Friday, January 29, 2010

ಮತ್ತಷ್ಟು ವೈವಿಧ್ಯಮಯ ಬಹುಮಾನಿತ ಚಿತ್ರಗಳು

೩೧ನೇ ರಾಷ್ಟ್ರಮಟ್ಟದ ಛಾಯಾಚಿತ್ರಗಳ ಪ್ರದರ್ಶನ ಮುಂದಿನ ತಿಂಗಳು ಫೆಬ್ರವರಿ ದಿನಾಂಕ 4ರ ಗುರುವಾರದಿಂದ 7ನೇಭಾನುವಾರದ ಸಂಜೆ ಎಂಟು ಗಂಟೆಯವರೆಗು ಬೆಂಗಳೂರಿನ ವೆಂಕಟಪ್ಪ ಆರ್ಟ್ ಗ್ಯಾಲರಿಯಲ್ಲಿ ನಡೆಯುವುದರಿಂದ ಅದರ ಸಲುವಾಗಿ ಮತ್ತಷ್ಟು ವಿಭಾಗಗಳ ಬಹುಮಾನ ವಿಜೇತ ಚಿತ್ರಗಳನ್ನು ನೋಡೋಣ ಬನ್ನಿ.

ಪ್ರಕೃತಿ ಪ್ರಿಂಟ್ ವಿಭಾಗದಲ್ಲಿ ಬಹುಮಾನ ಪಡೆದ ಚಿತ್ರಗಳು.

ಮೊದಲ ಬಹುಮಾನ ಪಡೆದ ಚಿತ್ರ:"ಕ್ರೂಗರ್ ಹೊಳೆಯ ದಂಡೆಯಲ್ಲಿ ಚಿರತೆ"
ಛಾಯಾಗ್ರಾಹಕ ಎಸ್. ವಲ್ಲಾಳ್ ಮಲ್ಲಿಕಾರ್ಜುನ. ಬೆಂಗಳೂರು

ಎರಡನೇ ಬಹುಮಾನ ಪಡೆದ ಚಿತ್ರ:"ಬೇಟೆಯನ್ನು ಹೊತ್ತೆಯ್ಯುತ್ತಿರುವ ಚಿರತೆ"
ಛಾಯಾಗ್ರಾಹಕ ಎಸ್. ವಲ್ಲಾಳ್ ಮಲ್ಲಿಕಾರ್ಜುನ. ಬೆಂಗಳೂರು.


ಮೂರನೇ ಬಹುಮಾನ ಪಡೆದ ಚಿತ್ರ "ಬೇಟೆಯನ್ನು ಹೊತ್ತ ಸಿಂಹ"
ಛಾಯಾಗ್ರಾಹಕ: ಬಿ.ಕೆ.ಸಿನ್ಹ. ಪಾಟ್ನ.


ಅತ್ಯುತ್ತಮ ಹಕ್ಕಿ ಪ್ರಶಸ್ಥಿ ಪಡೆದ ಚಿತ್ರ: "ಪೈಡ್ ಕಿಂಗ್‍ಫಿಶರ್ ಹಾರಾಟದಲ್ಲಿ"
ಛಾಯಾಗ್ರಾಹಕ: "ಜಿ.ಎಸ್.ರವಿಶಂಕರ್. ಮೈಸೂರು.

ಅರ್ಹತಾ ಪತ್ರ ಪಡೆದ ಚಿತ್ರ: "ಸಾರಂಗ ಬೇಟೆ ಹಿಡಿದ ಹುಲಿ"
ಛಾಯಾಗ್ರಾಹಕ: "ಎಮ್.ವಿ.ಸಿದ್ಧಾರ್ಥ್ ಮಲ್ಲಿಕ್. ಬೆಂಗಳೂರು.


ಎರಡನೇ ಅರ್ಹತ ಪತ್ರ ಪಡೆದ ಚಿತ್ರ:"ರಿವರ್ ಟರ್ನ್ ಮರಿಯ ಜೊತೆ"
ಛಾಯಾಗ್ರಾಹಕ: "ಹೆಚ್.ಬಿ.ರಾಜೇಂದ್ರ" ಬೆಂಗಳೂರು.


ವರ್ಣ ಚಿತ್ರಗಳ ವಿಭಾಗದ ಬಹುಮಾನ ವಿಜೇತ ಚಿತ್ರಗಳು.

ಮೊದಲ ಬಹುಮಾನ ವಿಜೇತ ಚಿತ್ರ" ಮರಗಳ ಕಡೆಗೆ"
ಛಾಯಾಗ್ರಾಹಕ: ಸುಬ್ರತಾ ದಾಸ್. ಕೋಚ್ ಬಿಹಾರ


ದ್ವಿತೀಯ ಬಹುಮಾನ ವಿಜೇತ ಚಿತ್ರ: ಭುವಿಯ ಸ್ವರ್ಗ"
ಛಾಯಾಗ್ರಾಹಕ: ಎಸ್. ಲೋಕೇಶ್. ಬೆಂಗಳೂರು.

ಮೂರನೇ ಬಹುಮಾನ ವಿಜೇತ ಚಿತ್ರ: " ಶ್ಲೋಕ"
ಛಾಯಾಗ್ರಾಹಕ : ಸುಭಾಸ್ ಜೀರಂಗೆ. ಮುಂಬೈ

ಮೊದಲ ಆರ್ಹತ ಪತ್ರ ಪಡೆದ ಚಿತ್ರ "ಸೆಂಟಿಮೆಂಟಲಿಷ್ಟ್"
ಛಾಯಾಗ್ರಾಹಕ: ಬಿಜನ್ ಕುಮಾರ್ ಮಂಡಲ್. ಕೊಲ್ಕತ್ತ.

ಎರಡನೇ ಅರ್ಹತಾ ಪತ್ರ ಪಡೆದ ಚಿತ್ರ: "ಚಿನ್ನದ ಕೂದಲಿನ ಮಗು"
ಛಾಯಾಗ್ರಾಹಕ: ಕೆ.ಜಿ.ಪದ್ಮನಾಭ. ಬೆಂಗಳೂರು.

ಕಪ್ಪು-ಬಿಳುಪು ವಿಭಾಗದಲ್ಲಿ ಬಹುಮಾನ ವಿಜೇತ ಚಿತ್ರಗಳು.
ಅರ್ಹತಾ ಪತ್ರ ಪಡೆದ ಚಿತ್ರ: "ಸುಂದರ ಆಡುಗೆ"
ಛಾಯಾಗ್ರಾಹಕ: ಟಿ.ಶ್ರೀನಿವಾಸ ರೆಡ್ಡಿ. ವಿಜಯವಾಡ.

ಎರಡನೇ ಅರ್ಹತಾ ಪತ್ರ ಪಡೆದ ಚಿತ್ರ: "ಮೋನಿಷ"
ಛಾಯಾಗ್ರಾಹಕ: ಕೆ.ಎಸ್.ಶ್ರೀನಿವಾಸ್. ಬೆಂಗಳೂರು.

ಮೂರನೇ ಅರ್ಹತ ಪತ್ರ ಪಡೆದ ಚಿತ್ರ: "ರಾತ್ರಿ ದೃಶ್ಯ".
ಛಾಯಾಗ್ರಾಹಕ: ಸುಬ್ರತಾ ದಾಸ್. ಕೋಚ್ ಬಿಹಾರ್.


ಅತ್ಯುತ್ತಮ ಪೋರ್ಟ್ರೈಟ್ ಬಹುಮಾನ ಪಡೆದ ಚಿತ್ರ: "ಕನಸನ್ನು ಬೆಂಬತ್ತಿ"
ಛಾಯಾಗ್ರಾಹಕ:"ಪಾಲ್ ಅನೂಪ್" ಕೊಲ್ಕತ್ತ.


ದ್ವಿತೀಯ ಬಹುಮಾನ ವಿಜೇತ ಚಿತ್ರ: "ಶನಿವಾರ ರಾತ್ರಿ"
ಛಾಯಾಗ್ರಾಹಕ: :"ಪಾಲ್ ಅನೂಪ್" ಕೊಲ್ಕತ್ತ.


ಮೊದಲ ಬಹುಮಾನ ವಿಜೇತ: "ಕನಸಿನ ಮನೆ"
ಛಾಯಾಗ್ರಾಹಕ: ಶಿವು.ಕೆ. ಬೆಂಗಳೂರು.
ಫೆಬ್ರವರಿ ನಾಲ್ಕರಿಂದ ಏಳರವರೆಗೆ ವೆಂಕಟಪ್ಪ ಆರ್ಟ್ ಗ್ಯಾಲರಿಯಲ್ಲಿ ನಡೆಯುವ ಫೋಟೊಗಳ ಉತ್ಸವದಲ್ಲಿ ಬೇಟಿಯಾಗೋಣ. ಬರುತ್ತಿರಲ್ಲಾ!

\-------------------------\
\---------------------------------------------\
ಚಿತ್ರಸಂತೆಯ ಬಗ್ಗೆ ಒಂದು ವಿಚಾರ

ಈ ಕೆಳಗಿನ ಚಿತ್ರವನ್ನು ನೋಡಿ. ಸಂಜೆ ಸೂರ್ಯಮುಳುಗುವ ಹೊತ್ತಿಗೆ ಎತ್ತಿನ ಗಾಡಿ ಮನೆಕಡೆಗೆ ಬರುತ್ತಿರುವ ದೃಶ್ಯದ ಸುಂದರವಾದ ಕಲಾಕೃತಿ ಗೋಡೆಯನ್ನು ಆಲಂಕರಿಸಿದೆಯಲ್ಲವೇ. ಈ ಸುಂದರ ಪೇಂಟಿಂಗ್ ಮಾಡಿದ್ದು ನನ್ನ ಶ್ರೀಮತಿಯ ದೊಡ್ಡಪ್ಪನ ಮಗನಾದ ವಸಂತ್. ಅವರು ಇರುವುದು ಹಾಸನದಲ್ಲಿ . ಅಲ್ಲಿನ ಒಂದು ಶಾಲೆಯಲ್ಲಿ ಚಿತ್ರಕಲಾ ಉಪದ್ಯಾಯರಾಗಿರುವ ಅವರು ಪ್ರತಿವರ್ಷ ಬೆಂಗಳೂರಿನಲ್ಲಿ ನಡೆಯುವ ಚಿತ್ರಸಂತೆಗೆ ಇಂಥ ಹತ್ತಾರು ಚಿತ್ರಗಳನ್ನು ತರುತ್ತಾರೆ. ನಾನು ಕ್ಲಿಕ್ಕಿಸಿದ ಚಿತ್ರಗಳನ್ನೆಲ್ಲಾ ಪಡೆದುಕೊಂಡು ಅವರು ಮತ್ತು ಅವರ ಶಿಷ್ಯಂದಿರು ಇಂಥ ಸುಂದರ ಪೇಂಟಿಂಗ್ ಮಾಡಿಕೊಂಡು ಚಿತ್ರ ಸಂತೆಗೆ ತರುತ್ತಾರೆ.
ಬಿಡದಿಯಲ್ಲಿರುವ ಈ ಮನೆಗೆ ಕಳೆದ ತಿಂಗಳು ಫೋಟೊ ಕ್ಲಿಕ್ಕಿಸಲು ಹೋದಾಗ ಈ ಚಿತ್ರಕಲಾಕೃತಿಯನ್ನು ನೋಡಿ ಅದನ್ನು ಪೇಂಟ್ ಮಾಡಿರುವುದು ನನ್ನ ಶ್ರೀಮತಿಯ ಅಣ್ಣನೆಂದು, ಹೇಳಿ ಅದರ ಮೂಲ ಚಿತ್ರವನ್ನು ಕೊಟ್ಟಾಗ ಅದನ್ನು ಮತ್ತೊಂದು ಕೋಣೆಯಲ್ಲಿ ಹಾಕಿದ್ದಾರೆ. ಅಲ್ಲಿಗೆ ನಾನೇ ಕ್ಲಿಕ್ಕಿಸಿದ ಫೋಟೊ ಮತ್ತು ಅದನ್ನು ನೋಡಿಕೊಂಡು ಬಿಡಿಸಿದ ಕಲಾಕೃತಿ ಎರಡು ಒಂದೇ ಮನೆಯಲ್ಲಿ ಸೇರಿರುವುದು ಎಂಥ ಕಾಕತಾಳಿಯವಲ್ಲವೇ...
ಆ ಮನೆಯವರು ಈಗಾಗಲೇ ದಿನಾಂಕ ಜನವರಿ ೩೧ರ ಭಾನುವಾರ ನಡೆಯುವ ಚಿತ್ರಸಂತೆಗೆ ಬಂದು ಮತ್ತಷ್ಟು ಛಾಯಾಚಿತ್ರ ಮತ್ತು ಪೇಂಟಿಂಗ್ ಕೊಳ್ಳುವುದಾಗಿ ಹೇಳಿದ್ದಾರೆ.
ಆಂದಹಾಗೆ ನಾಳೆ ಭಾನುವಾರ[ಜನವರಿ೩೧] ಹೇಮಾಶ್ರಿ ಅಣ್ಣ ವಸಂತ್ ಮತ್ತು ಆವರು ಶಿಷ್ಯಂದಿರು ರಚಿಸಿರುವ ಎಲ್ಲಾ ಕಲಾಕೃತಿಗಳನ್ನು ನೋಡಲು ಮತ್ತು ಕೊಂಡುಕೊಳ್ಳಲು ಚಿತ್ರ ಸಂತೆಗೆ ಬನ್ನಿ. ಕಳೆದ ನಾಲ್ಕುವರ್ಷದಿಂದ ಅವರಿಗೆ ಖಾದಿಭಂಡಾರದ ಮುಂದೆಯೇ ಸ್ಥಳ ಸಿಗುತ್ತಿರುವುದರಿಂದ ಖಚಿತವಾಗಿ ಈ ಬಾರಿಯೂ ಅಲ್ಲಿಯೇ ಸ್ಟಾಲ್ ಇಡುತ್ತಾರೆ. ಅಂಥ ದೊಡ್ಡ ಕಲಾಕೃತಿಗಳ ಪಕ್ಕದಲ್ಲಿ ನಾನಿರುತ್ತೇನೆ. ಹಾಗಾದರೆ ನಾಳೆ ಚಿತ್ರ ಸಂತೆಯಲ್ಲಿ ಬ್ಲಾಗ್ ಗೆಳೆಯರೆಲ್ಲಾ ಬೇಟಿಯಾಗುವ!

ಶಿವು.ಕೆ.

63 comments:

ಚುಕ್ಕಿಚಿತ್ತಾರ said...

ಚ೦ದದ ಫೋಟೋಗಳು..
ಅಭಿನ೦ದನೆಗಳು.

ದಿನಕರ ಮೊಗೇರ.. said...

ಶಿವೂ ಸರ್,
ಅಬ್ಬಾ ಎಂಥಾ ಚಿತ್ರಗಳು ಸರ್....... ನಿಜಕ್ಕೂ ಅದ್ಭುತ ವರ್ಣಕ್ರತಿಗಳು ....... ಕೆಲವೊಂದು ಫೋಟೋ ಗಳಂತೂ ಕಂಪ್ಯೂಟರ್ ನಲ್ಲಿ ಮಾಡಿದ್ದು ಅನಿಸುತ್ತದೆ....... ಅವಲ್ಲಿ ನಿಮ್ಮದು ಸ್ಪೆಷಲ್...... ಆಲ್ ದಿ ಬೆಸ್ಟ್ ನಿಮ್ಮ ಭಾವನಿಗೆ (ನಿಮ್ಮಾಕೆಯ ಅಣ್ಣನಿಗೆ ).....

shivu said...

ವಿಜಯಶ್ರಿ ಮೇಡಮ್,

ಧನ್ಯವಾದಗಳು.

shivu said...

ದಿನಕರ್ ಸರ್,

ನೀವು ಬೆಂಗಳೂರಿನ ಪ್ರದರ್ಶನಕ್ಕೆ ಇಂಥ ನೂರಾರು ಚಿತ್ರಗಳನ್ನು ನೋಡಬಹುದು. ಇತ್ತೀಚೆಗೆ ತಂತ್ರಜ್ಞಾನ ಮುಂದುವರಿದಿರುವುದರಿಂದ ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿ [ವಿದೇಶಗಳಲ್ಲಿ]ಕ್ಯಾಮೆರಾ ಮತ್ತು ಕಂಪ್ಯೂಟರ್ ಜುಗಲಬಂಧಿಯಲ್ಲಿ ಸೃಷ್ಟಿಸಲ್ಪಟ್ಟ ಚಿತ್ರಗಳು ತುಂಬಾ ಖ್ಯಾತಿಗಳಿಸುತ್ತಿವೆ. ಈ ಬಾರಿ ಪ್ರದರ್ಶನದಲ್ಲಿ ಅವುಗಳದೇ ಮೇಲುಗೈ ಆಗಿದೆ. ಅದರಲ್ಲಿ ನನ್ನದೂ ಒಂದು ಸಣ್ಣ ಪ್ರಯೋಗವಷ್ಟೆ.
ಧನ್ಯವಾದಗಳು.

PARAANJAPE K.N. said...

ಚಿತ್ರಗಳು ತು೦ಬಾ ಚೆನ್ನಾಗಿವೆ

Subrahmanya Bhat said...

Beautiful Photos ...thanks and congradulations...:)

ಸುಮ said...

ಕಂಗ್ರಾಜುಲೇಷನ್ಸ್ ಶಿವು ಅವರೆ .ಫೋಟೊಗಳು ಚೆನ್ನಾಗಿವೆ.ನಮ್ಮ ಮನೆಯಲ್ಲೂ ಎತ್ತಿನ ಗಾಡಿ ಹೊಡೆಯುವವನ ಚಿತ್ರವೊಂದಿದೆ. ಅದನ್ನೂ ಚಿತ್ರಸಂತೆಯಲ್ಲೇ ತೆಗೆದುಕೊಂಡಿದ್ದು. ಅದ್ನ್ನು ಬರೆದವರಾರೊ ತಿಳಿಯದು.

shivu said...

ಪರಂಜಪೆ ಸರ್,

ಧನ್ಯವಾದಗಳು.

shivu said...

ಸುಬ್ರಮಣ್ಯ ಭಟ್ ಸರ್,

ಥ್ಯಾಂಕ್ಸ್...ಪ್ರದರ್ಶನಕ್ಕೆ ಬನ್ನಿ.

shivu said...

ಸುಮಾ ಮೇಡಮ್,

ಧನ್ಯವಾದಗಳು.

ಎತ್ತಿನ ಗಾಡಿ ಚಿತ್ರಗಳು ಬಹುಶ: ನಮ್ಮ ಭಾವನದೋ ಅಥವ ಅವರ ಶಿಷ್ಯರದ್ದೇ ಆಗಿರುತ್ತೆ. ಇಡೀ ಚಿತ್ರ ಸಂತೆಯಲ್ಲಿ ಅವರೆಲ್ಲಾ ಒಂದೇ ವಿಧವಾಗಿ ಚಿತ್ರಗಳನ್ನು ಬರೆಯುತ್ತಾರೆ.
ಮತ್ತೆ ನಿಮ್ಮ ಮನೆಯಲ್ಲಿನ ಎತ್ತಿನ ಗಾಡಿ ಚಿತ್ರ ಯಾರ ಬಳಿ ಪಡೆದಿದ್ದರೋ ಅವರು ನಾಳೆ ಸಿಗಬಹುದು.
ನಿಮ್ಮ ಬಳಿ ನನ್ನ ಫೋನ್ ನಂಬರ್ ಇದೆಯಲ್ಲಾ ನಾನು ಅಲ್ಲೇ ಸುತ್ತಾಡುತ್ತ ಫೋಟೊ ತೆಗೆಯುತ್ತಿರುತ್ತೇನೆ. ಫೋನಿಗೆ ಸಿಗುತ್ತೇನೆ.

ತೇಜಸ್ವಿನಿ ಹೆಗಡೆ- said...

Many Congrats. Excellent pics!

ರಾಜೀವ said...

ಚಿತ್ರಗಳು ತುಂಬಾ ಸೊಗಸಾಗಿದೆ.
"ಮರಗಳ ಕಡೆಗೆ" ಮತ್ತು "ರಾತ್ರಿ ದೃಶ್ಯ" ಚಿತ್ರಗಳಲ್ಲಿ ತುಂಬಾ ಹೋಲಿಕೆಗಳಿದೆ. ಅವುಗಳಲ್ಲಿ ಏನಾದರೂ ಸಂಭಂದವಿದೆಯೇ?

ಫೆಬ್ ೪ ಕೆಲಸದ ದಿನವಾದ್ದರಿಂದ ಬರಲು ಸ್ವಲ್ಪ ಕಷ್ಟ. ಪ್ರಯತ್ನ ಮಾಡುತ್ತೇನೆ. ನಿಮಗೆ ಮತ್ತು ನಿಮ್ಮ ಶ್ರೀಮತಿಯ ದೊಡ್ಡಪ್ಪನ ಮಗ ವಸಂತನಿಗೆ ಅಭಿನಂದನೆಗಳು.

arya_forU said...

ಎಲ್ಲ ಚಿತ್ರಗಳು ಸೂಪರ್ ಆಗಿವೆ ಶಿವೂ ಸರ್ , ಎತ್ತಿನಗಾಡಿ ಚಿತ್ರವಂತೂ ತುಂಬಾ ಚೆನ್ನಾಗಿದೆ.

ಗಣೇಶ್ ಕಾಳೀಸರ said...

ಶಿವು ಸರ್,
ಸುಂದರ ಫೋಟೋಗಳು..
ಬಹುಮಾನದ ಪಟ್ಟಿಯಲ್ಲಿ ನಿಮ್ಮ ಹಾಗೂ ವಿ.ಡಿ. ಭಟ್ಟರ ಹೆಸರು
ನೋಡಿ ತುಂಬಾ ಖುಷಿಯಾಯಿತು.
ಅಭಿನಂದನೆಗಳು.
-ಗಣೇಶ್ ಕಾಳೀಸರ

Narayan Bhat said...

'ಕನಸಿನ ಮನೆ'..ನನಸಾಗಿದೆ.. ನನಗಂತೂ ಈ ಚಿತ್ರ ತುಂಬಾ ಹಿಡಿಸಿತು. Congratulations. ಹಾಗೆಯೇ ನೀವು ಒದಗಿಸಿದ ಎಲ್ಲ ಛಾಯಾ ಚಿತ್ರಗಳೂ ಚೆನ್ನಾಗಿವೆ..ಥ್ಯಾಂಕ್ಸ್.

Guru's world said...

ಶಿವೂ,
ನಿಮ್ಮ ಕನಸಿನ ಮನೆ ಚಿತ್ರಕ್ಕೆ , ಕಪ್ಪು ಬಿಳುಪಿನ ವಿಭಾಗದಲ್ಲಿ ಪ್ರಶಸ್ತಿ ಬಂದಿರುವುದು ತುಂಬ ಸಂತೋಷ....congrts .
ಹಾಗೆ ಬೇರೆ ಬೇರೆ ಫೋಟೋ ಗಳಂತೂ,, ತುಂಬ ಚೆನ್ನಾಗಿ ಇದೆ... ನಾನು ಖಂಡಿತ ಚಿತ್ರ ಸಂತೆಗೆ ಬಂದು ಹೋಗುತ್ತೇನೆ....
ಗುರು

ಮನಸು said...

abhaaaaaaaa!!!!!!! enta chitragaLu kanasina mane nijakku kanasinalli kandantide.

ಮನಮುಕ್ತಾ said...

ಶಿವು ಅವರೆ,
ಅಭಿನ೦ದನೆಗಳು..
ಸು೦ದರವಾದ ಚಿತ್ರಗಳನ್ನು ನೋಡಲು ಸಾದ್ಯವಾದದ್ದಕ್ಕೆ, ನಿಮಗೆ ನನ್ನ ಧನ್ಯವಾದಗಳು.

ವನಿತಾ / Vanitha said...

ಚೆಂದದ ಫೋಟೋಗಳು, ಅಭಿನಂದನೆಗಳು ಶಿವು, ಹಾಗೆಯೇ ವಸಂತ್ ಗೆ ನಮ್ಮ ಪರವಾಗಿ ಶುಭಾಶಯಗಳು,

sunaath said...

ಕನಸಿನ ಮನೆ ತುಂಬ ಸುಂದರವಾಗಿದೆ. ಅಭಿನಂದನೆಗಳು.

ಸುಧೇಶ್ ಶೆಟ್ಟಿ said...

ತು೦ಬಾ ಸು೦ದರವಾದ ಚಿತ್ರಗಳು....ಎಲ್ಲವೂ ಒ೦ದಕ್ಕಿ೦ತ ಒ೦ದು ಚ೦ದವಿದೆ...

ಕ೦ಗ್ರಾಟ್ಸ್ :)

ಶಿವಪ್ರಕಾಶ್ said...

awesome photos...
Congrats shivu :)

Shweta said...

congrats shivu sir,ninne vijaya karnatakadalli nimage bahumana banda vishaya bandittu ....

Rajesh Manjunath - ರಾಜೇಶ್ ಮಂಜುನಾಥ್ said...

ಶಿವೂ ಸರ್,
ಅದ್ಭುತ ಚಿತ್ರಗಳು. ನಾನು ಎಂದಿನಂತೆ ತಡ. ಚಿತ್ರ ಸಂತೆ ತಪ್ಪಿಸಿಕೊಂದಿದ್ದಕ್ಕೆ ಬೇಜಾರು.

Chaithrika said...

ಒಳ್ಳೆ ವಿಷಯ ತಿಳಿಸಿದ್ದೀರಿ. ಧನ್ಯವಾದ.

ರವಿಕಾಂತ ಗೋರೆ said...

ಅಭಿನಂದನೆಗಳು ಶಿವೂ ಸಾರ್.. ಉತ್ತಮ ಚಿತ್ರಗಳು..

PaLa said...

ಪ್ರಿಂಟಲ್ಲಿ ನೋಡೋಕೆ ಶನಿವಾರ ಬರ್ತೀನಿ.. ಥ್ಯಾಂಕ್ಸ್ ಶಿವು :)

ಸೀತಾರಾಮ. ಕೆ. said...

ಅದ್ಭುತವಾದ ಚಿತ್ರಗಳ ಸ೦ಗ್ರಹ. ಚೆನ್ನಾಗಿದೆ. ತಮ್ಮ ಚಿತ್ರವೂ ಚೆನ್ನಾಗಿದೆ.

ಸಾಗರದಾಚೆಯ ಇಂಚರ said...

ಶಿವೂ ಸರ್
ಸುಬ್ರತಾ ದಾಸ್. ಕೋಚ್ ಬಿಹಾರ ರವರ ಚಿತ್ರ ತುಂಬಾ ಇಷ್ಟವಾಯಿತು
ಇವರೆಲ್ಲರ ಫೋಟೋ ಹಾಕಿದ್ದಕ್ಕೆ ಥ್ಯಾಂಕ್ಸ್
ನಮಗೆ ಹೋದ ಹಾಗೆ ಆಯಿತು

ಸಿಮೆಂಟು ಮರಳಿನ ಮಧ್ಯೆ said...

ಶಿವು ಸರ್...

ನಿಮಗೆ ಬಹುಮಾನ ಬಂದದ್ದು ಕೇಳಿ ತುಂಬಾ ಸಂತೋಷವಾಯಿತು..

ಇನ್ನಷ್ಟು ಪ್ರಶಸ್ತಿಗಳು ನಿಮಗೆ ಸಿಗಲಿ...

ಚಂದದ ಫೋಟೊಗಳು..
ನಮಗೆಲ್ಲ ತೋರಿಸಿದ್ದಕ್ಕೆ ಧನ್ಯವಾದಗಳು...

ಚಿತ್ರಾ said...

ನಿಮ್ಮ ' ಕನಸಿನ ಮನೆಗೆ " ಬಂದ ಬಹುಮಾನಕ್ಕೆ ಅಭಿನಂದನೆಗಳು !
ಅದನ್ನು ಕ್ಯಾಮೆರಾ ದಲ್ಲಿ ಮೂಡಿಸಿದ ಬಗೆ ಹೇಗೆಂದು ತಿಳಿಯಲಿಲ್ಲ !

ಚಿತ್ರಾ said...

ನಿಮ್ಮ ' ಕನಸಿನ ಮನೆಗೆ " ಬಂದ ಬಹುಮಾನಕ್ಕೆ ಅಭಿನಂದನೆಗಳು !
ಅದನ್ನು ಕ್ಯಾಮೆರಾ ದಲ್ಲಿ ಮೂಡಿಸಿದ ಬಗೆ ಹೇಗೆಂದು ತಿಳಿಯಲಿಲ್ಲ !

ವಿ.ಆರ್.ಭಟ್ said...

ಯಾವುದನ್ನೂ ಆಯ್ದುಕೊಳ್ಳಲಿ ? ಎಲ್ಲವೂ ಚೆನ್ನಾಗಿರುತ್ತವೆ, ಇಲ್ಲೂ ಹಾಗೇ ಈಗ ಪ್ರತಿ ಫೋಟೋ ಕೂಡ ಚೆನ್ನಾಗಿದೆ !

b.saleem said...

ಶಿವು ಸರ್,
ನಿಮ್ಮ ಕನಸಿನ ಮನೆಗೆ ಅಭಿನಂದನೆಗಳು.
ಪ್ರಶಸ್ತಿ ಪಡೆದ ಚಿತ್ರಗಳು ನಿಜಕ್ಕೂ ಅದ್ಭುತವಾಗಿವೆ.
ಚಿತ್ರಸಂತೆಯಲ್ಲಿ ನಿಮ್ಮ ಸ್ಟಾಲ್ ಇರುವುದು ಮೊದಲೆ
ತಿಳಿಸಿದ್ದರೆ ಖಂಡಿತ ಬರುತ್ತಿದ್ದೆ.
ಚಿತ್ರಪ್ರದರ್ಶನಕ್ಕೆ ಬರುವೆ.

ಜಲನಯನ said...

ಶಿವು, ಬಣ್ಣಗಳ ಲೋಕದ ವೈಯ್ಯಾರ ಒಂದುಕಡೆ ಉಣಬಡಿಸಿದರೆ ಕಪ್ಪು-ಬಿಳುಪಿನ ಶೃಂಗಾರ ಮತ್ತೊಂದು ಸ್ವಾದ...ಚನ್ನಾಗಿವೆ...ಚಿತ್ರಗಳು...

ಗುರು-ದೆಸೆ !! said...

'shivu' ಅವರೇ..,

ಅದ್ಭುತವಾಗಿವೆ..

ನನ್ನ 'ಮನಸಿನಮನೆ'ಗೆ...:http//manasinamane.blogspot.com

shivu said...

ತೇಜಸ್ವಿನಿ ಮೇಡಮ್,

ಥ್ಯಾಂಕ್ಸ್..

shivu said...

ರಾಜೀವ್ ಸರ್,

ನೀವು ಹೇಳಿದ ಎರಡು ಚಿತ್ರಗಳು ಒಬ್ಬರದೇ.

ಮತ್ತೆ ನಿಮಗೆ ಶನಿವಾರ ಮತ್ತು ಭಾನುವಾರದಂದು ರಜವಿರಬಹುದು. ಅವತ್ತು ನೋಡಿ ಆನಂದಿಸಿ..

ಧನ್ಯವಾದಗಳು.

shivu said...

Arya forU,

ಇನ್ನಷ್ಟು ಚಿತ್ರಗಳನ್ನು ನೋಡಲು ವೆಂಕಟಪ್ಪ ಆರ್ಟ್ ಗ್ಯಾಲರಿಗೆ ಬನ್ನಿ. ನಿಮ್ಮ ಅಭಿನಂದನೆಗಳನ್ನು ಅವರಿಗೆ ತಿಳಿಸುತ್ತೇನೆ.

shivu said...

ಗಣೇಶ್ ಕಾಳೀಸರ,

ಚಿತ್ರಗಳನ್ನು ಮೆಚ್ಚಿದ್ದೀರಿ..ಅದಕ್ಕೆ ನಮಗೆ ಖುಷಿ. ವಿ.ಡಿ.ಭಟ್ ಕಳೆದವಾರ ನಮ್ಮ ಮನೆಗೆ ಬಂದಿದ್ದರು. ನಿಮ್ಮ ಅಭಿನಂದನೆಗೆ ಧನ್ಯವಾದಗಳು.

shivu said...

ನಾರಾಯಣ ಭಟ್ ಸರ್,

ಕನಸಿನ ಮನೆ ಚಿತ್ರ ನನ್ನ ಹೊಸ ಕಲ್ಪನೆ. ಅದು ಯಶಸ್ಸಿಯಾಗಿದ್ದಕ್ಕೆ ಖುಶಿಯಾಗಿದೆ. ನೀವು ಉಳಿದ ಫೋಟೊಗಳನ್ನು ಮೆಚ್ಚಿದ್ದಕ್ಕೆ ಥ್ಯಾಂಕ್ಸ್..

shivu said...

ಗುರು,

ಕನಸಿನ ಮನೆ ಚಿತ್ರ ನನ್ನ ಹೊಸ ಕಲ್ಪನೆ. ಅದು ಯಶಸ್ಸಿಯಾಗಿದ್ದಕ್ಕೆ ಖುಶಿಯಾಗಿದೆ.

ಚಿತ್ರಸಂತೆಯಲ್ಲಿ ನೀವು ಕಾಣಲೇ ಇಲ್ಲ..ಹೋಗಲಿ ಈಗ ಬಹುಮಾನ ವಿಜೇತ ಚಿತ್ರಗಳನ್ನು ನೋಡಲು ವೆಂಕಟಪ್ಪ ಆರ್ಟ್ ಗ್ಯಾಲರಿಗೆ ಬರುವುದನ್ನು ತಪ್ಪಿಸಿಕೊಳ್ಳಬೇಡಿ.

shivu said...

ಮನಸು ಮೇಡಮ್,

ಕನಸಿನ ಮನೆ ಮೊದಲು ನನಗೆ ಒಂದು ಕಲ್ಪನೆಯೇ ಆಗಿತ್ತು. ನಂತರ ಅದು ಚಿತ್ರವಾಗಿ ಮೂಡಿಬಂತು. ಆದನ್ನು ಮೆಚ್ಚಿದ್ದಕ್ಕೆ ಥ್ಯಾಂಕ್ಸ್..

shivu said...

ಮನಮುಕ್ತ,

ನಿಮ್ಮ ಅಭಿನಂದನೆಗೆ ಧನ್ಯವಾದಗಳು. ಸುಮಾರು ಇಂಥದೆ ನೂರಾರು ಚಿತ್ರಗಳನ್ನು ನೋಡಲು ವೆಂಕಟಪ್ಪ ಆರ್ಟ್ ಗ್ಯಾಲರಿಗೆ ಬನ್ನಿ.

shivu said...

ವನಿತಾ,

ನಿಮ್ಮ ಅಭಿನಂದನೆಗೆ ಧನ್ಯವಾದಗಳು. ಮತ್ತೆ ನಿಮ್ಮ ಶುಭಾಶಯವನ್ನು ವಸಂತ್‍ಗೆತಿಳಿಸುತ್ತೇನೆ...

shivu said...

ಸುನಾಥ್ ಸರ್,

ಧನ್ಯವಾದಗಳು.

shivu said...

ಸುಧೇಶ್,

ನೀವು ಹೇಳಿದಂತೆ ಎಲ್ಲಾ ಚಿತ್ರಗಳು ಒಂದಕ್ಕಿಂತ ಒಂದು ವಿಭಿನ್ನವೇ ಸರಿ. ನಿಮ್ಮ ಅಭಿನಂದನೆಗೆ ಧನ್ಯವಾದಗಳು.

shivu said...

ಶಿವಪ್ರಕಾಶ್,

ಥ್ಯಾಂಕ್ಸ್...ವೆಂಕಟಪ್ಪ ಆರ್ಟ್ ಗ್ಯಾಲರಿಗೆ ಬನ್ನಿ.

shivu said...

ಶ್ವೇತರವರೆ,

ಧನ್ಯವಾದಗಳು. ವಿಜಯಕರ್ನಾಟಕದಲ್ಲಿ ನನ್ನ ಚಿತ್ರದ ಜೊತೆಗೆ ಮತ್ತಷ್ಟು ವಿಚಾರವನ್ನು ಕೊಟ್ಟಿದ್ದಾರೆ. ಅವರಿಗೂ ಈ ಸಮಯದಲ್ಲಿ ಧನ್ಯವಾದಗಳು.

shivu said...

ರಾಜೇಶ್ ಮಂಜುನಾಥ್,

ಚಿತ್ರಸಂತೆ ತಪ್ಪಿಸಿಕೊಂಡಿದ್ದರ ತಪ್ಪಿಗೆ ವೆಂಕಟಪ್ಪ ಆರ್ಟ್ ಗ್ಯಾಲರಿಯಲ್ಲಿ ಪ್ರಶಸ್ಥಿ ವಿಜೇತ ಚಿತ್ರಗಳ ಜೊತೆಗೆ ನೂರರು ಚಿತ್ರಗಳನ್ನು ನೋಡಿ ಪ್ರಾಯಃಶ್ಚಿತ್ತ ಮಾಡಿಕೊಳ್ಳಿ...

ಹರೀಶ ಮಾಂಬಾಡಿ said...

ಒಂದಕ್ಕಿಂತ ಒಂದು ಚೆಂದ

shivu said...

chitrika,

ಒಳ್ಳೆಯ ವಿಚಾರವನ್ನು ಉಪಯೋಗಿಸಿಕೊಳ್ಳಿ.

shivu said...

ರವಿಕಾಂತ್ ಸರ್,

ಚಿತ್ರಗಳನ್ನು ಮೆಚ್ಚಿದ್ದಕ್ಕೆ ಮತ್ತು ಅಭಿನಂದಿಸಿದ್ದಕ್ಕೆ ಥ್ಯಾಂಕ್ಸ್..

shivu said...

ಪಾಲಚಂದ್ರ,

ನಾನು ಶನಿವಾರ ಸಿಗುತ್ತೇನೆ.

shivu said...

ಸೀತಾರಾಮ್ ಸರ್,

ಚಿತ್ರಗಳನ್ನು ಮೆಚ್ಚಿದ್ದಕ್ಕೆ ಥ್ಯಾಂಕ್ಸ್...

shivu said...

ಗುರುಮಾರ್ತಿ ಹೆಗಡೆ ಸರ್,

ಸುಬ್ರತಾದಾಸ್. ಒಬ್ಬ ಉತ್ತಮ ಛಾಯಾಗ್ರಾಹಕ. ಅವರು ನನಗೆ ಮೇಲ್-ಚಾಟ್‍ನಲ್ಲಿ ಸಿಗುತ್ತಾರೆ. ಅವರಿಗೆ ನಿಮ್ಮ ಅಭಿನಂದನೆಗಳನ್ನು ತಿಳಿಸುತ್ತೇನೆ.

ಧನ್ಯವಾದಗಳು.

shivu said...

ಪ್ರಕಾಶ್ ಸರ್,

ನಿಮ್ಮ ಅಭಿನಂದನೆಗೆ ಧನ್ಯವಾದಗಳು. ಇನ್ನಿತರ ಚಿತ್ರಗಳನ್ನು ಮೆಚ್ಚಿದ್ದಕ್ಕೆ ಧನ್ಯವಾದಗಳು.

shivu said...

ಚಿತ್ರ ಮೇಡಮ್,

ಕನಸಿನ ಚಿತ್ರ ನಿಜಕ್ಕೂ ಹೊಸ ಕಲ್ಪನೆ.ಎಲ್ಲಾ ಕಲೆಯಂತೆ ಫೋಟೋಗ್ರಫಿ ಕಲೆಯಲ್ಲೂ ವಿದೇಶಿಯರು ಹೊಸದನ್ನು ಸೃಷ್ಠಿಸುವುದರಲ್ಲಿ ಮುಂದಿದ್ದಾರೆ.ಅವರಂತೆ ನಾನು ಒಂದಷ್ಟು ಪ್ರಯೋಗಮಾಡುತ್ತಿದ್ದೇನೆ. ಅದು ಈಗ ಯಶಸ್ಸು ತಂದುಕೊಂಡುತ್ತಿದೆ. ಅನೇಕ ಚಿತ್ರಗಳನ್ನು ಒಟ್ಟು ಮಾಡಿ ಇಂಥ ಹೊಸ ಕಲ್ಪನೆಯ ಚಿತ್ರವನ್ನು ಸೃಷ್ಟಿಸುವುದು ಇದರ ವಿಶೇಷ. ನೀವು ಮುಂಬೈನ ಜಹಂಗೀರ್ ಆರ್ಟ್ ಗ್ಯಾಲರಿಯಲ್ಲಿ ಪ್ರತಿವರ್ಷ ನಡೆಯುವ ಫೋಟೊ ಪ್ರದರ್ಶನಕ್ಕೆ ಹೋಗಿ ನೋಡಿದರೆ ಇಂಥ ಹತ್ತಾರು ಹೊಸ ವಿಧದ ಚಿತ್ರಗಳು ಪ್ರದರ್ಶನಕ್ಕೆ ಬಂದಿರುತ್ತವೆ.
ಇದರ ಬಗ್ಗೆ ಮುಂದೆ ಎಂದಾದರೂ ಪೂರ್ತಿ ಬರೆಯುತ್ತೇನೆ..
ಧನ್ಯವಾದಗಳು.

shivu said...

ವಿ.ಅರ್.ಭಟ್ ಸರ್,

ನೀವು ಎಲ್ಲಾ ಚಿತ್ರಗಳನ್ನು ಆಯ್ದುಕೊಂಡು ಮೆಚ್ಚಬಹುದು. ಧನ್ಯವಾದಗಳು.

shivu said...

ಸಲೀಂ,

ನಿಮ್ಮ ಅಭಿನಂದನೆಗೆ ಧನ್ಯವಾದಗಳು. ನಿಮ್ಮ ಮತ್ತು ಪ್ರಕಾಶ್ ಕಂದಕೋರ ಅವರ ಚಿತ್ರಗಳು ಪ್ರದರ್ಶನಕ್ಕೆ ಆಯ್ಕೆಯಾಗಿವೆ. ನಿಮ್ಮ ಭಾನುವಾರ ಬೇಟಿಯಾಗಲು ಕಾಯುತ್ತಿರುವೆ.

shivu said...

ಆಜಾದ್,

ನೀವು ಹೇಳಿದಂತೆ ಬಣ್ಣದ ಒನಪೆ ಒಂದು ರೀತಿಯಾದರೆ, ಕಪ್ಪು ಬಿಳುಪು ಮತ್ತೊಂದು ರೀತಿಯ ಭಾವನೆಗಳನ್ನು ವ್ಯಕ್ತಪಡಿಸುತ್ತವೆ. ಒಟ್ಟಾರೆ ಖುಷಿ ಕೊಡುತ್ತವೆ.

ಧನ್ಯವಾದಗಳು.

shivu said...

ಗುರುದೆಸೆ,

ಧನ್ಯವಾದಗಳು.

ನಿಮ್ಮ ಬ್ಲಾಗಿಗೆ ಹೋಗಿದ್ದೆ. ಚೆನ್ನಾಗಿದೆ. all the best.

shivu said...

ಹರೀಶ್ ಮಾಂಬಾಡಿ,

ಚಿತ್ರಗಳನ್ನು ಮೆಚ್ಚಿದ್ದಕ್ಕೆ ಧನ್ಯವಾದಗಳು.