Monday, July 12, 2010

ಸರ, ಇವು EXtra ಇದೆಯಾ"

ಇತ್ತೀಚೆಗೆ ಬೆಂಗಳೂರಿನ ಅರಮನೆ ಮೈದಾನದಲ್ಲಿ  ಫೋಟೊ ಟುಡೆ ಎನ್ನುವ ರಾಷ್ಟ್ರಮಟ್ಟದ ಛಾಯಾಚಿತ್ರ ಸ್ಪರ್ಧೆಯನ್ನು ಏರ್ಪಡಿಸಲಾಗಿತ್ತು.  ಸ್ಪರ್ಧೆಯಲ್ಲಿ ಬಹುಮಾನ ಗೆದ್ದ ಚಿತ್ರಗಳು.

The Statelevel photography Exhibition organised in palace ground Bangalore Date:9, 10,11th of july 2010.

ಬಣ್ಣದ ವಿಭಾಗದಲ್ಲಿ ಬಹುಮಾನ ವಿಜೇತ ಚಿತ್ರಗಳು.
Pictorial Awards..
Avard winning photos
Pictorial 1st Award: Morning ing Jim corbett: Dr.S.Harinarayan. bangalore
ಮೊದಲ ಬಹುಮಾನ ಬೆಂಗಳೂರಿನ ಡಾ. ಎಸ್. ಹರಿನಾರಾಯಣ್.  ಚಿತ್ರ:  ಜಿಮ್ ಕಾರ್ಬೆಟ್ಟಿನಲ್ಲಿ  ಮುಂಜಾನೆ
2nd Award: "Monsoonwalk" by M.Ramu.Bangalore
ಎರಡನೇ ಬಹುಮಾನ ಬೆಂಗಳೂರಿನ ಎಂ.ರಾಮ್.  ಚಿತ್ರ: ಮಳೆಗಾಲದ ನಡಿಗೆ



3rd Award: "winning look" by Shivu.k ARPS.AFIAP.Bangalore.
ಮೂರನೇ ಬಹುಮಾನ ಬೆಂಗಳೂರಿನ ಶಿವು.ಕೆ.  ಚಿತ್ರ : ಗೆಲುವಿನ ನೋಟ.



ಪ್ರಕೃತಿ ವಿಭಾಗದಲ್ಲಿ ಬಹುಮಾನ ವಿಚೇತ ಚಿತ್ರಗಳು.
Nature section Awards.
1st Award: "Loin fighting for food" V.S.Kashinath.Bangalore

ಮೊದಲ ಬಹುಮಾನ ಬೆಂಗಳೂರಿನ ವಿ.ಎಸ್. ಕಾಶಿನಾಥ್. ಚಿತ್ರ: ಆಹಾರಕ್ಕಾಗಿ ಹೆಣ್ಣು ಸಿಂಹಗಳ ಕಾದಾಟ.



2nd Award: "Bad luck for longoor" Ravi maganthi.Bangaloreಎರಡನೆ ಬಹುಮಾನ ಬೆಂಗಳೂರಿನ ರವಿ ಮಗಂತಿ. ಚಿತ್ರ: ಹುಲಿಯ ಬಾಯಲ್ಲಿ ದುರಾದೃಷ್ಟ ಲಂಗೂರ್


3rd Award: "Slothbear with cubs" by Hemachandra jain.Davanagere.ಮೂರನೇ ಬಹುಮಾನ ದಾವಣಗೆರೆಯ ಹೇಮಚಂದ್ರ ಜೈನ್. ಚಿತ್ರ:  ಕರಡಿಯ ಜೊತೆ ಮರಿಗಳು.

Digital Creative section
ಡಿಜಿಟಲ್ ಕ್ರಿಯೇಟಿವ್ ವಿಭಾಗದಲ್ಲಿ ಬಹುಮಾನ ವಿಜೇತ ಚಿತ್ರಗಳು.

1st Award: " Three colours" by G.S.Ravishankar. Mysoreಮೊದಲ ಬಹುಮಾನ ಮೈಸೂರಿನ ಜಿ.ಎಸ್.ರವಿಶಂಕರ್. ಚಿತ್ರ: ಮೂರು ಬಣ್ಣಗಳು.


2nd Award: "Towards moon" by Shivu.k ARPS. AFIAP. Bangalore
ಎರಡನೇ ಬಹುಮಾನ ಬೆಂಗಳೂರಿನ ಶಿವು.ಕೆ. ಚಿತ್ರ: ಚಂದ್ರನೆಡೆಗೆ


3rd Award: "Creative falls" by G.S.Ravishankar.Mysoreಮೂರನೇ ಬಹುಮಾನ ಮೈಸೂರಿನ ಜಿ.ಎಸ್.ರವಿಶಂಕರ್. ಚಿತ್ರ: ಸೃಜನ ಶೀಲ ಜಲಪಾತ.



Wedding photography sectionಮದುವೆ ಫೋಟೋಗ್ರಫಿಯ ವಿಭಾಗದಲ್ಲಿ ಬಹುಮಾನ ವಿಜೇತ ಚಿತ್ರಗಳು

1st  Award: "Wedding celebration"  by Raghavendra, Udupi.ಮೊದಲ ಬಹುಮಾನ ಉಡುಪಿಯ ರಾಘವೇಂದ್ರ .ಚಿತ್ರ : ಮದುವೆಯ ಸಂಬ್ರಮ

2nd Award: "Dont worry" by Shivu.k.ARPS.AFIAP. Bangaloreಎರಡನೇ ಬಹುಮಾನ ಬೆಂಗಳೂರಿನ ಶಿವು.ಕೆ. ಚಿತ್ರ:  ನಾನಿದ್ದೇನೆ, ಚೆನ್ನಾಗಿ ನೋಡಿಕೊಳ್ಳುತ್ತೇನೆ



3rd Award:" Changing the garland"  by Devaraj. Bangaloreಮೂರನೆ ಬಹುಮಾನ ಬೆಂಗಳೂರಿನ ದೇವರಾಜ್. ಚಿತ್ರ:  ಹಾರ ಬದಲಾವಣೆಯ ಮಜ


ಶಿಡ್ಲಘಟ್ಟದ ಮಲ್ಲಿಕಾರ್ಜುನ್, ಉದಯ್ ಹೆಗಡೆ, ಸಿರಸಿಯ ವಿ ಡಿ ಭಟ್, ಚಿಕ್ಕಮಗಳೂರಿನ ಮೂರ್ತಿ ಮತ್ತು ನಾನು ಅಲ್ಲಿ ಪ್ರದರ್ಶನಕ್ಕಿದ್ದ ಚಿತ್ರಗಳನ್ನು ನೋಡುತ್ತಾ ಅವುಗಳ ಬಗ್ಗೆ ಚರ್ಚಿಸುತ್ತಿದ್ದೆವು. ಆತ ಉತ್ತರ ಕರ್ನಾಟಕದವನಿರಬೇಕು, ನನ್ನ ಕೈಯಲ್ಲಿದ್ದ ಮೂರು ಬಹುಮಾನದ ಮೊಮೆಂಟೋಗಳನ್ನು ನೋಡಿ,


"ಇವು ಎಲ್ಲಿ ಸಿಗುತ್ತವೆ ಸರ" ಕೇಳಿದ.


ಅವನ ಮಾತನ್ನು ಕೇಳಿ ನಾವೆಲ್ಲಾ ಮುಖ ಮುಖ ನೋಡಿಕೊಂಡೆವು. ಎಲ್ಲರಿಗೂ ಜೋರಾಗಿ ನಗು ಬಂದರೂ ನಗದಂತೆ ತಡೆದುಕೊಂಡರು.


"ನೋಡಿ ಇದೇ ಸಾಲಿನ ಕೊನೆಯಲ್ಲಿ ಬಲೂನುಗಳನ್ನು ಹಾಕಿ ಡೆಕರೇಷನ್ ಮಾಡಿದ್ದಾರಲ್ಲ, ಆ ಸ್ಟಾಲ್‍ನಲ್ಲಿ ಕೇಳಿ. ಸಿಗಬಹುದು" ಅಂದೆ.


"ಹೌದಾ" ಅಂದವನು ಮತ್ತೆ ಆ ಮೊಮೆಂಟೊಗಳ ಮೇಲೆ ಹೆಸರಿದ್ದದ್ದು ನೋಡಿ, " ಇದರ ಹೆಸರು ಬರೆಸಬಹುದಾ?" ಮತ್ತೆ ಕೇಳಿದ.


"ಹೌದ್ರಿ, ನಿಮಗೆ ಬೇಕಾದ ಹೆಸರನ್ನು ಅವರೇ ಬರೆದುಕೊಡುತ್ತಾರೆ," ಅಂದೆ.
ಮತ್ತೆ ಅಲ್ಲಿದ್ದ ಚಿತ್ರಗಳನ್ನು ನೋಡುತ್ತಾ ಬಹುಮಾನ ಗಳಿಸಿದ ಚಿತ್ರದ ಕೆಳಗೆ ಹೆಸರಿತ್ತಲ್ಲ ಅದು ಅವನ ಕಣ್ಣಿಗೆ ಕಾಣಿಸಿತು. ಅದೇ ಹೆಸರು ಆ ಮೊಮೆಂಟೋನಲ್ಲಿ ಇದ್ದಿದ್ದು ನೋಡಿ " ಹೋ ಈ ಚಿತ್ರಕ್ಕೆ ನಿಮಗೆ ಬಹುಮಾನ ಬಂದಿದೆಯಾ" ಅಂತ ದೇಸಾವರಿ ನಗೆ ನಗುತ್ತಾ ಅಲ್ಲಿಂದ ಹೊರಟ. ಅವನ ಹೊರಟ ಮೇಲೆ ನಾವಂತೂ ನಕ್ಕಿದ್ದೇ ನಕ್ಕಿದ್ದು. ನಾವು ಹಾಗೆ ನೋಡುತ್ತಾ ಮುಂದೆ ಸಾಗಿದೆವು. ಮತ್ತೊಬ್ಬ ಅವನು ಕೂಡ ಉತ್ತರ ಕರ್ನಾಟಕದವನಿರಬೇಕು, ಅವನಿಗೂ ನನ್ನ ಕೈಲಿದ್ದ ಮುಮೆಂಟೋಗಳ ಕಡೆ ಕಣ್ಣು ಬಿತ್ತು. ಹತ್ತಿರ ಬಂದವನು.

"ಸರ, ಇವು Extra ಇದೆಯಾ" ಕೇಳಿದ.
ಅವನು ಕೇಳಿದ ಪ್ರಶ್ನೆಗೆ ಮತ್ತೆ ನನಗೆ ನಗು ಬಂದರೂ ತಡೆದುಕೊಂಡು
"ನನ್ನ ಬಳಿ ಮೂರೇ ಇರೋದು, ನಿಮಗೆ ಬೇಕಾದರೆ ಅಲ್ಲಿರುವ ಕಾರ್ಯಕ್ರಮಕ್ಕೆ ಹೋಗಿ ಕೇಳಿ. ಅಲ್ಲಿ ನಮ್ಮ ರಾಜ್ಯದ ರಾಜ್ಯಪಾಲರಿರುತ್ತಾರೆ. ಅವರೆ ನಮಗೆ ಕೊಟ್ಟಿರುವುದು. ನಿಮಗೂ ಕೊಡಬಹುದು". ಅಂದೆ.

ನನ್ನ ಉತ್ತರವನ್ನು ಕೇಳಿ ಅವನಿಗೆ ಏನು ಅರ್ಥವಾಗಲಿಲ್ಲವೆನಿಸುತ್ತದೆ. ನನ್ನ ಮುಖವನ್ನೊಮ್ಮೆ ನೋಡಿ ಹಾಗೆ ಹೊರಟುಹೋದ. ಬಹುಶಃ ಇಂಥ ಪ್ರದರ್ಶನ ಮೇಳಗಳಲ್ಲಿ ಉಚಿತವಾಗಿ ಬ್ಯಾಗುಗಳು, ಬ್ರೋಷರುಗಳು, ಗಿಪ್ಟ್ ಐಟಮುಗಳು, ವಿಸಿಟಿಂಗ್ ಕಾರ್ಡುಗಳನ್ನು ಪ್ರತಿಯೊಂದು ಸ್ಟಾಲಿನವರು ಕೊಡುತ್ತಿರುತ್ತಾರೆ. ಈ ಮುಮೆಂಟೋಗಳನ್ನು ಕೂಡ ಹಾಗೆ ಕೊಟ್ಟಿರಬಹುದು ಅಂತ ಅಂದುಕೊಂಡು ಆತ ಕೇಳಿರಬಹುದು ಅಂತ ನಾವೆಲ್ಲಾ ನಕ್ಕಿದ್ದೇ ನಕ್ಕಿದ್ದು. ಇಂಥವೇ ಅನೇಕ ಅನುಭವಗಳಾಗಿದ್ದು ನಮಗೆಲ್ಲರಿಗೂ ಆಗಿದ್ದು ದಿನಾಂಕ ೯,೧೦,೧೧ ರಂದು ಅರಮನೆ ಮೈದಾನದಲ್ಲಿ ರಾಷ್ಟ್ರಮಟ್ಟದ "ಫೋಟೊ ಟುಡೆ" ಎನ್ನುವ ಪ್ರದರ್ಶನದಲ್ಲಿ.


Hundreds of photographers and Videographers clicking and coveraging for Inaguration of phototoday Exhibition by Governer.
ಸಾವಿರಕ್ಕೂ ಹೆಚ್ಚು ಛಾಯಾಗ್ರಾಹಕರು ಒಂದೇ ವೇದಿಕೆಯಲ್ಲಿ  ಒಟ್ತಾಗಿ ಫೋಟೊ ಕ್ಲಿಕ್ಕಿಸುತ್ತಿರುವುದು.

ರಾಷ್ಟ್ರಮಟ್ಟದ ಫೋಟೊಗ್ರಫಿ ಸಲಕರಣೆಗಳ ಮಾರಾಟ, ಪ್ರದರ್ಶನ ಮೇಳದಲ್ಲಿ, "ಹುಲಿಯನ್ನು ಉಳಿಸಿ" ಎನ್ನುವ ಆಂದೋಲನದ ಹೆಸರಿನಲ್ಲಿ ಅದನ್ನು ನಮ್ಮ ರಾಜ್ಯದ ಮಾನ್ಯ ರಾಜ್ಯಪಾಲರು ಉದ್ಘಾಟಿಸುವಾಗ ಒಂದೇ ಬಾರಿಗೆ ಸಾವಿರಕ್ಕೂ ಹೆಚ್ಚು ಛಾಯಾಗ್ರ್‍ಆಹಕರು ಆ ವೇದಿಕೆಯಲ್ಲಿ ಉದ್ಘಾಟನೆಯನ್ನು ಕ್ಲಿಕ್ಕಿಸಿದರು. ಅಷ್ಟು ಛಾಯಾಗ್ರಾಹಕರು ಒಂದೇ ವೇದಿಕೆಯಲ್ಲಿ ಒಟ್ಟಾಗಿ ಫೋಟೊ ಕ್ಲಿಕ್ಕಿಸಿದ್ದು ರಾಷ್ಟ್ರಮಟ್ಟದ ದಾಖಲೆ. "ಕರ್ನಾಟಕ ಫೋಟೊಗ್ರಫಿ ಆಶೋಷಿಯಷನ್‍ರವರು ಆಯೋಜಿಸಿದ್ದ ರಾಜ್ಯಮಟ್ಟದ ಛಾಯಾಚಿತ್ರ ಪ್ರದರ್ಶನ, ಬಹುಮಾನ ವಿಜೇತ ಛಾಯಾಗ್ರಾಹಕರಿಗೆ ರಾಜ್ಯಪಾಲರಿಂದ ಬಹುಮಾನ ವಿತರಣೆ, ಇವೆಲ್ಲಾ ನಡೆದರೂ ಇದು ಯಾವ ಪತ್ರಿಕೆಯಲ್ಲೂ ದೊಡ್ಡ ಮಟ್ಟದ ಸುದ್ಧಿಯಾಗಲೇಇಲ್ಲ. ಏಕೆಂದರೆ ಅದು ಛಾಯಾಗ್ರಾಹಕರ, ಅವರ ಉಪಕರಣಗಳ, ಕ್ಯಾಮೆರಾಗಳ, ಲೆನ್ಸುಗಳ ಅವುಗಳನ್ನು ಕೊಳ್ಳುವ ಛಾಯಾಗ್ರಾಹಕರ, ಮತ್ತು ರಾಜ್ಯಮಟ್ಟದಲ್ಲಿ ಬಹುಮಾನ ವಿಜೇತ ಚಿತ್ರಗಳ ಪ್ರದರ್ಶನವಾಗಿತ್ತೇ ವಿನಃ ನಮ್ಮ ರಾಜಕೀಯ ಪಕ್ಷಗಳ ಸಮಾವೇಶವಾಗಿರಲ್ಲಿಲ್ಲವಾದ್ದರಿಂದ ಅವಕ್ಕೆ ಹೆಚ್ಚು ಪ್ರಚಾರವೂ ಸಿಗಲಿಲ್ಲ.
   ಯಡಿಯೂರಪ್ಪ ಯಾವಾಗ ಅಳುತ್ತಾರೆ, ಅಳುವಾಗ ಅದೆಷ್ಟು ಹನಿಗಳು ಬೀಳಬಹುದು, ಎಷ್ಟು ವೇಗವಾಗಿ ಬೀಳಬಹುದು, ಅದರ ತೂಕವೆಷ್ಟು.,   ಸೆಂಟಿಮೆಂಟ್ ಎಷ್ಟು, ಕೃತಕತೆ ಎಷ್ಟು  ಇಂಥ ವಿಚಾರಗಳ ಹಿಂದೆ ಬಿದ್ದಿರುವ ನಮ್ಮ ಪತ್ರಿಕೆಗಳಿಗೆ  ಇಷ್ಟು ದೊಡ್ಡಮಟ್ಟದ ರಾಷ್ಟ್ರಮಟ್ಟದ ಪ್ರದರ್ಶನದ ಬಗ್ಗೆ ಗಮನವಾದರೂ ಎಲ್ಲಿ ಬರಲು ಸಾಧ್ಯ ಹೇಳಿ?
ನಮ್ಮ ಕರ್ನಾಟಕದ ಎಲ್ಲಾ ದಿಕ್ಕುಗಳಿಂದಲೂ ವೃತ್ತಿನಿರತ ಮತ್ತು ಹವ್ಯಾಸಿ ಛಾಯಾಗ್ರಾಹಕರು ಮಾತ್ರವಲ್ಲದೇ ತಮಿಳುನಾಡು, ಆಂದ್ರಪ್ರದೇಶ, ಕೇರಳ, ಮುಂಬೈ, ಗೋವ, ಹೀಗೆ ಎಲ್ಲಾಕಡೆಗಳಿಂದಲೂ ಛಾಯಾಗ್ರ್‍ಆಹಕರು ಈ ಪ್ರದರ್ಶನಕ್ಕೆ ಬಂದಿದ್ದರು.


Sleeping photographer in function
 ಕೆಲವರಿಗೆ ಎಲ್ಲಿದ್ದರೂ ನಿದ್ರೆ ಬರುತ್ತದೆ!



Photography trainning classಮೇಳದಲ್ಲಿ ಫೋಟೊಗ್ರಫಿ ಕಲಿಕೆ ಕಾರ್ಯಕ್ರಮ


outside of exhibition
 ಪ್ರದರ್ಶನ ಮೇಳದ ಹೊರಗಿನ ದೃಶ್ಯ


ಪ್ರದರ್ಶನ ಮಳಿಗೆಗಳಲ್ಲಿ ನಿಕಾನ್, ಕ್ಯಾನನ್, ಫ್ಯೂಜಿ, ಸೋನಿ ಇತ್ಯಾದಿ ಕಂಪನಿಗಳು ಇಟ್ಟಿದ್ದ ಫೋಟೊಗ್ರಫಿ ಸಾಧನಗಳು, ಲೆನ್ಸುಗಳು, ಕ್ಯಾಮರೆಗಳಿಗಿಂತ ಆ ಕಂಪನಿಗಳ ಮಾರಾಟದ ಹುಡುಗಿಯರೇ ಚೆನ್ನಾಗಿದ್ದಿದ್ದು ನಮಗೆಲ್ಲಾ ಕುತೂಹಲದ ವಿಚಾರವಾಗಿತ್ತು.


ರಾಜ್ಯಪಾಲರಿಂದ ಬಹುಮಾನ ವಿತರಣೆ ಕಾರ್ಯಕ್ರಮವಾದ ನಂತರ ನನ್ನ ಫೋಟೊಗ್ರಫಿ ಗೆಳೆಯರಾದ ಕೊಪ್ಪಳದ ಪ್ರಕಾಶ್ ಕಂದಕೂರ, ಮುಂಡರಗಿಯ ಸಲೀಂ ಬಾಳಬಟ್ಟಿ, ಬಾಗಲಕೋಟದ ಇಂದ್ರಕುಮಾರ್, ಗುಲ್ಬರ್ಗದ ಅನಿಲ್ ಬೆಡ್ಗಿ, ಬಳ್ಳಾರಿಯ ನಾಗರಾಜ್, ಕುಷ್ಟಗಿಯ ಶಂಕರ್ ಪತ್ತರ್, ಸಿರಸಿಯ ಉದಯ್ ಹೆಗ್ಡೆ, ಸುಗಾವಿಯ ವಿ ಡಿ ಭಟ್, ಮುತ್ಮರ್ಡುವಿನ ನಾಗೇಂದ್ರ, ಚಿಕ್ಕಮಗಳೂರಿನ ಮೂರ್ತಿ, ಶಿಡ್ಲಘಟ್ಟದ ಮಲ್ಲಿಕಾರ್ಜುನ್ ಇವರೆಲ್ಲಾ ನಮ್ಮ ಮನೆಗೆ ಬಂದಿದ್ದು ನನಗಂತೂ ತುಂಬಾ ಖುಷಿಯಾಗಿತ್ತು.



ಎಡದಿಂದ ಬಲಕ್ಕೆ: ಮುಂಡರಗಿಯ ಸಲೀಂ ಬಾಳಬಟ್ಟಿ, ಬಾಗಲಕೋಟದ ಇಂದ್ರಕುಮಾರ್, ಮುತ್ಮರ್ಡುವಿನ ನಾಗೇಂದ್ರ, ಬಳ್ಳಾರಿಯ ನಾಗರಾಜ್, ಚಿಕ್ಕಮಗಳೂರಿನ ಮೂರ್ತಿ, ಸುಗಾವಿಯ ವಿ ಡಿ ಭಟ್,  ಶಿಡ್ಲಘಟ್ಟದ ಮಲ್ಲಿಕಾರ್ಜುನ್,  ಬೆಟ್ಟಕೊಪ್ಪದ ಉದಯ್ ಹೆಗಡೆ, ಗುಲ್ಬರ್ಗದ ಅನಿಲ್ ಬೆಡ್ಗಿ, ನಾನು ಮತ್ತು ನನ್ನ ಶ್ರೀಮತಿ, ಕೊಪ್ಪಳದ ಪ್ರಕಾಶ್ ಕಂದಕೂರ, ಕುಷ್ಟಗಿಯ ಶಂಕರ್ ಪತ್ತರ್.

Photography friends come to my house for Lunch. There are come from diffrent district for all over Karnataka state.
from Gadag:Saleem.B., Bagalkot:Indrakumar.,  Uttar kannad: Nagendra mutmurdu, V.D.Bhat., Bellary: Nagaraj., Chickmagalur: Murty., Kolar:D.G.Mallikarjun., Bettakoppa:uday hegde., Gulbarga:Anil bedge, Me and my wife., Koppala: Prakash kandakora., Kustagi: Shankar pattar.,


ಮದ್ಯಾಹ್ನ ಎರಡು ಗಂಟೆಯಿಂದ ಸಂಜೆ ಆರುಗಂಟೆಯವರೆಗೆ ನಮ್ಮ ಮನೆಯಲ್ಲಿ ಊಟ, ಹರಟೆ, ನಗು, ತಮ್ಮ ಊರಿನ ಅನುಭವವನ್ನು ಹಂಚಿಕೊಂಡಿದ್ದು, ಊಟ ಮಾಡುವಾಗ ಅದಕ್ಕೂ ಫೋಟೊಗ್ರಫಿ ಭಾಷೆಯನ್ನು ಬಳಸಿಕೊಂಡಿದ್ದು, ಮತ್ತು ಅವರವರ ಭಾಷಾ ಸೊಗಡಿನಲ್ಲಿ ಮಾತಾಡುತ್ತಿದ್ದುದ್ದು, ನಡು ನಡುವೆ ಚಿಕ್ಕಮಗಳೂರಿನ ಮೂರ್ತಿ ನಗೆ ಚಟಾಕಿಗಳನ್ನು ಹಾರಿಸುತ್ತಿದ್ದದ್ದು.. ಒಟ್ಟಾರೆ ಕರ್ನಾಟಕದ ಎಲ್ಲಾ ದಿಕ್ಕುಗಳ ಫೋಟೊಗ್ರಫಿ ಪ್ರತಿನಿಧಿಗಳು ನಮ್ಮನೆಯಲ್ಲಿ ಸಂತೋಷಕೂಟದ ನೆಪದಲ್ಲಿ ಸೇರಿದ್ದು ನನಗಂತೂ ಮರೆಯಲಾಗದ ಆನುಭವ. ಇವೆಲ್ಲವನ್ನು ಮುಂದೆ ಎಂದಾದರೂ ಬರೆಯುತ್ತೇನೆ.


ಚಿತ್ರಗಳು ಮತ್ತು ಲೇಖನ.
ಶಿವು.ಕೆ
Photos and Article by
Shivu.k ARPS.AFIAP.

96 comments:

Naveen ಹಳ್ಳಿ ಹುಡುಗ said...

ಶಿವಣ್ಣ ಶುಭಾಶಯಗಳು... ಫೋಟೋಗಳು ಅದ್ಬುತವಾಗಿವೆ....

ಭಾಶೇ said...

ಶುಭಾಶಯಗಳು

shivu.k said...

ನವೀನ್,

ಫೋಟೊಗಳನ್ನು ಮೆಚ್ಚಿದ್ದಕ್ಕೆ ಥ್ಯಾಂಕ್ಸ್..

shivu.k said...

ಭಾಶೇ,

ಥ್ಯಾಂಕ್ಸ್...

rukminimalanisarga.blogspot.com said...

ಅಭಿನಂದನೆಗಳು. ಚಿತ್ರಗಳಿಗೆ ಬಹುಮಾನ ಪಡೆದಿದ್ದಕ್ಕೆ.

ಮನಸು said...

ಶುಭಾಶಯಗಳು ಸರ್, ಫೋಟೋಗಳು ನಿಜಕ್ಕೂ ಚೆನ್ನಾಗಿವೆ........ನಿಮಗೆ ಅಭಿನಂದನೆಗಳು ಸದಾ...........ಕ್ಯಾಮಾರಾ ಬೆಳಕು ಹೊಳೆದಂತೆ ನಿಮ್ಮ ಪ್ರತಿಭೆಯೂ ಎಲ್ಲೆಡೆ ಬೆಳಗಲಿ

ಬಿಸಿಲ ಹನಿ said...

Congratulations!

shridhar said...

ಶುಭಾಶಯಗಳು ಸರ್, ಹಲವು ವಿಭಾಗಗಳಲ್ಲಿ ಬಹುಮಾನ ಗಳಿಸಿದ್ದೀರಿ. ಕ್ರಿಯೆಟಿವ್ ಫೋಟೊ ..
ಚಂದ್ರನೆಡೆಗೆ ..ಇಷ್ಟವಾಯ್ತು .. .

AntharangadaMaathugalu said...

ಶಿವು ಸಾರ್.....
ಹಾರ್ಕಿಕ ಶುಭಾಶಯಗಳು... ಬಹುಮಾನ ಬಂದದಕ್ಕೆ. ನಿಮ್ಮ ಫೋಟೋಗ್ರಾಫಿ ಬಳಗದವರನ್ನೆಲ್ಲಾ ನಿಮ್ಮ ಮನೆಯಲ್ಲಿ ನೋಡಿ ತುಂಬಾ ಖುಷಿ ಆಯಿತು. ಆದಷ್ಟು ಬೇಗ ಅದರ ಬಗ್ಗೆ ಬರೆಯೆರಿ....

ಶ್ಯಾಮಲ

shivu.k said...

ಮಾಲಾ ಮೇಡಮ್,

ಧನ್ಯವಾದಗಳು.

shivu.k said...

ಮನಸು ಮೇಡಮ್,

ಈ ವಿಚಾರದ ಬಗ್ಗೆ ಪತ್ರಿಕೆಗಳಲ್ಲಿ ಎಲ್ಲೂ ಬರಲಿಲ್ಲವಾದ್ದರಿಂದ ಇದನ್ನು ಎಲ್ಲರೊಂದಿಗೂ ಹಂಚಿಕೊಳ್ಳಬೇಕೆನಿಸಿತ್ತು. ಅದಕ್ಕೆ ಬ್ಲಾಗಿಗೆ ಹಾಕಿದ್ದೇನೆ. ಧನ್ಯವಾದಗಳು.

shivu.k said...

ಉದಯ್ ಸರ್,

ಥ್ಯಾಂಕ್ಸ್..

shivu.k said...

ಶ್ರೀಧರ್ ಸರ್,

ಕ್ರಿಯೇಟೀವ್ ವಿಭಾಗದ ಆ ಫೋಟೊ ನನಗೂ ಕೂಡ ತುಂಬಾ ಇಷ್ಟ. ನಿಮಗೂ ಇಷ್ಟವಾಗಿದ್ದಕ್ಕೆ ಥ್ಯಾಂಕ್ಸ್.

shivu.k said...

ಶ್ಯಾಮಲ ಮೇಡಮ್,

ಚಿತ್ರದಲ್ಲಿರುವ ಫೋಟೊಗ್ರಫಿ ಗೆಳೆಯರೆಲ್ಲಾ ಫೋನಿನಲ್ಲಿ ಸಿಕ್ಕುತ್ತಿದ್ದವರು. ಪ್ರದರ್ಶನದ ದಿನ ಅವರೆಲ್ಲಾ ಬರುವರೆಂದು ತಿಳಿದು ನಮ್ಮನೆಗೆ ಬರಬೇಕೆಂದು ಫೋನ್ ಮಾಡಿದ್ದಷ್ಟೆ. ಎಲ್ಲರೂ ಪ್ರೀತಿಯಿಂದ ಬಂದವರು. ಆ ದಿನವನ್ನು ಮರೆಯಲು ಸಾಧ್ಯವಿಲ್ಲ. ಅದರ ಬಗ್ಗೆ ಬೇಗನೇ ಬರೆಯುತ್ತೇನೆ.
ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು.

sunaath said...

ಶಿವು,
ಪ್ರತಿ ವಿಭಾಗದಲ್ಲೂ ಬಹುಮಾನ ಹೊಡೆದ ನಿಮಗೆ ಮೂರು ಮೂರು ಅಭಿನಂದನೆಗಳು! Digital ವಿಭಾಗದ ನಿಮ್ಮ ಚಿತ್ರವಂತೂ ಅದ್ಭುತವಾಗಿದೆ. ಇದೇ ರೀತಿ ನೀವು ಇನ್ನೂ ಹೆಚ್ಚಿನ ಪ್ರಶಂಸೆ ಪಡೆಯಲಿ ಎಂದು ಹಾರೈಸುತ್ತೇನೆ.

ಅಲ್ಲಾ ಶಿವು, ಪೆದ್ದು ಪೆದ್ದಾಗಿ ನಿಮಗೆ ಪ್ರಶ್ನೆ ಕೇಳಿದವರು ಉತ್ತರ ಕರ್ನಾಟಕದವರೇ ಇರಬೇಕೆಂದು ಹೇಗೆ ಊಹಿಸಿದಿರಿ?

ಸಾಗರದಾಚೆಯ ಇಂಚರ said...

ಶಿವೂ ಸರ್
ನಿಮ್ಮ ಸಾಧನೆಗೆ ಅಭಿನಂದನೆಗಳು
ಇನ್ನೂ ಹೆಚ್ಚೆಚ್ಚು ಬಹುಮಾನಗಳು ನಿಮಗೆ ಲಭಿಸಲಿ
ನೀವು ನಮ್ಮೆಲ್ಲರ ಹೆಮ್ಮೆ

shivu.k said...

ಸುನಾಥ್ ಸರ್,

ನಿಮ್ಮ ಅಭಿನಂದನೆಗೆ ಧನ್ಯವಾದಗಳು.

ಮತ್ತೆ ಪೆದ್ದು ಪ್ರಶ್ನೆ ಕೇಳಿದವನ ಭಾಷೆ ಉತ್ತರ ಕರ್ನಾಟಕದವರ ಶೈಲಿಯಲ್ಲಿದ್ದರಿಂದ ನನಗೆ ಹಾಗೆ ಅನ್ನಿಸಿತ್ತು ಅಷ್ಟೇ. ಮತ್ತೆ ನನ್ನ ಮನೆಗೆ ಬಂದ ಗೆಳೆಯರಲ್ಲಿ ಹೆಚ್ಚು ಉತ್ತರ ಕರ್ನಾಟಕದವರೇ ಆಗಿದ್ದರು. ಈ ವಿಚಾರವನ್ನು ಅವರೊಂದಿಗೆ ಹಂಚಿಕೊಂಡಾಗ ಅವರೆಲ್ಲಾ ಮತ್ತಷ್ಟು ಹುರುಪಿನಿಂದ ತಮ್ಮ ಊರಿನ ಅನುಭವಗಳನ್ನು ಹಂಚಿಕೊಂಡರು. ಹಾಗಂತ ನಾನು ಉತ್ತರ ಕರ್ನಾಟಕದವರು ಪೆದ್ದರು ಎಂದು ಹೇಳುವ ಉದ್ದೇಶವಿಲ್ಲ. ತಪ್ಪುತಿಳಿಯಬೇಡಿ. ನನಗೆ ಎಲ್ಲರ ಬಗ್ಗೆ ಗೌರವ ಭಾವನೆಯಿದೆ. ನಡೆದ ಘಟನೆಯನ್ನು ಹಾಗೆ ವಿವರಿಸಿದ್ದೇನೆ.

ನಿಮ್ಮ ಕಾಳಜಿಯ ಪ್ರತಿಕ್ರಿಯೆಗೆ ಧನ್ಯವಾದಗಳು.

Dr.D.T.Krishna Murthy. said...

ಶಿವೂ;ಹಾರ್ದಿಕ ಅಭಿನಂದನೆಗಳು.ನಿಮ್ಮ ಸಾಧನೆಗೆ ಇನ್ನೂ ಹೆಚ್ಚಿನ ಬಹುಮಾನಗಳು ಬರಲಿ ಎನ್ನುವ ಹಾರೈಕೆ.ನಮಸ್ಕಾರ.

shivu.k said...

ಗುರುಮೂರ್ತಿ ಹೆಗಡೆ ಸರ್,

ಫೋಟೊಗಳನ್ನು ನೋಡಿ ಇಷ್ಟಪಟ್ಟಿದ್ದಕ್ಕೆ ಥ್ಯಾಂಕ್ಸ್. ನಿಮ್ಮ ಪ್ರೋತ್ಸಾಹ ಹೀಗೆ ಇರಲಿ..

shivu.k said...

ಡಾ.ಡಿ.ಟಿ.ಕೆ.ಮೂರ್ತಿ ಸರ್,

ನಿಮ್ಮ ಪ್ರೋತ್ಸಾಹ ಹೀಗೆ ಇರಲಿ..ನಿಮ್ಮ ಅಭಿನಂದನೆಗೆ ಧನ್ಯವಾದಗಳು ಸರ್.

ತೇಜಸ್ವಿನಿ ಹೆಗಡೆ said...

ಶಿವು ಅವರೆ,

ಹಾರ್ದಿಕ ಅಭಿನಂದನೆಗಳು. ಎಲ್ಲಾ ಚಿತ್ರಗಳೂ ತುಂಬಾ ಚೆನ್ನಾಗಿದೆ. ನಿಮ್ಮ ಚಂದ್ರನೆಡೆಗೆ ತುಂಬಾ ಮೆಚ್ಚುಗೆಯಾಯಿತು.

kanasu said...

ಚಂದ್ರನೆಡೆಗೆ ಚಿತ್ರ ತುಂಬಾ ಇಷ್ಟ ಆಯ್ತು :)

shivu.k said...

ತೇಜಸ್ವಿನಿ ಮೇಡಮ್,

ಧನ್ಯವಾದಗಳು.

shivu.k said...

ಕನಸು,

ಥ್ಯಾಂಕ್ಸ್..

Uday Hegde said...

We had a great time on that day...Thanks for creating such an wonderful moment.

Half of this credit goes to Hema Madam....;)

ಅನಂತ್ ರಾಜ್ said...

ಶಿವು .. ನಿಮ್ಮ ಬ್ಲಾಗ್ ಗೆ ನನ್ನ ಮೊದಲ ಭೇಟಿ..ಪೋಟೋಗ್ರಫಿಯಲ್ಲಿ ಅತ್ತ್ಯುತ್ತಮ ಸಾಧನೆಯನ್ನು ಮಾಡಿದ್ದೀರಿ. ತು೦ಬಾ ಮುದ ಕೊಡುತ್ತವೆ ಚಿತ್ರಗಳು.
ಸಾಧನೆಯನ್ನು ಮು೦ದುವರೆಸಿ ಎಲ್ಲೆಡೆಯೂ ಮೊದಲ ಬಹುಮಾನ ನಿಮ್ಮದೇ ಆಗಿರಲಿ.

ಶುಭಾಶಯಗಳು
ಅನ೦ತ್

ದಿನಕರ ಮೊಗೇರ said...

uttama photogala kanaja nimma blog sir... tumbaa dhanyavaada.. idara bagge papernalli odidde... nimma blog nalli expect maadidde.....

ವನಿತಾ / Vanitha said...

WOW..Congrats shivu:)

Jagadeesh Balehadda said...

ನಿಮ್ಮ ಬ್ಲಾಗ್ ಪೋಸ್ಟ್ ನೋಡಿ ತುಂಬಾ ಸಂತೋಷವಾಯಿತು. ಆ ವೇಳೆ ಬೆಂಗ್ಳೂರ್ ನಲ್ಲಿದ್ರೂ ನನಗೆ ಸ್ವಲ್ಪದ್ರಲ್ಲೇ "ಫೋಟೊ ಟುಡೆ" ಕಾರ್ಯಕ್ರಮ ಮಿಸ್ ಆಗೋಯ್ತು.

shivu.k said...

ಉದಯ್ ಹೆಗಡೆ,

ನನ್ನ ಒಂದು ಫೋನ್ ಕರೆಗೆ ನೀವೆಲ್ಲಾ ಬಂದಿರಲ್ಲಾ. ಅದು ಮುಖ್ಯ ಕಾರಣ ಅಂಥ ವಾತಾವರಣ ಸೃಷ್ಟಿಯಾಗಲಿಕ್ಕೆ.

ನೀವು ಕೊಟ್ಟಿರುವ ಅರ್ಥ ಕ್ರೆಡಿಟ್ಟನ್ನು ನನ್ನ ಶ್ರೀಮತಿಗೆ ತಿಳಿಸುತ್ತೇನೆ.
ಧನ್ಯವಾದಗಳು.

shivu.k said...

ಅನಂತ್ ರಾಜ್ ಸರ್,

ನನ್ನ ಬ್ಲಾಗಿಗೆ ಸ್ವಾಗತ. ಚಿತ್ರಗಳನ್ನು ನೋಡಿ ಖುಷಿಪಟ್ಟಿದ್ದೀರಿ. ನಿಮ್ಮ ಪ್ರೋತ್ಸಾಹ ಮತ್ತು ಹಾರೈಕೆ ಹೀಗೆ ಇರಲಿ.

ಧನ್ಯವಾದಗಳು.

shivu.k said...

ದಿನಕರ್ ಸರ್,

ನನಗೆ ಈ ವಿಚಾರದಲ್ಲಿ ಬ್ಲಾಗಿಗೆ ಹಾಕಲು ಮನಸ್ಸಿರಲಿಲ್ಲ. ಏಕೆಂದರೆ ನನಗೆ ಹೆಚ್ಚು ಬಹುಮಾನ ಬಂದಿರುವುದರಿಂದ ಅದನ್ನು ಬ್ಲಾಗಿನಲ್ಲಿ ಹಾಕಿದರೆ ನನ್ನನ್ನು ಹೊಗಳಿಕೊಂಡಂತೆ ಆಗುತ್ತದೆ ಎನ್ನುವ ಭಾವನೆ ಬಂದುಬಿಡಬಹುದು ಅಂದುಕೊಂಡು ಸುಮ್ಮನಿದ್ದೆ. ಆದ್ರೆ ಯಾವ ಪತ್ರಿಕೆಯಲ್ಲೂ ಇದರ ಬಗ್ಗೆ ವಿವರವಾಗಿ ಬರಲಿಲ್ಲವಾದ್ದರಿಂದ ಫೋಟೊಗಳ ಜೊತೆಗೆ ಎಲ್ಲ ವಿಚಾರವನ್ನು ಸೇರಿಸಿ ಬ್ಲಾಗಿಗೆ ಹಾಕಿದ್ದೇನೆ.

ಫೋಟೊಗಳನ್ನು ಇಷ್ಟಪಟ್ಟಿದ್ದಕ್ಕೆ ಥ್ಯಾಂಕ್ಸ್ ಸರ್.

shivu.k said...

ವನಿತಾ,

ಥ್ಯಾಂಕ್ಸ್.

shivu.k said...

Jagadeesh balehadda sir,


ನನ್ನ ಬ್ಲಾಗಿಗೆ ಸ್ವಾಗತ.
ಒಂದು ಒಳ್ಳೆಯ ಪ್ರದರ್ಶನ ಮೇಳವನ್ನು ತಪ್ಪಿಸಿಕೊಂಡಿರಿ. ಇರಲಿ ಮುಂದಿನ ಭಾರಿ ಬನ್ನಿ. ನನ್ನ ಬ್ಲಾಗ್ ನೋಡಿ ಸಂತೋಷ ಪಟ್ಟಿದ್ದಕ್ಕೆ ಥ್ಯಾಂಕ್ಸ್..

Anonymous said...

ಶಿವು ಅವರೇ...ತುಂಬಾ ತುಂಬಾ ಶುಭಾಶಯಗಳು! ವಿ ಡಿ ಭಟ್ ನಂಗೆ ಅವತ್ತು ಬೆಳಿಗ್ಗೆ ಸಿಕ್ಕಿದ್ರು..ಮೆಜೆಸ್ಟಿಕ್ಕಿನಲ್ಲಿ. ನಂಗೆ ಹೀಗೆ ಅಂತ ಗೊತ್ತಾಗಲಿಲ್ಲ.. ಹಾಗಾಗಿ ನಿಮ್ಮ ಪ್ರದರ್ಶನ ಮಿಸ್ ಮಾಡ್ಕೊಂಡೆ.. ಅದ್ಭುತ ಚಿತ್ರಗಳು. ಹೀಗೆ ನಿಮ್ಮ ಕೀರ್ತಿ ಪತಾಕೆ ಹಾರುತ್ತಿರಲಿ ಎಂಬ ಹಾರೈಕೆ ನನ್ನದು!

Dileep Hegde said...

ಅಭಿನಂದನೆಗಳು ಶಿವೂ ಸರ್...

ಬಾಲು ಸಾಯಿಮನೆ said...

ಅಭಿನಂದನೆಗಳು.
ನಿಮ್ಮ digital creativity ತುಂಬಾ ಚನ್ನಾಗಿದೆ.

Ranjita said...

ಒಂದಕ್ಕಿಂತ ಒಂದು ಅದ್ಬುತವಾದ ಚಿತ್ರಗಳು ತುಂಬಾ ಚೆನ್ನಾಗಿದೆ ಸರ್ .

Ittigecement said...

ಶಿವು ಸರ್...

ಅಭಿನಂದನೆಗಳು....!!

ಎಲ್ಲ ಫೋಟೊಗಳು ಚೆನ್ನಾಗಿವೆ...

ಚಂದ್ರನೆಡೆಗೆ ಅದ್ಭುತವಾಗಿದೆ... !!

shivu.k said...

ಸುಮನಾ ಮೇಡಮ್,

ನಿಮಗೆ ಸಿಕ್ಕ ಮೇಲೆ ನಂತರ ಅಲ್ಲಿಂದ ನೇರವಾಗಿ ವಿ ಡಿ ಭಟ್ ನಮ್ಮ ಮನೆಗೆ ಬಂದಿದ್ದು. ಎರಡು ದಿನ ಇಲ್ಲಿಯೇ ಇದ್ದರು.
ಈ ಬಹುಮಾನ ವಿಜೇತ ಚಿತ್ರಗಳ ಜೊತೆಗೆ ಇನ್ನುಳಿದ ಇನ್ನೂರು ಚಿತ್ರಗಳು ಪ್ರದರ್ಶನದಲ್ಲಿದ್ದವು. ನೋಡಲು ಬಂದಿದ್ದರೇ ಚೆನ್ನಾಗಿರುತ್ತಿತ್ತು.

ಮುಂದಿನ ಭಾರಿ ತಪ್ಪಿಸಿಕೊಳ್ಳಬೇಡಿ.
ನಿಮ್ಮ ಅಭಿನಂದನೆಗೆ ಧನ್ಯವಾದಗಳು.

shivu.k said...

ದಿಲೀಪ್ ಹೆಗಡೆ.

ಧನ್ಯವಾದಗಳು.

shivu.k said...

ಬಾಲು ಸಾಯಿಮನೆ ಸರ್,

ನನ್ನ creativity ಫೋಟೊ ಮೆಚ್ಚಿದ್ದಕ್ಕೆ ಥ್ಯಾಂಕ್ಸ್.

shivu.k said...

ರಂಜಿತಾ,

ಇನ್ನುಳಿದ ಇನ್ನೂರು ಚಿತ್ರಗಳನ್ನು ನೋಡಿದ್ದರೆ ನೀವು ಏನೇಳುತ್ತಿದ್ದಿರಿ ಅಂದುಕೊಳ್ಳುತ್ತಿದ್ದೆ. ಪ್ರತಿಕ್ರಿಯೆಗೆ ಧನ್ಯವಾದಗಳು.

shivu.k said...

ಪ್ರಕಾಶ್ ಸರ್,

ಥ್ಯಾಂಕ್ಸ್..

Anonymous said...

ಆ ದಿನಗಳು ಮತ್ತೆ ನೆನಪಿಗೆ ಬಂದವು.

vinayak bhat said...

ಆ ದಿನಗಳು ಮತ್ತೆ ನೆನಪಿಗೆ ಬಂದವು.

ವಿ ಡಿ ಭಟ್ ಸುಗಾವಿ said...

ಆ ದಿನಗಳು ಮತ್ತೆ ನೆನಪಿಗೆ ಬಂದವು.

Chaithrika said...

ಬಹುಮಾನಗಳಿಗೆ Congratulations!
ನಿಮ್ಮ "ಚಂದ್ರನೆಡೆಗೆ"ಯ ಕಲ್ಪನೆ ಇಷ್ಟವಾಯಿತು.

ಬಾಲು said...

Congratulations Shivu. :) photos are really good.

i really like marriage photos.

Unknown said...

CONGRATS, ALL GOOD PHOTOS
-HAMID

PARAANJAPE K.N. said...

ಅಭಿನ೦ದನೆಗಳು, ಫೋಟೋಗಳು ತು೦ಬಾ ಚೆನ್ನಾಗಿವೆ

shivu.k said...

ವಿ ಡಿ.ಭಟ್,

ನನ್ನ ಬ್ಲಾಗಿಗೆ ಸ್ವಾಗತ. ನೀವು ಕಾಮೆಂಟ್ ಹಾಕಲು ಗೊತ್ತಾಗದೆ ಮೂರು ಬಾರಿ ಹಾಕಿದ್ದೀರಿ. ತೊಂದರೆಯಿಲ್ಲ. ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು.

shivu.k said...

Chaithrika,

ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು. ನಿಮ್ಮ ಪ್ರೋತ್ಸಾಹ ಹೀಗೆ ಇರಲಿ.

shivu.k said...

ಬಾಲುರವರೆ,

ಮದುವೆ ಫೋಟೋಗಳನ್ನು ನೀವಾದರೂ ಮೆಚ್ಚಿದ್ದಿರಲ್ಲಾ. ಥ್ಯಾಂಕ್ಸ್..

shivu.k said...

Hamid sir,

welcome to my blog. thanks for your comments.

shivu.k said...

ಪರಂಜಪೆ ಸರ್,

ಥ್ಯಾಂಕ್ಸ್.

ಗಣೇಶ್ ಕಾಳೀಸರ said...

ಶಿವು ಸರ್,
ಬಹುಮಾನ ಪಡೆದದ್ದಕ್ಕೆ ಅಭಿನಂದನೆಗಳು..
ಹಾಗೇ ಉತ್ತಮ ಚಿತ್ರಗಳನ್ನು ತೋರಿಸಿದ್ದಕ್ಕೆ ಧನ್ಯವಾದಗಳು.
-ಗಣೇಶ್ ಕಾಳೀಸರ

Subrahmanya said...

Congrats sir. ಚಿತ್ರಗಳು ತುಂಬ ಚೆನ್ನಾಗಿದೆ.

ಸೀತಾರಾಮ. ಕೆ. / SITARAM.K said...

ಮೂರು ಪ್ರಶಸ್ತಿಗಳನ್ನು ಪಡೆದ ತಮಗೆ ಅಭಿನಂದನೆಗಳು.
ತಮ್ಮ ಚಿತ್ರಗಳು ಚೆನ್ನಾಗಿದ್ದು ತಂತ್ರ ಕ್ರಿಯಾಶೀಲತೆಯ ತಮ್ಮ ಚಂದ್ರನೆಡೆಗಿನ ಚಿತ್ರ ಚೆಂದವಿದೆ.
ಎಲ್ಲಾ ಚಿತ್ರಗಳು ಮನ ಸುರೆಗೊಲ್ಲುತ್ತಿವೆ. ಸಮಾರಂಭದ ಮತ್ತು ಮೇಳದ ಚಿತ್ರಗಳು ಚೆನ್ನಾಗಿವೆ ಆದರೆ ಸ್ಟಾಲ್ ಹುಡುಗಿಯರ ಚಿತ್ರವಿರದುದ್ದಕ್ಕೆ ತುಂಬಾ ಬೇಸರವಿದೆ!
ತಮ್ಮ ಮನೆಯ ಮೋಜಿನ ಪ್ರಸಂಗಕ್ಕೆ ಕಾಯುತ್ತಿದ್ದೇವೆ!

ಹಾ ಉತ್ತರ ಕರ್ನಾಟಕದವರು ಪೆದ್ದರಲ್ಲ! ಆದರೇ ಮುಗ್ದರು!

Anonymous said...

congrats sir.

ಮನಸಿನಮನೆಯವನು said...

shivu.k ,
ಶುಭ ಆಶಯಗಳು...
ಫೋಟೋಗಳು ವಿಶೇಷವಾಗಿವೆ..

shivu.k said...

ಗಣೇಶ್ ಕಾಳಿಸರ ಸರ್,

ಬಹುಮಾನಿತ ಚಿತ್ರಗಳನ್ನು ಎಲ್ಲರೂ ನೋಡಲಿ ಎನ್ನುವ ಉದ್ದೇಶದಿಂದಲೇ ಬ್ಲಾಗಿಗೆ ಹಾಕಿದ್ದೇನೆ. ಪ್ರದರ್ಶನದಲ್ಲಿ ನಿಮ್ಮ ಚಿತ್ರವೂ ಪ್ರದರ್ಶನವಾಗಿತ್ತು. ಅದು ಕೂಡ ತುಂಬಾ ಚೆನ್ನಾಗಿದೆ.
ಧನ್ಯವಾದಗಳು.

shivu.k said...

ಸುಬ್ರಮಣ್ಯ ಸರ್,

ಧನ್ಯವಾದಗಳು.

Guruprasad said...

ಶುಭಾಶಯಗಳು ನಿಮ್ಮ ಫೋಟೋಗಳಿಗೆ,, ಪ್ರಶಸ್ತಿ ಲಭಿಸಿರುವುದಕ್ಕೆ.....

ಗುರು

shivu.k said...

ಸೀತಾರಾಂ ಸರ್,

ಕ್ರಿಯಾಶೀಲತೆಯ ಚಿತ್ರವನ್ನು ಮೆಚ್ಚಿದ್ದಕ್ಕೆ ಥ್ಯಾಂಕ್ಸ್.

ಮತ್ತೆ ಪ್ರದರ್ಶನದಲ್ಲಿ ಕಂಪನಿಯ ಹುಡುಗಿಯರ ಚಿತ್ರಗಳನ್ನು ಕಾರಣಾಂತರಗಳಿಂದ ಹಾಕಲಾಗಿಲ್ಲ. ಅವರು ಎಷ್ಟು ಚೆನ್ನಾಗಿದ್ದಾರೆ ಎನ್ನುವುದನ್ನು ನಿಮ್ಮ ಕಲ್ಪನೆಗೆ ಬಿಟ್ಟಿದ್ದೇನೆ.

ಉತ್ತರ ಕರ್ನಾಟಕದವರು ಖಂಡಿತ ಮುಗ್ದರು ಎನ್ನುವುದು ನಮಗೂ ಅನುಭವವಾಯಿತು ಸರ್.

ಪ್ರತಿಕ್ರಿಯೆಗೆ ಧನ್ಯವಾದಗಳು.

shivu.k said...

Chikkichandira,

thanks..

shivu.k said...

ಜ್ಞಾನಾರ್ಪಣಮಸ್ತು,

ಚಿತ್ರಗಳನ್ನು ಮೆಚ್ಚಿದ್ದಕ್ಕೆ ಥ್ಯಾಂಕ್ಸ್..

shivu.k said...

ಗುರು,

ನಿಮಗೆ ಫೋಟೊಗ್ರಫಿ ಆಸಕ್ತಿ ಇರುವುದರಿಂದ ಪ್ರದರ್ಶನ ಮೇಳಕ್ಕೆ ಬರಬಹುದೆಂದುಕೊಂಡಿದ್ದೆ. ಪ್ರತಿಕ್ರಿಯೆಗೆ ಧನ್ಯವಾದಗಳು.

ದೀಪಸ್ಮಿತಾ said...

ಈ ಪ್ರದರ್ಶನಕ್ಕೆ ಎರಡು ದಿನವೂ ಹೋಗಿದ್ದೆ. ಛಾಯಾಚಿತ್ರಕಾರರಿಗೆ ತುಂಬಾ ಒಳ್ಳೆ ವೇದಿಕೆ ಇದು. ಎಂತೆಂಥ ಹೊಸ ಹೊಸ technology, softwareಗಳು. ಬಹುಮಾನ ಪಡೆದಿದ್ದಕ್ಕೆ ಅಭಿನಂದನೆಗಳು. ಆ ವ್ಯಕ್ತಿ ಕೇಳಿದಂತೆ ನನಗೂ ತಿಳಿಸಿಬಿಡಿ, ಆ ಬಹುಮಾನಗಳು ಎಲ್ಲಿ ಸಿಗುತ್ತವೆ, ಕೆಜಿ'ಗೆ ಎಷ್ಟು ಎಂದು? ;-)

Nisha said...

Congrats Shivu. Ella photogalu chennagive.

shivu.k said...

ಕುಲದೀಪ್ ಸರ್,

ಪ್ರದರ್ಶನ ಮೇಳ ನಿಜಕ್ಕೂ ಚೆನ್ನಾಗಿತ್ತು. ಅನೇಕ ಕಾರ್ಯಕ್ರಮಗಳು ನಡೆದವು. ಬಹುಮಾನ ವಿಜೇತ ಚಿತ್ರಗಳಲ್ಲಿ ಇತ್ತೀಚೆಗೆ ಹೊಸ ತಾಂತ್ರಿಕತೆ ಬಳಸಿಕೊಳ್ಳುತ್ತಿರುವುದು ಹೊಸ ಬೆಳವಣಿಗೆ. ಬಹುಮಾನಗಳು ಎಲ್ಲಿ ಸಿಗುತ್ತವೆ ಎನ್ನುವ ವಿಚಾರವನ್ನು ಈ ಕಾರ್ಯಕ್ರಮದ ಆಯೋಜಕರನ್ನು ಕೇಳಿ ಹೇಳುತ್ತೇನೆ. ಚಿತ್ರಗಳನ್ನು ಮೆಚ್ಚಿದ್ದಕ್ಕೆ ಥ್ಯಾಂಕ್ಸ್.

shivu.k said...

Nisha,

thanks..

ಕ್ಷಣ... ಚಿಂತನೆ... said...

ಶಿವೂ ಸರ್‍,
ಫೋಟೋಗಳು ತುಂಬಾ ಚೆನ್ನಾಗಿವೆ. ಅದನ್ನು ನಿಮ್ಮ ಬ್ಲಾಗಿನಲ್ಲಿ ಹಾಕಿದ್ದಲ್ಲದೇ ನಿಮ್ಮ ಸ್ನೇಹಿತರ (ಛಾಯಾಚಿತ್ರಗಾರರು) ಫೋಟೋವನ್ನೂ ಸಹ ನಮಗೆ ತೋರಿಸಿದ್ದೀರಿ ಧನ್ಯವಾದಗಳು.

ನಾನೂ ಸಹ (ಭಾನುವಾರ) ಅಲ್ಲಿಗೆ ಹೋಗಿದ್ದೆ. ಸುಮಾರು ಸಂಜೆ ೫.೦೦ ರವರೆಗೆ ಇದ್ದೆ. ಚಿತ್ರಗಳನ್ನು ಹಾಗೆಯೇ ಅಲ್ಲಿನ ಎಲ್ಲ ಬಗೆಯ ಉಪಕರಣಗಳನ್ನೂ, ಕಾರ್ಯಾಗಾರಗಳನ್ನೂ (ಕೆಲವನ್ನು) ಕಂಡೆನು. ಇದು ಒಂದು ಉತ್ತಮ ಕಾರ್ಯಕ್ರಮವಾಗಿತ್ತು (ನಮ್ಮಂತಹ ಹೊಸಬರಿಗೆ).

ಧನ್ಯವಾದಗಳು.
ಸ್ನೇಹದಿಂದ,

ಚುಕ್ಕಿಚಿತ್ತಾರ said...

ಅಭಿನ೦ದನೆಗಳು ಶಿವು ಸರ್

ತು೦ಬಾ ಲೇಟಾಗಿ ಪ್ರತಿಕ್ರಿಯಿಸುತ್ತಿದ್ದೇನೆ...
ಫೊಟೋಗಳು, ವಿವರಣೆ ತು೦ಬಾ ಚನ್ನಾಗಿ ಮೂಡಿ ಬ೦ದಿದೆ..
ಯಾವಾಗಿನ೦ತೆ..

ವ೦ದನೆಗಳು.

b.saleem said...

ಶಿವು ಸರ್,
ಮೊದಲಿಗೆ ಪ್ರಶಸ್ತಿ ಪಡೆದ ನಿಮಗೆ ಅಭಿನಂದನೆಗಳು.
ನಿವು ಪಡೆದ ಪ್ರಶಸ್ತಿಗಳನ್ನ ನೊಡ್ತಾಯಿದ್ರೆ ಕೇವಲ ಉತ್ತರ ಕರ್ನಾಟಕದವರೆ ಅಲ್ಲ ದಕ್ಷಿಣ ಕರ್ನಾಟಕದವರು ಎಲ್ಲಿ ಸಿಗ್ತಾವೆ ಅಂತ ಕೇಳುವಹಾಗಾಗಿದೆ............
ಮತ್ತೆ ನಿಮ್ಮ ಮನೆಯಲ್ಲಿ ನಮ್ಮನ್ನೆಲ್ಲ ಸೆರಿಸಿ ಒಳ್ಳೆ ಊಟ
ಹಾಕ್ಸಿದ್ದಿರಿ, ಎಲ್ಲರನ್ನೂ ಪರಿಚಯಿಸಿದ್ದಿರಿ, ಅಂತಹ ಅವಕಾಶ ಕಲ್ಪಿಸಿದ ನಿಮಗೂ ಹೇಮಶ್ರೀ ಯವರಿಗೂ ಧನ್ಯವಾದಗಳು

Raghu said...

ಶಿವೂ ಫೋಟೋಸ್ ಎಲ್ಲ ಸೂಪರ್ ಆಗಿದೆ ಇದೆ...ವಿಶೇಷವಾಗಿ ಮಳೆಗಾಲದ ನಡಿಗೆ, ಕೆಲವರಿಗೆ ಎಲ್ಲಿದ್ದರೂ ನಿದ್ರೆ ಬರುತ್ತದೆ!
ನಿಮ್ಮವ,
ರಾಘು.

shivu.k said...

ಎಸ್.ಎಮ್.ಪೆಜತ್ತಾಯ ಹೇಳುತ್ತಾರೆ.

ಪ್ರೀತಿಯ ಶಿವು ಅವರೇ!

"ಚಂದ್ರನೆಡೆಗೆ" ಎಂಬ ಹೈ ಟೆಕ್ ಚಿತ್ರ ನನಗೆ ಬಹು ಇಷ್ಟವಾಯಿತು.

ಕ್ಯಾಮರಾದಿಂದಿಗೆ ಪ್ರಿಂಟಿಂಗ್ ಟೆಕ್ನಾಲಜಿಯೂ ಸೇರಿಕೊಂಡು ಅದ್ಬುತ ಸೃಜನೀಯ ಪರಿಣಾಮ ಬೀರಿದೆ.

ಇದಕ್ಕಿಂತ ಹೆಚ್ಚಿಗೆ ಬರೆಯಲು ನನ್ನ ಅಳವು ಸಾಲದು.

ಹಾರ್ದಿಕ ಅಭಿನಂದನೆಗಳು.

ಪ್ರೀತಿಯಿಂದ

ಪೆಜತ್ತಾಯ ಎಸ್. ಎಮ್.

shivu.k said...

ಚಂದ್ರು ಸರ್,

ಕಳೆದ ಲೇಖನಕ್ಕೆ ನೀವು ಬರದಿದ್ದಿದ್ದು ನೋಡಿ ನೀವು ಊರಲ್ಲಿಲ್ಲವೇನೋ ಅಂದುಕೊಂಡಿದ್ದೆ. ಮತ್ತೆ ಪ್ರದರ್ಶನಮೇಳದಲ್ಲಿ ನೀವು ಕಾಣಲಿಲ್ಲ. ಮತ್ತೆ ಅವರೆಲ್ಲಾ ಗೆಳೆಯರು ಯಾವಾಗಲು ಫೋನಿನಲ್ಲೇ ನಮ್ಮ ಮಾತುಕತೆಯಿರುತ್ತಿತು. ಅವತ್ತು ಎಲ್ಲರೂ ಬೆಂಗಳೂರಿಗೆ ಬಂದಿದ್ದರಿಂದ ನಮ್ಮ ಮನೆಯಲ್ಲಿ ಸೇರಲು ತೀರ್ಮಾನಿಸಿದೆವು.
ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು.

shivu.k said...

ಚುಕ್ಕಿಚಿತ್ತಾರ ಮೇಡಮ್,

ತಡವಾಗಿ ಪ್ರತಿಕ್ರಿಯಿಸಿದರೂ ತೊಂದರೆಯಿಲ್ಲ. ಫೋಟೊ ಮತ್ತು ವಿವರಣೆಯನ್ನು ಮೆಚ್ಚಿದ್ದಕ್ಕೆ ಥ್ಯಾಂಕ್ಸ್.

shivu.k said...

ಸಲೀಂ,

ನೀವು ಎಲ್ಲರ ಒಟ್ಟಿಗೆ ನಮ್ಮ ಮನೆಗೆ ಬಂದಿದ್ದು ನಮ್ಮಿಬ್ಬರಿಗೂ ಖುಷಿ. ಬಹುಮಾನದ ಮೊಮೆಂಟೋಗಳು ಖಂಡಿತ ನಮ್ಮ ಮನೆಯಲ್ಲಿಯೇ ಸಿಗುತ್ತವೆ. ಅವತ್ತು ಮನೆಗೆ ಬಂದವರು ಬೇಕಾದ್ದನ್ನು ತೆಗೆದುಕೊಂಡು ಹೋಗಬಹುದು ಅಂದಿದ್ದೆ. ಯಾರು ತೆಗೆದುಕೊಂಡು ಹೋಗಲಿಲ್ಲ. ಕಾರಣ ನನಗೆ ಇಟ್ಟುಕೊಳ್ಳಲು ಜಾಗವಿಲ್ಲದಿರುವುದು ನೀವೇ ನೋಡಿದಿರಲ್ಲ...

ನಿಮ್ಮ ಧನ್ಯವಾದಗಳನ್ನು ನನ್ನ ಶ್ರೀಮತಿಗೆ ತಿಳಿಸುತ್ತೇನೆ.
ಧನ್ಯವಾದಗಳೂ.

shivu.k said...

ರಘು,

ನನ್ನ ಬ್ಲಾಗಿಗೆ ಸ್ವಾಗತ. ಒಂದು ಫೋಟೊವನ್ನು ನೋಡಿ ನಿಮಗೆ ಅಂಥ ಭಾವನೆ ಬರುವುದುದಾದರೆ ಕಾರ್ಯಕ್ರಮದಲ್ಲಿರುವ ಇನ್ನೂರು ಫೋಟೊಗಳನ್ನು ನೋಡಿದಾಗ ಇನ್ನು ಎಂಥೆಂಥ ಭಾವನೆಗಳು ಬರಬಹುದು ಅಂತ ಯೋಚಿಸುತ್ತಿದ್ದೆ. ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು.

shivu.k said...

ಪೆಜತ್ತಾಯ ಸರ್,

ನನ್ನ ಬ್ಲಾಗಿಗೆ ಮೊದಲ ಬಾರಿಗೆ ಬಂದಿದ್ದೀರಿ. ಥ್ಯಾಂಕ್ಸ್. ನೀವು ಇಷ್ಟಪಟ್ಟ ಚಿತ್ರ ನನಗೂ ಕೂಡ ಇಷ್ಟ. ನಿಮ್ಮ ಅಭಿನಂದನೆಗೆ ಧನ್ಯವಾದಗಳು. ಹೀಗೆ ಬರುತ್ತಿರಿ..

Snow White said...

congratulations shivu sir.. :):) chitragalau adbuthavaagive :)

shivu.k said...

Snow white,

thanks...

ಮಹೇಶ್ ಪುಚ್ಚಪ್ಪಾಡಿ said...

ಫೋಟೋಸ್ ಚೆನ್ನಾಗಿದೆ. ಕಂಗ್ರಾಟ್ಸ್ .. ಶಿವು . .

shivu.k said...

ಪುಚ್ಚಪ್ಪಾಡಿ.

ನೀವೆಲ್ಲ ದೂರದಲ್ಲಿರುವುದರಿಂದ ಈ ಚಿತ್ರಗಳನ್ನು ತೋರಿಸಬೇಕೆನ್ನುವುದು ನನ್ನ ಉದ್ದೇಶ. ನೀವು ನೋಡಿ ಮೆಚ್ಚಿದ್ದಕ್ಕೆ ಥ್ಯಾಂಕ್ಸ್.

shivu.k said...

sir,

3 bahumaana galisirodakke abhinandanegalu.

patrikegala putagala bagegina nimma lekhanada logic hidistu,
nice.

vidyarashmi

shivu.k said...
This comment has been removed by the author.
Prashanth Arasikere said...

hi shivu congrats tumba chennagide nimma photos matte tale baraha..

Unknown said...

ಅಭಿನಂದನೆಗಳು.. ಫೋಟೋಗಳು ಚೆನ್ನಾಗಿವೆ..

shivu.k said...

prasanth,

thanks for comments.

shivu.k said...

ರವಿಕಾಂತ್ ಸರ್,

ಥ್ಯಾಂಕ್ಸ್..

UMESH VASHIST H K. said...

congradulations shivu avrige

shivu.k said...

ಉಮೇಶ್ ವಶಿಷ್ಟ ಸರ್,

ಥ್ಯಾಂಕ್ಸ್..

Basudeb Chakraborty said...

Very nice shots. But cant not understand the languag. Had it been in english i could read.
B.K.Chakraborty,West Bengal

Erictasi said...

ಶ್ರೀಧರ್ ಸರ್, ಕ್ರಿಯೇಟೀವ್ ವಿಭಾಗದ ಆ ಫೋಟೊ ನನಗೂ ಕೂಡ ತುಂಬಾ ಇಷ್ಟ. ನಿಮಗೂ ಇಷ್ಟವಾಗಿದ್ದಕ್ಕೆ ಥ್ಯಾಂಕ್ಸ್.