Friday, July 29, 2011

ಎಂದೂ ಮರೆಯದ ರಾತ್ರಿ



        ಆತ ಬಸ್ ನಿಲ್ದಾಣಕ್ಕೆ ಕಾಲಿಟ್ಟೊಡನೆ ಆಶ್ಚರ್ಯಗೊಂಡಿದ್ದ.   ಎರಡು ಹಳ್ಳಿ ಬಸ್ಸುಗಳು ಅನಾಥವಾಗಿ ನಿಂತಿದ್ದು ಬಿಟ್ಟರೆ ಇಡೀ ಬಸ್ ನಿಲ್ದಾಣದಲ್ಲಿ ಒಬ್ಬ ಮನುಷ್ಯ ಪ್ರಾಣಿಯೂ ಕಾಣದಿರುವುದು!  ಮಂಡ್ಯದಂತ ಮಂಡ್ಯ ಬಸ್ ನಿಲ್ದಾಣದಲ್ಲಿ ರಾತ್ರಿ ಹನ್ನೊಂದುವರೆಗೆ ಒಂದು ನರಪಿಳ್ಳೆಯೂ ಇಲ್ಲವಲ್ಲ ಛೇ ಇದ್ಯಾಕೆ ಹಿಂಗಾಯ್ತು ಅಂದುಕೊಳ್ಳುತ್ತಿರುವಂತೆ ಎಡಪಕ್ಕದಲ್ಲಿ ಒಬ್ಬ ಪೋಲಿಸಪ್ಪ ಚೇರಿನಲ್ಲಿ ಕುಳಿತಿದ್ದವನು ಆತನ ಕಡೆಗೆ ನೋಡಿದ.  ಏನ್ ಸರ್, ಯಾರು ಇಲ್ಲ? ಈಗ ಬೆಂಗಳೂರಿಗೆ ಯಾವುದೂ ಬಸ್ ಬರುವುದಿಲ್ಲವ?  ಫೋಲಿಸಪ್ಪನನ್ನು ಕೇಳಿದ.  ರಾತ್ರಿ ಹತ್ತು ಗಂಟೆಯನಂತರ ಬಸ್ ನಿಲ್ದಾಣದಲ್ಲಿ ಯಾರು ಇರುವಂತಿಲ್ಲ, ನಿಮಗೆ ಮೇನ್ ರೋಡಿನಲ್ಲಿ ಬಸ್ ಸಿಗುತ್ತದೆ" ಅಂತ ಹೇಳಿ ಛೇರಿನ ಮುಂದಿನ ಟೇಬಲ್ ಮೇಲೆ ನಿದ್ರೆಗಾಗಿ ಮತ್ತೆ ತಲೆಹಾಕಿದ.

       ಮೇನ್ ರೋಡಿನಲ್ಲಿ ಆಟೋಗಳು ಮತ್ತು ಆಟೋಡ್ರೈವರುಗಳನ್ನು ಬಿಟ್ಟರೆ ಮತ್ಯಾರು ಕಾಣಿಸಲಿಲ್ಲ.  ಆತ ಮೇನ್ ರೋಡಿನಲ್ಲಿ ಬಸ್ಸಿಗೆ ಕಾಯಲು ನಿಂತಿದ್ದು ನೋಡಿ ಇದು ಮಾಮೂಲು ಅಂದುಕೊಂಡು ತಮ್ಮ ಜೇಬಿನಿಂದ ಬೀಡಿ ಹೊರತೆಗೆದು ಕಡ್ಡಿ ಗೀರಿದರು.  ಹದಿನೈದು ನಿಮಿಷ ಕಳೆಯಿತು. ಬಸ್ ಬರಲಿಲ್ಲ ಬದಲಿಗೆ ಹತ್ತಾರು ಲಾರಿಗಳು, ಕಾರುಗಳು ಜೀಪುಗಳು, ಅವಕ್ಕೆ ವಿರುದ್ಧ ದಿಕ್ಕಿನಲ್ಲಿ ಬೆಂಗಳೂರಿನಿಂದ ಮೈಸೂರಿನಕಡೆಗೆ ಸುಮಾರು ಇಪ್ಪತ್ತಕ್ಕೂ ಹೆಚ್ಚು ರಾಜಹಂಸ, ವೋಲ್ವೋ  ಸರ್ಕಾರಿ ಮತ್ತು ಖಾಸಗಿ ಬಸ್ಸುಗಳು ಸಾಗಿದ್ದವು. ಈತ ಸಮಯ ನೋಡಿದ ಹನ್ನೆರಡು ಗಂಟೆಗೆ ಹದಿನೈದು ನಿಮಿಷ ಬಾಕಿಇದೆ.  ರಸ್ತೆಯುದ್ದಕ್ಕೂ ಇದ್ದ ಮರಗಳಿಗೆ ಮತ್ತಷ್ಟು ಕತ್ತಲು ಆವರಿಸಿ ಒಂಥರ ದಿಗಿಲುಂಟಾಗಿ ಬಸ್ಸು ಸಿಗದಿದ್ದರೇ ಮುಂದೇನು ಗತಿ ಅಂತ ಈತ ಚಿಂತೆಗೊಳಗಾಗುತ್ತಿರುವಾಗಲೇ ಅಯ್ಯಪ್ಪ ಮಾಲೆ ಹಾಕಿಕೊಂಡಿದ್ದ ಆಟೋ ಡ್ರೈವರ್ "ಎಲ್ಲಿಗೆ ಹೋಗಬೇಕು ಸಾಮಿ" ಅಂತ ಕೇಳಿದ.  ರಾತ್ರಿ ಹನ್ನೆರಡು ಗಂಟೆಯಲ್ಲಿ ಬ್ಯಾಗಿನಲ್ಲಿ ಲಕ್ಷಾಂತರ ರೂಪಾಯಿ ಬೆಲೆಬಾಳುವ ವಸ್ತುಗಳನ್ನು ಇಟ್ಟುಕೊಂಡಿದ್ದರಿಂದಲೇ ಈತ ಭಯದಿಂದಲೇ "ಬೆಂಗಳೂರಿಗೆ" ಅಂತ ಉತ್ತರಿಸಿದ.  "ಇತ್ತೀಚಿಗೆ ನೈಟ್ ಬಸ್ಸುಗಳು ಕಡಿಮೆ ಸಾಮಿ,  ಇನ್ನು ಸ್ವಲ್ಪ ಹೊತ್ತು ನೋಡಿ ಬರದಿದ್ದಲ್ಲಿ ಇಲ್ಲೇ ಲಾಡ್ಜ್ ಮಾಡಿಕೊಂಡು ಇದ್ದು ಬೆಳಿಗ್ಗೆ ಹೋಗಿ ಅಂತ ಬಿಟ್ಟಿ ಐಡಿಯವನ್ನು ಬೇರೆ ಕೊಟ್ಟ.  ಈತನಂತೂ ಅಲ್ಲಿ ಉಳಿಯುವಂತಿರಲಿಲ್ಲ, ಹೇಗಾದರೂ ಬೆಂಗಳೂರು ತಲುಪಲೇ ಬೇಕಾಗಿತ್ತು. ಅಷ್ಟರಲ್ಲಿ ಒಂದು ಕೆಂಪು ಬಸ್ ಬಂತು.  ಈತನಿಗೆ ಹೋದ ಜೀವ ಬಂದಂತೆ ಆಗಿ ಬಸ್ ಹತ್ತಿದ.  ಇಡೀ ಬಸ್ಸಿನಲ್ಲಿ ಹತ್ತು ಜನ ಪ್ರಯಾಣಿಕರಿದ್ದರೆ ಹೆಚ್ಚು. ಈತನಿಗೆ ಬೇಕಾಗಿದ್ದು ಆದೇ.  ಬೆಂಗಳೂರಿಗೆ ಟಿಕೆಟ್ ತೆಗೆದುಕೊಂಡು ಮೂರು ಜನರು ಕುಳಿತುಕೊಳ್ಳುವ ಸೀಟಿನ ಒಂದು ಮೂಲೆಯಲ್ಲಿ ಬೆಲೆಬಾಳುವ ವಸ್ತುವಿರುವ ಬ್ಯಾಗನ್ನು ತಲೆದಿಂಬಿನಂತೆ ಹಾಕಿಕೊಂಡು ಮಲಗಿದ.  ಸುಸ್ತಾಗಿದ್ದರಿಂದ ಸಹಜವಾಗಿ ನಿದ್ರೆ ಬರಬೇಕಿತ್ತು ಆದ್ರೆ ತಲೆದಿಂಬಾಗಿರುವ ಬ್ಯಾಗಿನಲ್ಲಿರುವ ವಸ್ತುಗಳಿಂದಾಗಿ ನಿದ್ರೆ ಬರಲಿಲ್ಲ.  ಬಸ್ ಟ್ರಾಫಿಕ್ ಇಲ್ಲದ್ದರಿಂದ ಮದ್ಯರಾತ್ರಿ ಎರಡು ಗಂಟೆಯ ಹೊತ್ತಿಗೆ ಬೆಂಗಳೂರಿನ ಬಸ್ ನಿಲ್ದಾಣ ತಲುಪಿತ್ತು.
     ಬಸ್ ಇಳಿದ ತಕ್ಷಣ ತನ್ನನ್ನು ಸುತ್ತುವರಿಯುವ ಆಟೋದವರಿಂದ ಹೇಗಪ್ಪ ತಪ್ಪಿಸಿಕೊಳ್ಳುವುದು ಅಂದುಕೊಳ್ಳುತ್ತ ಕೆಳಗಿಳಿದ ಆತನಿಗೆ ಯಾವ ಆಟೋದವರು ಕೂಡ ಎಲ್ಲಿಗೆ ಸರ್, ಬನ್ನಿ ಸಾರ್, ಇಂದ್ರನಗರನಾ, ವೈಟ್ ಫೀಲ್ಡಾ, ಪೀಣ್ಯಾನ, ಅಂತೇನು ಕೇಳದೆ ತಮ್ಮ ಪಾಡಿಗೆ ತಾವಿದ್ದಿದ್ದು ನೋಡಿ ಅವನಿಗೆ ಸ್ವಲ್ಪ ಸಮಾಧಾನವಾಗಿತ್ತು.  ಬಸ್ ಇಳಿದ ಜಾಗದಲ್ಲಿ ಮಬ್ಬುಗತ್ತಲು ಇದ್ದಿದ್ದರಿಂದ ನಿದಾನವಾಗಿ ಮುಖ್ಯ ನಿಲ್ಡಾಣಕ್ಕೆ ಬರುತ್ತಿದ್ದಂತೆ ಅಲ್ಲಿ ಹತ್ತಾರು ಬಸ್ಸುಗಳು  ಅದರ ಡೈವರುಗಳು, ಕಂಡಕ್ಟರುಗಳು ತಮ್ಮ ಬಸ್ಸುಗಳಿಗೆ ಗಿರಾಕಿಗಳನ್ನು ಹುಡುಕುವುದರಲ್ಲಿ ಮಗ್ನರಾಗಿದ್ದರು.  ಅಲ್ಲಲ್ಲಿ ಒಂದಷ್ಟು ಪ್ರಯಾಣಿಕರು ಕುಳಿತಿದ್ದರೆ ಕೆಲವರು ಮಲಗಿದ್ದರು. ತಲೆಗೆ ಮಪ್ಲರುಗಳನ್ನು ಸುತ್ತಿಕೊಂಡ ಮಪ್ತಿ ಪೋಲಿಸರು ಬರುವ ಹೋಗುವ ಜನರನ್ನು  ಸೂಕ್ಷ್ಮವಾಗಿ ಗಮನಿಸುತ್ತಿದ್ದರು.  ಜನಗಳನ್ನು ನೋಡಿ ಈತನಿಗೆ ಸ್ವಲ್ಪ ಸಮಾಧಾನವಾದರೂ ಅಲ್ಲಿ ಹೆಚ್ಚು ಹೊತ್ತು ಇರುವಂತಿಲ್ಲ. ಏಕೆಂದರೆ ಈತ ರೈಲ್ವೆ ನಿಲ್ಡಾಣಕ್ಕೆ ಹೋಗಲೇಬೇಕಾಗಿತ್ತು. 
       ಮೈಸೂರು ಕಡೆಗೆ ಹೋಗುವ ಬಸ್ಸೊಳಗಿನಿಂದ ಬನ್ನಿ ಬನ್ನಿ ಮೈಸೂರು ಅಂತ ಡ್ರೈವರ್ ಕೂಗುತ್ತಿದ್ದರಿಂದ ಈ ಮದ್ಯರಾತ್ರಿ ಎರಡು ಗಂಟೆಗೆ ಮೈಸೂರಿಗೆ ಹೋಗುವ ಬಸ್ಸು ಅದರಲ್ಲಿ ಪ್ರಯಾಣಿಸುವವರು ಇದ್ದಾರಲ್ಲ ಅಂದುಕೊಂಡು ನಿದಾನವಾಗಿ ರೈಲು ನಿಲ್ದಾಣದ ಕಡೆಗೆ ಹೊರಟ.
          ರಸ್ತೆ ದಾಟಿ ರೈಲು ನಿಲ್ದಾಣದ ಮುಖ್ಯದ್ವಾರದ ಕಡೆಗೆ ಈತನ ಹೆಜ್ಜೆ ಸಾಗುತ್ತಿದ್ದಂತೆ ಅಲ್ಲಿಂದ ಚಿತ್ರಣವೇ ಬೇರೆಯಿತ್ತು. ನೂರ್‍ಆರು ಜನರು ಅಕಾಶವೇ ಹೊದಿಕೆ ಭೂಮಿಯೇ ಹಾಸಿಗೆಯೆನ್ನುವಂತೆ ಮಲಗಿದ್ದರು. ತಲೆಗೆ ತಮ್ಮ ಲಗ್ಗೇಜುಗಳನ್ನೇ ದಿಂಬುಗಳನ್ನಾಗಿಸಿಕೊಂಡಿದ್ದರು.  ಹೆಚ್ಚಿನವರು ಉತ್ತರ ಭಾರತ ಪ್ರಯಾಣ ಬೆಳೆಸುವವರು, ಟಿಬೆಟ್ಟಿಯನ್ನರು, ಹಳ್ಳಿ ಜನಗಳು, ಹೀಗೆ ತರಾವರಿ ಜನರು ಮೈಮರೆತು ಮಲಗಿದ್ದರು. ತಮ್ಮ ಲಗ್ಗೇಜುಗಳನ್ನು ಯಾರಾದರೂ ಕದ್ದುಕೊಂಡು ಹೋಗಿಬಿಟ್ಟರೆ ಎನ್ನುವ ಭಯವೂ ಇಲ್ಲದಂತೆ ಅರಾಮವಾಗಿ ಹೀಗೆ ಮಲಗಿಕೊಂಡಿದ್ದಾರಲ್ಲ ಇಂಥ ಚಳಿಯಲ್ಲಿ ಅಂದುಕೊಳ್ಳುತ್ತಾ ಅವರ ನಡುವೆ ಸಾಗುತ್ತಿದ್ದಂತೆ ಈತನ ಕಾಲು ಸಪ್ಪಳಕ್ಕೆ ಮಲಗಿದ್ದರೂ ಎಚ್ಚರವಾಗಿದ್ದಂತೆ ಅರೆನಿದ್ರೆಯಲ್ಲಿದ್ದ ಒಬ್ಬ ಮಲಗಿದ್ದಲ್ಲಿಂದಲೇ ಅರ್ಥಕಣ್ಣು ತೆರೆದು ನೋಡಿದ. ಮುಂದೆ ಅನೇಕರು ಹಾಗೆ ಅರೆಗಣ್ಣು ತೆರೆಯುತ್ತಿದ್ದುದ್ದನ್ನು ಕಂಡು  ಇವರು ಯಾರು ಮೈಮರೆತು ಮಲಗಿಲ್ಲ!  ಎಂದುಕೊಂಡು ನಿಧಾನವಾಗಿ ಪ್ಲಾಟ್‍ಫಾರಂನೊಳಗೆ ಸಾಗಿ ನಾಲ್ಕಾರು ರೈಲುಹಳಿಗಳನ್ನು ದಾಟಿಕೊಂಡು ಟೂವೀಲರ್ ಪಾರ್ಕಿಂಗ್ ಸ್ಥಳಕ್ಕೆ ಬಂದ.

      ತನ್ನ ಟೂವೀಲರ್ ಕಾಣಿಸಲಿಲ್ಲ. ಪಾರ್ಕಿಂಗ್ ಕಾವಲು ಕಾಯುವವರು ಯಾರು ಕಾಣಲಿಲ್ಲ. ಪಾರ್ಕಿಂ‍ಗ್‍ನವರು ಇಪ್ಪತ್ತನಾಲ್ಕು ಗಂಟೆಯೂ ಇರುತ್ತೇವೆ ಎಂದು ಹೇಳಿದವರು ಇವರೇನಾ? ಅಂದುಕೊಂಡನಾದರೂ ಇಂಥ ಎರಡು ಗಂಟೆ ಹದಿನೈದುನಿಮಿಷದಂತ ಮದ್ಯರಾತ್ರಿಯಲ್ಲಿ ಅವರು ನಿದ್ರೆಯನ್ನು ಮಾಡುತ್ತಿರಬೇಕು ಅಂದುಕೊಂಡು ನಿದಾನವಾಗಿ ಮತ್ತೊಮ್ಮೆ ತನ್ನ ಗಾಡಿಯನ್ನು ಹುಡುಕತೊಡಗಿದ.  ಸುಮಾರು ಹತ್ತು ನಿಮಿಷ ಹುಡುಕುವಷ್ಟರಲ್ಲಿ ಈತನ ಟೂವೀಲರ್ ಕಾಣಿಸಿತ್ತು.  ತಾನು ನಿಲ್ಲಿಸಿದ್ದು ಎಲ್ಲಿ ಈಗ ಇದು ಇರುವುದು ಎಲ್ಲಿ? ಈ ಪಾರ್ಕಿಂಗ್‍ನವರು ಎಂಥ ಕೆಲಸ ಮಾಡುತ್ತಾರಪ್ಪ ಅಂದುಕೊಂಡು ಕೀ ತೆಗೆದು ತನ್ನ ಬ್ಯಾಗನ್ನು ಗಾಡಿಯ ಕಾಲಿಡುವ ನಡುವೆ ಇಟ್ಟು ಗಾಡಿಯನ್ನು ಸ್ಟಾರ್ಟ್ ಮಾಡಿದ. ಶಬ್ದ ಕೇಳಿದ ತಕ್ಷಣ ಯಾರದು? ಕೂಗು ಕೇಳಿತು ದೂರದಿಂದ.  ಓಹ್! ಇವರು ಎದ್ದಿದ್ದಾರೆ? ಅಂದುಕೊಂಡು ನಿದಾನವಾಗಿ ಅವರ ಬಳಿಗೆ ಹೋಗಿ ತನ್ನ ಚೀಟಿ ತೋರಿಸಿ ಅವರು ಹೇಳಿದಷ್ಟು ಹಣವನ್ನು ಕೊಟ್ಟು ಅಲ್ಲಿಂದ ಹೊರಟು ಮನೆ ಸೇರಿದಾಗ ಸರಿಯಾಗಿ ಎರಡುವರೆಗಂಟೆ.

      ಈತ ಮನೆಯ ಬಾಗಿಲು ತಟ್ಟಿ ಹೆಂಡತಿಯನ್ನು ಮೆಲ್ಲಗೆ ಕೂಗಿದ.  ಅವಳಿಗೆ ಮೊದಲೇ ಗೊತ್ತಿದ್ದರಿಂದ ಬಾಗಿಲು ತೆಗೆದು ಬಂದು ಎಲ್ಲಾ ಚೆನ್ನಾಗಿ ಆಯ್ತ?  ಬನ್ನಿ ಅರಾಮವಾಗಿ ನಿದ್ರೆ ಮಾಡಿ ಎಂದಳು. ಒಳಗೆ ಬಂದು ಬಾಗಿಲು ಹಾಕಿ  ".ಮದ್ಯಾಹ್ನ  ಮನೆಯಲ್ಲಿ ಊಟಮಾಡಿಕೊಂಡು ಹೊರಟವನು ಅಲ್ಲಿ ತಲುಪುವ ಹೊತ್ತಿಗೆ ಆರುಗಂಟೆ. ಹೋಗುತ್ತಿದ್ದಂತೆ ಕಾರ್ಯಕ್ರಮ ಶುರುವಾಗಿಬಿಟ್ಟಿತ್ತು.  ನಡುವೆ ಎಲ್ಲೂ ಬಿಡುವಾಗದೇ ಇದ್ದಿದ್ದರಿಂದ ಏನು ತಿನ್ನಲಾಗಲಿಲ್ಲ.  ಹೊಟ್ಟೆ ತುಂಬಾ ಹಸಿವು ಊಟ ಏನಾದರೂ ಉಳಿಸಿದ್ದೀಯಾ? ಕೇಳಿದ.  ನನಗೆ ಗೊತ್ತಿತ್ತು ನೀವು ಹಿಂಗೆ ಮಾಡಿಕೊಳ್ಳುತ್ತೀರಿ ಅಂತ ಅದಕ್ಕೆ ಉಳಿಸಿದ್ದೇನೆ ಕೈತೊಳೆದುಕೊಳ್ಳಿ ಅಂದು ಒಂದು ತಟ್ಟೆಯಲ್ಲಿ ಸ್ವಲ್ಪ ಅನ್ನ ಮತ್ತು ಸಾರು ತಂದುಕೊಟ್ಟಳು.

ಎಷ್ಟು ದಿನವಾಗಿತ್ತೋ ಇಂಥ ಹಸಿವನ್ನು ಅನುಭವಿಸಿ. ಖುಷಿ ಮತ್ತು ತೃಪ್ತಿಯಿಂದ ಊಟ ಮಾಡಿದ. ಉಪ್ಪು ಹುಳಿ ಖಾರ ಏನನ್ನು ಗಮನಿಸದೇ ಇಷ್ಟಪಟ್ಟು ತಿಂದ. ಎಲ್ಲಾ ಮುಗಿದು ಮಲಗುವ ಹೊತ್ತಿಗೆ ಮೂರು ಗಂಟೆ ಮೀರಿತ್ತು.  ಮರುಕ್ಷಣವೇ ಗಾಡ ನಿದ್ರೆ ಆವರಿಸಿತ್ತು.

        ಈಟಿವಿಯವರು ಅಯೋಜಿಸಿ ರವಿಬೆಳಗೆರೆಯವರು ನಡೆಸಿಕೊಡುವ "ಎಂದು ಮರೆಯದ ಹಾಡು" ಕಾರ್ಯಕ್ರಮದ ಫೋಟೋಗ್ರಫಿಗಾಗಿ ನನಗೆ ಬುಲಾವ್ ಬಂದಿತ್ತು.  ಇದು ಮಾಮೂಲಿ ಕಾರ್ಯಕ್ರಮಗಳಂತೆ ಫೋಟೊಗ್ರಫಿಗೆ ಪ್ಲಾಶ್ ಲೈಟ್ ಉಪಯೋಗಿಸುವಂತಿರಲಿಲ್ಲ. ಉಪಯೋಗಿಸಿದರೆ ಕಾರ್ಯಕ್ರಮದ ವಿಡಿಯೋ ರೆಕಾರ್ಡಿಂಗ್ ತೊಂದರೆಯಾಗುತ್ತದೆಯೆನ್ನುವ ಕಾರಣಕ್ಕೆ ಪ್ಲಾಶ್ ಬಳಕೆಯನ್ನು ನಿರ್ಭಂದಿಸಿದ್ದರು.  ಇಂಥ ಒಳಾಂಗಣ ಕಾರ್ಯಕ್ರಮಗಳಲ್ಲಿ ಅವರು ವ್ಯವಸ್ಥೆ ಮಾಡಿದ್ದ ನೆರಳು ಮತ್ತು ಬೆಳಕಿನ ವಿಶಿಷ್ಟ ಸ್ಟುಡಿಯೋ ಲೈಟಿಂಗಿನಲ್ಲಿ ಪ್ಲಾಶ್ ಇಲ್ಲದ ಫೋಟೋಗ್ರಫಿ ನಿಜಕ್ಕೂ ಸವಾಲಿನದು. ಮತ್ತೆ ಇಂಥ ಕಾರ್ಯಕ್ರಮಕ್ಕೆ ಅತ್ಯುತ್ತಮ ಕ್ಯಾಮೆರ, ಕಡಿಮೆ ಅಪಾರ್ಚರ್ ಹೊಂದಿರುವ ಲೆನ್ಸುಗಳು, ಟೆಲಿ ಲೆನ್ಸು ಹೈಸ್ಪೀಡ್ ಮೆಮೋರಿಕಾರ್ಡುಗಳು...ಹೀಗೆ ಸುಮಾರು ಒಂದುಮುಕ್ಕಾಲು ಲಕ್ಷರೂಪಾಯಿಗಳಷ್ಟು ಬೆಲೆ ಕ್ಯಾಮೆರ ವಸ್ತುಗಳನ್ನು ತೆಗೆದುಕೊಂಡು ಹೋಗಿದ್ದೆ. ಕಾರ್ಯಕ್ರಮ ಮುಗಿಯುವ ಹೊತ್ತಿಗೆ ರಾತ್ರಿ ಹನ್ನೊಂದುವರೆಯಾಗಿತ್ತು. ಅನಂತರ ನನ್ನ ದುಬಾರಿ ಕ್ಯಾಮೆರ ವಸ್ತುಗಳ ಜೊತೆಗೆ ಮದ್ಯ ರಾತ್ರಿಯ ಪ್ರಯಾಣ,  ಮನೆಗೆ ತಲುಪುವವರೆಗಿನ ನನ್ನ ಅನುಭವವನ್ನೇ ಒಂದು ಕಥೆಯಂತೆ ಬರೆದಿದ್ದೇನೆ. ನಿಮಗೆ ಏನನ್ನಿಸಿತು. ಅಭಿಪ್ರಾಯವನ್ನು ತಿಳಿಸಿ.


ಲೇಖನ
ಶಿವು.ಕೆ 

32 comments:

Anonymous said...

ಇಷ್ಟೊಂದು ಬರೆದ ನೀವು ಆ ಕಾರ್ಯಕರಮದ ಒಂದಾದರೂ ಪೋಟೋ ಹಾಕದಿರುವದು ಸೋಜಿಗವೇ ಸರಿ.

Harish.

ಮನಸಿನಮನೆಯವನು said...

Chennagide..
kutoohalabharitavagide.
Odalu start madidare antya kanuva tavaka irutte..a kanuva tavaka irutte..

shivu.k said...

ಅನಾಮಧೇಯರೆ,
ನಾನು ಬ್ಲಾಗಿನಲ್ಲಿ ಫೋಟೊ ಹಾಕಬೇಕಾದರೆ ಅವರಿಂದ ಅನುಮತಿ ಪಡೆಯಬೇಕು. ಆ ಕಾರಣದಿಂದಾಗಿ ಬ್ಲಾಗಿನಲ್ಲಿ ಹಾಕಿಲ್ಲ. ಅನುಮತಿ ಪಡೆದು ಮುಂದೆ ಎಂದಾದರೂ ಹಾಕುತ್ತೇನೆ.

shivu.k said...

ವಿಚಲಿತ,
ಅವತ್ತಿನ ಅನುಭವ ಹಾಗಿತ್ತು. ಮರುದಿನ ಯೋಚಿಸಿದಾಗ ನನಗೂ ಕುತೂಹಲಕಾರಿಯಾಗಿದೆ ಅನ್ನಿಸಿ ಬ್ಲಾಗಿಗೆ ಬರೆದೆ. ಇಷ್ಟಪಟ್ಟಿದ್ದಕ್ಕೆ ಧನ್ಯವಾದಗಳು.

ಸುಮ said...

nice write up Shivu sir ಯಾವುದೋ ಸಸ್ಪೆನ್ಚ್ ಥ್ರಿಲ್ಲರ್ ಕತೆ ಅಂದ್ಕೊಂಡೆ :)

balasubramanya said...

ಮಂಡ್ಯದ ಅನುಭವ ಚೆನ್ನಾಗಿದೆ. ಹಲವು ಸಾರಿ ನನಗೂ ಇಂತಹ ಅನುಭವ ಆಗಿದೆ.ನಿರೂಪಣೆ ಚೆನ್ನಾಗಿದೆ. ಆದ್ರೆ ನೀವೂ ಯಾವುದೇ ಖಾಸಗಿ ವಾಹನ ಹತ್ತದೆ ಸರ್ಕಾರಿ ಬಸ್ ಹತ್ತಿದ್ದು ಒಳ್ಳೆದಾಯ್ತು.

Dr.D.T.Krishna Murthy. said...

ಶಿವು;ಕುತೂಹಲ ಹುಟ್ಟಿಸುವ ಸುಂದರ ಬರಹ.ಪುಣ್ಯಕ್ಕೆ ಏನೂ ತೊಂದರೆಯಾಗಲಿಲ್ಲವಲ್ಲಾ ಎನ್ನುವುದೇ ಸಮಾಧಾನ.ಆದರೂ ಆ ಅವೇಳೆಯಲ್ಲಿ ರೈಲ್ವೇ ನಿಲ್ದಾಣದ ಆಸು ಪಾಸಿನಲ್ಲಿ ಕಹಿ ಅನುಭವಗಳೇ ಜಾಸ್ತಿ.

ಸುಬ್ರಮಣ್ಯ said...

ಅಂಥಾ ಅನುಭವಗಳು ಮಜವಾಗಿರುತ್ತೆ!!!

sunaath said...

ಶಿವು,
ತುಂಬ ಸ್ವಾರಸ್ಯಪೂರ್ಣವಾಗಿ ಬರೆದಿದ್ದೀರಿ. ಒಳ್ಳೇ ಪತ್ತೇದಾರಿ ಕತೆಯನ್ನು ಓದುತ್ತಿರುವ ಅನುಭವವಾಯಿತು. ಆದರೆ ಈ ಘಟನೆಯನ್ನು ಅನುಭವಿಸುತ್ತಿರುವಾಗ ನಿಮಗೆ ಸಾಕಷ್ಟು ಟೆನ್ಶನ್ ಆಗಿರಬೇಕು.

Unknown said...

Naanyavudo suspense kathe bareeta iddiri adkondidde :-)

ಗಿರೀಶ್.ಎಸ್ said...

Interesting Sir !!!

ಭಾಶೇ said...

Idu nimmade katheyaa... chennagide! ;)

Anonymous said...

ಥ್ರಿಲ್ಲರ್ ಬರೀತಿದೀರ ಅಂದುಕೊಂಡೇ ಓದಿದೆ. ಕೊನೆಗೆ ಒಳ್ಳೆ twist ಕೊಟ್ಟಿದೀರ :)

Badarinath Palavalli said...

ಇಡೀ ಕಥನಕವನ್ನು ರೋಚಕವಾಗಿ ಒಳ್ಳೆ ಪತ್ತೇದಾರಿ ಕಾದಂಬರಿಯಂತೆ ನಡೆಸಿಕೊಂಡ ಹೋದ ತಂತ್ರ ಮೆಚ್ಚಿಗೆಯಾಯಿತು. ಕೊನೆಯ ಪ್ಯಾರಕ್ಕೆ ಬಂದಾಗಲಷ್ಟೇ 'ಎಂದೂ ಮರೆಯದ ರಾತ್ರಿ' ಶೀರ್ಷಿಕೆಯ ಔಚತ್ಯ ಅರ್ಥವಾದದ್ದು. ಸೂಪರ್ ಸಾರ್!
ಅಂದಹಾಗೆ ಕಾರ್ಯಕ್ರಮದ ಲೈಟಿಂಗ್ ಮಾಡಿದ್ದು ಬಹುಶಃ ಡಿ.ಒ.ಪಿ ರಾಜಶೇಖರ್. ಲೈಟಿಂಗ್ ಹೇಗಿತ್ತು?

shivu.k said...

ಸುಮ ಮೇಡಮ್,

ನೈಜವಾದ ಅನುಭವವನ್ನು ಮೆಚ್ಚಿದ್ದಕ್ಕೆ ಥ್ಯಾಂಕ್ಸ್.

shivu.k said...

ಬಾಲು ಸರ್,
ಬೆಂಗಳೂರಿನಲ್ಲಿ ನನಗೆ ಮದುವೆ ಫೋಟೊಗ್ರಫಿಗೆ ಹೋದಾಗ ಹೀಗೆ ತಡರಾತ್ರಿ ಬರುವುದು ಅಭ್ಯಾಸವಾಗಿದೆ. ಈ ಮಂಡ್ಯದ ರಾತ್ರಿ ಅನುಭವದಲ್ಲಿ ಭಯವೇ ಹೆಚ್ಚಿತ್ತು. ಅದನ್ನು ಹಾಗೆ ಬರೆದಿದ್ದೇನೆ. ಮತ್ತೆ ನನಗೆ ಟ್ಯಾಕ್ಸಿ ಮಾಡಿಕೊಂಡು ವಾಪಸ್ ಹೋಗಿ ಅಂತನೂ ಹೇಳಿದ್ದರು. ನಾನೇ ಬೇಡವೆಂದು ಬಸ್ಸಿನಲ್ಲಿಯೇ ಬಂದೆ..
ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು.

shivu.k said...

ಡಾ.ಕೃಷ್ಣಮೂರ್ತಿ ಸರ್,

ರಾತ್ರಿ ಹನ್ನೊಂದುವರೆಯ ನಂತರ ನನಗೆ ಬಸ್ಸು ಸಿಗುವವರೆಗೂ ಭಯವೇ ಇತ್ತು. ಮತ್ತೆ ಬೆಂಗಳೂರಿನ ಮದ್ಯರಾತ್ರಿಯೂ ಕೂಡ. ದುಬಾರಿ ಕ್ಯಾಮೆರಗಳು ಇಲ್ಲದಿದ್ದಲ್ಲಿ ನನಗೆ ಹೀಗೆ ಅನ್ನಿಸುತ್ತಿರಲಿಲ್ಲವೇನೋ...ನಿಮ್ಮ ಪ್ರೀತಿಪೂರ್ವಕ ಕಾಳಜಿಗೆ ಧನ್ಯವಾದಗಳು.

shivu.k said...

ಸುಬ್ರಮಣ್ಯ ಮಾಚಿಕೊಪ್ಪ ಸರ್,

ಹೌದು ಇಂಥ ಅನುಭವಗಳು ಥ್ರಿಲ್ ಜೊತೆಗೆ ಭಯವನ್ನು ಉಂಟುಮಾಡುತ್ತವೆ.

shivu.k said...

ಸುನಾಥ್ ಸರ್,

ಖಂಡಿತ ನೀವು ಹೇಳಿದಂತೆ ರಾತ್ರಿ ನಾನು ಒಂಥರ ಟೆನ್ಸ್ ಆಗಿದ್ದೆ. ಅದಕ್ಕೆ ಬಸ್ಸಿನಲ್ಲಿ ನನಗೆ ನಿದ್ರೆ ಬಂದಿರಲಿಲ್ಲ. ಜೊತೆಗೆ ಹಸಿವು ಬೇರೆ..ಮತ್ತೆ ನಾನು ನಡೆದ ಘಟನೆಯನ್ನು ನೇರವಾಗಿ ಬರೆದಿದ್ದೇನೆ. ಬರವಣಿಗೆಯ ನಡುವೆ ಬ್ಯಾಗಿನಲ್ಲಿ ದುಬಾರಿ ಕ್ಯಾಮೆರ ವಸ್ತುಗಳಿವೆಯೆಂದು ಹೇಳಿಬಿಟ್ಟಿದ್ದರೆ ಇಷ್ಟು ಕುತೂಹಲಕಾರಿಯಾಗಿ ಲೇಖನ ಇರುತ್ತಿರಲಿಲ್ಲ ಅಲ್ವಾ ಸರ್..
ಪ್ರತಿಕ್ರಿಯೆಗೆ ಧನ್ಯವಾದಗಳು.

shivu.k said...

ರವಿಕಾಂತ್ ಗೋರೆ ಸರ್,
ಇದು ನನ್ನದೇ ಸಸ್ಪೆನ್ಸ್ ಕತೆ ಸರ್..

shivu.k said...

ಗಿರೀಶ್ ಎಸ್ ಸರ್,
ಥ್ಯಾಂಕ್ಸ್.

shivu.k said...

ಭಾಶೇ,

ಥ್ಯಾಂಕ್ಸ್.

shivu.k said...

anenigmaticjourney,

ನಿಮ್ಮ ಹೆಸರು ಚೆನ್ನಾಗಿದೆ..
ನನ್ನ ಬ್ಲಾಗಿಗೆ ಸ್ವಾಗತ..ಮತ್ತೆ ಬರವಣಿಗೆಯಲ್ಲಿ ಇದು ಒಂದು ಪ್ರಯೋಗವಷ್ಟೆ. ಮೆಚ್ಚಿದ್ದಕ್ಕೆ ಥ್ಯಾಂಕ್ಸ್. ಹೀಗೆ ಬರುತ್ತಿರಿ..

shivu.k said...

ಬದರೀನಾಥ್ ಪಾಲವಳ್ಳಿ ಸರ್,

ಬರಹ ನಿಮ್ಮ ರೋಚಕತೆಯನ್ನು ಹುಟ್ಟಿಸಿದ್ದರೆ ಅಲ್ಲಿಗೆ ನನ್ನ ಪ್ರಯತ್ನ ಸಾರ್ಥಕ. ಹಾಗೆ ನೋಡಿದರೆ ನಡೆದ ವಿಚಾರವನ್ನು ನೇರವಾಗಿ ಜೊತೆಗೆ ಸ್ವಲ್ಪ ಕುತೂಹಲ ಬರುವಂತೆ ಬರೆದಿದ್ದೇನೆ. ಮತ್ತೆ ಕಾರ್ಯಕ್ರಮಕ್ಕೆ ಲೈಟಿಂಗ್ ತುಂಬಾ ಅದ್ಬುತವಾಗಿತ್ತು. ನಿಮ್ಮ ವಿಡಿಯೋ ಕ್ಯಾಮೆರಮ್ಯಾನ್‍ಗಳಿಗೆ, ಪ್ರೇಕ್ಷಕರಿಗೆ ಇದು ತುಂಬಾ ಸೂಪರ್ ಸರ್. ಅದ್ರೆ ಒಳಾಂಗಣದ ಇಂಥ ಬೆಳಕಿನ ವ್ಯವಸ್ಥೆಯಲ್ಲಿ ಸ್ಟಿಲ್ ಫೋಟೊಗ್ರಫಿ ನಿಜಕ್ಕೂ ಸವಾಲು. ಪ್ಲಾಶ್ ಬಳಸುವಂತಿಲ್ಲ. ನಿಮಿಷಕ್ಕೊಮ್ಮೆ ಬೇರೆ ಬೇರೆ ಯಾಂಗಲ್‍ಗಾಗಿ ಓಡಾಡಬೇಕಾದ್ದರಿಂದ ಸ್ಟ್ಯಾಂಡ್ ಬಳಸುವಂತಿಲ್ಲ. ಕೇವಲ ಅಪಾರ್ಚರ್ ಮತ್ತು ಐ ಎಸ್ ಓ ಗಳಲ್ಲೇ ಆಟವಾಡುತ್ತ ನಮ್ಮ ಕೈಗಳನ್ನೇ ಸ್ಟಾಂಡುಗಳಂತೆ ಸ್ಟಡಿಯಾಗಿ ಇಟ್ಟುಕೊಂಡು ಅಪರೂಪದ ದೃಶ್ಯಗಳನ್ನು ಸೆರೆಯಿಡಿಯುವುದು ನಿಜಕ್ಕೂ ಸವಾಲೇ ಸರಿ! ಫೋಟೊಗಳನ್ನು ನೋಡಿದಾಗ ನನ್ನ ಪ್ರಯತ್ನ ಚೆನ್ನಾಗಿದೆ ಎನಿಸಿತು..
ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು.

ಸೀತಾರಾಮ. ಕೆ. / SITARAM.K said...

ಬಹಳ ದಿನಗಳ ನಂತರ ತಮ್ಮ ಬ್ಲಾಗ್ ಗೇ ಹಾಯ್ದಿರುವೆ. ಇದಕ್ಕೆ ಕಾರಣ ರೋಚಕವಾದ ಶೀರ್ಷಿಕೆ. ಅದಕ್ಕೆ ತಕ್ಕಂತೆ ರೋಚಕ ಕಥೆ. ಒಳ್ಳೆ ಪತ್ತೆದಾರಿ ಕಥೆಯಂತೆ ಬರೆದಿದ್ದಿರಾ... ಕುತೂಹಲ ಎಲ್ಲೂ ಬಿಟ್ಟು ಕೊಟ್ಟಿಲ್ಲ. ಒಬ್ಬ ಲೇಖಕನು ತನ್ನ ದೈನಂದಿನ ಸಾಮಾನ್ಯ ಅನುಭಾವವನ್ನು ಹೇಗೆ ರೋಚಕ ಸಾಹಿತ್ಯವನ್ನಾಗಿಸಬಹುದು ಎನ್ನುವದಕ್ಕೆ ತಮ್ಮ ಕಥೆ ಒಳ್ಳೆ ಉದಾಹರಣೆ.

ಜಲನಯನ said...

ಶಿವು ವಿಭಿನ್ನ ಶೈಲಿಯ ನಿಮ್ಮ ಕಥನ ಕುತೂಹಲ ಮೂಡಿಸಿ ಅದು ಮಾಯವಾಗದಂತೆ ನೋಡಿಕೊಂಡದ್ದು ನಿಮ್ಮ ಶೈಲಿ...ಮಧ್ಯದಲ್ಲಿಯೇ ಇದು ನಿಮ್ಮದೇ ಸ್ಟೋರಿ ಅಂತ ಖಾತ್ರಿಯಾಯ್ತು...ಲಕ್ಷಾಂತರದ ಬ್ಯಾಗು..ಕ್ಯಾಮರಾ ಅನ್ನೋದು ನಿಮ್ಮನ್ನು ಚನ್ನಾಗಿ ಬಲ್ಲ ನನಗೆ ಅರ್ಥವಾಯ್ತಾದರೂ ಸಾಮಾನ್ಯ ಓದುಗನಿಗೆ ಯಾವುದೋ ಪತ್ತೆದಾರಿ ಓದುವಂತಾಗಿರಲಿಕ್ಕೂ ಸಾಕು....ಚನ್ನಾಗಿದೆ

V.R.BHAT said...

ಯಾವಾಗಲೂ ತಕರಾರಿ ಈ ಮನುಷ್ಯ ಅಂತ ನಾನು ಹೇಳುವುದಕ್ಕೆ ಬೇಸರಿಸಬೇಡಿ, ನಿಮ್ಮ ಲೇಖನದಲ್ಲಿ ’ಮಂಡ್ಯದಂತ’, ’ನಿದಾನವಾಗಿ’, ’ಮದ್ಯ ರಾತ್ರಿಯ ಪ್ರಯಾಣ’, ’ನಿರ್ಭಂದಿಸಿದ್ದರು’ ಹೀಗೆಲ್ಲಾ ಅಲ್ಪಪ್ರಾಣ ಮಹಾಪ್ರಾಣಗಳ ದೋಷ ಬಹಳ ಕಂಡುಬರುತ್ತದೆ, ಅರ್ಥ ಅನರ್ಥವಾಗುವ ಸಂಭವವೂ ಇರುತ್ತದೆ! ಇದನ್ನು ನಾವೆಲ್ಲ ಒಪ್ಪಿ ಮುಖಸ್ತುತಿಗೆ " ಚೆನ್ನಾಗಿದೆ " ಎಂದರೂ ಕನ್ನಡದ ಹಿರಿಯಜನ ಒಪ್ಪಲಿಕ್ಕಿಲ್ಲ, ಮೇಲಾಗಿ ಅಂತಹ ತಪ್ಪುಗಳು ಮೇಲಿಂದಮೇಲೆ ಆಗಬಾರದು-ಅದು ಅಪಚಾರವಾಗುತ್ತದೆ, ಹೀಗಾಗಿ ಲೇಖನ ತಡವಾಗಿ ಹಾಕಿದರೂ ಪರವಾಗಿಲ್ಲ ಶುದ್ಧವಾಗಿರಲಿ. ಬರವಣಿಗೆ ವಾಹನ ಓಡಿಸುವಾಗ ಮೊಬೈಲ್ ಕರೆಯಲ್ಲಿ ಮಾತನಾಡಿದಂತೇ ಇರುತ್ತದೆ. ಈಕಡೆ ವ್ಯಾಕರಣ ಆಕಡೆ ಶೈಲಿ ಎರಡನ್ನೂ ಸಮತೋಲನದಲ್ಲಿ ಇಟ್ಟುಕೊಂಡು ಬರೆದಾಗ ಮಾತ್ರ ಅದು ಪುಸ್ತಕರೂಪಕ್ಕಿಳಿಸಲು ಅರ್ಹವಾಗುತ್ತದೆ. ಸ್ವಲ್ಪ ಆ ಬಗ್ಗೆ ಲಕ್ಷ್ಯಹರಿಸಿ, ಮಿಕ್ಕೆಲ್ಲಾ ರೀತಿಯಲ್ಲಿ ಲೇಖನ ಹಿಡಿಸಿತು, ಶುಭಕೋರುತ್ತೇನೆ!

Chaithrika said...

ಚೆನ್ನಾಗಿದೆ.... ನಾನು ಇದೊಂದು ಕಥೆಯೆಂದೆನಿಸಿ ಯಾರಾದರೂ ಬ್ಯಾಗನ್ನು ಕದ್ದೊಯ್ಯುತ್ತಾರೋ ಎಂದು ಭಾವಿಸಿದೆ... ಹ್ಹೆ ಹ್ಹೆ.... ಯೋಚನೆ ಸರಿಯಾಗಿದ್ದರೆ ಫಜೀತಿಯಾಗುತ್ತಿತ್ತು.

shivu.k said...

ಸೀತರಾಂ ಸರ್.

ತುಂಬಾ ದಿನಗಳ ನಂತರ ನನ್ನ ಬ್ಲಾಗಿಗೆ ಬಂದಿದ್ದಕ್ಕೆ ಥ್ಯಾಂಕ್ಸ್. ಕೆಲವೊಮ್ಮೆ ನಮ್ಮ ಬದುಕೇ ಹೀಗೆ ರೋಚಕವಾಗುತ್ತದೆ ಎನ್ನುವುದಕ್ಕೆ ಈ ಅನುಭವವೇ ಉದಾಹರಣೆ. ಅವತ್ತಿನ ರಾತ್ರಿಯ ನನ್ನ ಮನಸ್ಸಿನ ತುಮಲಗಳನ್ನು ಬರೆದಿದ್ದೇನೆ. ಬರಹ ಇಷ್ಟಪಟ್ಟಿದ್ದಕ್ಕೆ ಥ್ಯಾಂಕ್ಸ್.

shivu.k said...

ಅಜಾದ್,

ಬರಹದ ಶೈಲಿಯನ್ನು ಮೆಚ್ಚಿಕೊಂಡಿದ್ದಕ್ಕೆ ಥ್ಯಾಂಕ್ಸ್. ನಾನು ಬರಹದ ಮದ್ಯದಲ್ಲಿ ಎಲ್ಲಿಯೂ ಕ್ಯಾಮೆರ ಬಗ್ಗೆ ಹೇಳಿಯೇ ಇಲ್ಲ. ನಿಮಗೆ ಹೇಗೆ ಗೊತ್ತಾಯಿತು ಅನ್ನುವುದು ನನಗೆ ಆಶ್ಚರ್ಯ. ಇರಲಿ ನನ್ನ ಬರಹ ಪತ್ತೆದಾರಿ ಶೈಲಿಯಲ್ಲಿದೆ ಅಂತ ಮೆಚ್ಚಿದ್ದೀರಿ. ನಿಮ್ಮ ಪ್ರೀತಿಗೆ ಧನ್ಯವಾದಗಳು.

shivu.k said...

ವಿ.ಅರ್.ಭಟ್ ಸರ್,

ಖಂಡಿತ ನಿಮ್ಮ ಮಾತಿಗೆ ನನ್ನ ತಕರಾರಿಲ್ಲ. ಏಕೆಂದರೆ ಹೊಗಳಿಕೆಗಿಂತ ಇಂಥ ಕಿವಿಮಾತು ನನ್ನ ಬರಹಕ್ಕೆ ತುಂಬಾ ಅವಶ್ಯಕ. ಮತ್ತೆ ನಿಮ್ಮ ಈ ಪ್ರತಿಕ್ರಿಯೆಗೆ ಬೇಸರಕ್ಕಿಂತ ಖುಷಿಯೇ ಆಗುತ್ತದೆ. ಮತ್ತೆ ನಾನು ಈ ಲೇಖನವನ್ನು ನೀವು ಹೇಳಿದ ಹಾಗೆ ಆತುರದಲ್ಲಿ ಬರೆದಿದ್ದು. ಅದರ ಪರಿಣಾಮ ಏನು ಅಂತ ಗೊತ್ತಾಯಿತು. ನೀವು ಈ ಕಾಮೆಂಟು ಹಾಕದಿದ್ದಲ್ಲಿ ಮತ್ತೊಂದು ಲೇಖನವನ್ನು ಬ್ಲಾಗಿಗೆ ಹಾಕಿಬಿಡತ್ತಿದ್ದೆ. ನಿಮ್ಮ ಪ್ರತಿಕ್ರಿಯೆಯಿಂದಾಗಿ ಆ ಲೇಖನವನ್ನು ಮತ್ತೊಮ್ಮೆ ಓದಿ ತಿದ್ದುತ್ತಿದ್ದೇನೆ. ಅದಕ್ಕಾಗಿ ನಿಮಗೆ ಧನ್ಯವಾದಗಳು.

shivu.k said...

ಚೈತ್ರಿಕ,

ಇದನ್ನು ಕತೆಯೆಂದು ಭಾವಿಸಿ ಕುತೂಹಲದಿಂದ ಓದಿದ್ದಕ್ಕೆ ಥ್ಯಾಂಕ್ಸ್. ಮತ್ತೆ ಕತೆಯಲ್ಲಿ ಕದ್ದೊಯ್ಯಲಿ..ಆದ್ರೆ ನಿಜ ಜೀವನದಲ್ಲಿ ಅದು ಆಗಬಾರದು ಅಲ್ವಾ...ನಿಮ್ಮ ಕಾಳಜಿಗೆ ಥ್ಯಾಂಕ್ಸ್..