Monday, March 30, 2009

ನಿಮಗೆ ಗೊತ್ತೆ...ಇವು ಪರಿಸರ ಪ್ರೇಮಿ ಟೋಪಿಗಳು...!

ದಿನಾಂಕ ೩೦-೩-೨೦೦೯ ರ ಪ್ರಜಾವಾಣಿ ಮೆಟ್ರೋನಲ್ಲಿ ಬೆಂಗಳೂರಿನ ರಸ್ತೆಗಳನ್ನು ಅಗಲಗೊಳಿಸಲು, ಮತ್ತು ಮೆಟ್ರೋ ರೈಲಿಗಾಗಿ ಬೆಂಗಳೂರಿನ ಜೀವಾಳವಾಗಿದ್ದ ಸಾಲು ಮರಗಳನ್ನು ಕತ್ತರಿಸಿ ಹಾಕಿರುವ ಲೇಖನ ಓದಿದೆ. ಅನೇಕ ವರ್ಷಗಳಿಂದ ಬೆಂಗಳೂರಿನ ಹೆಸರನ್ನು ಕಾಪಾಡುತಿದ್ದ ಈ ಮರಗಳ ಮಾರಣಹೋಮದ ಚಿತ್ರಲೇಖನವನ್ನು ಬರೆದಿದ್ದು " ಮಳೆಹನಿ" ಗೆಳೆಯ ಜೋಮನ್ ವರ್ಗೀಸ್. ಓದಿ ಬೇಸರವಾಯಿತು. ಮುಂದೆ ಬೆಂಗಳೂರಿನ ಕತೆ ಹೇಗೋ ಏನೋ ಅನ್ನುವ ಚಿಂತೆಗೊಳಗಾದೆ.

ಇದೇ ಗುಂಗಿನಲ್ಲಿ ಮನೆಗೆ ಬಂದವನು ನನ್ನ ಫೋಟೋಗಳ ರಾಶಿಯನ್ನು ನೋಡುತ್ತಿದ್ದಾಗ.. ಎಂದೋ ಕ್ಲಿಕ್ಕಿಸಿದ್ದ ಪರಿಸರ ಪ್ರೇಮಿ ಟೋಪಿಗಳು ಗಮನ ಸೆಳೆದವು. ಅವನ್ನು ವನಮಹೋತ್ಸವ ದಿನದಂದೂ ಬ್ಲಾಗಿಗೆ ಹಾಕಲು ಎತ್ತಿಟ್ಟಿದ್ದೆ. ಅದರೆ, ಬೆಂಗಳೂರಲ್ಲಿ ಉರುಳುತ್ತಿರುವ ಮರಗಳನ್ನು ನೋಡಿದಾಗ ಯಾಕೋ ಇವತ್ತೇ ಹಾಕಬೇಕೆನಿಸಿತು.

ಈ ಟೋಪಿಗಳಲ್ಲಿ ಕೆಲವು ಲಾವೆಂಚ ಬೇರಿನಿಂದ ಮಾಡಿರುವಂತವು. ಇನ್ನೂ ಕೆಲವು ಬಿದಿರು, ಸೆಣಬಿನಿಂದ ಮಾಡಿರುವಂತವು. ಇನ್ನಷ್ಟು ಮಲೆನಾಡಿನಲ್ಲಿ ಉಪಯೋಗಿಸುವ ಅಡಿಕೆ ಪಟ್ಟಿಯಿಂದ ಮಾಡಿದಂತವು. ಇವುಗಳ ಜೊತೆಗೆ ಸ್ವಲ್ಪ ಬಿನ್ನವೆನಿಸಿ, ಆಕರ್ಷಣೀಯವೆನಿಸಿರುವಂತ ಕೆಲವು ಪರಿಸರ ಪ್ರೇಮಿ ಟೋಪಿ ಫೋಟೋಗಳು ನನ್ನ ಕ್ಯಾಮೆರಾಗೆ ಸೆರೆಸಿಕ್ಕಿವೆ. ಅವುಗಳನ್ನೆಲ್ಲಾ ಬ್ಲಾಗಿಗೆ ಹಾಕಿದ್ದೇನೆ. ನೀವು ನೋಡಿ ಆನಂದಿಸಿ.


ಆಹಾ ...ಇಲ್ಲಿದೆ ನೋಡಿ ಪಕ್ಕಾ ಸಾಂಪ್ರಧಾಯಿಕ ಆಡಿಕೆ ಟೋಪಿ. ಈ ಮುಗ್ದ ಪೋರನಂತೆಯೇ ಈ ಟೋಪಿಯೂ ಮುಗ್ದತೆ ಪ್ರತೀಕವಲ್ಲವೇ.....ಅಂದಹಾಗೆ ಇದನ್ನು ಹಾಕಿಕೊಂಡಿರುವ ಈ ಪುಟ್ಟನ ಪೋರನ ಹೆಸರು ವಿಕಾಶ. ಕಾನ್ಸೂರಿನ ಹತ್ತಿರದ ಊರಾದ ಮತ್ಮರ್ಡುನಲ್ಲಿರುವ ಗೆಳೆಯ ನಾಗೇಂದ್ರನ ಎರಡನೇ ಪುತ್ರ.

ಅಡಿಕೆ ಟೋಪಿಯ ಹಿಂಬಾಗ ಅದೆಷ್ಟು ಚೆಂದಾಗಿ ಕಾಣುತ್ತೇ ಅಲ್ಲವೇ....ಸೀರೆಯ ನೆರಿಗೆಯಂತೆ ಕಾಣುವ ಇದಕ್ಕೆ ಅದೆಷ್ಟು ಸುಂದರ ಗಂಟು ಅಲ್ಲವೇ....ಅಂದಹಾಗೆ...ಇದು ಗರಿಗೆದರಿದ ಗಂಡು ನವಿಲಂತೆಯೂ ಕಾಣುತ್ತದಲ್ಲವೇ.....


ಇದಂತೂ ನವನಾವಿನ್ಯ ರೀತಿಯಲ್ಲಿ ತಯಾರಿಸಿದ ಆಡಿಕೆ ಟೋಪಿ....ಇದನ್ನು ಹಾಕಿಕೊಂಡಿರುವ ಪೋರಿ ಸ್ವಾತಿ....ಈಕೆ ನಾಗೇಂದ್ರನ ಅಣ್ಣನ ಮಗಳು.


ಈತ ನಾಗೇಂದ್ರನ ಮೊದಲನೇ ಪುತ್ರ ಸುಹಾಸ. ಇವನ ತಲೆ ಮೇಲಿರುವುದು ಆಡಿಕೆಪಟ್ಟಿಯಿಂದ ಮಕ್ಕಳಿಗೆ ಇಷ್ಟವಾಗುತ್ತದೆ ಅಂತ ಅಧುನಿಕವಾಗಿ ತಯಾರಿಸಿದ ಮತ್ತೊಂದು ಪಕ್ಕಾ ಪರಿಸರ ಟೋಪಿ....!


ಇದೋ ನೋಡಿ... ಇದು ಲಾವಂಚ ಬೇರಿನಿಂದ ತಯಾರಿಸಿದ ಟೋಪಿ. ಇದನ್ನು ಹಾಕಿಕೊಂಡರೆ ದೈಹಿಕ ಮತ್ತು ಮಾನಸಿಕ ಅರೋಗ್ಯ ವೃದ್ಧಿಗೊಳ್ಳುತ್ತದೆ. ಇದನ್ನು ಈ ರೀತಿ ಸುಂದರವಾಗಿ ತಯಾರಿಸಿದರೆ ಯಾರು ತಾನೇ ಬೇಡ ಅಂದಾರು....!



ಪಕ್ಕ ಮಲೆನಾಡಿನ ಶೈಲಿಯಲ್ಲಿ ತಯಾರಿಸಿದ ಮತ್ತೊಂದು ರೀತಿಯ ಲಾವಂಚ ಬೇರಿನ ಟೋಪಿ......!



ಲಾವೆಂಚ ಬೇರಿನ ಈ ಟೋಪಿವಾಲ ಸೆರೆ ಸಿಕ್ಕಿದ್ದು ರಸ್ತೆಯಲ್ಲಿ.....




ಸುಹಾಸನ ತಲೆಮೇಲಿರುವ ಇದು ಒಂದು ರೀತಿ ಸೆಣಬಿನಿಂದ ಮಾಡಿದ ಕೌಬಾಯ್ ಮಾದರಿ ಟೋಪಿ.


ಸೆಣಬಿನಿಂದ ಸುಂದರವಾಗಿ ಹೆಣೆಯಲ್ಪಟ್ಟ ಈ ಟೋಪಿ ನೋಡಲು ಅದೆಷ್ಟು ಸುಂದರ....ನೋಡಲು ಬುದ್ಧಿಜೀವಿಯಂತೆ ಕಾಣುವ ಈತ ಚಿತ್ರಸಂತೆಯಲ್ಲಿ ನನ್ನ ಕ್ಯಾಮೆರಾದೊಳಗೆ ಸೆರೆಯಾಗಿದ್ದರು.....



ಈ ಪರಿಸರ ಪ್ರೇಮಿ ಪರದೇಶಿ ಯುವಕ ನನ್ನ ಕ್ಯಾಮೆರಾಕ್ಕೆ ಸೆರೆ ಸಿಕ್ಕಿದ್ದು ಚಿತ್ರಕಲಾ ಪರಿಷತ್‌ನಲ್ಲಿ.....



ಈಕೆಯ ತಲೆಯ ಮೇಲೆ ಇರುವ ಬಿದಿರಿನ ಟೋಪಿ ಅದೆಷ್ಟು ಸೊಗಸು ಅಲ್ವಾ.......



ಈ ವಿದೇಶಿ ಮಹಿಳೆಯ ತಲೆ ಮೇಲೆ ಬಿದಿರಿನಿಂದ ತಯಾರಿಸಿದ ಮತ್ತೊಂದು ಚೆಂದದ ಟೋಪಿ....



ಚಿತ್ರ ಮತ್ತು ಲೇಖನ

ಶಿವು.

86 comments:

ಅನಿಲ್ ರಮೇಶ್ said...

ಶಿವು,
ಟೋಪಿಗಳು ಸಕ್ಕತ್.

ಲೇಖನವೂ ಚೆನ್ನಾಗಿದೆ.

-ಅನಿಲ್.

Guruprasad said...

ಹಾಯ್ ಶಿವೂ,,,
ಹಾಂ ಮತ್ತೆ ಶುರು ಮಾಡಿದ್ದರ ನಿಮ್ಮ ಟೋಪಿ ಪುರಾಣ ... just ನೆನ್ನೆ ತಾನೆ ನೆನಪು ಮಾಡ್ಕೋತಾ ಇದ್ದೆ... ಯಾಕೋ ಶಿವೂ ರವರ ಟೋಪಿಗಳು ಮತ್ತೆ ಬರಲಿಲ್ಲವಲ್ಲ ಅಂತ... ಆಗಲೇ ಬ್ಲಾಗ್ನಲ್ಲಿ ಅಪ್ಲೋಡ್ ಮಾಡಿದ್ದಿರ.....
ಗುಡ್ ಎಲ್ಲ ಟೋಪಿ ಮತ್ತೆ ವಿವರಣೆ ಗಳು ಚೆನ್ನಾಗಿ ಇದೆ... ನನ್ನ ಹತ್ರನು ಒಂದು ಬೆತ್ತದ ಟೋಪಿ ಇದೆ... ಅದನ್ನು ಹಾಗೆ ಜೋಪಾನವಾಗಿ ನೆನಪಿಗೋಸ್ಕರ ಎತ್ತಿ ಇಟ್ಟಿ ಇತ್ತಿದೇನೆ.

ಗುರು

shivu.k said...

ಅನಿಲ್ ರಮೇಶ್,

ಟೋಪಿ ಹಾಕಿಕೊಂಡಿದ್ದಕ್ಕೆ ಥ್ಯಾಂಕ್ಸ್....ಹೀಗೆ ಹೊಸ ಟೋಪಿ ಬಂದಾಗ ಬರುತ್ತಿರಿ....

Anonymous said...

ಟೋಪಿಗಳು ಎಂದಿನಂತೆ ಚೆನ್ನಾಗಿವೆ :-)
ಪರಿಸರದ ಬಗ್ಗೆ ಇರುವ ಕಾಳಜಿಯೂ ಮೆಚ್ಚತಕ್ಕದ್ದೇ.
ಬೆಂಗಳೂರು garden city ಇಂದ concrete city ಆಗುತ್ತಿರುವುದು ಅಷ್ಟೇ ನಿಜ.
ಹಲವಾರು ವರ್ಷಗಳಿಂದ ಬೆಳೆದು ನಿಂತ ಮರ ನಾಳೆ ಇರುವುದಿಲ್ಲ, ಇದೆ ರೀತಿ ನಡೆದರೆ ಮುಂದೇನೋ.

shivu.k said...

ಗುರು,

ಬ್ಲಾಗಿಗೆ ಬಂದಿದ್ದಕ್ಕೆ ಥ್ಯಾಂಕ್ಸ್.....ನಾನು ಬಿಟ್ಟರೂ ಈ ಟೋಪಿಗಳು ನನ್ನನ್ನು ಬಿಡುವುದಿಲ್ಲ. ಇವೆಲ್ಲಾ ಪರಿಸರ ಸ್ನೇಹಿ ಟೋಪಿಗಳಲ್ಲವೇ...ಎಲ್ಲರಿಗೂ ಇಷ್ಟವಾಗುತ್ತದೆ ಅಂದುಕೊಂಡಿದ್ದೇನೆ...ನಿಮ್ಮ ಬೆತ್ತದ ಟೋಪಿಯನ್ನು ಜೋಪಾನ ಮಾಡಿ....
ಧನ್ಯವಾದಗಳು.

shivu.k said...

ಜ್ಯೋತಿ ಮೇಡಮ್,

ಟೋಪಿ ಬೇಕೆ ಟೋಪಿ ಹಾಡಲು ಅಲ್ಲಲ್ಲ ನೋಡಲು ಬಂದಿದ್ದಕ್ಕೆ ಥ್ಯಾಂಕ್ಸ್.....ಬೆಂಗಳೂರು ಮುಂದೊಂದು ದಿನ ಕಾಂಕ್ರೀಟ್ ಕಾಡು ಆಗುತ್ತೆ ಅನ್ನುವ ದಿಗಿಲು ಇದೆ.
ಹೀಗೆ ಬರುತ್ತಿರಿ...
ಧನ್ಯವಾದಗಳು....

ಮಲ್ಲಿಕಾರ್ಜುನ.ಡಿ.ಜಿ. said...

ಶಿವು,
ಇವತ್ತಿನ ಪ್ರಜಾವಾಣಿಯ ಮೆಟ್ರೋ ಪೇಪರ್ ಇಂಟರ್ ನೆಟ್ ನಲ್ಲಿ ನೋಡಿದೆ."ಪ್ರಗತಿಯ ಕೊಡಲಿಗೆ ಮರಗಳ ಬಲಿ" - ಚೋಮನ್ ವರ್ಗೀಸ್ ಅವರ ಲೇಖನ ಮತ್ತು ನಿಮ್ಮ ಫೋಟೋಗಳು. ತುಂಬ ಪ್ರಸ್ತುತವಾದ ಲೇಖನ. ಉರುಳಿರುವ ಮರಗಳನ್ನು ನೋಡಿ ಹೊಟ್ಟೆ ಉರಿಯಿತು. ಮುಂದಿನವರಿಗೆ ಏನನ್ನು ಉಳಿಸುವೆವು?
ಈ ಬೇಜಾರನ್ನು ನಿಮ್ಮ ಟೋಪಿಗಳು ಕೊಂಚ ಕಡಿಮೆ ಮಾಡುತ್ತವೆ.
ನಿಮ್ಮ ಪರಿಸರದ ಟೋಪಿಗಳಿಗೆ Hats off.
ಅಡಿಕೆ, ಲಾವಂಚದ ಟೋಪಿಗಳು .. ಎಲ್ಲಾ ಚೆನ್ನಾಗಿವೆ. ಆ ವಿದೇಶಿ ಯುವಕನಂತೂ ಗೊಂಬೆ ಇದ್ದ ಹಾಗೆ ಇದ್ದಾನೆ.

ಬಿಸಿಲ ಹನಿ said...

ಶಿವು,
ನಿಮ್ಮ ಲೇಖನ ಹಾಗೂ ಚೆಂದದ ಫೋಟೋಗಳು ನಿಮ್ಮ ಪರಿಸರ ಪ್ರಜ್ಞೆಗೆ ಹಿಡಿದ ಕನ್ನಡಿಗಳಾಗಿವೆ. ಈ ಟೋಪಿಗಳನ್ನು ತೋರಿಸಿದ್ದಕ್ಕೆ ಧನ್ಯವಾದಗಳು.

Rajesh Manjunath - ರಾಜೇಶ್ ಮಂಜುನಾಥ್ said...

ಶಿವೂ ಸರ್,
ಟೋಪಿಗಳು ಸಕತ್ತಾಗಿವೆ, ಅದರಲ್ಲೂ ಪರಿಸರ ಪ್ರಜ್ಞೆ ಮತ್ತು ಕಾಳಜಿ ಸೊಗಸಾದ ಪರಿಕಲ್ಪನೆ. ಬುದ್ದಿ ಜೀವಿಯ ಟೋಪಿ ಇಷ್ಟವಾಯಿತು.

hEmAsHrEe said...

very nice and cute Topis !
i have one such hat made out of Adike Leaves !

thank you.

Keshav.Kulkarni said...

Hats off to you Shivu, and congratulations too.

Keshav

shivu.k said...

ಮಲ್ಲಿಕಾರ್ಜುನ್,

ಮರಗಳ ಮಾರಣಹೋಮ ನಾನು ಪ್ರತಿನಿತ್ಯ ನೋಡುವ ಬೇಸರದ ದೃಶ್ಯ. ಪ್ರತಿನಿತ್ಯ ನವರಂಗ್-ಮಲ್ಲೇಶ್ವರ ರಸ್ತೆಯಲ್ಲಿ ಸಾಲು ಸಾಲು ಮರಗಳು ನೆಲಕ್ಕುರುಳುತ್ತಿವೆ. ಅದರ ಬೇಸರ ಹೋಗಲಾಡಿಸಿ ಸಮಾಧಾನಗೊಳ್ಳಲು ಈ ವಿಧದ ಟೋಪಿಗಳನ್ನು ಹಾಕಿದ್ದೇನೆ....ಧನ್ಯವಾದಗಳು.

shivu.k said...

ಉದಯ್ ಸರ್,

ಪರಿಸರದ ಬಗ್ಗೆ ನಮಗೆ ಸ್ವಲ್ಪವಾದರೂ ಕಾಳಜಿ ಇರಬೇಕಲ್ವ...ಅದಕ್ಕೆ ಇದು ನನ್ನ ಪುಟ್ಟ ಪ್ರಯತ್ನ...
ಧನ್ಯವಾದಗಳು....

shivu.k said...

ರಾಜೇಶ್,

ನಿಮ್ಮ ಕೆಲಸದ ನಡುವೆ ಬಿಡುವು ಮಾಡಿಕೊಂಡು ಪರಿಸರ ಪ್ರೇಮಿ ಟೋಪಿಗಳನ್ನು ನೋಡಿದ್ದೀರಿ...ಧನ್ಯವಾದಗಳು.

shivu.k said...

ಹೇಮಾಶ್ರೀ ಮೇಡಮ್,

ಟೋಪಿಗಳನ್ನು ನೋಡಿದ್ದಕ್ಕೆ ಥ್ಯಾಂಕ್ಸ್....ನಿಮ್ಮ ಬಳಿ ಇರುವ ಅಡಿಕೆ ಟೋಪಿಯನ್ನು ಜೋಪಾನ ಮಾಡಿ. ಇತ್ತೀಚೆಗೆ ತಿಳಿದುಬಂದ ಪ್ರಕಾರ ಇಂಥ ಟೋಪಿಗಳಿಗೆ ಗಿರಾಕಿಗಳು ಇಲ್ಲದ್ದರಿಂದ ಅದನ್ನು ತಯಾರಿಸುತ್ತಿಲ್ಲವಂತೆ...
ಮುಂದೆ ಅದು ಆಂಟಿಕ್ ಪೀಸ್ ಆಗಬಹುದು...

shivu.k said...

ಕುಲಕರ್ಣಿ ಸರ್,

ಟೋಪಿಗಳನ್ನು ಮೆಚ್ಚಿದ್ದಕ್ಕೆ ಥ್ಯಾಂಕ್ಸ್....

shivu.k said...

ನಾಗೇಶ್ ಹೆಗಡೆ ಹೇಳಿದರು,

ಚೆನ್ನಾಗಿವೆ ನಿಮ್ಮ ಟೋಪಿ ಸಂಗ್ರಹ...!!

ಟೋಪಿ ಫೋಟೊಗಳು ಎಂದಿನಂತೆ ಸೂಪರ್ಬ್ !

Archu said...

tumbaa chennagive shivu avare..
adike haaLeya topigaLannu namma kade (da.ka. jille ) 'muttaaLe' endu kareyuttare...

Ittigecement said...

ಶಿವು ಸರ್....

ತುಂಬಾ ಚಂದದ ಟೋಪಿಗಳು...
ನೋಡಿ ಖುಷಿಯಾಯಿತು...
ಕ್ರತಕತೆಯಿಲ್ಲದ..
ಪರಿಸರದಿಂದಲೇ ಸಿಗುವ ಟೋಪಿಗಳ ಸಂಗ್ರಹ ಚೆನ್ನಾಗಿದೆ...
ಅದರಲ್ಲಿ ಕಲೆಯೂ ಇದೆ...

ಅಭಿನಂದನೆಗಳು...

Unknown said...

ಅದ್ಭುತ ಶಿವು. ಒಂದೇ ಕಡೆ ಹಲವಾರು ರೀತಿಯ, ವಿನ್ಯಾಸದ ಟೋಪಿಗಳನ್ನು ನೋಡಲು ಅವಕಾಶ ಮಾಡಿಕೊಟ್ಟಿದ್ದಕ್ಕಾಗಿ ಧನ್ಯವಾದಗಳು. ಎಷ್ಟು ಬೇಕಾದರೂ ಟೋಪಿ ಫೋಟೋ ತೆಗೆಯಿರಿ. ಆದರೆ ಹಾಗೆ ತೆಗೆದ ಟೋಪಿಗಳನ್ನು ಯಾರಿಗೂ ಹಾಕಬೇಡಿ ಮತ್ತೆ! ಜೊತೆಗೆ ನಿಮ್ಮ ತಲೆಯೂ ಹುಷಾರು ಮಾರಾಯ್ರೆ!

Pramod said...

ನೈಸ್ ಕ೦ಪೈಲೇಶನ್.. ಚೆನ್ನಾಗಿ ಟೋಪಿ ಹಾಕ್ತೀರಾ .. :)
ನಮ್ಮ ಪರಿಸರ ನಾವೇ ಉಳಿಸಬೇಕು ಅಲ್ವೇ..

Anonymous said...

:-) ಚೆನ್ನಾಗಿವೆ ಸಾರ್!
ಪರಿಸರ ಪ್ರೇಮಿ ಟೋಪಿಗಳಾದ ಕಾರಣ, ಹಾಕಿಸ್ಕೊಂಡಿದ್ದಿಕ್ಕೆ ಬೇಸರವಿಲ್ಲ! ;-)

Umesh Balikai said...

ಆಹಾ... ಎಲೆ, ಬಿದಿರು, ಸೆಣಬು ಮುಂತಾದ ಸಸ್ಯಜನ್ಯ ವಸ್ತುಗಳಿಂದ ಇಷ್ಟೊಂದು ಕಲಾತ್ಮಕ ಟೋಪಿಗಳನ್ನು ತಯಾರಿಸುತ್ತಾರಾ! ಫೋಟೋಗಳು ಎಂದಿನಂತೆ ಸೂಪರ್. ಹಾಗೆಯೇ ಲೇಖನವೂ ಕೂಡ. ಶಿವು ಸರ್, ಈ ತರ ಒಂದು ಟೋಪಿ ಹಾಕಿಕೊಂಡು ನಿಮ್ ಹತ್ರ ಒಂದು ಫೋಟೋ ತೆಗೀಸ್ಕೋಬೇಕು ಅಂತ ಆಸೆ ನಂಗೆ :)

ಮನಸು said...

ಶಿವೂ ಸರ್,
ಟೋಪಿ ಜೊತೆಗೆ ಚಿತ್ರಗಳು, ಟೋಪಿ ಹಾಕಿರುವವರು, ನಿಮ್ಮ ಬರಹ ಎಲ್ಲವು ಒಂದಕೊಂದು ಒಪ್ಪುತ್ತದೆ.. ಪರಿಸರ ಕಾಳಜಿಯ ಬಿಂಬಿತಕ್ಕೆ ನಮ್ಮ ನೂರು ನಮನಗಳು.. ಪರಿಸರ ಉಳಿಸೋ ಒಲವು ಎಲ್ಲರಲ್ಲಿ ಮೂಡಲೆಂದು ಆಶಿಸುತ್ತೇನೆ..

Anonymous said...

ನಮಸ್ತೆ ಶಿವೂ ಅಣ್ಣ
ಉತ್ತಮ ಛಾಯಚಿತ್ರ ಹಾಗೂ ಛಾಯಾಚಿತ್ರಕ್ಕೆ ತಕ್ಕಂತೆ ಮಿತವಾದ ಬರಹ. ತುಂಬಾ ಇಷ್ಟವಾಯಿತಣ್ಣ. ಅಣ್ಣ ವಿಕಾಸ್ ಹಾಕಿಕೊಂಡಿರುವ ಅಡಿಕೆ ಪಟ್ಟಿಯ ತೋಪಿಗೆ ನಮ್ಮ ಊರಲ್ಲಿ ಮುಟ್ಟಲೇ ಅಂತಾರೆ.

shivu.k said...

ಅರ್ಚನ ಮೇಡಮ್,

ಪರಿಸರದ ಟೋಪಿ ಮೆಚ್ಚಿದ್ದಕ್ಕೆ ಮತ್ತು ನಿಮ್ಮ ಕಡೆಯ "ಮುಟ್ಟಾಳೆ" ಎನ್ನುವ ಹೊಸ ಪದ ಕೊಟ್ಟಿದ್ದಕ್ಕೆ ಥ್ಯಾಂಕ್ಸ್...

shivu.k said...

ಪ್ರಕಾಶ್ ಸರ್,

ಪರಿಸರ ಟೋಪಿ ಇಷ್ಟಪಟ್ಟಿದ್ದಕ್ಕೆ ಥ್ಯಾಂಕ್ಸ್....ಈ ಟೋಪಿಗಳನ್ನು ತಯಾರಿಸುವಾಗ ಕಲೆ ಹೇಗೆ ಹೊರಹೊಮ್ಮುತ್ತದೆ ಅಂತ ಖಂಡಿತ ಗೊತ್ತಾಯಿತು....

ಧನ್ಯವಾದಗಳು...

PARAANJAPE K.N. said...

ಶಿವೂ
ವೈವಿಧ್ಯತೆಯಿ೦ದ ಕೂಡಿದ ಟೋಪಿಗಳ ಜೊತೆ ನಿಮ್ಮ ಚುಟುಕು ಬರಹದ ಒಗ್ಗರಣೆ ಸೇರಿ ರುಚಿಕಟ್ಟಾಗಿದೆ. ಅದೆಷ್ಟು ಜನರಿಗೆ ಟೋಪಿ ಹಾಕಿದ್ದೀರಿ ಮಾರಾಯರೇ ??

shivu.k said...

ಸತ್ಯನಾರಾಯಣ ಸರ್,

ಈ ಪರಿಸರ ಟೋಪಿಗಳನ್ನು ಅಲ್ಲೊಂದು ಇಲ್ಲೊಂದು ಅಂತ ಸುಮಾರು ನಾಲ್ಕು ತಿಂಗಳಿಂದ ಕ್ಲಿಕ್ಕಿಸುತ್ತಿದ್ದೆ....ಈಗ ಬ್ಲಾಗಿಗೆ ಹಾಕುವಷ್ಟಾಗಿತ್ತು. ನಾನು ಯಾರಿಗೂ ಹಾಕೊಲ್ಲ ಸರ್....ನಾನು ಅಂಥ ಹುಡುಗ ಅಲ್ಲ....ನಾನೇ ಹೆಚ್ಚು ಹಾಕಿಸಿಕೊಂಡಿದ್ದೀನಿ...
ಧನ್ಯವಾದಗಳು...

shivu.k said...

ಪ್ರಮೋದ್,

ಪರಿಸರ ಉಳಿಸಲು ನಾವೆಲ್ಲಾ ಈ ರೀತಿಯಾದರೂ ಒಂದಾಗೋಣ....ಟೋಪಿ ಮೆಚ್ಚಿದ್ದಕ್ಕೆ ಥ್ಯಾಂಕ್ಸ್...

ಹೀಗೆ ಬರುತ್ತಿರಿ...ಧನ್ಯವಾದಗಳು...

shivu.k said...

ಪ್ರದೀಪ್,

ಟೋಪಿ ಮೆಚ್ಚಿದ್ದಕ್ಕೆ ಥ್ಯಾಂಕ್ಸ್....ನೀವು ಹಾಕಿಸಿಕೊಂಡಿದ್ದೀನಿ ಅಂದುಕೊಳ್ಳಬೇಡ್ರಿ ಮಾರಾಯ್ರೆ...ನಾನು ಸುಮ್ಮನೆ ಹೇಳುವುದು ಅಷ್ಟೇ....

ಧನ್ಯವಾದಗಳು...

shivu.k said...

ಉಮೀ ಸರ್

ನಾನು ಫೋಟೊ ತೆಗೆದು ಇಲ್ಲಿ ಬ್ಲಾಗಿಗೆ ಹಾಕುವುದು ದೊಡ್ಡದಲ್ಲ ಸರ್. ನಮ್ಮ ಸುತ್ತಮುತ್ತಲಿನ ಪರಿಸರ ಅದರ ಬಗ್ಗೆ ಕಾಳಜಿ, ಅದರಿಂದ ತೆಗೆದ ಕಲೆಗಾರಿಕೆ ಬಳಕೆಯಾದ ವಸ್ತುಗಳನ್ನು ನೋಡಿದಾಗ ನಾವೆಲ್ಲ ನಗಣ್ಯವೆನಿಸುತ್ತದೆ.....ನೀವು ಯಾವುದಾದರೂ ಇಂಥ ಟೋಪಿಹಾಕಿಕೊಂಡು ಬನ್ನಿ ನಾನು ಖಂಡಿನ ನಿಮ್ಮ ಫೋಟೋ ತೆಗೆಯುತ್ತೇನೆ....ಹೀಗೆ ಬರುತ್ತಿರಿ...'
ಧನ್ಯವಾದಗಳು...

shivu.k said...

ಮನಸು ಮೇಡಮ್,

ಇಂಥವರು ಸಿಕ್ಕರೆ ತಾನೆ ನಾವು ಫೋಟೋ ತೆಗೆಯುವುದು...ಅದಕ್ಕೆ ಟೋಪಿ ಮತ್ತು ಟೋಪಿಹಾಕಿದವರನ್ನು ನಾವು ಮೆಚ್ಚಲೇ ಬೇಕು....
ಬನ್ನಿ ಒಟ್ಟಾಗಿ ಪರಿಸರ ಉಳಿಸೋಣ....

ಧನ್ಯವಾದಗಳು....

shivu.k said...

ರೋಹಿಣಿ ಪುಟ್ಟಿ...

ಛಾಯಾಚಿತ್ರ ಮತ್ತು ಲೇಖನ ಮೆಚ್ಚಿದ್ದಕ್ಕೆ ಥ್ಯಾಂಕ್ಸ್....ಮುಟ್ಟಾಲೆ ಪದವನ್ನು ನೀನು ಹೇಳಿದ್ದಕ್ಕೆ ಥ್ಯಾಂಕ್ಸ್...ಇದೇ ಮಾತನ್ನು ಅರ್ಚನಾರವರು ಹೇಳಿದ್ದಾರೆ...
ಹೀಗೆ ಬರುತ್ತಿರು ಧನ್ಯವಾದಗಳು..

shivu.k said...

ಪರಂಜಪೆ ಸರ್,

ಇಲ್ಲಿ ಬೇಕಂತಲೇ ಬರಹ ಚುಟುಕಾಗಿಸಿದ್ದೇನೆ....ಇಂಥ ಟೋಪಿ ತಯಾರಿಸುವವರ ಮುಂದೆ ನಮ್ಮದೇನಿದೆ ಹೆಗ್ಗಳಿಕೆ..ಅವರನ್ನು ನಾವು ಮೆಚ್ಚಬೇಕು...ಅದರ ಜೊತೆ ನಾವು ಕೈಗೂಡಿಸಬೇಕು....
ಅಂದಹಾಗೆ ನಾನು ಟೋಪಿಗಾರರ ಹಿಂದೆ ಬೀಳುತ್ತೇನೆ ಸರ್, ಟೋಪಿ ಫೋಟೋ ತೆಗೆಯಲಿಕ್ಕೆ ಅದ್ರೆ ಯಾರಿಗೂ ಟೋಪಿ ಹಾಕೊಲ್ಲ...ನಮ್ಮ ಬ್ಲಾಗಿಗರು ಇಲ್ಲಿ ಇಷ್ಟಪಟ್ಟು ಪ್ರೀತಿಯಿಂದ ಟೋಪಿ ಹಾಕಿಕೊಳ್ಳುತ್ತಾರೆ...
ಧನ್ಯವಾದಗಳು...

Laxman (ಲಕ್ಷ್ಮಣ ಬಿರಾದಾರ) said...

Hi shivu,
maragala bagge barediddu istavayitu.
Monne navaranga talkis roadalli iruva maragalanna kadidu hakiddaralla alli rasteyalli haydu baruvag manassige bahala bejarayitu.
innu maragalillada bengalore narakave sari

ಮೂರ್ತಿ ಹೊಸಬಾಳೆ. said...

ಶಿವು ಸರ್ ತಾರಾವರೀ ಟೊಪಿಗಳ ಪರಿಚಯ ಮಾಡಿಸಿದ್ದಕ್ಕೆ ಧನ್ಯವಾದಗಳು.
ನಮ್ಮ ಸಾಗರ ಪ್ರಾಂತ್ಯದಲ್ಲಿ ಈ ಅಡಿಕೆ ಹಾಳೆ ಇಂದ ಮಾಡಿದ ಟೊಪ್ಪಿಯನ್ನ ”ಮಂಡೆಹಾಳೆ” ಅಥವಾ ”ಮಂಡಾಳೆ” ಎಂದೂ ಕರೆಯುತ್ತಾರೆ.

ಸುಧೇಶ್ ಶೆಟ್ಟಿ said...

ಹೋ... ಹೊಸ ಟೋಪಿಗಳು ಸೂಪರ್...ಅದರಲ್ಲೂ ನನಗಿಷ್ಟದ ಅಡಿಕೆ ಟೋಪಿಗಳು ಇನ್ನೂ ಸೂಪರ್....

ಈ ಅಡಿಕೆ ಪಟ್ಟಿಗಳಿ೦ದ ನಾವು ಬೀಸಣಿಗೆ ಮಾಡಿಕೊಳ್ಳುತ್ತಿದ್ದೆವು ಬೇಸಿಗೆ ಕಾಲದಲ್ಲಿ. ತರಹೇವಾರಿ ಬೀಸಣಿಗೆಗಳೂ ಇವೆ. ಅವುಗಳ ಪೋಟೋಗಳನ್ನು ಹಾಕಿ ಶಿವಣ್ಣ....

ಕ್ಷಣ... ಚಿಂತನೆ... said...

ಶಿವು ಸರ್‍, ಚೆಂದಕಿಂತ ಚೆಂದ ಈ ಪರಿಸರ ಪ್ರೇಮಿ... ಟೋಪಿಗಳು...
ಶರೀರ ಮತ್ತು ಮನಸ್ಸಿಗೆ ಹಿತ ನೀಡುವ ಇಂತಹ ಪರಿಸರ ಸ್ನೇಹೀ ಟೋಪಿಗಳನ್ನು ಬಳಸಿದರೆ ಪ್ರಕೃತಿ ಪರಿಸರ ಹಾಗೂ ಅವುಗಳನ್ನು ತಯಾರಿಸುವವರಿಗೂ ಒಂದು ವಿಧದಲ್ಲಿ ಅನುಕೂಲಕರ `ವಾತಾವರಣ' ನಿರ್ಮಿಸಿದಂತೆ ಆಗುತ್ತದೆ. ಇಂತಹ ಒಂದು ಪ್ರಸಂಗವನ್ನು ಫೋಟೋಗಳ ಮೂಲಕ ಕೊಟ್ಟಿದ್ದಕ್ಕಾಗಿ ಹಾಗೂ ಅದಕ್ಕೆ ಹೊಂದಿಸಿ ಬರೆದ ಟಿಪ್ಪಣಿಗಳಿಗೆ ಧನ್ಯವಾದಗಳು.

ಹೀಗೇ ಒಂದೊಂದು ವಿಷಯದ ಬಗ್ಗೆ ನಿಮ್ಮಿಂದ ಹೊಸ ಪ್ರಯತ್ನಗಳು ಮೂಡಿಬರುತ್ತಿರಲಿ.

ವಿಶ್ವಾಸಿ,

Dr.Gurumurthy Hegde said...

ಶಿವೂ ಸರ್,
ಟೋಪಿ ಪುರಾಣ ತುಂಬಾ ಹಿಡಿಸಿತು. ತುಂಬಾ ಸಂಶೋಧನೆ ಮಾಡ್ತಿರಾ,

ಪಾಚು-ಪ್ರಪಂಚ said...

ಶಿವೂ ಸರ್,
ಮತ್ತೆ "ಛಾಯಾಕನ್ನಡಿ" ಯಲ್ಲಿ ಟೋಪಿಗಳು...! ಸೂಪರ್ ಸರ್...
ಇಂತಹ ಪರಿಸರ ಸ್ನೇಹಿ ಟೋಪಿಗಳು ಪ್ಲಾಸ್ಟಿಕ್ ಮಧ್ಯೆ ಜಾಸ್ತಿ ಆಗಲಿ...!!

ನಿಮಗೆ ಅಂತರಾಷ್ಟ್ರೀಯ ಪುರಸ್ಕಾರ ಸಂದ ಬಗ್ಗೆ "ಕೆಂಡಸಂಪಿಗೆ" ನಲ್ಲಿ ಓದಿದೆ...! ಈ ಸಾಧನೆಗೆ ನನ್ನದೊಂದು ಪುಟ್ಟ ಅಭಿನಂದನೆಗಳು..!

ಪ್ರಶಾಂತ್ ಭಟ್

ವಿನುತ said...

ಶಿವುರವರೆ,

ಇಂತಹ ಟೋಪಿಗಳನ್ನು ಬಹಳಷ್ಟು ನೋಡಿದ್ದರೂ, ಹೀಗೆ ಪರಿಸರ ಸ್ನೇಹಿಯಾಗಿ ಮಾಡಬಹುದೆಂಬ ಮಾಹಿತಿಯಿರಲಿಲ್ಲ. ನಿಮ್ಮಲ್ಲಿರುವ ಈ ವಿಶೇಷ ಆಸಕ್ತಿಗೂ ಹಾಗು ಅದನ್ನು ನಮ್ಮೊಡನೆ ಹ೦ಚಿಕೊ೦ಡದ್ದಕ್ಕೂ ವಂದನೆಗಳು.

shivu.k said...

ಲಕ್ಷ್ಮಣ್ ಸರ್,

ನಾನು ಮರಗಳ ಬಗ್ಗೆ ಬರೆಯಲು ಕಾರಣ ಮಳೆಹನಿ ಬ್ಲಾಗಿನ ಜೋಮನ್. ಅವರ ಲೇಖನ ನಿನ್ನೆಯ[೩೦-೩-೦೯]ಪ್ರಜಾವಾಣಿಯ ಮೆಟ್ರೋದಲ್ಲಿ ಬಂದಿತ್ತು, ಮತ್ತು ಅವರ ಲೇಖನಕ್ಕೆ ನಾನೇ ತೆಗೆದುಕೊಟ್ಟ ಕತ್ತರಿಸಿದ ಮರಗಳ ಫೋಟೊ ಬಳಸಿದ್ದಾರೆ. ಅವರ ಲೇಖನ ನನಗೆ ಈ ಪರಿಸರ ಟೋಪಿಗಳಿಗೆ ಸ್ಫೂರ್ತಿ...

ಧನ್ಯವಾದಗಳು.

shivu.k said...

ಮೂರ್ತಿ ಹೊಸಬಾಳೆ ಸರ್,

ನನ್ನ ಬ್ಲಾಗಿಗೆ ಸ್ವಾಗತ...ಟೋಪಿಗಳಲ್ಲಿ ಇನ್ನೂ ವೈವಿದ್ಯತೆಯ ಟೋಪಿಗಳಿವೆ....ಅವುಗಳನ್ನು ಮುಂದೆ ಹಾಕುತ್ತೇನೆ. ಆಡಿಕೆ ಹಾಳೆ ಟೋಪಿಗೆ ಮತ್ತೊಂದು ಹೆಸರು ಹೇಳಿದ್ದೀರಿ...ಧನ್ಯವಾದಗಳು...

shivu.k said...

ಸುಧೇಶ್,

ತುಂಬಾ ದಿನಗಳ ನಂತರ ನನ್ನ ಬ್ಲಾಗಿಗೆ ಬರುತ್ತಿದ್ದೀರಿ ಸ್ವಾಗತ...ನಿಮಗಿಷ್ಟವಾದ ಟೋಪಿಯನ್ನು ನೋಡಿ ಮೆಚ್ಚಿದ್ದಕ್ಕೆ ಥ್ಯಾಂಕ್ಸ್...ಮತ್ತೆ ಬೀಸಣಿಕೆ ವಿಚಾರವನ್ನು ಹೇಳಿ ನನಗೆ ಹೊಸ ಹುಳುವೊಂದನ್ನು ತಲೆಗೆ ಬಿಟ್ಟಿರಲ್ಲ....ನೋಡೋಣ...
ಹೀಗೆ ಬರುತ್ತಿರಿ...
ಧನ್ಯವಾದಗಳು...

shivu.k said...

ಕೆ.ಎಸ್.ರಾಜಾರಾಂ ಹೇಳಿದರು...

Dear shivu, toppigalu , haakikondavaru, photogalu.. ellaa channagive.. thyaanksu.. rajaram.

shivu.k said...

ಕ್ಷಣಚಿಂತನೆ ಸರ್,

ಪರಿಸರ ಟೋಪಿಗಳ ಬಗ್ಗೆ ನಿಮ್ಮ ಅಭಿಪ್ರಾಯ ಸರಿಯೆನಿಸುತ್ತೆ...ನಾವೆಲ್ಲರೂ ಇವುಗಳನ್ನು ಉಪಯೋಗಿಸಿದರೆ ಅದನ್ನು ತಯಾರಿಸುವ ಕುಶಲಕರ್ಮಿಗಳು ಒಳ್ಳೆಯದಾಗುತ್ತದೆ...

ನಿಮ್ಮೀ ಪ್ರೋತ್ಸಾಹದ ಮಾತುಗಳು ನನಗೆ ಹೊಸದರ ಹಿಂದೆ ಬೀಳುವುದಕ್ಕೆ ಸ್ಫೂರ್ತಿ ನೀಡುತ್ತವೆ ಸರ್...
ಹೀಗೆ ಬರುತ್ತಿರಿ...ಧನ್ಯವಾದಗಳು...

shivu.k said...

ಡಾ.ಗುರುಮೂರ್ತಿ ಹೆಗಡೆ ಸರ್,

ನೀವು ಹೇಳಿದಂತೆ ಇದರಲ್ಲಿ ಸಂಶೋದನೆಯೆಲ್ಲಾ ಏನು ಇಲ್ಲಾ ಅದೆಲ್ಲ ನಿಮ್ಮಂಥ ಡಾಕ್ಟರುಗಳಿಗೆ...ನಮ್ಮದೆಲ್ಲಾ ಬರೀ ತರಲೇ ಆಟ...
ಟೋಪಿ ಮೆಚ್ಚಿದ್ದಕ್ಕೆ ಥ್ಯಾಂಕ್ಸ್...

shivu.k said...

ಪ್ರಶಾಂತ್ ಭಟ್,

ಟೋಪಿಗಳೊಂದೇ ಅಲ್ಲ ಎಲ್ಲಾ ವಿಚಾರದಲ್ಲೂ ಪ್ಲಾಸ್ಟಿಕ್ ಬದಲಿಯಾಗಿ ಈ ರೀತಿ ಪರಿಸರ ಸ್ನೇಹಿ ವಸ್ತುಗಳನ್ನು ಬಳಸೋಣ...ಮತ್ತು ಛಾಯಾಕನ್ನಡಿಯಲ್ಲಿ ಇನ್ನಷ್ಟು ಟೋಪಿಗಳು ಬರಲಿವೆ...

ಪ್ರಶಸ್ತಿಗೆ ಅಭಿನಂದಿಸಿದ್ದಕ್ಕೆ ಧನ್ಯವಾದಗಳು..ಸರ್

shivu.k said...

ವಿನುತಾ ಮೇಡಮ್,

ಪರಿಸರ ಸ್ನೇಹಿ ಟೋಪಿಗಳು ಮಾತ್ರವಲ್ಲ ಎಲ್ಲಾ ವಿಚಾರದಲ್ಲೂ ಇತರೆ ವಸ್ತುಗಳು ಪರಿಸರ ಸ್ನೇಹಿಯಾಗಿವೆ...ನಾವು ಅದನ್ನು ಇಚ್ಚೆಯಿಂದ ಬಳಸಬೇಕಷ್ಟೆ...ನಿಮಗಾಗಿ ಇನ್ನಷ್ಟು ಟೋಪಿಗಳನ್ನು ಕೊಡುತ್ತೇನೆ...ಧನ್ಯವಾದಗಳು..

ಗಿರೀಶ್ ರಾವ್, ಎಚ್ (ಜೋಗಿ) said...

ಶಿವು. ಎಲ್ಲವೂ ಅದ್ಬುತ. ನಂಗೊಂದು ಸಾರಿ ಫೋನ್ ಮಾಡ್ತೀರಾ ಪ್ಲೀಸ್.
-ಜೋಗಿ

SSK said...

Shivuji, nanage nimma photogalalliruva 5 ne number na topi thumba ishtavaayitu. Antaa chanda toppi nanagondu kalisikodi plz.......!

shivu.k said...

ಜೋಗಿ ಸರ್,

ನೀವು ನನ್ನ ಬ್ಲಾಗಿಗೆ ಬಂದಿದ್ದಕ್ಕೆ ಚಿತ್ರಲೇಖನಗಳನ್ನು ಮೆಚ್ಚಿದ್ದಕ್ಕೆ ನನಗೆ ಸಂತೋಷ....

ನಿಮ್ಮ ಫೋನ್ ನಂಬರ್ ನನ್ನ ಬಳಿ ಇಲ್ಲ...ಗೆಳೆಯರ ಬಳಿ ಕೇಳಿ ಪಡೆದುಕೊಂಡು ಫೋನ್ ಮಾಡುತ್ತೇನೆ...
ಧನ್ಯವಾದಗಳು...

shivu.k said...

SSK ಸರ್,

ನೀವು ಟೋಪಿ ಮತ್ತು ಲೇಖನಗಳನ್ನು ಮೆಚ್ಚಿದ್ದಕ್ಕೆ ಧನ್ಯವಾದಗಳು. ನೀವು ಇಷ್ಟಪಟ್ಟ ಟೋಪಿ ನನ್ನ ಬಳಿ ಇಲ್ಲ...ಕಾರಣ ನಾನು ಯಾವ ಟೋಪಿಯನ್ನು ಅರೆಂಜ್ ಮಾಡಿ ತೆಗೆಯುವುದಿಲ್ಲ ಹಾಗೇ ನ್ಯಾಚುರಲ್ ಆಗಿ ಟೋಪಿ ಹಾಕಿಕೊಂಡಿರುವವರಿಗೆ ಗೊತ್ತಾಗದ ಹಾಗೆ ಕ್ಲಿಕ್ಕಿಸುತ್ತೇನೆ..
ಮತ್ತೆ ಅಂತಹ ಟೋಪಿ ಬೇಕೆಂದರೆ ಕರಕುಶಲ ವಸ್ತು ಪ್ರದರ್ಶನ ಅಥವ ಗ್ರಾಮೀಣ ವಸ್ತು ಪ್ರದರ್ಶನಗಳಿಗೆ ಹೋದರೆ ಸಿಗುತ್ತದೆ...
ಧನ್ಯವಾದಗಳು...

ಜಿ.ಎಸ್.ಬಿ. ಅಗ್ನಿಹೋತ್ರಿ said...

ಶಿವೂ....ನೈಸ್,
ಸಂಗ್ರಹ ಚೆನ್ನಾಗಿದೆ. ಇದನ್ನು ನೋಡುತಿದ್ದಂತೆ ನಾನು ಹುಟ್ಟಿ ಬೆಳೆದ ಊರ ನೆನಪು ನನ್ನನ್ನು ಬಹಳವಾಗಿಯೇ ಕಾಡಿತು. ಹೆಚ್ಚುಕಡಿಮೆ ಹದಿನಾಲ್ಕು ವರ್ಷಗಳ ಹಿಂದಿನ ಮಾತು. ನನ್ನ ಮನೆ ಇರೋದೆ ಕಾಡಿನ ಅವಿನಾಭಾವ ಸಂಬಂಧ ಇರಿಸಿಕೊಳ್ಳಬೇಕಾದ ಜಾಗದಲ್ಲಿ. ಹೀಗಾಗಿ ಕಾಡು ನಮಗೆ ಮನೆ ಇದ್ದಂತೆ ಆಗಿಹೋಗಿತ್ತು.
ನಾವು ಆವಾಗಲೆಲ್ಲ ಅಡಿಕೆ ಮರದ ಹಾಳೆ, ತಾಳೆ ಎಲೆ, ಹಂಬಾಳೆ, ಕೌಲ ಮರದ ಎಲೆಗಳಿಂದ ಮಾಡಿದ ಟೋಪಿ ಹಾಕಿಕೊಂಡೆ ತೋಟದ ಕೆಲಸ ಮಾಡುತ್ತಿದ್ದೆವು. ವಿಶೇಷ ಎಂದರೆ ಇವೆಲ್ಲ ತಂಪು ನೀಡತ್ತೆ ಅನ್ನೋ ಕಾರಣಕ್ಕಾಗಿಯೇ ಬಳಸುವುದು ಒಂದು ಅಂಶವಾದರೆ, ಅಂದು ಹಳ್ಳಿಮಂದಿಗೆ ಹಣ ಕರ್ಚು ಮಾಡದೇ ಸಿಗಬಹುದಾದ ಟೋಪಿಗಳು ಇವು ಅನ್ನೋದು ಇನ್ನೊದು ಅಂಶ.
ಇವ್ವೆಲ್ಲದರ ಜತೆಗೆ ಇನ್ನೊಂದು ಥರಾ ಟೋಪಿ ಬಳಕೆ ಮಾಡ್ತಿದ್ವಿ. ಅದು ಕಂಬಳಿ ಚಾಪೆ ಟೋಪಿ ಮತ್ತು ಗೋಣಿ ಟೋಪಿ. ಅದೂ ಒಂತರ ಮಸ್ತಾಗಿರ್ತಿತ್ತು.
ಮತ್ತೆ ಈಗ ನೆನಪಿಸಿ ಕೊಟ್ಟಿದ್ದಕ್ಕೆ ಥ್ಯಾಂಕ್ಸ್...ಶಿವು

shivu.k said...

ಆಗ್ನಿಹೋತ್ರಿ ಸರ್,

ಈ ಟೋಪಿಗಳನ್ನು ಮೆಚ್ಚಿದ್ದಕ್ಕೆ ಥ್ಯಾಂಕ್ಸ್...ಜೊತೆಗೆ ಇವುಗಳನ್ನು ಉಪಯೋಗಿಸುವುದರಿಂದ ತಂಪು ನೀಡುತ್ತೆ ಅನ್ನುವ ವಿಚಾರ ತಿಳಿಯಿತು. ಹಾಗೆ ಕಂಬಳಿ ಚಾಪೆ ಟೋಪಿ, ಗೋಣಿ ಟೋಪಿ ವಿಚಾರ ನನಗೆ ಹೊಸತು....ನಿಮ್ಮಲ್ಲಿ ಅದರ ಫೋಟೋ ಇದ್ದರೆ ನನಗೆ ಮೇಲ್ ಮಾಡಿ ಅದನ್ನು ಬ್ಲಾಗಿನಲ್ಲಿ ಹಾಕಿ ಎಲ್ಲರಿಗೂ ತೋರಿಸೋಣ....
ಥ್ಯಾಂಕ್ಸ್.....ಸರ್...

Anonymous said...

ಶಿವೂ, ತುಂಬಾ ಕ್ರಿಯಾಶೀಲತೆ ಮತ್ತು ಸುತ್ತ ಮುತ್ತಲಿನ ಸಣ್ಣ ಸಣ್ಣ ವಿದ್ಯಮಾನಗಳಿಗೆ ಸ್ಪಂದಿಸುವ ನಿಮ್ಮ ಸೂಕ್ಷ್ಮ ಮನೋಭಾವ ನನ್ನನ್ನು ಅಚ್ಚರಿ ಳಿಸಿದೆ... ಕ್ಯಾಮರಾ ಕಣ್ಣಿಗಿಂತ ನಿಮ್ಮ ಮನಸಿನ ಕಣ್ಣು ತುಂಬಾ sharp ಇದೆ. ಚೆಂದದ ಲೇಖನ ಓದಿ ನಾವು ಚಿಕ್ಕಂದಿನಲ್ಲಿ ಕೆಲಸದವರ "ಮುಟ್ಟಾಳೆ" ಹಾಕಿಕೊಂಡು ಅಜ್ಜಿ ಕೈಲಿ ಬೈಗಳು ತಿನ್ನುತ್ತಿದ್ದ ಸವಿ ನೆನಪು ತೇಲಿ ಬಂತು...

ಶಮ ನಂದಿಬೆಟ್ಟ

ತೇಜಸ್ವಿನಿ ಹೆಗಡೆ said...

ಶಿವು ಅವರೆ,

ಒಂದಕ್ಕಿಂತ ಒಂದು ಸುಂದರವಾಗಿವೆ ಟೋಪಿಗಳು. ಅದರಲ್ಲೂ ಬಿದಿರಿನಿಂದ ತಯಾರಿಸಿದ ಟೋಪಿಗಳು ತುಂಬಾ ಇಷ್ಟವಾದವು.

shivu.k said...

ಮಿಂಚುಳ್ಳಿ ಶಮ ಮೇಡಮ್,

ನೀವು ಕ್ಯಾಮೆರಾ ಕಣ್ಣನ್ನು ಹೊಗಳಿದ್ದೇನೋ ಸರಿ...ಅದರೇ ನನ್ನ ಮನಸ್ಸಿನ ಕಣ್ಣು ಶಾರ್ಪ್ ಅಂತ ಹೇಳಬೇಡಿ...ಈ ಮಾತನ್ನು ನನ್ನ ಶ್ರೀಮತಿ ಒಪ್ಪುವುದಿಲ್ಲ...ಅವಳು ಹೇಳಿದ ಸಣ್ಣ ಸಣ್ಣ ವಸ್ತು..ವಿಚಾರಗಳನ್ನು ನಾನು ಸಾಮಾನ್ಯವಾಗಿ ಮರೆಯುವುದರಿಂದ ನಿಮ್ಮ ಬುದ್ಧಿ ಮತ್ತು ಮನಸ್ಸು ಶಾರ್ಪೇ ಇಲ್ಲ ಅಂತ ಅಂಗಿಸುತ್ತಾಳೆ....
ನೀವು ಸೇರಿದಂತೆ ನಮ್ಮ ಬ್ಲಾಗ್ ಗೆಳೆಯರೆಲ್ಲರಿಗೂ "ಮುಟ್ಟಾಳೆ" ಟೋಪಿಗಳ ಬಗ್ಗೆ ಅಪಾರವಾದ ಅಭಿಮಾನವಿರುವಂತಿದೆ...ನನಗೂ ಅದನ್ನು ತಲೆಮೇಲೆ ಹಾಕಿಕೊಂಡು ಫೋಟೊ ತೆಗೆಸಿಕೊಳ್ಳುವ ಆಸೆಯುಂಟಾಗುತ್ತಿದೆ..
ಧನ್ಯವಾದಗಳು.

shivu.k said...

ತೇಜಸ್ವಿನಿ ಮೇಡಮ್,

ಪರಿಸರ ಟೋಪಿಗಳನ್ನು ಮೆಚ್ಚಿದ್ದಕ್ಕೆ ಧನ್ಯವಾದಗಳು..

Unknown said...

"ಮುಟ್ಟಾಳೆ " ಲೇಖನ ಚೆನ್ನಾಗಿತ್ತು ..ಇಂಥ ಟೋಪಿಗಳ ಬಗ್ಗೆ ನನಗೆ ಚಿಕ್ಕಂದಿನಿಂದ ಭಾರಿ ಹುಚ್ಚು...ಊರಿನಲ್ಲಿರುವಾಗ ತೋಟಕ್ಕೆ ಗೊಬ್ಬರ ಹೊರಲು ಅಡಿಕೆ ಹಾಳೆಯ ಇ೦ಥ ಟೋಪಿಗಳನ್ನು ಮಾಡಿಸಿಕೊಳ್ಳುತ್ತಿದ್ದೆ...

ಶಿವಪ್ರಕಾಶ್ said...

ಶಿವು ಅವರೇ,
ಟೋಪಿಗಳು ತುಂಬಾ ಚನ್ನಾಗಿದವೆ.
ನಾನು ಎಲ್ಲ ಟೋಪಿ ಹಾಕಿಕೊಂಡು ಒಂದೊಂದು ಫೋಟೋ ತೆಗೆದುಕೊಳ್ಳುವ ಆಸೆಯಾಗುತ್ತಿದೆ.

ಧನ್ಯವಾದಗಳು...

shivu.k said...

ರವಿಕಾಂತ್ ಗೋರೆ ಸರ್,

ಈ ಟೋಪಿಗಳು ನಿಮ್ಮ ಬಾಲ್ಯವನ್ನು ನೆನಪಿಸಿದ್ದಕ್ಕೆ ಧನ್ಯವಾದಗಳು.

shivu.k said...

ಶಿವಪ್ರಕಾಶ್,

ಟೋಪಿಗಳನ್ನು ಮೆಚ್ಚಿದ್ದಲ್ಲದೇ ಹಾಕಿಕೊಂಡು ಫೋಟೋ ತೆಗೆಸಿಕೊಳ್ಳುವ ಇಚ್ಚೆಯೂ ನಿಮಗಿದೆ. ಪ್ರಯತ್ನಿಸಿ ಎಲ್ಲಾ ಟೋಪಿಗಳನ್ನು ತನ್ನಿ...ನಾನೇ ಫೋಟೊ ತೆಗೆಯುತ್ತೇನೆ..ಮತ್ತೆ ನನಗೂ ನಿಮ್ಮಂತೆಯೇ ಆಸೆಯಿದೆ...

ಚಂದ್ರಕಾಂತ ಎಸ್ said...

ಈ ಬಾರಿಯ ಟೋಪಿಗಳು ನನಗೆ ಬಹಳ ಮೆಚ್ಚುಗೆಯಾದವು. ಕಾರಣ ಇವು ಪರಿಸರಪ್ರೇಮಿ ಟೋಪಿಗಳು.ಪರಿಸರಕ್ಕೆ ಪ್ರಿಯವಾಗುವ ಯಾವುದೇ ಆಗಲಿ ನನಗೆ ಬಹಳ ಇಷ್ಟ.

ಲಾವಂಚ ಬೇರಿನ ಬಗ್ಗೆ ಹಳೆಯ ಕಾವ್ಯಗಳಲ್ಲಿ ಪ್ರಸ್ತಾಪ ಬರುತ್ತದೆ. ಅವು ಬೇಸಿಗೆಯಲ್ಲಿ ಬಹಳ ತಂಪು ಕೊಡುವಂತದ್ದು. ಅಂತಹ ಲಾವಂಚದಿಂದಲೂ ಟೋಪಿ ತಯಾರಿಸಿರುವ ವಿಚಾರ ಈ ದಿನವೇ ನಾನು ಕೇಳಿದ್ದು.ನೀವು ತೋರಿಸಿರುವ ಅಡಿಕೆಪಟ್ಟಿಯ ಟೋಪಿಗಳು ಅತ್ಯಂತ ಕಲಾತ್ಮಕವಾಗಿವೆ.

guruve said...

ಚೆನ್ನಾಗಿವೆ ಪರಿಸರ ಪ್ರೇಮಿ ಟೋಪಿಗಳು..
ಇತ್ತೀಚೆಗೆ ತಲೆಯಲ್ಲಿ ಕೂದಲು ಮಾಯವಾಗುತ್ತಿದೆ!, ಬೊಕ್ಕ ತಲೆಯನ್ನು ಮರೆ ಮಾಚಬಹುದಾದರೂ, ಟೋಪಿಗಳು ನನ್ನಂತವನಿಗಲ್ಲ :)

sunaath said...

ಶಿವು,
ದೇಶಿ ಮತ್ತು ವಿದೇಶಿ ತಲೆಗಳನ್ನು ಅಲಂಕರಿಸಿದ ದೇಶಿ ಟೋಪಿಗಳನ್ನು ಕ್ಲಿಕ್ಕಿಸುವ ಮೂಲಕ ನೀವು ಮತ್ತೊಂದು ಸಾಧನೆಯನ್ನು ಮಾಡಿರುವಿರಿ. ನಿಮಗೆ ಅಭಿನಂದನೆಗಳು.

Prabhuraj Moogi said...

ಅದೆಲ್ಲಿ ಹುಡುಕಿ ತರುತ್ತೀರಿ ಟೊಪಿಗಳನ್ನ ಅಂತೀನೀ... ನಿಮ್ಮ ಫೊಟೊಗ್ರಫಿ ಹವ್ಯಾಸ ಬಹಳ ಚೆನ್ನಾಗಿದೆ...

shivu.k said...

ಚಂದ್ರಕಾಂತ ಮೇಡಮ್,

ಪರಿಸರ ಸ್ನೇಹಿ ವಸ್ತುಗಳೆಂದರೆ ನನಗೂ ಇಷ್ಟ....ನಮ್ಮ ಮುಂದಿನ ಪೀಳಿಗೆಗಾಗಿ ಪರಿಸರವನ್ನು ಮತ್ತಷ್ಟು ಚೆಂದಮಾಡಿಕೊಡಲು ಎಲ್ಲರೂ ಪ್ರಯತ್ನಿಸೋಣ...
ಲಾವಂಚ ಬಗ್ಗೆ ಕಾವ್ಯಗಳಲ್ಲಿ ಬಂದಿರುವುದನ್ನು ತಿಳಿಸಿದ್ದೀರಿ...ನನಗೂ ಉತ್ಸವಗಳಲ್ಲಿ ಇದು ಕಂಡುಬಂದಾಗ ಅಲ್ಲಿನವರನ್ನು ಕೇಳಿದಾಗ ಪೂರ್ತಿ ವಿಚಾರವನ್ನು ಹೇಳಿದರು....ಅಡಿಕೆ ಟೋಪಿಗಳನ್ನು ಕ್ಲಿಕ್ಕಿಸಲು ಸಹಕರಿಸಿದ್ದು ಮತ್ಮರ್ಡುವಿನ ನಾಗೇಂದ್ರನ ಕುಟುಂಬ ಮತ್ತು ಗೆಳೆಯರು...ಅವರಿಗೂ ನಿಮ್ಮ ಅಭಿನಂದನೆ ತಿಳಿಸುತ್ತೇನೆ...
ಧನ್ಯವಾದಗಳು...

ಧರಿತ್ರಿ said...

ಶಿವಣ್ಣ....
ಹೊಸ ವರುಷಕ್ಕೆ ಬಂಪರ್ ಕೊಡುಗೆ..ಪರಿಸರ ಪ್ರೇಮಿ ಟೋಪಿಗಳು.

ಎಂಥದ್ದು ಮಾರಾಯ್ರೆ ಟೋಪಿಗಳ ಕುರಿತು ಬರೆದು ಬರೆದು ಯಾರಿಗೆ 'ಟೋಪಿ' ಹಾಕಾಕೆ ಹೊರಟಿದ್ದೀರಿ.

ನಮ್ಮ ತುಳು ಭಾಷೆಯಲ್ಲೂ ಅಡಕೆ ಹಾಳೆಯಿಂದ ಮಾಡಿದ ಟೋಪಿಗೆ 'ಮುಟ್ಟಾಳೆ' ಅಂತಾರೆ..

ಸೌದೆ ಮುಂತಾದ ಗಟ್ಟಿ ವಸ್ತುಗಳನ್ನು ಹೊತ್ತುಕೊಂಡು ಬರುವಾಗ ನಾವು ಇದೇ ಮುಟ್ಟಾಳೆಯನ್ನು ಉಪಯೋಗಿಸುತ್ತೇವೆ.

ನಾನು ಊರಿಗೆ ಹೋದಾಗಲೆಲ್ಲಾ ಅಮ್ಮ ಸೌದೆ ಹೊತ್ತುಕೊಂಡು ಬರಕೆ ಮುಟ್ಟಾಳೆ ಕೊಟ್ಟು ಕಳಿಸ್ತಾರೆ...

ಒಳ್ಳೆ ಸಂಗ್ರಹ...ಬ್ಲಾಗ್ ಮೂಲಕ ಇಂಥ ುತ್ತಮ ಪ್ರಯತ್ನಕ್ಕೆ ಮುಂದಾಗಿದ್ದು ಹೆಮ್ಮೆಯ ವಿಚಾರ..

-ಪ್ರೀತಿಯೊಂದಿಗೆ
ಧರಿತ್ರಿ

PaLa said...

ಸಕ್ಕತ್ ಫೋಟೋ ಮತ್ತು ಬರಹ, ಈ ಟೋಪಿಗಳು ಬೇಸಿಗೆಯ ಬಿಸಿಲಿಗೂ ಒಳ್ಳೇದ್ ಅಲ್ವ

shivu.k said...

ಗುರುಪ್ರಸಾದ್,

ಟೋಪಿ ಮೆಚ್ಚಿದ್ದಕ್ಕೆ ಧನ್ಯವಾದಗಳು...ಮತ್ತೆ ನಿಮ್ಮ ತಲೆಯಲ್ಲಿ ಕೂದಲು ಮಾಯಾವಾಗುವುದು ನನಗೆ ಭೂಪಟಕ್ಕೆ ವಸ್ತು ಸಿಕ್ಕಿದ ಹಾಗೆ....ಫೋಟೋ ತೆಗೆದ ಮೇಲೆ ಈ ಟೋಪಿ ಹಾಕಿಕೊಳ್ಳಿ...ಅದು ಕೂಡ...ಬರೆಯುವ ವಸ್ತುವಾಗುತ್ತೆ....ಅದಕ್ಕೆ ಬೇರೆ ವಿಚಾರ ಮಾಡಿ....
ಧನ್ಯವಾದಗಳು...

shivu.k said...

ಸುನಾಥ್ ಸರ್,

ಪರಿಸರ ಪ್ರೇಮಿ ಟೋಪಿಗಳನ್ನು ಮೆಚ್ಚಿದ್ದಕ್ಕೆ ಥ್ಯಾಂಕ್ಸ್....

shivu.k said...

ಪ್ರಭುರಾಜ್,

ಟೋಪಿಗಳನ್ನು ಹುಡುಕಿಕೊಂಡು ನಾನು ಎಲ್ಲಿಯೂ ಹೋಗುವುದಿಲ್ಲ್ಲ. ಅದರೆ ಹೋದ ಜಾಗದಲ್ಲೇಲ್ಲಾ ನನ್ನ ಗಮನ ಟೋಪಿಗಳ ಕಡೆ ಗಮನವಿರುತ್ತದೆ.

ಧನ್ಯವಾದಗಳು...

shivu.k said...

ಪಾಲ ಚಂದ್ರ.

ನಿಮ್ಮ ಮಾತು ನಿಜ ಈ ಟೋಪಿಗಳು ತಂಪು...ಮತ್ತು ಒಳ್ಳೆಯದು...
ಲೇಖನ ಮತ್ತು ಟೋಪಿ ಮೆಚ್ಚಿದ್ದಕ್ಕೆ ಥ್ಯಾಂಕ್ಸ್...

shivu.k said...

ಧರಿತ್ರಿ...

ಪರಿಸರ ಟೋಪಿಗಳು ಅಂತ ನಾನು ಹಾಕಿದ್ದು ಅಷ್ಟೆ. ಅದಕ್ಕಿಂತ ಹೆಚ್ಚಾಗಿ ನೀನು ಸೇರಿದಂತೆ ಎಲ್ಲಾ ಬ್ಲಾಗ್ ಗೆಳೆಯರು ಈ ಟೋಪಿಗಳ ಉಪಯೋಗ, ಸಿಗುವ ಸ್ಥಳ, ಬಳಕೆಯ ವಿಧಾನ, ಬಳಸುವ ಆಡುಭಾಷೆ, ಜೊತೆಗೆ ಹಳೆಯ ನೆನಪುಗಳನ್ನು ಹಂಚಿಕೊಂಡಿದ್ದೀರಿ....
ಮತ್ತೆ ನಾನು ಟೋಪಿ ಹಾಕಲು ಹೊರಟಿಲ್ಲ...ಅದರ ಬದಲು ಹೊಸ ವಿಚಾರವನ್ನು ತಿಳಿಸಲು ಮತ್ತು ಅದರಿಂದ ನಾನು ತಿಳಿದುಕೊಳ್ಳಲು ಪ್ರಯತ್ನಿಸುತ್ತಿದ್ದೇನೆ....ಅದು ಚೆನ್ನಾಗಿ ಕೂಡ ಆಗುತ್ತಿದೆ....

ಧನ್ಯವಾದಗಳು..

ಅಂತರ್ವಾಣಿ said...

ಚಿಕ್ಕ ವಯಸ್ಸಿನಲ್ಲಿ ಬಿದಿರಿನ ಟೋಪಿ ಹಾಕಿದ್ದೆ ಆದರೆ ಇಲ್ಲಿ ನೀವು ಅನೇಕ ರೀತಿ ಟೋಪಿ ತೋರಿಸಿದ್ದೀರಿ. ಧನ್ಯವಾದಗಳು.

ಜಲನಯನ said...

ಶಿವು,
ಟೋಪಿಗಳು..ಎಲ್ಲೆಲ್ಲೂ
ಚಿತ್ರ ಸಂಗ್ರಹ ಮತ್ತು ಲೇಖನ ಚೆನ್ನಾಗಿದೆ,
ಹಿಂದೆ ನಾವು ಸ್ಕೂಲಿನಲ್ಲಿದ್ದಾಗ ಟೋಪಿ ಅಂದ್ರೆ...ಗಾಂಧೀಜಿಯ ನೆನಪಾಗುವಂತೆ ನಮ್ಮ ಗುರುಗಳು ಬಿಂಬಿಸುತ್ತಿದ್ದರು, ಈಗ ಟೋಪಿ ಅಂದ್ರೆ...ಜನಕ್ಕೆ ಟೋಪಿ ಹಾಕೋ, ತಾವು ಧರಿಸೋದನ್ನ (ಗಾಂಧಿ ಟೋಪಿ) ಮರೆತಿರೋ ನಮ್ಮ ಕಂತ್ರಿ, ಪಕ್ಷಾಂತರಿ ರಾಜಕಾರಣಿಗಳು ಬೇಡವೆಂದರೂ ನೆನಪಾಗುತ್ತಾರೆ.

shivu.k said...

ಜಯಶಂಕರ್,

ಟೋಪಿಗಳನ್ನು ಮೆಚ್ಚಿದ್ದಕ್ಕೆ ಥ್ಯಾಂಕ್ಸ್...

shivu.k said...

ಜಲನಯನ ಸರ್,

ನನ್ನ ಬ್ಲಾಗಿಗೆ ಸ್ವಾಗತ...
ಪರಿಸರ ಟೋಪಿಗಳಿಂದ ನಿಮ್ಮ ಶಾಲಾದಿನಗಳ ನೆನಪಾಗಿದ್ದಕ್ಕೆ ಥ್ಯಾಂಕ್ಸ್...ಹೀಗೆ ಬರುತ್ತಿರಿ...

Anonymous said...

ನಿಮ್ಮ ಶ್ರೀಮತಿಯವರಿಗೂ ಒಂದು ಮುಟ್ಟಾಳೆ ಹಾಕೋಣಂತೆ... ಆವಾಗ ಒಪ್ಪುತ್ತಾರೆ ನನ್ ಮಾತನ್ನು.. ನಮ್ ಮನೆಗೆ ಬನ್ನಿ.. ಬೇಕಾದಷ್ಟು ಮುಟ್ಟಾಳೆ ಕೊಡಿಸುವೆ..

shivu.k said...

ಶಮ ಮೇಡಮ್,

ಮುಟ್ಟಾಳೆ ಹಾಕಿಕೊಳ್ಳುವುದಕ್ಕಾಗಿಯೆ..ನಾನು ನನ್ನ ಶ್ರೀಮತಿ ನಿಮ್ಮ ಮನೆಗೆ ಬರುತ್ತೇವೆ...ಒಂದಷ್ಟು ಚೆಂದ ಮುಟ್ಟಾಳೆ ಟೋಪಿಗಳನ್ನು ಚೆನ್ನಾಗಿ ಅಲಂಕರಿಸಿ..ಸಿದ್ಧಮಾಡಿಟ್ಟುಕೊಳ್ಳಿ....

ಧನ್ಯವಾದಗಳು...

ಚಿತ್ರ ಚಿತ್ತಾರ: said...

ಆಹಾ, ಅಡಿಕೆ ಹಾಳೆಯ ಹಾಗೂ ಲಾವಂಚದ ಟೋಪಿಗಳನ್ನು ನಾನೂ ಬಳಸಿದ್ದೇನೆ. ಅಡಿಕೆ ಹಾಳೆಯ ಟೋಪಿ ಮಾಡುವುದನ್ನೂ ನೋಡಿದ್ದೇನೆ. ಹಳೆ ನೆನಪುಗಳನ್ನು ಹಸಿರು ಮಾಡಿದ್ದಕ್ಕೆ ಕೃತಜ್ಞತೆಗಳು.

shivu.k said...

ಚಿತ್ರ ಚಿತ್ತಾರ,

ಸರ್, ನಿಮ್ಮ ಹೆಸರು ಗೊತ್ತಾಗಲಿಲ್ಲ..ನೀವು ನನ್ನ ಬ್ಲಾಗಿಗೆ ಬಂದು ಪರಿಸರ ಟೋಪಿಗಳನ್ನು ಮೆಚ್ಚಿ ಅದರ ಬಗ್ಗೆ ಪ್ರತಿಕ್ರಿಯಿಸಿದ್ದೀರಿ...
ನೀವು ನನ್ನ ಬ್ಲಾಗನ್ನು ಹಿಂಬಾಲಿಸುತ್ತಿರುವುದು ತಿಳಿದು ಖುಷಿಯಾಯಿತು...
ನಿಮ್ಮ ಬ್ಲಾಗನ್ನು ಲಿಂಕಿಸಿಕೊಳ್ಳೂತ್ತೇನೆ....

ನಿಮ್ಮ ಬ್ಲಾಗಿನಲ್ಲಿರುವ ಇಗ್ರೇಟ್ಸ್, ಸೂರ್ಯಾಸ್ತ, ಮತ್ತು ಮ್ಯಾಕ್ಪೈ ರಾಬಿನ್ ಪಕ್ಷಿಯ ಫೋಟೊಗಳು ತುಂಬಾ ಚೆನ್ನಾಗಿವೆ.all the best...

ಮನಸ್ವಿ said...

ಮತ್ತೆ ಟೋಪಿ ಹಾಕಿದ್ದೀರಿ.. ಚನ್ನಾಗಿದೆ... ತುಂಭಾ ಇಷ್ಟವಾಯಿತು ಚಿತ್ರ ಲೇಖನ.. ಆದರೆ ಕೊನೆಯ ಮೂರು ಪೋಟೋಗಳು ಏನೋ ಒಂತರಾ ಅನಿಸಿದವು.. ಕೊನೆಯ ಫೋಟೋ ಮತ್ತೂ ವಿಚಿತ್ರವೆಸಿತು.... ಇದು ನನಗೆ ಅನಿಸಿದ್ದು...
ಅಂದಹಾಗೆ ಕೇಳೋಕೆ ಮರೆತೆ, ಫೋಟೋ ಶಾಪ್ ಯಾವ ವರ್ಷನ್ ನೀವು ಬಳಸುತ್ತಿರೋದು?!

ಏ ಜೆ ಜಾವೀದ್ said...

ಈ ಪ್ರಪಂಚದಲ್ಲಿ ಎಲ್ಲರೂ ಟೊಪಿ ಹಾಕುವವರೆ. ಈಗಂತು ಟೊಪಿ ಹಾಕುವ ಕಾಲ. ಅಂದರೆ ಚುನಾವಣೆ ಕಾಲ!! ಪ್ರತಿದಿನ ಒಬ್ಬರಲ್ಲ ಒಬ್ಬರು ಒಂದಲ್ಲ ಒಂದು ಟೋಪಿ ಹಾಕುತ್ತಲ್ಲೇ ಇದ್ದಾರೆ. ಆದ್ರೆ ಶಿವು ನೀವು ಮಾತ್ರ ಈ ಯಾವ ಗುಂಪಿಗೂ ಸೇರುವವರಲ್ಲ. ನೀವು ಇಂತಹ ಎಷ್ಟು ಟೋಪಿಗಳು ಹಾಕಿದರು ಹಾಕಿಸಿಕೊಳ್ಳಬಹುದು. ಇದರಿಂದ ನಮಗೂ, ನಮ್ಮ ಪರಿಸರಕ್ಕೂ ಯಾವುದೇ ಅಪಾಯ ಇಲ್ಲ. ಟೊಪ್ಪಿಗಳ ಸೌಂದರ್ಯವನ್ನು ಬಹಳ ಚೆನ್ನಾಗಿ ಸೆರೆಹಿಡಿದಿದ್ದೀರಿ. 'Hats' off to U!!!