Friday, July 2, 2010

ನಮ್ಮ ಸಂಪಾದಕರುಗಳಿಗೆ ಇದೆಲ್ಲಾ ಗೊತ್ತಿದೆಯೇ?


ನನ್ನ ಇಬ್ಬರೂ ವೃತ್ತಿ ಭಾಂದವ ಗೆಳೆಯರಾದ ಮೂರ್ತಿ ಮತ್ತು ಕೀರ್ತಿ ಕೈಯಲ್ಲಿ ಪೆನ್ನು ಪೇಪರ್, ಕ್ಯಾಲ್ಕುಲೇಟರ್ ಹಿಡಿದುಕೊಂಡು ಗಂಭೀರವಾಗಿ ಏನೋ ಲೆಕ್ಕಚಾರ ಮಾಡುತ್ತಿದ್ದರು. ನಾನು ಹೋಗಿ ಮಾತಾಡಿಸಿದೆ. ಅವರು ನನ್ನನ್ನು ನಿರೀಕ್ಷಿಸಿದ್ದರೇನೋ, ನೀನು ಬಂದರೆ ನಮಗೆ ಬೇಗ ಲೆಕ್ಕ ಗೊತ್ತಾಗುತ್ತೆ" ಅಂತ ಹೇಳಿ ನನ್ನನ್ನು ಸೇರಿಸಿಕೊಂಡರು.
ಅಂದು ಹೊಸ ಪೇಪರ್ ಬೆಂಗಳೂರಿನಲ್ಲಿ ಬಿಡುಗಡೆಯಾಗಿತ್ತು. ಯಾವುದೇ ಹೊಸ ದಿನಪತ್ರಿಕೆ ಬಿಡುಗಡೆಯಾದರೂ ಅದನ್ನು ಗ್ರಾಹಕರಿಗೆ ತಲುಪಿಸಬೇಕಾದವರು ನಾವೇ ಅಲ್ಲವೇ...ಅದಕ್ಕಾಗಿ ಆ ಪತ್ರಿಕೆಯ ಮಾರ್ಕೆಟಿಂಗ್ ವಿಭಾಗದ ಪ್ರತಿನಿಧಿಗಳು ಮೊದಲು ನಮ್ಮನ್ನು ಬೇಟಿಯಾಗಿ ಅವರ ಪತ್ರಿಕೆಯ ವಿವರವನ್ನೆಲ್ಲಾ ನೀಡಿ, ದೊಡ್ಡ ಸಮಾರಂಭ ಮಾಡಿ ಎಲ್ಲಾ ಏಜೆಂಟರನ್ನು ಅತಿಥಿಗಳಂತೆ ಕರೆಸಿ, ನಮ್ಮನ್ನು ಹೊಗಳಿ ಆಟ್ಟಕ್ಕೇರಿಸಿ, ಜೊತೆಗೆ ತಮ್ಮ ಹೊಸ ದಿನಪತ್ರಿಕೆಯನ್ನು ಹೊಗಳಿ, ಅಕಾಶಕ್ಕೇರಿಸಿ, ಈಗ ನಿಮ್ಮೆಲ್ಲರ ಸಹಕಾರಬೇಕು ಅಂತ ನಮ್ಮ ಹಿಂದೆ ಬಿದ್ದಿದ್ದರು. ಜೊತೆಗೆ ನಾವು 10, 50, 100 ಅಂತ ಇಂತಿಷ್ಟು ಪತ್ರಿಕೆಗಳನ್ನು ಮಾರಿದರೆ ಅಥವ ಅವುಗಳಿಗೆ ಗ್ರಾಹಕರನ್ನು ಹುಡುಕಿಕೊಟ್ಟರೇ ನಮಗೆ ಇಂತಿಷ್ಟು ಹಣ ಹೆಚ್ಚುವರಿ ಕೊಡುತ್ತೇವೆ ಎಂದು ಆಸೆ ತೋರಿಸಿದ್ದರು. ಈ ವಿಚಾರದ ಬಗ್ಗೆ ಮೂರ್ತಿ ಮತ್ತು ಕೀರ್ತಿ ತುಂಬಾ ತಲೆಕೆಡಿಸಿಕೊಂಡಿದ್ದರು. ಹೊಸಪತ್ರಿಕೆಯನ್ನು ತಮ್ಮ ತಮ್ಮ ಗ್ರಾಹಕರಿಗೆ ತೋರಿಸಿ, ಅವರಿಗೆಲ್ಲಾ ಈ ಹೊಸ ಪತ್ರಿಕೆಯನ್ನೇ ಕೊಳ್ಳುವಂತೆ ಮಾಡಲು, ಏನೇನು ಪ್ಲಾನ್ ಮಾಡಬೇಕು, ಎಷ್ಟು ಕಷ್ಟಪಟ್ಟರೆ ನಮಗೆ ಹೆಚ್ಚೆಚ್ಚು ಕಮೀಶನ್ ಸಿಗಬಹುದು, ಹೀಗೆ ಅವರ ಅಲೋಚನೆಗಳಿರಬಹುದು, ಪಾಪ ಒಂದು ಹೊಸ ಪತ್ರಿಕೆಯನ್ನು ಬೆಳೆಸಲು ಎಷ್ಟು ಕಷ್ಟಪಡುತ್ತಾರಪ್ಪಾ! ಅಂತ ನೀವು ಅವರ ಬಗ್ಗೆ ಅಂದುಕೊಂಡರೆ ನಿಮ್ಮ ಊಹೆ ತಪ್ಪು. ಅವರ ಅಲೋಚನೆ ಎಂಥದ್ದು ಅನ್ನುವುದು ನಿಮಗೆ ಮುಂದೆ ಗೊತ್ತಾಗುವುದರ ಜೊತೆಗೆ ಕೆಲವು ಅತಿಸೂಕ್ಷ್ಮ ವಿಚಾರಗಳು, ಸತ್ಯಸತ್ಯತೆಗಳು, ಕಷ್ಟನಷ್ಟಗಳು ನಿಮಗೇ ಗೊತ್ತಾಗಿಬಿಡುತ್ತವೆ.

"ಶಿವು, ಡೆಕ್ಕನ್ ಹೆರಾಲ್ಡ್ ಪೇಪರಿನಲ್ಲಿ ದಿನನಿತ್ಯ ಎಷ್ಟು ಪುಟಗಳಿರುತ್ತವೆ?" ನನ್ನೆಡೆಗೆ ಪ್ರಶ್ನೆಹಾಕಿದ ಮೂರ್ತಿ.

ನಿತ್ಯ ಎಲ್ಲಾ ಪತ್ರಿಕೆಗಳನ್ನು ಒಂದು ಸುತ್ತು ಸಣ್ಣಗೆ ಓದಿಬಿಡುವ ಅಭ್ಯಾಸವಿರುವುದರಿಂದ ನನಗೆ ಒಂದೊಂದು ಪತ್ರಿಕೆಯಲ್ಲೂ ಎಷ್ಟೆಷ್ಟೂ ಪುಟಗಳಿರುತ್ತವೆ ಅನ್ನೋದು ಚೆನ್ನಾಗಿ ಗೊತ್ತು ಅನ್ನೋದು ಅವನ ಭಾವನೆ. ಅದಕ್ಕೆ ನನ್ನೆಡೆಗೆ ಈ ಪ್ರಶ್ನೆ ಎಸೆದಿದ್ದ.
ನಾನು ಸ್ವಲ್ಪ ಯೋಚಿಸಿ, "ಮೇನ್ ಪೇಪರಿನಲ್ಲಿ ಇಪ್ಪತ್ತು ಮತ್ತು ಸಪ್ಲಿಮೆಂಟರಿನಲ್ಲಿ ನಾಲ್ಕು ಪುಟಗಳು" ಹೇಳಿದೆ.
ತಕ್ಷಣ ಆತ ಅದನ್ನು ಒಂದು ಕಡೆ ಬರೆದುಕೊಂಡ. ನಂತರ ಟೈಮ್ಸ್ ಆಪ್ ಇಂಡಿಯ, ಇಂಡಿಯನ್ ಎಕ್ಸ್‍ಪ್ರೆಸ್, ದಿ ಹಿಂದೂ, ಕನ್ನಡ ದಿನಪತ್ರಿಕೆಗಳು, ಹೀಗೆ ಎಲ್ಲ ಪತ್ರಿಕೆಗಳ ಪುಟಗಳೆಷ್ಟು ಇರುತ್ತವೆಂದು ನನ್ನಿಂದ ಕೇಳಿ ಒಂದು ಪೇಪರಿನಲ್ಲಿ ಬರೆದುಕೊಂಡು ಮತ್ತೆ ಗಂಭೀರವಾಗಿ ಲೆಕ್ಕ ಹಾಕತೊಡಗಿದರು.
"ಲೋ ಅದೇನ್ ಲೆಕ್ಕ ಹಾಕುತ್ತಿದ್ದೀರಿ ಅಂತ ಸ್ವಲ್ಪ ನನಗೂ ಹೇಳ್ರೋ, ನಾನು ತಿಳಿದುಕೊಳ್ಳುತ್ತೇನೆ" ಅವರನ್ನು ಮತ್ತೆ ಕೇಳಿದೆ.

ಲೆಕ್ಕಚಾರ ಮಾಡುತ್ತಿದ್ದ ಕೀರ್ತಿ ನನ್ನ ಮಾತಿಗೆ ಕತ್ತೆತ್ತಿ ನೋಡಿ, ಮತ್ತೆ ಹೋಟಲ್ಲಿನ ಮಾಣಿಯ ಕಡೆಗೆ ತಿರುಗಿ "ಎರಡರಲ್ಲಿ ಮೂರು ಕಾಫಿ ಕೊಡಿ" ಅಂತ ಅರ್ಡರ್ ಮಾಡಿ, ಮತ್ತೆ ತನ್ನ ಲೆಕ್ಕದಲ್ಲಿ ಮುಳುಗಿಬಿಟ್ಟ. ಬಹುಶಃ ನಿನಗಿದೆಲ್ಲಾ ಗೊತ್ತಾಗೊಲ್ಲ, ನಾವು ಹೇಳೋವರೆಗೆ ಸ್ವಲ್ಪ ತಡಕೋ, ಅಲ್ಲಿಯವರೆಗೆ ಕಾಫಿ ಕುಡಿಯುತ್ತಿರು" ಅಂತ ನನಗೆ ಪರೋಕ್ಷವಾಗಿ ಹೇಳಿದಂತಾಗಿತ್ತು. ಕಾಫಿ ಬಂತು ನಾನು ಕುಡಿಯುತ್ತಿದ್ದೆ. ಸ್ವಲ್ಪ ಹೊತ್ತಿನ ನಂತರ ಅವರಿಬ್ಬರಲ್ಲಿ ಸಣ್ಣ ಮಾತುಕತೆ ಶುರುವಾಗಿತ್ತು.

"ಒಂದು ಕೆಜಿ ರದ್ದಿ ಪೇಪರಿಗೆ ಎಷ್ಟು ರೂಪಾಯಿ ಕೊಡುತ್ತಾನೆ?" ಕೀರ್ತಿ ಪ್ರಶ್ನೆ.

"ಇಂಗ್ಲೀಷ್ ಪೇಪರಿಗೆ ಏಳುವರೆ ರೂಪಾಯಿ, ಕನ್ನಡಕ್ಕೆ ಆರು ರೂಪಾಯಿ". ಮೂರ್ತಿ ಉತ್ತರ.


"ನಿನ್ನೆ ನಾನು ಒಂದು ತಿಂಗಳ 30 ಡೆಕ್ಕನ್ ಹೆರಾಲ್ಡ್ ಪೇಪರನ್ನು ರದ್ದಿಗೆ ಹಾಕಿದೆ. ಒಂದು ಕೇಜಿಗೆ ಏಳುವರೆಯಂತೆ ಎರಡು ಕಾಲು ಕೇಜಿ ಬಂದಿದ್ದಕ್ಕೆ ರದ್ದಿಯವನು 16 ರೂಪಾಯಿ ಕೊಟ್ಟ." ಸ್ವಲ್ಪ ಯೋಚಿಸಿ, "ನೋಡು..ಈಗ ಹೇಳುವುದನ್ನು ಗಮನವಿಟ್ಟು ಕೇಳಿ ಬರೆದುಕೋ. 24 ಪುಟಗಳಿರುವ 14 ದಿನದ ಡೆಕ್ಕನ್ ಹೆರಾಲ್ಡಿಗೆ ಒಂದು ಕೇಜಿ ತೂಕ ಬರುತ್ತದೆ. ಅಂದರೆ ಏಳು ವರೆ ರೂಪಾಯಿ ಸಿಗುತ್ತದೆ, ಅದೇ ರೀತಿ ಈಗ ಹೊಸ ಪತ್ರಿಕೆಯೊಂದು ಬರುತ್ತಿದೆಯಲ್ಲಾ. ಅದು ಒಂದು ದಿನಕ್ಕೆ 48 ಪುಟವಿರುತ್ತದಂತೆ. ಈ ಪತ್ರಿಕೆಯ ಕೇವಲ ಏಳು ಪೇಪರುಗಳನ್ನು ಒಟ್ಟುಮಾಡಿ ತೂಕಕ್ಕೆ ಹಾಕಿದರೆ ಒಂದು ಕೇಜಿ ಖಂಡಿತ ಬರುತ್ತದೆ. ಒಂದು ಕೇಜಿಗೆ ಏಳುವರೆರೂಪಾಯಿ ಸಿಕ್ಕಂತೆ ಆಯಿತಲ್ಲವೇ?" ಹಾಗೆ ಇಲ್ಲಿ ನೋಡು, ಒಂದು ದಿನಕ್ಕೆ ಈ ದಿನಪತ್ರಿಕೆ ನೂರು ತೆಗೆದುಕೊಂಡರೆ........ಹದಿನಾಲ್ಕು ಕೇಜಿ ಖಂಡಿತ ಸಿಗುತ್ತದೆ. ಒಟ್ಟು ಮಾಡಿ ತೂಕಕ್ಕೆ ಹಾಕಿದರೆ ಪ್ರತಿದಿನ 105 ರೂಪಾಯಿ ಖಂಡಿತ ಸಿಗುತ್ತೆ. ಒಂದು ತಿಂಗಳಿಗೆ, 3150 ರೂಪಾಯಿ ಬರುತ್ತದೆ. ಇದಲ್ಲದೆ ನಾವು ದಿನಕ್ಕೊಂದರಂತೆ ಒಂದು ತಿಂಗಳು ಗ್ರಾಹಕರಿಗೆ ಮಾರಿದರೆ ನಮಗೆ ಬೋನಸ್ ರೂಪದಲ್ಲಿ 20 ರೂಪಾಯಿಗಳನ್ನು ಕೊಡುತ್ತಾರೆ ದಿನಕ್ಕೆ ಹತ್ತು ಮಾರಿದರೆ ತಿಂಗಳಿಗೆ 200 ರೂಪಾಯಿಗಳು, ದಿನಕ್ಕೆ ನೂರು ಮಾರಿದರೆ ತಿಂಗಳಿಗೆ 2000 ರೂಪಾಯಿ ಕೊಡುತ್ತಾರೆ.


"ಈ 2000 ಮತ್ತುತೂಕದ ಹಣ 3150 ಒಟ್ಟು ಮಾಡಿದಾಗ ತಿಂಗಳಿಗೆ 5150 ರೂಪಾಯಿಗಳು ನಮಗೆ ಸಿಗುತ್ತದೆ."
ಕೀರ್ತಿ ಲೆಕ್ಕಚಾರ ಹಾಕುತ್ತಾ ಹೇಳಿದ.


"ಇದೆಲ್ಲಾ ಸರಿ, ಆ ದಿನಪತ್ರಿಕೆಯ ಮುಖಬೆಲೆ ಎಷ್ಟು?. ಅದರಲ್ಲಿ ನಮ್ಮ ಕಮಿಶನ್ ಎಷ್ಟು" ಕುತೂಹಲ ತಡೆಯಲಾಗದೆ ನಾನು ಕೇಳಿದೆ..

ಆ ದಿನ ಪತ್ರಿಕೆ ಬೆಲೆ 2-00 ರೂಪಾಯಿಗಳು. ನಮಗೆ 1-40 ಪೈಸೆಗೆ ಕೊಡುತ್ತಾರೆ. ಒಂದು ಪತ್ರಿಕೆಯನ್ನು ನಾವು ಎರಡು ರೂಪಾಯಿಗೆ ನಮ್ಮ ಗ್ರಾಹಕರ ಮನೆಗೆ ಹಾಕಿದರೆ ಅಥವ ಮಾರಿದರೆ ನಮ್ಮ ಕಮೀಶನ್ ಒಂದು ಪೇಪರಿಗೆ ಅರವತ್ತು ಪೈಸೆ ಸಿಗುತ್ತದೆ." ಕೀರ್ತಿ ನನ್ನ ಪ್ರಶ್ನೆಗೆ ಉತ್ತರಿಸಿದ.

"ಒಂದು ಪೇಪರಿಗೆ 1-40 ರಂತೆ ನೂರು ಪತ್ರಿಕೆಗೆ 140ರೂಪಾಯಿಗಳು. ಒಂದು ದಿನಕ್ಕೆ ಬೇಕಾದರೆ ಒಂದು ತಿಂಗಳಿಗೆ 4200 ರೂಪಾಯಿಗಳ ಬಂಡವಾಳ ಹೊಂದಿಸಬೇಕಲ್ವಾ?" ಮರುಪ್ರಶ್ನೆ ಹಾಕಿದೆ.

"ಖಂಡಿತ ಹೊಂದಿಸಬೇಕು. ತಿಂಗಳಾದ ಮೇಲೆ ನಿನಗೆ ಕುಳಿತ ಜಾಗದಲ್ಲೇ ಲಾಭ ಸಿಗುತ್ತದಲ್ಲ...

ಹೇಗೆ?

"ನೋಡು ನಾನು ಹೇಳುವುದನ್ನು ಪೇಪರಿನಲ್ಲಿ ಬರೆದುಕೋ, ಮೊದಲು ನಿನ್ನ ಬಂಡವಾಳ ಒಂದು ತಿಂಗಳಿಗೆ 1400
ಅಲ್ಲವೇ"


"ಹೌದು"!

"ಅವರು ಕೊಡುವ ಬೋನಸ್ 2000ರೂಪಾಯಿಗಳ ಜೊತೆಗೆ ಒಂದು ತಿಂಗಳ ಪೇಪರನ್ನು ತೂಕಕ್ಕೆ ಹಾಕಿದಾಗ ಬರುವ 3150 ರೂಪಾಯಿಗಳನ್ನು ಒಟ್ಟು ಮಾಡಿದರೆ 5150 ರೂಪಾಯಿಗಳಾಗುತ್ತದಲ್ವಾ?"


"ಹೌದು" ನಾನು ಬರೆದುಕೊಳ್ಳುತ್ತಿದ್ದೆ.

"ಈಗ 5150 ರೂಪಾಯಿಗಳಲ್ಲಿ ನಿನ್ನ ಬಂಡಾವಾಳ 4200 ರೂಪಾಯಿಗಳನ್ನು ಕಳೆದರೆ ೯೫೦ ರೂಪಾಯಿಗಳು ಲಾಭವಲ್ಲವೇ!"


"ಅರೆರೆ! ಹೌದಲ್ವಾ ಯಾವುದೇ ಗಿರಾಕಿಗೆ ಮಾರುವ ರಿಸ್ಕ್ ಇಲ್ಲ, ಗ್ರಾಹಕರ ಮನೆಗೆ ಹೋಗಿ ಇದು ಹೊಸ ಪೇಪರ್ ಚೆನ್ನಾಗಿದೆ, ಓದಿನೋಡಿ, ಅಂತ ಗೋಗರಿಯುವ ಅವಶ್ಯಕತೆಯಿಲ್ಲ. ಸುಮ್ಮನೆ ಹಣಕೊಟ್ಟು ಬಂಡಲ್ ಬಿಚ್ಚದೆ ತೂಕಕ್ಕೆ ಹಾಕಿದರೂ ಲಾಭ ಸಿಗುತ್ತದಲ್ಲಾ! ಯಾಕೆ ಮಾಡಬಾರದು ಅನ್ನಿಸಿತು ನನಗೆ. ಇದು ಆರು ತಿಂಗಳ ಸ್ಕೀಮು, ಒಬ್ಬರು ನಿತ್ಯ ನೂರು ಪೇಪರ್ ತೆಗೆದುಕೊಂಡರೂ ಸಾಕು. ನಾವು ಏನು ರಿಸ್ಕ್ ತೆಗೆದುಕೊಳ್ಳದೇ ಆರು ತಿಂಗಳಿಗೆ 5700 ರೂಪಾಯಿಗಳನ್ನು ಸಂಪಾದಿಸಬಹುದಲ್ವಾ! ಮೂರ್ತಿ ಮತ್ತು ಕೀರ್ತಿ ಇಬ್ಬರ ಮುಖಗಳು ತಾವರೆಯಂತೆ ಹರಳಿದವು.


"ಅಲ್ವೋ ಇದು ಮೋಸ ಅಲ್ವೇನೋ, ನಾವು ಈ ದಿನಪತ್ರಿಕೆಯನ್ನು ಗ್ರಾಹಕರಿಗೆ ಮಾರಿದರೆ ಕಮೀಶನ್ ಅಂತ ಅರವತ್ತು ಪೈಸೆ ಕೊಟ್ಟೇ ಕೊಡುತ್ತಾರೆ, ಜೊತೆಗೆ ನಾವು ಹೆಚ್ಚೆಚ್ಚು ಮಾರಲಿ ಅಂತ ಬೋನಸ್ ಕೂಡ ಕೊಡುತ್ತಿದ್ದಾರೆ. ಆ ಕೆಲಸ ಮಾಡೋದು ಬಿಟ್ಟು ಇದೇನೋ ಇದು ಮೋಸದ ಲೆಕ್ಕಚಾರ, ಅವರು ಪ್ರಿಂಟ್ ಮಾಡಿದ ಸಾವಿರಾರು ದಿನಪತ್ರಿಕೆಗಳು ಗ್ರಾಹಕರಿಗೆ ತಲುಪದೆ ನೇರ ತೂಕಕ್ಕೆ ಹಾಕಿವುದು ಸರಿಯಲ್ಲ. ನಮಗೂ ಒಂದು ವೃತ್ತಿಧರ್ಮ ಅಂತ ಇದೆಯಲ್ಲವೇ?" ನಾನು ಬೇಸರದಿಂದ ಪ್ರಶ್ನಿಸಿದೆ.

"ಲೋ ಶಿವು, ನೀವು ಸುಮ್ಮನಿರು, ಯಾವುದು ವೃತ್ತಿಧರ್ಮ, ಪತ್ರಿಕೆಯ ಮಾಲಿಕರಿಗೆ, ಅದರ ಸಂಪಾದಕರಿಗೆ, ವರದಿಗಾರರಿಗೆ ಇಲ್ಲದ ವೃತ್ತಿ ಧರ್ಮ ನಮಗ್ಯಾಕೆ ಬೇಕು ಹೇಳು?" ಕೀರ್ತಿ ಕೋಪದಿಂದ ಹೇಳಿದಾಗ ನನಗೆ ಅರ್ಥವಾಗಲಿಲ್ಲ

"ಅವರೆಲ್ಲಾ ತಮ್ಮ ವೃತ್ತಿಧರ್ಮವನ್ನು ಬಿಟ್ಟಿದ್ದಾರೆ ಅಂತ ಹೇಳುತ್ತೀಯಾ? ಅದಕ್ಕೆ ನಿನ್ನಲ್ಲಿ ಏನಾಧರೂ ಆಧಾರವಿದೆಯಾ?" ನಾನು ಮರುಪ್ರಶ್ನಿಸಿದೆ.

"ಅಧಾರ ಬೇಕಾ, ನೋಡು ಗಮನವಿಟ್ಟು ಕೇಳು, ಒಂದು ಕನ್ನಡ ಅಥವ ಆಂಗ್ಲ ದಿನಪತ್ರಿಕೆಯಲ್ಲಿ ಸುದ್ಧಿಗಾಗಿ, ಲೇಖನಕ್ಕಾಗಿ, ಚಿತ್ರಗಳಿಗಾಗಿ, ಹತ್ತರಿಂದ ಹದಿನೈದು ಪುಟಗಳು ಸಾಕು. ಅವರು ಬದುಕಬೇಕಾಲ್ವ ಅದಕ್ಕಾಗಿ ಸಣ್ಣ ಮಟ್ಟಿನ ಜಾಹಿರಾತಿಗಾಗಿ ಮತ್ತೆ ನಾಲ್ಕಾರು ಪುಟಗಳು ಸೇರಿ ಇಪ್ಪತ್ತು ಪುಟಗಳಷ್ಟು ಮುದ್ರಿಸಿದರೆ ಸಾಕು. ಮತ್ತೆ ನಮ್ಮ ಗ್ರಾಹಕರಿಗೂ ಇಂದಿನ ಫಾಸ್ಟ್ ಲೈಫಿನಲ್ಲಿ ಇದಕ್ಕಿಂತ ಹೆಚ್ಚು ಓದಲಿಕ್ಕೆ ಎಲ್ಲಿದೆ ಸಮಯ ಹೇಳು? ಆದ್ರೆ ಈಗ ಏನಾಗುತ್ತಿದೆ ನೋಡು, ಯಾವುದೇ ಆಂಗ್ಲ ದಿನಪತ್ರಿಕೆಯೂ ನಲವತ್ತು ಪುಟಕ್ಕೆ ಕಡಿಮೆಯಿರುವುದಿಲ್ಲ. ಕೆಲವೊಂದು ದಿನ 60-70 ಪುಟಗಳು ಇರುತ್ತದೆ. ಅಷ್ಟೂ ಪುಟಗಳಲ್ಲೂ ಓದುವಂತದ್ದೂ 10 ಪುಟಗಳಿದ್ದರೇ ಹೆಚ್ಚೆಚ್ಚು. ಉಳಿದದ್ದು ಪೂರ್ತಿ ಜಾಹಿರಾತು. ಜಾಹೀರಾತಿನಿಂದಲೇ ಪತ್ರಿಕೆ ಮಾಲೀಕರಿಗೆ ಕೋಟ್ಯಂತರ ರೂಪಾಯಿ ಲಾಭವಿರುತ್ತದೆ. ನಮ್ಮ ಪತ್ರಿಕೆ ಐದು ಲಕ್ಷ, ಆರು ಲಕ್ಷ, ಹತ್ತು ಲಕ್ಷ ನಿತ್ಯ ಮುದ್ರಣವಾಗಿ ಗ್ರಾಹಕರಿಗೆ ತಲುಪುತ್ತಿದೆಯಂದು ಹೊಗಳಿಕೊಂಡು ತಮ್ಮ ಆಹಂ ಹೆಚ್ಚಿಸಿಕೊಳ್ಳುತ್ತಿದ್ದಾರೆ. ಬೆಂಗಳೂರೊಂದರಲ್ಲೇ ಒಂದು ದಿನಕ್ಕೆ ಎಲ್ಲಾ ಭಾಷೆಯ ಇಪ್ಪತ್ತು ಲಕ್ಷಕ್ಕೂ ಹೆಚ್ಚು ದಿನಪತ್ರಿಕೆ ಪ್ರತಿಗಳು ಮುದ್ರಣವಾಗುತ್ತವೆ. ಒಂದು ಪತ್ರಿಕೆಯಲ್ಲಿ ಕಡಿಮೆಯೆಂದರೂ 40ಪುಟಗಳಿರುತ್ತವೆ. ಪುಟಗಳಲ್ಲಿ ಲೆಕ್ಕ ಮಾಡಿದರೆ ದಿನಕ್ಕೆ ಎಂಟು ಕೋಟಿ ಪುಟಗಳು ಮುದ್ರಣವಾಗುತ್ತವೆ. ಇದರಲ್ಲಿ ಓದುವಂತದ್ದು ಇಪ್ಪತ್ತು ಭಾಗಮಾತ್ರ. ಉಳಿದದ್ದು ಜಾಹಿರಾತು. ಒಂದು ಸೆಕೆಂಡು ಕಣ್ಣಾಡಿಸಿ ಬಿಸಾಡುವ ಜಾಹಿರಾತಿಗಾಗಿ ಆರುಕೋಟಿ ಪುಟಗಳು ನಿತ್ಯ ಪ್ರಿಂಟ್ ಆಗುತ್ತಿವೆ.ನೀನೇ ಯೋಚಿಸು ಇದಕ್ಕಾಗಿ ಎಷ್ಟು ಮರಗಳ ಮಾರಣಹೋಮವಾಗಿರಬಹುದು. ಇದು ಒಂದು ದಿನದ ಕತೆಯಾದರೆ ಒಂದು ತಿಂಗಳಿಗೆ ಎಷ್ಟು, ಒಂದು ವರ್ಷಕ್ಕೆ ಎಷ್ಟು, ಮತ್ತೆ ಬೆಂಗಳೂರು ದಾಟಿ ಇತರೆ ನಗರಗಳಲ್ಲಿ ಮುದ್ರಣವಾಗುವ ಪೇಪರುಗಳನ್ನು ಲೆಕ್ಕಕ್ಕೆ ತೆಗೆದುಕೊಂಡರೆ ಎಷ್ಟು ಮರಗಳು ಉರುಳಬಹುದು? "


"ಮಾಲೀಕರ ವ್ಯಾಪರಿ ಬುದ್ದಿಗೆ ಇದೆಲ್ಲಾ ತಲೆಗೆ ಹತ್ತದಿದ್ದರೂ ಜವಾಬ್ದಾರಿಯುತ ಸ್ಥಾನದಲ್ಲಿ ಕೂತ ಸಂಪಾದಕರಿಗೆ ಇದರ ಪರಿಜ್ಞಾನವಿದೆಯೇ? ತಾವು ಆಕಾಶದಿಂದಲೇ ಉದುರಿದವರಂತೆ ನಮ್ಮಂಥ ಜನಸಾಮಾನ್ಯರೆದುರು ವರ್ತಿಸುವ ವರದಿಗಾರರಿಗೆ ಇದರ ಅರಿವಿದೆಯಾ? ಮಾಡೋದು ಅನಾಚಾರ, ಮನೆಮುಂದೆ ಬೃಂದಾವನ" ಎನ್ನುವಂತೆ ಯಾವುದೇ ಭಾಷೆಯ ಪತ್ರಿಕೆಯನ್ನು ತೆರೆದುನೋಡಿದರೂ ಕಾಡನ್ನು ಉಳಿಸಬೇಕು ಬೆಳಸಬೇಕು ಅಂತ ಅಂಕಿಅಂಶದ ಸಮೇತ ನೂರಾರು ಸಾವಿರಾರು ತರಾವರಿ ಬೈಲೈನುಗಳುಳ್ಳ ಲೇಖನಗಳು."

"ಇಷ್ಟೆಲ್ಲಾ ಮುದ್ರಿಸುವ ಇವರು ಇದನ್ನು ಹಂಚುವ ನಮ್ಮ ಬಗ್ಗೆ, ನಮ್ಮ ಹುಡುಗರ ಬಗ್ಗೆ ಏನಾದರೂ ಯೋಚಿಸುತ್ತಾರಾ? ನಮ್ಮ ಹುಡುಗರೆಲ್ಲಾ ಹೆಚ್ಚೆಂದರೆ ಹೈಸ್ಕೂಲು ಕಾಲೇಜು ಓದುತ್ತಿರುವ ಬಡ ಮಕ್ಕಳು. ಅವರ ಸೈಕಲ್ಲುಗಳಲ್ಲಿನ ಕ್ಯಾರಿಯರುಗಳಲ್ಲಿ 24 ಪುಟಗಳ ನೂರು ಪೇಪರುಗಳನ್ನು ಜೋಡಿಸಿಇಟ್ಟು ಕಳಿಸಬಹುದು. ಏಕದಂ ನಲವತ್ತೆಂಟು, 60 ಪುಟಗಳ ನೂರು ಪೇಪರುಗಳನ್ನು ಇಟ್ಟು ಕಳಿಸಲು ಸಾಧ್ಯವೇ? ಕಷ್ಟಪಟ್ಟು ಇಟ್ಟು ಕಳಿಸಿದರೂ ಅದು ಬೀಳುವುದಿಲ್ಲವೆಂದು ಏನು ಗ್ಯಾರಂಟಿ, ಈಗ ಮಳೆಗಾಲ ಬೇರೆ. ಹುಡುಗರು ಜಾರಿ ಬಿದ್ದರೆ ಎಲ್ಲಾ ಪೇಪರುಗಳು ರಸ್ತೆಯ ನೀರು ಪಾಲು. ಅದನ್ನೇ ಸರಿಮಾಡಿಕೊಂಡು ಹೋಗಿ ಹಾಕಿಬಂದರೆ ನಿಮ್ಮ ಹುಡುಗ ಪೇಪರನ್ನು ನೀರಲ್ಲಿ ಎಸೆದು ಹೋಗಿದ್ದಾನೆ ಅಂತ ಗ್ರಾಹಕರಿಂದ ಫೋನು. ದಿನವೂ ಇಷ್ಟು ದಪ್ಪನಾದ ಪೇಪರುಗಳನ್ನು ಸೈಕಲ್ಲಿನ ಕ್ಯಾರಿಯರಿನಲ್ಲಿ ಕಷ್ಟಪಟ್ಟು ತುಂಬಿ ಕಳಿಸಿದರೆ ಸರಿಯಾಗಿ ಬರುವ ಹುಡುಗರು ತಪ್ಪಿಸಿಕೊಳ್ಳಲು ಪ್ರಾರಂಭಿಸುತ್ತಾರೆ. "ಕೇಳಿದರೆ ಹೋಗಣ್ಣ, ಇಷ್ಟೊಂದು ಪೇಪರುಗಳನ್ನು ಕ್ಯಾರಿಯರಿನಲ್ಲಿ ಇಟ್ಟರೆ ಸೈಕಲ್ ತುಳಿಯಲು ಆಗೊಲ್ಲ, ದಿಣ್ಣೆಗಳಂತೂ ತಳ್ಳಿಕೊಂಡೇ ಹೋಗಬೇಕು. ನಿಮ್ಮ ಬೀಟ್ ಮುಗಿಸುವ ಹೊತ್ತಿಗೆ ಸುಸ್ತಾಗಿಬಿಟ್ಟಿರುತ್ತೀನಿ, ನೀವು ಕೊಡುವ ಇಷ್ಟು ಕಡಿಮೆ ಸಂಬಳಕ್ಕೆ ಇಷ್ಟೆಲ್ಲಾ ಕಷ್ಟಪಡಬೇಕಾ ಅಂತ ನಮ್ಮ ಮನೆಯಲ್ಲಿ ಬೈಯ್ಯುತ್ತಾರೆ, ಪೇಪರ್ ಕೆಲಸಕ್ಕೆ ಹೋಗೋದು ಬೇಡ ಅಂತಾರೆ,.....ಹೀಗೆ ಅನೇಕ ಕಾರಣಗಳನ್ನು ಕೊಟ್ಟು ಪೇಪರ್ ಹಾಕುವ ಕೆಲಸ ಬಿಟ್ಟುಬಿಡುತ್ತಾರೆ. ಅವರಿಲ್ಲದ ಮೇಲೆ ನಾವು ಎಷ್ಟು ಬೀಟುಗಳಿಗೆ ಅಂತ ಹೋಗಲಿಕ್ಕಾಗುತ್ತದೆ. ಇದೆಲ್ಲಾ ಆಗುವುದು ಈ ರೀತಿ ಪುಟಗಳು ಜಾಸ್ತಿ ಬರುವುದರಿಂದ ತಾನೆ! ಇದೆಲ್ಲ ವಿಚಾರ ಏಸಿ ಚೇಂಬರಿನಲ್ಲಿ ಕುಳಿತ ಮಾಲೀಕರು, ಸಂಪಾದಕರಿಗೆ ಎಲ್ಲಿ ಗೊತ್ತಾಗುತ್ತದೆ. ಈಗ ಹೇಳು ಅವರಲ್ಲಿ ಯಾರಲ್ಲಿಯಾದರೂ ವೃತ್ತಿಧರ್ಮವೆನ್ನುವುದು ಇದೆಯಾ? ಅವರು ಹೀಗೆ ಧಾರಾಳವಾಗಿ ಮುದ್ರಿಸಿಕಳಿಸುವುದನ್ನು ಮುಂಜಾನೆ ನಾಲ್ಕು ಗಂಟೆಗೆ ದುಡಿಯಲು ಬರುವ ನಾವು ಹೀಗೆ ಧಾರಾಳವಾಗಿ ಮುದ್ರಿಸಿದ್ದನ್ನು ತೂಕಕ್ಕೆ ಹಾಕಿ ಲಾಭ ಮಾಡಿಕೊಳ್ಳುವುದರಲ್ಲಿ ತಪ್ಪೇನಿದೆ.?"

ಅವನು ಮಾತು ನಿಲ್ಲಿಸಿದರೂ ಅವನ ಕಣ್ಣುಗಳಲ್ಲಿ ಕೋಪವಿತ್ತು.



"ಇಷ್ಟೆಲ್ಲಾ ವಿಚಾರಗಳು ನಮಗೇ ಗೊತ್ತೇ ಇರಲ್ಲಿಲ್ಲವಲ್ಲೋ, ನೀನು ಹೇಳಿದ್ದು ಸರಿ. ನಾನು ನಾಳೆಯಿಂದಲೇ ಆ ಇನ್ನೂರು ದಿನಪತ್ರಿಕೆಯನ್ನು ಬುಕ್ ಮಾಡುತ್ತೇನೆ".ಅಂದ ಮೂರ್ತಿ. ಇದೇ ಲೆಕ್ಕಾಚಾರದಲ್ಲಿ ನನ್ನ ಅನೇಕ ವೃತ್ತಿಭಾಂದವರು ಈ ರೀತಿ ಸ್ಕೀಮಿನಲ್ಲಿ ನೂರು ಇನ್ನೂರು ಮುನ್ನೂರು ಪತ್ರಿಕೆಗಳನ್ನು ಪ್ರತಿದಿನ ಬುಕ್ ಮಾಡಿರುವುದು ತಿಳಿಯಿತು. ನಮ್ಮ ಪತ್ರಿಕಾ ಜಗತ್ತು ಯಾವಮಟ್ಟದಲ್ಲಿದೆ ಎಂದು ತಿಳಿದು ನನಗಂತೂ ಬೇಸರವಾಗಿತ್ತು.

ಹದಿನೈದು ವರ್ಷಗಳ ಹಿಂದೆ, 12 ಪುಟಗಳ ಕನ್ನಡ ದಿನಪತ್ರಿಕೆಗಳು, ಮತ್ತು 16 ಪುಟಗಳ ಆಂಗ್ಲ ದಿನಪತ್ರಿಕೆಗಳನ್ನು ನನ್ನ ಸೈಕಲ್ಲಿನ ಕ್ಯಾರಿಯರಿನಲ್ಲಿ ಕಟ್ಟಿಕೊಂಡು ಒಂದು ಗಂಟೆಯಲ್ಲಿ ಎಲ್ಲ ಮನೆಗಳಿಗೂ ತಲುಪಿಸಿ ಮನೆಗೆ ಓಡುತ್ತಿದ್ದ ನಮಗಾಗಲಿ, ನಮ್ಮ ಆಗಿನ ಪೇಪರ್ ಓನರ್[ಏಜೆಂಟುಗಳು]ಗಳಿಗಾಗಲಿ, ಅಥವ ಆಗಿನ ಗ್ರಾಹಕರಿಗಾಗಲಿ ಈ ರದ್ದಿ ಪೇಪರ್ ತೂಕಕ್ಕೆ ಹಾಕುವ ವಿಚಾರದ ಬಗ್ಗೆ ಯಾರು ತಲೆಕೆಡಿಸಿಕೊಳ್ಳುತ್ತಿರಲಿಲ್ಲ. ಗ್ರಾಹಕರಂತೂ ತಮ್ಮ ಮನೆಯ ರದ್ದಿಪೇಪರುಗಳನ್ನು ಆರು ತಿಂಗಳಿಗೆ ಒಂದು ವರ್ಷಕ್ಕೋ ತೂಕಕ್ಕೆ ಹಾಕುತ್ತಿದ್ದರು. ಆಷ್ಟು ಪೇಪರುಗಳನ್ನು ಹಾಕಿದರೂ ಸಿಗುತ್ತಿದ್ದುದ್ದು ಪುಡಿಗಾಸಾಗಿದ್ದರಿಂದ ಯಾರಿಗೂ ಇದರ ಬಗ್ಗೆ ಅಲೋಚನೆಯೇ ಇರಲಿಲ್ಲ. ಆಗಿನ ದಿನಗಳಿಗೂ ಈಗಿನ ದಿನಕ್ಕೂ ಆಗಿರುವ ಬದಲಾವಣೆಯನ್ನು ಕಂಡು ಮನಸ್ಸಿಗೆ ಬೇಸರವೂ ಉಂಟಾಗಿತ್ತು.

ಈಗ ನೀವೇ ಹೇಳಿ. ಇದಕ್ಕೆಲ್ಲಾ ಕಾರಣಕರ್ತರೂ ಯಾರು? ಪ್ರಪಂಚದಲ್ಲಿ ನಡೆಯುವ ಎಲ್ಲಾ ವಿದ್ಯಮಾನಗಳ ಮಾನ ಹರಾಜು ಹಾಕುವ ಪತ್ರಿಕೆಯವರು ಯಾವಮಟ್ಟದಲ್ಲಿದ್ದಾರೆಂದು. ಈ ವಿಚಾರದಲ್ಲಿ ನಿಮ್ಮ ಅಭಿಪ್ರಾಯವೇನು. ದಯವಿಟ್ಟು ನಿಮ್ಮ ಅಭಿಪ್ರಾಯಗಳನ್ನು ತಿಳಿಸಿ.
ನನ್ನ "ವೆಂಡರ್ ಕಣ್ಣು" ಪುಸ್ತಕದ ಒಂದು ಲೇಖನವಾಗಬೇಕಾಗಿದ್ದ ಇದನ್ನು ನಾನೇ ಆ ಸಮಯದಲ್ಲಿ ಏಕೋ ಬೇಡವೆನಿಸಿ ಪುಸ್ತಕಕ್ಕೆ ಸೇರಿಸಿರಲಿಲ್ಲ. ಮೂರು ವರ್ಷಗಳ ಹಿಂದೆ ಈ ಪುಟಗಳ ಹಾವಳಿ ಇಷ್ಟಿರಲಿಲ್ಲ. ನಿತ್ಯ 40-50 ಪುಟಗಳನ್ನು ಜಾಹಿರಾತಿಗಾಗಿಯೇ ಮುದ್ರಿಸುವ ಟೈಮ್ಸ್ ಆಫ್ ಇಂಡಿಯ ಆಂಗ್ಲ ಪತ್ರಿಕೆ, ಇವತ್ತಿನಿಂದ ಅದರ ಜೊತೆಗೆ 40-48 ಪುಟಗಳಿರುವ ಬೆಂಗಳೂರು ಮಿರರ್ ಎನ್ನುವ ಮತ್ತೊಂದು ಪತ್ರಿಕೆಯನ್ನು ಉಚಿತವಾಗಿ ಟೈಮ್ಸ್ ಜೊತೆಗೆ ಕೊಡಲು ಶುರುಮಾಡಿದೆ. ಬರೋಬರಿ ನೂರುಪುಟಗಳ ಪೇಪರನ್ನು 3-00 ರೂಪಾಯಿಗಳಿಗೆ ಗ್ರಾಹಕರಿಗೆ ಕೊಡಲು ಪ್ರಾರಂಭಿಸಿದೆ. "ಇಷ್ಟು ಪುಟಗಳ ದಿನಪತ್ರಿಕೆಯನ್ನು ನಾವು ಹೇಗೆ ಮನೆಗಳಿಗೆ ಸಪ್ಲೆ ಮಾಡಲು ಸಾಧ್ಯ? ಎನ್ನುವ ಆಕ್ರೋಶ ಎಲ್ಲಾ ದಿನಪತ್ರಿಕೆ ವೆಂಡರುಗಳಲ್ಲಿ ತುಂಬಿಕೊಂಡಿದೆ. ಈ ಕಾರಣದಿಂದಾಗಿ ಈ ಲೇಖನವನ್ನು ನಾನು ಬ್ಲಾಗಿನಲ್ಲಿ ಹಾಕಿದ್ದೇನೆ.

ಲೇಖನ
ಶಿವು.ಕೆ

81 comments:

balasubramanya said...

ಶಿವೂ ನಿಮ್ಮ ಲೇಖನದಿಂದ ಸಂಪಾದಕರ ಕಣ್ಣು ತೆರೆಸಲಿ. ನಾನು ಸುಮಾರು ವರ್ಷಗಳಿಂದ ಈ ಬದಲಾವಣೆ ಗುರುತಿಸಿದ್ದೇನೆ. ಇಂದು ಪತ್ರಿಕೋಧ್ಯಮ ಹಣ ಸುಲಿಗೆಗೆ ಒಂದು ವೃತ್ತಿಯಾಗುತ್ತಿರುವುದು ಶೋಚನೀಯ. ಊರಿಗೆಲ್ಲಾ ಬುದ್ದಿಹೇಳುವ ಮಂದಿ ಪತ್ರಿಕೆಗಳನ್ನು ಬೆಳೆಸಲು ಕ್ಷಮಿಸಿ ಮಾರಾಟಮಾಡಲು ಅನುಸರಿಸುತ್ತಿರುವ ಮಾರ್ಗ ಓದುಗರಿಗೆ ಮಾಡುವ ಮೋಸವೇ ಸರಿ. ಇದಕ್ಕೆ ಪೂರಕವಾಗಿ ಇಂದು ಪತ್ರಿಕಾ ಮಾಧ್ಯಮ ದೊಡ್ಡ ದೊಡ್ಡ ಬ್ಯುಸಿನೆಸ್ಸ್ ಮ್ಯಾಗ್ನೆಟ್ ಗಳ ಕೈಲಿ ಇರುವುದು ಕಾರಣ ಅಲ್ವ!!! ಇಂದು ಅವರಿಗೆ ತಮ್ಮ ಜಾಹೀರಾತುದಾರರ , ತಮ್ಮ ವ್ಯವಹಾರದ ಹಿತಾಸಕ್ತಿ ಕಾಯುವುದಕ್ಕಾಗಿ ಮಾತ್ರ ಪತ್ರಿಕೆ ಬೇಕು ಓದುಗರಿಗಾಗಿ ಮಾತ್ರ ಅಲ್ಲ. ಅಲ್ವ ಒಟ್ಟಿನಲ್ಲಿ ನಿಮ್ಮ ಬರಹ ಒಂದು ಚಾಟಿಬೀಸಿದಂತಿದೆ.

balasubramanya said...

ಅಂದಹಾಗೆ ನಿಮ್ಮ ನಾಗರಹೊಳೆ ಪ್ರವಾಸದ ಎರಡನೇ ಕಂತು ಎಲ್ಲಿ . ನಿಮ್ಮ ಲೇಖನದ ನಂತರ ಕಾಡಿನ ಬಗ್ಗೆ ನಾನು ಬರೆಯಬೇಕು >>>>...........!!!!!

ಮನದಾಳದಿಂದ............ said...

ಶಿವು ಅವರೇ,
ಪತ್ರಿಕಾ ಧರ್ಮ ಇಂದಿನ ದಿನ ಮರೆಯಾಗಿ ಹೋಗಿದೆ. ಯಾವ ಪತ್ರಿಕಾ ಸಿಬ್ಬಂದಿಗೂ ಕಾಳಜಿಯಿಲ್ಲ. ಜಾಹಿರಾತಿಗಾಗಿ ಪತ್ರಿಕೆ ಓಡುವ ಕಾಲ ಇದು!
ಇದರ ಮಧ್ಯೆ ನಿಮಗೆ ಲಾಭದ ವ್ಯಾಪಾರ ಸಿಕ್ಕಿದೆ. ಬಿಡಬೇಡಿ, ನೀವು ಕಷ್ಟಪಡುವವರು, ಸ್ವಲ್ಪ ಲಾಭ ಮಾಡಿಕೊಳ್ಳಿ.
ಇನ್ನು ಈಗ ಹೊಸತಾಗಿ ಶುರುವಾದ ಪತ್ರಿಕೆ ಲಾಭದ ಲೆಕ್ಕಾಚಾರದಲ್ಲೇ ಆರಂಭಗೊಂಡಿದೆ. ಅದರ ಆಸೆಯ ಕಣ್ಣು ಬರುವ ಜಾಹಿರಾತಿನ ಮೇಲೆ. ಅರ್ಥಾತ್ ಲಾಭದ ಮೇಲೆ. ಅಲ್ಲೆಲ್ಲಿದೆ ಪತ್ರಿಕಾ ಧರ್ಮ?

ಹಂಚಿಕೊಂಡಿದ್ದಕ್ಕೆ ಧನ್ಯವಾದಗಳು.

shivu.k said...

ನಿಮ್ಮೊಳಗೊಬ್ಬ ಬಾಲು ಸರ್,

ನನ್ನೆಲ್ಲ ಲೇಖನಗಳು ಸರಳವಾಗಿ ಕೊಂಚ ಹಾಸ್ಯದಿಂದ ಕೂಡಿದಂತೆ ಬರೆಯಲು ಯತ್ನಿಸುತ್ತಿರುತ್ತೇನೆ. ಆದ್ರೆ ಇಲ್ಲಿ ಕೊಂಚ ನೀವು ಹೇಳಿದಂತೆ ನೇರವಾಗಿ ಬರೆದಿದ್ದೇನೆ. ನಮ್ಮಲ್ಲಿ ಬರುವ ಪ್ರತಿನಿಧಿಗಳಂತೂ ನಿತ್ಯ ನಮ್ಮ ಕೈಲಿ ಬೈಸಿಕೊಂಡೇ ಹೋಗುತ್ತಾರೆ. "ಇದು ನಮ್ಮ ಕೈಲಿಲ್ಲ. ನಾವು ಸಂಬಳಕ್ಕಿರುವವರು, ಮೇಲಿನವರು ಏನು ಹೇಳುತ್ತಾರೆ ಅದರಂತೆ ನಡೆಯುವುದು ನಮ್ಮ ಕೆಲಸವೆನ್ನುತ್ತಾರೆ." ಆಗ ನಮ್ಮ ಸಿಟ್ಟು ಮತ್ತಷ್ಟು ಹೆಚ್ಚಾಗಿ " ನಿಮ್ಮ ಮೇಲಿನವನನ್ನು ಮುಂಜಾನೆ ಐದುಗಂಟೆಗೆ ಕರೆತನ್ನಿ. ನಮ್ಮ ಜೊತೆ ಪುಟ್‍ಬಾತ್ ಮೇಲೆ ಕುಳಿತು ಸಪ್ಲಿಮೆಂಟರಿ ಹಾಕಲಿ ಆಗ ಗೊತ್ತಾಗುತ್ತದೆ ನಮ್ಮ ಕಷ್ಟ" ಅಂತ ಬೈದು ಕಳಿಸುತ್ತೇವೆ. ಇದು ಯಾವಾಗ ಸರಿಹೋಗುತ್ತದೆಯೋ ಗೊತ್ತಿಲ್ಲ. ಹೀಗೆ ಮುಂದುವರಿದರೆ ಎಲ್ಲ ದಿನಪತ್ರಿಕೆಗಳು ರದ್ಧಿಸೇರುವುದು ಖಚಿತವೆನಿಸುತ್ತದೆ.
ಉತ್ತಮ ಪ್ರತಿಕ್ರಿಯೆಗೆ ಧನ್ಯವಾದಗಳು.

ಅಂದಹಾಗೆ ಈ ಲೇಖನ ತುಂಬಾ ದಿನದಿಂದ ಕಾಯುತ್ತಿತ್ತು. ಇವತ್ತಿನ ಟೈಮ್ಸ್ ಜೊತೆಗೆ ಬೆಂಗಳೂರು ಮಿರರ್ ಉಚಿತವಾಗಿ ಕೊಡಲು ಪ್ರಾರಂಭಿಸಿದಾಗ ಇನ್ನು ಸುಮ್ಮನಿರಲು ಸಾಧ್ಯವಿಲ್ಲವೆಂದು ಬ್ಲಾಗಿಗೆ ಹಾಕಿಬಿಟ್ಟೆ. ಈ ಕಾರಣದಿಂದಾಗಿ ನಾಗರಹೊಳೆ ಪ್ರವಾಸ ಚಿತ್ರಸಹಿತ ಲೇಖನ ಮುಂದಕ್ಕೆ ಹೋಗಿದೆ. ಮುಂದಿನ ಭಾರಿ ಖಂಡಿತ ಬ್ಲಾಗಿಗೆ ಹಾಕುತ್ತೇನೆ.

ಧನ್ಯವಾದಗಳು.

shivu.k said...

ಮನದಾಳದ ಪ್ರವೀಣ್,

ಇಂದು ಮುಂಜಾನೆ ಪತ್ರಿಕೆ ಹಂಚುವ ಕೆಲಸದಲ್ಲಿ ಎಲ್ಲಾ ಇಂಥ ಮೋಸಗಳೇ ನಡೆಯಲು ಪ್ರಾರಂಭವಾಗಿಬಿಟ್ಟಿವೆ. ನೀವು ಹೇಳಿದಂತೆ ಲಾಭ ಮಾಡಿಕೊಳ್ಳಲು ಮನಸ್ಸಿದ್ದರೂ ಅದು ಕೇವಲ ಹಬ್ಬದೂಟವಾಗುವುದಷ್ಟೇ. ಫಲ ಕೊಡುವ ಮರವನ್ನು ಹಣ್ಣಿಗಾಗಿ ಉಪಯೋಗಿಸಬೇಕೇ ಹೊರತು, ಬೇಗ ಸಾಹುಕಾರರಾಗಬೇಕೆಂದು ಮರವನ್ನು ಕಡಿದು ಮಾರಿಬಿಟ್ಟರೆ ಗತಿಯೇನು? ಮುಂದಿನ ಭವಿಷ್ಯವೇನು ಎನ್ನುವುದನ್ನು ಯೋಚಿಸಬೇಕಲ್ಲವೇ.

ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು.

ಡಿ.ಎಸ್.ರಾಮಸ್ವಾಮಿ said...

a very good article. hope it will just opend our closed eyeson the subject u delt..

ಬಾಲು ಸಾಯಿಮನೆ said...

ಉತ್ತಮ ಲೇಖನ. ನಿಮ್ಮ ಲೇಖನ ಒಂದು ಕಥೆ ಹೇಳುತ್ತಾ ಹೋದರೆ, ಚಿತ್ರಗಳು ಇನ್ನೊಂದೇ ಕಥೆ ಹೇಳುತ್ತಿವೆ. ಧನ್ಯವಾದಗಳು.

shivu.k said...

ನಾಗೇಶ್ ಹೆಗಡೆ ಹೇಳುತ್ತಾರೆ:

ಚೆನ್ನಾಗಿದೆ ನಿಮ್ಮ ಲೆಕ್ಕಾಚಾರ. ಯಾವುದೇ ದಿನ ಪತ್ರಿಕೆಯ ಮುಖ ಪುಟದಲ್ಲಿ ಬರಬೇಕಾದ ವಿಚಾರ ಇದು. ಈಚೆಗೆ ನವ ಕರ್ನಾಟಕ ಪುಸ್ತಕ ಬಿಡುಗಡೆ ಸಂದರ್ಭದಲ್ಲಿ ಇದೆ ವಿಷಯ ಎತ್ತಿದ್ದೆ. ಈಬಗೆಯ ಕಾಗದ ಬಳಕೆಯ ಕೃತ್ಯಕ್ಕೆ ಪರಿಹಾರ ರೂಪವಾಗಿ ನಾವು ಒಂದು 'ಪುಸ್ತಕ ವನ' ರೂಪಿಸುವ ನಿಟ್ಟಿನಲ್ಲಿ ಆರಂಭದ ಹೆಜ್ಜೆ ಇಡೋಣ ಎಂದಾಗ ಆರ್ ಎಸ ರಾಜಾರಾಮ ಉತ್ಸಾಹದಿಂದ ಅಂದು ಬಿಡುಗಡೆ ಕಂಡ ಎರಡು ಪುಸ್ತಕಗಳಿಗೆ ಒಂದೊಂದು ಗಿಡ ಮರ ಬೆಳೆಸುವುದಾಗಿ ವಾಗ್ದಾನ ಮಾಡಿದರು. ಕ್ರಮೇಣ ಎಲ್ಲ ಪುಸ್ತಕ ಪ್ರಕಾಶಕರ ಬಲಿ ಹೋಗಿ ನಂತರ ಮುಂದೆ 'ಪತ್ರಿಕಾ ವನ' ಮಾಡುವ ಯೋಜನೆ ನಮ್ಮದಿತ್ತು. ಈ ಮಧ್ಯೆ ನಿಮ್ಮ ಸೂಚನೆಯ ಪ್ರಕಾರ ಇನ್ನೂ ಮುಂದೆ 'ಜಾಹೀರಾತು ವನ ' ಕೂಡ ಸಿದ್ಧವಾದರೆ ಅದರ ಮೂಲ ಶ್ರೇಯ ನಿಮಗೆ ಸೇರುತ್ತದೆ.
ನಮ್ಮೊಂದಿಗೆ ಕೈ ಜೋಡಿಸಿ.

Sushrutha Dodderi said...

ನಿಜ ಶಿವು.. ಟೈಮ್ಸಾಫಿಂಡಿಯಾವನ್ನ ಈಗ ತೂಕಕ್ಕೆ ಹಾಕಿದ್ರೆ ಅದಕ್ಕೆ ಕೊಟ್ಟ 3 ರೂಪಾಯಿಗಿಂತ ಜಾಸ್ತಿ ಬರುತ್ತೆ! ಮತ್ತೆ ಈ ಉಪದ್ವ್ಯಾಪ ನೋಡಿ: ಮುಂಚೆಯಾದ್ರೆ ಬೆಂಗಳೂರ್ ಮಿರರ್‌‌ನ ದುಡ್ಡು ಕೊಟ್ಟು ಎಷ್ಟು ಜನ ತಗೋಳ್ತಾರೋ ಅಷ್ಟು ಪತ್ರಿಕೆ ಹೋಗ್ತಿತ್ತು; ಈಗ ಹಾಗಲ್ಲ, ಜನ ಓದ್ತಾರೋ ಬಿಡ್ತಾರೋ ಪ್ರಶ್ನೆಯೇ ಇಲ್ಲ, ಟೈಮ್ಸ್‌ಗೆ ಎಷ್ಟು ಸರ್ಕುಲೇಶನ್ ಇದೆಯೋ ಅಷ್ಟು ಬೆಂಗಳೂರ್ ಮಿರರ್ ಸಹ ಸರ್ಕುಲೇಟ್ ಆಗುತ್ತೆ! ಎಷ್ಟು ಕಾಗದ ಬೇಕಾಯ್ತು ಅದಕ್ಕೆ..

ಶ್ರೀನಿಧಿ.ಡಿ.ಎಸ್ said...

ಒಳ್ಳೆಯ ಬರಹ..

shivu.k said...

ಬೇಲೂರು ಸುಧರ್ಶನರವರ ಪ್ರತಿಕ್ರಿಯೆ.

dear shivu, it is a really good piece of writing. I have stopped publishing my collection of short stories, poems and ther articles, as I thought I would be saving many trees, which otherwise would have to be cut for my books. I was talking the same thing with my friends too. Environment would be saved if newspapers either use recycled paper, or stop using newly produced paper.
I thank you for an enlightening article. You have almost written everything which I had thought about to write. It does not matter who writes, but the content.
Regards

Beluru Sudarshana

ಸವಿಗನಸು said...

ಶಿವು ಸರ್,
ಪತ್ರಿಕೆ ಹಂಚುವವರ ಕಷ್ಟ ತಿಳಿ ಹೇಳಿದ್ದೀರ....
ಲಾಭ ಮಾಡುವ ಯೋಜನೆ ಚೆನ್ನಾಗಿದೆ ಆದರೆ ಅದು ಎಷ್ಟು ದಿನ ಮಾಡಲು ಸಾದ್ಯ....
ಸಂಪಾದಕರು ಎಚ್ಚೆತು ಕೊಳ್ಳಬೇಕು.....
ಒಳ್ಳೆ ಲೇಖನ...
ಉತ್ತಮ ಬರಹ....

sunaath said...

ಶಿವು,
ಪತ್ರಿಕೋದ್ಯಮಿಗಳಿಗೆ ದುಡ್ಡು ಮಾಡಿಕೊಳ್ಳುವದೊಂದೇ ಗೊತ್ತು. ಈ ಹುನ್ನಾರವನ್ನು ಚೆನ್ನಾಗಿ ಬಯಲಿಗೆಳೆದಿದ್ದೀರಿ. ಅಭಿನಂದನೆಗಳು.

Subrahmanya said...

ಸಂಬಂಧಪಟ್ಟವರು ಅರಿತುಕೊಳ್ಳಲೇಬೇಕಾದ ಲೇಖನ. ನಿಮ್ಮ ಕಳಕಳಿಗೆ ನನ್ನದೂ ಸಹಮತವಿದೆ.

ಮೊನ್ನೆಯ ಪತ್ರಿಕೆಗಳನ್ನು ನೋಡಿದರೆ ಸಮಾಚಾರಕ್ಕಿಂತಲೂ ಸಾಧನಾ ಸಮಾವೇಶದ ಜಾಹಿರಾತುಗಳೇ ತುಂಬಿಕೊಂಡಿದ್ದವು.

umesh desai said...

ಪತ್ರಿಕೆ ಅದಕ್ಕೆ ಸಂಭಂಧವಾಗಿ ಏನೆನೆಲ್ಲ ಹೇಳಿರುವಿರಿ...ಒಳಗನ್ನು ತೆರೆದಿಟ್ಟಿದ್ದೀರಾ ಧನ್ಯವಾದಗಳು.....

shivu.k said...

shivu,


manamuttuvantha lEkhana. khanditavaagiyoo patrikegaLa maalikaru idannu OdabEku.

- sudhindra

ದಿನಕರ ಮೊಗೇರ said...

sampaadakaru chaape kelage tooridare , ee jana rangoli keLage toorikolluttiddare..... aadre idarinda baridaagtaa irodu, bhoomi mattu kaadu alvaa sir.... uttama lekhana.....

ಮನಸು said...

nija nimma maatannu ellaru yochisabeku....sampadakarugaLigomme kaLisi nimma lEkhanavannu.... avara abhiprayavannu kELoNa..

mshebbar said...

A BOLD ARTICLE. ಸುಧಾರಣೆ ತರಬಹುದು ಅನ್ನಿಸುತ್ತೆ.
-mshebbar

shivu.k said...

Dear shivu.,

Thanks for forwarding this mail, we talk about environment and reforestation so on and
soforth, we never have gone thread bear of any issues because of lack of initiative and interest towards our surrounding and the environment and repercussion we need to face in the future, keeping all this this in mind the information which you have forwarded shows each individual's responsibility to work towards in protecting our environment and forest across the world.

This kind of awareness has to be raised in the minds of each individuals and would take up this issue in a valuable debate rather than just reading the information and scrolling the mouse for another mail in Inbox.

once again I thank you for sharing this information.

S. Karthik
Secretary- Service Civil International
Karnataka Group.

Chaithrika said...

Best

ನಾಗರಾಜ್ .ಕೆ (NRK) said...

ಶಿವಣ್ಣ, ತುಂಬಾ ಅರ್ಥಪೂರ್ಣವಾಗಿದೆ. ಸದ್ಯದ ಪರಿಸ್ಥಿತಿಯಲ್ಲಿ ಪ್ರತಿ ಮರವೂ ಬಂಗಾರ,
ಆದರೆ ನಮ್ಮ ಭಾಗಶಃ ಎಲ್ಲ ಅವಶ್ಯಕತೆಗಳು ಮರಗಳನ್ನ ಬೇಡುತ್ತವೆ ಅದು ಬಟ್ಟೆಯೇ ಇರಲಿ ಅಥವಾ ಕಾಗದ ಇತ್ಯಾದಿ.
ಇಷ್ಟೆಲ್ಲಾ ತಿಳಿದಿದ್ದರೂ ನಾವು ಮರಗಳನ್ನ ಕಾಪಾಡಿಕೊಳ್ಳಬೇಕಾದ ಅನಿವಾರ್ಯತೆ ಇದೆ.
ಈ ನಿಮ್ಮ ಬರಹ ಸಂಪಾದಕರ ಮತ್ತು ಪತ್ರಿಕಾ ಮಾಲಿಕರ ಅರಿವಿಗೆ ಬರಲೆಂದು ಆಶಿಸುವೆ ಹಾಗು ಪ್ರತಿ ಓದುಗನಿಗೆ ಇದರ ಬಗ್ಗೆ ಸಂಪಾದಕರಿಗೆ ಪ್ರಶ್ನಿಸುವಂತೆ ಮಾಡಲಿ.
ಒಂದು ಪತ್ರಿಕೆ ಲಾಭದಾಯಕವಾಗಿರಲು ಜಾಹಿರಾತುಗಳು ಅವಶ್ಯಕ ಆದರೂ ಬರೀ ಜಾಹಿರಾತುಗಲಿಗಾಗಿ ಪ್ರತ್ಯೇಕ ಬುಕ್ ಲೆಟ್ ನಷ್ಟು ಕಾಗದ ಹಾಳುಮಾಡುವುದು ಬೇಡ, ಎಲ್ಲವೂ ಇತಿಮಿತಿಯಲ್ಲಿದ್ದರೆ ಚೆಂದ.ಒಳ್ಳೆಯ ಬರಹಕ್ಕೆ ಥ್ಯಾಂಕ್ಸ್.
ನಿಮ್ಮ ಬರಹದಲ್ಲಿನಂತದೆ ಒಂದು ಸಸಿ ನನ್ನಲ್ಲಿಯೂ ಟಿಸಿಳೋಡೆದಾಗ ನಾನು "ಕಾಣದ ನೋವು " ಬರೆದದ್ದು.
http://pennupaper.blogspot.com/2010_05_01_archive.html

Snow White said...

uttama lekhana sir

shivu.k said...
This comment has been removed by the author.
shivu.k said...
This comment has been removed by the author.
ಭಾಶೇ said...

ನಿಜ! ಎಷ್ಟು ಮರಗಳ ಮಾರಣ ಹೋಮ!
ಈ ಪೇಪರ್ ಗಳು ಮಾಡುತ್ತಿರುವುದು ತಪ್ಪು! ಜಾಹಿರಾತುಗಳನ್ನು ಪೇಪರ್ ಮಾಧ್ಯಮದಿಂದಲೇ ತೆಗೆದುಹಾಕಬೇಕು. ಮರ, ಹಣ, ಶ್ರಮ ಎಲ್ಲ ಉಳಿಯುತ್ತದೆ.
ತುಂಬಾ ಚೆಂದಾದ ಚಿಂತೆಗೆ ಹಚ್ಚಿಸುವ ಲೇಖನ!

shivu.k said...

ನಾಗೇಶ್ ಹೆಗಡೆ ಸರ್,

ಇದು ಸದ್ಯದ ಪರಿಸ್ಥಿತಿಯಲ್ಲಿ ನಡೆಯುತ್ತಿರುವ ನಮಗ್ಯಾರಿಗೂ ಇಷ್ಟವಾಗದ ಲೆಕ್ಕಚಾರ. ನೀವು ಹೇಳಿದಂತೆ ನಾನು ಎಲ್ಲ ಪತ್ರಿಕೆಗೂ ಈ ಲೇಖನವನ್ನು ಕಳಿಸಿದ್ದೇನೆ. ಜಾಹಿರಾತಿಗಾಗೇ ಬರುತ್ತಿರುವ ಆಂಗ್ಲ ಪತ್ರಿಕೆಯ ಅಂಗಪತ್ರಿಕೆಯವರಿಗೆ ಕಳಿಸಿದರೆ ಅವರಿಂದಲೂ ಉತ್ತರವಿಲ್ಲ. ಅವರ ಮನೆಯಲ್ಲೇ ಹೀಗೆ ನಡೆದಿರುವುದನ್ನು ಹೇಳಿದರೆ ಅವರು ಹೇಗೆ ತಾನೆ ಪ್ರಕಟಿಸಲು ಒಪ್ಪುತ್ತಾರೆ? ಇನ್ನುಳಿದ ಪತ್ರಿಕೆಗಳದೂ ಪ್ರಕಟಿಸಲಾಗದ್ದಕ್ಕೆ ಮತ್ತೊಂದು ಕತೆ. ಕೆಲವರು ಏಕೆ ಪ್ರಕಟಿಸಲಾಗುವುದಿಲ್ಲವೆಂದು ವಿವರಣೆಯನ್ನೇ ಕೊಡುವುದಿಲ್ಲ. ಮುಂದೊಮ್ಮೆ ಈ ಕಾರಣದಿಂದಾಗಿಯೇ ಪತ್ರಿಕೆಗಳನ್ನು ಹಂಚುವವರು ಇಲ್ಲದೇ ನಿಂತು ಹೋಗಿಬಿಟ್ಟರೆ ಆಗ ಅವರಿಗೆ ಈ ವಿಚಾರದ ಅರಿವಾಗಬಹುದು. ಸದ್ಯ ಈಗ ಪತ್ರಿಕೆಗಳು ಮುದ್ರಣದ ಸ್ಥಳದಿಂದ ಗ್ರಾಹಕನ ಮನೆಗೆ ತಲುಪಿಸುವ ಚಕ್ರಗಳೇ ಇಲ್ಲದಂತೆ ಮಾಡಲು ಅವರಿಗೆ ಅರಿವಿಲ್ಲದಂತೆ ಮಾಡುತ್ತಿದ್ದಾರೆ. ಮುಂದೆ ಚಕ್ರಗಳೇ ಇಲ್ಲದಾಗ ಪತ್ರಿಕೆ ಮುದ್ರಣವಾಗುವ ಸ್ಥಳಗಳಿಗೆ ಗ್ರಾಹಕರು ಬಂದು ಕೊಂಡುಕೊಂಡು ಓದುತ್ತಾರೆಯೇ? ಹಾಗೆ ಆಗುವುದಿಲ್ಲವಾದ್ದರಿಂದ ವಿಧಿಯಿಲ್ಲದೇ ಪತ್ರಿಕೆಯನ್ನು ನಿಲ್ಲಿಸಬೇಕಾದ ಪರಿಸ್ಥಿತಿ ಬರಬಹುದು. ನಮ್ಮೆಲ್ಲಾ ರಿಪೋರ್ಟರುಗಳಿಗೆ, ಡೆಸ್ಕ್ ಆಪರೇಟರುಗಳಿಗೆ ಕೆಲಸವಿಲ್ಲದಂತೆ ಆಗಬಹುದು.

ಮತ್ತೆ ನಿಮ್ಮ ಆ ಕಾರ್ಯಕ್ರಮಕ್ಕೆ ಬಂದಿದ್ದೆ. ನಿಮ್ಮ ಯೋಜನೆಗಳಿಗೆ ನನ್ನ ಸಂಪೂರ್ಣ ಸಹಕಾರವಿದೆ. ನಾನು ಖಂಡಿತ ಕೈ ಜೋಡಿಸುತ್ತೇನೆ.

ನಿಮ್ಮ ಅಭಿಪ್ರಾಯಕ್ಕೆ ನನ್ನ ಧನ್ಯವಾದಗಳು.

shivu.k said...

ಬೆಂಕಿಕಡ್ಡಿ ಡಿ.ಎಸ್.ರಾಮಸ್ವಾಮಿ ಸರ್,

ನನ್ನ ಬ್ಲಾಗಿಗೆ ಸ್ವಾಗತ. ನನ್ನ ಲೇಖನ ಇಷ್ಟವಾಗಿದ್ದಕ್ಕೆ ಧನ್ಯವಾದಗಳು. ನಿಮ್ಮ ಅಭಿಪ್ರಾಯದಂತೆ ನನ್ನ ಆಸೆಯೂ ಅದೇ ಆಗಿದೆ.

shivu.k said...

ಬಾಲು ಸಾಯಿಮನೆ ಸರ್,

ನನ್ನ ಲೇಖನದ ಸತ್ಯಕತೆ ಸರ್. ಸದ್ಯ ಈ ವಿಚಾರವಾಗಿ ಪ್ರಸ್ತುತ ತುಂಬಾ ತೊಂದರೆ ಅನುಭವಿಸುತ್ತಿದ್ದೇವೆ. ಚಿತ್ರಗಳು ಮತ್ತು ಲೇಖನವನ್ನು ಮೆಚ್ಚಿದ್ದಕ್ಕೆ ಧನ್ಯವಾದಗಳು.

shaamala said...

ಶಿವೂ ಅವರೇ,
ನಿಮ್ಮ ಸ್ನೇಹಿತರದ್ದು ಅತ್ಯುತ್ತಮ ಸಲಹೆ. ಟೈಮ್ಸಾಫಿಂಡಿಯಾದಂತಹ ಪೀತ ಪತ್ರಿಕೆಯಲ್ಲಿ ಬರುವ ನಮ್ಮ ಸಂಸ್ಕೃತಿ ವಿರೋಧಕ ಲೇಖನಗಳು, ಚಿತ್ರಗಳು, ಅವರ ಪ್ರಾಪಗಾಂಡ ಇವೆಲ್ಲವೂ ಓದುಗರನ್ನು ತಲುಪುವ ಬದಲು ಸೀದಾ ರದ್ದಿಗೆ ಹೋದರೆ ಎಷ್ಟೋ ಒಳ್ಳೆಯದು. ನಿಮ್ಮ ಹುಡುಗರ ಶ್ರಮವೂ ತಪ್ಪುತ್ತದೆ :)
ದೂರ ದೇಶದಲ್ಲಿದ್ದು ಈ ಪ್ರಕಟಣೆಗಳ ಸೂತ್ರ ಹಿಡಿದಿರುವವರ ದುರಾಲೋಚನೆಗಳಿಗೆ ನಮ್ಮ ದೇಶದ ಮರಗಳು ಬಲಿಯಾಗುತ್ತಿವೆಯಲ್ಲ ಎಂದು ದುಃಖವಾಗುತ್ತದೆ.
ನಮಸ್ಕಾರ,
ಶಾಮಲ

ಬಾಲು said...

ಒಳ್ಳೆಯ ಬರಹ ಶಿವೂ ಅವರೇ,

ನಮ್ಮ ಮನೆಗೂ ಪೇಪರ್ ಬರುತ್ತೆ, ಬರೋಬ್ಬರಿ ೪೦-೫೦ ಪುಟ ಇರುತ್ತೆ, ಮೊದಲ ಮತ್ತೆ ಕೊನೆ ಪುಟ ಓದಿದರೆ ಹೆಚ್ಚು, ಉಳಿದಿದೆಲ್ಲ ವೇಸ್ಟ್.
ಕೆಲ ತಿಂಗಳ ಹಿಂದೆ ಶುರು ವಾದ ದಿ ಏನ್ ಎ, ಪುಟ ಗಳ ಆದರದ ಮೇಲೆ ನೆ ಮಾರ್ಕೆಟಿಂಗ್ ಮಾಡುತ್ತಾ ಇದ್ದಿದ್ದು. ಹೋಗ್ಲಿ ಬಿಡಿ, ಅವರ ಕರ್ಮ, ಅಂದ ಹಾಗೆ ಇವಾಗ ಮತ್ತೊಂದು ಕನ್ನಡ ದಿನ ಪತ್ರಿಕೆ ಶುರು ಯಾಗಿದೆ ಅನ್ಸುತ್ತೆ.

ಒಳ್ಳೆಯ ಬರಹಕ್ಕಾಗಿ ಅಭಿನಂದನೆಗಳು. ಇದನ್ನು ಪತ್ರಿಕೆಗಳಿಗೆ ಕಳುಹಿಸಿ, ಕೊನೆ ಪಕ್ಷ ತಮ್ಮ ತಪ್ಪು ತಿದ್ದಿಕೊಳ್ಳಲು ಪ್ರಯತ್ನಿಸಲಿ.

shivu.k said...
This comment has been removed by the author.
shivu.k said...
This comment has been removed by the author.
shivu.k said...
This comment has been removed by the author.
shridhar said...

shivu ,
Nijavagiyu manamuttuvaMta lekhana .. chennagide .. nimma dani egadaru talupa bekadalli sariyagi talupali ...

PaLa said...

ಅಂಕಿ ಅಂಶಗಳನ್ನೂ ಒಳಗೊಂಡ ಪ್ರಭುದ್ಧ ಲೇಖನ.. ನಿಮ್ಮ ವಿಶ್ಲೇಷಣೆ ತುಂಬಾ ಚೆನ್ನಾಗಿದೆ ಶಿವು. ಜಾಹೀರಾತುಗಳಿಂದ ದಿನಪತ್ರಿಕೆಯೆ ಪುಟ ತುಂಬಿ ತನ್ಮೂಲಕ ಮರಗಳ ಬುಡಕ್ಕೆ ಕೊಡಲಿ ಬೀಳುವುದನ್ನು, ತುಂಬಿದ ಪತ್ರಿಕೆ ವಿತರಿಸುವಲ್ಲಿಯ ಕಷ್ಟವನ್ನೂ ಕಣ್ಣಿಗೆ ಕಟ್ಟುವಂತೆ ತಿಳಿಸಿದ್ದೀರಿ. ನಿಮ್ಮ ಪುಸ್ತಕದಲ್ಲಿ ಈ ಲೇಖನ ಇರಬೇಕಿತ್ತು ಎಂದು ನನ್ನ ಅನಿಸಿಕೆ. ಇರಲಿ, ಈ ಲೇಖನ ಯಾವುದಾದರೂ ಪತ್ರಿಕೆಯಲ್ಲೇ ಪ್ರಕಟವಾದರೂ ಒಳ್ಳೆಯದು.

ಯಾರ್ಯಾರು ಏನೇನು ಪರಿಹಾರ ಸೂಚಿಸ್ತಾರೋ ತಿಳಿದಿಲ್ಲ. ಆದರೆ ನಾನು ಮಾತ್ರ ಸುಮಾರು ಒಂದು ವರ್ಷದಿಂದ ಪೇಪರ್ ಕೊಳ್ಳುವುದನ್ನು ನಿಲ್ಲಿಸಿ, ಇಂಟರ್ನೆಟ್ಟಿನಲ್ಲಿಯೇ ಕಣ್ಣಾಡಿಸುತ್ತಿದ್ದೇನೆ. ಇದೂ ಪೂರ್ತಿ ಪರಿಹಾರ ಅಂತ ಅಲ್ಲ, ಆದರೂ ನನ್ನ ಮಟ್ಟಿಗೆ ನಿಜ..

shivu.k said...

ಬೆಂಕಿಕಡ್ಡಿ ಡಿ.ಎಸ್.ರಾಮಸ್ವಾಮಿ ಸರ್,

ನನ್ನ ಬ್ಲಾಗಿಗೆ ಸ್ವಾಗತ. ನನ್ನ ಲೇಖನ ಇಷ್ಟವಾಗಿದ್ದಕ್ಕೆ ಧನ್ಯವಾದಗಳು. ನಿಮ್ಮ ಅಭಿಪ್ರಾಯದಂತೆ ನನ್ನ ಆಸೆಯೂ ಅದೇ ಆಗಿದೆ.

shivu.k said...

ಬಾಲು ಸಾಯಿಮನೆ ಸರ್,

ನನ್ನ ಲೇಖನದ ಸತ್ಯಕತೆ ಸರ್. ಸದ್ಯ ಈ ವಿಚಾರವಾಗಿ ಪ್ರಸ್ತುತ ತುಂಬಾ ತೊಂದರೆ ಅನುಭವಿಸುತ್ತಿದ್ದೇವೆ. ಚಿತ್ರಗಳು ಮತ್ತು ಲೇಖನವನ್ನು ಮೆಚ್ಚಿದ್ದಕ್ಕೆ ಧನ್ಯವಾದಗಳು.

shivu.k said...
This comment has been removed by the author.
Guruprasad said...

thumba chennagide baraha

shivu.k said...

ಬಾಲು ಸಾಯಿಮನೆ ಸರ್,

ನನ್ನ ಲೇಖನದ ಸತ್ಯಕತೆ ಸರ್. ಸದ್ಯ ಈ ವಿಚಾರವಾಗಿ ಪ್ರಸ್ತುತ ತುಂಬಾ ತೊಂದರೆ ಅನುಭವಿಸುತ್ತಿದ್ದೇವೆ. ಚಿತ್ರಗಳು ಮತ್ತು ಲೇಖನವನ್ನು ಮೆಚ್ಚಿದ್ದಕ್ಕೆ ಧನ್ಯವಾದಗಳು.

shivu.k said...

ನಾಗೇಶ್ ಹೆಗಡೆ ಸರ್,

ಇದು ಸದ್ಯದ ಪರಿಸ್ಥಿತಿಯಲ್ಲಿ ನಡೆಯುತ್ತಿರುವ ನಮಗ್ಯಾರಿಗೂ ಇಷ್ಟವಾಗದ ಲೆಕ್ಕಚಾರ. ನೀವು ಹೇಳಿದಂತೆ ನಾನು ಎಲ್ಲ ಪತ್ರಿಕೆಗೂ ಈ ಲೇಖನವನ್ನು ಕಳಿಸಿದ್ದೇನೆ. ಜಾಹಿರಾತಿಗಾಗೇ ಬರುತ್ತಿರುವ ಆಂಗ್ಲ ಪತ್ರಿಕೆಯ ಅಂಗಪತ್ರಿಕೆಯವರಿಗೆ ಕಳಿಸಿದರೆ ಅವರಿಂದಲೂ ಉತ್ತರವಿಲ್ಲ. ಅವರ ಮನೆಯಲ್ಲೇ ಹೀಗೆ ನಡೆದಿರುವುದನ್ನು ಹೇಳಿದರೆ ಅವರು ಹೇಗೆ ತಾನೆ ಪ್ರಕಟಿಸಲು ಒಪ್ಪುತ್ತಾರೆ? ಇನ್ನುಳಿದ ಪತ್ರಿಕೆಗಳದೂ ಪ್ರಕಟಿಸಲಾಗದ್ದಕ್ಕೆ ಮತ್ತೊಂದು ಕತೆ. ಕೆಲವರು ಏಕೆ ಪ್ರಕಟಿಸಲಾಗುವುದಿಲ್ಲವೆಂದು ವಿವರಣೆಯನ್ನೇ ಕೊಡುವುದಿಲ್ಲ. ಮುಂದೊಮ್ಮೆ ಈ ಕಾರಣದಿಂದಾಗಿಯೇ ಪತ್ರಿಕೆಗಳನ್ನು ಹಂಚುವವರು ಇಲ್ಲದೇ ನಿಂತು ಹೋಗಿಬಿಟ್ಟರೆ ಆಗ ಅವರಿಗೆ ಈ ವಿಚಾರದ ಅರಿವಾಗಬಹುದು. ಸದ್ಯ ಈಗ ಪತ್ರಿಕೆಗಳು ಮುದ್ರಣದ ಸ್ಥಳದಿಂದ ಗ್ರಾಹಕನ ಮನೆಗೆ ತಲುಪಿಸುವ ಚಕ್ರಗಳೇ ಇಲ್ಲದಂತೆ ಮಾಡಲು ಅವರಿಗೆ ಅರಿವಿಲ್ಲದಂತೆ ಮಾಡುತ್ತಿದ್ದಾರೆ. ಮುಂದೆ ಚಕ್ರಗಳೇ ಇಲ್ಲದಾಗ ಪತ್ರಿಕೆ ಮುದ್ರಣವಾಗುವ ಸ್ಥಳಗಳಿಗೆ ಗ್ರಾಹಕರು ಬಂದು ಕೊಂಡುಕೊಂಡು ಓದುತ್ತಾರೆಯೇ? ಹಾಗೆ ಆಗುವುದಿಲ್ಲವಾದ್ದರಿಂದ ವಿಧಿಯಿಲ್ಲದೇ ಪತ್ರಿಕೆಯನ್ನು ನಿಲ್ಲಿಸಬೇಕಾದ ಪರಿಸ್ಥಿತಿ ಬರಬಹುದು. ನಮ್ಮೆಲ್ಲಾ ರಿಪೋರ್ಟರುಗಳಿಗೆ, ಡೆಸ್ಕ್ ಆಪರೇಟರುಗಳಿಗೆ ಕೆಲಸವಿಲ್ಲದಂತೆ ಆಗಬಹುದು.

ಮತ್ತೆ ನಿಮ್ಮ ಆ ಕಾರ್ಯಕ್ರಮಕ್ಕೆ ಬಂದಿದ್ದೆ. ನಿಮ್ಮ ಯೋಜನೆಗಳಿಗೆ ನನ್ನ ಸಂಪೂರ್ಣ ಸಹಕಾರವಿದೆ. ನಾನು ಖಂಡಿತ ಕೈ ಜೋಡಿಸುತ್ತೇನೆ.

ನಿಮ್ಮ ಅಭಿಪ್ರಾಯಕ್ಕೆ ನನ್ನ ಧನ್ಯವಾದಗಳು.

ವನಿತಾ / Vanitha said...

ಅಂಕಿ-ಅಂಶಗಳಿಂದ ಕೂಡಿದ ವಿಚಾರಪೂರ್ಣ ಲೇಖನ. ಸಂಪಾದಕರಿಗೆ ನಿಮ್ಮ ಬರಹ ಅರ್ಥ ಆದರೂ ಕೂಡ ಅವರು ಏನು ಚೇಂಜ್ ತರಲಿಕ್ಕಿಲ್ಲ.
ಯಾಕೆಂದರೆ ಅವರ ಕಣ್ಣು Paperನ circulation ಮೇಲೆಯೇ ಇರುತ್ತದಲ್ಲ!!!

ಸಾಗರದಾಚೆಯ ಇಂಚರ said...

ಶಿವೂ ಸರ್
ಉತ್ತಮ ಲೇಖನ
ಬಹಳಷ್ಟು ಚಿಂತನೆಗೆ ಒಳಪಡಿಸುತ್ತದೆ
ಹೇಳಬೇಕಾದ ಅಭಿಪ್ರಾಯವೆಲ್ಲ ಎಲ್ಲರೂ ಹೇಳಿದ್ದಾರೆ
ನಿಜಕ್ಕೂ ಅದ್ಭುತ ಬರಹ

ಸೀತಾರಾಮ. ಕೆ. / SITARAM.K said...

ಅರ್ಥಪೂರ್ಣ ಚಿಂತನದ ಲೇಖನ!
ಇದನ್ನು ಪತ್ರಿಕಾಪ್ರಕಟನೆಗೆ ಏಕೆ ಕಳಿಸಬಾರದು?

shivu.k said...

ಸುಶ್ರುತ,

ಈಗ ಹೊಸ ಲೆಕ್ಕ ಗೊತ್ತಾ, ಶುಕ್ರವಾರದ ಟೈಮ್ಸ್ ಅಪ್ ಇಂಡಿಯ[ಉಚಿತ ಮಿರರ್ ಜೊತೆ] ತೂಕಕ್ಕೆ ಹಾಕಿದಾಗ ೪೫೦ ಗ್ರಾಂ ಬರುತ್ತೆ. ಅದರ ಮೂರು ಪತ್ರಿಕೆಯನ್ನು ತೂಕಕ್ಕೆ ಹಾಕಿದಾಗ ೧೩೫೦ ಗ್ರಾಂ ಬರುತ್ತೆ. ಕೇಜಿಗೆ ಎಂಟು ರೂಪಾಯಿ ಇದೆ. ೧೩೫೦ ಗ್ರಾಂಗೆ ೧೦-೮೦ ಪೈಸೆ ಸಿಗುತ್ತೆ. ೯ ರೂಪಾಯಿ ಬಂಡವಾಳಕ್ಕೆ ೧-೮೦ ಪೈಸೆ ಲಾಭ. ನೀವು ವ್ಯಾಪಾರ ಮಾಡಿದರೆ. ನಾವು ಇದನ್ನು ಮಾಡಿದರೆ ನಮಗೆ ಕಮಿಷನ್ ಹಣವೂ ಉಳಿಯುತ್ತದೆ.

ಮುಂದೆ ಏನೇನು ಆಗುತ್ತೋ ಗೊತ್ತಿಲ್ಲ...
ಪ್ರತಿಕ್ರಿಯೆಗೆ ಧನ್ಯವಾದಗಳು.

shivu.k said...

ಶ್ರಿನಿಧಿ,

ಥ್ಯಾಂಕ್ಸ್..

shivu.k said...

ಬೇಲೂರು ಸುಧರ್ಶನ ಸರ್,

ನಿಮ್ಮ ಉತ್ತಮ ಪ್ರತಿಕ್ರಿಯೆಗೆ ಧನ್ಯವಾದಗಳು. ಪರಸರ ಉಳಿಸಲು ನಿಮ್ಮ ಪುಸ್ತಕ ಪ್ರಕಟಣೆಯನ್ನೇ ನಿಲ್ಲಿಸಿರುವಂತದ್ದು ಉತ್ತಮ ವಿಚಾರವೇ ಸರಿ ಎಂದು ನನ್ನ ಭಾವನೆ. ನಿಮ್ಮ ಆಶಯಕ್ಕೆ ನನ್ನ ಅಭಿನಂದನೆಗಳು.

shivu.k said...

ಸವಿಗನಸು ಮಹೇಶ್ ಸರ್,

ನಮ್ಮ ಬೆಳಗಿನ ಕಷ್ಟಗಳು ಇಷ್ಟಕ್ಕೆ ನಿಂತಿಲ್ಲ. ನೀವು ಹೇಳಿದಂತೆ ನನ್ನ ಉದ್ದೇಶ ಕೊನೆಪಕ್ಷ ನಮ್ಮ ಸಂಪಾದಕರು ಈ ನಿಟ್ಟಿನಲ್ಲಿ ಯೋಚಿಸಿದರೆ ಒಳ್ಳೆಯದು.
ನಿಮ್ಮ ಅಭಿಪ್ರಾಯಕ್ಕೆ ಧನ್ಯವಾದಗಳು.

shivu.k said...

ಸುನಾಥ್ ಸರ್,

ಪತ್ರಿಕೆಯವರು, ಅದರಲ್ಲೂ ಮೇಲಿನವರ ಉದ್ದೇಶ ಈಗ ಹಣ ಮಾಡುವುದೇ ಆಗಿದೆ. ಮುಂದೆ ಮತ್ತಷ್ಟು ವಿಚಾರಗಳನ್ನು ತೆರೆದಿಡಲು ಪ್ರಯತ್ನಿಸುತ್ತೇನೆ. ಧನ್ಯವಾದಗಳು.

shivu.k said...

ಸುಬ್ರಮಣ್ಯ ಸರ್,

ಈ ಲೇಖನವನ್ನು ಸಂಭಂದಪಟ್ಟವರು ಗಮನಿಸಲೆಂದೆ ಬರೆದಿದ್ದೇನೆ. ಆದ್ರೆ ಯಾಕೋ ಇದಕ್ಕೆ ಅವರಿಂದ ಪ್ರತಿಕ್ರಿಯೆ ಬರುತ್ತಿಲ್ಲ. ಬಹುಶಃ ಅವರಿಗೆ ಲೇಖನ ತಲುಪಿಲ್ಲದಿರಬಹುದು. ಅಥವ ತಲುಪಿದ್ದರೇ ಇದನ್ನು ಪ್ರಕಟಿಸಿದರೆ ಅವರ ಮಾಲೀಕರ ಕೆಂಗಣ್ಣಿಗೆ ಗುರಿಯಾಗಬಹುದು. ಪ್ರಕಟಿಸಲಿಲ್ಲವಾದಲ್ಲಿ ಅವರ ಮನಸ್ಸಾಕ್ಷಿಗೆ ವಿರುದ್ಧವಾಗಿ ನಡೆದುಕೊಳ್ಳುತ್ತಿರುವುದರ ಬಗ್ಗೆ ಕೊರಗುತ್ತಿರಬಹುದು. ನಾನು ಕಾದು ನೋಡುತ್ತಿದ್ದೇನೆ.

ಧನ್ಯವಾದಗಳು.

shivu.k said...

ಉಮೇಶ್ ಸರ್,

ಇನ್ನೂ ಇದೆ. ಕಾದು ನೋಡಿ...

shivu.k said...

ಹಾಲ್ದೊಡ್ಡೇರಿ ಸುಧೀಂದ್ರ ಸರ್,

ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು. ಎಲ್ಲಾ ಪತ್ರಿಕೆಗೂ ಕಳಿಸಿದ್ದೇನೆ. ನಿಮ್ಮ ಆಶಯವೇ ನನ್ನ ನಿರೀಕ್ಷೆ.
ಧನ್ಯವಾದಗಳು.

shivu.k said...

ದಿನಕರ್ ಸರ್,

ಎಲ್ಲರೂ ಸ್ವಾರ್ಥಕ್ಕಾಗಿ ದಾಕ್ಷಿಣ್ಯಕ್ಕಾಗಿ ಪರಿಸರವನ್ನು ಮರಗಳನ್ನು ಇಲ್ಲದಂತೆ ಮಾಡುತ್ತಿರುವುದು, ಇದು ಕಂಡರೂ ಕಾಣದಂತಿರುವ ಇತರರು, ನನಗೆ ಏನು ಹೇಳಬೇಕೆನ್ನುವುದು ಗೊತ್ತಾಗುತ್ತಿಲ್ಲ.

ಮುಂದೊಂದು ದಿನ ಬೇರೆಯದೇ ಪರಿಣಾಮ ಇದರಿಂದಾಗಿ ಉಂಟಾಗಬಹುದು.
ನಿಮ್ಮ ಅಭಿಪ್ರಾಯಕ್ಕೆ ಧನ್ಯವಾದಗಳು.

shivu.k said...

ಮನಸು ಮೇಡಮ್,

ನಿಮ್ಮ ಆಶಯವೇ ನನ್ನದೂ ಕೂಡ.

ನೀವು ಹೇಳಿದಂತೆ ಸಂಪಾದಕರಿಗೆಲ್ಲಾರಿಗೂ ಕಳಿಸಿದ್ದೇನೆ. ಅವರು ಈ ವಿಚಾರವಾಗಿ ಆತ್ಮಾಭಿಮಾನವಿದ್ದರೆ ಧೈರ್ಯವಾಗಿ ಪ್ರಕಟಿಸುತ್ತಾರೆ. ಇಲ್ಲವಾದಲ್ಲಿ ಜಾಣಮರೆವಿನಂತೆ ಸುಮ್ಮನಾಗಿ ಎಂದಿನಂತೆ ಅದೇ ೫೦-೭೫-೧೦೦ ಪುಟಗಳ ಜಾಹೀರಾತು ಪ್ರಕಟಿಸುತ್ತಿರುತ್ತಾರೆ. ನಾನು ಕೂಡ ಕಾದು ನೋಡುತ್ತಿದ್ದೇನೆ.

shivu.k said...

ಹೆಬ್ಬಾರ್ ಸರ್,

ನಾನು ನಿಮ್ಮಂತೆ ಸುಧಾರಣೆಯನ್ನು ಬಯಸುತ್ತಿದ್ದೇನೆ. ಧನ್ಯವಾದಗಳು.

shivu.k said...

S.karthik ಸರ್,

ಖಂಡಿತ ನಿಮ್ಮ ಅಭಿಪ್ರಾಯವನ್ನು ಒಪ್ಪುತ್ತೇನೆ. ಭಾಷಣದಲ್ಲಿ, ಮಾತಿನಲ್ಲಿ ಎಲ್ಲರೂ ಕಾಡನ್ನು ಉಳಿಸಬೇಕೆನ್ನುತ್ತಾರೆ. ಆದ್ರೆ ವೈಯಕ್ತಿಕವಾಗಿ ಯಾರಿಗೂ ಈ ವಿಚಾರದಲ್ಲಿ ಹಿತಾಶಕ್ತಿ ಇಲ್ಲವೆನಿಸುತ್ತೆ.

ಈ ವಿಚಾರವನ್ನು ನಾನು ತುಂಬಾ ಜನಕ್ಕೆ ಮೇಲ್ ಮಾಡಿದ್ದೇನೆ. ಇದು ದೊಡ್ಡ ಚರ್ಚೆಗೊಳಗಾಗಬೇಕೆನ್ನುವುದು ನನ್ನ ಉದ್ದೇಶ. ಮತ್ತೆ ಇದಕ್ಕೊಂದು ಪರಿಹಾರವನ್ನು ಹುಡುಕಬೇಕೆನ್ನುವುದು ನನ್ನ ಆಸೆ. ಆದ್ರೆ ಇಂಥ ವಿಚಾರದಲ್ಲಿ ಬೆಕ್ಕಿಗೆ ಗಂಟೆ ಕಟ್ಟುವವರನ್ನು ಕಾಯುತ್ತಿದ್ದೇನೆ.

ನಿಮ್ಮ ಅಭಿಪ್ರಾಯಕ್ಕೆ ಧನ್ಯವಾದಗಳು.

shivu.k said...

Chaitrika,

Thanks...

shivu.k said...

NRK ನಾಗರಾಜ್,

ನಾವು ಮರಗಳಂತ ಬಂಗಾರವನ್ನು ಉಳಿಸಿಕೊಳ್ಳವುದನ್ನು ಮರೆತು ೧೮೦೦ ರೂಪಾಯಿ ಮುಟ್ಟಿದ್ದರೂ ಬಂಗಾರವನ್ನು ಕೊಳ್ಳುವುದರ ಬಗ್ಗೆ ಎಲ್ಲರ ಚಿಂತೆಯಾಗಿದೆ.

ಇದು ಮಾಲೀಕರ ಮತ್ತು ಸಂಪಾದಕರ ಗಮನಕ್ಕೆ ಬರಲೇಬೇಕು. ಬಹುಶಃ ಈ ಲೇಖನವನ್ನು ಲೇಖಕರು ಪ್ರಕಟಿಸಲಾರರು. ಏಕೆಂದರೆ ಸಂಬಳ ಕೊಡುವ ಧಣಿಗಳ ಕೆಂಗಣ್ಣಿಗೆ ಗುರಿಯಾಗಬೇಕಾಗುತ್ತಲ್ವಾ? ಸಂಬಳಕ್ಕಾಗಿ ಅವರ ಆತ್ಮಸಾಕ್ಷಿಗೆ ವಿರುದ್ಧವಾದರೂ ಸರಿ ಅವರು ಬರೆಯಲಾರರು ಎನ್ನುವುದು ನನ್ನ ಭಾವನೆ. ಆದರೂ ಇದರ ಬಗ್ಗೆ ನನಗೆ ಆಶಾ ಭಾವನೆಯಿದೆ. ಉತ್ತಮ ಪಲಿತಾಂಶಕ್ಕಾಗಿ ನಿರೀಕ್ಷೆ ಮಾಡುತ್ತಿದ್ದೇನೆ.
ಮತ್ತೆ ನಿಮ್ಮ ಬರಹವನ್ನು ಓದಿದೆ. ಚೆನ್ನಾಗಿದೆ.
ಧನ್ಯವಾದಗಳು.
ಪಲಿತಾಂಶ ಕಾ

shivu.k said...

Snow white,

thanks..

shivu.k said...

ಭಾಶೇ,

ಊಟಕ್ಕೆ ಉಪ್ಪಿನ ಕಾಯಿಯಂತೆ ಜಾಹಿರಾತು ಇರಬೇಕು. ಆದ್ರೆ ಉಪ್ಪಿನ ಕಾಯಿಯೇ ಊಟವಾದ ಪರಿಸ್ಥಿತಿಯಿದೆ. ಉಪ್ಪಿನಕಾಯಿಯನ್ನು ಎಷ್ಟು ಹೊತ್ತು ತಿನ್ನಲು ಸಾಧ್ಯ ಇದಕ್ಕೆ ಪರಿಹಾರ ಸಿಗುತ್ತದೆಯೆನ್ನುವ ನಂಬಿಕೆ ನನಗಿಗೆ ನಿಮ್ಮ ಅಭಿಪ್ರಾಯಕ್ಕೆ ಧನ್ಯವಾದಗಳು.

ಶಿವಪ್ರಕಾಶ್ said...

Shivu avare,
Nija ri.. naavu oduva matterginta advertisements ne jasti irtave... :(

"Save Paper... save Trees"

ಪೂರ್ಣಿಮಾ ಭಟ್ಟ, ಸಣ್ಣಕೇರಿ said...

ಯೋಚಿಸುವಂಥ ವಿಷಯ ಶಿವೂ... ನಿರೂಪಣೆ ಕೂಡಾ ಇಷ್ಟವಾಯ್ತು.

-ಪೂರ್ಣಿಮಾ

ಜಲನಯನ said...

ಪತ್ರಿಕೆಯವರ ಮನೋಧರ್ಮ ..ವರದಿಗಾರರ ಕಾಟಾಚಾರ (ಎಲ್ಲರೂ ಹಾಗಿಲ್ಲ ಅನ್ನೋದು ಬೇರೆ ವಿಷಯ) ... ಇನ್ನು ವಿತರಕರ ಲೆಕಾಚಾರವನ್ನಂತೂ ಬಹಳ ಚನ್ನಾಗಿಯೇ ವಿವರಿಸಿದ್ದೀರಿ....ಹೌದು ಶಿವು...ನಿಜವಾಗಿಯೂ ಬೇಕಾ ಇಷ್ಟೊಂದು ಪತ್ರಿಕೆಗಳು...? ಪರಿಸರದ ಮೇಲೆ ಬೇಕೆಂದೇ ನಮ್ಮ ಅತ್ಯಾಚಾರ ನಡೆದಿದೆ... ಮಾಹಿತಿ ಮತ್ತು ಕಣ್ಣು ತೆರೆಸುವ (ಪುಣ್ಯ ..ತೆರೆದುಕೊಂಡರೆ...!!) ಲೇಖನ.

ದೀಪಸ್ಮಿತಾ said...

ಪತ್ರಿಕೆ ನಡೆಸುವವರ ಒಳಮರ್ಮ ತಿಳಿದಿದ್ದೀರಿ. ಮೊದಲೆಲ್ಲ ಜನರದನಿಯಾಗಿದ್ದ ಪತ್ರಿಕೆಗಳು ಈಗೀಗ ಬರೀ ಬಂಡವಾಳಶಾಹಿಗಳ, ದೊಡ್ಡ ಕಂಪನಿಗಳ ಆಸ್ಥಾನ ಹೊಗಳುಬಟ್ಟರಂತೆ ವರ್ತಿಸುತ್ತಿವೆ.

ನಿಮ್ಮ ಪ್ರಶಸ್ತಿಪಡೆದ ಫೋಟೋಗಳನ್ನು ಅರಮನೆ ಮೈದಾನದಲ್ಲಿ ನಡೆಯುತ್ತಿರುವ ಪ್ರದರ್ಶನದಲ್ಲಿ ನೋಡಿದೆ. ಅಬ್ಬ ನಿಮ್ಮ ಪ್ರತಿಭೆ, ಎಲ್ಲಾ ವಿಭಾಗಲ್ಲೂ ಬಹುಮಾನ ಪಡೆದಿದ್ದೀರಲ್ಲ. ನಮಗೂ ಸ್ವಲ್ಪ ಹೇಳಿಕೊಡಿ ಹೇಗೆ ಎಂದು

ಮನಸಿನಮನೆಯವನು said...

shivu.k ,
ಲೆಕ್ಕಾಚಾರದ ಉತ್ತಮ ಲೇಖನ ಮಾತಾಡುವ ಚಿತ್ರಗಳ ಜೊತೆಗೆ...
ಚೆನ್ನಾಗಿದೆ..

Karnataka Best said...

ಪತ್ರಿಕೆ ಎಂಬುದು ಮಾಲೀಕರಿಗೆ ಪ್ರಾಡಕ್ಟ್‌. ಅವರಿಗೆ ಸಾಮಾಜಿಕ ಜವಾಬ್ದಾರಿಗಿಂತ ವೈಯಕ್ತಿಕ ಲಾಭವೇ ಮುಖ್ಯವಾಗುತ್ತಿದೆ. ಇಲ್ಲಿ ವರದಿಗಾರರು, ಸಂಪಾದಕೀಯ ವರ್ಗ ಕೇವಲ ಕಾಂಟ್ರಾಕ್ಟ್‌ನಲ್ಲಿರುವ ನೌಕರರಷ್ಟೇ. ಗ್ರಾಮೀಣ ಭಾಗದಲ್ಲಿ ಪ್ರಕಟವಾಗುವ ಒಂದೆರಡು ಪುಟಗಳ ಜಿಲ್ಲಾ ಪತ್ರಿಕೆಗಳೇ ಸದ್ಯ ವಾಸಿ ಎನಿಸುತ್ತವೆ. ನಿಮ್ಮ ಕಾಳಜಿ, ನೋವು ಅರ್ಥವಾಗಬೇಕಾದವರಿಗೆ ಅರ್ಥವಾಗಲಿ. ಪೇಪರ್‌ಗಳನ್ನು ಆಕರ್ಷಕವಾಗಿ ಕಾಣಿಸುವುದಕ್ಕಿಂತ ರಿಸೈಕಲ್ಡ್‌ ಕಾಗದ ಬಳಕೆ ಹೆಚ್ಚಾಗಲಿ. ಲೇಖನ ಇಷ್ಟವಾಯಿತು. ಥ್ಯಾಂಕ್ಸ್‌

shivu.k said...

ಭಾನವತಿ[ಶ್ಯಾಮಲ]ಮೇಡಮ್,

ನೀವು ಹೇಳಿದಂತೆ ನಮ್ಮ ಗೆಳೆಯರೆ ಲೆಕ್ಕಾಚಾರ ಚೆನ್ನಾಗಿದೆಯೆಂದು ಆ ಕ್ಷಣದಲ್ಲಿ ಅನ್ನಿಸಿದರೂ ಅದು ಒಂದೆರಡು ದಿನದ ಮಟ್ಟಿಗೆ ಓಕೆ ಅನ್ನಿಸುತ್ತದೆ. ಮತ್ತೆ ನಿತ್ಯ ಇಂಥ ಕೆಲಸವನ್ನು ಮಾಡಲು ನಾವು ವೆಂಡರುಗಳಾಗಿ ನಮಗೆಲ್ಲಾ ನಾಚಿಕೆಯಾಗುತ್ತದೆ. ನಮ್ಮ ಮನಸಾಕ್ಷಿ ಒಪ್ಪುವುದಿಲ್ಲ.
ಸದ್ಯ ದೂರದೇಶದಲ್ಲಿ ಕುಳಿತ ಮಾಲೀಕರಿಗೆ ಖಂಡಿತ ಇವೆಲ್ಲಾ ಗೊತ್ತಾಗುವುದಿಲ್ಲ. ಅವರಿಗೆ ಹಣ ಮಾಡುವುದಷ್ಟೇ ಉದ್ದೇಶವಾದಾಗ ಬೇರೆ ವ್ಯಾಪಾರ ಮಾಡಬಹುದಲ್ಲವೇ?
ಸದ್ಯ ಈ ಪರಿಸ್ಥಿತಿ ಎಲ್ಲಿಗೆ ಬಂದು ನಿಲ್ಲುತ್ತದೋ ಕಾದುನೋಡಬೇಕು.

ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು.

shivu.k said...

ಬಾಲು ಸರ್,

ಈಗ ಎಲ್ಲರ ಮನೆಗಳಿಗೂ ಹೊಸ ಪತ್ರಿಕೆಯನ್ನು ಪರಿಚಯಿಸುವಾಗ ಅದರ ಪುಟಗಳೆಷ್ಟು ಅಂತ ಹೇಳುತ್ತಾರೆ. ಅಂತ ಪರಿಸ್ಥಿತಿ ಬಂದಿದೆ ಈಗ. ಮತ್ತೆ ಈಗ ನೀವು ಹೇಳಿದಂತೆ ಎಲ್ಲಾ ಪತ್ರಿಕೆಗಳಿಗೂ ಕಳಿಸಿದ್ದೇನೆ. ಪ್ರಕಟಿಸಲು ಯಾರು ದೈರ್ಯ ಮಾಡುತ್ತಿಲ್ಲ. ಫೋನ್ ಮಾಡಿಕೇಳಿದರೆ, ಇದು ತುಂಬಾ ಅಪಾಯಕಾರಿಯಾದ ಲೆಕ್ಕಚಾರ ಕೊಟ್ಟುಬಿಟ್ಟಿದ್ದೀರಿ. ಇಂಥವನ್ನು ಹಾಗೆ ನೇರವಾಗಿ ಪ್ರಕಟಿಸಲು ಸಾಧ್ಯವಾಗುವುದಿಲ್ಲವೆಂದು ಹೇಳುತ್ತಾರೆ. ಕಾರಣ ಕೇಳಿದರೆ, ಇದು ಕೊನೆಗೆ ನಮ್ಮ ಬುಡಕ್ಕೆ ಬರುತ್ತದೆ ಎಂದು ಉತ್ತರಿಸುತ್ತಾರೆ.

ಏಕೆಂದರೆ ಅವರೆಲ್ಲಾ ಮಾಡುವುದು ಅದೇ ಕೆಲಸವಲ್ಲವೇ?
ನಿಮ್ಮ ಉತ್ತಮ ಪ್ರತಿಕ್ರಿಯೆಗೆ ಧನ್ಯವಾದಗಳು.

shivu.k said...

ಶ್ರೀಧರ್ ಸರ್,

ನನ್ನ ಈ ಲೇಖನವನ್ನು ಮೆಚ್ಚಿದ್ದಕ್ಕೆ ಥ್ಯಾಂಕ್ಸ್.. ನಾನು ಈ ವಿಚಾರದಲ್ಲಿ ಎಷ್ಟು ಪ್ರಯತ್ನ ಪಟ್ಟರೂ ನನ್ನ ದನಿ ಪತ್ರಿಕೆಯ ಸಂಪಾದಕರಿಗೆ ಕೇಳುತ್ತಿಲ್ಲ. ಸದ್ಯ ನನ್ನ ಮುಂದಿನ ಯೋಜನೆ ಈ ಲೇಖನವನ್ನು ಜೆರಾಕ್ಸ್ ಮಾಡಿ ಎಲ್ಲ ಪತ್ರಿಕೆಗಳ ಪಾಂಪ್ಲೆಟ್ ರೀತಿ ಹಾಕಿಬಿಡುವ ಯೋಜನೆಯಿದೆ. ಅದಕ್ಕೆ ನಿಮ್ಮೆಲ್ಲರ ಸಹಕಾರ ಬೇಕು.
ಧನ್ಯವಾದಗಳು.

shivu.k said...

ಪಾಲಚಂದ್ರ,

ಇದು ನಮ್ಮ ನಿತ್ಯದ ವ್ಯವಹಾರವಾದ್ದರಿಂದ ಇಷ್ಟು ಲೆಕ್ಕಾಚಾರವಾಗಿ ಬರೆಯಲು ಸಾಧ್ಯವಾಯಿತು.

ಪತ್ರಿಕೆ ವಿತರಣೆಯ ಕಷ್ಟಗಳಲ್ಲಿ ಸ್ವಲ್ಪ ವನ್ನು ಮಾತ್ರ ಬರೆದಿದ್ದೇನೆ. ನನಗು ನೀವು ಹೇಳಿದಂತೆ ಈ ಲೇಖನ ವೆಂಡರ್ ಕಣ್ಣು ಪುಸ್ತಕದಲ್ಲಿ ಇರಬೇಕೆಂದು ಅನ್ನಿಸಿದ್ದು ಈಗಿನ ಬೆಳವಣಿಗೆಯನ್ನು ನೋಡಿದಾಗ.
ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು.

shivu.k said...

ಗುರು,

ಧನ್ಯವಾದಗಳು.

shivu.k said...

ವನಿತಾ,

ಲೇಖನವನ್ನು ಓದಿದ್ದಕ್ಕೆ ಧನ್ಯವಾದಗಳು. ಸಂಪಾದಕರಿಗೆ ಈ ಲೇಖನ ರುಚಿಸುವುದಿಲ್ಲವೆಂದು ನನಗಾಗಲೇ ಗೊತ್ತಾಗಿಬಿಟ್ಟಿದೆ. ಹಣದ ಹಿಂದೆ ಬಿದ್ದವರಿಗೆ ಮನಸಾಕ್ಷಿ ಎಲ್ಲಿರುವುದು?

ನಿಮ್ಮ ಪ್ರೋತ್ಸಾಹಕ್ಕೆ ಧನ್ಯವಾದಗಳು.

shivu.k said...

ಗುರುಮೂರ್ತಿ ಹೆಗಡೆ ಸರ್,

ಲೇಖನದ ತಿರುಳನ್ನು ಅರ್ಥೈಸಿದ್ದಕ್ಕೆ ಥ್ಯಾಂಕ್ಸ್.. ಸದ್ಯ ಇದು ನಮ್ಮ ನೋವಿನ ದನಿ. ಇದು ಎಲ್ಲರ ದನಿಯಾಗಲೆಂದು ನಾನು ಬಯಸುತ್ತೇನೆ. ಧನ್ಯವಾದಗಳು.

shivu.k said...

ಸೀತಾರಾಂ ಸರ್,

ಇದನ್ನು ಪತ್ರಿಕೆಗಳಿಗೆ ಕಳಿಸಿದ್ದೇನೆ. ಖುದ್ದಾಗಿ ಹೋಗಿ ಮಾತಾಡಿಕೂಡ ಬಂದಿದ್ದೇನೆ. ಅವರಿಂದ ನೆಗಟೀವ್ ಪ್ರತಿಕ್ರಿಯೆ ಸಿಕ್ಕಿದೆ.
ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು.

shivu.k said...

ಶಿವಪ್ರಕಾಶ್,

ನಿಮ್ಮ ಅಭಿಪ್ರಾಯಕ್ಕೆ ಧನ್ಯವಾದಗಳು.

shivu.k said...

ಪೂರ್ಣಿಮ ಮೇಡಮ್,

ಲೇಖನ ಯೋಚನೆಗೀಡು ಮಾಡಿರುವುದು ನನ್ನ ಪ್ರಯತ್ನಕ್ಕೆ ಸಾರ್ಥಕವೆನಿಸುತ್ತದೆ. ಧನ್ಯವಾದಗಳು.

shivu.k said...

ಅಜಾದ್,

ನನ್ನ ನಿತ್ಯದ ಕೆಲಸವನ್ನು ನಡೆಯುತ್ತಿರುವ ವಿದ್ಯಮಾನವನ್ನು ವಿವರಿಸಿದ್ದೇನೆ.

ನಿಮ್ಮ ಪ್ರಶ್ನೆಯೇ ನನ್ನದೂ ಕೂಡ. ಬೇಕಾ ಇಷ್ಟೊಂದು ದಿನಪತ್ರಿಕೆಗಳು? ಮತ್ತಷ್ಟು ಪರಿಸರ ನಾಶ?

ಇದಕ್ಕೆಲ್ಲಾ ಪರಿಹಾರವೇನು...ಕಾದುನೋಡಬೇಕಿದೆ.
ಧನ್ಯವಾದಗಳು.

shivu.k said...

ಕುಲದೀಪ್ ಸರ್,

ಪತ್ರಿಕೆಯ ಒಳಹೊರಗು ಇಷ್ಟಕ್ಕೆ ಮುಗಿದಿಲ್ಲ. ಸಮಯನೋಡಿ ಮತ್ತಷ್ಟು ವಿಚಾರಗಳನ್ನು ಬೆಳಕಿಗೆ ತರುತ್ತೇನೆ. ಮಾಲೀಕರಿಗೆ ಬುದ್ದಿ ಬರುವ ಹೊತ್ತಿಗೆ ಪತ್ರಿಕೆ ವಿತರಣೆಯ ಪರಿಸ್ಥಿತಿಯೇ ಬದಲಾಗಿಬಿಡಬಹುದು ಅನ್ನಿಸುತ್ತಿದೆ. ಕೊಳ್ಳೆ ಹೋದ ಮೇಲೆ ಊರು ಬಾಗಿಲು ಹಾಕಿದರು ಅನ್ನುವ ಹಾಗೆ ಆಗಬಹುದು.

ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು.

shivu.k said...

ಜ್ಞಾನಾರ್ಪಣಮಸ್ತು,

ನಿಮ್ಮ ಅಭಿಪ್ರಾಯಕ್ಕೆ ಧನ್ಯವಾದಗಳು.

shivu.k said...

ಪ್ರವೀಣ್ ಚಂದ್ರ ಸರ್,

ನನ್ನ ಬ್ಲಾಗಿಗೆ ಸ್ವಾಗತ.

ನೀವು ಹೇಳಿದಂತೆ ಪತ್ರಿಕೆಯಲ್ಲಿ ಕೆಲಸ ಮಾಡುವವರು ವ್ಯಾಪಾರದ ದೃಷ್ಟಿಯಲ್ಲಿ ಚಿಂತಿಸುವುದಾದರೆ ಪರಿಸರ ಉಳಿಸುವ ವಿಚಾರಗಳನ್ನು ಏಕೆ ಬರೆಯುತ್ತಾರೆ. ಬರೆದ ಮೇಲೆ ಅದರಂತೆ ನಡೆದುಕೊಳ್ಳಬೇಕು. ಇಲ್ಲದಿದ್ದಲ್ಲಿ ಬರೆಯಲೇ ಬಾರದು. ಕಂಟ್ರಾಕ್ಟ್ ಮೇಲೆ ಕೆಲಸಕ್ಕೆ ಸೇರಿದರೂ ಆತ್ಮಸಾಕ್ಷಿಗೆ ವಿರುದ್ಧವಾಗಿ ನಡೆದುಕೊಂಡಂತೆ ಅಲ್ಲವೇ?
ರಿಸೈಕಲ್ ಪೇಪರ್ ಉಪಯೋಗಿಸುವ ವಿಚಾರ ಸರಿಯಾದರೂ ಇಷ್ಟೊಂದು ಪುಟಗಳಿಗೆ ಎಲ್ಲಿ ಅವು ಸಾಕಾಗುವುದಿಲ್ಲವಾದ್ದರಿಂದ ಮತ್ತೆ ಮರಗಳಿಗೆ ಕೊಡಲಿ ಏಟು ಬೀಳೋದು ಖಚಿತವಲ್ಲವೇ?
ಇದು ನನ್ನ ಕಾಳಜಿ.

ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು.