Tuesday, March 23, 2010

ಚಿತ್ರಸಂತೆಯಲ್ಲಿ ಪುಟ್ಟ ಪುಟ್ಟ ಕತೆಗಳು.


೧. ಚಿತ್ರಸಂತೆಯಲ್ಲಿ ಆತ ಗಾಂಧಿಭವನದ ಬಳಿ ಚಿತ್ರಗಳನ್ನು ನೋಡಲು ಪ್ರಾರಂಭಿಸಿದಾಗ ಮಧ್ಯಾಹ್ನ ೧೨ ಗಂಟೆ. ಇಡೀ ಚಿತ್ರಸಂತೆಯನ್ನು ನೋಡಿ ಮುಗಿಸಿ ನಮ್ಮ ಬಳಿಗೆ ಬರುವ ಹೊತ್ತಿಗೆ ಸಂಜೆ ಆರುಗಂಟೆ. ಆ ಕಲಾಭಿಮಾನಿ ಚಿತ್ರಸಂತೆಯಲ್ಲಿನ ಎಲ್ಲಾ ಚಿತ್ರಗಳನ್ನು ನೋಡಿ ಅದೆಷ್ಟು ಗೊಂದಲಗೊಂಡಿದ್ದನೆಂದರೆ ನನ್ನ ಫೋಟೊಗಳನ್ನು ಮುಟ್ಟಿ ನೋಡಿ "ಅಹಾ ಈ ಪೇಂಟಿಂಗ್ಸ್ ಎಷ್ಟು ಚೆನ್ನಾಗಿದೆ" ಅಂದವನೇ ಪಕ್ಕದಲ್ಲಿದ್ದ ನನ್ನ ಭಾವನ ದೊಡ್ಡ ಚಿತ್ರಕಲಾಕೃತಿಯನ್ನು ನೋಡಿ ಈ ಫೋಟೊ ಎಲ್ಲಿ ತೆಗೆದಿದ್ದು ಅಂತ ಕೇಳಿದ. ಅವನ ಮಾತನ್ನು ಕೇಳಿ ನಾವಿಬ್ಬರೂ ಅಚ್ಚರಿಯಿಂದ ಮುಖ ನೋಡಿಕೊಂಡೆವು.


೨. ಆ ಪ್ರೇಮಿಗಳು ಕಳೆದ ಚಿತ್ರಸಂತೆಗೂ ಬಂದಿದ್ದರು. ಈ ಬಾರಿಯೂ ಬಂದಿದ್ದಾರೆ. ಆದ್ರೆ ಚಿತ್ರಸಂತೆಯೊಂದು ಅವರಿಗೆ ನೆಪ. ಬೆಂಗಳೂರಿನ ಎಲ್ಲಾ ಜಾಗದಲ್ಲಿ ಆಡ್ಡಾಡಿ ಸಾಕಾಗಿ ಚಿತ್ರಸಂತೆಯಲ್ಲಿ ಮತ್ತಷ್ಟು ಪ್ರೇಮಿಗಳಾಗುತ್ತಿದ್ದಾರೆ. ಅವರಂದುಕೊಂಡಿದ್ದಾರೆ ನಮ್ಮನ್ಯಾರು ಗಮನಿಸುವುದಿಲ್ಲವೆಂದು. ಆದ್ರೆ ಆವನ್ಯಾವನೋ ಛಾಯಾಗ್ರಾಹಕ ಇವರ ಪ್ರೇಮದಾಟವನ್ನು ಫೋಟೊ ತೆಗೆದೇಬಿಟ್ಟಿದ್ದ. ಆ ಫೋಟೊ ಇನ್ನೊಬ್ಬ ಚಿತ್ರಕಾರನ ಕೈಸೇರಿ ಅದ್ಭುತ ಕಲಾಕೃತಿಯಾಗಿ ಈ ವರ್ಷದ ಸಂತೆಯಲ್ಲಿ ಮಾರಾಟಕ್ಕಿದೆ. ಮತ್ತೆ ಈ ಬಾರಿ ಇವರನ್ನು ನೋಡಿದ ಛಾಯಾಗ್ರಾಹಕ ಕ್ಯಾಮೆರಾ ಕೈಗೆತ್ತಿಕೊಂಡ. ಆದ್ರೆ ಇವರಿಬ್ಬರೂ ಇದ್ಯಾವುದರ ಪರಿವೆಯೂ ಇಲ್ಲದೇ ಮತ್ತಷ್ಟು ಪ್ರೇಮಿಗಳಾಗುತ್ತಿದ್ದರು.


೩. ಸಂಜೆಯಾಗುತ್ತಿತ್ತು. ಇನ್ನೊಂದು ಸಾವಿರ ವ್ಯಾಪಾರವಾದರೆ ಹತ್ತು ಸಾವಿರವಾಗುತ್ತದೆ ಅಂತ ಆ ಕಲಾವಿದನು ಜೇಬಿನಲ್ಲಿದ್ದ ಒಂಬತ್ತು ಸಾವಿರಗಳ ನೋಟುಗಳನ್ನು ಮುಟ್ಟಿನೋಡಿಕೊಳ್ಳುತ್ತಿದ್ದರೇ, ಉತ್ತಮ ಚಿತ್ರಕಲಾಕೃತಿಯನ್ನು ಕೊಳ್ಳಲು ಹೇಗೆ ಚೌಕಾಸಿ ಮಾಡುಬೇಕು ಅಂತ ಈ ಕಲಾಸಕ್ತ ಜೇಬಿನೊಳಗಿದ್ದ ಒಂದು ಸಾವಿರ ನೋಟನ್ನು ಮುಟ್ಟಿನೋಡಿಕೊಳ್ಳುತ್ತಿದ್ದ. ಹೀಗೆ ಆ ರಸ್ತೆಯಲ್ಲಿದ್ದ ಕಲಾವಿದರು, ನೋಡಲು-ಕೊಳ್ಳಲು ಬಂದ ಕಲಾಭಿಮಾನಿಗಳ ಕೈಗಳೆಲ್ಲಾ ತಮ್ಮ ತಮ್ಮ ಜೇಬುಗಳಲ್ಲಿದ್ದವು. ಇವೆಲ್ಲಾದರ ನಡುವೆ ಅಲ್ಲಲ್ಲಿ ಪುಟ್ಟ ಪುಟ್ಟ ಮಕ್ಕಳು ತಮ್ಮೆದುರಿಗಿದ್ದ ಚಿತ್ರಗಳನ್ನು ಮುಟ್ಟುತ್ತಾ, ಇನ್ನೂ ಹತ್ತಿರ ಹೋಗಿ ಮೂಗಿನಿಂದ ಬಣ್ಣಗಳ ವಾಸನೆಯನ್ನು ಆಹ್ಲಾದಿಸುತ್ತಾ, ಕಣ್ಣರಳಿಸಿ ನೋಡಿ, ಮನತುಂಬಿಕೊಳ್ಳುತ್ತಿದ್ದವು.

Add Image


೪.ಆತ ಕುಳಿತಲ್ಲೇ ಮುಖಚಿತ್ರ ರಚಿಸುವ ಕಲಾವಿದ. ಸಂಜೆ ಐದುಗಂಟೆಗೆ ಒಂದು ಪುಟ್ಟ ಹುಡುಗಿಯನ್ನು ಎದುರಿಗೆ ಕೂರಿಸಿ ಮುಖಚಿತ್ರ ಬರೆಯಲು ಶುರುಹಚ್ಚಿಕೊಂಡ. ಕಣ್ಣಮುಂದೆ ಕಂಡಿದ್ದನ್ನು ಕಣ್ಣಿಗೆ ಕಟ್ಟುವಂತೆ ಬರೆಯುವ ಮುಖಚಿತ್ರ ಕಲಾವಿದನಾದರೂ ಅವನದು ನಿಧಾನವೇ ಪ್ರಧಾನ ಎನ್ನುವದು ಅವನ ಮಂತ್ರ. ಅದರ ಪರಿಣಾಮ ಆರುಗಂಟೆಯ ಹೊತ್ತಿಗೆ ಮುಖದ ಹೊರರೇಖೆಗಳನ್ನು ಎಳೆದಿದ್ದ. ೬-೩೦ರ ಹೊತ್ತಿಗೆ ಕತ್ತಲಾಗಿ ಆ ಬೆಳ್ಳಗಿನ ಮಗುವಿನ ಮುಖಕ್ಕೂ ಕತ್ತಲು ಆವರಿಸುತ್ತಿತ್ತು. ೭-೩೦ಕ್ಕೆ ಎದುರಿಗೆ ಕುಳಿತಿದ್ದ ಬೆಳ್ಳಂಬೆಳಗಿನ ಮಗುವಿನ ಮುಖ ಚಿತ್ರದಲ್ಲಿ ಕಪ್ಪಾಗಿತ್ತು.


೫. ಸದಾ ಹೊಸತರ ಬಗ್ಗೆ ಚಿಂತಿಸುವ ಕಲಾವಿದನಾಗಿದ್ದ ಆತ ಅವತ್ತು ಮಾರಾಟಕ್ಕೆ ಯಾವುದೇ ಕಲಾಕೃತಿಯನ್ನು ತಂದಿರಲಿಲ್ಲ. ಆದ್ರೆ ಕೈಯಲ್ಲಿ ಒಂದು ಕ್ಯಾನ್ವಸ್,ಬ್ರಷ್, ಬಣ್ಣಗಳನ್ನು ಹಿಡಿದಿದ್ದ. ಅರ್ಧದಿನ ಚಿತ್ರಸಂತೆ ಸುತ್ತಾಡಿದರೂ ಹೊಸತೇನು ಸ್ಪೂರ್ತಿ ಸಿಕ್ಕಲಿಲ್ಲವಾದ್ದರಿಂದ ಬೇಸರಗೊಂಡು ಇದೆಲ್ಲಾ ಗೊಡವೆಯೇ ಬೇಡವೆಂದು ಪಕ್ಕದಲ್ಲಿದ್ದ ಅಪಾರ್ಟ್‍ಮೆಂಟಿನ ಟೆರಸ್ ಮೇಲೆ ವಿಶ್ರಾಂತಿಗೆಂದು ಕುಳಿತವನು ಕೆಳಗೆ ನೋಡಿದ. ಸಾಗರೋಪಾದಿಯಲ್ಲಿ ಚಿತ್ರಸಂತೆ ನೋಡಲು ಬರುತ್ತಾಹೋಗುತ್ತಿದ್ದರು. ನೋಡನೋಡುತ್ತಿದ್ದಂತೆ ಅದನ್ನೆ ಕ್ಯಾನ್ವಸ್ ಮೇಲೆ ಬಿಡಿಸಿ ಬಣ್ಣದಿಂದ ಅಲಂಕರಿಸಿ ಕೆಳಗೆಬಂದು ತನ್ನ ಜಾಗದಲ್ಲಿ ಪ್ರದರ್ಶನಕ್ಕಿಟ್ಟ. ಇದು ನಿಜಕ್ಕೂ ಹೊಸತನವೆಂದು ಕಲಾಸಕ್ತರು ಅದನ್ನು ಕೊಳ್ಳಲು ಮುಗಿಬಿದ್ದರು.

ಈ ನ್ಯಾನೋ ಕತೆಗಳೆಲ್ಲಾ [14-3-2010]ಭಾನುವಾರ ವಿಜಯಕರ್ನಾಟಕದಲ್ಲಿ ಬಂದಿದ್ದವು.

ಚಿತ್ರಗಳು ಮತ್ತು ಲೇಖನ
ಶಿವು.ಕೆ.

54 comments:

Chaithrika said...

ಯಾವಾಗಿನ ಚಿತ್ರ ಸಂತೆ ಇದು?
ಫೋಟೋಗಳು ಚೆನ್ನಾಗಿವೆ.

ಕ್ಷಣ... ಚಿಂತನೆ... said...

ಶಿವು ಸರ್‍, ಚಿತ್ರಸಂತೆಯ ಚಿತ್ರಗಳು, ಅದರ ಜೊತೆಗೆ ಪುಟ್ಟ ಟಿಪ್ಪಣಿ ಚೆನ್ನಾಗಿ ಬಂದಿದೆ. ಜನರ ಭಾವನೆಗಳನ್ನು ಸೆರೆಹಿಡಿದಿರುವುದರ ಜೊತೆಗೆ ನನ್ನ ಚಿತ್ರವನ್ನೂ ಸೆರೆಹಿಡಿದದ್ದು ತಿಳಿದಿತ್ತು. ಚಿತ್ರ ಹಾಕಿದ್ದೀರಿ. ಧನ್ಯವಾದಗಳು.

ಸ್ನೇಹದಿಂದ,

Unknown said...

ಬ್ಯೂಟಿಫುಲ್ ಅಂದರೆ ಅಷ್ಟು ಸಾಕೆ?!!!!!!!!

ಭಾಶೇ said...

ಯಾವಾಗಾಯ್ತು ಚಿತ್ರ ಸಂತೆ?
ನಾನು ಮತ್ತೆ ಒಂದು ವರ್ಷ ಕಾಯಬೇಕಾ? ಮಿಸ್ ಆಗೋಯ್ತ?

ಬರಹ ಚೆನ್ನಾಗಿದೆ. ಫೋಟೋಗಳು ಕೂಡ.

PARAANJAPE K.N. said...

ನೀವು ಬ್ಲಾಗ್ ಗೆ ಚಿತ್ರ-ಲೇಖನ ಹಾಕಿದಾಕ್ಷಣ ನೋಡಿದ್ದೇ, ನೆಟ್ ಸ್ಲೋ ಇದ್ದ ಕಾರಣ ಚಿತ್ರ ಗಳು ಕಾಣಿಸುತ್ತಿರಲಿಲ್ಲ, ಅಷ್ಟರಲ್ಲಿ ಏನೋ ಸೆನ್ಸಾರ್ ಮಾಡಿಬಿಟ್ರಲ್ಲ, ತು೦ಬ ಚೆನ್ನಾಗಿವೆ ಚಿತ್ರ ಗಳು ಮತ್ತು ಪೂರಕವಾದ ಪುಟ್ಟ ಪುಟ್ಟ ಟಿಪ್ಪಣಿ ಗಳು.

shivu.k said...

chaithrika ಮೇಡಮ್,

ಈ ವರ್ಷದ ಚಿತ್ರ ಸಂತೆ. ಫೋಟೊಗಳನ್ನು ಸಹಜವಾಗಿ ಇಷ್ಟಪಡುತ್ತೀರಿ. ಚಿತ್ರಸಂತೆಯ ನ್ಯಾನೋ ಕತೆಗಳು ಇಷ್ಟವಾಗಲಿಲ್ಲವಾ?

ಧನ್ಯವಾದಗಳು.

shivu.k said...

ಚಂದ್ರು ಸರ್,

ಚಿತ್ರಸಂತೆಯ ಫೋಟೋಗಳನ್ನು ಮೆಚ್ಚಿದ್ದೀರಿ. ಮತ್ತೆ ನಾನು ಬರೆದಿದ್ದು ಟಿಪ್ಪಣಿಗಳಲ್ಲ. ನ್ಯಾನೋ ಕತೆಗಳು. ನಿಮ್ಮ ಉಳಿದ ಚಿತ್ರಗಳನ್ನು ಮೇಲ್ ಮಾಡುತ್ತೇನೆ.

shivu.k said...

ಸತ್ಯನಾರಾಯಣ ಸರ್,

ಧನ್ಯವಾದಗಳು.

shivu.k said...

ಭಾಶೇ ಮೇಡಮ್,

ಚಿತ್ರಸಂತೆ ಈ ಬಾರಿ ಜನವರಿ ೩೧ರ ಭಾನುವಾರ ನಡೆಯಿತು. ನೀವು ಮಿಸ್ ಮಾಡಿಕೊಂಡಿರಾ...ಮುಂದಿನ ವರ್ಷದವರೆಗೆ ಕಾಯಲೇಬೇಕು.

ಬರಹ ಮತ್ತು ಲೇಖನವನ್ನು ಮೆಚ್ಚಿದ್ದಕ್ಕೆ ಥ್ಯಾಂಕ್ಸ್.

Chaithrika said...

ಮೆಚ್ಚುಗೆಯಾದರೆ ಮಾತ್ರ ನಾನು ಕಮೆಂಟ ಬರೆಯುವುದು. ನಾ್ಯನೋ ಕಥೆಗಳು ಚನ್ನಾಗಿವೆ. ಚಿತ್ರಗಳು ಅವಕಿಂತ ಚೆನ್ನ.

shivu.k said...

ಪರಂಜಪೆ ಸರ್,

ಚಿತ್ರಸಂತೆಯಲ್ಲಿ ಸಹಜವಾಗಿ ಚಿತ್ರಗಳು ಮತ್ತು ಅಲ್ಲಿ ಕ್ಲಿಕ್ಕಿಸಿದ್ದ ಫೋಟೊಗಳು ಬ್ಲಾಗಿಗೆ ಹಾಕಿದ ತಕ್ಷಣ ಗಮನ ಸೆಳೆಯುತ್ತವೆ. ದಿನವೆಲ್ಲಾ ಅಲ್ಲಿ ಓಡಾಡಿ ಅಲ್ಲಿನ ಅನುಭವದಿಂದ ಹುಟ್ಟಿದ ಪುಟ್ಟಪುಟ್ಟ ಕತೆಗಳನ್ನು ಬ್ಲಾಗಿಗೆ ಹಾಕಿದ್ದೇನೆ. ಅದಕ್ಕೆ ಪೂರಕವಾಗಿ ಕೆಲವು ಫೋಟೊಗಳನ್ನು ಹಾಕಿದ್ದೆ. ಆದ್ರೆ ಫೋಟೊಗಳಿದ್ದಾಗ ಈ ಪುಟ್ಟ ಕತೆಗಳ ಕಡೆ ಓದುಗರ ಗಮನ ಕಡಿಮೆಯಿರುತ್ತದೆ[ಚೈತ್ರಿಕ, ಚಂದ್ರು ಸರ್, ನೀವು ಸೇರಿದಂತೆ ಟಿಪ್ಪಣಿ ಅಂದಿದ್ದೀರಿ]ಅದಕ್ಕೆ ಕೆಲವು ಫೋಟೊಗಳನ್ನು ತೆಗೆದುಹಾಕಿದೆ. ಬೇರೇನು ಉದ್ದೇಶವಿಲ್ಲ...ತಪ್ಪಾಗಿ ಅರ್ಥೈಸಬೇಡಿ.
ಮೆಚ್ಚಿಗೆ ಸೂಚಿಸಿದ್ದಕ್ಕೆ ಧನ್ಯವಾದಗಳು.

ಸಾಗರಿ.. said...

ಶಿವು ಅವರೇ,
ಚಿತ್ರಕ್ಕೆ ಚೆನ್ನಾಗಿ ಒಪ್ಪುವಂತಿದೆ ನಿಮ್ಮ ನ್ಯಾನೊ ಕತೆಗಳು. ನನಗೆ ಇದುವರೆಗೂ ನ್ಯಾನೊ ಕತೆಗಳ ಬಗ್ಗೆ ಗೊತ್ತಿರಲಿಲ್ಲ(ನ್ಯಾನೊ ಕಾರು ಗೊತ್ತಿತ್ತು ಅಷ್ಟೆ :-))

shivu.k said...

ಚೈತ್ರಿಕಾರವರೆ,

ಬೇಸರಿಸಬೇಡಿ. ನನ್ನ ಉದ್ದೇಶವೇನೆಂದು ಪರಂಜಪೆಯವರ ಪ್ರತಿಕ್ರಿಯೆಗೆ ಉತ್ತರಿಸಿದ್ದೇನೆ.

ಮತ್ತೊಮ್ಮೆ ಪ್ರತಿಕ್ರಿಯಿಸಿದ್ದಕ್ಕೆ ಥ್ಯಾಂಕ್ಸ್..

shivu.k said...

ಸಾಗರಿ ಮೇಡಮ್,

ನ್ಯಾನೋ ಕತೆಗಳು ಇತ್ತೀಚೆಗೆ ಖ್ಯಾತಿ ಗಳಿಸುತ್ತಿವೆ. ಚಿತ್ರಸಂತೆಯಲ್ಲಿ ಆಡ್ಡಾಡುವಾಗ ಹೊಳೆದ ಚಿತ್ರಗಳಿಗೆ ನ್ಯಾನೋ ಕತೆಗಳ ರೂಪ ಕೊಟ್ಟಿದ್ದೇನೆ...

ಇಷ್ಟಪಟ್ಟಿದ್ದಕ್ಕೆ ಧನ್ಯವಾದಗಳು.

ದಿನಕರ ಮೊಗೇರ said...

ಶಿವೂ ಸರ್,
ನ್ಯಾನೋ ಕಥೆಗಳನ್ನು ವಿಜಯ ಕರ್ನಾಟಕದಲ್ಲಿ ಓದಿದ್ದೆ..... ಆದರೆ ಆವಾಗ ಇಷ್ಟು ಮಜಾ ಬಂದಿರಲಿಲ್ಲ... ಈಗ ಇದಕ್ಕೆ ಪೂರಕವಾದ ಚಿತ್ರವಿದೆ..... ತುಂಬಾ ಇಷ್ಟವಾಯ್ತು ಸರ್........ ಮೊದಲ ಕಥೆ ತುಂಬಾ ಇಷ್ಟವಾಯ್ತು........ ಸರ್, ಈ ವಾರ ಬಂದ ನ್ಯಾನೋ ಕಥೆ ಸಹನಿಮ್ಮದೇನಾ ......

ಚುಕ್ಕಿಚಿತ್ತಾರ said...

shivu sir...
nice photos and stories...!!!!

ಜಲನಯನ said...
This comment has been removed by the author.
ಜಲನಯನ said...

ಶಿವು...ಯಾವುದಿದು ನ್ಯಾನೋ ಕಥೆ...ಸಣ್ಣ ಕಥೆ ಪುಟ್ತ ಕಥೆ ಕೇಳಿದ್ದೇನೆ ....ಸುಮ್ಮನೆ ನಾವು ಆಂಗ್ಲ ಪ್ರೇಮಿಗಳಾಗುತ್ತಿದ್ದೇವಾ...ಅಥವಾ ಆಕ್ರ್ಷಣೆಗೆ ಒಳಗಾಗುತ್ತಿದ್ದೇವಾ..?...ಎಳವತ್ತಿ ಯವರ ಒಂದೆರ್ಡು ಸಾಲಿನ ಕಥೆಗಳು...ಎಲ್ಲರಿಗೂ ಅರ್ಥವಾಗುವ ಪದ ಬಳಕೆ.....
ಆದ್ರೆ ....ನ್ಯಾನೋ...ಪದವೇ ನನಗೆ ಅರ್ಥವಾಗಲಿಲ್ಲ...ಇಷ್ಟವೂ ಆಗಲಿಲ್ಲ.....ನೀವೇನಂತೀರಿ...? ಇದನ್ನು ಬಳಕೆಗೆ ತಂದವರು ಯಾರು?...
ಇದರ scientific ವಿವರಣೆ ಕೊಡ್ತೇನೆ...
ಒಂದು ಮೀಟರ್-೧೦೦ ಸೆಂ.ಮೀ.ಗೆ ಸಮ
೧ ಸೆಂ.ಮೀ - ೧೦ ಮಿ.ಮೀ
೧ ಮಿ.ಮೀ ನಲ್ಲಿ ೧೦೦೦ (ಸಾವಿರ) ಮೈಕ್ರಾನುಗಳು
೧ ಮೈಕ್ರಾನು ನಲ್ಲಿ ಒಂದು ಸಾವಿರ ನ್ಯಾನೋ ಮೀಟರ್...
ಈಗ ಹೇಳಿ ನ್ಯಾನೋ ಕಥೆ...ಅಂದ್ರೆ ಏನಾಯ್ತು...???!!!

ಜಲನಯನ said...

ಶಿವು...ಕ್ಷಮಿಸಿ......ನಿಮ್ಮ ಚಿತ್ರ ಮತ್ತು ಚಿತ್ರ ಸಂತೆಯ ಕಥೆಗಳು ಬಹಳ ಇಷ್ಟವಾದವು..ನಿಮ್ಮ ಬರೆಯುವ ಶೈಲಿ ವಿಭಿನ್ನವಾಗುತ್ತಿದೆ...ನಿಮ್ಮ ಬೆಕ್ಕಿನ ಜ್ವರ ಇದಕ್ಕೆ ಸಾಕ್ಷಿ...ನಿಮ್ಮಲ್ಲಿನ ಚಿತ್ರಗ್ರಾಹಕ..ಲೇಖಕನನ್ನು ಬಡಿದೆಬ್ಬಿಸಿದ್ದಾನೆ...ಮುಂದುವರೆಯಲಿ...

ದೀಪಸ್ಮಿತಾ said...

ಈ ಸಲ ನನಗೆ ಚಿತ್ರಸಂತೆಗೆ ಹೋಗಲಾಗಲಿಲ್ಲ. ನಿಮ್ಮ ಲೇಖನ ಚೆನ್ನಾಗಿದೆ

ಸಾಗರದಾಚೆಯ ಇಂಚರ said...

ಚಿತ್ರಸಂತೆಯ ಫೋಟೋ ಹಾಕಿ ನಮಗೂ ಅಲ್ಲಿಗೆ ಹೋದಂತೆ ಮಾಡಿದ್ದಿರಿ
ಜೊತೆಗೆ ಇಂದಿನ ಬರಹ ದ ಫೋಟೋಗಳು, ಜೊತೆಗಿನ ವಿವರಣೆ ಮುದ ನೀಡಿತು

shivu.k said...

ದಿನಕರ್ ಸರ್,

ಈ ವಾರ ಬರೆದ ಕತೆ ನನ್ನದಿರಲಿಲ್ಲ. ನೀವು ಹೇಳಿದಂತೆ ಪತ್ರಿಕೆಯಲ್ಲಿ ನಾವು ಕಳಿಸಿದ ಕತೆಗಳು ಫೋಟೊಗಳು ಯಾವರೀತಿ ಸೆನ್ಸಾರ್ ಆಗುತ್ತವೆಂದರೆ ಕೈಕಾಲು ತಲೆ ಬಿಟ್ಟು ಉಳಿದ ಭಾಗ ಹಾಕಿದಾಗ ಹೇಗಿರಬಹುದೋ ಹೇಳಿ. ಮುಂದೆ ನಮ್ಮ ವಿಶ್ವನಿಗೂ ಪತ್ರಿಕಾ ಮಾಧ್ಯಮದವರಿಗೂ ಮತ್ತು ಬ್ಲಾಗ್ ಲೋಕದವರಿಗೂ ಸೇರಿದಂತೆ ಒಂದು ಲೇಖನವನ್ನು ಹಾಕುತ್ತೇನೆ. ಆಗ ನಿಮಗೆ ಗೊತ್ತಾಗುತ್ತದೆ ಪತ್ರಿಕಾ ಮಾಧ್ಯಮದ ಜಾತಕ. ಅಲ್ಲಿಯವರೆಗೆ ಕಾಯಬೇಕು.
ಚಿತ್ರ ಮತ್ತು ಪುಟ್ಟ ಕತೆಗಳನ್ನು ಇಷ್ಟಪಟ್ಟಿದ್ದಕ್ಕೆ ಥ್ಯಾಂಕ್ಸ್..

shivu.k said...
This comment has been removed by the author.
shivu.k said...

ಚುಕ್ಕಿ ಚಿತ್ತಾರ

ಥ್ಯಾಂಕ್ಸ್..

shivu.k said...

ಆಜಾದ್,

ನ್ಯಾನೋ ಕತೆಯ ಬಗ್ಗೆ ನನಗೂ ಹೆಚ್ಚು ಗೊತ್ತಿಲ್ಲ. ಆದ್ರೆ ಸುಮ್ಮನೇ ಒಂದು ಪ್ರಯೋಗವಷ್ಟೇ. ನೀವು ಕೊಟ್ಟ ವಿವರವನ್ನು ನೋಡಿದಾಗ ನ್ಯಾನೋ ಅನ್ನುವ ವಿಚಾರದ ಹೆಚ್ಚು ತಿಳಿದುಕೊಳ್ಳಬೇಕಿದೆ. ನಮಗೆ ಗೊತ್ತಿಲ್ಲದಂತೆ ಪರರನ್ನು ಅನುಕರಿಸುತ್ತಿದ್ದೆನೇನೋ ಅನ್ನಿಸುತ್ತೆ.

ಚಿತ್ರಗಳು ಮತ್ತು ಬರಹವನ್ನು ಮೆಚ್ಚುತ್ತಲೇ ನನ್ನೊಳಗೆ ಆಡಗಿರುವ ಶೈಲಿಯನ್ನು ಬಿಟ್ಟು ಬೇರೆಯವರ ಬರಹದ ಆಕರ್ಷಣೆಗೆ ಒಳಗಾಗಿರುವುದನ್ನು ಸೂಕ್ಷ್ಮವಾಗಿ ತಿಳಿಸಿ ಎಚ್ಚರಿಸಿದ್ದೀರಿ.

ಅದಕ್ಕಾಗಿ ಧನ್ಯವಾದಗಳು.

shivu.k said...

ಕುಲದೀಪ್,

ಮುಂದಿನ ಭಾರಿ ಚಿತ್ರಸಂತೆಯನ್ನು ತಪ್ಪಿಸಿಕೊಳ್ಳಬೇಡಿ...

ಲೇಖನವನ್ನು ಮೆಚ್ಚಿದ್ದಕ್ಕೆ ಧನ್ಯವಾದಗಳು.

shivu.k said...

ಗುರುಮೂರ್ತಿ ಹೆಗಡೆ ಸರ್,

ಚಿತ್ರಸಂತೆಯ ಚಿತ್ರಗಳು ಮತ್ತು ಬರಹವನ್ನು ಮೆಚ್ಚಿದ್ದಕ್ಕೆ ಧನ್ಯವಾದಗಳು.

ವನಿತಾ / Vanitha said...

ಶಿವು, ನಿಮ್ಮ ಬರಹಕ್ಕೆ ಒಂದೇ ಶಬ್ದ.."WONDERFUL"..
keep writing like this:))

Ashok Uchangi said...

ಚಿತ್ರ,ಚಿತ್ರಸಂತೆ,ನಿಮ್ಮ ಫೋಟೊ,ನ್ಯಾನೋ ಕಥೆ ಎಲ್ಲವೂ ಸೂಪರ್!
ಪ್ರೇಮಿಗಳ(ಅವರು ಪ್ರೇಮಿಗಳೇ ಎಂದು ನಿಮಗೆ ಖಚಿತವೇ?)ಫೋಟೊ ಅವರ ಅನುಮತಿ ಇಲ್ಲದೆ ಇಲ್ಲಿ ಪ್ರಕಟಿಸಿದ್ದು ಸರಿಯೇ? ನೀವು ಸುಮ್ಮನೆ ತೊಂದರೆಗೆ ಸಿಕ್ಕಿ ಹಾಕಿಕೋಳ್ಳಬೇಡಿ ಎಂದು ಹೀಗೆ ಹೇಳಿದೆ....

ಸವಿಗನಸು said...

ಶಿವು ಸರ್,
ಚಿತ್ರ ಸಂತೆ ಚಿತ್ರಗಳು ನಿಮ್ಮ ಬರಹ ಎಲ್ಲವೂ ಬಹಳ ಚೆನ್ನಾಗಿದೆ....
ಮುಂದುವರೆಸಿ...
ಶುಭ ಹಾರೈಕೆಗಳು....

Unknown said...

ನಿಮ್ಮ ಪುಟ್ಟ ಕಥೆಗಳು ಇಷ್ಟವಾದವು.. ಚಿತ್ರಗಳು ಸೂಪರ್..

ಸೀತಾರಾಮ. ಕೆ. / SITARAM.K said...

ಚಿತ್ರಸ೦ತೆಯ ಚಿತ್ರಗಳು ಚೆನ್ನಾಗಿ ಮೂಡಿವ್. ಜೊತೆಗೆ ಪುಟ್ಟ(ನ್ಯಾನೋ)ಕಥೆಗಳು ಸು೦ದರವಾಗಿ, ಟಿಪ್ಪಣೆಯ ಶೈಲಿಯಲ್ಲಿದ್ದು, ತಮ್ಮ ಅಸ್ತಿತ್ವದ ಬಗ್ಗೆ ಓದುಗರ ತರ್ಕಕ್ಕೆ ಅಪಾರ ಹರವನ್ನು ನೀಡುತ್ತಾ ಇವೆ.


@ Azad sir,
"ಕಾರು" ಸಾಮಾನ್ಯ ಶಬ್ದ ಅ೦ದರೆ 'ಕಥೆ"
"ನ್ಯಾನೋ ಕಾರು" ಎಲ್ಲವು ಇರುವ ಪುಟ್ಟದ್ದು ಹಾಗೇ "ನ್ಯಾನೋ ಕಥೆ" ಅರ್ತವಾಯಿತಾ ಅಜ಼ಾದ ಗುರುಗಳೇ. ಇದು ನ್ಯಾನೋ ಕಾರಿನ ಅಭಿಮಾನಿಗಳು ತ೦ದ ಹೆಸರು. ಸರಿನೋ? ತಪ್ಪೋ? ನಮ್ಮಗಲ ತರ್ಕಕ್ಕೆ ಬಿಟ್ಟದ್ದು.

b.saleem said...

ಶಿವು ಸರ್,
ಸಣ್ಣ ಕಥೆ ಮತ್ತು ಚಿತ್ರಗಳು ಚನ್ನಾಗಿವೆ.

Subrahmanya said...
This comment has been removed by the author.
Subrahmanya said...

ಶಿವು ಸರ್,
ಚಿತ್ರಗಳು ತುಂಬ ಚೆನ್ನಾಗಿದೆ. ನಿಮ್ಮ ಅಭಿರುಚಿಗೊಂದು ಹ್ಯಾಟ್ಸಾಫ್..

ಮನದಾಳದಿಂದ............ said...

ಶಿವೂ ಅವ್ರೆ, ಚಂದದ ಚಿತ್ರಗಳು. ಅದಕ್ಕೆ ಒಪ್ಪುವಂತ ಪೂರಕ ನ್ಯಾನೋ ಕಥೆಗಳು! ಸುಂದರ ಅತೀ ಸುಂದರ!

ಬಿಸಿಲ ಹನಿ said...

ನಿಮ್ಮ ನ್ಯಾನೋ ಕಥೆಗಳು ಒಂದಕ್ಕಿಂತ ಒಂದು ಚನ್ನಾಗಿವೆ. ಅದರಲ್ಲೂ ಕಲಾವಿದ ಬಿಳಿ ಹುಡುಗಿಯ ಮುಖವನ್ನು ಕತ್ತಲನ್ನಾಗಿ ಮಾಡಿದ್ದು ತಮಾಷೆಯೆನಿಸಿದರೂ ಕತ್ತಲಿನೊಂದಿಗೆ ಮನುಷ್ಯ ಕಳೆದುಹೋಗುತ್ತಾನೆ ಎಂದು ತೋರಿಸುವ ಸಂದೇಶವನ್ನು ಕೊಟ್ಟಿರಬಹುದೆ?

ಮನಸಿನಮನೆಯವನು said...

'shivu.k ' ಅವ್ರೆ..,

ಮುದ್ದಾಗಿವೆ..

ನನ್ನ 'ಮನಸಿನಮನೆ'ಗೊಮ್ಮೆ ಬನ್ನಿ: http://manasinamane.blogspot.com

shivu.k said...

ವನಿತಾ,

ನಿಮ್ಮ ಅಭಿಪ್ರಾಯಕ್ಕೆ ಧನ್ಯವಾದಗಳು.

shivu.k said...

ಆಶೋಕ್,

ಅವರ ಬಗ್ಗೆ ಚಿಂತೆ ಬೇಡ. ಅವರು ಗೆಳೆಯರು.

ಚಿತ್ರಗಳು, ಮತ್ತು ಕತೆಗಳನ್ನು ಮೆಚ್ಚಿದ್ದಕ್ಕೆ ಧನ್ಯವಾದಗಳು.

shivu.k said...

ಸವಿಗನಸು ಮಹೇಶ್ ಸರ್,

ನಿಮ್ಮ ಮೆಚ್ಚುಗೆಗೆ ಥ್ಯಾಂಕ್ಸ್..

shivu.k said...

ರವಿಕಾಂತ್ ಸರ್,

ಚಿತ್ರಗಳು ಮತ್ತು ಲೇಖನವನ್ನು ಮೆಚ್ಚಿದ್ದಕ್ಕೆ ಥ್ಯಾಂಕ್ಸ್.

shivu.k said...

ಸೀತಾರಾಂ ಸರ್,

ನ್ಯಾನೋ ಕತೆಗಳು ಮತ್ತು ಚಿತ್ರಗಳನ್ನು ಇಷ್ಟಪಟ್ಟಿದ್ದೀರಿ. ಕತೆಗಳ ಬಗ್ಗೆ ನಿಮ್ಮ ಅನಿಸಿಕೆಗಳನ್ನು ತಿಳಿಸಿದ್ದೀರಿ ಥ್ಯಾಂಕ್ಸ್..

ನ್ಯಾನೋ ಬಗ್ಗೆ ಹೆಚ್ಚುಗೊತ್ತಿರಲಿಲ್ಲ. ಅದಕ್ಕಾಗಿ ಆಜಾದ್‍ರಿಗೆ ನನ್ನ ಪರವಾಗಿ ನೀವು ಉತ್ತರಿಸಿದ್ದಕ್ಕೆ ಮತ್ತೊಮ್ಮೆ ಥ್ಯಾಂಕ್ಸ್.

shivu.k said...

ಸಲೀಂ,

ಧನ್ಯವಾದಗಳು.

shivu.k said...

ಸುಬ್ರಮಣ್ಯ ಸರ್,

ನನ್ನ ಅಭಿರುಚಿ ಮತ್ತು ಚಿತ್ರಗಳನ್ನು ಮೆಚ್ಚಿದ್ದಕ್ಕೆ ಥ್ಯಾಂಕ್ಸ್..

shivu.k said...

ಮನದಾಳದಿಂದ ಸರ್,

ಚಿತ್ರಸಂತೆಯ ಚಿತ್ರಗಳು ಮತ್ತು ಅದಕ್ಕೆ ಪೂರಕವಾದ ಪುಟ್ಟ ಪುಟ್ಟಕತೆಗಳನ್ನು ಇಷ್ಟಪಟ್ಟು ಪ್ರೋತ್ಸಾಹಿಸುತ್ತಿದ್ದೀರಿ..ಧನ್ಯವಾದಗಳು.

shivu.k said...

ಉದಯ್ ಸರ್,

ಪ್ರತಿ ಕತೆಯಲ್ಲೂ ಒಂದು ಸಂದೇಶವಿದ್ದೇ ಇದೆ. ಅದನ್ನು ನೀವು ಗುರುತಿಸಿದಿರಿ. ಮತ್ತು ನ್ಯಾನೋ ಕತೆಗಳನ್ನು ಮೆಚ್ಚಿದ್ದಕ್ಕೆ ಧನ್ಯವಾದಗಳು.

shivu.k said...

ಗುರುದೆಸೆಯವರೆ,

ನಿಮ್ಮ ಅಭಿಪ್ರಾಯಕ್ಕೆ ಧನ್ಯವಾದಗಳು. ನಿಮ್ಮ ಹೊಸಲೇಖನವನ್ನು ಓದಿದೆ. ಚೆನ್ನಾಗಿದೆ. ಮತ್ತೆ ನೀವು ಹೊಸದನ್ನು ಬ್ಲಾಗಿನಲ್ಲಿ ನಾನು ಹಿಂಭಾಲಿಸುತ್ತಿರುವುದರಿಂದ ನನಗೆ ತಕ್ಷಣ ಗೊತ್ತಾಗುತ್ತದೆ. ಆಗ ಓದಿ ಪ್ರತಿಕ್ರಿಯಿಸುತ್ತೇನೆ. ಬೇಗ ಹೊಸ ಲೇಖನವನ್ನು ಹಾಕಿ.
ಧನ್ಯವಾದಗಳು.

Anonymous said...

ವಾಹ್ ಶಿವು, ಚೆನ್ನಾಗಿದೆ ನಿಮ್ಮ ಚಿತ್ರಗಳು ಮತ್ತು 'ನ್ಯಾನೋ' ಕಥೆಗಳು!! ಆದರೆ ಇನ್ನಷ್ಟು ಚಿತ್ರಗಳ expectation ಇತ್ತು!!

shivu.k said...

ಸುಮನಾ ಮೇಡಮ್,


ಇಲ್ಲಿ ಪುಟ್ಟಕತೆಗಳಿಗೆ ಪ್ರಾಧಾನ್ಯತೆಯನ್ನು ಕೊಟ್ಟಿದ್ದರಿಂದ ಫೋಟೊಗಳು ಕಡಿಮೆಯಾಗಿವೆ..ಮೆಚ್ಚಿದ್ದಕ್ಕೆ ಧನ್ಯವಾದಗಳು.
ಫೋಟೊಗಳನ್ನೇ ಮತ್ತೊಮ್ಮೆ ಬ್ಲಾಗಿನಲ್ಲಿ ಹಾಕುತ್ತೇನೆ.

ಹರೀಶ ಮಾಂಬಾಡಿ said...

ಕತೆ, ಚಿತ್ರ ಸೂಪರ್.
ಅದನ್ನು ಚಿತ್ರಸಂದೇಶ :) ಎನ್ನಬಹುದಲ್ವಾ?
ನನಗಂತೂ ಖರ್ಚಿಲ್ಲದೇ ಬೆಂಗಳೂರಿಗೆ ಹೋಗಿ ಬಂದಂತಾಯ್ತು.
ಥ್ಯಾಂಕ್ಸ್.

shivu.k said...

ಹರೀಶ್,

ಚಿತ್ರ ಮತ್ತು ಲೇಖನ ನೋಡಿ ಖುಷಿ ಪಟ್ಟಿರಿ. ಅದರ ಪೂರ್ಣ ಆನಂದವನ್ನು enjoy ಮಾಡಲಿಕ್ಕೆ ಮುಂದಿನ ಚಿತ್ರಸಂತೆಗೆ ಖಂಡಿತ ಬೆಂಗಳೂರಿಗೆ ಬನ್ನಿ.

ಧನ್ಯವಾದಗಳು.

ಮಲ್ಲಿಕಾರ್ಜುನ.ಡಿ.ಜಿ. said...

ಶಿವು,
ಇದು ನ್ಯಾನೋ ಕಥೆಗಳೇ ಆದ್ರೂ ಫೋಟೋ ಕೊಡುವ depth ನಾನಾ ಹೊಳಹುಗಳನ್ನು ನೀಡುತ್ತದೆ. ಚಿತ್ರಸಂತೆಯ ಚಿತ್ರಕಥೆಗಳು ಸೊಗಸಾಗಿವೆ.

shivu.k said...

ಮಲ್ಲಿಕಾರ್ಜುನ್,

ನೀವು ಹೇಳಿದಂತೆ ಫೋಟೋ ಕೊಡುವ ನಾನಾ ಅರ್ಥಗಳು ತುಂಬಾ ಆಳವಾಗಿರುತ್ತವೆ. ನಾನಿಲ್ಲಿ ಫೋಟೊಗಳನ್ನು ನೆಪಮಾತ್ರಕ್ಕೆ ಬಳಸಿದ್ದೇನೆ..ಅಷ್ಟೇ...

ಧನ್ಯವಾದಗಳು.