Monday, July 25, 2011

ಭಾರತೀಯ ರೈಲ್ವೆ ನಿನಗೆ ನನ್ನ ಸಾವಿರ ಪ್ರಮಾಣಗಳು!



"ನಿಮಗೇನ್ ತಲೆಕೆಟ್ಟಿದೆಯಾ?
ಕಳೆದ ನಾಲ್ಕು ದಿನದಿಂದ ಈ ಪುಸ್ತಕಗಳಿಗೆ ಆಡಿಕ್ಟ್ ಆಗಿಬಿಟ್ಟಿದ್ದೀರಿ. ಹಗಲೆಲ್ಲಾ ಓದುವುದು ಓಕೆ. ರಾತ್ರಿ ನಿದ್ರೆಬರದಿದ್ದಲ್ಲಿ ಯಾವುದಾದರೂ ಕತೆ ಕಾದಂಬರಿ ಓದುವುದು ಎಲ್ಲರೂ ಮಾಡುವ ಕೆಲಸ, ನೀವೇನ್ರಿ ಈ ಪುಸ್ತಕವನ್ನು ಹಿಡಿದಿದ್ದೀರಿ? ಇದನ್ನು ಓದಿ ಯಾವರೈಲು ಓಡಿಸಬೇಕು?"  ಹೀಗೆ ನನ್ನ ಶ್ರೀಮತಿ ಬೈಯ್ಯುತ್ತಿದ್ದಾಳೆ.
ಆ ಪುಸ್ತಕದಲ್ಲಿ ಒಂದು ಕತೆಯಿಲ್ಲ, ಕವನವಿಲ್ಲ, ಲಲಿತಪ್ರಭಂದಗಳಿಲ್ಲ. ಹರಟೆಯಿಲ್ಲ, ಕಾವ್ಯವಿಲ್ಲ. ಕಗ್ಗವಿಲ್ಲ, ಓದಿ ಪಾಸು ಮಾಡೋಣವೆಂದರೆ ಅಧ್ಯಾಯನ ಪುಸ್ತಕವಂತೂ ಅಲ್ಲವೆ ಅಲ್ಲ! ಆದರೂ ನಾನು ಇದನ್ನು ಇಷ್ಟಪಟ್ಟು ಓದುತ್ತೇನೆ. ಮತ್ತು ಅಬ್ಯಾಸಮಾಡುತ್ತೇನೆ.
 

ನಾನು ಇಷ್ಟಕ್ಕೂ ಹೀಗೆ ಇಷ್ಟಪಟ್ಟು ಓದುತ್ತಿರುವ ಪುಸ್ತಕ ಯಾವುದು ಅಂದುಕೊಂಡ್ರಿ?

ನಮ್ಮ ಭಾರತದ ಹೆಮ್ಮೆಯ ರೈಲ್ವೇ ಟೈಮ್ ಟೇಬಲ್ ಪುಸ್ತಕಗಳು ಕಣ್ರಿ.

"TRAIN AT A GLANCE" 





  "SOUTERN ZONE TIME TABLE"


              
A4 ಸೈಜಿನಲ್ಲಿ ಮುನ್ನೂರು ಪುಟದ ಮೊದಲ ಪುಸ್ತಕದ ಬೆಲೆ ಕೇವಲ 35-00 ರೂಪಾಯಿಗಳು ಮಾತ್ರ
A4 ಸೈಜಿನಲ್ಲಿ ಮುನ್ನೂರ ಎಂಬತ್ತೈದು ಪುಟದ ಎರಡನೇ ಪುಸ್ತಕದ ಬೆಲೆ ಕೇವಲ 30-00 ರೂಪಾಯಿಗಳು ಮಾತ್ರ.


ನಮ್ಮ ದಕ್ಷಿಣಭಾರತದ ಎಲ್ಲಾ ರಾಜ್ಯಗಳ ನಕ್ಷೆಗಳು, ಅದರಲ್ಲಿ ರೈಲು ದಾರಿಗಳು, ಅದರ ಮೇಲೆ 24 ಗಂಟೆ ಓಡಾಡುವ ಎಲ್ಲಾ ಎಕ್ಸ್ ಪ್ರೆಸ್, ಪ್ಯಾಸಿಂಜರ್, ಇಂಟರ್ ಸಿಟಿ, ಶತಾಬ್ಧಿ ಜನಶತಾಭ್ದಿ, ರಾಜಧಾನಿ, ದುರಂತೋ, ಸಂಪರ್ಕ ಕ್ರಾಂತಿ ರೈಲುಗಳು,....ಪ್ಯಾಸಿಂಜರ್ ರೈಲುಗಾಡಿಗಳು ನಿಲ್ಲುವ ಸಣ್ಣ ನಿಲ್ದಾಣಗಳ ವಿವರ, ಶತಾಬ್ಧಿ ರೈಲುಗಳು ನಿಲ್ಲು ದೊಡ್ಡ ನಗರಗಳ ವಿವರ, ಸಮಯ, ಎಲ್ಲಾ ದರ್ಜೆಯ ರೈಲಿನ ದರಗಳು, ರೈಲು ನಿಲ್ದಾಣಗಳಲ್ಲಿನ ಗೆಸ್ಟ್ ಹೌಸುಗಳು, ಅವುಗಳ ದರಗಳು, ಸಾವಿರಾರು ರೈಲುಗಾಡಿಗಳ ಸಂಖ್ಯೆ ಮತ್ತು ಹೆಸರುಗಳು............. ಹೀಗೆಒಂದೇ ಎರಡೇ...ಇನ್ನೂ ಸಾವಿರಾರು ಪಕ್ಕಾ ವಿವರಗಳು. ಎಲ್ಲವೂ ಅಚ್ಚುಕಟ್ಟು ಮತ್ತು ಕರಾರುವಾಕ್ಕು. ಇಂಥ ಒಂದು ಪುಸ್ತಕ ನಿಮ್ಮಲ್ಲಿದ್ದು ಕಂಪ್ಯೂಟರಿನಲ್ಲಿ ಇಂಟರ್‍ನೆಟ್ ಸೌಲಬ್ಯವಿದ್ದಲ್ಲಿ ನೀವು ಹೋಗಬೇಕಾದ ಸ್ಥಳಕ್ಕೆ ರೈಲುಗಾಡಿ ವಿವರ, ದರ, ಸಮಯ ಇತ್ಯಾದಿಗಳನ್ನೆಲ್ಲಾ ಈ ಪುಸ್ತಕದಿಂದ ತಿಳಿದು ಮನೆಯಲ್ಲೇ ಕುಳಿದು ಒಂದು ಅಚ್ಚುಕಟ್ಟಾದ ಮತ್ತು ಕರಾರುವಕ್ಕಾದ ಪ್ರವಾಸ ಕಾರ್ಯಕ್ರಮವನ್ನು ಸಿದ್ದಪಡಿಸಬಹುದು. ಹಾಗೆ ಇಂಟರ್‍ನೆಟ್ಟಿನಿಂದಲೇ ಎಲ್ಲಾ ಟಿಕೆಟ್ಟುಗಳನ್ನು ಬುಕ್ ಮಾಡಿಕೊಂಡುಬಿಡಬಹುದು. ಇದಲ್ಲದೇ ಪ್ರಖ್ಯಾತ ಪ್ರವಾಸಿ ತಾಣಗಳ ಚಿತ್ರಸಹಿತ ವಿವರಗಳು ಇವೆ.


ಈ ಪುಸ್ತಕದಿಂದಾಗಿ ನಾವು ಬೆಟ್ಟ ಕಣಿವೆಗಳಲ್ಲಿ ಸಾಗುವ ಊಟಿ-ಕೂನೂರ್ ರೈಲು ಪ್ರಯಾಣ ಆನಂದಿಸಿದ್ದು. ಮುನ್ನಾರ್ ಪ್ರವಾಸಗಳನ್ನು ಯಶಸ್ವಿ ಮಾಡಿಕೊಂಡಿದ್ದು. ಸುಬ್ರಮಣ್ಯ ಘಾಟ್ ರೈಲು ಪ್ರಯಾಣದಲ್ಲಿ ಫೋಟೊಗ್ರಫಿಯನ್ನು enjoy ಮಾಡಿದ್ದು.

ಈಗ ಹೇಳಿ ಮುವ್ವತ್ತು ರೂಪಾಯಿಗಳಿಗೆ ಒಂದು ಈರುಳ್ಳಿ ದೋಸೆ[ನನ್ನ ಇಷ್ಟದ್ದು]ಸಿಗದಿರುವ ಈ ಕಾಲದಲ್ಲಿ ಇಂಥ ಒಂದು ಅದ್ಬುತ ಪುಸ್ತಕವನ್ನು ಸಾರ್ವಜನಿಕರಿಗೆ ಕೊಟ್ಟಿರುವ ನಮ್ಮ ಭಾರತೀಯ ರೈಲ್ವೇ ಸಂಸ್ಥೆ ಗ್ರೇಟ್ ಅಲ್ವಾ?
ಮತ್ತೆ "TRAIN AT A GLANCE" ಎನ್ನುವ ಮತ್ತೊಂದು ಪುಸ್ತಕದಲ್ಲಂತೂ ಇಡೀ ಭಾರತ ದೇಶದಲ್ಲಿ ಸಂಚರಿಸುವ ಎಕ್ಸ್‍ ಪ್ರೆಸ್ ರೈಲುಗಳ ಮೇಲೆ ವಿವರಿಸಿದ ಎಲ್ಲಾ ವಿವರಗಳಿವೆ.
ಇಡೀ ಪುಸ್ತಕದಲ್ಲಿ ಒಂದೇ ಒಂದು ರೈಲುಗಾಡಿಯ ಸಂಖ್ಯೆ, ಹೆಸರು, ದಾರಿ, ಮಾರ್ಗ, ಸಮಯ, ನಿಲ್ದಾಣ, ಹುಡುಕಿದರೇ ಒಂದು ತಪ್ಪು ಸಿಗುವುದಿಲ್ಲ.
ಈಗ ಹೇಳಿ ಇಂಥ ಒಂದು ಅದ್ಬುತ ಪುಸ್ತದ ಹಿಂದೆ ಕೆಲಸ ಮಾಡಿದ ಸಾಪ್ಟ್ ವೇರ್ ಪರಿಣಿತರು, ನಕ್ಷಾ ತಜ್ಞರು, ಪುಟ ವಿನ್ಯಾಸಕರು, ಪ್ರೂಪ್ ರೀಡರುಗಳು, ಒಂದು ಅದ್ಬುತ ಸಾರ್ವಜನಿಕ ಹಿತಾಸಕ್ತಿಯುಳ್ಳ ರೈಲ್ವೆ ಅಧಿಕಾರಿಗಳು..........
ಅವರಿಗೆ ನಾವೆಷ್ಟು ಕೃತಜ್ಞತೆ ಸಲ್ಲಿಸಿದರೂ ಸಾಲದು.
ಪ್ರತೀ ವರ್ಷ ಹೊಸದಾಗಿ ಬರುವ ಈ ಪುಸ್ತಕಗಳಿಗೆ ಬಕಪಕ್ಷಿಯಂತೆ ಕಾಯುತ್ತಿರುತ್ತೇನೆ. ಒಂದು ತಿಂಗಳ ಮೊದಲೇ ರೈಲು ನಿಲ್ದಾಣದಲ್ಲಿ " ಪುಸ್ತಕ ಬಂತಾ" ಅಂತ ವಿಚಾರಿಸುತ್ತಿರುತ್ತೇನೆ.

ಭಾರತೀಯ ರೈಲ್ವೆ ನಿನಗೆ ನನ್ನ ಸಾವಿರ ಪ್ರಮಾಣಗಳು!


ಚಿತ್ರಗಳು ಮತ್ತು ಲೇಖನ
ಶಿವು.ಕೆ

11 comments:

Anonymous said...

http://www.indiamike.com/india/indian-railways-f10/train-at-glance-2010-2011-a-t112229/

ಸಾಗರದಾಚೆಯ ಇಂಚರ said...

Shivu sir
great work from Indian Railways
salute

G S Srinatha said...

ನಿಜಕ್ಕೂ ಭಾರತೀಯ ರೈಲ್ವೆ ನಮ್ಮ ದೇಶದ ಹೆಮ್ಮೆ. ಈ ಬಗ್ಗೆ ತಿಳಿದುಕೊಳ್ಳಲು ಭಾರತ ಸರ್ಕಾರದ ಪಬ್ಲಿಕೇಷನ್ ಡಿವಿಷನ್ ನವರು ಪ್ರಕಟಿಸಿರುವ "INDIAN RAILWAYS Glorious 150 Years" ಎನ್ನುವ ಪುಸ್ತಕವನ್ನು ನೋಡಿ ಬೆಲೆ 250 ರೂಪಾಯಿಗಳು. ಪುಸ್ತಕ ದೊರೆಯುವ ಸ್ಥಳ : ಕೇಂದ್ರೀಯ ಸದನ, 'F' ವಿಂಗ್, ಕೋರಮಂಗಲ ಬೆಂಗಳೂರು - 560034.

ಗಿರೀಶ್.ಎಸ್ said...

Really itz a wonderfull task to furnish this book....

sunaath said...

ಒಪ್ಪಿದೆ ಶಿವೂ!

shivu.k said...

pramodc

thanks.

shivu.k said...

ಗುರುಮೂರ್ತಿ ಹೆಗಡೆ ಸರ್,

ನಿಮ್ಮ ಅಭಿಪ್ರಾಯಕ್ಕೆ ಧನ್ಯವಾದಗಳು.

shivu.k said...

ಜಿ.ಎಸ್. ಶ್ರೀನಾಥ್ ಸರ್,

ಭಾರತೀಯ ರೈಲ್ವೆ ಬಗ್ಗೆ ಎಷ್ಟು ತಿಳಿದುಕೊಂಡರೂ ಸಾಲದು.ನೀವು ಹೇಳಿದ ಪುಸ್ತಕವನ್ನು ನೋಡಿದ್ದೇನೆ. ಅದು ನಿಜಕ್ಕೂ ಅದ್ಬುತ ಪುಸ್ತಕ.
ಧನ್ಯವಾದಗಳು.

shivu.k said...

ಗಿರೀಶ್,

ನಿಮ್ಮ ಅಭಿಪ್ರಾಯಕ್ಕೆ ಧನ್ಯವಾದಗಳು.

shivu.k said...

ಸುನಾಥ್ ಸರ್,

ಥ್ಯಾಂಕ್ಸ್.

ಸೀತಾರಾಮ. ಕೆ. / SITARAM.K said...

ಇದು ನಿಜಕ್ಕೂ ಅದ್ಭುತದ ಪುಸ್ತಕ. ಕಾಲೇಜು ದಿನಗಳಿಂದ ನನಗೆ ಈ ಅಭ್ಯಾಸವಿದೆ. ನಮ್ಮ ರೌಂಡ್ ಜೌರ್ನೆಯ್ ಮಾರ್ಗ ಗುರುತಿಸಿ ಸ್ವಲ್ಪ ಹಣದಲ್ಲೇ ೨೫ ದಿನ ಈಡೀ ದಕ್ಷಿಣ ಭಾರತ ಪ್ರವಾಸ ಮಾಡಿದ್ದು ಈ ಪುಸ್ತಕದ ದಯೆಯಿಂದ. circular journey, batch concession, reservation on circular journey, Rest house(Lodges in Railway station at cheapest possible rate with maximum comfort) ಇವುಗಳ ಬಗ್ಗೆ ಮಾಹಿತಿ ಈ ಪುಸ್ತದಲ್ಲೇ ಸಿಗುತ್ತವೆ ಹೊರತು ಸ್ಟೇಷನ್ ಅಧಿಕಾರಿಗಳಿಗೂ ಗೊತ್ತಿರುವದಿಲ್ಲ. ಎಲ್ಲಕ್ಕಿಂತಾ ಒಂದು ರೈಲಿನಲ್ಲಿ ಬಂದ ಪ್ರಯಾಣಿಕರಿಗೆ ಮುಂದೊಂದು ಕಡೆ ಬಂದ ಜಾಗೆಯಿಂದ ಹೋಗಲು ಕಾಯ್ದಿರಿಸಿದ ಕೋಟಾ ಗೊತ್ತಾಗುವದು ಇದರಿಂದಲೇ.
ನಾನಂತೂ ಅದರ ಅಧ್ಯಯನ ಮತ್ತು ಪ್ರಯೋಜನ ಸಾಕಷ್ಟು ಪಡೆದಿದ್ದೇನೆ.