Tuesday, October 27, 2009

ಅದೊಮ್ಮೆ ಉಗಿಯೋವರ್ಗೂ ತಡಕೊಳ್ರೀ.....


"ಹೇಮ ಗೀಸರಿನಿಂದ ತಣ್ಣೀರು ಬರುತ್ತಿದೆ, ಬಿಸಿನೀರು ಬರುತ್ತಿಲ್ಲ"..ಗೀಸರ್ ನಲ್ಲಿ ತಿರುಗಿಸುತ್ತಾ ಕೇಳಿದೆ.

"ಎಷ್ಟು ದಿನಾನ್ರೀ ನಿಮಗೆ ಹೇಳಿಕೋಡೋದು. ಇನ್ನು ಗೊತ್ತಾಗಲಿಲ್ಲವಲ್ರಿ ನಿಮಗೆ" ಅಂತ ಆಡಿಗೆ ಮನೆಯಿಂದ ಗೊಣಗುತ್ತಾ ಬಂದಳು. ನಾನು ತಿರುಗಿಸಿದ್ದ ಟ್ಯಾಂಕ್ ನಲ್ಲಿ ಹಾಗೂ ಪಕ್ಕದಲ್ಲಿದ್ದ ಗೀಸರ್ ನಲ್ಲಿಯನ್ನು ನಿಲ್ಲಿಸಿದಳು. ಅವೆರಡಕ್ಕಿಂತ ಸ್ವಲ್ಪ ದೂರದಲ್ಲಿ ಮತ್ತೊಂದು ನಲ್ಲಿ[ಅದು ಟಾಯ್ಲೆಟ್ ನೀರಿಗಾಗಿ ಇದ್ದಂತದ್ದು]ತಿರುಗಿಸಿದಳು. ಅದರಿಂದ ನೀರು ನಿದಾನವಾಗಿ ಬರತೊಡಗಿತು. ಆರೆರೆ.....ಇದೇನು ನಾನು ಬಿಸಿನೀರಿಗಾಗಿ ಗೀಸರ್ ನಲ್ಲಿ ತಿರುಗಿಸಿದರೆ ಇವಳು ಅದನ್ನು ಬಂದ್ ಮಾಡಿ ಟಾಯ್ಲೆಟ್ ನಲ್ಲಿಯಲ್ಲಿ ನೀರು ಬರುವಂತೆ ಮಾಡಿದ್ದಾಳಲ್ಲ ಅಂತ ನನಗೆ ಆಶ್ಚರ್ಯವಾಗಿತ್ತು.

"ಇದೇನೇ ಇದು ಗ್ಯಾಸ್ ಗೀಸರ್ ಆನ್ ಆಗದೆ ಬಿಸಿನೀರು ಬರ್ತಿಲ್ಲ ಅಂದರೆ, ನೀನು ಬಕೆಟ್ಟು ಇಟ್ಟು ಆ ನಲ್ಲಿ ತಿರುಗಿಸಿದ್ದಿಯಲ್ಲ...ಏನು ತಣ್ಣೀರು ಸ್ನಾನ ಮಾಡಿಕೊಂಡು ಹೋಗಬೇಕಾ" ಅಂದೆ.

"ರೀ....ಸ್ವಲ್ಪ ತಡಕೊಳ್ರಿ"...ಅಂತ ನೇರ ಆಡಿಗೆ ಮನೆಗೆ ಹೋದಳು. ಅವಳ ಉದ್ದೇಶವೇನೆಂದು ನನಗೆ ಅರ್ಥವಾಗಲಿಲ್ಲ.

"ನೀವು ಹೊರಗೆ ಎಷ್ಟೋ ಜನರ ಬಳಿ ನಯ ನಾಜೂಕಾಗಿ ವ್ಯವಹರಿಸಬಹುದು, ಪ್ರಾಣಿ ಪಕ್ಷಿಗಳು, ಮನುಷ್ಯರು ಹೀಗೆ ಜೀವವಿರುವಂತ ಎಲ್ಲರನ್ನು ಏಮಾರಿಸಿ ಫೋಟೋ ತೆಗೆಯಬಹುದು, ಆದ್ರೆ ನಿರ್ಜೀವವಿರುವ ಈ ನಲ್ಲಿಗಳು ಹೇಗೆ ವರ್ತಿಸುತ್ತವೆ ಅಂತ ತಿಳಿದು ಅವುಗಳ ಜೊತೆ ವ್ಯವಹಾರ ಮಾಡೋಕೆ ಕಲಿತುಕೊಳ್ಳಲಿಲ್ಲ ನೀವು, ಕೊನೆ ಪಕ್ಷ ಅವುಗಳ ನಡುವಳಿಕೆ ಏನು ಅಂತ ತಿಳಿದುಕೊಳ್ಳಲಿಕ್ಕೆ ಹಾಗಲಿಲ್ಲವಲ್ರೀ"....ನಯವಾಗಿ ಕುಟುಕಿದಳು.

ಆವಳ ಮಾತು ಸತ್ಯವೆನಿಸಿತ್ತು. ಈ ಮನೆಗೆ ಬಂದಾಗಿನಿಂದ ನಮ್ಮ ಆಡಿಗೆ ಮನೆಯ ಮೂರು ನಲ್ಲಿಗಳು, ಮತ್ತು ಬಚ್ಚಲು ಮನೆಯ ಮೂರು ನಲ್ಲಿಗಳು ನನ್ನನ್ನು ಚೆನ್ನಾಗಿ ಆಟವಾಡಿಸುತ್ತಿವೆ. ಅವುಗಳನ್ನು ನಾನು ಇವತ್ತಿನವರೆಗೂ ಅರಿತುಕೊಳ್ಳಲು ಆಗುತ್ತಿಲ್ಲ. ನಾನು ಏನು ನಿರೀಕ್ಷೆ ಮಾಡುತ್ತೇನೊ ಅದಕ್ಕೆ ತದ್ವಿರುದ್ಧವಾಗಿ ನಡೆದುಕೊಳ್ಳುವುದು ಅವುಗಳ ಜನ್ಮಸಿದ್ಧ ಹಕ್ಕು ಎಂದುಕೊಂಡು ಬಿಟ್ಟಿವೆಯೇನೋ...ಆಷ್ಟರಲ್ಲಿ ಅಲ್ಲಿಟ್ಟಿದ್ದ ಬಕೆಟ್ಟಿನ ತುಂಬಾ ನೀರು ತುಂಬಿತ್ತು.

"ಹೇಮಾ ಬಕೆಟ್ಟು ತುಂಬಿತು. ಹೀಗೇನು ಮಾಡಲಿ"

"ಮತ್ತೊಂದು ಬಕೆಟ್ಟು ಇಡಿ"

ನನಗೆ ಇವತ್ತು ತಣ್ಣೀರೆ ಗತಿ ಎಂದುಕೊಂಡು "ಅಲ್ಲಾ ಕಣೇ ನಾನು ಕೇಳಿದ್ದು ಬಿಸಿನೀರು, ಗೀಸರಿನಿಂದ ಬರುತ್ತಿಲ್ಲ ಅಂದ್ರೆ ಹೋಗ್ಲಿ ಆಡಿಗೆ ಮನೆಯಲ್ಲಿ ಎರಡು ದೊಡ್ಡ ಪಾತ್ರೆಯಲ್ಲಿ ಕಾಯಿಸಿಕೊಡು, ನಾನು ತಣ್ಣೀರು ಸ್ನಾನ ಮಾಡಿದರೆ ನೆಗಡಿ ಗ್ಯಾರಂಟಿ"

"ಸ್ವಲ್ಪ ತಡಕೊಳ್ರೀ....ಅದ್ಯಾಕೆ ಆತುರ ಪಡುತ್ತೀರಿ, ಆ ಕೊಳಯಿ ಒಮ್ಮೆ ಜೋರಾಗಿ ಉಗಿಯಲಿ"

ಆಹಾಂ! ಕೊಳಾಯಿ ಉಗಿಯಬೇಕಾ? ವಿಚಾರವೇ ಹೊಸತಲ್ಲ. ಮನುಷ್ಯರಿಗೆ ಮಾತ್ರ ಉಗಿದು ಉಪ್ಪು ಹಾಕುವುದು ಗೊತ್ತು ಆದ್ರೆ ಈ ನಲ್ಲಿಗಳು ಉಗಿಯೋದು ಅಂದ್ರೆ ಏನು? ನಾನು ಚಿಂತೆಗೆ ಬಿದ್ದೆ. ಆಷ್ಟರಲ್ಲಿ,

"ರೀ ನೋಡ್ರೀ...ಉಗಿಯಿತು ನೋಡ್ರೀ....ಇನ್ನು ಒಂದೆರಡು ಬಾರಿ ಚೆನ್ನಾಗಿ ಉಗಿಯಲಿ ನಂತರ ನಿಮಗೆ ಬೇಕಾದ ಬಿಸಿನೀರು ಸಿಗುತ್ತೆ" ಅಂದಳು.

ನಾನು ನಲ್ಲಿ ಕಡೆ ನೋಡಿದೆ. ಒಂದುವರೆ ಬಕೆಟ್ ತುಂಬಿದ ಮೇಲೆ ನಲ್ಲಿಯಿಂದ ನೀರು ಜೋರಾಗಿ ಬರುತ್ತಿದೆ! ನಿದಾನವಾಗಿ ಬರುತ್ತಿದ್ದ ನೀರು ವೇಗವಾಗಿ ಬರುವುದಕ್ಕೆ ಮೊದಲು ಕೆಲವು ಜೋರಾದ ಶಬ್ದಮಾಡಿ ಒಳಗಿನ ಗಾಳಿಯನ್ನು ಹೊರಹಾಕುವಾಗ ಕ್ಯಾ....ಶೂ....ಟಪ್...ಗರರ್.ಡ್ರೂರ್......ಹುಷ್..........ಇನ್ನೂ ಏನೇನೋ ಶಬ್ದಮಾಡುತ್ತಿದೆ. ಹೇಮಾಶ್ರೀ ಪ್ರಕಾರ ಅದು ಈಗ ಚೆನ್ನಾಗಿ ಉಗಿಯುತ್ತಿದೆ! ಹೌದು! ವೇಗವಾಗಿ ನೀರು ಕ್ಯಾಕರಿಸಿ, ಕೆಮ್ಮಿ ಉಗಿದಂತೆ ನಲ್ಲಿಯಿಂದ ಜೋರಾಗಿ ಬರುತ್ತಿದೆಯಲ್ಲಾ ! ಮುಂದೇನು?

"ಈಗ ಹೋಗಿ ಅದನ್ನು ನಿಲ್ಲಿಸಿ. ನಂತರ ಗ್ಯಾಸ್ ಗೀಸರ್ ನಲ್ಲಿಯನ್ನೂ ತಿರುಗಿಸಿ ಬಿಸಿನೀರು ತಕ್ಷಣ ಬರುತ್ತೆ" ಎಂದಳು. ಅವಳು ಹೇಳಿದಂತೆ ಮಾಡಿದೆ, ಹೌದು! ಈಗ ಖಂಡಿತ ಬಿಸಿನೀರು ಬರುತ್ತಿದೆ. ಖುಷಿಯಾಯ್ತು. ನೋಡ್ರೀ.. ಮೊದಲು ನೀರು ಪೋರ್ಸ್ ಇರಲಿಲ್ಲವಾದ್ದರಿಂದ ಗೀಸರುನಲ್ಲಿ ನೀರು ಬರಲು ಪ್ರೆಶ್ಶರ್ ಸಾಕಾಗುತ್ತಿರಲಿಲ್ಲ. ಅದಕ್ಕಾಗಿ ಪಕ್ಕದ ಆ ನಲ್ಲಿಯಲ್ಲಿ ನೀರು ಬಿಟ್ಟಾಗ ಸ್ವಲ್ಪಹೊತ್ತಿನ ನಂತರ ಪ್ರೆಶರ್ ಹೆಚ್ಚಾಗುತ್ತಿದ್ದಂತೆ ಅದು ಹೀಗೆ ಕ್ಯಾಕರಿಸಿ ಉಗಿಯುತ್ತಾ, ಅನೇಕ ಶಬ್ದಮಾಡಿ ನೀರು ಜೋರಾಗಿ ನಮಗೆ ಪೋರ್ಸ್ ಸಿಗುತ್ತದೆ. ಆಗ ತಕ್ಷಣ ಅದನ್ನು ನಿಲ್ಲಿಸಿ ಗೀಸರ್ ನಲ್ಲಿ ತಿರುಗಿಸಿದರೆ ನಾಲ್ಕೇ ಸೆಕೆಂಡುಗಳಲ್ಲಿ ಬಿಸಿನೀರು ಬರುತ್ತದೆ. ಈ ಮನೆಗೆ ಬಂದು ಎಂಟು ತಿಂಗಳಾದ್ರೂ ನಿಮಗೆ ಗೊತ್ತಾಗಲಿಲ್ಲವಲ್ರೀ....ಹೋಗಿ ಸ್ನಾನಮಾಡಿಕೊಳ್ಳಿ, ಅಂಗಿಸುತ್ತಾ ಮತ್ತೆ ಆಡುಗೆ ಮನೆಗೆ ಹೋದಳು.

"ಆದ್ರೆ ಇದೇ ನಲ್ಲಿಯಲ್ಲೇ ಪೋರ್ಸ್ ಇದೆಯೋ ಇಲ್ಲವೋ ಅಂತ ನೀರು ಬಿಟ್ಟು ಕಂಡುಕೊಳ್ಳಬಹುದಲ್ವೇನೇ?

"ಅದಕ್ಕೆ ಹೇಳೋದು ನಿಮಗೆ ಗೊತ್ತಾಗೊಲ್ಲ ಅಂತ. ನೇರವಾಗಿ ಟ್ಯಾಂಕಿನಿಂದ ನೀರು ಈ ನಲ್ಲಿಗೆ ಬರುತ್ತದೆ. ಅಂದ್ರೆ ಟ್ಯಾಂಕಿನೊಳಗೆ ಏನೇನು ಆಗುತ್ತೆ ಅಂತ ಮೊದಲು ಈ ನಲ್ಲಿಗೆ ಗೊತ್ತಾಗುತ್ತೆ. ಅದಕ್ಕೆ ತಕ್ಕಂತೆ ಹೀಗೆ ವರ್ತಿಸಿ ನಮಗೆ ಸೂಚನೆ ಕೊಡುತ್ತೆ. ಇದು ಒಂಥರ ಟ್ರೈಯಲ್ ವರ್ಷನ್. ಅದನ್ನು ನೋಡಿ ನಾವು ಹೀಗೆ ನೀರಿನ ವಿಚಾರದಲ್ಲಿ ತಣ್ಣೀರು ಮತ್ತು ಬಿಸಿನೀರನ್ನು ಅನಲೈಸ್ ಮಾಡಬೇಕು ಗೊತ್ತಾಯ್ತ" ಅಂದಳು.

ಎಲಾ! ನಲ್ಲಿಯೇ....ನಿನ್ನೊಳಗೆ ಏನೆಲ್ಲಾ ಆಟ ಉಂಟು! ಅಂದುಕೊಳ್ಳುತ್ತಾ ಸ್ನಾನ ಮುಗಿಸಿದ್ದೆ.

"ಸ್ನಾನ ಆಯ್ತೇನ್ರೀ....ಆಗಿದ್ರೆ ಬನ್ನಿ ಇಲ್ಲಿ, ಆಡುಗೆ ಮನೆಯ ನಲ್ಲಿಗಳ ವಿಚಾರ ತಿಳಿಸಿಕೊಡುತ್ತೇನೆ" ಅಂತ ಕರೆದಳು.

ಇಷ್ಟಕ್ಕೂ ಈ ವಿಚಾರದಲ್ಲಿ ದೊಡ್ಡ ಕತೆಯೇ ಇದೆ. ನಮ್ಮ ಮನೆಯ ನಲ್ಲಿಗಳೆಲ್ಲಾ ಬುಗುರಿಯಂತೆ ಗುಂಡಾದ ತಿರುಗಣೆಗಳನ್ನು ಹೊಂದಿರುವಂತವು. ನನಗೂ ನಮ್ಮ ಮನೆಯ ನಲ್ಲಿಗಳಿಗೂ ಆಗಿಬರುವುದಿಲ್ಲ. ಯಾಕಂದ್ರೆ ನಮ್ಮ ಮನೆಯ ನಲ್ಲಿಗಳಿಗೆ ಯಾವಾಗ ಜೀವ ಬರುತ್ತೆ ಮತ್ತು ಜೀವ ಹೋಗುತ್ತೆ ಅನ್ನುವುದು ಗೊತ್ತಾಗೋದೆ ಇಲ್ಲ. ಹೇಮಾಶ್ರೀ ನನ್ನೂರಿಗೆ ಅಥವ ಅವಳ ತವರು ಮನೆಗೋ ಮೂರ್ನಾಲ್ಕು ದಿನದ ಮಟ್ಟಿಗೆ ಹೋದರೂ ಅವಳಿಗೆ ಈ ನಲ್ಲಿಗಳು, ಗ್ಯಾಸ್ ಸಿಲಿಂಡರ್, ಮನೆಯ ದೀಪದ ಸ್ವಿಚ್ಚುಗಳ ಬಗ್ಗೆ, ಮತ್ತು ಇವೆಲ್ಲಕ್ಕೂ ಹೊಂದಿಕೊಳ್ಳಲಾಗದ ನನ್ನ ಬಗ್ಗೆ ಚಿಂತಿಸುತ್ತಿರುತ್ತಾಳೆ. ಏಕೆಂದರೆ ಈ ಮೂರು ವಸ್ತುಗಳ ಬಗ್ಗೆ ನನ್ನ ಗಮನ ಎಳ್ಳಷ್ಟು ಇರುವುದಿಲ್ಲವೆಂದು ಅವಳಿಗೆ ನೂರಕ್ಕೆ ನೂರರಷ್ಟು ಖಚಿತವಾಗಿ ಗೊತ್ತು.

ಮೂರು ತಿಂಗಳ ಹಿಂದೆ ಅವರ ಊರಿನ ಹಬ್ಬಕ್ಕೆ ನನಗೆ ಕೆಲಸದ ಒತ್ತಡದಿಂದಾಗಿ ಹೋಗಲಾಗದೆ ಹೇಮಾಶ್ರೀಯನ್ನು ಮಾತ್ರ ಕಳುಹಿಸಿದ್ದೆ. ಆಗ ಮಳೆ ಕಡಿಮೆಯಾಗಿದ್ದರಿಂದ ನಮಗೆ ದಿನಕ್ಕೆ ಆರೇಳು ಗಂಟೆ ವಿದ್ಯುತ್ ತೆಗೆದುಬಿಡುತ್ತಿದ್ದರು. ಮನೆಯಲ್ಲಿ ಹೆಂಡತಿ ಇದ್ದಾಗ ಇಂಥವೆಲ್ಲಾ ನಮಗೆ ಗೊತ್ತಾಗೊಲ್ಲ. ಅವರು ಹೇಗೋ ಎಲ್ಲವನ್ನು ಹೊಂದಿಸಿಕೊಂಡು ನಮಗೆ ಸಮಯಕ್ಕೆ ಬೇಕಾದ ಹಾಗೆ ಎಲ್ಲಾ ತಯಾರು ಮಾಡಿಕೊಡುತ್ತಾರಾದ್ದರಿಂದ ನಮಗೆ ಗೊತ್ತಾಗುತ್ತಿರಲಿಲ್ಲ. ಆ ಸಮಯದಲ್ಲಿ ಅವತ್ತು ಬೆಳಗಿನ ದಿನಪತ್ರಿಕೆ ಕೆಲಸ ಮುಗಿಸಿ ಬೆಳಿಗ್ಗೆ ಏಳು ಗಂಟೆಗೆ ಮನೆಗೆ ಬಂದಾಗ ಕರೆಂಟು ಇರಲಿಲ್ಲ. ಮನೆಗೆ ಬಂದ ಕೂಡಲೆ ಸ್ನಾನ ಮಾಡಲೆಂದು ನಲ್ಲಿ ತಿರುಗಿಸಿದೆ. ನೀರು ಬರಲಿಲ್ಲ. ಸರಿ ಕರೆಂಟು ಬಂದ ಮೇಲೆ ನೋಡೋಣ ಅಂದುಕೊಂಡು ಸ್ವಲ್ಪ ಹೊತ್ತು ಕುಳಿತು ಪೇಪರ್ ಓದುತ್ತಿದ್ದೆ. ಆಗ ಶುರುವಾಯಿತಲ್ಲ ಮಲಮೂತ್ರ ವಿಷರ್ಜನೆಯ ಒತ್ತಡ. ಬಚ್ಚಲು ಮನೆಗೆ ಹೋದೆ ಅಲ್ಲಿ ಒಂದು ತೊಟ್ಟು ನೀರಿಲ್ಲ. ಆಡುಗೆ ಮನೆಯೊಳಗೆ ನೋಡಿದರೆ ಅಲ್ಲಿಯೂ ಒಂದು ಚಿಕ್ಕ ಪಾತ್ರೆಯಲ್ಲಿ ಮೂರು ಗ್ಲಾಸ್ ಆಗುವಷ್ಟು ನೀರು ಮಾತ್ರ ಇದೆ. ಮನೆಯಲ್ಲಿ ನೀರಿಲ್ಲ. ನೀರನ್ನು ಮೊದಲೇ ತುಂಬಿಸಿಟ್ಟುಕೊಳ್ಳಿ ಅಂತ ಹೇಮಾಶ್ರೀ ಕಿವಿಮಾತು ಹೇಳಿದ್ದರೂ ನಾನು ಕೆಲಸದ ಒತ್ತಡದಲ್ಲಿ ಮತ್ತು ಕಂಪ್ಯೂಟರ್ ಮುಂದೆ ಕೂತು ಮೈಮರೆತು ನೀರು ತುಂಬಿಸಿಕೊಳ್ಳುವುದು ಮರೆತುಬಿಟ್ಟಿದ್ದೆ. ಈಗ ಏನು ಮಾಡುವುದು ? ಕಾವೇರಿ ನೀರು ಬರುವ ಸಮಯ ಇದಲ್ಲ. ಮತ್ತೆ ಮನೆಯ ಬೋರ್‌ವೆಲ್ ನೀರನ್ನು ಟ್ಯಾಂಕಿಗೆ ತುಂಬಿಸಿ ನಂತರ ನಮ್ಮ ಮನೆಗೆ ಬಿಟ್ಟುಕೊಳ್ಳಬೇಕಾದರೆ ಕರೆಂಟು ಬೇಕೇ ಬೇಕು. ಅದು ಬರುವವರೆಗೂ ಕಾಯಲೇಬೇಕು. ಎದುರುಗಡೆಯ ಓನರ್ ಮನೆಯಲ್ಲಿ ಒಂದೆರಡು ಬಿಂದಿಗೆ ನೀರು ಕೇಳೋಣವೆಂದರೆ ಒಂಥರ ನಾಚಿಕೆ! ಹೋಗಿ ಹೋಗಿ ನೀರು ಕೇಳುವುದಾ ಅಂತ. ಹೊರಗೆ ರಸ್ತೆಯಲ್ಲಿರುವ ಬೋರ್‌ವೆಲ್ ನೀರನ್ನು ತರೋಣವೆಂದು ಹೋದರೆ ಅಲ್ಲಿಯೂ ಇದೇ ಕರೆಂಟು ತೊಂದರೆಯಿಂದಾಗಿ ನೀರೇ ಇಲ್ಲ. ಕೊನೆಗೆ ಮನೆಯಲ್ಲೇ ಕುಳಿತರೆ ಸರಿಹೋಗಲ್ಲ, ಹೊರಗೆ ಹೋಗಿ ಒಂದು ಸುತ್ತು ಹಾಕಿಕೊಂಡು ಬಂದರೇ ಆ ಒತ್ತಡದ ಗಮನದಿಂದ ಮನಸ್ಸನ್ನು ಬೇರೆಡೆ ಸೆಳೆಯಬಹುದೆಂದುಕೊಂಡು ಅರ್ಧಗಂಟೆ ಸುತ್ತಾಡಿಕೊಂಡು ಮನೆಗೆ ಬಂದರೆ ಆಗಲೂ ಕರೆಂಟು ಬಂದಿರಲಿಲ್ಲ. ಕೊನೆಗೆ ವಿಧಿಯಿಲ್ಲದೇ ಇರುವ ವಿಚಾರವನ್ನು ಅವರಿಗೆ ಹೇಳಿ ಎರಡು ಬಕೆಟ್ ನೀರು ಕೊಡಿ ಎಂದು ಓನರ ಮನೆಯವರನ್ನು ಕೇಳಬೇಕಾಯಿತು. ಅದಕ್ಕವರು ನಾವು ನೀರು ತುಂಬಿಸಿಕೊಂಡಿರಲಿಲ್ಲವಾದ್ದರಿಂದ ನಮಗೂ ನೀರಿಲ್ಲ ತೊಗೊಳ್ಳಿ ಒಂದೇ ಬಕೆಟ್ ಇರೋದು ಅಂತ ಕೊಟ್ಟರು. ಇಷ್ಟಾದರೂ ಸಿಕ್ಕಿತಲ್ಲ ಅಂದುಕೊಂಡು ಮೊದಲು ಮಲಮತ್ತು ಜಲಭಾದೆಯನ್ನು ತೀರಿಸಿಕೊಂಡಾಗ ಸ್ವರ್ಗಸುಖ! ಉಳಿದ ನೀರಿನಲ್ಲಿ ಮುಖ ತೊಳೆದ ಶಾಸ್ತ್ರಮಾಡಿ ಹೊರಗೆ ಹೋಗಿ ಹೋಟಲ್ಲಿನಲ್ಲಿ ತಿಂಡಿ ತಿಂದು ಬರುವಷ್ಟರಲ್ಲಿ ೯ ಗಂಟೆ. ಇದೆಲ್ಲದ ನಡುವೆ ಮತ್ತೊಂದು ಆಚಾತುರ್ಯ ನಡೆದಿತ್ತು. ಮುಖ ತೊಳೆದ ನಂತರ ಟೀ ಕುಡಿಯಲೆಂದು ಮನೆಯಲ್ಲಿದ್ದ ಹಾಲಿಗೆ ಟೀ ಪುಡಿ, ಸಕ್ಕರೆ ಹಾಕಿದ ಹಾಲಿನ ಪಾತ್ರೆಯನ್ನು ಗ್ಯಾಸ್ ಸ್ಟವ್ ಮೇಲಿಟ್ಟವನು ಯಾವುದೋ ಫೋನ್ ಬಂದ ನೆಪದಲ್ಲಿ ಹಾಗೆ ಮರೆತು ಹೋಟಲ್ಲಿಗೆ ಬಂದು ಬಿಟ್ಟಿದ್ದೆ. ಮನೆಗೆ ಬರುವ ಹೊತ್ತಿಗೆ ಟೀ ಎಲ್ಲಾ ಉಕ್ಕಿ ಪಾತ್ರೆಯಿಂದ ಹೊರಬಿದ್ದು ಗ್ಯಾಸ್ ಸ್ವವ್ ಮೇಲೆಲ್ಲಾ ಹರಡಿ ಅದರ ಕೆಳಗಿನ ಕಪ್ಪು ಕಡಪ ಕಲ್ಲಂತೂ ಕಜ್ಜಿ ಬಂದು ಬಿಳಚಿಕೊಂಡಂತೆ ಬಿಳಿ ಬಣ್ಣಕ್ಕೆ ಬದಲಾಗಿಬಿಟ್ಟಿತ್ತು. ಅಷ್ಟೇ ಅಲ್ಲಾ ಅಂತ ಮಳೆಯಿಲ್ಲದ ಕಾಲದಲ್ಲೂ ಕಡಪ ಕಲ್ಲನ್ನು ದಾಟಿ ಕೋಡಿಹರಿದಂತೆ ಆಗಿ ನೆಲವೆಲ್ಲಾ ಚಿತ್ತಾರವಾಗಿಬಿಟ್ಟಿತ್ತು.

ಒಹ್! ಎಂಥ ಪ್ರಮಾದವಾಗಿಬಿಡ್ತು, ಎಷ್ಟು ಚೆನ್ನಾಗಿದ್ದ ಆಡುಗೆ ಮನೆಯನ್ನು ನಾನು ಮೈಮರೆತು ಎಂತ ಪರಿಸ್ಥಿತಿಗೆ ತಂದುಬಿಟ್ಟೆ. ಇದನ್ನು ನೋಡಿದರೆ ಹೇಮಾಶ್ರೀ ನನಗೊಂದು ಗತಿ ಕಾಣಿಸುತ್ತಾಳೆ ಅಂದುಕೊಳ್ಳುತ್ತಾ ಅದನ್ನೆಲ್ಲಾ ತೊಳೆಯಲು ಸಿದ್ದನಾಗಿ ನೀರಿನ ಪಾತ್ರೆಗೆ ಕೈಹಾಕಿದರೆ ಎಲ್ಲಿದೆ ನೀರು? ಕರೆಂಟು ಇನ್ನೂ ಬಂದಿಲ್ಲವಾದ್ದರಿಂದ ನೀರು ಇಲ್ಲ. ಆಗ ಏನು ಮಾಡಲಿಕ್ಕಾಗದೇ ಸುಮ್ಮನೆ ಕುಳಿತುಬಿಟ್ಟೆ. ಆಗ ನನ್ನ ಪರಿಸ್ಥಿತಿಯಂತೂ ಅದೋಗತಿಯಾಗಿತ್ತು. ಅವತ್ತು ಹತ್ತು ಗಂಟೆಯಾದರೂ ಕರೆಂಟು ಬರಲಿಲ್ಲವಾದ್ದರಿಂದ ಮದ್ಯಾಹ್ನದ ಮೇಲೆ ಬಂದು ನೋಡಿಕೊಳ್ಳೋಣವೆಂದು ಮನೆಯಿಂದ ಹೊರಬಿದ್ದಿದ್ದೆ. ಮದ್ಯಾಹ್ನ ಮನೆಗೆ ಬಂದು ನೋಡುತ್ತೇನೆ! ಓನರ್ ನನಗಾಗಿ ಕಾಯುತ್ತಿದ್ದಾರೆ.

"ಏನ್ರೀ ಶಿವು, ನಲ್ಲಿಗಳನ್ನು ತಿರುಗಿಸಿಬಿಟ್ಟಿದ್ದೀರಲ್ಲ....ಕರೆಂಟು ಬಂದು ನಾವು ಮೋಟರ್ ಹಾಕಿ ಟ್ಯಾಂಕಿನಲ್ಲಿ ನೀರು ತುಂಬಿಸಿದ ಮೇಲೆ ಆ ನೀರೆಲ್ಲಾ ನಿಮ್ಮ ಮನೆಯ ನಲ್ಲಿ ಮೂಲಕ ಹರಿದು ಹೋಗುತ್ತಿದೆ, ಅದನ್ನು ನಿಲ್ಲಿಸೋಣವೆಂದರೆ ನೀವು ಮನೆಯನ್ನು ಲಾಕ್ ಮಾಡಿಕೊಂಡು ಹೋಗಿಬಿಟ್ಟಿದ್ದೀರಿ. ಎಷ್ಟು ನೀರು ಪೋಲಾಗಿಹೋಯ್ತು. ಬೇಗ ಬಾಗಿಲು ತೆಗೆದು ನಲ್ಲಿಗಳನ್ನು ನಿಲ್ಲಿಸ್ರೀ" ಅಂದಾಗ ನನ್ನ ಪರಿಸ್ಥಿತಿ ಹೇಗಾಗಿತ್ತು ಅಂದರೆ ಅದನ್ನು ಇಲ್ಲಿ ವರ್ಣಿಸಲಾರೆ!

ಆಗ ಅನ್ನಿಸಿದ್ದು ಈ ನಲ್ಲಿಗಳಿಗೇ ಯಾವಾಗ ಜೀವ ಬರುತ್ತೋ ಆ ದೇವರಿಗೇ ಗೊತ್ತು. ಅವು ಬುಗುರಿಯಾಕಾರವಾದ್ದರಿಂದ ತಿರುಗಿಸಿ ಟೈಟ್ ಮಾಡಿದಾಗ ಟೈಟ್ ಆದಂತೆ ವರ್ತಿಸಿದರೂ ಇದ್ದಕ್ಕಿದ್ದಂತೆ ಯಾವಾಗಲೋ ಲೂಸ್ ಆಗಿ ನೀರನ್ನು ಕ್ಯಾಕರಿಸಿ ಕೆಮ್ಮಿ, ಕಕ್ಕುತ್ತಾ, ಉಗಿಯುತ್ತಾ, ನಮ್ಮ ತಲೆಯೆಲ್ಲಾ ತಿರುಗುವಂತೆ ಮಾಡಿಬಿಡುತ್ತವೆ!

ಈ ಸಮುದ್ರದ ಮರಳ ಮೇಲಿನ ನಲ್ಲಿ[ಏಡಿ]ಗಳಿಗೂ ಬಚ್ಚಲು ಮನೆಯ ನಲ್ಲಿಗಳಿಗೂ ಏನಾದರೂ ಸಂಭಂದವಿದೆಯಾ, ಇಲ್ಲಾ ಹೋಲಿಕೆಯಿದೆಯಾ ಅಂತ ನೋಡಿದಾಗ ಸಂಭಂದವಿರದಿದ್ದರೂ ಹೋಲಿಕೆಯಂತೂ ಖಂಡಿತ ಇದೆ. ನಾವು ಸಮುದ್ರದ ಮರಳಿನಲ್ಲಿ ನಡೆಯುವ ಮೊದಲು ಆ ನಲ್ಲಿ[ಏಡಿ]ಗಳು ಆರಾಮವಾಗಿ ಓಡಾಡಿಕೊಂಡಿರುತ್ತವೆ. ಯಾವಾಗ ನಮ್ಮ ಹೆಜ್ಜೆ ಸದ್ದುಗಳು ಕೇಳಿಸುತ್ತವೋ ಪುಳಕ್ಕನೇ ಆ ಮರಳಿನಲ್ಲಿ ಮಾಯವಾಗಿಬಿಡುತ್ತವೆ. ಮತ್ತೆ ಅವು ಹೊರಗೆ ಕಾಣಿಸಿಕೊಳ್ಳುವುದು ಯಾರು ಇಲ್ಲದಾಗಲೇ. ಅದೇ ರೀತಿ ಇಲ್ಲಿ ಬಚ್ಚಲು ಮನೆಯ ನಲ್ಲಿಗಳು ನಾವು ಮನೆಯಲ್ಲಿದ್ದು ನೀರು ಬೇಕೆಂದು ತಿರುಗಣೆ ತಿರುಗಿಸಿದಾಗ ನೀರನ್ನು ಕಕ್ಕುವುದಿಲ್ಲ, ಆದ್ರೆ ನಮಗೆ ಬೇಡದ ಸಮಯದಲ್ಲಿ ಕುಡಿದವರಂತೆ ಶಬ್ದ ಮಾಡುತ್ತಾ ನೀರನ್ನು ಕ್ಯಾಕರಿಸಿ ಉಗಿಯುತ್ತವೆಯಾದ್ದರಿಂದ ಇವೆರಡರ ನಡಾವಳಿಯಲ್ಲಿ ಹೋಲಿಕೆಯಂತೂ ಇದ್ದೇ ಇದೆ.

ಒಂದೆರಡು ದಿನ ಕಳೆಯಿತು. ಊರಿನಿಂದ ಫೋನ್ ಮಾಡಿದಳು.

"ರೀ.......ಏನ್ಸಮಚಾರ......ನಲ್ಲಿ ನಿಲ್ಲಿಸಿದ್ದೀರಾ? ಗ್ಯಾಸ್ ಆಪ್ ಮಾಡಿದ್ದೀರಾ? ಎಲ್ಲಾ ಲೈಟುಗಳ ಸ್ವಿಚ್ ಆಪ್ ಮಾಡಿದ್ದೀರಾ?"

"ಏನೇ ಇದು ನನ್ನನ್ನು ವಿಚಾರಿಸಿಕೊಳ್ಳುವುದು ಬಿಟ್ಟು ಮೊದಲು ನಲ್ಲಿ, ಲೈಟು, ಗ್ಯಾಸ್ ಅಂತ ಕೇಳುತ್ತಿದ್ದೀಯಾ?"

"ಹೌದ್ರೀ....ಅವಕ್ಕೆಲ್ಲಾ ಏನು ಹೆಚ್ಚು ಕಮ್ಮಿಯಾಗದಿದ್ದರೇ ನೀವು ಖಂಡಿತ ಚೆನ್ನಾಗಿರುತ್ತೀರಿ ಅಂತ ನನಗೆ ಗೊತ್ತು"

ಅವಳು ನನ್ನನ್ನು ವಿಚಾರಿಸಿಕೊಳ್ಳುವ ಪರಿ ಈ ರೀತಿಯದಾಗಿತ್ತು.

ಅದಕ್ಕಾಗಿ ಈಗ ಅವಳು ಊರಿಗೆ ಹೋಗಿ ಅಲ್ಲಿಂದ ಫೋನ್ ಮಾಡಿದಾಗಲೆಲ್ಲಾ ನನ್ನಿಂದ ಬೇರೆ ರೀತಿ ಉತ್ತರವನ್ನು ಕೊಡುವ ಅಬ್ಯಾಸ ಮಾಡಿಕೊಂಡುಬಿಟ್ಟಿದ್ದೆ.

ಈ ಬಾರಿಯ ಗೌರಿಹಬ್ಬಕ್ಕೆ ಊರಿಗೆ ಹೋಗಿದ್ದಳಲ್ಲ...ಅಲ್ಲಿಂದ ಫೋನ್ ಮಾಡಿದಳು.

"ರೀ....ಹೇಗಿದ್ದೀರಿ....ಬೆಳಿಗ್ಗೆ ತಿಂಡಿ ಏನು ಮಾಡಿಕೊಂಡ್ರಿ?

"ಹೇಮ ನಾನು ಗ್ಯಾಸ್ ಸ್ಟವ್ ಹಚ್ಚಲೇ ಇಲ್ಲ. ಮತ್ತೆ ಹೋಟಲ್ಲಿಗೆ ಹೋಗಿ ದೋಸೆ ತಿಂದೆ."

"ಮತ್ತೆ ಸ್ನಾನ ಮಾಡಿದ್ರಾ?"

"ಸ್ನಾನಾನು ಮಾಡಲಿಲ್ಲ. ಕೊಳಾಯಿಯ ಸಹವಾಸಕ್ಕೆ ಹೋಗಲಿಲ್ಲ. ನೀನು ಊರಿಗೆ ಹೋಗುವಾಗ ದೊಡ್ಡ ಡ್ರಮ್ಮಿನಲ್ಲಿ ತುಂಬಿಸಿದ ತಣ್ಣಿರಲ್ಲೇ ಸ್ನಾನ ಮಾಡಿದೆ."

"ಅಯ್ಯೋ ತಣ್ಣೀರಾ...ನಿಮಗೆ ನೆಗಡಿಯಾಗಿಬಿಡುತ್ತೇ"

"ಆದ್ರೂ ಪರ್ವಾಗಿಲ್ಲ ನಲ್ಲಿ ಸಹವಾಸಕ್ಕಿಂತ ನೆಗಡೀನೇ ಬೆಟರ್ರೂ.....

"ಮತ್ತೆ ಲೈಟ್ ಸ್ವಿಚ್ ಆಪ್ ಮಾಡುತ್ತಿದ್ದೀರಿ ತಾನೆ?

"ಇಲ್ಲಾ ಕಣೇ"

"ಮತ್ತೆ ಹಾಗೆ ಬಿಟ್ಟು ಹೋಗುತಿದ್ರಾ?" ಅವಳ ಮಾತಿನ ದ್ವನಿಯಲ್ಲಿ ಗಾಬರಿಯಿತ್ತು.

"ನಾನು ಲೈಟ್ ಬೆಳಕನ್ನೇ ಉಪಯೋಗಿಸಲಿಲ್ಲವಾದ್ದರಿಂದ ಸ್ವಚ್ಚನ್ನು ಮುಟ್ಟುವ ಪ್ರಮೇಯವೇ ಬರಲಿಲ್ಲವಲ್ಲಾ"

"ಮತ್ತೆ ಕತ್ತಲಲ್ಲಿ ಹೇಗೆ ಇದ್ರೀ...."

"ಮೇಣದ ಬತ್ತಿಯನ್ನು ಹೊತ್ತಿಸಿ ಅದರ ಬೆಳಕಿನಲ್ಲಿ ಆದಿವಾಸಿಯಂತೆ ಕಾಲ ಕಳೆಯುತ್ತಿದ್ದೆ"

ಇಷ್ಟೆಲ್ಲಾ ಮಾತಾಡುವ ಹೊತ್ತಿಗೆ ನಾನು ಹೇಳಿದ್ದೆಲ್ಲಾ ಸುಳ್ಳು ಅಂತ ಗೊತ್ತಾಗಿ ಇನ್ನೇನಾದ್ರು ಕೇಳಿದ್ರೆ ಇವರು ಮತ್ತಷ್ಟು ಸಿನಿಮಾ ಕತೆಯನ್ನು ಹೇಳುವುದು ಗ್ಯಾರಂಟಿ ಅಂತ ಸುಮ್ಮನಾಗಿಬಿಡುತ್ತಿದ್ದಳು.

ಇನ್ನೂ ನಮ್ಮ ಮನೆಯ ಮೋಟರ್ ಸ್ವಿಚ್ ಮತ್ತು ಪೈಪುಗಳ ಕತೆಯೇ ಬೇರೊಂದು ತೆರನಾದ್ದು. ಕರೆಂಟು ಬಂತಲ್ಲ ಅಂತ ಸ್ವಿಚ್ ಹಾಕಿಬಿಟ್ಟರೆ ನೀರು ನೇರವಾಗಿ ನಮ್ಮ ಮನೆಯ ಟ್ಯಾಂಕಿಗೆ ತುಂಬುವುದಿಲ್ಲ. ಮಾಲೀಕರ ಮನೆಯ ಓವರ್ ಹೆಡ್ ಟ್ಯಾಂಕ್ ತುಂಬಿ ಹರಿದಿರುತ್ತದೆ[ನಮ್ಮ ಬಿಲ್ಡಿಂಗಿನಲ್ಲಿ ಮೂರು ಓವರ್‌ಹೆಡ್ ವಾಟರ್ ಟ್ಯಾಂಕುಗಳಿವೆ ಅವಕ್ಕೆಲ್ಲಾ ಒಂದೇ ಮೋಟರ್ ಸ್ವಿಚ್ಚಿದೆ]. ಅಥವ ನಮ್ಮ ಪಕ್ಕದ ಮನೆಯ ಟ್ಯಾಂಕು ಉಕ್ಕಿಹರಿದು ಕೋಡಿ ಬಿದ್ದಿರುತ್ತದೆ. ಇದನ್ನೆಲ್ಲಾ ತಪ್ಪಿಸಲು ನಮ್ಮ ಹದಿಮೂರು ಮನೆಯ ಬಿಲ್ಡಿಂಗಿನಲ್ಲಿ ಚಕ್ರವ್ಯೂಹದಂತ ನೀರಿನ ಪೈಪುಗಳ ಲಿಂಕುಗಳಿವೆ. ಮೋಟರ್ ಸ್ವಿಚ್ ಹಾಕುವ ಮೊದಲು ಯಾವುದೋ ಪೈಪಿನ ವಾಲ್ ಮೇಲಕ್ಕೆ ಎತ್ತಬೇಕು. ಎದುರಿಗಿರುವ ಪೈಪಿನ ವಾಲನ್ನು ಕೆಳಕ್ಕೆ ಮಾಡಬೇಕು. ಮತ್ಯಾವುದೋ ತಿರುಪಣೆಯನ್ನು ಬಲಕ್ಕೆ ತಿರುಗಿಸಿ ಟೈಟ್ ಮಾಡಬೇಕು. ಇಲ್ಲಿಯೂ ಕೆಲವೊಮ್ಮೆ ಬಲವೋ ಎಡವೊ ಗೊಂದಲವುಂಟಾಗಿ ನೀರು ಯಾವುದೋ ಟ್ಯಾಂಕಿಗೆ ಹರಿದು ಒಂದು ಕಡೆ ಅತೀವೃಷ್ಟಿ ಮತ್ತೊಂದು ಕಡೆ ಆನಾವೃಷ್ಟಿಯಾಗಿಬಿಟ್ಟಿರುತ್ತದೆ.

ಇಂಥ ಚಕ್ರವ್ಯೂಹವನ್ನೆಲ್ಲಾ ಅಧ್ಯಾಯನ ಮಾಡಿ ಅದರೊಳಗೆ ನುಗ್ಗಿ ಜಯಿಸಲು ನಾನೇನು ಅಭಿಮನ್ಯುವೇ? ಇದರ ಸಹವಾಸವೇ ಬೇಡವೆಂದು ಸುಮ್ಮನಾಗಿಬಿಡುತ್ತೇನೆ. ಮನೆಯಲ್ಲಿ ತುಂಬಿಸಿಟ್ಟ ನೀರನ್ನೇ ರೇಷನ್ ತರಹ ಬಿಂದಿಗೆಯಷ್ಟು ನೀರಿನ ಅವಶ್ಯಕತೆಯಿರುವಾಗ ಚೆಂಬಿನಷ್ಟು ಉಪಯೋಗಿಸುತ್ತಾ, ಚೆಂಬಿನಷ್ಟು ಅವಶ್ಯಕತೆಯಿರುವಾಗ ಲೋಟದಷ್ಟೇ ಉಪಯೋಗಿಸುತ್ತಾ...ನನ್ನ ಶ್ರೀಮತಿ ಬರುವವರೆಗೂ ಕಾಲಹಾಕುತ್ತೇನೆ. ಇನ್ನೂ ವಿದ್ಯುತ್ ಸ್ವಿಚ್ಚುಗಳ ಬಗ್ಗೆ ಬರೆದರೇ ನಿಮಗೆ ಅದೊಂದು ದೊಡ್ಡ ಕತೆಯಾಗುತ್ತದೆಂಬ ಭಯದಿಂದ ಇಲ್ಲಿಗೆ ನಿಲ್ಲಿಸಿದ್ದೇನೆ.

ಚಿತ್ರ ಮತ್ತು ಲೇಖನ.
ಶಿವು.ಕೆ
__________________________________________________

ಮತ್ತೊಂದು ಸುದ್ಧಿ.

ನವೆಂಬರ್ ೧೫ನೇ ೨೦೦೯ ಭಾನುವಾರದಂದು ನನ್ನ ಬರವಣಿಗೆಯ ಹೊಸ ಪುಸ್ತಕ "ವೆಂಡರ್ ಕಣ್ಣು" ಪ್ರಕಾಶ್ ಹೆಗಡೆ ಮತ್ತು ದಿವಾಕರ ಹೆಗಡೆಯವರ ಪುಸ್ತಕಗಳ ಜೊತೆಗೆ ಚಾಮರಾಜಪೇಟೆಯಲ್ಲಿರುವ ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಲೋಕರ್ಪಣೆಯಾಗಲಿದೆ. ಆ ಪುಸ್ತಕಕ್ಕಾಗಿ ಗೆಳೆಯ ಪಿ.ಟಿ ಪ್ರಮೋದ್ ರಚಿಸಿಕೊಟ್ಟ ಅನೇಕ ಚಿತ್ರಗಳಲ್ಲಿ ಇದು ಒಂದು.

ಜೊತೆಗೆ ನನ್ನ ಬರವಣಿಗೆಯನ್ನು ಭಾವನಾತ್ಮಕವಾಗಿ ಮತ್ತು ವಸ್ತುನಿಷ್ಟವಾಗಿ ತಿದ್ದಿತೀಡಿ ಪ್ರೋತ್ಸಾಹಿಸಿ, ಬೆನ್ನುಡಿಯನ್ನು ಬರೆದುಕೊಟ್ಟಿದ್ದಾರೆ ಅನಂತಪುರದ ಶ್ರೀಕೃಷ್ಣ ದೇವರಾಯ ವಿಶ್ವವಿದ್ಯಾಲಯದಲ್ಲಿ ಪ್ರೊಫೆಶರ್ ಆಗಿರುವ ಡಾ. ಆರ್. ಶೇಷಾಶಾಸ್ತ್ರಿಗಳು. ಅದನ್ನು ಹಾಗೆ ನೇರವಾಗಿ ಇಲ್ಲಿ ಬ್ಲಾಗಿಗೆ ಹಾಕಿದ್ದೇನೆ.

ಕನ್ನಡ ಸಾಹಿತ್ಯವನ್ನು ತಮ್ಮ ವಿಶಿಷ್ಟ ಅನುಭವ ಮತ್ತು ಅಭಿವ್ಯಕ್ತಿಯಿಂದ ಶ್ರೀಮಂತಗೊಳಿಸುತ್ತಿರುವ ಯುವಕರ ಪಡೆಯಲ್ಲಿ ಶ್ರೀ ಶಿವು ಅವರದು ವಿಶಿಷ್ಟ ಸ್ಥಾನ. ಶಿವು ಅವರ ಅಭಿವ್ಯಕ್ತಿ ಮಾಧ್ಯಮಗಳು ಎರಡು. ಒಂದು ಭಾಷೆ ಎರಡನೆಯದು ಕ್ಯಾಮೆರಾ. ಈ ಎರಡರ ಮೂಲಕವೂ ಅವರು ಸೆರೆಹಿಡಿಯುತ್ತಿರುವುದು ಈ ಮನುಷ್ಯರ ಚಹರೆಗಳನ್ನು ಸ್ವಭಾವಗಳನ್ನು. ಶಿವು ಸ್ವಭಾವತಃ ಸಾತ್ವಿಕ ಆದ್ದರಿಂದ ಆತನಿಗೆ ಬದುಕಿನ ಪಾಸಿಟೀವ್ ಅಂಶಗಳೇ ಕಾಣುತ್ತವೆಯೇ ಹೊರತು ನೆಗಟೀವ್ ಅಂಶಗಳಿಲ್ಲ. ಬದುಕಿನಲ್ಲಿ ಸ್ವಯಂಕೃಷಿಯಿಂದ ಮೇಲೇರುತ್ತಿರುವ ಶಿವು "ಸಹನೆ" ಒಂದು ಉತ್ತಮೋತ್ತಮ ಗುಣ ಎಂಬುದನ್ನೇ ಅರಿತವರು. ಅದನ್ನು ರೂಢಿಸಿಕೊಂಡವರು. ಪ್ರತಿಯೊಂದು ಘಟನೆಯನ್ನು ಒಂದು ಚೌಕಟ್ಟಿನಲ್ಲಿಟ್ಟು ನೋಡಬಲ್ಲರು. ತಾವು ಕಂಡಿದ್ದನ್ನು ಮಾತಿನ ಮೂಲಕವೋ, ಕ್ಯಾಮೆರಾ ಮೂಲಕವೋ ನಮಗೆ ತೋರಿಸಬಲ್ಲವರು. ಅವರವರ ಬದುಕು ಅವರಿಗೆ ದೊಡ್ಡದು, ಪ್ರಯೋಗಶೀಲವಾದದು. ಆ ಬದುಕಿನ ಮೂಲಕ ಅವರು ಕಂಡುಕೊಂಡ ದರ್ಶನ ಅವರಿಗೆ ವಿಶಿಷ್ಟವಾದುದು. ಈ ರೀತಿ ವಿಶಿಷ್ಟ ದರ್ಶನಗಳ ಸಮಾಹಾರವೇ ಸಂಸ್ಕೃತಿ. ಊರೆಲ್ಲರಿಗೂ ನಸುಕು ಹರಿಯುತ್ತಿರುವಂತೆ ಪ್ರಪಂಚದ ಮೂಲೆ ಮೂಲೆಯಲ್ಲಿನ ಸುದ್ಧಿಗಳನ್ನು ಹಂಚುವ ವಿತರಕರ, ಹುಡುಗರ ಬದುಕಿನ ಹಲವಾರು ಸಂಗತಿಗಳನ್ನು ನಮ್ಮ ಮುಂದಿಟ್ಟಿದ್ದಾರೆ. "ಇಲ್ಲಿನ ಪ್ರತಿಯೊಂದು ಬರಹವೂ ತನ್ನ ತಾಜಾತನದಿಂದ, ಸರಳತನದಿಂದ ಓದಿಸಿಕೊಂಡು ಹೋಗುತ್ತದೆ. ಮಿತ್ರ ಶಿವು ಅವರ ಲೇಖನದಿಂದ ಇನ್ನೂ ಇಂಥ ಹಲವಾರು ಬರಹಗಳು ಬರಲಿ"


ಡಾ. ಆರ್. ಶೇಷಶಾಸ್ತ್ರಿ.

ಪುಸ್ತಕದ ಇನ್ನಷ್ಟು ವಿಚಾರಗಳನ್ನು ಮುಂದಿನ ಪೋಷ್ಟಿಂಗ್‍ನಲ್ಲಿ ತಿಳಿಸುತ್ತೇನೆ.


64 comments:

ಸುಮ said...

ಲೇಖನ ಹಾಸ್ಯಭರಿತವಾಗಿ ಚೆನ್ನಾಗಿದೆ ಶಿವು ಸರ‍್ . ನನ್ನ ಸುಧಾಕಿರಣ್ ಇದನ್ನು ಓದಿ "ಅರೆ ಇವರೂ ನನ್ನ ಜಾತಿ "ಅಂತ ನಗುತ್ತಿದ್ದರು.
ನಿಮ್ಮ ಪುಸ್ತಕ ಲೋಕಾರ್ಪಣೆಯಾಗುತ್ತಿರುವುದನ್ನು ಕೇಳಿ ಸಂತಸವಾಯಿತು. ಅಭಿನಂದನೆಗಳು.

ಚುಕ್ಕಿಚಿತ್ತಾರ said...

ಶಿವು.. ಅವರೆ... ನಿಮ್ಮ ಪುಸ್ತಕ ಬಿಡುಗಡೆ ಸ೦ಭ್ರಮಕ್ಕೆ ಶುಭಾಶಯಗಳು. ನಿಮ್ಮ ಬರಹಗಳಲ್ಲಿ ಉಪಯೋಗಿಸಿರುವ ಅವ್ಯಯಗಳಿಗೆ ನಾವು ಹಿನ್ನಲೆ ಸ೦ಗೀತ ಎನ್ನುತ್ತೇವೆ. ನಿಮ್ಮ ಮನೆಯ ನಲ್ಲಿ ಗೋಳನ್ನು ಚೆನ್ನಾಗಿ ಅನುಭವಿಸಿ ಬರೆದಿದ್ದೀರಿ. ಎಲ್ಲರ ಮನೆಯ ಕಥೆ ಇದು.

ಶಿವಪ್ರಕಾಶ್ said...

ತುಂಬಾ ಚನ್ನಾಗಿದೆ ರೀ, ನಿಮ್ಮ ಮನೆ ನಲ್ಲಿಗಳ ಕಥೆ.... ಹ್ಹಾ ಹ್ಹಾ ಹ್ಹಾ....

ನೀವು ಪುಸ್ತಕ ಬಿಡುಗಡೆ ಮಾಡುವ ವಿಚಾರ ಕೇಳಿ, ತುಂಬಾ ಕುಶಿಯಾಯಿತು...
ನಿಮಗೂ, ಪ್ರಕಾಶ್ ಹೆಗಡೆಯವರಿಗೂ ಹಾಗು ದಿವಾಕರ ಹೆಗಡೆಯವರಿಗೂ ನನ್ನ ಅಭಿನಂದನೆಗಳು....

ಸಾಗರದಾಚೆಯ ಇಂಚರ said...

ಶಿವೂ ಸರ್,
ಒಳ್ಳೆಯ ಬರಹ
ಪುಸ್ತಕ ಹೊರ ತರುವ ವಿಚಾರ ತುಂಬಾ ಸಂತಸ ತಂದಿದೆ,
ನಿಮ್ಮ ಪುಸ್ತಕ ಬಿಡುಗಡೆಗೆ ಶುಭ ಹಾರೈಸುವೆ,
ಬೆಂಗಳೂರಿನಲ್ಲಿ ಇದ್ದಿದ್ದರೆ ಎಲ್ಲರಿಗಿನ ಮೊದಲು ನಾನು ಅಲ್ಲಿರುತ್ತಿದ್ದೆ,
ಅಭಿನಂದನೆಗಳು

ಕ್ಷಣ... ಚಿಂತನೆ... bhchandru said...

ಶಿವು ಸರ್‍, ಲೇಖನ ಮೊದಲಿನಿಂದ ಕೊನೆಯವರೆವಿಗೂ ನಗು ತರಿಸಿತ್ತು. ಈ ನಲ್ಲಿಗಳ (ಅದರಲ್ಲಯೂ ಬಿಸಿನೀರು, ಶವರ್‍, ತಣ್ಣೀರು) ಬಗ್ಗೆ ಸರಿಯಾಗಿ ತಿಳಿಯದೆ ಇದರಲ್ಲಿ ನೀರು ಬರಲಿಲ್ಲ, ಅದರಲ್ಲಿ ಇಲ್ಲ ಅಂತ ಎಲ್ಲ ನಳವನ್ನೂ ತಿರುಗಿಸಿದಾಗ ಮೇಲಿನಿಂದ ಶವರ್‌ ಸುರಿದು ತೋಯ್ದಿದ್ದು ನೆನಪಾಯಿತು.

ನಿಮ್ಮ ಹೊಸ ಪುಸ್ತಕ ಲೋಕಾರ್ಪಣೆಯಾಗುತ್ತಿರುವ ವಿಷಯ ಸಂತಸ ತಂದಿದೆ. ಅಭಿನಂದನೆಗಳು ನಿಮಗೂ, ನಿಮ್ಮ ಈ ಪುಸ್ತಕದ ಕೆಲಸದಲ್ಲಿ ಸಹಕರಿಸಿದವರೆಲ್ಲರಿಗೂ ಸಹ.

ಸ್ನೇಹದಿಂದ,

ಚಂದ್ರು

shreeshum said...

congrats shivu

nivedita said...

ನಕ್ಕು ನಕ್ಕು ಸಾಕಾಯಿತು ಶಿವೂ ಅವರೇ!! ಇದೇ ರೀತಿ ಲೇಖನಗಳು ತುಂಬಾ ಬರಲಿ!!!
ನಿಮ್ಮ ಹೊಸ ಪುಸ್ತಕಕ್ಕಾಗಿ ಅಭಿನಂದನೆಗಳು.

ಬಾಲು said...

ನಲ್ಲಿ ಮತ್ತು ವಿಧ್ಯುತ್ ಸ್ವಿಚ್ಗಳ ಬಗ್ಗೆ ನಾನೊಬ್ಬನೇ ಅಜ್ಞಾನಿ ಎಂಬ ಏಕಾಂಗಿ ತನ ನಿಮ್ಮ ಲೇಖನ ಓದಿದ ಮೇಲೆ ದೂರವಾಯಿತು!!! :) :)

ಪುಸ್ತಕ ಬಿಡುಗಡೆ ಆಗುತ್ತಾ ಇರುವುದಕ್ಕೆ ಶುಭಾಶಯಗಳು.

ಅನಿಲ್ ರಮೇಶ್ said...

ಶಿವು,
ಬರಹ ಚೆನ್ನಾಗಿದೆ..
ನಕ್ಕು ನಕ್ಕು ಸಾಕಾಯ್ತು.. :D

ಪುಸ್ತಕ ಬಿಡುಗಡೆ ಮಾಡುವ ವಿಚಾರ ಖುಷಿ ಕೊಟ್ಟಿತು..

-ಅನಿಲ್

ದಿನಕರ ಮೊಗೇರ.. said...

ಶಿವೂ ಸರ್,
ಓದ್ತಾ ಓದ್ತಾ ಒಂದು ನಿಮಿಷ ಇದು ಪ್ರಭುರಾಜ್ ಅವರ ಬ್ಲಾಗ್ ಗ ಅಂತ ಅನುಮಾನ ಬಂತು..... ತುಂಬಾ ತುಂಬಾ ಚೆನ್ನಾಗಿದೆ..... ನಲ್ಲಿ, ಶವರ್ ಗಳ ಅಜ್ಞಾನದಲ್ಲಿ ಎಲ್ಲ ಗಂಡಸರು ಒಂದೇ ಎಂದು ನಮ್ಮ ಒಗ್ಗಟ್ಟನ್ನು ಸಾರಿ ಸಾರಿ ಹೇಳಿದ ಲೇಖನ ಇದು.... ನಿಮ್ಮ ಪುಸ್ತಕ ಪ್ರಕಾಶನಕ್ಕೆ ನನ್ನ ಅಭಿನಂದನೆಗಳು...... ಹೀಗೆ ನಿಮ್ಮ ಅಭಿಯಾನ ಮುಂದುವರಿಯಲಿ.....

sunaath said...

"ಹೆಂಡತಿಯೊಬ್ಬಳು ಮನೆಯೊಳಗಿದ್ದರೆ, ನನಗದುವೆ ಕೋಟಿ ರುಪಾಯಿ", ಅಂತ ಕೆ.ಎಸ್.ಎನ್. ಹಾಡಿದ್ದು ಯಾಕೆ ಅಂತ ಗೊತ್ತಾಯ್ತಾ?

manju said...

sir..........wat a comedy
nxt time adru nalli..,switch sariyagi off madiii super sir..

ಜಲನಯನ said...

ಥುಬುಕ್ ಥುಬುಕ್..ಗಬಕ್...ಇದೂ ನನ್ನ ನಲ್ಲೀರಾಗದ ಮೊದಲ ಪಾಠ....ಹಹಹಹ...
ಬೆಳಿಗ್ಗೆ ಎದ್ದು ನಲ್ಲಿ ಬಾಯಲ್ಲಿ ಉಗಿಸ್ಕೊಳ್ಳೋಕೂ ಪುಣ್ಯಮಾಡಿರ್ಬೇಕು ಅನ್ನೋದನ್ನ ನಿಮ್ಮ ಲೇಖನ ತೋರಿಸುತ್ತೆ...ಉಗದ್ರೆ ಪರ್ವಯಿಲ್ಲ ನೀರಾದ್ರೂ ಕೊಡುತ್ತಾ ಅದೇ..ಮುಖ್ಯ...
ಹಹಹ..ಒಳ್ಳೆ ಬರವಣಿಗೆ..ನಿಮಗೆ ಸಿದ್ಧಿ ಸಿಗ್ತಾ ಇದೆ..
ಅಂದಹಾಗೆ ...ಅಭಿನಂದನೆಗಳು...ಪ್ರಕಾಶ್ ಅವರ ಪುಸ್ತಕದ ಬಗ್ಗೆ ಗೂಗಲ್ ಚಾಟ್ನಲ್ಲಿ ಹೇಳಿದ್ದರು..ನೀವೂ ಅವರೊಂದಿಗೆ ಸೇರುತ್ತಿರುವುದು ನಿಜಕ್ಕೂ ನಮಗೆಲ್ಲಾ ಸಂತಸದ ವಿಷಯ...

ಸುಧೇಶ್ ಶೆಟ್ಟಿ said...

ನಾನಿರುವ ಮನೆಯಲ್ಲಿ ಬಿಸಿನೀರು ಹಿಡಿದಾಗಲೆಲ್ಲಾ ನಳ್ಳಿ ಯಾಕೆ ಬುಸುಗುಡುತ್ತದೆ ಎ೦ದು ಹೇಮಾಕ್ಕನಿ೦ದ ಗೊತ್ತಾಯಿತು ಇವತ್ತು... ಸಕತ್ತಾಗಿದೆ ಲೇಖನ ಶಿವಣ್ಣ...

ಪುಸ್ತಕ ಬಿಡುಗಡೆ ಬೇಗ ಆಗಲಿ.... :)

Ranjita said...

ತುಂಬಾ ಚೆನ್ನಾಗಿದೆ ಸರ್ ನಲ್ಲಿ ಲೇಖನ Congratulations ಹಾಗೆ ನಿಮ್ಮ ಪುಸ್ತಕ ಬಿಡುಗಡೆ ಆಗ್ತಾ ಇರೋದನ್ನ ಕೇಳಿ ಖುಶಿಆಯ್ತು ..

umesh desai said...

ಶಿವು ಈ ಹೆಂಡತಿಯರು ಇಲ್ಲದಿದ್ದರೆ ನಮ್ಮ ಗತಿ ಏನು ವಿಚಾರ ಮಾಡಲು ಹೆದರಿಕೆಯಾಗುತ್ತದೆ. ನೀವೂ ನಮ್ಮ "ಟೀಮಿನ ಮೆಂಬರ್ " ಈ ವಿಷಯ ಕೇಳಿ ಸಂತೋಷವಾಯಿತು.
ಪುಸ್ತಕ ಬಿಡುಗಡೆ ಸಮಾರಂಭಕ್ಕೆ ಅಗಾವ ಆಗಿ ಅಭಿನಂದನೆಗಳು....!

ರಾಜೀವ said...

ಹೌದು ಶಿವು ಅವರೇ. ಮನೆಗೆ ಹೊಸದಾಗಿ ಶವರ್ ಹಾಕಿಸಿದಾಗ ನನಗೂ ಇಂತಹ ಅನುಭವಗಳು ಆಗಿದೆ. ನಲ್ಲಿ ಬಲಕ್ಕೆ ತಿರಿಗಿಸಿದರೆ, ಶವರಿಂದ ನೀರು ಹರಿಯುತ್ತದೆ. ಎಡಕ್ಕೆ ತಿರುಗಿಸಿಗರೆ ಕೆಳಗಿರುವ ನಲ್ಲಿಯಿಂದ ನೀರು ಬರುತ್ತದೆ. ಮೊದಮೊದಲು ಅದೆಷ್ಟು ಸಲ ನಲ್ಲಿ ತಿರುಗಿಸಲು ಹೋಗಿ ತಲೆಯ ಮೇಲೆ ನೀರು ಸುರಿಸಿಕೊಂಡಿದ್ದೇನೋ ಗೊತ್ತಿಲ್ಲ ;-)

ನಿಮ್ಮ ಪುಸ್ತಕ ಬಿಡುಗಡೆಗೆ ನನ್ನ ಹೃದಯಪೂರ್ವಕ ಅಭಿನಂದನೆಗಳು.

AntharangadaMaathugalu said...

ಶಿವು ಸಾರ್...
ಲೇಖನ ತುಂಬಾ ಚೆನ್ನಾಗಿದೆ, ನಕ್ಕು ಸಾಕಾಯ್ತು.... ಚಂದ್ರು ಅವರು ಹೇಳಿದಂತೆ ಈ ನಲ್ಲಿಗಳ ಗಲಾಟೆಯಲ್ಲಿ ಶವರ್ ನಿಂದ ತೊಪ್ಪೆಯಾದ ನನ್ನ ಅನುಭವವೂ ನೆನಪಾಯ್ತು. ನಮ್ಮನೆ ಗೀಜರ್ ನಲ್ಲೂ ಇದೇ ಗೋಳು... ನೀರು ಬಿಸಿಯಾದ ತಕ್ಷಣ ಎಲ್ಲಾ ನಲ್ಲಿಗಳಲ್ಲೂ (ಫಾಸೆಟ್ ನಲ್ಲೂ ;-) ಬಿಸಿನೀರು ಸುರಿಯಲು ಶುರುವಾಗಿ ಬಿಡತ್ತೆ.. ಹಾಗಂತ ೧೦ ನಿಮಿಷಕ್ಕೆ ಆರಿಸಿಬಿಟ್ಟರೆ, ನೀರು ತಣ್ಣಗೇ ಕುಳಿತಿರುತ್ತದೆ !!
ಮೊನ್ನೆ ಜಯನಗರದ ಮೈಯ್ಯಾಸ್ ನಲ್ಲಿ ಊಟ ಮಾಡಲು ನಾನೂ ನನ್ನವರೂ ಹೋಗಿದ್ದೆವು. ಕೈ ತೊಳೆಯಲು ಹೋದಾಗ ಒಂದು ನಲ್ಲಿಯನ್ನು ಯಾರೋ ಉಪಯೋಗಿಸುತ್ತಿದ್ದರು. ಇನ್ನೊಂದು ನಲ್ಲಿಯಲ್ಲಿ ನೀರೇ ಬರಲಿಲ್ಲ. ಸುಮ್ಮನೆ ಕಾಯುತ್ತಾ ನಿಂತು ಕೈ ತೊಳೆದೆ. ಊಟದ ನಂತರ ಮತ್ತೆ ಕೈ ತೊಳೆಯುವಾಗ, ನನ್ನ ಹಿಂದೆ ಕಾಯುತ್ತಾ ನಿಂತಿದ್ದ ಪುಟ್ಟ ಹುಡುಗಿಗೆ ನನ್ನವರು ಯಾಕೆ ಕಾಯ್ತೀಯ ಪುಟ್ಟೀ.. ಬಾ ಇಲ್ಲಿ... ಈ ಲಿವರ್ ಕಾಲಲ್ಲಿ ಹೀಗೆ ಒತ್ತಿದರೆ, ಈ ನಲ್ಲೀಲಿ ನೀರು ಬರುತ್ತೆ ಎಂದು ತೋರಿಸಿಕೊಟ್ಟಾಗೆ, ಬೆಪ್ಪಾಗಿದ್ದೆ !! :-) ನಿಜವಾಗಲೂ ಈ ನಳ ಮಹರಾಜರುಗಳ ಹೊಸ ಹೊಸ ರೂಪ,ವ್ಯವಸ್ಥೆ ಮತ್ತು ಅವರನ್ನು ಒಲಿಸಿಕೊಳ್ಳುವ ರೀತಿ,, ಎರಡೂ ನನ್ನನ್ನು ಹೆದರಿಸುತ್ತವೆ.......ಒಳ್ಳೆಯ ಹಾಸ್ಯಭರಿತ ಲೇಖನ....

ನಿಮ್ಮ ಪುಸ್ತಕ ಬಿಡುಗಡೆಗೆ ಅಭಿನಂದನೆಗಳು...

ಶ್ಯಾಮಲ

ಸವಿಗನಸು said...

ತುಂಬಾ ಚೆನ್ನಾಗಿದೆ ಸರ್ ...
ಹಾಸ್ಯಮಯವಾಗಿ......
ನಿಮ್ಮ ಪುಸ್ತಕ ಬಿಡುಗಡೆ ಆಗ್ತಾ ಇರೋದನ್ನ ಕೇಳಿ ಸಂತಸವಾಯಿತು...
ಪ್ರಕಾಶ್ ಹೆಗಡೆ, ದಿವಾಕರ ಹೆಗಡೆ ಮತ್ತೆ ನಿಮಗೂ ಸಹ ಶುಭಾಶಯಗಳು.....

ರವಿಕಾಂತ ಗೋರೆ said...

ಶಿವೂ,
ನಿಮ್ಮದೂ ಬಿಸಿನೀರ ಕಥೇನಾ?? :-) ನಮ್ಮನೆಯಲ್ಲಿ ಗೀಸರ್ ಸ್ವಿಚ್ ಲೈಟಿಗೆ ಲೈಟ್ ಸ್ವಿಚ್ ಗೀಸರ್ಗೆ ಇದ್ದು, ನಾನು ದಿನಾಲೂ ಪರದಾಡುವಂತಾಗಿದೆ..!!

UMESH VASHIST H K. said...

ನಲ್ಲಿ ತಾಪತ್ರಯ ಚೆನ್ನಾಗಿ ತಿಳ್ಸಿದ್ದಿರಿ, ಮನೆನಲ್ಲಿ ಒಂದೇ ಸಾಲಿನಲ್ಲಿ ೮, ೧೦ ದೀಪದ ಸ್ವಿಚ್ಚು, ಗಳಿದ್ರು ಇದೆ ಪರದಾಟ ಆಗುತ್ತೆ, ಆ ಮಾಡುವ ಫೋಟೋಗಳು ಸೂಪರ್ರು ಸಾರ್, ಅದಕ್ಕೊಟಿರೋ ಶೀರ್ಷಿಕೆಗಳೂ ಸೂಪರ್

shivu said...
This comment has been removed by the author.
ಬಿಸಿಲ ಹನಿ said...

ಶೀವು ಅವರೆ,
ನಿಮ್ಮ ಮನೆಯ ನಲ್ಲಿಗಳು ನಿಮ್ಮನ್ನು ಆಗಾಗ ಆಟವಾಡಿಸುವದನ್ನು ಓದಿ ನಕ್ಕಿದ್ದೇ ನಕ್ಕಿದು. ಸಾಮಾನ್ಯ ಘಟನೆಯೊಂದನ್ನು ಸ್ವಾರಸ್ವಕರವಾಗಿ ವಿವರಿಸಿದ ನಿಮ್ಮ ಶೈಲಿ ತುಂಬಾ ಇಷ್ಟವಾಯಿತು. ಮತ್ತೆ ಮತ್ತೆ ಇಂಥ ಕಷ್ಟ ಬರದಿರಲಿ.
ಪುಸ್ತಕದ ಮುನ್ನುಡಿಯನ್ನು ಓದಿದೆ. ಶೇಷಶಾಸ್ತ್ರಿಯವರು ಚನ್ನಾಗಿ ಬರೆದಿದ್ದಾರೆ. ಇಲ್ಲಿಂದಲೇ ಶುಭಾಶಯಗಳನ್ನು ಕಳಿಸುವೆ. All the best.

ಮನಸು said...

ತುಂಬಾ ಚೆನ್ನಾಗಿದೆ, ನೀರು ಇಲ್ಲದೆ ದೇವರೇ ಗತಿ ಹಹಹ...

ನಿಮಗೆ ನಮ್ಮ ತುಂಬು ಹೃದಯದ ಅಭಿನಂದನೆಗಳು ಪುಸ್ತಕ ಬಿಡುಗಡೆ ಸುದ್ದಿ ನಮಗೆ ಬಹಳ ಖುಷಿಕೊಟ್ಟಿದೆ.
ಧನ್ಯವಾದಗಳು

ಚಿತ್ರಾ said...

ಏನ್ರೀ ಇದು ಶಿವೂ,

ಏನವಸ್ಥೆ ನಿಮ್ಮದು? ಹೇಮಾಶ್ರೀಯವರ ಹತ್ತಿರ ಅಪ್ಪಿ ತಪ್ಪಿಯೂ ಜಗಳ ಮಾಡುವ ಹಾಗಿಲ್ಲ ನೀವು ! ಅವರೇನಾದರೂ ಸಿಟ್ಟು ಮಾಡಿಕೊಂಡು ತಿಂಗಳುಗಟ್ಟಲೆ ತವರಿಗೆ ಹೋದರೆ ಮುಗೀತು ನಿಮ್ಮ ಕಥೆ !
ತಣ್ಣೀರು ಸ್ನಾನ , ಹೋಟೆಲ್ ಊಟ ಮತ್ತು ಮೇಣದಬತ್ತಿಯೇ ಗತಿ ನಿಮಗೆ ! ನಿಮ್ಮ ಬಿಲ್ಡಿಂಗಿನ ಪೈಪುಗಳ ಚಕ್ರವ್ಯೂಹದಲ್ಲಿ ಕಳೆದುಹೋಗುತ್ತೀರೆನೋ ನೀವು !!
ಹಾ ಹಾ ಹಾ .. ಮಜವಾಗಿದೆ ಲೇಖನ !
ಅಂದಹಾಗೆ, ಪುಸ್ತಕ ಬಿಡುಗಡೆ ಮಾಡುತ್ತಿರುವುದಕ್ಕೆ ಅಭಿನಂದನೆಗಳು !!

ಲೋದ್ಯಾಶಿ said...

ಆತ್ಮೀಯ

ಅಭಿನಂದನೆಗಳು.
ನಿಮ್ಮ "ವೆಂಡರ್ ಕಣ್ಣು..." ಕರ್ನಾಟಕದ ಎಲ್ಲಾ ಭಾಗದ ಓದುಗರಿಗೂ ದೊರಕುವಂತಾಗಲಿ.

ಮಕ್ಳು ಓದಿದ್ದನ್ನ ಬರೆದು ಕಲಿತ್ಕೊಲ್ಲೋ ತರಾ ನೀವು ಬರೆದು ಬರೆದು ನಿಮ್ಮ "ನಲ್ಲಿ"ಗಳ ವರ್ತನೆಯನ್ನ ತಿಳಿಯುವ ಪ್ರಯತ್ನದಲ್ಲಿದ್ದೀರಾ? ನಂದೂ ಒಂದ್ತಾರ ಇದೆ ಕಥೆ, ಮನೇಲಿ ಎಲ್ರೂ ಅದೇ ಪ್ರಶ್ನೆ ಕೇಳ್ತಾರೆ, ನಿಂಗೆ ಇಂತಿಂತ ಸಾಮನ್ಯ ಕೆಲಸಗಳು ಸಹ ಗೊತ್ತಾಗಲ್ಲ, ಆಫೀಸ್ನಲ್ಲಿ ಹೇಗೆ ಕೆಲಸ ಮಾಡ್ತೀಯ ಅಂತ. ಒಂದೇ ಒಂದು ಉದಾಹರಣೆಕೊಡ್ತೀನಿ.

ಒಂದಿನ ಮನೇಲಿ, ಒಂದೂವರೆ ಲೀಟರ್ನಷ್ಟು ಹಾಲನ್ನ ಫ್ರಿಡ್ಜಿನಲ್ಲಿ ಎಲ್ಲೂ ಜಾಗ ಇಲ್ಲ ಅಂತೇಳಿ, ಅದರೊಳ್ಗೆ ಫ್ರೀಜರ್ನಲ್ಲಿ ಜಾಗ ಸಾಕಷ್ಟು ಖಾಲಿ ಇದ್ದದ್ದು ನೋಡಿ, ಹಾಲನ್ನ ಫ್ರೀಜರ್ನಲ್ಲಿಟ್ಟಿದ್ದೆ. ಸಂಜೆಯೋಷ್ಟೊತ್ತಿಗೆ, ಹಾಲು ಹೋಗಿ ಪೂರ್ತಿ ಒಂದು ಗಟ್ಟಿ ಮುದ್ದೆ ಹಾಗಿತ್ತು. ಹ ಹ ಹ ...

shivu said...

ಸುಮಾ ಮೇಡಮ್,

ಬಹುಶಃ ಎಲ್ಲಾ ಮನೆಯ ಪತಿಗಳ ಕತೆಯೂ ಇದೆ ಅನ್ನುವುದು ಖಚಿತವಾಗುತ್ತಿದೆ. ಲೇಖನವನ್ನು ಓದಿ ಖುಷಿಪಟ್ಟಿದ್ದಕ್ಕೆ ಧನ್ಯವಾದಗಳು.

ಪುಸ್ತಕ ಬಿಡುಗಡೆಗೆ ಕುಟುಂಬ ಸಮೇತ ಖಂಡಿತ ಬನ್ನಿ. ಕಾಯುತ್ತಿರುತ್ತೇವೆ.

shivu said...

ವಿಜಯಶ್ರೀಯವರೆ,

ನನ್ನ ಬರಹದ ಅವ್ಯಯಗಳು ಅಂದರೆ ನನಗೆ ಗೊತ್ತಾಗಲಿಲ್ಲ. ಅದೇನೆಂದು ಸ್ವಲ್ಪ ವಿವರಿಸಿ ಹೇಳಿ. ಮತ್ತೆ ನಮ್ಮ ಮನೆಯ ಗೋಳಿನಲ್ಲಿ ಪಾಲು ತೆಗೆದುಕೊಂಡಿದ್ದಕ್ಕೆ ಧನ್ಯವಾದಗಳು.
ಪುಸ್ತಕ ಬಿಡುಗಡೆ ಕಾರ್ಯಕ್ರಮಕ್ಕೆ ನೀವು ಬರುತ್ತೀರಲ್ವಾ...ನಾವೆಲ್ಲಾ ಕಾಯುತ್ತಿರುತ್ತೇವೆ.

shivu said...

ಶಿವಪ್ರಕಾಶ್,’

ಲೇಖನವನ್ನು ಇಷ್ಟಪಟ್ಟಿದ್ದಕ್ಕೆ ಧನ್ಯವಾದಗಳು.

ಪುಸ್ತಕಗಳ ಬಿಡುಗಡೆ ದಿನದಂತೂ ನಾವು ಮೂವರು ನಿಮಗಾಗಿ ಕಾಯುತ್ತಿರುತ್ತೇವೆ. ನೀವು ನಿಮ್ಮ ಗೆಳೆಯರ ಜೊತೆ ಬರುತ್ತಿರಲ್ವಾ...

shivu said...

ಗುರುಮೂರ್ತಿ ಹೆಗಡೆ ಸರ್,

ನೀವು ದೂರದಲ್ಲಿದ್ದೇ ನಮ್ಮನ್ನೂ ಪ್ರೋತ್ಸಾಹಿಸುತ್ತಿರುವುದು ನಮಗೆಲ್ಲಾ ಖುಷಿಯ ವಿಚಾರ. ಲೇಖನವನ್ನು ಮೆಚ್ಚಿದ್ದಕ್ಕೆ ಧನ್ಯವಾದಗಳು.

shivu said...

ಕ್ಷ್ಗಣ ಚಿಂತನೆ ಚಂದ್ರು ಸರ್,

ನನ್ನ ಮನೆಯ ನಲ್ಲಿಯ ಗೋಳಿಗೆ ಪ್ರತಿಯಾಗಿ ನಿಮ್ಮ ಅನುಭವವನ್ನು ಹಂಚಿಕೊಂಡಿದ್ದೀರಿ. ಧನ್ಯವಾದಗಳು.

ಪುಸ್ತಕ ಬಿಡುಗಡೆಯ ಕಾರ್ಯಕ್ರಮಕ್ಕೆ ಕುಟುಂಬ ಸಮೇತರಾಗಿ ಬನ್ನಿ. ನಾವೆಲ್ಲಾ ಕಾಯುತ್ತಿರುತ್ತೇವೆ.

shivu said...

ಶ್ರೀಶಂ ಸರ್,

ನೀವು ಬೆಂಗಳೂರಿನಲ್ಲೇ ಇರುವುದೆಂದು ತಿಳಿಯಿತು. ಪುಸ್ತಕ ಬಿಡುಗಡೆಯ ಕಾರ್ಯಕ್ರಮಕ್ಕೆ ಬನ್ನಿ.

shivu said...

ನಿವೇದಿತ ಮೇಡಮ್

ನನ್ನ ಲೇಖನ ಅಷ್ಟೋಂದು ಹಾಸ್ಯ ಉಕ್ಕಿಸಿತಾ? ಧನ್ಯವಾದಗಳು.

ನೀವು ದೂರದ ಹುಬ್ಬಳ್ಳಿಯಲ್ಲಿದ್ದೀರಿ. ನನ್ನ ವಿಳಾಸಕ್ಕೆ ಪತ್ರ ಬರೆಯಿರಿ. ಪುಸ್ತಕವನ್ನು ಕಳಿಸುವ ವ್ಯವಸ್ಥೆ ಮಾಡುತ್ತೇವೆ.

shivu said...

ಬಾಲು ಸರ್,

ಆಜ್ಞಾನಿ ಏಕಾಂಗಿ ಎನ್ನುವ ಪದಗಳು ಚೆನ್ನಾಗಿವೆ. ನಮಗೆ ಅದು ಒಳ್ಳೆಯ ಬಿರುದು ಕೂಡ...

ಪುಸ್ತಕ ಬಿಡುಗಡೆಯ ದಿನದಂದು ನಿಮ್ಮ ನಿರೀಕ್ಷೆಯಲ್ಲಿ...

shivu said...

ಅನಿಲ್,

ಲೇಖನವನ್ನು ಓದಿ ನಕ್ಕು ಆನಂದಿಸಿದ್ದೀರಿ...ಥ್ಯಾಂಕ್ಸ್...

ನೀವು ಪುಸ್ತಕ ಬಿಡುಗಡೆಯ ಕಾರ್ಯಕ್ರಮಕ್ಕೆ ಬನ್ನಿ.

shivu said...

ದಿನಕರ್ ಸರ್,

ನನ್ನ ಬ್ಲಾಗ್ ಓದಿ ಪ್ರಭುರಾಜ್ ಬ್ಲಾಗ್ ನೆನಪಾಯಿತೇ..ಪ್ರಭು ವಿಭಿನ್ನವಾಗಿ ಚೆನ್ನಾಗಿ ಬರೆಯುತ್ತಾರೆ. ಅವರು ಬ್ಯಾಚುಲರ್, ನಾನು ಹಳ್ಳಕ್ಕೆ ಬಿದ್ದಿದ್ದೇನೆ ಅಷ್ಟೆ. ಇದೊಂದೆ ವ್ಯತ್ಯಾಸ. ಲೇಖನವನ್ನು ಓದಿ enjoy ಮಾಡಿದ್ದಕ್ಕೆ ಧನ್ಯವಾದಗಳು.
ಪುಸ್ತಕ ಬಿಡುಗಡೆಯ ದಿನಕ್ಕೆ ಬನ್ನಿ.

shivu said...

ಸುನಾಥ್ ಸರ್,

ನೀವು ಹೇಳಿದ ಕೆ.ಎಸ್.ನ ಪದ್ಯವನ್ನು ನನ್ನ ಶ್ರೀಮತಿ ನೋಡಿ ಖುಷಿಯಾಗಿ "ಹೇಗೆ" ಎನ್ನುತ್ತಿದ್ದಾಳೆ..

shivu said...

ಮಂಜು ಸರ್,

ನನ್ನ ಬ್ಲಾಗಿಗೆ ಸ್ವಾಗತ. ಲೇಖನದ ಹಾಸ್ಯವನ್ನು enjoy ಮಾಡಿದ್ದೀರಿ..ನೀವು ಹೇಳಿದಂತೆ ಪ್ರಯತ್ನಿಸುತ್ತೇವೆ...

ಧನ್ಯವಾದಗಳು.

shivu said...

ಡಾ.ಆಜಾದ್ ಸರ್,

ನನ್ನ ನಲ್ಲಿ ಪಾಠದಿಂದ ನಿಮ್ಮ ನಲ್ಲಿಯ ಮೆಲೋಡಿ ಧ್ವನಿಯ ಅನುಭವವನ್ನು ಹಂಚಿಕೊಂಡಿದ್ದೀರಿ. ನನ್ನ ಬರಹದ ಬಗ್ಗೆ ನಿಮ್ಮ ಅಭಿಪ್ರಾಯಕ್ಕೆ ಧನ್ಯವಾದಗಳು.

ಉಗುದ್ರೆ ಪರ್ವಾಗಿಲ್ಲ ಆದ್ರೆ ನೀರು ಬರುತ್ತಲ್ಲ...ಅನ್ನು ಮಾತನ್ನು ಖಂಡಿತ ಒಪ್ಪುತ್ತೇನೆ ಸರ್.

ನಮ್ಮ ಪುಸ್ತಕಗಳ ಬಿಡುಗಡೆ ಕಾರ್ಯಕ್ರಮಕ್ಕೆ ನೀವು ಬನ್ನಿ ಸರ್.

ಮಲ್ಲಿಕಾರ್ಜುನ.ಡಿ.ಜಿ. said...

ಶಿವು,
ಕೊಳಾಯಿ,ನಲ್ಲಿಗಳ ಮಾಂತ್ರಿಕ ಲೋಕವನ್ನು ನೋಡಿ ಖುಷಿ, ಬೆರಗು, ಆತಂಕ ಎಲ್ಲವೂ ಒಟ್ಟೊಟ್ಟಿಗೇ ಆಯಿತು. ತುಂಬಾ ಸೊಗಸಾಗಿ ನಿರೂಪಿಸಿದ್ದೀರಿ.
ನಿಮ್ಮ ಪುಸ್ತಕದ ಬೆನ್ನುಡಿ ನಿಮ್ಮ ವ್ಯಕ್ತಿತ್ವದ ಕನ್ನಡಿಯಂತಿದೆ. ನಿಮ್ಮ ಪುಸ್ತಕ ಎಲ್ಲರಿಗು ತಲುಪಲಿ, ಪೇಪರ್ ಓದುವ ಎಲ್ಲರೂ ಓದಲೇ ಬೇಕಾದ ಕೃತಿಯಿದು. ಅಭಿನಂದನೆಗಳು.

ಚುಕ್ಕಿಚಿತ್ತಾರ said...

ಶಿವು... ಸರ್. ಅವ್ಯಯಗಳೆ೦ದರೆ ನಿಮ್ಮ ನಲ್ಲಿ ಶಬ್ಧ ಮಾಡುತ್ತದಲ್ಲ. ಕ್ಯಾ... ಶೂ.... ಟುಪ್.... ಎ೦ದು. ಇದಕ್ಕೆ ಶಬ್ದಾರ್ಥ ಏನೆ೦ದರೆ ಏನೂ... ಇರದು. ಆದರೆ ಘಟನೆಯ ಸ್ಪಷ್ಟ ಚಿತ್ರಣ ದೊರಕುತ್ತದೆ. ಪಟ ಪಟ ಬೀಳುವ ಮಳೆ ಹನಿ, ಗರ ಗರ ತಿರುಗು, ಝಳ ಝಳ ನೀರು.....ಹೀಗೆ...... ನಮ್ಮನೆಯಲ್ಲಿ ಈ ಹಿನ್ನಲೆ ಸ೦ಗೀತದ ಪ್ರಭಾವ ಜಾಸ್ತಿ.

shivu said...

ಸುಧೇಶ್,

ಮದುವೆಯಾದ ಮೇಲೆ ನಿಮಗೂ ನಿಮ್ಮ ಶ್ರೀಮತಿಯಿಂದ ಮತ್ತಷ್ಟು ಇಂಥ ವಿಚಾರಗಳಲ್ಲಿ ಜ್ಞಾನಾಭಿರುದ್ಧಿಯಾಗುತ್ತದೆ.
ಲೇಖನವನ್ನು ಮೆಚ್ಚಿದ್ದಕ್ಕೆ ಧನ್ಯವಾದಗಳು.

ಪುಸ್ತಕ ಬಿಡುಗಡೆ ಕಾರ್ಯಕ್ರಮಕ್ಕೆ ಬನ್ನಿ.

shivu said...

ರಂಜಿತ,

ಲೇಖನವನ್ನು ಮೆಚ್ಚಿದ್ದಕ್ಕೆ ಧನ್ಯವಾದಗಳು.

ಪುಸ್ತಕ ಬಿಡುಗಡೆಗೆ ನೀವು ದೂರದಿಂದಲೇ ಹಾರೈಸುತ್ತಿದ್ದೀರಿ..ಧನ್ಯವಾದಗಳು.

shivu said...

ಉಮೇಶ್ ಸರ್,

ಹೆಂಡತಿ ಇಲ್ಲದಿದ್ದರೇ ಅನ್ನುವ ಪದ ಬಳಸಿ ನೀವು ಕೊಟ್ಟಿರುವ ಕಾಂಪ್ಲಿಮೆಂಟು ನನ್ನಾಕೆಗೆ ತುಂಬಾ ಖುಷಿ ತಂದಿದೆ. "ನಾವು ಹೇಗೆ" ಅಂತ ಬೀಗುತ್ತಿದ್ದಾಳೆ.

ನಾನೊಬ್ಬನೇ ಅಲ್ಲ ಸಾರ್ ಇನ್ನೂ ಅನೇಕ ನಮ್ಮ ಟೀಮನ್ನು ಸೇರಿಕೊಳ್ಳುವವರಿದ್ದಾರೆ...ಕಾಯೋಣ...

ಪುಸ್ತಕಗಳ ಸಂಭ್ರಮಕ್ಕೆ ನಿಮ್ಮ ನಿರೀಕ್ಷೆಯಲ್ಲಿ...

shivu said...

ರಾಜೀವ್‍ರವರೆ,

ನನ್ನ ಅನುಭವ ನಿಮಗೂ ಆಗಿದೆ ಅಂದ ಮೇಲೆ ನೀವು ನಮ್ಮ ಟೀಮ್ ಮೆಂಬರ್ ಆದಂತೆ. ಲೇಖನವನ್ನು ಮೆಚ್ಚಿದ್ದಕ್ಕೆ ಥ್ಯಾಂಕ್ಸ್..

ನಮ್ಮ ಮೂರು ಪುಸ್ತಕಗಳ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ನಿಮ್ಮ ನಿರೀಕ್ಷೆಯಲ್ಲಿ.

shivu said...

ಶ್ಯಾಮಲ ಮೇಡಮ್,

ನಿಮ್ಮ ಪ್ರತಿಕ್ರಿಯೆ ಇಷ್ಟವಾಯಿತು. ನನ್ನ ನಲ್ಲಿ ಕತೆಯಂತೆ ನಿಮ್ಮದೂ ದೊಡ್ಡದಾಗಿಯೇ ಇದೆ. ಇಂಥವುಗಳನ್ನು ನಿಮ್ಮ ಬ್ಲಾಗಿನಲ್ಲಿ ಬರೆಯಿರಿ...ಓದಲು ಖುಷಿ ಕೊಡುತ್ತೆ.

ಲೇಖನವನ್ನು ಓದಿ ಚೆನ್ನಾಗಿ ನಕ್ಕಿದ್ದೇನೆ ಅಂದಿದ್ದೀರಿ, ಅಲ್ಲಿಗೆ ನನ್ನ ಪ್ರಯತ್ನ ಸಾರ್ಥಕ.

ನಿಮ್ಮ ಹಾರೈಕೆಗಳಿಗೆ ಧನ್ಯವಾದಗಳು.

shivu said...

ಮಹೇಶ್ ಸರ್,

ಲೇಖನವನ್ನು ಇಷ್ಟಪಟ್ಟಿದ್ದಕ್ಕೆ ಥ್ಯಾಂಕ್ಸ್..

ದೂರದಿಂದ ನಮ್ಮ ಮೂವರ ಪುಸ್ತಕ ಬಿಡುಗಡೆ ಕಾರ್ಯಕ್ರಮಕ್ಕೆ ಹಾರೈಸಿದ್ದೀರಿ..ಥ್ಯಾಂಕ್ಸ್...

shivu said...

ರವಿಕಾಂತ್,

ನನ್ನ ಕತೆಯಂತೆ ನಿಮ್ಮ ಕತೆಯೂ ವಿಭಿನ್ನವಿರುವಂತಿದೆ. ಬ್ಲಾಗಿನಲ್ಲಿ ಬರೆಯಿರಿ...ಓದುತ್ತೇವೆ.

shivu said...

ಉಮೇಶ್ ವಶಿಷ್ಟ ಸರ್,

ನನ್ನ ಬ್ಲಾಗಿಗೆ ಸ್ವಾಗತ. ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು. ಹೀಗೆ ಬರುತ್ತಿರಿ...

shivu said...

ಉದಯ್ ಸರ್,

ಸಹಜವಾಗಿ ನಗುಮುಖದಿಂದಿರುವ ಮತ್ತು ಮನಃಪೂರ್ವಕವಾಗಿ ನಗುವ ನಿಮಗೆ ನನ್ನ ಲೇಖನ ಮೆಚ್ಚಿಗೆಯಾಗಿದೆಯಲ್ಲ. ನಾನು ಬರೆಯುವಾಗ ಹೀಗೆ ಖುಷಿಪಟ್ಟಿದ್ದೆ.

ಮತ್ತೆ ನನ್ನ ಪುಸ್ತಕಕ್ಕೆ ಬೆನ್ನುಡಿ ಬರೆದಿರುವ ಡಾ.ಆರ್.ಶೇಷಾಶಾಸ್ತ್ರಿಯವರು ವೀರಗಲ್ಲುಗಳ ಮೇಲೆ ಸಂಶೋಧನೆ ಮಾಡಿದ್ದಾರೆ. ನನ್ನ ಬರಹಕ್ಕೆ ಅವರ ಫ್ರೋತ್ಸಾಹವಿದೆ. ಅವರು ಮದುವೆ ಮಾತು ಚಿತ್ರಲೇಖನದ ಚಿತ್ರಗಳಲ್ಲಿ ಇದ್ದಾರೆ. ನನ್ನ ಪುಸ್ತಕಕ್ಕೆ ಅಂಥ ಬೆನ್ನುಡಿ ಸಿಕ್ಕಿದ್ದು ನನ್ನ ಆದೃಷ್ಟವೆನ್ನಬೇಕು.
ನಿಮ್ಮ ಆರೈಕೆಗೆ ಧನ್ಯವಾದಗಳು.

shivu said...

ಮನಸು ಮೇಡಮ್,

ಅವತ್ತು ನೀರಿಲ್ಲದೇ ನನ್ನ ಗತಿಯಂತೂ ದೇವರೇ ಗತಿಯಾಗಿತ್ತು.

ನಿಮ್ಮ ಅಭಿನಂದನೆಗಳಿಗೆ ಧನ್ಯವಾದಗಳು.

shivu said...

ಮನಸು ಮೇಡಮ್,

ಅವತ್ತು ನೀರಿಲ್ಲದೇ ನನ್ನ ಗತಿಯಂತೂ ದೇವರೇ ಗತಿಯಾಗಿತ್ತು.

ನಿಮ್ಮ ಅಭಿನಂದನೆಗಳಿಗೆ ಧನ್ಯವಾದಗಳು.

shivu said...

ಚಿತ್ರ ಮೇಡಮ್,

ನಿಮ್ಮ ಪ್ರತಿಕ್ರಿಯೆಯನ್ನು ಓದಿ ಹೇಮಾಶ್ರಿಯಂತೂ ಹಿಗ್ಗಿ ಹೀರೆಕಾಯಿಯಾಗಿಬಿಟ್ಟಿದ್ದಾಳೆ.

"ತಿಳಿದುಕೊಳ್ಳಿ,ನಿಮ್ಮ ಬ್ಲಾಗಿಗರಿಗೆ ಗೊತ್ತಾಗಿರುವ ವಿಚಾರ ನಿಮಗಿನ್ನೂ ಗೊತ್ತಾಗಲಿಲ್ಲವಲ್ಲ" ಅಂತ ಅಂಗಿಸುತ್ತಿದ್ದಾಳೆ.

ಸಧ್ಯ ನಾನು ಜಗಳವಾಡಬಾರದೆಂದು ತೀರ್ಮಾನಿಸಿಬಿಟ್ಟಿದ್ದೇನೆ...ನಿಮ್ಮ ಸಲಹೆಗೆ ಧನ್ಯವಾದಗಳು.
ಪುಸ್ತಕವಿಚಾರದಲ್ಲಿ ನಿಮ್ಮಆರೈಕೆಗೆ ಧನ್ಯವಾದಗಳು.

shivu said...

ಲೋದ್ಯಾಶಿಯವರೆ,

ನನ್ನ ವೆಂಡರ್ ಕಣ್ಣು ನಿಮ್ಮ ಅನಿಸಿಕೆಯಂತೆ ಎಲ್ಲಾ ಕಡೆ ಮುಟ್ಟಲು ಖಂಡಿತ ಪ್ರಯತ್ನಿಸುತ್ತೇನೆ.

ನಿತ್ಯ ಆಗುವ ಅನುಭವಗಳನ್ನು ಹೀಗೆ ಬರೆಯುತ್ತಿದ್ದೇನೆ ಅಷ್ಟೇ. ಮತ್ತೆ ನಿಮಗೂ ನನ್ನಂತೆ ಅನುಭವಗಳು ಚೆನ್ನಾಗಿಯೇ ಆಗಿವೆಯಲ್ಲ. ನೀವು ನಮ್ಮ ಟೀಮ್ ಮೆಂಬರ್ ಆದಂತೆ.

ಹೀಗೆ ಬರುತ್ತಿರಿ. ಧನ್ಯವಾದಗಳು.

shivu said...

ಮಲ್ಲಿಕಾರ್ಜುನ್,

ಕೊಳಾಯಿಗಳ ಮಾಂತ್ರಿಕೆ ಲೋಕವೆಂದು ಒಳ್ಳೆಯ ಹೆಸರನ್ನು ಇಟ್ಟಿದ್ದೀರಿ..ನಿಜಕ್ಕೂ ಅವುಗಳ ವರ್ತನೆ ನೀವು ಹೇಳಿದ ಎಲ್ಲಾ ಅನುಭವಗಳನ್ನು ಖಂಡಿತ ತರುತ್ತೆ.

ಲೇಖನವನ್ನು enjoy ಮಾಡಿದ್ದಕ್ಕೆ ಥ್ಯಾಂಕ್ಸ್.

ಪುಸ್ತಕದ ಬೆನ್ನುಡಿಯನ್ನು ಶೇಷಾಶಾಸ್ತ್ರಿಗಳು ತುಂಬಾ ಚೆನ್ನಾಗಿ ಬರೆದಿದ್ದಾರೆ. ಅವರ ಪ್ರೋತ್ಸಾಹಕ್ಕೆ ಧನ್ಯವಾದಗಳು.

PARAANJAPE K.N. said...

ನಲ್ಲಿ ನೀರಿನ ಬಗ್ಗೆಯೇ ಒಂದು ಸುಲಲಿತ ಪ್ರಬಂಧ ಬರೆದಿದ್ದೀರಿ, ಚೆನ್ನಾಗಿದೆ ಬರಹದ ಓಘ. ನನ್ನ ಕೆಲಸಗಳ ನಡುವೆ ಸಮಯ ಸಿಕ್ಕಿರಲಿಲ್ಲ, ಹಾಗಾಗಿ ಸ್ವಲ್ಪ ತಡವಾಗಿ ಬಂದೆ. ನಿಮ್ಮ ಪ್ರಬಂಧ ಓದಿ ಮನಸ್ಸು ಮುದಗೊ೦ಡಿತು. ನಿಮ್ಮ ಪುಸ್ತಕ ಬಿಡುಗಡೆ ಗೆ ಖಂಡಿತ ಬರುತ್ತೇನೆ. ಶುಭವಾಗಲಿ.

ಸಿಮೆಂಟು ಮರಳಿನ ಮಧ್ಯೆ said...

ಶಿವು ಸರ್..

ನಾವು ನೋಡುವ ಪ್ರಪಂಚವನ್ನೇ ನೀವು ನೋಡುತ್ತಿರುವಿರಿ..
ಇಂಥಹ ತೀರಾ ಸಾಮಾನ್ಯವಾದ ವಸ್ತುವೊಂದು..
ಆಸಕ್ತಿದಾಯಕವಾಗಿ ನೋಡುವದು..
ಬರೆಯುವದು... ನಿಮ್ಮಂಥವರಿಗೆ ಮಾತ್ರ ಸಾಧ್ಯ...!

ಬಹಳ ಸೊಗಸಾಗಿದೆ.. ನಿಮ್ಮ ಜಿರಳೆ ಕಥನದ ಹಾಗೆ..

shivu said...

ವಿಜಯಶ್ರೀಯವರೆ,

ಅವ್ಯಯವೆಂದರೆ ಏನೆಂದು ವಿವರಿಸಿದ್ದೀರಿ ಥ್ಯಾಂಕ್ಸ್. ನಿಮ್ಮ ಮನೆಯಲ್ಲಿ ಇಂಥ ಹಿನ್ನೆಲೆ ಸಂಗೀತ ಹೆಚ್ಚಾದರೆ ಅದನ್ನು ಬಳಸಿಕೊಂಡು ಒಂದು ಸುಂದರ ಲೇಖನವನ್ನು ಬರೆಯಿರಿ...

ಮತ್ತೊಮ್ಮೆ ಬ್ಲಾಗಿಗೆ ಬಂದಿದ್ದಕ್ಕೆ ಧನ್ಯವಾದಗಳು.

shivu said...

ಪರಂಜಪೆ ಸರ್,

ನೀವು ತಡವಾಗಿ ಬಂದರೂ ತೊಂದರೆಯಿಲ್ಲ. ನಿಮ್ಮಂತೆ ನನಗೆ ಹೆಚ್ಚು ಕೆಲಸದಿಂದಾಗಿ ಎಲ್ಲಾರ ಬ್ಲಾಗಿಗೂ ಹೋಗಲಾಗುತ್ತಿಲ್ಲ. ಲೇಖನವನ್ನು ಮೆಚ್ಚಿ ಪ್ರೋತ್ಸಾಹಿಸುತ್ತಿದ್ದೀರಿ...ಪುಸ್ತಕಗಳ ಕಾರ್ಯಕ್ರಮಕ್ಕೆ ಬರುತ್ತಿದ್ದೀರಿ ಎನ್ನುವ ವಿಚಾರ ಖುಷಿಕೊಡುತ್ತದೆ.

ಲೇಖನವನ್ನು ಮೆಚ್ಚಿದ್ದಕ್ಕೆ ಧನ್ಯವಾದಗಳು.

shivu said...

ಪ್ರಕಾಶ ಸರ್,

ಈಗೊಂದು ವಾರದಿಂದ ಕೆಲಸದ ಒತ್ತಡ. ಬ್ಲಾಗಿಗೆ ಬರಲಾಗುತ್ತಿಲ್ಲ. ಸಾಮಾನ್ಯ ವಿಚಾರದಲ್ಲಿ ಹೊಸತನ್ನು ಹುಡುಕುವುದು ಒಂಥರ ಮಜವೆನಿಸುತ್ತದೆ. ಲೇಖನವನ್ನು ಮೆಚ್ಚಿ ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು.

ವನಿತಾ / Vanitha said...

Shivu,
Olleya haasyabharitha lekhana..:)
Pustaka bidugadege nammellara shubhashayagalu..ondu copy ettittiDi..

shivu said...

ವನಿತ,

ಲೇಖನದ ಹಾಸ್ಯವನ್ನು ಮೆಚ್ಚಿದ್ದಕ್ಕೆ ಥ್ಯಾಂಕ್ಸ್..

ಪುಸ್ತಕ ಬಿಡುಗಡೆಯಾದಮೇಲೆ ನಿಮಗಾಗಿ ಖಂಡಿತ ಪುಸ್ತಕವನ್ನು ಎತ್ತಿಟ್ಟಿರುತ್ತೇನೆ. ಅಲ್ಲಿಂದ ಯಾರಾದರೂ ಬಂದರೆ ಅವರ ಬಳಿ ಕೊಟ್ಟು ಕಳಿಸುತ್ತೇನೆ.

ಧನ್ಯವಾದಗಳು.

Prabhuraj Moogi said...

ಹ ಹ ಹ.. ಒಳ್ಳೆ ಕಥೆ... ನಾನೂ ಹೀಗೆ ನಲ್ಲಿ ಕಡೆಯಿಂದ ಏಮಾರಿಸಿಕೊಂಡಿದ್ದೇನೆ, ಈ ತಿರುಗಿಸುವ ಚಕ್ರಾಕಾರದ ನಲ್ಲಿಗಳು ಕ್ಲೊಜ್, ಆಗಿವೆಯೋ ಓಪನ್ ಆಗಿವೇಯೋ ಏನೂ ತಿಳಿಯೋದಿಲ್ಲ, ಅದಕ್ಕೇ ಕ್ಲೋಜ್ ಮಾಡೊ ದೈರೆಕ್ಷನ ಬರೆದು ಇಟ್ಟಿದ್ದೇನೆ ಅದನ್ನು ನೋಡಿ ತಿರುಗಿಸಿ ಕ್ಲೋಜ್ ಮಾಡೊಯೇ ಮನೆಯಿಂದ ಹೊರಡೊದು, ಇಲ್ಲಾಂದ್ರೆ ನೀರು ಬಂದರೆ ಅಷ್ಟೇ...

shivu said...

ಪ್ರಭು,

ನಲ್ಲಿ ಕತೆಯನ್ನು ಓದಿ ಇಷ್ಟಪಟ್ಟಿದ್ದೀರಿ. ಜೊತೆಗೆ ನಿಮ್ಮ ಆನುಭವವನ್ನು ಹಂಚಿಕೊಂಡಿದ್ದೀರಿ. ಧನ್ಯವಾದಗಳು.