ಅದು ಹತ್ತು ಅಂತಸ್ತಿನ ಕಛೇರಿ ಅದರಲ್ಲಿ ಎರಡು ಲಿಫ್ಟುಗಳಿರುತ್ತವೆ. ಎರಡು ಲಿಫ್ಟುಗಳು ಹತ್ತನೇ ಮಹಡಿಯಲ್ಲಿರುವಾಗ ಕೆಳಗೆ ನೆಲಮಹಡಿಯಲ್ಲಿ ಒಬ್ಬೊಬ್ಬರಾಗಿ ಬಂದು ಲಿಪ್ಟ್ ಗಾಗಿ ಕಾಯುತ್ತಾರೆ. ಆಗಲೇ ಹನ್ನೆರಡು ಜನರಾಗಿಬಿಟ್ಟಿದ್ದಾರೆ. ಹದಿಮೂರನೆಯವನಾಗಿ ಸೂರ್ಯ ಬರುತ್ತಾನೆ. ಈಗ ಲಿಫ್ಟುಗಳು ಕೆಳಗಡೆಗೆ ಬರಲಾರಂಭಿಸುತ್ತವೆ. ಮೊದಲನೆ ಲಿಫ್ಟು ಎಂಟನೇ ಮಹಡಿಗೆ ಬರುತ್ತಿದ್ದರೆ ಎರಡನೇ ಲಿಫ್ಟು ಒಂಬತ್ತನೇ ಮಹಡಿಗೆ ಬರುತ್ತಿರುತ್ತದೆ. ಹಾಗೆ ನೋಡುತ್ತಿದ್ದಂತೆ ಮೊದಲ ಲಿಫ್ಟು ಆರನೇ ಮಹಡಿಗೆ ಬಂದಿರುತ್ತದೆ. ಅದೇ ಸಮಯಕ್ಕೆ ಎರಡನೇ ಲಿಫ್ಟು ಎಂಟನೆ ಮಹಡಿ ಬಂದಿರುತ್ತದೆ. ಈಗ ಎಲ್ಲರ ಗಮನ ಮೊದಲ ಲಿಪ್ಟ್ ನತ್ತ. ಏಕೆಂದರೆ ಅದು ಬೇಗ ಬರುತ್ತಿರುತ್ತದೆಯಲ್ಲ! ಮರು ನಿಮಿಷದಲ್ಲಿ ಮೊದಲ ಲಿಫ್ಟ್ ಮೂರನೆ ಮಹಡಿ ಬರುವಷ್ಟರಲ್ಲಿ ಎರಡನೇ ಲಿಫ್ಟು ಐದನೇ ಮಹಡಿ ಬಂದಿರುತ್ತದೆ. ಈಗ ಅಲ್ಲಿರುವ ಎಲ್ಲಾ ಹನ್ನೆರಡು ಜನರು ಬೇಗ ನೆಲಮಹಡಿಗೆ ಬರುವ ಮೊದಲ ಲಿಪ್ಟ್ ಬಳಿ ಕಾಯುತ್ತಾರೆ. ಮತ್ತರ್ಧ ನಿಮಿಷದಲ್ಲಿ ಮೊದಲ ಲಿಫ್ಟ್ ನೆಲಮಹಡಿಗೆ ಬರುತ್ತದೆ. ಅದೇ ಸಮಯಕ್ಕೆ ಎರಡನೇ ಲಿಫ್ತು ಮೂರನೆ ಮಹಡಿಗೆ ಬಂದಿರುತ್ತದೆ. ಮೊದಲ ಲಿಫ್ಟ್ ನೆಲಮಹಡಿಯಲ್ಲಿ ನಿಂತು ಅದರಲ್ಲಿರುವ ಜನರು ಹೊರಬರುತ್ತಿದ್ದಂತೆ ನಿಂತಿದ್ದ ಅಷ್ಟು ಜನರು ಮೊದಲ ಲಿಪ್ಟ್ ನೊಳಗೆ ನುಗ್ಗುತ್ತಾರೆ. ಅಷ್ಟು ಜನರು ಹೋದರೂ ಸೂರ್ಯ ಮಾತ್ರ ಮೊದಲ ಲಿಪ್ಟ್ನ ಲ್ಲಿ ಹೋಗುವುದಿಲ್ಲ. ಲಿಪ್ಟ್ ಬಾಗಿಲು ಹಾಕಿಕೊಳ್ಳುತ್ತಿದ್ದಂತೆ ಎರಡು, ನಾಲ್ಕು, ಐದು, ಆರು, ಏಳು, ಎಂಟು, ಒಂಬತ್ತು, ಹತ್ತು ಹೀಗೆ ತಾವು ಹೋಗಬೇಕಾದ ಎಲ್ಲಾ ಮಹಡಿಗಳ ನಂಬರುಗಳನ್ನು ಒಳಗಿರುವವರು ಬಟನ್ ಹೊತ್ತುತ್ತಾರೆ. ಲಿಫ್ಟ್ ನಿದಾನವಾಗಿ ಮೇಲಿನ ಮಹಡಿಗಳಿಗೆ ಚಲಿಸುತ್ತದೆ. ಮೊದಲನೆಯದು ಮೊದಲ ಮಹಡಿ ತಲುಪುವ ಹೊತ್ತಿಗೆ ಎರಡನೇ ನೆಲಮಹಡಿಗೆ ಬರುತ್ತದೆ. ಹಾಗಾದರೆ ಇನ್ನೂ ನೆಲಮಹಡಿಯಲ್ಲಿ ನಿಂತಿರುವ ಸೂರ್ಯನಿಗೆ ಉಳಿದವರಂತೆ ತಾನು ಮೇಲಿನ ಮಹಡಿಗೆ ಹೋಗಲು ಅವಸರವಿರಲಿಲ್ಲವಾ? ಸೂರ್ಯನಿಗೂ ಕೂಡ ಅವರಷ್ಟೇ ಬೇಗ ತಾನು ಕೂಡ ಹತ್ತನೆ ಮಹಡಿಯ ಕಛೇರಿಗೆ ಹೋಗಬೇಕಾಗಿರುತ್ತದೆ. ಮೊದಲ ಲಿಫ್ಟ್ ನಲ್ಲಿ ಹದಿಮೂರು ಜನರಿಗೆ ಆವಕಾಶವಿದ್ದರೂ ಸೂರ್ಯ ಹೋಗಿರುವುದಿಲ್ಲ. ಏಕೆಂದರೆ ಅವನ ಲೆಕ್ಕಾಚಾರವೇ ಬೇರೆಯಾಗಿರುತ್ತದೆ. ಮತ್ತು ಆತ ಮೊದಲ ಲಿಫ್ಟ್ ಹತ್ತಿದ್ದ ಹನ್ನೆರಡು ಜನರಿಗಿಂತ ಮೊದಲು ಹತ್ತನೇ ಮಹಡಿಯನ್ನು ಎರಡನೇ ಲಿಫ್ಟ್ ನಲ್ಲಿ ತಲುಪುತ್ತಾನೆ. ಅದು ಹೇಗೆಂದು ನೋಡೋಣ.
ಸೂರ್ಯ ಸ್ವಲ್ಪ ತಡವಾದರೂ ಎರಡನೇ ಲಿಫ್ಟಿನಲ್ಲಿ ಹೋಗಲು ಕಾರಣವೇನೆಂದರೆ ಅವನು ಬಿಟ್ಟರೆ ಇನ್ಯಾರೂ ಕೂಡ ಇಲ್ಲ. ಲಿಫ್ಟ್ ಹತ್ತಿದ ಕೂಡಲೇ ಆತನೊಬ್ಬನೇ ಇರುವುದರಿಂದ ನೇರವಾಗಿ ತಾನು ತಲುಪಬೇಕಾದ ಹತ್ತನೆ ಮಹಡಿ ಬಟನ್ ಪ್ರೆಸ್ಮಾ ಡಿದರೆ ಸಾಕು ಅದು ನಡುವಿನ ಯಾವ ಮಹಡಿಯಲ್ಲೂ ನಿಲ್ಲದೇ ವೇಗವಾಗಿ ಹತ್ತನೆ ಮಹಡಿಗೆ ತಲುಪುತ್ತದೆ. ಆದ್ರೆ ಪಕ್ಕದ ಮೊದಲ ಲಿಪ್ಟ್ ಅದೊಳಗಿರುವ ಹನ್ನೆರಡು ಜನರಿಗಾಗಿ ಒಂದು, ಎರಡು, ನಾಲ್ಕು, ಐದು, ಆರು, ಏಳು, ಎಂಟು, ಒಂಬತ್ತು ಹತ್ತು ಹೀಗೆ ನಿಂತು ಅ ಮಹಡಿಗೆ ಹೋಗಬೇಕಾದವರು ಹೊರಬಂದಮೇಲೆ ಮತ್ತೆ ಮೇಲಕ್ಕೆ ಚಲಿಸುತ್ತದೆ. ಹೀಗೆ ಇದು ಅನೇಕ ಸಲ ನಿಂತು ನಿಂತು ಚಲಿಸುವುದರಿಂದ ಎರಡನೇ ಲಿಫ್ಟಿಗಿಂತಲೂ ಎಷ್ಟೋ ಹೊತ್ತಾದ ಮೇಲಿನ ಹತ್ತನೆ ಮಹಡಿಯನ್ನು ತಲುಪುತ್ತದೆ. ಸೂರ್ಯ ಮತ್ತು ಉಳಿದ ಹನ್ನೆರಡು ಜನರು ಬೇಗ ಮೇಲಿನ ಮಹಡಿಗಳಿಗೆ ತಲುಪಬೇಕೆಂದುಕೊಂಡಿದ್ದರೂ ಹನ್ನೆರಡು ಜನರು ಒಂದೇ ರೀತಿಯಲ್ಲಿ ಯೋಚಿಸಿ ಒಂದೇ ಲಿಪ್ಟಲ್ಲಿ ಹೋಗುತ್ತಾರೆ. ಆದ್ರೆ ಸೂರ್ಯ ಸ್ವಲ್ಪ ವಿಭಿನ್ನವಾದ ಲೆಕ್ಕಾಚಾರ ಮತ್ತು ಅಲೋಚನೆಯಿಂದಾಗಿ ತಡವಾಗಿ ಎರಡನೇ ಲಿಫ್ಟ್ ಆಯ್ಕೆ ಮಾಡಿಕೊಂಡರೂ ಅವರಿಗಿಂತ ಮೊದಲು ಹತ್ತನೆ ಮಹಡಿ ತಲುಪುತ್ತಾನೆ.
ಇದು ನನ್ನ ಮುಂದಿನ ಫೋಟೊಗ್ರಫಿ ಪುಸ್ತಕದ ಒಂದು ಅಧ್ಯಾಯದ ನಡುವಿನ ಒಂದು ಪುಟ್ಟ ಭಾಗ. ನಿಮಗೆ ಹೇಗನ್ನಿಸಿತು ದಯವಿಟ್ಟು ತಿಳಿಸಿ
ಲೇಖನ : ಶಿವು.ಕೆ
14 comments:
ಅಬ್ಬಬಬ್ಬಾಬಾ...ಮೊದಲ್ ಮಹಡಿ ಎರಡನೇ ಲಿಫ್ಟು ಮೂರನೇ ಲಿಫ್ಟು ಐದನೇ ಮಹಡಿ, ನಾಲ್ಕರಲ್ಲಿ, ನಾಲ್ಕನೇ ಲಿಫ್ಟು...ಎಲ್ಲಾ ಕನ್ ಫ್ಯೂಸು...
ಇದನ್ನು ಬರಿಯುವಾಗ ಸುಮ್ಮನೆ ಬರೆಯಲು ಸಾಧ್ಯವಿಲ್ಲ..ಒಂದು ಪುಟ್ಟದಾದರೂ ಅಧ್ಯಯನ ನಡೆದೆ ಇರುತ್ತದೆ...ಆ ಅಧ್ಯಯನದ ಒಂದು ಮಜಲು ಹಂಚಿಕೊಂಡದ್ದಕ್ಕೆ ಧನ್ಯವಾದಗಳು...ಎಲ್ಲಾರಿಗೂ ತಮ್ಮ ಕೋಳಿಯೇ ಮೊದಲು ಕೂಗಬೇಕು ಎನ್ನುವ ತವಕ...ತಾಳ್ಮೆಯಿಂದ ಕೂಡಿದ ಲೆಕ್ಕಾಚಾರ ಎಂದಿಗೂ ಕೈ ಕೊಡುವುದಿಲ್ಲ...ಎನ್ನುವುದಕ್ಕೆ ಈ ಲಿಫ್ಟ್ ಪುರಾಣವೇ ಸಾಕ್ಷಿ...ಇದೆ ರೀತಿ ರೈಲ್ವೆ ಕ್ರಾಸಿಂಗ್ ನಲ್ಲೂ ಕೂಡ..ನಿಮ್ಮ ಪುಟ್ಟ ಕಥೆ ದೊಡ್ಡ ಸಂದೇಶವನ್ನೇ ಕೊಡುತ್ತದೆ...ನಿಮ್ಮ ಆ ಪುಸ್ತಕದ ಬಿಡುಗಡೆಗೆ ಕಾಯುತ್ತ ಕೂತಿರುವ ಪುಸ್ತಕದಭಿಮಾನಿ...
ಅಜಾದ್...
ಮತ್ತೊಮ್ಮೆ ಓದಿದರೆ ಸುಲಭವಾಗಿ ಅರ್ಥವಾಗುತ್ತದೆ...
ಲಿಫ್ಟು..ಜನಗಳು...ಮತ್ತು ಫೋಟೊಗ್ರಫಿ...ಇವಕ್ಕೆಲ್ಲ ಏನು ಸಂಭಂದ ಅಂತ ತಿಳಿದುಕೊಳ್ಳಲು ಪುಸ್ತಕ ಬಿಡುಗಡೆಯಾಗುವವರೆಗೆ ಕಾಯಲೇಬೇಕು..ನಾನು ಎರಡು ತಿಂಗಳಿಂದ ಬ್ಲಾಗ್, FAcebook ಇತ್ಯಾದಿಗಳನ್ನೆಲ್ಲಾ ಬದಿಗಿರಿಸಿ ತುಂಬಾ ಇಷ್ಟುಪಟ್ಟು ಬರೆಯುತ್ತಿರುವ ಪುಸ್ತಕವಿದು. ಮುಗಿದಿದೆ..ಪ್ರೂಪ್ ರೀಡಿಂಗಿಗೆ ಹೋಗಿದೆ...ವಾಪಸ್ ಬಂದಮೇಲೆ...
ನಿಮಗೆ ಗೊತ್ತಾಗುತ್ತದೆ...
ಮೊದಲ ಪ್ರತಿಕ್ರಿಯೆಗೆ ಧನ್ಯವಾದಗಳು.
Srikanth Manjunath sir;
ನಿಮ್ಮ ಊಹೆ ಖಂಡಿತ ತಪ್ಪಾಗಿಲ್ಲ. ನನ್ನ ಪುಸ್ತಕಕ್ಕಾಗಿ ತುಂಬಾ ಅಧ್ಯಯನ ಮತ್ತು ಪ್ರಯೋಗಗಳನ್ನು ಮಾಡುತ್ತಿದ್ದೇನೆ. ಅವು ಖಚಿತವಾದ ನಂತರವೇ ಬರವಣಿಗೆಯ ರೂಪಕ್ಕೆ ತರುತ್ತಿರುವುದು. ಈ ಕಾರಣಕ್ಕೆ ಬ್ಲಾಗ್ ಮತ್ತು Facebook ನ್ನು ಪೂರ್ತಿ ಬಂದ್ ಮಾಡಿಕೊಂಡಿದ್ದೇನೆ. ನೀವು ಅಂದುಕೊಂಡಂತೆ ಛಾಯಗ್ರಾಹಕರಿಗೆ ಇದು ಖಂಡಿತ ಉಪಯೋಗವಾಗಬಹುದು. ಬೇರೆಯವರಿಗೂ ಇದು ಎಲ್ಲಿಯೂ ಬೋರ್ ಆಗದಂತೆ ಕುತೂಹಲಕಾರಿಯಾಗಿ ಸಂತೋಷ ಕೊಡುವ ಪುಸ್ತಕವಾಗಬಹುದು ಎಂದುಕೊಳ್ಳುತ್ತಿದ್ದೇನೆ..ಇದು ನನ್ನ ಅನುಭವವಷ್ಟೆ. ಮುಂದೆ ಕಾದುನೋಡೋಣ.
ಧನ್ಯವಾದಗಳು.
ಅಜಾದ್..ಮೊದಲು ಅಕ್ಷರಗಳ ಸಾಲು ಸರಿಯಾಗಿರಲಿಲ್ಲ ಈಗ ಮತ್ತೆ ಸರಿಮಾಡಿದ್ದೇನೆ. ನೀವು ಮತ್ತೆ ಓದಿದರೆ ಸುಲಭವಾಗಿ ಅರ್ಥವಾಗಬಹುದು..
ಶಿವು ಸರ್,
ಕ್ಯಾಂಪಸ್ ಆದ ಖುಷಿಗೆ ಆಪ್ಟಿಟ್ಯುಡು ಪ್ರಶ್ನೆಗಳನ್ನ ಬಿಡಿಸುವುದನ್ನ ಮರೆತಿದ್ದೆ...ನಿಮ್ಮ ಬರೆಹ ಓದಿ ಆ ಥರದ ಪ್ರಶ್ನೆಗಳೇ ನೆನಪಾದವು..
ತಲೆಕೂದಲಿಗೊಮ್ಮೆ ತೊರ್ಬೆರಳ ಚುಂಬನ!!!
ಚೆನಾಗಿತ್ತು ಸಾರ್..
ಹಾಂ ಇದೇ ಥರ ಬಸ್ಸಿನಲ್ಲಿ ಆಗುವುದಿದೆ ಅಲ್ವಾ ಸಾರ್???
ಬೇಗ ಸಿಕ್ಕಿತು ಅಂಥಾ ಲೋಕಲ್ ಬಸ್ಸು ಹತ್ತಿದರೆ ಅದು ಕುಂಟುತ್ತಾ ಸಾಗುವುದರೊಳಗೆ ವೇಗದೂತವು ಜೊಯ್ ಎಂದು ಮುಂದೆ ಹೋಗೊಬಿಡುತ್ತದೆ..
ಚೆನಾಗಿತ್ತು ಸಾರ್...
ಪುಸ್ತಕದ ಒಂದು ಪ್ರತಿಗೆ ಈಗಲೇ ಬೇಡಿಕೆ ಸಲ್ಲಿಸುತ್ತಿದ್ದೇನೆ ಸಾರ್..ನಂಗೊಂದು ದಯವಿಟ್ಟು..
ಆದಷ್ಟು ಬೇಗ ಆ ದಿನ ಬರ್ಲಿ..ಈ ತುಣುಕನ್ನು
ಬ್ಲಾಗಿನಲ್ಲಿ ಹಂಚಿಕೊಂಡಿದ್ದಕ್ಕೆ ಧನ್ಯವಾದ...
ನಮಸ್ತೆ :)
ಬಹಳ ದಿನಗಳನಂತರ ಛಾಯಾಕನ್ನಡಿಯಲ್ಲಿ ಬಿಂಬ ಮೂಡಿದಂತಿದೆ..
ಸೊಗಸಾದ ಬರಹ..
ಶಿವು,
ಇಷ್ಟು ದಿನ ಕಾಯ್ದದ್ದಕ್ಕೂ, ಒಂದು ಸ್ವಾರಸ್ಯಕರ ಲೇಖನ ಕೊಟ್ಟು ಮನವನ್ನು ತಣಿಸಿದ್ದೀರಿ. ಧನ್ಯವಾದಗಳು.
ಶಿವು ಸರ್,
ಇದು ಪುಟ್ಟ ಕತೆಯಾದರೂ ತುಂಬಾ ತರ್ಕವುಳ್ಲದ್ದಾಗಿದೆ....ಈ ರೀತಿ ಯೋಚಿಸುವವರು ತುಂಬಾ ಕಡಿಮೆ ಯಲ್ಲವೇ? ಯಂಡಮೂರಿ ಯವರ ಕೆಲವು ಪುಸ್ತಕಗಳ ಲ್ಲಿ ಇಂತಹ ಕೆಲವು ತರ್ಕಗಳನ್ನು ಓದಿದ್ದೆ......ಇಷ್ಟ ಆಯಿತು ಸರ್.....ನಿಮ್ಮ ಪುಸ್ತಕ ಬಿಡುಗಡೆಯನ್ನು ಕಾಯುತ್ತಿದ್ದೇನೆ ....
ಸೂರ್ಯನ ಬುದ್ದಿವಂತಿಕೆ ಮತ್ತು ನಿಮ್ಮ ಬರಹಗಳ ವಿಸ್ತಾರ ಎರಡೂ ಪರಿಚಯಿಸುವ ಪುಟ್ಟ ಬರಹ ಇದು.
ಸೂಪರ್ ಸಾರ್.
ನಿಮ್ಮ ಪುಸ್ತಕ ಬೇಗ ಹೊರಬರಲಿ.
ಸೂರ್ಯ ತುಂಬಾ ಬುದ್ದಿವಂತ... :)
taalidavanu baaliyaanu,paalisi sooryanadu.shivu sir nimma uttama lekhanakkaagi dhanyavaadagalu.
ಲಿಫ್ಟು, ಮಹಡಿ ಎಂದೆಲ್ಲ ಗೋಜಲು ಗೋಜಲಾಯಿತು. ಮತ್ತೊಮ್ಮೆ ಓದಿದಾಗ ಅರ್ಥವಾಯಿತು. ಸೂರ್ಯನ ತರ್ಕ ಸರಿಯಾಗಿಯೇ ಇದೆ. ಗುಂಪು (crowd) ಹೋಗುವ ದಾರಿಯಲ್ಲಿ ನಾವು ಹೋದರೆ ನಮ್ಮ ಪಯಣ ನಿಧಾನವಾಗುತ್ತದೆ. ಪುಸ್ತಕ ಬೇಗ ಬರಲಿ. ನಾನು ಈಗ ಅನೇಕ ತಿಂಗಳ ನಂತರ ಮತ್ತೆ ಬ್ಲಾಗಿಗೆ ಬಂದಿದ್ದೇನೆ
Post a Comment