಲಗಣ್ಣಿನ ಮಹತ್ವ ಈಗಲಾದರೂ ಗೊತ್ತಾಯ್ತಲ್ಲ? ಇನ್ನೂ ಮುಂದಾದರೂ, ಮುಂಜಾಗ್ರತ ಕ್ರಮವಾಗಿ ಒಂದು ಸ್ಪೇರ್ ಬಲಗಣ್ಣನ್ನು ನಿಮ್ಮ ವಾಹನದಲ್ಲಿ ಇಟ್ಟುಕೊಳ್ಳುವುದು ಉತ್ತಮ. ಒಡೆದರೆ ತಕ್ಷಣ ಬದಲಾಯಿಸಿ, ಸೌಂದರ್ಯ ಆಸ್ವಾಧನೆ ನಿರಂತರವಾಗಿ ಮುಂದುವರೆಯುವಂತೆ ನೋಡಿಕೊಳ್ಳಬಹುದು.
- ಉಮೀ
ಹ್ಹೆ.. ಹ್ಹೆ.. ಸ್ವಾರಸ್ಯಕರವಾಗಿದೆ ;-)
ಗುರುಪ್ರಸಾದ್,
ಸುಮ್ಮನೆ ಒಂದು ತಮಾಷೆಯಾಗಿರಲಿ...ಅಂತ ಕಳೆದ ವಾರ ನಡೆದ ಘಟನೆಯನ್ನು ಬರೆದಿದ್ದೆ...
ಇದೆಲ್ಲಾ ಕ್ಷಣಮಾತ್ರದಲ್ಲಿ ನಡೆದು ಆವನು ಬಸ್ಸು ಹತ್ತಿಬಿಟ್ಟಿದ್ದರಿಂದ ನನ್ನ ಗಮನಕ್ಕೆ ಬರುವಷ್ಟರಲ್ಲಿ ಬಸ್ಸು ಚಲಿಸಿತ್ತು. ನಾನು ಕೋಪದಿಂದ ಬೈಯಬೇಕೆಂದುಕೊಂಡರೂ ಅವನಿಗೆ ಕೇಳಿಸುವುದಿಲ್ಲವಲ್ಲ ಅಂತ ಆ ಕ್ಷಣವೇ ಅನ್ನಿಸಿ ಸುಮ್ಮನಾಗಿದ್ದೆ....
ಫೋಟೊ ಮತ್ತು ಲೇಖನವನ್ನು enjoy ಮಾಡಿದ್ದಕ್ಕೆ ಧನ್ಯವಾದಗಳು..'
ಶಿವಣ್ಣ...ನಮಸ್ಕಾರ...ನಮಸ್ಕಾರ. ಇಂಥ ಬುದ್ಧಿಯೂ ನಿಮಗಿದೆ ಅಂತ ಈವಾಗ ಗೊತ್ತಾಯ್ತು ಅಣ್ಣಾವ್ರೇ.ಭಲೇ ಕಿಲಾಡಿ ಅಣ್ಣ ನೀವು. ಹೀಗೆ ಕನ್ನಡಿಯಲ್ಲಿ ನೋಡಿ ನೋಡಿ ಡ್ರೈ ಮಾಡುವಾಗ ಜೋಪಾನವಾಗಿರಿ. ಹುಡುಗೀನ ನೋಡಕ್ಕೆ ಹೋಗಿ ಡ್ರೈ ಮಾಡ್ಕೊಂಡು ಹೊಂಡಕ್ಕೆ ಬಿದ್ದ 'ಕಳ್ಳ-ಖದೀಮ'ರನ್ನೂ ನಾ ನೋಡಿದ್ದೇನೆ. ಮತ್ತೆ ಹುಡುಗೀರನ್ನು ನೋಡ್ಕೊಂಡು....ಹಾಗೇ ಫೋಟೋ ಕ್ಕಿಕ್ಕಿಸುತ್ತಾ ಕೂತರೆ...ಹುಡುಗಿಯರು ಸುಮ್ನಿರ್ತಾರೆ ಅಂದುಕೊಂಡ್ರಾ? ......ಮೋಕ್ಷ ಮಾಡಿಬಿಡ್ತಾರೆ.(:::::)
ಇರಲಿ..ನಿಮ್ ಕಣ್ಣು, ನಿಮ್ಮ ಗಾಡಿ, ನಿಮ್ಮ ಗಾಡಿಯ ಕನ್ನಡಿ, ನಿಮ್ ಕ್ಯಾಮಾರ..ನಂಗೇನು ಮಾರಾಯ್ರೆ. ಅಂತೂ ನೀವು ಇಂಥ ತರಲೆ ಬರಹಗಳನ್ನು ಹಾಕೋಕೆ ಶುರು ಮಾಡಿದ್ರಾ? ಭವಿಷ್ಯದಲ್ಲಂತೂ ಭೀಕರ ಸುದ್ದಿಗಳಿಗೆ ನಾಂದಿಯಾಗಬಹುದು ಅಂದುಕೊಂಡಿದ್ದೀನಿ ಶಿವಣ್ಣ. (ವಿಶೇಷ ಸೂಚನೆ: ನನ್ ಕಮೆಂಟಿಗೆ ಏನಾದ್ರೂ ಬೈದ್ರೆ ಹೇಮಾಶ್ರೀಗೆ ಫೋನ್ ಮಾಡಿ ಹೇಳ್ತೀನಿ ಅಷ್ಟೇ.)
-ನಿಮ್ ತಂಗಿ,
ಧರಿತ್ರಿ
ಡಾ.ಸತ್ಯನಾರಾಯಣ ಸರ್,
ಮನದ ಮಾತುಗಳು ಕೃತಿಯಾಗಿಸಲು ಸದಾ ತುದಿಗಾಲಲ್ಲಿ ನಿಂತಿರುತ್ತೀನಿ....ಕಲ್ಪನೆಗಿಂತ ನಡೆದ ಸ್ವಾರಸ್ಯ ಘಟನೆಗಳನ್ನು ಹೀಗೆ ಹಂಚಿಕೊಳ್ಳುವುದರಲ್ಲಿನ ಆನಂದವೇ ಬೇರೆ...ಅಲ್ವೇ ಸರ್...
ಫೋಟೋಗ್ರಾಫರನಿಗೆ ನೀವು ಹೇಳಿದಂತೆ ಎಲ್ಲಾ ಕಡೆ ಕಣ್ಣಿರಬೇಕು ಅಂತ ಒಪ್ಪುತ್ತೀನಿ ಸರ್...ಅದ್ರೆ ನಾವು ಗಾಡಿ ಓಡಿಸುವಾಗ ಇದೊಂದು ಕಣ್ಣ್ರಿದ್ರೆ ಹೀಗೆ ಮಜಾ ಅನುಭವಿಸಬಹುದು...ನೋಡೋಣ ನಮ್ಮ ಬ್ಲಾಗ್ ಗೆಳತಿಯರು ಇದಕ್ಕೆ ಹೇಗೆ ಪ್ರತಿಕ್ರಿಯಿಸುತ್ತಾರೆ ಅಂತ...
ಮತ್ತೆ ಬ್ಲಾಗ್ ಮಾದ್ಯಮಕ್ಕೆ ನಿಮ್ಮಂತೆ ನನ್ನದು ದೊಡ್ಡ ಸಾಷ್ಟಾಂಗ ನಮಸ್ಕಾರ ಹಾಕಲೇ ಬೇಕು.
ಸುಂದರ ಪ್ರತಿಕ್ರಿಯಿಗೆ ಧನ್ಯವಾದಗಳು...
:-)
ಬಾಲು ಸರ್,
ನಿಮ್ಮ ಕೋಪ ನನಗೆ ಅರ್ಥವಾಗುತ್ತೆ....ನಮಗೆ ಸಿಗುವ ಮಜ ನಿಮಗೆ ಸಿಗೊಲ್ಲ ಅಂತ ತಾನೆ....ಅದ್ರೆ ಇಲ್ಲಿ ಮಜದ ಜೊತೆಗೆ ಕೆಲವು ರಿಸ್ಕುಗಳು ಇದ್ದರೂ ಅವನೆಲ್ಲಾ ಇಲ್ಲಿ ಬರೆದಿಲ್ಲ...ಏಕೆಂದರೆ ಅದನೆಲ್ಲಾ ನೀವು ಕಾಮೆಂಟಿನಲ್ಲಿ ಒಬ್ಬೊಬ್ಬರಾಗಿ ಹೇಳುವುದರಿಂದ ನಾನು ಬರೆದಿಲ್ಲ....
ಮತ್ತೆ ನೀವು ಮಾತ್ರ ನಿಮ್ಮ ಬಸ್ಸಿನಲ್ಲಿ ನೇತಾಡುವ....ಇತ್ಯಾದಿ ರಿಸ್ಕುಗಳನ್ನು ಮಾತ್ರ ಹೇಳಿ ಕೊರಗುತ್ತಿದ್ದೀರಿ...ನಿಮಗೆ ಗೊತ್ತಾ ಬಸ್ಸಿನಲ್ಲಿ ಹೋಗವಾಗಲು ಇನ್ನೂ ಅನೇಕ ರೀತಿಯ ಖುಷಿ ಪಡೆಯಬಹುದು....ಸುಮ್ಮನೇ ನಿಮ್ಮ ಮನಸ್ಸು ಮತ್ತು ಕಣ್ಣು ತೆರೆದುಕೊಳ್ಳಿ....[ಕಣ್ಣು ನೇರವಾಗಿರದೇ ಓರೆಯಾಗಿರಲಿ...ಅದೋ ಆ ಹುಡುಗಿ ವಾಚ್ ನೋಡಿಕೊಳ್ಳುತ್ತಿದ್ದಾಳೆ...ಗೆಳೆಯನಿಗಾಗಿ...ಪಕ್ಕದ ಆಂಟಿ...ಕೆಲಸದಲ್ಲಿ ಬಾಸ್ ಬೈಯ್ಯೂತ್ತಾರಂತೆ ಮುಖದಲ್ಲಿ ಕಳೇಯೇ ಇಲ್ಲ....ಅದೋ ಅವರಿಬ್ಬರೂ ಹುಡುಗಿಯರು ಮಾತಾಡದಿದ್ದರೂ ಹೇಗೆ ಒಬ್ಬರಿಗೊಬ್ಬರೂ ಕಿರುನಗೆಯಲ್ಲಿ, ಕಣ್ಸನ್ನೆಯಲ್ಲೇ ಮಾತಾಡುತ್ತಿದ್ದಾರೆ. ಇನ್ನೂ ಹುಡುಗರ, ವಯಸ್ಕರ...ಮಕ್ಕಳು..ಇತ್ಯಾದಿ...ಅನಂದ ಅನುಭವಿಸಬಹುದು... ನೋಟದ ವಿಚಾರದಲ್ಲಿ ನಮ್ಮ ಮಿತಿ ಮೀರಬಾರದು...ಸಾಕಲ್ವ ಇಷ್ಟು...ನೀವು ನಿಮ್ಮ ಬ್ಲಾಗಿನಲ್ಲಿ ಬರೆಯಬಹುದು...]
ಮತ್ತೆ ನನ್ನದೆಲ್ಲಾ ಆಟ ಬರವಣಿಗೆಯಲ್ಲಿ ಅಂತ ನನ್ನಾಕೆಗೆ ಗೊತ್ತಿರುವುದರಿಂದ...ಹೊರಗೆ ನಾನು ಅವಳ ಪ್ರಕಾರ ನೀವೇಳಿದಂತೆ...
ಧನ್ಯವಾದಗಳು...
ಗಿರಿ,
ನೀವು ಹೇಳಿದಂತೆ ನಾನೇನು ಮಹಾ ರಸಿಕನಲ್ಲ...ನೀವೇ ಹೇಳಿದಂತೆ ನಿತ್ಯದ ಘಟನೆಗಳನ್ನು ನಾನು enjoy ಮಾಡುವುದರಿಂದ ಹೀಗೆ ಹೇಳಿಕೊಳ್ಳಬೇಕೆನ್ನಿಸುತ್ತದೆ...ಅದ್ರೆ ನಮ್ಮ ನಡುವಳಿಕೆ ಯಾವಾಗಲೂ ಹಿತಿಮಿತಿಯಲ್ಲಿದ್ದುಕೊಂಡೆ ಇಂಥದ್ದು ಹೇಳಿಕೊಂಡರೆ ...ಕೇಳುವವರಿಗೂ ಸೊಗಸು..
ಮತ್ತೆ ಮಿರರ್ ನಲ್ಲಿರುವ ಹುಡುಗಿಯ ಪರಿಚಯ ಕೇಳಿದ್ದೀರಿ...ಖಂಡಿತ ಮಾಡಿಸುತ್ತೇನೆ...ಅದ್ರೆ ಆ ಹುಡುಗಿಯ ಹಿಂದೆ ಅವಳ ಗೆಳೆಯನಿದ್ದಾನೆ..ಪರ್ವಾಗಿಲ್ವಾ...
ಹೀಗೆ ಬರುತ್ತಿರಿ....ಲೇಖನ ಮೆಚ್ಚಿದ್ದಕ್ಕೆ ಧನ್ಯವಾದಗಳು..
ಶಿವು,
Simply Superb.
ಎಲ್ಲೆಲ್ಲು ಸೌಂದರ್ಯವೇ.. ನೋಡುವ ಕಣ್ಣಿರಲು .. ಕೇಳುವ ಕಿವಿಯಿರಲು...
ದೇವರು ಕೊಟ್ಟ ಕಣ್ಣನ್ನು ಸದುಪಯೋಗ ಮಾಡ್ಕೊಳ್ಳೊದರ ಜೊತೆಗೆ, ಹಿಂಬದಿಯ ಕಣ್ಣನ್ನೂ ಹೇಗೆ ಬಳಸಿಕೊಳ್ಳಬೇಕೆಂದು ಸುಂದರ ಹುಡುಗಿ ನೆಪದಲ್ಲಿ ಸೊಗಸಾಗಿ ಬರೆದಿರುವಿರಿ.
ನಿಮ್ಮ ಮನೆಯವರಿಗೆ ಹೇಳ್ತೀನಿ ಅಂತ ಬ್ಲಾಕ್ ಮೇಲ್ ಮಾಡುವವರಿಗೆ ಹೇಳಿ-"ಹಿಂದೆ ಮನೆಯವರು ಕುಳಿತಾಗ ಅವರೂ ಕಾಣುವಂತೆ ಹಿಂಬದಿಯ ಕಣ್ಣನ್ನು adjust ಮಾಡಿಕೊಳ್ಳೊದು ಗೊತ್ತು"ಅಂತ.
ಖುಷಿಯಾಯ್ತು ಬರಹ ಓದಿ.
Great. Mirror hoDeda huDuganannu baiyyuva agatyavilla annisuttide. yaakendare, avanu kannaDi hoDeyadiddare adara atyavashyakateya arivu nimagaaguttiralilla mattu namage intaha lEkhana Odalu siguttiralilla.
ಶಿವು ಅವರೆ ಲೇಖನ ಸೊಗಸಾಗಿದೆ. ನಿನ್ನ ಕಣ್ಣ ಕನ್ನಡಿಯಲ್ಲಿ ಕಂಡೆ ನನ್ನ ರೂಪ ಎಂದಿತೇ ಆ ಬೆಡಗಿ? ಆಗ ಡಾ. ರಾಜ್ ಅವರ ಈ ಹಾಡು ನೆನಪಾದರೆ.. ನೀವೇನ್ ಮಾಡ್ತೀರಾ?
ಕಣ್ಣು ಕಣ್ಣು ಕಲೆತಾಗ ...... ಮನವು ಉಯ್ಯಾಲೆಯಾಗಿದೆ ತೂಗಿ.....
ಹೃದಯ ಬಿಡಲಾರೆನೆಂದಿದೆ ಕೂಗಿ ...............!!!
ತಾತ್ಕಾಲಿಕವಾಗಿ ಬಲ ಕಣ್ಣು ಕಳೆದುಕೊಂಡಿದ್ದ ಸ್ಕೂಟಿ ಗತಿ, ಮತ್ತು ನಿಮಗಾದ ಫಜೀತಿ ಎಲ್ಲವನ್ನು ನಿಮ್ಮ ಈ ಲೇಖನದಲ್ಲಿ ಓದಿ ನಗು ಬಂದಿತು! ಹಾಗೆ ಈ ಮೇಲಿನ ಡಾ. ರಾಜ್ ಮತ್ತು ಸರಿತಾ ಅವರ ಈ ಹಾಡು ನೆನಪಿಗೆ ಬಂತು.
ಮತ್ತೆ ಶಿವೂ ಅವರೇ, ನಿಮಗೆ ನನ್ನದೊಂದು ಪ್ರಶ್ನೆ. ! ಅಕಸ್ಮಾತ್ ಒಂದು ಸುಂದರ ಹುಡುಗಿ ನಿಮ್ಮನ್ನು ಲಿಫ್ಟ್ ಕೇಳಿದರೆ ಏನು ಮಾಡುತ್ತೀರಿ? ಉತ್ತರ ನೀವೇ ಹೇಳುತ್ತೀರೋ ಅಥವಾ ಹೇಮಶ್ರೀ ಅವರನ್ನು ಕೇಳಲೋ? ಆಯ್ಕೆ ನಿಮಗೆ ಬಿಟ್ಟಿದ್ದು.
ವೀಣಾ ಮೇಡಮ್,
ನನ್ನ ಬ್ಲಾಗಿಗೆ ಸ್ವಾಗತ.
ಮತ್ತೆ ನೀವೇಳುವಂತೆ ಎಲ್ಲಾ ಹುಡುಗರು ಮಾಡುವುದು ಹೀಗೆ ಅಂತ....ಅದ್ರೆ ನನಗನ್ನಿಸುತ್ತೆ...ಹುಡುಗಿಯರದು ಇದೇ ಕತೆ ಅದ್ರೆ ನಿಮಗಿಂತ ಸ್ವಲ್ಪ ವಿಭಿನ್ನ ಅಂತ ನನ್ನೊಬ್ಬ ಗೆಳತಿ ಹೇಳುತ್ತಿದ್ದಳು....ಇದಕ್ಕೇನಂತೀರಿ...
ಲೇಖನವನ್ನು ಮೆಚ್ಚಿದ್ದೀರಿ...ಹೀಗೆ ಬರುತ್ತಿರಿ....
ಧನ್ಯವಾದಗಳು..
ಪರಂಜಪೆ ಸರ್,
ನಾನು ಮಹಾ ರಸಿಕನಲ್ಲ...ಅದ್ರೂ ನೀವೇಳಿದಂತೆ ಸ್ವಲ್ಪ ಜೀವನಕ್ಕೆ ಬೇಕಾಗುವಷ್ಟು ಇದೆ...
ಹಾಗೂ ನಾನು ಬರೆದಿರುವಂತೆ ನಡೆಯುವುದೆಲ್ಲಾ ಕೇವಲ ಟ್ರಾಫಿಕನಲ್ಲಿ ನಿಂತಾಗ ಮಾತ್ರ..
ಎಲ್ಲವು ಮಿತಿಯಲ್ಲಿ.ಮತ್ತೆ ಅದಕ್ಕಾಗಿಯೇ ಹುಡುಗಿಯರ ಹಿಂದೆ ಬೀಳುವುದಿಲ್ಲ...ಅದರೂ ಅಣ್ಣನಾಗಿ ಹೇಳಿದ ಮಾತನ್ನು ತಮ್ಮನಾಗಿ ಗಮನದಲ್ಲಿಟ್ಟಿರುತ್ತೇನೆ..
ಲೇಖನವನ್ನು ಮೆಚ್ಚಿ enjoy ಮಾಡಿದಕ್ಕೆ ಧನ್ಯವಾದಗಳು..
ಉಮೀ ಸರ್,
ನನ್ನ ಬರವಣಿಗೆಯನ್ನು ಲೇಖನಕ್ಕೆ ತಕ್ಕ ಹಾಗೆ ಸ್ವಲ್ಪ ಮಾತ್ರ ಬದಲಿಸಿದ್ದೇನೆ...ಹೇಳಿ ಕೇಳಿ ಇದು ಹುಡುಗಿಯರ ಬಗ್ಗೆ ಅಲ್ಲವೇ... ಬದಲಾಯಿಸದೆ ಇರಲಾಗುತ್ತದೆಯೇ...
ನಿಮಗೂ ಮಿರರ್ ಎಪೆಕ್ಟ್ ಚೆನ್ನಾಗಿ ಆಗಿರುವಂತಿದೆ...ಅದಕ್ಕೆ ನಿಮ್ಮ ಸಲಹೆಯನ್ನು ನಾನು ಗಂಬೀರವಾಗಿ ತೆಗೆದುಕೊಳ್ಳುತ್ತೇನೆ. ಮತ್ತೆ ನಾನು ನಿರಂತರವಾಗಿ ಹೀಗೆ ಹಾಡಿಕೊಳ್ಳಬಹುದು...
",ಮಿರರ್ನಲ್ಲಿ ಇರುವ ಸುಖ ಗೊತ್ತೇ ಇರಲಿಲ್ಲ...
ಹೂಂ ಅಂತೀಯಾ...ಹೂಹೂಂ! ಅಂತೀಯಾ..
ನಿರಂತರವಾಗಿ ಇರಲಿ ಅಂತೀರಾ..."
ಧನ್ಯವಾದಗಳು...
ಪ್ರದೀಪ್
enjoy ಮಾಡಿದ್ದಕ್ಕೆ ಥ್ಯಾಂಕ್ಸ್..
ಧರಿತ್ರಿ,
ಈ ಲೇಖನದ ತಿರುಳು ನಿನಗೆ ಚೆನ್ನಾಗಿ ಮನದಟ್ಟಾಗಿದೆ...ಅದಕ್ಕೆ ನನ್ನನ್ನು ಮನಸಾರೆ ಹೊಗಳಿದ್ದಕ್ಕೆ ಥ್ಯಾಂಕ್ಸ್...
ತಂಗಿಯಾಗಿ ಕಾಳಜಿಯಿಂದ ಹೇಳಿದ ತಿಳುವಳಿಕೆಯನ್ನು ಖಂಡಿತ ಪಾಲಿಸುತ್ತೇನೆ...
ತಿಳಿವಳಿಕೆ ಹಿರಿ-ಕಿರಿಯವರು ಯಾರಿಂದ ಬಂದರೂ ಪ್ರಾಮಾಣಿಕತೆಯಿಂದ ಸ್ವೀಕರಿಸುತ್ತೇನೆ...
ನಾನು ಹುಡುಗಿಯರನ್ನು ನೋಡಿಕೊಂಡು ಫೋಟೋ ಕ್ಲಿಕ್ಕಿಸುವುದಿಲ್ಲ...ಅವರ ಅನುಮತಿ ಪಡೆದೇ ಕ್ಲಿಕ್ಕಿಸುವುದು...
ಅದರಿಂದ ಅವರಿಗೂ ಇಷ್ಟವಾಗುತ್ತದೆ...
ಮತ್ತೆ ಜೀವನದಲ್ಲಿ ನವರಸಗಳು ಬೇಕಂತೆ. ಯಾವುದು ಅತಿಯಾಗದಂತೆ ಇತಿ ಮಿತಿಯಲ್ಲಿರಬೇಕು ಅಂತ ಹಿರಿಯರು ಹೇಳುತ್ತಾರೆ. ಅದಕ್ಕೆ ಆಗಾಗ ಇಂಥ ತುಂಟತನದ ಹಾಸ್ಯರಸವನ್ನು ನಾನು enjoy ಮಾಡುತ್ತೇನೆ...ನನಗೆ ಸಿಕ್ಕ ಖುಷಿ ನಿಮ್ಮೊಂದಿಗೂ ಈ ರೀತಿ ಬರಹದ ಹಂಚಿಕೊಳ್ಳಲು ಇಷ್ಟಪಡುತ್ತೇನೆ...
ವಿಶೇಷ ಸೂಚನೆ: ನಿನ್ನ ಕಾಮೆಂಟಿಗೆ ಬೈಯ್ಯಲ್ಲ...ಮತ್ತೆ ಬೈದರೂ ನೀನು ಕಂಪ್ಲೇಂಟ್ ಮಾಡಲು ಆಗೊಲ್ಲ.ಆಕೆಯ ಫೋನ್ ನಂಬರ್ not reachable..
ಧನ್ಯವಾದಗಳು.
ಟಿ.ಜಿ.ಶ್ರೀನಿಧಿ,....ನಿಮ್ಮ ನಗುತ್ತಿರುವ ಫೋಟೊ ಚೆಂದವುಂಟು.. ಈ ಲೇಖನ ಮತ್ತಷ್ಟು ನಗು ತರಿಸಿದ್ದರೆ..ಬರೆದಿದ್ದಕ್ಕೂ ಸಾರ್ಥಕ...
ಧನ್ಯವಾದಗಳೂ..
ನಮಸ್ತೆ ಶಿವಣ್ಣ..
ಲೇಖನ ತುಂಬ ಚೆನ್ನಾಗಿದೆ... ಇದು ಸಾಮನ್ಯವಾಗಿ ನಮ್ಮಂತಹ ಪಡ್ಡೆ ಹೈಕಳು ಮಾಡುವ ಕೆಲಸ.... ಕ್ಷಣ ಮಾತ್ರ ಸಿಗುವಂಥ ಖುಷಿಗಾಗಿ ಟ್ರಾಫಿಕ್ ಸಿಗ್ನಲನ್ನ ಇಷ್ಟ ಪಡುವೆ.. ನಾನು ಗಾಡಿ ಹೊಡಿಸದಿದ್ದರು ಬಸ್ಸಿನಲ್ಲಿ ಕುಳಿತಿರುವ ಹುಡಿಗಿಯರನ್ನು ನೋಡಿ ಆನಂದಿಸಬಹುದು ..
ಶಿವು,
ನೆನಪುಗಳು ಮರುಕಳಿಸಿದವು.
ನಿಮಗೆ ತುಂಬಾ ಧನ್ಯವಾದ (ಒಳ್ಳೆ ಲೇಖನಕ್ಕೆ).
-ಅನಿಲ್.
ಮಲ್ಲಿಕಾರ್ಜುನ್,
ನಿಮ್ಮ ಮಾತು ಆಕ್ಷರಶಃ ಸತ್ಯ...ನೋಡುವ ಕಣ್ಣಿರಲು ಎಲ್ಲೆಲ್ಲೂ ಸೌಂದರ್ಯವೇ....
ಕ್ಯಾಮೆರಾ ಕಣ್ಣಿನ ಜೊತೆಗೆ ಈ ಕಣ್ಣನ್ನು ಹೇಗೆಲ್ಲಾ ಉಪಯೋಗಿಸಬಹುದು ಅಂತ ಒಂದು ಸಣ್ಣ ಪ್ರಯೋಗವಷ್ಟೇ. ಅದಕ್ಕೆ ಇಲ್ಲಿ ಬಂದ ಪ್ರತಿಕ್ರಿಯೆಗಳು ನನ್ನನ್ನು ರಸಿಕ ಪಟ್ಟಕ್ಕೇರಿಸಿವೆ.
ಬಾಳ್ವೆಯಲ್ಲಿ ಇಷ್ಟಾದರೂ ತುಂಟತನವಿರದಿದ್ದರೇ...ಹೇಗೆ....ಇಷ್ಟಕ್ಕೂ ನನ್ನಾಕೆ ಹಿಂದೆ ಕುಳಿತಿದ್ದಾಗ ನಾನು ಮಿರರ್ನಲ್ಲಿ ಅವಳೊಬ್ಬಳ ಮುಖ ಕಾಣುವಂತೆ ಸೆಟ್ ಮಾಡಿರುತ್ತಾನೆ...ಏಕೆಂದರೆ ನಾವು ದಾರಿಯುದ್ದಕ್ಕೂ ನಮ್ಮಿಬ್ಬರ ಮಾತಿನ ಜುಗಲಬಂದಿ ಸಾಗುತ್ತಿರುತ್ತಲ್ಲ್ಲ....
ಲೇಖನವನ್ನು ಕ್ರೀಡಾ ಮನೋಭಾವದಿಂದ enjoy ಮಾಡಿದ್ದಕ್ಕೆ....
ಧನ್ಯವಾದಗಳು...
ಜಯಲಕ್ಷ್ಮಿ ಮೇಡಮ್,
ಮೊದಲಿಗೆ ನಿಮಗೆ ನನ್ನ ಬ್ಲಾಗಿಗೆ ಸ್ವಾಗತ..
ನೀವು ಒಟ್ಟಾರೆ ಆಗುವುದೆಲ್ಲಾ ಒಳ್ಳೆಯದಕ್ಕೆ ಅನ್ನುತ್ತಿರಲ್ಲವೇ... ಮತ್ತೆ ಇನ್ನೂ ಇಂಥ ಅನೇಕ ಹೊಡೆದುಹೋಗುವ ಸಂಗತಿಗಳು ನಡೆದು ಆದರಿಂದ ನನಗೆ ಗಾಢ ಅನುಭವವಾಗಿ ಮತ್ತಷ್ಟು ಲೇಖನಗಳನ್ನು ಬರೆಯುವ ಜರೂರತ್ತು ಬರಲಿ ಅನ್ನುವ ಪರೋಕ್ಷವಾದ ಆರೈಕೆ ನಿಮ್ಮದು...[ತಮಾಷೆಗೆ ಹೇಳಿದೆ...] ಹೀಗೆ ಬರುತ್ತಿರಿ...
ಲೇಖನವನ್ನು ಇಷ್ಟಪಟ್ಟಿದ್ದಕ್ಕೆ...ಧನ್ಯವಾದಗಳು
ಹೀಗೆ ಬರುತ್ತಿರಿ...
ಕ್ಷಣ ಚಿಂತನೆ ಸರ್,
ನನ್ನ ಹೊಸ ಲೇಖನದಿಂದ ನಿಮಗೆ ರಾಜ್ಕುಮಾರ್ರ ಹಳೆಯ ಮಧುರ ಗೀತೆ ನೆನಪಾಯಿತೆ...ಮತ್ತೆ ಇನ್ನೂ ಕೆಲವರು ಬೇರೆ ಬೇರೆ ಹಾಡುಗಳನ್ನು ಗುನುಗತೊಡಗಿದ್ದಾರೆ....ಒಟ್ಟಾರೆ ನನಗೂ ಇವನೆಲ್ಲಾ ಕೇಳುವ ಅವಕಾಶ ದೊರೆಯಿತಲ್ಲ...
ಕೊನೆಗೆ ನಾನು ಹೇಳ್ತೀನಿ...ಮಿರರ್ ಎಫೆಕ್ಟ್ನಿಂದ ..."ಹೀಗೆಲ್ಲಾ ಉಂಟೇ"...
ಶಿವು ಸರ್...
ತುಂಟತನ ಇಷ್ಟವಾಯಿತು....
ನಮ್ಮನೆಯಲ್ಲಿ ಸ್ವಲ್ಪ ಉಲ್ಟಾ ಮಾರಾಯರೆ...
ಚಂದದವರು ಕಂಡರೆ ನಮ್ಮವರೇ ತೋರಿಸುತ್ತಾರೆ...!
"ನೋಡ್ರೀ ..ಎಷ್ಟು ಚೆನ್ನಾಗಿದ್ದಾಳೆ" ಅಂತ...!
ಹೇಮಾಶ್ರೀ ಏನಂತಾರೆ...?
SSK ಸರ್,
ನೀವು ಸೇರಿದಂತೆ ನಮ್ಮ ಬ್ಲಾಗ್ ಗೆಳೆಯರು ಈ ಹೊಸ ಲೇಖನಕ್ಕೆ ಹಳೆಯ ಹಾಡುಗಳನ್ನೇ ನೆನಪಿಸುತ್ತಿದ್ದೀರಿ...
ನನ್ನ ಪ್ರೀತಿಯ ಸ್ಕೂಟಿಗೆ ಒಂದು ಕಣ್ಣು ಹೋಗಿದ್ದಕ್ಕೆ ಈ ರೀತಿಯ ಪ್ರತಿಕ್ರಿಯೆಗಳೇ....
ಇನ್ನೂ ಅದರ ಕಿವಿ, ಬಾಲ, ಮದ್ಯದ ಕಣ್ಣು, ಹಾರ್ಟು, ಲಂಗ್ಸು, ಕಿಡ್ನಿ...ಇತ್ಯಾದಿಗಳ ಬಗ್ಗೆ ಬರೆಯವ ಉತ್ಸಾಹವಾಗುತ್ತಿದೆ....
ಮತ್ತೆ ಲೇಖನದಲ್ಲಿ ತುಂಟತನವಿದೆ. ಒಪ್ಪೂತ್ತೇನೆ.
ಅದನ್ನು ರಸಿಕತೆಯ ಮಟ್ಟಕ್ಕೆ ಹೋಲಿಸಬೇಡಿ...ಮತ್ತೆ ಯಾವುದಾದರೂ ಸುಂದರ ಹುಡುಗಿ ನನಗೆ ಲಿಫ್ಟ್ ಕೇಳಿದರೇ..ಅಂತ ನಿಮ್ಮ ಪ್ರಶ್ನೆ ಅಲ್ಲವೇ...
ಅವಳು ಸುಂದರ ಹುಡುಗಿಯಾಗಲಿ, ಸುಂದರ ಹುಡುಗನಾಗಲಿ...ಅಥವ ವಯಸ್ಕಾರಾಗಲಿ, ಸ್ಕೂಲ್ ಮಕ್ಕಳಾಗಲಿ..ಅವರಿಗೆ ಖಂಡಿತ ಲಿಫ್ಟ್ ಅವಶ್ಯಕತೆಯಿದ್ದರೆ..ಈ ಲೇಖನದಲ್ಲಿರುವ ಭಾವನೆಗಳೆಲ್ಲವನ್ನೂ ಮೀರಿ...ಅವರಿಗೆ ಒಳ್ಳೆಯದಾಗಲಿ ಅಂತ ಸಹಾಯ ಮಾಡುತ್ತೇನೆ...
ನವೀನ್,
ಈ ಲೇಖನ ಓದಿದ ಮೇಲೆ ಇದು ನಿಮಗಾಗಿ ಮೀಸಲು ಅಂದುಕೊಳ್ಳಬೇಡಿ...
ಮತ್ತೆ ಇದನ್ನು ಎಂಜಾಯ್ ಮಾಡಿ, ಜೊತೆಗೆ ಬಸ್ಸು ಲಾರಿ...ಕಾರು...ಎತ್ತಿನಗಾಡಿ...ಸೈಕಲ್ಲು...ಎಲ್ಲಾ ಪೂರ್ತಿ ಉಪಯೋಗಿಸಿಕೊಳ್ಳಿ...
..ಅದ್ರೆ ಇದನ್ನೇ ತಲೆಗೆ ಹಾಕಿಕೊಂಡು ತಲೆ ಹಾಳು ಮಾಡಿಕೊಳ್ಳಬೇಡಿ...
ಹೀಗೆ ಬರುತ್ತಿರಿ...ಧನ್ಯವಾದಗಳು...
ಅನಿಲ್ ರಮೇಶ್,
ಸವಿ ಸವಿ ನೆನಪು...ರಸ್ತೆಯ ನೆನಪು..ಟ್ರಾಫಿಕ್ ನೆನಪು..
ಲೇಖನ ಮೆಚ್ಚಿದ್ದಕ್ಕೆ ಧನ್ಯವಾದಗಳು..
ಪ್ರಕಾಶ್ ಸರ್,
ಈ ವಿಚಾರದಲ್ಲಿ ನಿಮ್ಮನೆಯಲ್ಲಿ ಉಲ್ಟಾ ಪಲ್ಟಾ ಅಲ್ಲವೇ...
ಮತ್ತೆ ನಿಮಗೆ ನಮ್ಮ ವಿಚಾರವೂ ಗೊತ್ತು...ಅದು ಇನ್ನೆಷ್ಟು ಆಳವಾದ ಉಲ್ಟ-ಪಲ್ಟಾ ಅಂತ...
ನಿಮ್ಮವರು "ನೋಡ್ರೀ ..ಎಷ್ಟು ಚೆನ್ನಾಗಿದ್ದಾಳೆ" ಅಂತಾರೆ.....!
ಹೇಮಾಶ್ರೀ...ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ...
"ಮೂಗು ಸ್ವಲ್ಪ ಉದ್ದವಿರಬೇಕಿತ್ತು...ಬಣ್ಣ ಚೆನ್ನಾಗಿದೆಯಲ್ವಾರಿ...ಎಷ್ಟೋಂದು ಲಕ್ಷಣವಿದೆ ಮುಖದಲ್ಲಿ..ಇತ್ಯಾದಿ...
ರಸ್ತೆಯುದ್ದಕ್ಕೂ ಹೇಳುತ್ತಿರುತ್ತಾಳೆ...
ಲೇಖನದಲ್ಲಿರುವ ತುಂಟತನವನ್ನು ಗುರುತಿಸಿದ್ದಕ್ಕೆ ಅದನ್ನು ಎಂಜಾಯ್ ಮಾಡಿದ್ದಕ್ಕೆ ಧನ್ಯವಾದಗಳು...
ಏನ್ ಸಾರ್ ಇದು? ಸ್ಕೂಟಿಲಿ ಕನ್ನಡಿ ಇರೋದು ಹಿಂದೆ ಬರೋ ಗಾಡಿಗಳನ್ನ ನೋಡೋಕೆ, ಗಾಡಿ ಓಡ್ಸೋರನ್ನ ಅಲ್ಲ! :-)
ಏನೇ ಮಾಡಿದ್ರೂ ಗಾಡಿ ಸರಿಯಾಗಿ ಓಡ್ಸೋದನ್ನ ಮರೀಬೇಡಿ.
ಹೆಂಡ್ತಿಗೆ ತೋರಿಸ್ದೆ ಬರ್ದಿದೀರ? ಇರಿ, ಹೇಳ್ತೀವಿ..
ಜ್ಯೋತಿ ಮೇಡಮ್,
ಸ್ಕೂಟಿ ಕನ್ನಡಿಯ ಮೇಲೆ ನಿಮಗಿರೋ ಅಭಿಪ್ರಾಯ ನಾನು ಒಪ್ಪುತ್ತೇನೆ. ಆದ್ರೂ ಅಲ್ಲಲ್ಲಿ ದಾರಿಯುದ್ದಕ್ಕೂ ಸಿಗುವ ಹಂಪ್ಸುಗಳಿಂದ ಆಗುವ ನೋವುಗಳನ್ನು ಮರೆಯಲು ಇಂಥ ಸಕ್ಕರೆ ಮಿಠಾಯಿಯಂತ ದೃಶ್ಯಗಳು ಬೇಡವೇ...
ಮತ್ತೆ ನಾನು ಯಾವ ಹೊಸ ಲೇಖನವನ್ನು ಬರೆದರೂ ಮೊದಲು ನನ್ನಾಕೆಗೆ ತೋರಿಸುತ್ತೇನೆ...ಇದರ ಬಗ್ಗೆ ಅವಳ ಅಭಿಪ್ರಾಯವನ್ನು ಪ್ರಕಾಶ್ ಹೆಗಡೆಯವರ ಕಾಮೆಂಟಿನಲ್ಲಿ ಹಾಕಿದ್ದೇನೆ...
ಸಕತ್ತಾಗಿದೆ ನಿಮ್ಮ ಬರಹ.
ಬರೀ ಬಸ್ ಡ್ರೈವರ್ ಗಳು ಮಿರರ್ ಅಡ್ಜಸ್ಟ್ ಮಾಡ್ತಾರೆ ಅಂತ ಗೊತ್ತಿತ್ತು ,(ನಮ್ ಊರ ಕಡೆ ಪ್ರೈವೇಟ್ ಬಸ್ ಗಳು ಜಾಸ್ತಿ). ಟೂ- ವೀಲರ್ ನವರು ಇದೇ ತರ ಅಂತ ಇವತ್ತು ಗೊತ್ತಾಯ್ತು.
really enjoyed reading this..
ಶಿವು,
ತುಂಟತನ, ಸಹಜತೆ, ಸರಸ ಇರಬೇಕಾದ್ದೇ. ಎಷ್ಟು ಬೇಕೋ ಅಷ್ಟಿದ್ದರೆ ಜೀವನ ನಿಜಕ್ಕೂ ಸುಂದರ. (ನಾನೇ ವಿಚಿತ್ರ ಅಂತಿದ್ದೆ, ಹೇಮಾಶ್ರೀ ನನಗೆ ಜೊತೆಗಿದ್ದಾರೆ, ಪರವಾಗಿಲ್ಲ. ಅವರಿಗೆ ನನ್ನ ಅಭಿನಂದನೆ ತಿಳಿಸಿ.) ಚೆನ್ನಾಗಿರೋದನ್ನ (ಯಾವುದೇ ಆಗಿರಲಿ) ಚೆನ್ನಾಗಿದೆ ಅನ್ನೋದರಲ್ಲಿ ಮಾನಸಿಕ ಸ್ಥಿರತೆ, ಸೌಂದರ್ಯ ಇದೆ; ಅಲ್ವೆ?
ಹೀಗೇ ಖುಷಿಯಾಗಿ ಜೊತೆಯಾಗಿ ನಗುನಗುತ್ತಾ ಜೀವನ ಸಾಗಿಸಿ.
ವನಿತಾ,
ಬಸ್ ಡ್ರೈವರುಗಳು ಆಡ್ಜಸ್ಟ್ ಮಾಡುವುದು ಮಿರರ್ ಎಫೆಕ್ಟ್ಗಾಗಿ ಅಲ್ಲ..ಹಿಂದೆ ಬರುವ ವಾಹನಗಳನ್ನು ನೋಡಲು...ಪಾಪ...
ಟೂ ವೀಲರ್ ನವರು ಮಾಡುವುದು ಖಂಡಿತ ಇದಕ್ಕಾಗಿ...
ಲೇಖನ ಮೆಚ್ಚಿದ್ದಕ್ಕೆ ಥ್ಯಾಂಕ್ಸ್...
ಅಂದಹಾಗೆ ನಿಮ್ಮಲ್ಲೂ ಟೂ ವೀಲರ್ ಇದೆಯಾ ?
ಹರೀಶ್...ಥ್ಯಾಂಕ್ಸ್...
ಸುಪ್ತದೀಪ್ತಿ ಮೇಡಮ್,
ತುಂಟತನ ಮಾಡುವುದು ಎಲ್ಲರ ಜನ್ಮ ಸಿದ್ಧ ಹಕ್ಕು..ಅದರೆ ಅನೇಕರು ಅದನ್ನು ಮಾಡಿದರೆ ತಮ್ಮ ಘನತೆಗೆ ಕುಂದುಂಟಾಗುತ್ತದೆ ಅಂತ ಗಂಬೀರವಾಗಿದ್ದು...ಅದರ ಆನಂದ ಕಳೆದುಕೊಳ್ಳುತ್ತಾರೆ....ಹೇಮಾಶ್ರೀಯಂತೆ ನೀವುರುವುದು ನನಗೆ ಖುಷಿಯಾಯಿತು...ಇದರಲ್ಲಿ ವಿಚಿತ್ರವೇನಿಲ್ಲ...ಮಗುವನ್ನು ನಾವು ವಿಚಿತ್ರವೆನ್ನುವುದಿಲ್ಲವಲ್ಲ..
ಖುಷಿ ಮಾಡಿ...ಜೊತೆಗೆ ಅದನ್ನು ಹೀಗೆ ದೈರ್ಯವಾಗಿ ಹಂಚಿಕೊಳ್ಳಿ....ಇದು ಎಲ್ಲರಿಗೂ ಬೇಕು ಅದರೆ ಹಂಚಿಕೊಳ್ಳಲು ದೈರ್ಯಸಾಲದೆ ಹಿಂದೇಟು ಹಾಕುತ್ತಾರೆ...ನನ್ನದಾದ ಮೇಲೆ ನಿಮ್ಮ ಲೇಖನ ಹಾಕಿ ನಂತರ ಒಬ್ಬೊಬ್ಬರಾಗಿ ಶುರುಮಾಡುತ್ತಾರೆ...ಏನಂತೀರಿ...?
ಹ ಹ ಹ ಚೆನ್ನಾಗಿದೆ... ಒಳ್ಳೆ ಕೆಲಸವನ್ನೇ ಮಾಡುತೀರಿ ದಿನ ಹಾಗಿದ್ದರೆ..
ಹ್ಹ ಹ್ಹ! ಬಲಗಡೆಯ ಮಿರರ್ ನಲ್ಲಿ ವಾರೆಗಣ್ಣಿನಿಂದ ನೋಡಿದಷ್ಟೆ ಖುಷಿ ಕೊಡ್ತು ಬರಹ :)
ಸ್ಕೂಟಿಯಲ್ಲಿ ಹೋಗುವಾಗ ಪಕ್ಕದಲ್ಲಿ ಬಸ್ ಬಂದರೆ, ಟ್ರಾಫಿಚ್ ಸಿಗ್ನಲ್ಲಿನಲ್ಲಿ ಬಸ್ ಪಕ್ಕ ನಿಂತರೆ ಭಯವಾಗುತ್ತೆ. ಏಕೆ ಗೊತ್ತೆ? ಕಿಟಕಿಯ ಪಕ್ಕದಲ್ಲಿರುವವರು ಯಾವಕ್ಷಣದಲ್ಲಾದರೂ ಉಗಿಯುವುದು ತಮ್ಮ ಜನ್ಮಸಿದ್ಧ ಹಕ್ಕೆಂಬಂತೆ ಉಗಿಯಬಹುದು ಎಂದು. ಅದಕ್ಕೇ ನಾನು ಯಾವಾಗಲೂ ಹೆಲ್ಮೆಟ್ ಧರಿಯೇ ದ್ವಿಚಕ್ರ ವಾಹನ ಚಾಲನೆ ಮಾಡುವುದು.
ಬಹಳ ಚೆನ್ನಾಗಿ ಹಿತಮಿತ ಹಾಸ್ಯ ತುಳುಕುವಂತೆ ಬರೆದಿರುವಿರಿ
ಮನಸು ಮೇಡಮ್,
ನೀವು ಇದನ್ನು ಒಳ್ಳೆ ಕೆಲಸವೆಂದು ನನ್ನ ಪರವಾಗಿ ಮಾತಾಡಿದ್ದು...ನನಗೆ ಖುಷಿಯಾಯಿತು...
ಧನ್ಯವಾದಗಳು...
ಪ್ರಮೋದ್,
ಬರಹ ಖುಷಿಕೊಟ್ಟಿತಲ್ಲ...ಇನ್ನೂ ನೀವು ಇದನ್ನು ರಸ್ತೆಯಲ್ಲಿರುವಾಗ ಹಾಗೆ ಮಾಡಿಕೊಂಡು ಮನದೊಳಗೆ ಖುಷಿ ಪಡಿ...
ಧನ್ಯವಾದಗಳು...
ಚಂದ್ರಕಾಂತ ಮೇಡಮ್,
ಲೇಖನಕ್ಕೆ ಪ್ರತಿಕ್ರಿಯೆಯಾಗಿ ನೀವು ನಿಮ್ಮ ಅನುಭವವನ್ನು ಹೇಳಿಕೊಂಡಿದ್ದೀರಿ...ನಾವು ನಿಮ್ಮಂತೆ ಹೆಲ್ಮೆಟ್ ಧರಿಸಿಯೇ ಓಡಾಡುವುದು...ನನಗೂ ಆ ಭಯವಿದೆ...
ಮತ್ತೆ ಹಿರಿಯರಾದ ನೀವು ಈ ಲೇಖನಕ್ಕೆ ಬರುವುದಿಲ್ಲವೆಂದುಕೊಂಡಿದ್ದೆ. ಎಲ್ಲರೂ ರಸಿಕತನದ ಪಟ್ಟಕಟ್ಟಿರುವಾಗ ನೀವು ನಾನು ಬರೆದ ರೀತಿಯನ್ನು ನೋಡಿ ಇಷ್ಟಪಟ್ಟಿದ್ದೀರಿ....
ಲೇಖನವನ್ನು ಕ್ರೀಡಾ ಸ್ಪೂರ್ತಿಯಿಂದ ತೆಗೆದುಕೊಂಡಿದ್ದಕ್ಕೆ ಧನ್ಯವಾದಗಳು...
ಹಾಯ್ ಶಿವು,
ಲೇಖನ ತುಂಬಾ ಚೆನ್ನಾಗಿದೆ. ಯಾರಿಗೂ ನೋಯಿಸದ , ಇಂತ ಚಿಕ್ಕ ಚಿಕ್ಕ ಪ್ರಸಂಗಗಳಿಂದ ಸಿಗುವ ಸಂತೋಷ ತುಂಬಾ ಚೆನ್ನಾಗಿರುತ್ತದೆ. ಅನುಭವಿಸಿದ್ದನ್ನ ಮುಕ್ತವಾಗಿ ಹೇಳಿಕೊಳ್ಳುವುದು ತಪ್ಪೆನಿಲ್ಲ ಆದರೆ ಅದೂ ಯಾರನ್ನೂ ನೋಯಿಸದಿದ್ದರೆ ಅಷ್ಟೆ ಸಾಕು. ಈ ಬರಹಕ್ಕೆ ಕಾರಣನಾದ ಮಿರರ್ ಒಡೆದವನಿಗೂ ನನ್ನ ಕಡೆಯಿಂದ ಒಂದು ಧನ್ಯವಾದ.
ನನ್ನ ಬ್ಲಾಗಿಗೆ (WWW.nanisaha.blogspot.com ) ಭೇಟ್ಟಿ ಕೊಟ್ಟು ನನ್ನ ಮೊದಲ ಬರಹಕ್ಕೆ ಪ್ರಥಮವಾಗಿ ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು.
ನನಗೆ ಬರೆಯಲು ಬರುವದಿಲ್ಲ ಆದ್ರೂ ಪ್ರಯತ್ನಿಸಿದ್ದೆನೆ. ಇನ್ನೂ ಮೇಲೆ ಪ್ರಯತ್ನಿಸುತ್ತೇನೆ.
ಪ್ರೀತಿಯಿಂದ
ಲಕ್ಷ್ಮಣ
ಲಕ್ಷಣ್ ಸರ್,
"ಯಾರಿಗೂ ನೋಯಿಸದ , ಇಂತ ಚಿಕ್ಕ ಚಿಕ್ಕ ಪ್ರಸಂಗಗಳಿಂದ ಸಿಗುವ ಸಂತೋಷ ತುಂಬಾ ಚೆನ್ನಾಗಿರುತ್ತದೆ. ಅನುಭವಿಸಿದ್ದನ್ನ ಮುಕ್ತವಾಗಿ ಹೇಳಿಕೊಳ್ಳುವುದು ತಪ್ಪೆನಿಲ್ಲ ಆದರೆ ಅದೂ ಯಾರನ್ನೂ ನೋಯಿಸದಿದ್ದರೆ ಅಷ್ಟೆ ಸಾಕು."
ಎಷ್ಟು ಚೆನ್ನಾಗಿ ಬರೆದಿದ್ದೀರಿ....ನಿಮಗೆ ಬರೆಯಲು ಬರುವುದಿಲ್ಲವೆಂದು ಹೇಳಿದವರ್ಯಾರು..?
ನೀವು ಎಲ್ಲರ ಬ್ಲಾಗಿಗೆ ಹೋಗಿ ಬರೆಯುವ ಕಾಮೆಂಟುಗಳು ಚೆನ್ನಾಗಿರುತ್ತವೆ..ಅದ್ದರಿಂದ ನಿಮ್ಮ ಬರಹಗಳು ಚೆನ್ನಾಗಿರುತ್ತವೆ...ನೀವು ಬರೀರಿ ಸರ್...ನಾವು ಓದುತ್ತೇವೆ...
ಮಿರರ್ ಹೊಡೆದುಹಾಕಿದ ಹುಡುಗನಿಗೆ ಧನ್ಯವಾದಗಳನ್ನು ಹೇಳುವ ಕಡೆ ನೀವು ಸೇರಿಕೊಂಡುಬಿಟ್ಟಿರಲ್ಲಾ...
ಹೀಗೆ ಬರುತ್ತಿರಿ...ಧನ್ಯವಾದಗಳು...
ನಿಮ್ಮ ಲೇಖನ ಓದಿ ನಾನೂ ಹಿಂಬದಿ ಕಣ್ಣು ಹಾಕಿಸ್ದೆ ... ಅದು ಗೊತ್ತಾಗಿ ನನ್ನ ಮನೆಯವಳು ಸ್ವಲ್ಪ ವಕ್ರ ದ್ರಿಷ್ಟಿಯಿಂದ ನೋಡಿದ್ದು ಮಾತ್ರ ನಿಜ... ಇರ್ಲಿ, ಇನ್ನು ಕೂಲಿಂಗ್ ಗ್ಲಾಸ್ ಗೆ ಸ್ವಲ್ಪ ದಿನ ರಜೆ!!!! :-).. ಅಂತೂ ಇಂತೂ ಹೊಸ ಐಡಿಯಾ ಬಂತು.... ;-)
ಹೌದು ಶಿವು. ನೀವು ಹೇಳಿದ್ದು ನಿಜ. ಮಿರರ್ ಇಲ್ಲದೆ ಹೋದರೆ ಹಿಂದೆ ಬರುವ ಹುಡಿಗಿಯನ್ನು ಗಮನಿಸುವುದು ತುಂಬಾ ಕಷ್ಟ.
ಆದರೆ, ನಾನು ನನ್ನ ದ್ವಿಚಕ್ರ ವಾಹನಕ್ಕೆ ಇದ್ದ ಎರಡು ಕನ್ನಡಿಗಳನ್ನು ಮೂರು ವರ್ಷಗಳಿಂದ ತೆಗೆದುಬಿಟ್ಟಿದ್ದೆನೆ.
ಕಾರಣ ಇಸ್ಟೇ, ಅವು ಇದ್ರೆ ,ಟ್ರಾಫಿಕ್ ಇದ್ದಾಗ ಸಂದು ಸಂದುಗಳಲ್ಲಿ ನುಗ್ಗುವುದು ಕಷ್ಟ....
ಆದಕಾರಣ ಹಿಂದೆ ಬರುವ ಹುಡುಗಿಯರನ್ನು ಗಮನಿಸುವುದ್ದನ್ನು ಬಿಟ್ಟಿದ್ದೇನೆ.
so, ರಸ್ತೆಯ ಅಕ್ಕ ಪಕ್ಕ ಹಾದು ಹೋಗುವ ಹುಡುಗಿಯರನ್ನಸ್ಟೇ ನೋಡುತ್ತೇನೆ.
ಧನ್ಯವಾದಗಳು
ರವಿಕಾಂತ ಸರ್,
ಲೇಖನದಿಂದ ಪ್ರೇರಿತರಾಗಿ ಹೊಸ ಕಣ್ಣನ್ನು ಹಾಕಿಸಿದ್ದೀರಿ...
ಕೂಲಿಂಗ್ ಗ್ಲಾಸ್ ಪಕ್ಕಕ್ಕಿಟ್ಟು ಹೊಸ ಐಡಿಯಾವನ್ನು ಮಜಾ ಮಾಡಿ....
ಧನ್ಯವಾದಗಳು...
ಶಿವಪ್ರಕಾಶ್,
ನಿಮ್ಮ ಐಡಿಯಾ ಕೂಡ ಚೆನ್ನಾಗಿದೆ...ಎರಡನ್ನು ತೆಗೆಸಿಬಿಡುವುದು...ಪೋಲಿಸ್ ಹಿಡಿದರೆ ಫೈನ್ ಕಟ್ಟಬೇಕು ಕಣ್ರೀ...ಟ್ರಾಫಿಕ್ ನಲ್ಲಿ ನುಗ್ಗಲು ಓಕೆ.. ಆದ್ರೆ ಹಿಂಬದಿ ನೋಡಲು ಬೇಡ ಏಕೆ...
ನೀವು ಓಪನ್ ಆಗಿ ದೈರ್ಯವಾಗಿ ನೋಡುತ್ತೇನೆ ಅಂದಿದ್ದು ನನಗೆ ಇಷ್ಟವಾಯಿತು...
ಅದರ ಅನುಭವದ ಬಗ್ಗೆ ನೀವು ಬರೆಯಿರಿ...
ಧನ್ಯವಾದಗಳು...
ಇದ್ಯಾವ್ದಪ್ಪ ಹಿ೦ಬದಿ ಕಣ್ಣು ಅನ್ಕೊ೦ಡೇ ಬ೦ದೆ. ನಗುವಿನೊ೦ದಿಗೆ ಓದಿಸಿಕೊ೦ಡು ಹೋಯಿತು. ಹೀಗೆಲ್ಲ ಇರತ್ತೆ ಅಂತ ಗೊತ್ತಿರ್ಲಿಲ್ಲ. ಇನ್ಮೇಲೆ ಹುಶಾರಗಿರ್ತೀನಿ :))
enri ellara two wheeler anubavanu onde lekana dalli bardu bittidira..tumba chennagide..navu anubavisida gatanegalella ondu sari manassunalli bandu hoytu!
chennagide boss...keep on writing...
ಶಿವೂ ಸರ್,
ಅಂತೂ ಬಲಗಡೆಯ ಮಿರರ್ ತುಂಬಾ ಉಪಯೋಗಿಸಿದ್ದೀರ ಎಂದಾಯ್ತು, ಆ ಹುಡುಗನಿಗೆ ನಿಮ್ಮ ಮೇಲೆ ಯಾವ್ದೋ ಹಳೆ ಮಿರರ್ ದ್ವೇಷ ಇದ್ದಿರಬಹುದು.
ಒಳ್ಳೆಯ ಲೇಖನ, ಧನ್ಯವಾದಗಳು
ನಾನು ಒಂದು ಗಂಟನ್ನು ಕನ್ನಡಿಯೊಳಗೆ ನೋಡಿದ್ದೆ... ನೀವೋ ಬಹಳ ಗಂಟನ್ನು ನೋಡಿದ್ದೀರ..
ಶಿವೂ ಸರ್,
ಕೊನೆಗೂ ಬ್ಲೋಗಿಗೆರಿದೆ ನಿಮ್ಮ ಈ ಬರಹ...
ಮೊದಲ ದಿನವೇ ಓದಿದೆ ಕಾಮೆಂಟಿಸಲು ತಡವಾಯ್ತು. ಚೆನ್ನಾಗಿದೆ, ಹಾಸ್ಯ ಮತ್ತು ರಸಿಕತೆಯ ಹದವಾದ ಮಿಶ್ರಣ...
nice...:)
ಹ ಹ ಹ..
ನನ್ನವರು ಆಗಾಗ್ಗೆ ಕನ್ನಡಿ ಸರಿ ಮಾಡಿಕೊಳ್ಳುವುದು ಯಾಕೆ ಅಂತ ಕೇಳ್ಬೇಕು ಈಗ..
ಚಂದ ಬರೆದಿದ್ದೀರಿ ಲೇಖನ !!
ವಿನುತಾ ಮೇಡಮ್,
ಲೇಖನ ಓದುತ್ತಾ ನಗುಬಂದಿದ್ದು ನಾನು ಬರೆದಿದ್ದಕ್ಕೂ ಸಾರ್ಥಕವಾಯಿತು...
ಮತ್ತೆ ನೀವು ಹೆಚ್ಚೇನು ಹುಷಾರಾಗುವುದು ಬೇಡ....ಸುಮ್ಮನೆ ಮುಖವನ್ನು ಗ್ಲಾಸಿನಿಂದ ಮುಚ್ಚಿಕೊಳ್ಳುವ ಹೆಲ್ಮೆಟ್ ಧರಿಸಿದರೆ ಸಾಕು....ಹುಡುಗರಿಗೆ ಮುಖ ಕಾಣಲಿಲ್ಲವಲ್ಲ ಅಂತ ಕೊರಗದಿದ್ದರೇ ಕೇಳಿ....
ಧನ್ಯವಾದಗಳು...
ಪ್ರಶಾಂತ್,
ನಾನು ಬರೆದ ಈ ಲೇಖನವನ್ನು ಓದಿದ ಮೇಲೆ ನಿಮ್ಮಂತೆ ಹೇಳಿದವರು ಅನೇಕರು...ಅಂದ ಮೇಲೆ ನಾನು ಬರೆದಿದ್ದು ನೂರಕ್ಕೆ ನೂರು ಸತ್ಯವೆಂದಾಯಿತು....
ಓದಿದ ಮೇಲೆ ನಿಮ್ಮ ಹಳೆಯ ನೆನಪು ಮರುಕಳಿಸಿದ್ದಕ್ಕೆ ನೀವು ಬರಿ ಥ್ಯಾಂಕ್ಸ್ ಹೇಳಿದರೆ ಸಾಲುವುದಿಲ್ಲ...ನಾನು ನಿಮ್ಮ ಗೆಳೆಯನ ಮದುವೆಯಲ್ಲಿ ಸಿಗುತ್ತೇನೆ ಅಲ್ಲಿ ಪಾರ್ಟಿ ಕೊಡಿಸಿ...ಆಯ್ತ....
ಧನ್ಯವಾದಗಳು...
ಗುರುಮೂರ್ತಿ ಹೆಗಡೆ ಸರ್,
ಈ ಲೇಖನದಲ್ಲಿ ಬಲಗಡೆಯ ಮಿರರ್ ಹೇಗೇಗೆ ಬಳಸಿದ್ದೇನೆಂದು ಮಾತ್ರ ವಿವರಿಸಿದ್ದೇನೆ...ನಿಮ್ಮೆಲ್ಲರ ಪ್ರೋತ್ಸಾಹದಿಂದ ನನ್ನ ಸ್ಕೂಟಿಯ ಅನೇಕ ಭಾಗಗಳನ್ನು ಇನ್ನೂ ಎಂಥೆಂಥ ವಿಚಾರಗಳಿಗೆ ಬಳಸಿದ್ದೇನೆಂದು ಹೇಳಬೇಕೆಂಬ ಆಸೆಯಾಗುತ್ತಿದೆ...ಅದನ್ನು ಮುಂದಿನ ಲೇಖನಗಳಲ್ಲಿ ಬರೆಯುತ್ತೇನೆ...
ಮತ್ತೆ ಆ ಹುಡುಗನದು ದ್ವೇಷವೇನಿಲ್ಲವೆಂದು ನನ್ನ ಭಾವನೆ. ಬಹುಶಃ ಆತ ನನ್ನನ್ನು ಈ ಲೇಖನ ಬರೆಯಲು ಈ ರೀತಿ ಪ್ರೇರೇಪಿಸಿರಬಹುದು...
ಧನ್ಯವಾದಗಳು...
ಜಯಶಂಕರ್,
ಟೂವೀಲರ್ನಲ್ಲಿ ಓಡಾಡುವ ಪ್ರತಿಯೊಬ್ಬರಿಗೂ ಪ್ರತಿದಿನ ಕನಿಷ್ಟ ೨೫ ಗಂಟನ್ನು[ಮುಖಗಳನ್ನು]ನೋಡಲು ಸಾದ್ಯ. ನನ್ನಂಥವನಿಗೆ ೫೦ ದಾಟುತ್ತದೆ...ಅಂತದ್ದರಲ್ಲಿ ನೀವು ಒಂದು ಅಂತ ಹೇಳಿರುವುದು ನನಗೆ ಸುಳ್ಳು ಅಂತ ಅನ್ನಿಸುತ್ತದೆ...ಪರ್ವಾಗಿಲ್ಲ...ನೀವು ನನಗೆ ಫೋನ್ ಮಾಡಿ ನಿಜ ಹೇಳಬಹುದು...
ಧನ್ಯವಾದಗಳು...
ರಾಜೇಶ್,
ಮೊನ್ನೆ ಫೋನಿನಲ್ಲಿ ಕತೆಯ ತುಣುಕನ್ನು ಹೇಳಿದ್ದೆ..ಆಷ್ಟೇ..
ನೀವು ಓದಿ enjoy ಮಾಡಿದ್ದಕ್ಕೆ ಥ್ಯಾಂಕ್ಸ್...
ಹೀಗೆ ಬರುತ್ತಿರಿ.
ಧನ್ಯವಾದಗಳು...
ಅಗ್ನಿಪ್ರಪಂಚ,
ಧನ್ಯವಾದಗಳು...ಹೀಗೆ ಬರುತ್ತಿರಿ...
ಆರ್ಚನ ಮೇಡಮ್,
ಲೇಖನವನ್ನು ಎಂಜಾಯ್ ಮಾಡಿದ್ದಕ್ಕೆ ಮತ್ತು ಕಾಮೆಂಟಿಸಿದ್ದಕ್ಕೆ ಥ್ಯಾಂಕ್ಸ್...
ಹೀಗೆ ಬರುತ್ತಿರಿ...
ಧನ್ಯವಾದಗಳು...
ಶಿವೂ ಅವರೇ,
ಚಂದದ..ಶೀರ್ಷಿಕೆ...!!
ಕನ್ನಡಿ ಇಂದ ಇಷ್ಟೆಲ್ಲಾ ಅನುಭವ...!! ಬರಹ ಇಷ್ಟವಾಯಿತು...!! ಇವತ್ತೇ ನಾನು ನನ್ನ ಬೈಕ್ ಗೆ ಹಿಂಬದಿಯ ಕಣ್ಣು ಹಾಕಿಸುತ್ತೇನೆ...!!
ಅಭಿನಂದನೆಗಳು
ಪ್ರಶಾಂತ್ ಭಟ್
ಪ್ರಶಾಂತ್ ಭಟ್,
ಬರಹ ಇಷ್ಟಪಟ್ಟಿದ್ದಕ್ಕೆ ಥ್ಯಾಂಕ್ಸ್...
ಬೇಗ ಬಲಬದಿ ಮಿರರ್ ಹಾಕಿಸಿ..."ಮಿರರ್ ಎಫೆಕ್ಟ್" ಅನುಭವಿಸಿ...
ಧನ್ಯವಾದಗಳು...
ಶಿವಣ್ಣ...
ಶೀರ್ಷಿಕೆಯ ಮರ್ಮ ಏನಿರಬಹುದು ಎ೦ಬ ಕುತೂಹಲದಿ೦ದ ಓದಲು ಪ್ರಾರ೦ಬಿಸಿದೆ....
ಅ೦ತೂ ಬೆ೦ಗಳೂರು ಟ್ರಾಫಿಕ್ ಅನ್ನು ಇಷ್ಟಪಡಲು ನಿಮ್ಮದೇ ಆದ ರೀತಿಯನ್ನು ಕ೦ಡುಹಿಡಿದಿದ್ದೀರಾ... ನಿಮ್ಮಾಕೆ ನಿಮ್ಮ ಜೊತೆಗಿರುವಾಗ ಹುಶಾರಾಗಿರಿ, ಇಲ್ಲ೦ದ್ರೆ ಸಿಕ್ಕಿಬೀಳುವಿರಿ:)
ಸುಧೇಶ್,
ಬೆಂಗಳೂರಿನ ಟ್ರಾಫಿಕ್ ಅನುಭವಿಸುವುದಕ್ಕಿಂತ ಇದು ಮೇಲಲ್ಲವೇ...
ನಮ್ಮವರು ಜೊತೆಯಲ್ಲಿರುವಾಗ ಮಿರರ್ ಅನ್ನು ಆಕೆಯ ಮುಖ ಕಾಣುವಂತೆ ಆಡ್ಜಸ್ಟ್ ಮಾಡಿಕೊಳ್ಳುತ್ತೇನೆ...ಬೇರೆಯವರನ್ನು ನೋಡುವ ಪ್ರಮೇಯವೇ ಇರುವುದಿಲ್ಲ...
ಬಿಡುವು ಮಾಡಿಕೊಂಡು ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು...
ಶಿವು ಸರ್
ತುಂಬಾ ರಸಿಕತೆ ಇದೆ ನಿಮ್ಮ ಹಿಂಬದಿ ಕಣ್ಣಿಗೆ.
ಫೋಟೊ ಮತ್ತು ಬರಹ ಚನ್ನಾಗಿದೆ.
ಶಿವುಜಿ,
ಏನ್ ಇದು,,, ಹುಡುಗರ tricks ಮತ್ತೆ ಸಿಕ್ರೆಟ್ ನೆಲ್ಲ ಹೇಗೆ ರಾಜಾರೋಷವಾಗಿ ಹೇಳೋದ... ಬೇಡರಿ, ನಿಮ್ಗಾದ್ರೆ ಮದುವೇ agide... ಆದ್ರೆ ನಮ್ಮ ಗಳ ಕತೆ..... ಸ್ವಲ್ಪ ಯೋಚಿಸಿ ಸರ್....
ಹಾ ಹಾ,, ಚೆನ್ನಾಗಿದೆ ನಿಮ್ಮ ಬಲ ಮಿರರ್ ನ ಕತೆ, ಪರವಾಗಿಲ್ಲ ನಿಮ್ಮನ್ನು ಏನೋ ಅಂತ ಅನ್ಕೊಂಡ್ ಇದ್ದೆ... ಇರಲಿ ಬಿಡಿ,,
ನನಗು ಈ ತರ ಅನುಭವ ಆಗಿತ್ತು.. ನನ್ನ ಲವ್ಲೀ splender ನ ಯಾವುದೊ ಕೆಲಸದ ನಿಮಿತ್ತ, ಬುಲ್ temple ರೋಡಿನಲ್ಲಿ ನಿಲ್ಲಿಸಿ, ಯಾವುದೊ ಬ್ಯಾಂಕ್ ಗೆ ಹೋಗಿದ್ದೆ.. ಬಂದು ನೋಡುವಸ್ಟರಲ್ಲಿ,, ಯಾವನೋ ನನ್ ಮಗ,, ನೀಟ್ ಆಗಿ right side ಮಿರರ್ ನ ಬಿಚ್ಕೊಂಡ್ ಹೋಗಿ ಬಿಟ್ಟಿದ್ದ.... ಬಂದ್ ನೋಡ್ತೇನೆ shock... ಅದು tight ಆಗಿ ಬೇರೆ ಇತ್ತು.. ಯಾವ ಕಾರಣಕ್ಕೆ ಬಿಚ್ಕೊಂಡ್ ಹೋದನೋ ಗೊತ್ತಿಲ್ಲ.. ಆದರೆ ಅದು ಇಲ್ಲದಿದ್ದುಅರಿಂದ ನಾನು ಸ್ವಲ್ಪ ಒದ್ದಾಡಿದ್ದೆ...(ಬರಿ ಹುಡುಗಿರನ್ನು ನೋಡೋಕೆ ಮಾತ್ರ ಅಲ್ಲರಿ) ಆಮೇಲೆ next day ನೆ , ಹೊಸ ಮಿರರ್ ಹಕಿಸಿಕೊಂಡ್ ಬಂದೆ......ಸದ್ಯ ಇನ್ನು ಯಾವೊತ್ತು ಯಾರು ಕಳಚಿಕೊಂಡು ಹೋಗಿಲ್ಲ.... ಸೇಫ್ ಆಗಿ ಇದೆ....
ಗುರು
ಏನ್ರಿ ಶಿವು, ನೀವು ಬರಿ ಹುಳುಗಳನ್ನು ಬೆನ್ನತ್ತಿ ಪ್ರಶಸ್ತಿ ಗಿಟ್ಟಿಸುತ್ತೀರಿ ಎಂದುಕೊಂಡಿದ್ದೆ ಹುಡುಗಿಯರನ್ನೂ ಬೆನ್ನತ್ತಿ ಏನಾದ್ರು ಪ್ರಶಸ್ತಿ ಗಿಟ್ಟಿಸೋಕೆ ಹೊರಟಿದ್ದೀರೋ ಹೇಗೆ?. ಹಾಗೆ ಇನ್ನೊಂದು ಮದುವೆ ಆಗೋ ವಿಚಾರ ಏನಾದ್ರು ಇದೆಯಾ ಹೇಗೆ? ಅಬ್ಬಬ್ಬಾ ಏನ್ ಮಜಾ ಏನ್ ರಸಿಕತೆ ಅಂತೀನಿ! ನಾನು ನನ್ನ ಸ್ನೇಹಿತ ಬೈಕ್ ಮೇಲೆ ಹೋಗಬೇಕಾದರೆ ಬೆಂಗಳೂರಿನ ಟ್ರಾಫಿಕ್ನಲ್ಲಿ ಯಾವುದಾದರು ಸ್ಕೂಟಿ ಹುಡುಗಿ ಸಿಕ್ಕಿದರೆ ಅವಳೊಂದಿಗೆ ಒಂದಿಷ್ಟು flirt ಮಾಡಿ ಮುಂದೆ ಹೋಗುವದು ಈಗಲೂ ರೂಢಿ! ಅದೆಲ್ಲಾ ನೆನಪಿಗೆ ಬಂತು. ಹಾಗೆ ನಿಮ್ಮ ಲೇಖನ ಓದಿ fresh ಆಯಿತು. ಆಹಾ, ರಸಿಕರ ರಾಜ!
ಈ ಲೇಖನದಲ್ಲಿರುವ ನೀವು ತೆಗೆದ ಫೋಟೊ ತುಂಬಾ ಚನ್ನಾಗಿದೆ. ಈ ಸಾರಿ ಬೆಂಗಳೂರಿಗೆ ಬಂದಾಗ ನಿಮ್ಮ ಕೈಯಿಂದ ಒಂದಿಷ್ಟು ಫೋಟೊ ತೆಗೆದುಕೊಳ್ಳ್ಳಬೇಕೆಂಬ ಆಸೆ. ತೆಗೆದುಕೊಡುತ್ತೀರಿ ತಾನೆ?
<>
ಅದ್ಬುತ ಚಿತ್ರಗಳಿಗೆ ಒಳ್ಳೆಯ ಲೇಖನ
ಬೇಷ್ ಬೇಷ್ !!
ಗಾಡ್ ಬ್ಲೆಸ್ ಯು ಶಿವಣ್ಣ
ಸಲೀಂ,
ನೀವಂದುಕೊಂಡಂತೆ ಯಾವ ರಸಿಕತೆಯೂ ಇಲ್ಲ ಆ ಕನ್ನಡಿಯಲ್ಲಿ...ಸುಮ್ಮನೆ ಒಂದು ಹಾಸ್ಯ ಬರಹವಷ್ಟೇ.
ಚಿತ್ರ ಮತ್ತು ಲೇಖನ ಇಷ್ಟಪಟ್ಟಿದ್ದಕ್ಕೆ ಧನ್ಯವಾದಗಳು.
ಗುರು,
ಇಷ್ಟಕ್ಕೆ ಭಯಪಡಬೇಡಿ...ನಾನು ಬರೆದಿದ್ದಕ್ಕೆ ಹೆದರಬೇಡಿ...ನಿಜಕ್ಕೂ ಇದು ಸೀಕ್ರೇಟಲ್ಲ...ಹಾಗಂತ ಅಂದುಕೊಂಡಿದ್ದೆವಷ್ಟೇ. ಇದೇ ಲೇಖನ ಓದಿದ ನಮ್ಮ ಬ್ಲಾಗ್ ಗೆಳತಿಯರು ತಮಗಾದ ಅನೇಕ ಅನುಭವಗಳನ್ನು ದೈರ್ಯವಾಗಿ ಬ್ಲಾಗಿನಲ್ಲಿ ಹಂಚಿಕೊಳ್ಳದಿದ್ದರೇ ಆವಾಗ ನನ್ನನ್ನು ಕೇಳಿ...
ಇದು ಒಬ್ಬರಿಂದ ಮತ್ತೊಬ್ಬರಿಗೆ ಸ್ಫೂರ್ತಿ ನೀಡುವ ಕೆಲಸವಷ್ಟೆ...ಎಲ್ಲರಲ್ಲೂ ಇದು ಆಗಿರುತ್ತದೆ...ನನಗನ್ನಿಸಿದ್ದು[ಹುಡುಗರಿಗನ್ನಿಸಿದ್ದು] ಹುಡುಗಿಯರಿಗೂ ಬೇರೆ ಬೇರೆ ಅನುಭವಗಳಲ್ಲಿ ಅನ್ನಿಸಲೇ ಬೇಕಲ್ಲವೇ...ಅವು ದೈರ್ಯವಾಗಿ ಬರುತ್ತವೆ ಕಾದು ನೋಡಬೇಕಷ್ಟೆ...
ಈ ಲೇಖನದಿಂದಾಗಿ ನಿಮ್ಮ ಸ್ಪೆಲೆಂಡರ್ ಮಿರರ್ ಕಳುವಾದ ಅನುಭವ ಹೇಳಿಕೊಂಡಿದ್ದೀರಿ...
ಧನ್ಯವಾದಗಳು...
ಉದಯ್ ಸರ್,
ಹುಳು, ಪಕ್ಷಿಗಳಿಂದ ಪ್ರಶಸ್ತಿ ಬಂದರೂ..ಅದರಲ್ಲಿ ಸಿಕ್ಕಿಹಾಕಿಕೊಳ್ಳಬಾರದಲ್ಲವೇ ಸರ್...ಅದಕ್ಕಾಗಿ ಹೀಗೆ ಹೊಸದರ ಹುಡುಕಾಟ..ಮತ್ತೆ ನಾನು ಯಾವುದನ್ನೇ ಮಾಡಿದರೂ ಪ್ರಶಸ್ತಿಗಾಗಿ ಮಾಡುವುದಿಲ್ಲ ಸರ್...ಮೊದಲು ಮಾಡುವ ಕೆಲಸವನ್ನು enjoy ಮಾಡುತ್ತೇನೆ..ಅದರಿಂದ ನಿಜಕ್ಕೂ ನನಗೆ ಖುಷಿ ಸಿಕ್ಕರೆ ಅದನ್ನು ಇತರರೊಂದಿಗೂ ಹಂಚಿಕೊಳ್ಳುತ್ತೇನೆ...ನಂತರ ಈ ಬಹುಮಾನ, ಪ್ರಶಸ್ತಿ..ಡಿಸ್ಟಿಂಗ್ಷನ್ ಎಲ್ಲಾ.
ಮತ್ತೆ ನನಗೆ ಇನ್ನೊಂದು ಮದುವೆಯಾಗುವ ಬಯಕೆ ಖಂಡಿತ ಇಲ್ಲ ಸರ್. ಎಲ್ಲಾ ವಿಚಾರದಲ್ಲೂ ಅರಿತು,ಹೊಂದಿಕೊಂಡು ಸಮಾನ ಮನಸ್ಕ ಗೆಳತಿಯಂತ ಸಂಗಾತಿಯಿರುವಾಗ ಅದರ ಚಿಂತೆ ನನಗೇಕೆ...ರಸಿಕರ ರಾಜ ಪಟ್ಟ ಮಾತ್ರ ಬೇಡ ಸರ್.
ನಿಮ್ಮ ಹಳೇ ತುಂಟತನದ ಅನುಭವ ಹಂಚಿಕೊಂಡಿದ್ದೀರಿ..
ನೀವು ಬೆಂಗಳೂರಿಗೆ ಬಂದಾಗ ಬನ್ನಿ. ನಿಮ್ಮನ್ನು ಹೀರೋ ಅಂದುಕೊಳ್ಳಬೇಕು ಆ ರೀತಿ ಫೋಟೊ ತೆಗೆದುಕೊಡುತ್ತೇನೆ..
ಧನ್ಯವಾದಗಳು.
ಕನಸು,
ಚಿತ್ರ ಲೇಖನ ಮೆಚ್ಚಿದ್ದಕ್ಕೆ ಮತ್ತು ಹಾರೈಕೆಗಳಿಗೆ ಧನ್ಯವಾದಗಳು...ಹೀಗೆ ಬರುತ್ತಿರಿ...
ಛಾಯಾಕನ್ನಡಿಯಲ್ಲಿ.. ಬೆನ್ನ ಕಣ್ಣ ಕನ್ನಡಿಯ ಮಹಿಮೆಯನ್ನು ಸಾರಿದ್ದೀರಿ.. ನಿಜ ಬೆಂಗಳೂರು ಟ್ರಾಪಿಕ್ನಲ್ಲಿ ಹಿಂದೆ ಬರ್ತಿರೋ ಹುಡ್ಗೀರನ್ನು ನೋಡ್ತಾನೆ ಡ್ರೈವ್ ಮಾಡೋದು ಸ್ವಲ್ಪ ಕಷ್ಟ, ಆದ್ರೆ ಹುಡ್ಗಿ ಹಿಂದೆ ಬರ್ತಿದ್ರೆ ಬರೀ ರೋಡ್ ನೋಡ್ತಾ ಡ್ರೈವ್ ಮಾಡಿದ್ರೆ ಏನೋ ಕಳ್ಕೊಂಡ ಹಾಗೆ. ಕನ್ನಡಿ ಒಡೆದ ಹುಡುಗನಿಗೆ ತ್ಯಾಂಕ್ಸ್, ಇಲ್ಲದೇ ಹೋದರೆ ಇಷ್ಟೊಳ್ಳೆ ಬರಹ ಸಿಕ್ಕುತ್ತಿರಲಿಲ್ಲವೇನೋ...
shivu, heege huDugara secret enjoyment annu jagattige tiLisidare hEge, che che che!!!
huLu huppaTe aayitu, eega huDugiyaraa???
tumbaa chennagide, thanks
nimma haagoo Mallikarjun avarige banda ARPS ella patrikegaLalli baruttide. abhinandanegaLu
ಮನಸ್ವಿ,
ಬೆನ್ನ ಹಿಂದೆ ಬರುವ ಹುಡುಗಿಯರನ್ನು ಮಿರರ್ ನಲ್ಲಿ ನೋಡದಿದ್ದಲ್ಲಿ ಏನೋ ಕಳೆದುಕೊಂಡ ಹಾಗೆ...ಕರೆಕ್ಟ್. ನನ್ನ ಲೇಖನದ ಎಫೆಕ್ಟ್ ನಿಮಗೆ ಚೆನ್ನಾಗಿ ಆಗಿದೆ...
ಕೊನೆಗೂ ಕನ್ನಡಿ ಹೊಡೆದ ಹುಡುಗನಿಗೆ ಥ್ಯಾಂಕ್ಸ್ ನೀವು ಹೇಳಿಬಿಟ್ಟಿರಿ...ಇರಲಿ....
ಲೇಖನ ಮೆಚ್ಚಿದ್ದಕ್ಕೆ ಧನ್ಯವಾದಗಳು..
ಸರ್,
ದೇವರಾಣೆ ಹೇಳ್ತೀನಿ ನಾನು ಹುಡುಗಿರ ಹಿಂದೆ ಬಿದ್ದಿಲ್ಲ... ನಡೆದ ಒಂದು ಘಟನೆಯನ್ನು ತಮಾಷೆಗಾಗಿ... ಸ್ವಲ್ಪ ಸತ್ಯವಿಚಾರವನ್ನು ಹೇಳಿದ್ದೇನೆ..ಆಷ್ಟೇ..
ನನಗೆ ಖುಷಿಗೆ, ಬಹುಮಾನಕ್ಕೆ, ಹುಳು, ಪಕ್ಷಿಗಳು, ಮಕ್ಕಳು, ಪ್ರಕೃತಿಯೆ ಸಾಕು...
ಈ ಲೇಖನದಿಂದ ನನಗಂಟಿದ ಪಾಪವನ್ನು ತೊಳೆದುಕೊಳ್ಳಲು ಮುಂದಿನ ಲೇಖನದಲ್ಲಿ ಒಂದು ಪಕ್ಷಿ ಜೋಡಿಯ ಸಹವಾಸದ ಚಿತ್ರ-ಲೇಖನವನ್ನು ಶ್ರದ್ಧೆ ಭಕ್ತಿಯಿಂದ ಸಿದ್ಧಮಾಡುತ್ತಿದ್ದೇನೆ..
ಆಗಲು ಹೀಗೆ ಬಂದು ಪ್ರೋತ್ಸಾಹಿಸಿ...
ಧನ್ಯವಾದಗಳು..
ಜೋರಿದೀರ ತಾವೂನೂ :)
ಶಿವು,
ನಾನು ಸ್ವಲ್ಪ ನಿಮ್ಮ ಕಾಲೆಳೆದೆ. ಅಷ್ಟೆ. ಎಲ್ಲಾ ತಮಾಷೆಗಾಗಿ. ನನಗೆ ಹೀರೂ ತರ ಎಲ್ಲ ಬೇಡ್ರಿ ನಾನಿರೋ ಹಾಗೆ ತೆಗೆದು ಕೊಟ್ರೆ ಸಾಕು.
<>
ಪಾಲಚಂದ್ರ,
ಇಂಥ ಲೇಖನಗಳನ್ನು ಬರೆದಾಗ ನಾವು ಎಲ್ಲಾ ರೀತಿ ಸಿದ್ದರಾಗಿರಬೇಕಲ್ಲವೇ...
ಉದಯ್ ಸರ್,
ತೊಂದರೆಯಿಲ್ಲ ಸರ್, ನಾನು ತಮಾಷೆಗೆ ಹೇಳಿದೆ...ನೀವು ಬೆಂಗಳೂರಿಗೆ ಬಂದಾಗ ನೀವು ಹೇಗಿರುತ್ತೀರೋ ಹಾಗೆ ಫೋಟೋ ತೆಗೆದುಕೊಡುತ್ತೇನೆ...ಆಯ್ತ...
ಧನ್ಯವಾದಗಳು...
ನಾನು ಕೂಡಾ ನಿಮ್ಮ ಹಾಗೆ ಅಂದದ ಸುಂದರಿಯರನ್ನು ಹಿಂಬದಿ ಕಣ್ಣಿನಲ್ಲಿ ನೋಡೊದು ;) ಕೆಲವೊಮ್ಮೆ ನಡೆದು ಹೋಗುವಾಗಲೂ ಯಾರಾದರೂ ನನ್ನ ತಿರುಗಿ ನೊಡುತ್ತಿದ್ದಾರೇನೊ ಅಂತ ನೋಡಲು ಕನ್ನಡಿಗಾಗಿ ತಡಕಾಡುತ್ತೇನೆ ಅಭ್ಯಾಸ ಬಲದಿಂದ... ಚೆನ್ನಗಿತ್ತು...
ಲೇಖನ ಮಜ ಕೊಡ್ತು, ಫೊಟೊ ಖುಶಿ ಕೊಡ್ತು :-}
ಪ್ರಭುರಾಜ್,
ನೀವೆಂಥ ರಸಿಕರು ಅಂಥ ನಿಮ್ಮ ಬ್ಲಾಗ್ ಲೇಖನದಿಂದ ನನಗೆ ತಿಳಿದಿದೆ...
ಮತ್ತೆ ಇಲ್ಲಿ ಹಿಂಬದಿ ಕಣ್ಣನ್ನು ಪ್ರತಿಭಾನ್ವಿತರಾಗೇ ಉಪಯೋಗಿಸುತ್ತೀರೆಂದು ನನಗೆ ಅನ್ನಿಸುತ್ತೆ..[ತಮಾಷೆಗೆ ಹೇಳಿದೆ...]
ಆಗಾಗ ಹಿಂತಿರುಗಿ ನೋಡಬೇಡಿ...ನಿಮ್ಮಾಕೆ ಲಟ್ಟಣಿಕೆ ಹಿಡಿದು ಬಂದಾರು ಜೋಕೆ...ಅಹ..ಅಹ್..ಅಹ...
ಹೀಗೆ ಬರುತ್ತಿರಿ...ಧನ್ಯವಾದಗಳು..
ಜಾವೀದ್,
ಧನ್ಯವಾದಗಳು...
Post a Comment