Sunday, August 16, 2009

ಅಣ್ಣಾ...ಬೇಡ ಕಣೋ, ನನ್ಗೆ ಭಯವಾಗುತ್ತೇ......


"ನಮಗೆ ಸ್ನಾನಕ್ಕೆ ಹಾಟ್ ವಾಟರ್ ಬೇಕಲ್ಲ?" ನಾನು ಕೇಳಿದೆ.

ಆತ ನಮ್ಮಿಬ್ಬರನ್ನು ಆಶ್ಚರ್ಯದಿಂದ ನೋಡಿದ. ಬಹುಶಃ ನನ್ನ ಕೇಳುವಿಕೆಯೇ ಅವನಿಗೆ ವಿಚಿತ್ರವೆನಿಸಿರಬೇಕು.

ಅವನಿಗೆ ಕೇಳಿಸಲಿಲ್ಲವೇನೋ ಅಂದುಕೊಂಡು ಮತ್ತೊಮ್ಮೆ ಕೇಳಿದೆ.

"ನಮ್ಮಲ್ಲಿ ಹಾಟ್ ವಾಟರ್ ಸಿಗೋಲ್ಲ ಸರ್" ಹೇಳಿದ.

"ಇಷ್ಟು ದೊಡ್ದ ರಿಸಾರ್ಟ್ ಇಟ್ಟುಕೊಂಡಿದ್ದೀರಿ... ಯಾಕೆ ಸಿಗೋಲ್ಲ"...ಮತ್ತೆ ನನ್ನ ಅಸಮಧಾನ

"ಸಾರಿ ಸರ್, ಅದನ್ನು ನಮ್ಮ ಬಾಸ್ ಬಳಿ ಕೇಳಿಕೊಳ್ಳಿ....ಅವರನ್ನೇ ಕಳಿಸುತ್ತೇನೆ"

ರಾತ್ರಿಯೆಲ್ಲಾ ರೈಲಲ್ಲಿ ನಿದ್ರೆಯಿಲ್ಲದೇ ಪ್ರಯಾಣ ಮಾಡಿ ಮುಂಜಾನೆ ಏಳುಗಂಟೆಗೆ ಆ ರಿಸಾರ್ಟ್ ಸೇರಿಕೊಂಡಿದ್ದೆವು. ಮತ್ತೆ ನಮ್ಮ ಆ ದಿನದ ಚಟುವಟಿಕೆಗೆ ಸಿದ್ಧರಾಗಲೂ ಸ್ನಾನವಾಗಲೇ ಬೇಕಿತ್ತು. ಆ ರೀಸಾರ್ಟ್ ನೋಡಲು ಬಲುಸುಂದರವಾಗಿದ್ದು ಸುತ್ತ ಮರಗಳಿದ್ದು ಅಹ್ಲಾದಕರ ವಾತಾವರಣವಿದ್ದರೂ ಬಾತ್‍ರೂಮಿನಲ್ಲಿ ಬಿಸಿನೀರಿನ ವ್ಯವಸ್ಥೆಯಿರಲಿಲ್ಲ. ಅದಕ್ಕಾಗಿ ಅಲ್ಲಿನ ರೂಂಬಾಯ್‍ನನ್ನು ಕೇಳಿದಾಗ ಅವನಿಂದ ಇಂಥ ಉತ್ತರ ಬಂದಿತ್ತು. ಅದೋ ಅವನ ಬಾಸ್ ಬರುತ್ತಿದ್ದಾನೆ. ನೋಡಲು ಆಫ್ರಿಕನ್ ತರ ಕಾಣುವ ಆತ ಕೂದಲಿಗೆ ಜಡೆಹಾಕಿ ರಬ್ಬರ್ ಬ್ಯಾಂಡ್ ಹಾಕಿದ್ದ. ದೇಹಬಣ್ಣವಂತೂ ಕಪ್ಪುಮಸಿಯಂತಿತ್ತು. ಜಾಗಿಂಗ್ ಪ್ಯಾಂಟ್ ಮಾತ್ರ ಹಾಕಿಕೊಂಡು ಟಾಪ್ ಲೆಸ್ ಹಾಗಿದ್ದ ಅವನನ್ನು ಮತ್ತೆ ಸ್ನಾನಕ್ಕೆ ನೀರು ಕೊಡಬೇಕೆಂದು ಕೇಳಿದೆ.

"ಸಾರಿ ಸರ್, ನಮ್ಮಲ್ಲಿ ಬಿಸಿನೀರು ಸಿಗೋಲ್ಲ."

"ಯಾಕೆ ಸಿಗೋಲ್ಲ, ನಾವು ಈಗ ತಾನೆ ಪ್ರಯಾಣ ಮಾಡಿ ಬಂದಿದ್ದೇವೆ. ನಮ್ಮ ಆಯಾಸ ಪರಿಹಾರಕ್ಕಾಗಿ ಬಿಸಿನೀರು ಸ್ನಾನ ಮಾಡಲೇಬೇಕು ನೀವು ಅದನ್ನು ವ್ಯವಸ್ಥೆ ಮಾಡಬೇಕು?" ನಾನು ಆರ್ಡರ್ ಮಾಡುವಂತೆ ಮಾತಾಡಿದೆ.

"ನೋಡಿಸರ್, ಫಾರಿನರ್ಸ್ ಯಾರು ಬಿಸಿನೀರು ಕೇಳಲ್ಲ.....ಮತ್ತೆ ಅವರು ಲೈಕ್ ಮಾಡಲ್ಲ....ಅದಕ್ಕೆ ನಮ್ಮಲ್ಲಿ ಅದರ ಫೆಸಿಲಿಟಿ ಇಲ್ಲ ಸರ್"

"ಆರೆರೆ....ನಾವು ಇಂಡಿಯನ್ಸ್ ನಮಗೆ ಬೇಕಲ್ಲ" ನೀವು ಕೊಡಲಿಲ್ಲ ಅಂದ್ರೆ ನಾವು ಬೇರೆ ರೆಸಾರ್ಟಿಗೆ ಹೋಗುತ್ತೇವೆ."

"ಸಾರಿ ಸರ್, ಇವತ್ತು ಸಿಗೋಲ್ಲ. ಇವತ್ತೊಂದು ದಿನ ಅಡ್ಜೆಸ್ಟ್ ಮಾಡಿಕೊಳ್ಳಿ ನಾಳೆ ಬೇಕಾದ್ರೆ ವ್ಯವಸ್ಥೆ ಮಾಡುತ್ತೇನೆ'

ನಮ್ಮನ್ನು ಸಮಾಧಾನಿಸಲು ಅವನು ಹೇಳಿದಾಗ ನಾವು ಆಗಲೇ ಸುಸ್ತಾಗಿದ್ದರಿಂದ ಮತ್ತು ಬೇರೆ ಹೋಟಲ್ಲುಗಳನ್ನು ಹುಡುಕುವ ಮನಸ್ಸು ಇರಲಿಲ್ಲವಾದ್ದರಿಂದ ಒಪ್ಪಿಕೊಂಡೆವು.

ಸ್ವಲ್ಪ ಹೊತ್ತಿಗೆ ಅವನ್ಯಾಕೆ ನಮಗೆ ಬಿಸಿನೀರು ಕೊಡಲಿಲ್ಲವೆನ್ನುವುದು ನಮ್ಮ ಆನುಭವಕ್ಕೆ ಬರತೊಡಗಿತು. ಬೆಳಗಿನ ಎಂಟುಗಂಟೆಗೆ ನಮ್ಮ ಮೈಯಲ್ಲಾ ಬಿಸಿಯಾಗಿ ಬೆವರು ಸುರಿಯಲಾರಂಭಿಸಿತು. ತಿಂಡಿ ಮುಗಿಸಿ ಒಂದಷ್ಟು ಹೊತ್ತು ಸುತ್ತಾಡಿ ಬರುವ ಹೊತ್ತಿಗಾಗಲೇ ಸಮಯ ಹನ್ನೊಂದುಗಂಟೆ ಆಗಂತೂ ನಮ್ಮ ಮೈಯಲ್ಲಾ ಒದ್ದೆಯಾಗುವಷ್ಟು ಬೆವರು ಬಂದು ನಮಗೆ ನಡೆಯಲಾರದಷ್ಟು ಸುಸ್ತು ಆಗಿಬಿಟ್ಟಿತ್ತು. ವಾಪಸ್ ರಿಸಾರ್ಟಿಗೆ ಬಂದು ಚೆನ್ನಾಗಿ ತಣ್ಣೀರು ಸ್ನಾನ ಮಾಡಿ ಎರಡು ಗಂಟೆ ಚೆನ್ನಾಗಿ ನಿದ್ರೆ ಮಾಡಿದ ಮೇಲೆ ನಮ್ಮ ಆಯಾಸ ಪರಿಹಾರವಾಗಿತ್ತು. ಇದು ಅಲೆಪ್ಪಿ ಅನ್ನುವ ಕೇರಳದ ಪುಟ್ಟ ನಗರದ ಕತೆ. ನಂತರ ಗೊತ್ತಾಯಿತು ಅಲ್ಲಿ ಬಿಸಿನೀರಿನ ಕಾನ್ಸೆಪ್ಟೇ ಇಲ್ಲ ಅಂತ. ಮತ್ತೆ ಇಷ್ಟು ಸೆಕೆಯಿರುವ ಈ ಊರಿನಲ್ಲಿ ಯಾರು ಬಿಸಿನೀರಿನ ಸ್ನಾನ ಮಾಡುತ್ತಾರೆ ಹೇಳಿ! ಅಲ್ಲೆಲ್ಲಾ ಪ್ರತಿಯೊಬ್ಬರೂ ತಣ್ಣೀರು ಸ್ನಾನ ಮಾಡುವುದೇ ಅಭ್ಯಾಸ. ಇಡೀ ನಗರದ ತುಂಬಾ ಫೊನ್ನುಮಡ ಸರೋವರದ ಕಾಲುವೆಗಳಿದ್ದರೂ ಸದಾ ಸೆಕೆ ವಾತಾವರಣವಿರುತ್ತದೆ.

ಅಲ್ಲಿನ ಹೆಂಗಸರೂ ತಣ್ಣೀರು ಸ್ನಾನವಾದ ನಂತರ ತಲೆ ಒಣಗಿಸದೆ ದಿನಪೂರ್ತಿ ತಲೆ ತಂಪಾಗಿರಲು ಎಣ್ಣೆ ಹಚ್ಚಿ ನೀರು ಜಡೆ ಹಾಕಿಕೊಂಡು ಬಿಡುತ್ತಾರೆ. ಅದಕ್ಕಾಗಿ ಇಡೀ ಊರಿನ ತುಂಬಾ ಹುಡುಗಿಯರ, ಹೆಂಗಸರ ನೀರಜಡೆಗಳೇ ಕಾಣುತ್ತಿರುತ್ತವೆ. ಹೊರಗೆ ಚೆನ್ನಾಗಿ ಬಿಸಿಲು ಬರುತ್ತಿದ್ದರೂಆಗಾಗ ಮಳೆಯೂ ಬರುತ್ತದೆಯಾದ್ದರಿಂದ ಎಲ್ಲ ಹೆಂಗಸರು,ಹೆಣ್ಣುಮಕ್ಕಳುಕೊಡೆಯ ಜೊತೆಯಲ್ಲಿಯೇ ಮನೆಯಿಂದ ಹೊರಬರುವುದು.

ಮತ್ತೆ ಗಂಡಸರ ಕತೆಯೂ ಬೇರೆಯೇನಲ್ಲ. ಎಲ್ಲರೂ ಪಂಚೆಧಾರಿಗಳು. ರಸ್ತೆಯಲ್ಲಿ ಓಡಾಡುವವರು, ಸೈಕಲ್ ತುಳಿಯುವವರು, ಆಟೋ ಓಡಿಸುವವರು, ಕಾರು ಓಡಿಸುವವರು, ಸಣ್ಣ-ದೊಡ್ಡ ದೋಣಿಗಳ ಅಂಬಿಗರು, ರಸ್ತೆ ಮಾಡಿಸುವ ಗುತ್ತಿಗೆದಾರರು, ಹೋಟಲ್ ಮಾಲಿಕರು, ದೊಡ್ಡ ದೊಡ್ಡ ಇಂಡಸ್ಟ್ರೀಯಲಿಷ್ಟ್, [ಕೊನೆಗೆ ನಮ್ಮ ರಕ್ಷಣಾ ಮಂತ್ರಿಯಾದ ಎ.ಕೆ ಆಂಟನಿ ಸಹ ಸದಾ ಪಂಚೆಯಲ್ಲಿರುತ್ತಾರೆ.] ರಸ್ತೆ ಬದಿಯ ವ್ಯಾಪಾರಿಗಳು, ಹೀಗೆ ಪ್ರತಿಯೊಂದು ಪಂಚೆಮಯ.

ಮತ್ತೊಂದು ವಿಚಾರವೇನೆಂದರೇ ಅಲೆಪ್ಪಿಯಲ್ಲಿ ಬಹುತೇಕ ಗಂಡಸರು ಬಾಲ್ಡಿತಲೆಯವರೆ ಆಗಿದ್ದರು. ಅಲ್ಲಿನ ಬಿಸಿ ವಾತವರಣಕ್ಕೆ ಅವರ ತಲೆಕೂದಲೆಲ್ಲಾ ತರಾವರಿ ಶೈಲಿಯಲ್ಲಿ ಉದುರಿಹೋಗಿ ವೈವಿಧ್ಯಮಯ ಭೂಪಟಗಳೇ ಆಗಿದ್ದವು. ಅವುಗಳನ್ನು ನೋಡಿ ನಾನಂತೂ ಖುಷಿಯಿಂದ ಕ್ಲಿಕ್ಕಿಸಿದ್ದೆ.

ಇಷ್ಟೆಲ್ಲಾ ಆದಮೇಲೆ ಮರುದಿನ ಬಿಸಿನೀರಿನ ಕಾನ್ಸೆಪ್ಟನ್ನು ನಾವು ಕೈ ಬಿಟ್ಟೆವು.

ಇದೆಲ್ಲಾ ದೊಡ್ಡವರ ಕತೆಯಾಯ್ತು. ಇನ್ನೂ ಅಲ್ಲಿನ ಮಕ್ಕಳ ಬದುಕೇನು ಅಂತ ಗಮನಿಸಲಾರಂಭಿಸಿದಾಗ ತುಂಬಾ ವಿಭಿನ್ನವಾದ ಆನುಭವವಾಯ್ತು. ಆ ಆನುಭವಗಳನ್ನೆಲ್ಲಾ ಮಾತಿನಲ್ಲಿ ಕೇಳುವುದಕ್ಕಿಂತ ಕ್ಯಾಮೆರಾ ಕಣ್ಣಿನಿಂದ ನೋಡಿದರೇ ಚೆನ್ನಾ ಅಲ್ವೇ!. ಒಂದಷ್ಟು ನೀರ ಮೇಲಿನ ಮಕ್ಕಳು, ನೀರ ಜೊತೆ ಗೆಳೆತನದ ಮಕ್ಕಳು, ನೀರಿಗಂಟಿಕೊಂಡ ಮಕ್ಕಳನ್ನು ನೋಡೋಣ ಬನ್ನಿ.

ನೋಡಿ ಇವರು ನೀರ ಮೇಲಿನ ಮಕ್ಕಳು....

೧. ಹೇ ಸುಮ್ನಿರೋ...ಫೋಟೋ ತೆಗಿತಾವ್ರೇ......



೨. ಅಮ್ಮ ಇನ್ನೂ ಬರ್ಲೇ ಇಲ್ಲಾ.....ಬೇಜಾರಾಗ್ತಿದೆ.



೩. ಅಜ್ಜೀ ಅಲ್ನೋಡು......ಯಾರೋ ನಮ್ಮೂರಿಗೆ ಹೊಸಬರು ಬಂದವ್ರೇ.....


೪. ಅಪ್ಪಾಜಿ ಎಲ್ಲೋದ್ರು.....ನಾನು ಅಮ್ಮ ಅವಾಗಿಂದ ಕಾಯ್ತಾನೇ ಇದ್ದೀವಿ.....


೫. ಈ ಸೆಕೇಲಿ ಬರೆಯೋದಿಕ್ಕೆ ಆಗ್ತ ಇಲ್ಲಾ, ಏನಾದ್ರು ಆಗ್ಲಿ ಇವಗ್ಲೇ ಹೋಂವರ್ಕ್ ಮುಗಿಸಿಬಿಟ್ರೆ ಆಟವಾಡಲು ಹೋಗಬಹುದು.....

೬. ಬೇಡ ನೋಡು, ಎಮ್ಮೆ ತರ ಇದ್ದೀಯಾ....ನಿನಗೆ ಸ್ವಲ್ಪನಾದ್ರು ಬುದ್ಧಿ ಬೇಡ್ವ.......



೭. ಏನ್ ಎಲ್ಲಾ ಇಂಗ್ ಕುಣಿತಾವ್ರೆ.... ನನ್ನಮ್ಮ ನನಗೂ ಚೆನ್ನಾಗಿ ಮೇಕಪ್ ಮಾಡಿದ್ದಾಳೆ, ನಾನು ಒಂದು ಕೈ ನೋಡಿಬಿಡ್ಲಾ?

೮. ಅಲ್ಲಿ ಯಾಕೆ ಅಷ್ಟೊಂದು ಜನ ಪೋಲಿಸರು ಅವ್ರೇ.....ಓಹ್ ಸೋನಿಯಾ ಗಾಂಧಿ ಬರುತ್ತಾಳಲ್ಲ....ಅದಕ್ಕೆ ಇಷ್ಟೊಂದು ಸೆಕ್ಯುರಿಟಿ ಇರಬೇಕು.



೯. ಏನ್ ಸ್ಫೀಡಾಗಿ ದೋಣಿ ನಡೆಸ್ತಾರೆ ಅಲ್ವಾ ಅಣ್ಣ....ನೋಡು ಅವರೇ ನೆಹರು ಟ್ರೋಪಿ ಗೆದ್ರು...[ಚಪ್ಪಾಳೆ]


ನೋಡಿ ಇವರೆಲ್ಲಾ ನೀರ ಜೊತೆಗಿನ ಮಕ್ಕಳು.....

೧೦. ಅಲ್ನೋಡ್ ಅಕ್ಕ ಆ ಬೋಟ್ ಮೇಲೆ ಎಂಗೆ ಡ್ಯಾನ್ಸ್ ಮಾಡ್ತಾವ್ರೇ......ಸಕ್ಕತ್ ಮಜಾ ಅಲ್ವಾ....



೧೧. ನಮ್ಮ ಸ್ನೇಕ್ ಬೋಟ್ ರೇಸ್ ವರ್ಲ್ಡ್ ಫೇಮಸ್ಸು, ಅದಕ್ಕೆ ನಾವು ಸ್ಕೂಲಿಗೆ ಚಕ್ಕರ್ ಹೊಡೆದು ನೋಡಕ್ಕೆ ಬಂದಿದ್ದೀವಿ...


೧೨. ಸ್ನೇಕ್ ಬೋಟ್ ರೇಸ್ ಸ್ಪರ್ಧೆಗೆ ಹೋಗಕ್ಕೆ ಮೊದಲು ಈ ರೀತಿನೇ ಅಬ್ಯಾಸ ಮಾಡಬೇಕು ಗೊತ್ತ...ಅದಕ್ಕೇ ನಾನು ಮಾಡ್ತಾ ಇದ್ದೀನಿ....


೧೩. ಈ ಸೆಕೇಲಿ ಏನಣ್ಣ ಮೀನ್ ಹಿಡಿಯೋದು, ಇವತ್ತು ಬೋಟ್ ರೇಸ್ ಅಲ್ವಾ ಅದಕ್ಕೆ ಮೀನುಗಳು ರಜಾಹಾಕಿ ನೆಂಟರ ಮನೆಗೆ ಹೋಗಿಬಿಟ್ಟಿರಬೇಕು...



೧೪. ಇವತ್ತು ಸ್ಕೂಲಿಗೆ ರಜಾ ಅಲ್ವಾ......ಅದಕ್ಕೆ ನನ್ನ ಬಟ್ಟೆಗಳನ್ನ ಜಾಲಿಸಿಕೊಳ್ಳುತ್ತಿದ್ದೀನಿ..




೧೫. ಅಮ್ಮ ಹೇಳ್ತಾ ಇದ್ದ ಸಮುದ್ರ ಅಂದ್ರೆ ನೀನೇನಾ!.....ಎಷ್ಟೊಂದು ಗಲಾಟೆ ಮಾಡ್ತಿಯಪ್ಪ ನೀನು........

೧೬. ನಾನು ನಿನ್ನ ನೋಡಕ್ಕೆ ಬಂದಿದ್ದೀನಿ, ಸ್ವಲ್ಪ ಗಂಭೀರವಾಗಿ ಇರಬಾರದಾ...


ಆಹಾ..! ಇವರಂತೂ ನೀರಿಗಂಟಿದ ಮಕ್ಕಳು.....

೧೭. ನೀರಲ್ಲಿ ಬಿದ್ಯಾ, ಒಳ್ಳೇದಾಯ್ತು ಬಿಡು. ಈ ಸೆಕೇಲಿ ಸ್ವಲ್ಪ ತಂಪಾಗುತ್ತೆ.



೧೮. ನೀರು ಅನ್ನೊದು ಎಂಥವರನ್ನೂ ಮಕ್ಕಳನ್ನಾಗಿ ಮಾಡಿಬಿಡುತ್ತೇ ಅಲ್ವಾ....


೧೯. ಹೇ..ಹೇ...ಅಣ್ಣಾ...ನೀರಲ್ಲಿ ಆಡೋದು ಎಂಥ ಮಜಾ ಅಲ್ವಾ...

೨೦. ಆಣ್ಣಾ ಬೇಡ ಕಣೊ, ನನಗೆ ಭಯವಾಗುತ್ತೆ......


೨೧. ಹೋಗ್ಲೀ, ಕಣ್ಣು ಮುಚ್ಚಿಕೊಂಡುಬಿಡ್ತೀನಿ ಇರೋ....ಸ್ವಲ್ಪ.....

೨೨. ವಾಹ್!!....ಎಂಥಾ ಮಜಾ.....


೨೩. ನೋಡಿದ್ಯಾ ಅಣ್ಣಾ........ನೀನು ನೀರು ಎರಚಿದ್ರೂ ನನಗೇನು ಭಯವಾಗಲಿಲ್ಲ...ಎಂಗೆ.....



ಮುಂದಿನ ಭಾಗಗಳಲ್ಲಿ ಸ್ನೇಕ್ ಬೋಟ್ ಸ್ಪರ್ಧೆ, ವೈವಿಧ್ಯಮಯ ಅಲೆಪ್ಪಿ, ಜೊತೆಗೆ ಕೆಲವು ಅಲೆಪ್ಪಿ ಭೂಪಟಗಳು ಬರುತ್ತವೆ...

ಗೆಳೆಯರೆ ನನ್ನ ಲೇಖನಗಳ ಪುಸ್ತಕವೊಂದು ಸಿದ್ದವಾಗುತ್ತಿದೆ.....ಶೀಘ್ರದಲ್ಲಿ ಅದರ ಬಗ್ಗೆ ಇನ್ನಷ್ಟು ವಿವರಗಳನ್ನು ಕೊಡುತ್ತೇನೆ...ಧನ್ಯವಾದಗಳು.

ಚಿತ್ರಗಳು ಮತ್ತು ಲೇಖನ.
ಶಿವು.ಕೆ. ARPS.

76 comments:

ಏ ಜೆ ಜಾವೀದ್ said...

ಶಿವು,
ಕೇರಳ ಪ್ರವಾಸದ ಎರಡನೇ ಕಂತು ಚೆನ್ನಾಗಿದೆ.
ನಾನು ಕೇರಳಕ್ಕೆ ಹೋಗುವ ಯೋಚನೆ ಇದೆ. ಹೋದಾಗ ಬಿಸಿ ನೀರು ಕೇಳೊಲ್ಲ.

ಕೇರಳದಲ್ಲಿ ದೊರೆತಿರುವ "ಭೂಪಟ"ಗಳಿಗೆ ಕಾತುರದಿಂದ ಕಾಯುತ್ತಿದ್ದೀನಿ.

shivu.k said...

ಜಾವೀದ್,

ಲೇಖನವನ್ನು ಬ್ಲಾಗಿಗೆ ಹಾಕಿದ ತಕ್ಷಣ ಪ್ರತಿಕ್ರಿಯಿಸಿದ್ದೀರಿ...ಧನ್ಯವಾದಗಳು. ನೀವು ಕೇರಳಾಗೆ ಹೋಗಿಬನ್ನಿ. ಜೊತೆಯಲ್ಲಿ ಅಲ್ಲಿ ಓಡಾಡಲು ಪಂಚೆಯನ್ನು ತೆಗೆದುಕೊಂಡು ಹೋಗಿ. ಮತ್ತೆ ನೀವು ಅಪ್ಪಿ ತಪ್ಪಿ ಬಿಸಿನೀರು ಕೇಳಿದರೂ ಅವರು ಕೊಡುವುದಿಲ್ಲ.

ಮುಂದಿನ ಸಂಚಿಕೆಗಳಲ್ಲಿ ಖಂಡಿತ ಅಲ್ಲಿನ ಭೂಪಟಗಳನ್ನು ಹಾಕುತ್ತೇನೆ...

NiTiN Muttige said...

ಶಿವು ಅವರೇ, ನಿಮ್ಮ ಪುಸ್ತಕ ಬರುತ್ತಿರುವುದನ್ನು ಕೇಳಿ ಸಂತೋಷವಾಯಿತು. ಆದಷ್ಟು ಬೇಗ ಬರಲಿ.
ಕೇರಳದ ನೀರ್ ಫೋಟೊಗಳು ಸಕತ್ತಾಗಿದೆ...

shivu.k said...

ನಿತಿನ್,

ತುಂಬಾ ದಿನಗಳ ನಂತರ ಬ್ಲಾಗಿಗೆ ಬಂದಿದ್ದೀರಿ...

ಕೇರಳದ ಫೋಟೊಗಳನ್ನು ಮೆಚ್ಚಿದ್ದೀರಿ...ಧನ್ಯವಾದಗಳು.

ಪುಸ್ತಕದ ವಿಚಾರ ನನಗೂ ಖುಷಿ ತಂದಿದೆ...

ಮನಸು said...

keralada kantugaLu chennagi moodibandide.. fotogalu aste chennagive..

nimma pustaka bidugadeya bagge keli kushiyagide... aa pustakada bagge tilisikodi..

nimage shubhavagali
vandanegaLu

shivu.k said...

ಮನಸು ಮೇಡಮ್,

ಕೇರಳ ಸಂಜಿಕೆಗಳನ್ನು ಮತ್ತು ಚಿತ್ರಗಳನ್ನುಮೆಚ್ಚಿದ್ದಕ್ಕೆ ಧನ್ಯವಾದಗಳು.

ಪುಸ್ತಕದ ಕೆಲಸ ನಡೆಯುತ್ತಿದೆ. ಇನ್ನು ಕೆಲವೇ ದಿನಗಳಲ್ಲಿ ಅದನ್ನು ತಿಳಿಸುತ್ತೇನೆ.

Prabhuraj Moogi said...

ಮಳೆಯಲ್ಲಿ ನೆನೆದ ಮಕ್ಕಳ ಫೊಟೊಗಳು ಬಹಳ ಚೆನ್ನಾಗಿವೆ. ಆ ಕಪ್ಪು ಡ್ರೆಸ್ಸಿನಲ್ಲಿ ಹಿಂದೆ ನೋಡುತ್ತ ಹೊರಟಿರುವ ಹುಡುಗಿಯ ಚಿತ್ರ ಬಹಳೆ ಚೆನ್ನಾಗಿ ಸೆರೆ ಹಿಡಿದಿದ್ದೀರಿ, ಬಹಳ ಇಷ್ಟ ಆಯ್ತು.
ಪುಸ್ತಕದ ಮಾಹಿತಿ ಬೇಗ ಬರಲಿ, ಅಭಿನಂದನೆಗಳು

Shravya said...

awesome pictures shivu..badukina naija chitrana.:)

ಮಲ್ಲಿಕಾರ್ಜುನ.ಡಿ.ಜಿ. said...

ಶಿವು,
ನೀವು ಅಷ್ಟು ಚೆನ್ನಾಗಿರುವ ರಿಸಾರ್ಟಿನಲ್ಲಿ TV ಇಲ್ಲವಲ್ಲ ಅಂದುಕೊಂಡು "TV ಇಲ್ವಾ?" ಅಂದಾಗ ಆತ, "Foreigners don't like" ಅಂದಿದ್ದ! ಇವನ್ಯಾವನಪ್ಪ ಬರೀ ಫಾರೀನರ್ರುಗಳಿಗೆ ಮಾತ್ರ ರಿಸಾರ್ಟು ಮಾಡಿದಂತಿದೆ ಎಂದು ಗೊಣಗಿದ್ದೆವು.

ನಿಮ್ಮ ಬರಹಗಳು ಪುಸ್ತಕ ರೂಪ ಪಡೆಯುತ್ತಿರುವುದು ಸಂತಸದ ವಿಷಯ. ಅಭಿನಂದನೆಗಳು ಮತ್ತು ಶುಭ ಹಾರೈಕೆಗಳು.

ಹರೀಶ ಮಾಂಬಾಡಿ said...

Keraligara photo mattu kannadada adumaatina shailiya aption chennagittu.

Nimma pustakakke kauttiddene.

ರೂpaश्री said...

ಶಿವು,
ಕೇರಳದ ನೀರ ಮಕ್ಕಳ ಫೋಟೋಗಳು ಸಕ್ಕತ್!! ೨೦-೨೨ ತುಂಬಾ ಇಷ್ಟವಾಯಿತು:)
ನಿಮ್ಮ ಪುಸ್ತಕ ವಿಷಯತಿಳಿದು ಸಂತೋಷವಾಯ್ತು, ಬೇಗ ಬಿಡುಗಡೆಯಾಗಲಿ!!

ನಿಮ್ಮ ಲೇಖನದಲ್ಲಿ ಅಲೆಪಿಯ ಸೆಖೆಯ ಬಗ್ಗೆ ಓದುತ್ತಾ ನಾನಿಲ್ಲಿ ACಗೆ ಥ್ಯಾಂಕ್ಸ್ ಹೇಳಿದೆ!! ನಾವಿರುವ ಜಾಗದಲ್ಲೂ ತುಂಬಾ ಸೆಖೆ ಹಾಗು humid. ಜೂನ್-ಆಗಸ್ಟ್ ಬಹಳ ಕಷ್ಟ ಹೊರಗೆ ಹೋಗೋದು, ೩೮-೪೦C ಜೊತೆಗೆ 90%humid ಇರುತ್ತೆ. ಇಲ್ಲಿ ಎಲ್ಲೆಡೆ AC ಇರುವುದರಿಂದ ಬಚಾವ್ ನಾವು:)

ಮನಸಿನ ಮಾತುಗಳು said...

ಶಿವು ಸರ್,
ತುಂಬಾ ಚೆನ್ನಾಗಿದೆ ಈ ನಿಮ್ಮ ಲೇಖನ..
ನಿಮ್ಮ ಫೋಟೋಸ್ ನನಗೆ ತುಂಬಾ ಇಷ್ಟ ಆಗುತ್ತವೆ...
keep going....:):):)

Shweta said...

Photos tumba chennagide ...yaavaga baruttave sir nimma pustaka?

ಬಾಲು said...

ನಿಮ್ಮ ಬಿಸಿ ನೀರಿನ ಅನುಭವ ಮತ್ತೆ ಪಂಚೆ ಪುರಾಣ ತುಂಬಾ ಚೆನ್ನಾಗಿದೆ.
ನಿಮ್ಮ ಮುಂದಿನ ಬರಹ ಗಳಲ್ಲಿ ಭೂಪಟ ಗಳಿಗೂ ಜಾಗ ಇರಲಿ. :)
ಪುಸ್ತಕ ಹೊರ ಬರುತ್ತಾ ಇರುವುದು ಸಂತೋಷ ದ ವಿಚಾರ. ಆದಷ್ಟು ಬೇಗ ಹೊರ ಬರಲಿ.

ವಿನುತ said...

ಸಖತ್ ಫೋಟೊಗಳು ಹಾಗೂ ಲೇಖನ ಶಿವು. ಹಾಗೂ ಬ್ಲಾಗಿನ ಬರಹಗಳಲ್ಲದ ಪುಸ್ತಕಕ್ಕಾಗಿ ಅಭಿನ೦ದನೆಗಳು.

umesh desai said...

ಫೋಟೋ ಹಾಗು ಲೇಖನ ಎರಡು ಚೆನ್ನಾಗಿವೆ
ಕೇರಳದ ದರುಶನ ಮಾಡಿಸಿದ್ರಿ ಧನ್ಯವಾದಗಳು

shivu.k said...

ಪ್ರಭು,

ನೀರಿನಲ್ಲಿರುವ ಮಕ್ಕಳ ಫೋಟೋ ತೆಗೆಯಲು ಬಲು ಮಜವಿರುತ್ತೆ. ಮತ್ತೆ ನೀವು ಹೇಳಿದಂತೆ ಕಪ್ಪ ಬಣ್ಣದ ಬಟ್ಟೆಯ ಹುಡುಗಿಯರ ನನ್ನ ಕಡೆ ತಿರುಗಿ ತೋರಿಸುತ್ತಿರುವ ಫೋಟೋಗೆ ತುಂಬಾ ಹೊತ್ತು ಕಾದಿದ್ದೆ.

ಧನ್ಯವಾದಗಳು.

shivu.k said...

ಶ್ರವ್ಯ ಮೇಡಮ್,

ಬದುಕಿನ ನಿಜ ಚಿತ್ರಣಗಳಲ್ಲಿ ನನಗೆ ತುಂಬಾ ಆಸಕ್ತಿ...ಫೋಟೊಗಳನ್ನು ಮೆಚ್ಚಿದ್ದಕ್ಕೆ ಧನ್ಯವಾದಗಳು.

shivu.k said...

ಮಲ್ಲಿಕಾರ್ಜುನ್,

ಆ ಹೋಟೆಲ್ಲಿನ ಮಾಲಿಕ, ಅಲ್ಲಿಕ ಕೆಲಸಗಾರರು[ಅವರೆಲ್ಲಾ ಗೆಳೆಯರೆಂದು ಹೇಳಿಕೊಳ್ಳುತ್ತಾರೆ]ಎಲ್ಲಾ ವಿಚಿತ್ರವಾದ ಬಟ್ಟೆಗಳನ್ನು, ವಿಚಿತ್ರವಾದ ತಲೆಕೂದಲು ವಿನ್ಯಾಸಗಳನ್ನು ವಿದೇಶಿ ಪ್ರವಾಸಿಗರನ್ನು ಗಮನ ಸೆಳೆಯಲೆಂದೆ ಮಾಡಿಕೊಂಡಿದ್ದರು ಅನ್ನಿಸುತ್ತೆ. ನಾವು ಏನು ಕೇಳಿದರೂ "foreigners don't like that" ಅನ್ನುತ್ತಿದ್ದರಲ್ಲವೇ....

ಧನ್ಯವಾದಗಳು.

Unknown said...
This comment has been removed by the author.
b.saleem said...

ಶಿವು ಸರ್
ಕೇರಳ ಪ್ರವಾಸದ ಎರಡು ಲೇಖನಗಳು ಮತ್ತು
ಚಿತ್ರಗಳು ತುಂಬಾ ಚನ್ನಾಗಿವೆ.ನಿವು ಅಲ್ಲಿ ತೆಗೆದ
ಸ್ಪರ್ದೆಗೆ ಕಳುಹಿಸುವ ಚಿತ್ರಗಳನ್ನು ಹಾಕಿ.

Unknown said...

ಸು೦ದರ ಬರಹ ,ಸು೦ದರ ಫೋಟೋ ವಾವ್ !!! ವಾವ್ !!! ಶಿವು ಸಾರ್ ಬಾಲೆಯರ ಮುಗ್ದತೆ ಎಷ್ಟು ಸು೦ದರವಾಗಿ ಮೂಡಿದೆ ... ಪದಗಳೇ ಇಲ್ಲ ವಿವರಿಸಲು ... ಪುಸ್ತಕದ ಮಾಹಿತಿ ಬೇಗ ಬರಲಿ,
ಕುತೂಹಲದಿ೦ದ ಕಾಯುತ್ತಿದ್ದೇನೆ
ಧನ್ಯವಾದಗಳು

Unknown said...

ಶಿವು ಈ ವಾರದ ಆರಂಭವನ್ನು ನಿಮ್ಮ ಈ ಫೋಟೋಕಥನವನ್ನು ಓದುವುದರ ಮೂಲಕ ಆರಂಭಿಸಲು ಖುಷಿಯಾಗುತ್ತಿದೆ. ಫೋಟೋಗಳು ಒಂದಕ್ಕಿಂತ ಒಂದು ಕಣ್ಮನ ಸೆಳೆಯುತ್ತಿವೆ. ಮಾತು ಮರೆಸುತ್ತಿವೆ.

shivu.k said...

ಹರೀಶ್ ಸರ್,

ಕೇರಳದ ಫೋಟೋಗಳನ್ನು ಮೆಚ್ಚಿದ್ದಕ್ಕೆ ಧನ್ಯವಾದಗಳು. ಮತ್ತೆ ಅಲ್ಲಿ ಅವರ ಜೊತೆ ಇಂಗ್ಲೀಷಿನಲ್ಲಿ ಮಾತಾಡಿದ್ದನ್ನು ನಾನು ಕನ್ನಡ ಅನುವಾದ ಮಾಡಿದ್ದೇನೆ. ಪುಸ್ತಕದ ವಿಚಾರ ಶೀಘ್ರದಲ್ಲಿ ತಿಳಿಸುತ್ತೇನೆ.

shivu.k said...

ರೂಪಶ್ರೀ,

ಕೇರಳದ ನೀರ ಮಕ್ಕಳ ಫೋಟೋಗಳು ನನಗೂ ತುಂಬಾ ಇಷ್ಟವಾದವು. ನೀವು ಇಷ್ಟಪಟ್ಟ ಅವೆರಡು ಫೋಟೋಗಳು ಒಟ್ಟಾರೆ ಆ ಮಗುವಿನ ಸರಣಿಯ ೩೦ ಫೋಟೋಗಳಲ್ಲಿ ಮಧ್ಯದವು. ಆ ಮಗು ನೀರಿನಲ್ಲಿನ ಎಲ್ಲಾ ಚಟುವಟಿಕೆಗಳನ್ನು ಕ್ಲಿಕ್ಕಿಸಿದ್ದೇನೆ. ಮತ್ತೆ ನಿಮ್ಮೂರಿನ ಸೆಕೆಗೆ AC ಬೇಕೇ ಬೇಕಲ್ವ...ಅಲ್ಲಿನ ವಾತಾವರಣ ಸದ್ಯದ ಜನರ ಓಡಾಟದ ಪರಿಸ್ಥಿತಿ, ನಡುವಳಿಕೆ ಬಗ್ಗೆ ಬರೆಯಿರಿ...ಚೆನ್ನಾಗಿರುತ್ತೆ.

ಧನ್ಯವಾದಗಳು.

shivu.k said...

ದಿವ್ಯಾ ಹೆಗಡೆ ಮೇಡಮ್,

ಚಿತ್ರ ಲೇಖನವನ್ನು ಇಷ್ಟಪಟ್ಟಿದ್ದಕ್ಕೆ ಧನ್ಯವಾದಗಳು.
ಹೀಗೆ ಬರುತ್ತಿರಿ....

shivu.k said...

ಶ್ವೇತ ಮೇಡಮ್,

ಫೋಟೋಗಳನ್ನು ಇಷ್ಟಪಟ್ಟಿದ್ದಕ್ಕೆ ಧನ್ಯವಾದಗಳು. ಪುಸ್ತಕದ ವಿಚಾರ ಸದ್ಯದಲ್ಲೇ ತಿಳಿಸುತ್ತೇನೆ.

ಮತ್ತೆ ನಿಮ್ಮ ಬ್ಲಾಗ್ ವಿಳಾಸ ಸರಿಯೋಯ್ತಾ? ನಾನು ನಿಮ್ಮ ಬ್ಲಾಗ್ ಲಿಂಕ್ ಕ್ಲಿಕ್ಕಿಸಿದಾಗ್ಲೆಲ್ಲಾ ಬೇರೆಯವರ್ ಬ್ಲಾಗಿಗೆ ಹೋಗುತ್ತಿದೆ. ಬೇಗ ಏನಾದರೂ ವ್ಯವಸ್ಥೆ ಮಾಡಿಕೊಳ್ಳಿ.

shivu.k said...

ಬಾಲು ಸರ್,

ಲೇಖನ ಮತ್ತು ಚಿತ್ರಗಳನ್ನು ಮೆಚ್ಚಿದ್ದಕ್ಕೆ ಥ್ಯಾಂಕ್ಸ್...
ಪುಸ್ತಕದ ಕೆಲಸ ನಡೆಯುತ್ತಿದೆ. ಸಾಧ್ಯವಾದಷ್ಟು ಬೇಗ ತಿಳಿಸುತ್ತೇನೆ.

ಭೂಪಟಗಳ ಕೆಲಸವೂ ನಡೆಯುತ್ತಿದೆ. ಮುಂದಿನ ಲೇಖನಗಳಲ್ಲಿ ಹಾಕುತ್ತೇನೆ...

ಧನ್ಯವಾದಗಳು.

shivu.k said...

ವಿನುತಾ,

ಲೇಖನ ಮತ್ತು ಚಿತ್ರಗಳನ್ನು ಮೆಚ್ಚಿದ್ದಕ್ಕೆ ಧನ್ಯವಾದಗಳು. ಹೀಗೆ ಬರುತ್ತಿರಿ..

shivu.k said...

ಉಮೇಶ್ ದೇಸಾಯಿ ಸರ್,

ಕೇರಳದ ದರ್ಶನವನ್ನು ಇಷ್ಟಪಟ್ಟಿದ್ದೀರಿ. ಮುಂದಿನ ಸಂಚಿಕೆಗಳಲ್ಲಿ ಇನ್ನಷ್ಟು ಚಿತ್ರಗಳ ಜೊತೆ ಲೇಖನವೂ ಬರುತ್ತದೆ ಹೀಗೆ ಬರುತ್ತಿರಿ....

ಧನ್ಯವಾದಗಳು.

shivu.k said...

ಸಲೀಂ,

ನೀವು ಹೇಳಿದಂತೆ ಸ್ಪರ್ಧಾತ್ಮಕ ಚಿತ್ರಗಳನ್ನು ತಡವಾಗಿ ಹಾಕುತ್ತೇನೆ. ಅವುಗಳನ್ನು ನಮ್ಮ ಹಿರಿಯ ಛಾಯಾಗ್ರಾಹಕರಾದ ಬಿ.ಶ್ರೀನಿವಾಸ ಅವರ ಕೈಯಲ್ಲಿ process ಮಾಡಿಸಬೇಕಿದೆ.

ಚಿತ್ರಗಳನ್ನು ಮತ್ತು ಲೇಖನವನ್ನು ಮೆಚ್ಚಿದ್ದಕ್ಕೆ ಧನ್ಯವಾದಗಳು.

shivu.k said...

ರೂಪ ಮೇಡಮ್,

ಮುಗ್ಧ ಬಾಲೆಯರ ಫೋಟೋಗಳು ನನಗೂ ತುಂಬಾ ಇಷ್ಟ. ಲೇಖನದ ಜೊತೆಗೆ ಚಿತ್ರಗಳನ್ನು ಮೆಚ್ಚಿದ್ದಕ್ಕೆ ಧನ್ಯವಾದಗಳು.
ಪುಸ್ತಕದ ವಿಚಾರವನ್ನು ಶೀಘ್ರದಲ್ಲೇ ತಿಳಿಸುತ್ತೇನೆ.
ಹೀಗೆ ಬರುತ್ತಿರಿ...

shivu.k said...

ಡಾ.ಸತ್ಯನಾರಾಯಣ ಸರ್,

ಈ ವಾರದ ಮೊದಲ ದಿನವನ್ನು ನನ್ನ ಚಿತ್ರಲೇಖನವನ್ನು ನೋಡುವ ಮೂಲಕ ಪ್ರಾರಂಭಿಸಿದ್ದೀರಿ. ಅದರಿಂದ ನಿಮ್ಮ ಮನಸ್ಸಿಗೆ ಸಂತೋಷವಾಗಿದ್ದರೇ ಅದು ಈ ವಾರ ಪೂರ್ತಿ ಇರಲಿ ಎಂದು ಆಶಿಸುತ್ತೇನೆ..
ಧನ್ಯವಾದಗಳು.

ಕ್ಷಣ... ಚಿಂತನೆ... said...

ಶಿವು ಸರ್‍, ಬ್ಲಾಗಿಗೆ ತಡವಾಗಿ ಪ್ರತಿಕ್ರಿಯೆ ಬರೆಯುತ್ತಿದ್ದೇನೆ. ನಾನು ಊರಿನಲ್ಲಿರಲಿಲ್ಲ.

ಕೇರಳ ಪ್ರವಾಸದ ಎರಡನೇ ಕಂತಿನ ನೀರಿನ ಮಕ್ಕಳ ಫೋಟೋಗಳು ಮತ್ತು ಅವಕ್ಕೆ ಕೊಟ್ಟ ಕ್ಯಾಪ್ಶನ್‌ಗಳು ಚೆನ್ನಾಗಿವೆ. ಅವುಗಳೊಂದಿಗೆ ಅಲೆಗಳ ಎದುರು ಇರುವ ಪುಟ್ಟ ಮಗುವಿನದು ಹಾಗೂ ಕಪ್ಪುಡುಪಿನವರ ಫೋಟೋ ತೆಗೆಯಲು ಬಹಳ ತಾಳ್ಮೆಯಿಂದ ಕಾದಿದ್ದೀರಿ ಅಂತ ಅಂದುಕೊಂಡಿದ್ದೇನೆ. ಕೇರಳದ ಸುಂದರ ಸೊಬಗನ್ನು ಸೆರೆಹಿಡಿದು ನಮಗೆಲ್ಲಾ ಪ್ರವಾಸದ ಅನುಭವಗಳನ್ನು ಹಂಚಿಕೊಂಡಿರುವ ನಿಮಗೆ ಧನ್ಯವಾದಗಳು.

ಸ್ನೇಹದಿಂದ,

ಚಂದ್ರಶೇಖರ ಬಿ.ಎಚ್.

ಸವಿಗನಸು said...

ಶಿವು ಸರ್,
ನಿಮ್ಮ ಪುಸ್ತಕ ಬರುತ್ತಿರುವುದನ್ನು ಕೇಳಿ ಸಂತೋಷವಾಯಿತು. ಆದಷ್ಟು ಬೇಗ ಹೊರ ತನ್ನಿ....
ಕೇರಳದ ನೀರ ಮಕ್ಕಳ ಫೋಟೋಗಳು ಸಖತ್ತಾಗಿದೆ.
ನಿಮ್ಮ ಬಿಸಿನೀರಿನ ಅನುಭವ ಮತ್ತೆ ಪಂಚೆ ವಿಶ್ಲೇಷಣೆ ಚೆನ್ನಾಗಿ ಮೂಡಿ ಬಂದಿದೆ.
ನಿಮ್ಮ ಮುಂದಿನ ಬರಹದ ಭೂಪಟಕ್ಕೆ ಕಾಯುತ್ತಾ ಇದ್ದೀವಿ.....

VENU VINOD said...

ಶಿವು...ನಾನೂ ಎರಡು ವರ್ಷ ಮೊದಲು ಕೇರಳದ ಇಡುಕ್ಕಿ, ಆಲೆಪ್ಪಿ ಹೋಗಿದ್ದೆ...ನಿಜಕ್ಕೂ ಅಲ್ಲಿನ ವಿಶಾಲ ಹಿನ್ನೀರುಗಳಲ್ಲಿ ಬೋಟ್ ವಿಹಾರ ಆಹ್ಲಾದಕರ ಅನುಭವ, ನಿಮ್ಮ ಫೋಟೋ, ವಿವರಣೆ ಎರಡೂ ಖುಷಿಕೊಟ್ಟಿತು...

Keshav.Kulkarni said...

ಸೂಪರ್ ಶಿವೂ,
ಸೂಪರ್ ಫೋಟೋಗಳು. ಸಕ್ಕತ್ ಖುಷಿ.
- ಕೇಶವ

shivu.k said...

ಕ್ಷಣ ಚಿಂತನೆ ಸರ್,

ನೀವು ಬ್ಲಾಗಿಗೆ ತಡವಾಗಿ ಬಂದಿಲ್ಲ. ಏಕೆಂದರೇ ನಾನು ಚಿತ್ರ ಲೇಖನವನ್ನು ಪೋಸ್ಷ್ ಮಾಡಿ ಇನ್ನೂ ೨೪ ಗಂಟೆಯಾಗಿಲ್ಲ.

ಮತ್ತೆ ಪ್ರವಾಸದಲ್ಲಿ ನೀರಿನ ಮಕ್ಕಳ ಫೋಟೋ ನನಗೂ ಇಷ್ಟವಾಗಿವೆ. ಹಾಗೆ ಪುಟ್ಟ ಮಗುವಿನ ಎರಡು ಫೋಟೋ ತೆಗೆಯಲು ತುಂಬಾ ಸರ್ಕಸ್ ಮಾಡಿದ್ದೇನೆ. ಯಾವ ಕೋನಕ್ಕೆ ಹೋದರೂ ಅಲ್ಲಿ ಓಡಾಡುವ ಜನರು ಆಡ್ಡ ಬರುತ್ತಿದ್ದರು. ಎಲ್ಲಾ ಸರಿಹೋಗಿ ಇನ್ನೇನು ಕ್ಲಿಕ್ಕಿಸಬೇಕೆನ್ನುವಷ್ಟರಲ್ಲಿ ಮಗು ಕುಳಿತುಕೊಂಡುಬಿಡುತ್ತಿತ್ತು. ಮತ್ತೆ ಹೊಸದಾಗಿ ಪ್ರಯತ್ನ. ಹೀಗೆ ಸಾಗಿತ್ತು ಸರ್ಕಸ್. ಹಾಗೆ ಕಪ್ಪು ಬಟ್ಟೆಯ ಹುಡುಗಿಯರು ಅಚಾನಕ್ಕಾಗಿ ಕಣ್ಣಿಗೆ ಬಿದ್ದು ತಕ್ಷಣ ಹಿಂದೆ ಬಿದ್ದು ಕ್ಲಿಕ್ಕಿಸಿದ್ದೆ.

ಮಕ್ಕಳ ಫೋಟೋಗಳಲ್ಲಿ ಅವರ ಭಾವನೆಗಳನ್ನು ನನ್ನದೆಂದುಕೊಂಡು enjoy ಮಾಡುತ್ತಾ ಅದನ್ನು ಆಡುಮಾತಿನಲ್ಲಿ ಅವರೇ ಮಾತಾಡುವಂತೆ ಬರೆಯುವುದು ನನಗೆ ತುಂಬಾ ಇಷ್ಟದ ವಿಚಾರ...

ಧನ್ಯವಾದಗಳು.

ರಾಜೀವ said...

ಶಿವು ಸರ್,

ಚಿತ್ರಗಳು ಎಂದಿನಂತೆ ಚೆನ್ನಾಗಿದೆ. ಚಿತ್ರದಲ್ಲಿ ಇರುವವರ ಭಾವನೆಯನ್ನೂ ಸೊಗಸಾಗಿ ಸೆರೆ ಹಿಡಿದಿದ್ದೀರ. ಸಮುದ್ರ ತೀರದ ಚಿತ್ರಗಳನ್ನು ನೋಡುತ್ತಿದ್ದರೆ, ನಾನೂ ಯಾಕೆ ಕರಾವಳಿಯಲ್ಲೇ ಹುಟ್ಟಿ ಬೆಳೆದಿರಬಾರದಿತ್ತು ಎಂದೆನಿಸುತ್ತಿದೆ.

shivu.k said...

ಮಹೇಶ್ ಸರ್,

ಇದೇನ್ ಸರ್ ಹೆಸರು ಮತ್ತು ಚಿಹ್ನೆ ಬದಲಾಯಿಸಿದ್ದೀರಿ..ಚೆನ್ನಾಗಿದೆ ಬಿಡಿ.
ಬಿಸಿನೀರಿನ ಅನುಭವ ಮತ್ತು ಪಂಚೆ ವಿಚಾರಗಳು ಮತ್ತೆ ನೀರಿನ ಮಕ್ಕಳ ಮೆಚ್ಚಿದ್ದಕ್ಕೆ ಧನ್ಯವಾದಗಳು.

ಮುಂದಿನ ಸಂಚಿಕೆಗಳಲ್ಲಿ ಭೂಪಟಗಳನ್ನು ಖಂಡಿತ ಕೊಡುತ್ತೇನೆ...ಹೀಗೆ ಬರುತ್ತಿರಿ..

shivu.k said...

ವೇಣು ವಿನೋದ್,

ಫೋಟೋಗಳು ಮತ್ತು ಲೇಖನವನ್ನು ಮೆಚ್ಚಿದ್ದಕ್ಕೆ ಧನ್ಯವಾದಗಳು. ಮತ್ತೆ ನಿಮ್ಮ ಕೇರಳ ಅನುಭವ ಮತ್ತು ಚಿತ್ರಗಳನ್ನು ಬ್ಲಾಗಿನಲ್ಲಿ ಹಾಕಿ....

shivu.k said...

ಕುಲಕರ್ಣಿ ಸರ್,

ಥ್ಯಾಂಕ್ಸ್...ನಿಮ್ಮ ಪ್ರೋತ್ಸಾಹ ಹೀಗೆ ಇರಲಿ...

shivu.k said...

ರಾಜೀವ್ ಸರ್,

ಫೋಟೋಗಳು ಮತ್ತು ಅವುಗಳಲ್ಲಿರುವ ಭಾವನೆಗಳನ್ನು ಮೆಚ್ಚಿದ್ದಕ್ಕೆ ಥ್ಯಾಂಕ್ಸ್. ಮತ್ತೆ ನೀವು ಕರಾವಳಿಯಲ್ಲಿ ಹುಟ್ಟಲಿಲ್ಲವೆಂದು ಬೇಸರಿಸಬೇಡಿ. ಅಲ್ಲಿನ ನನ್ನ ಗೆಳೆಯರು ಹೇಳುತ್ತಾರೆ: ಅಯ್ಯೋ ಮರಾಯಾ ಇಲ್ಲಿ ಆರುತಿಂಗಳು ಸೆಕೆ ಆರುತಿಂಗಳು ಮಳೆ, ನಿಮ್ಮ ಬೆಂಗಳೂರು, ಮೈಸೂರು ಎಷ್ಟು ಚೆಂದ, ನಾನು ಅಲ್ಲೇ ಹುಟ್ಟಬೇಕಿತ್ತು ಅನ್ನುತ್ತಾರೆ ಇದಕ್ಕೇನಂತೀರಿ..

ಧನ್ಯವಾದಗಳು.

Prashanth Arasikere said...

Hi shivu,

Navu kerla side hogbeku annustha ide hagu nimge ada bisiniru anubava chennagide mattu samudra hatra tegdiro magu photo tumba chennagide..mundina baraha hagu photot galige kayutta iddene!!

Unknown said...

ಚಿತ್ರ ಹಾಗೂ ನಿಮ್ಮ ಸ್ಲೋಗನ್ಸ್ ಎರೆದು ಚೆನ್ನಾಗಿವೆ ಸರ್

ಇಂತಿ
ವಿನಯ

ವನಿತಾ / Vanitha said...

ಶಿವು,
ಕಪ್ಪು ಡ್ರೆಸ್ ನ ಹುಡುಗಿಯರ ಫೋಟೋ ಮತ್ತು captions ಸಕತ್ತಾಗಿದೆ...ಹ್ಹ ಹ್ಹ..ನೀವು ಉಳ್ಕೊಂಡ ರೆಸಾರ್ಟ್ ನಲ್ಲಿ ಎಲ್ಲ ಬರೀ Foreignersಗೋಸ್ಕರನೇ ಮಾಡ್ತಿದ್ದ ಹಂಗೆ ಇದ್ಯಲ್ಲ..ಮತ್ತೆ ಬೆವರುದು ಕೂಡ ದೇಹಕ್ಕೆ ಒಳ್ಳೆಯದು..ಅದಕ್ಕಾಗಿ ನೀವು ಬೆಂಗಳೂರಿನಿಂದ ಕೇರಳವರೆಗೆ ಹೋಗ್ಬೇಕಾಯ್ತ್ಹಲ್ಲ!!!!!ಕೇರಳದಲ್ಲಿ ನಿಮಗೆ ಊಟ ಮಾಡೋಕ್ಕೆ ಆಯ್ತಾ..?? ನಮ್ ಫ್ರೆಂಡ್ಸ್ boiled rice ಎಲ್ಲ ಅಂದಾಕ್ಷಣ ಇಷ್ಟು ದಪ್ಪಗೆ ಇರತ್ತಲ್ಲ!!!ಹೇಗೆ ತಿಂತೀರಿ ಅಂತ ಕೇಳ್ತಾರೆ.. ಮತ್ತೆ ನಿಮ್ಮ ಬುಕ್ ಬೇಗ ಬರಲಿ.. ನಂಗೆ ಒಂದು ಕಾಪಿ ತೆಗ್ದಿಡಿ..goodluck..

ಸಾಗರದಾಚೆಯ ಇಂಚರ said...

ಶಿವೂ ಸರ್,
ತುಂಬಾ ಒಳ್ಳೆಯ ಲೇಖನ, ಸುಂದರ ಫೋಟೋಗಳು
ಮತ್ತೆ ನಿಮ್ಮ ಹೊಸ ಪುಸ್ತಕಕ್ಕೆ ಶುಭ ಹಾರೈಕೆ.

shivu.k said...

ಪ್ರಶಾಂತ್,

ನೀವು ಕುಟುಂಬ ಸಮೇತರಾಗಿ ಕೇರಳಾಗೆ ಹೋಗಿಬನ್ನಿ. ಆಧಿತಿ ಸಮುದ್ರವನ್ನು ಇಷ್ಟಪಡಬಹುದು. ಮುಂದೆ ಇನ್ನಷ್ಟು ಲೇಖನಗಳನ್ನು ಹಾಕುತ್ತೇನೆ.

ಚಿತ್ರಗಳು ಮತ್ತು ಲೇಖನವನ್ನು ಮೆಚ್ಚಿದ್ದಕ್ಕೆ ಧನ್ಯವಾದಗಳು

shivu.k said...

ವಿನಯ್,

ನನ್ನ ಬ್ಲಾಗಿಗೆ ಸ್ವಾಗತ. ಚಿತ್ರಗಳು ಮತ್ತು ಲೇಖನಗಳನ್ನು ಇಷ್ಟಪಟ್ಟಿದ್ದಕ್ಕೆ ಥ್ಯಾಂಕ್ಸ್...

shivu.k said...

ವನಿತಾ,

ನಿಜವನ್ನು ಹೇಳುತ್ತೇನೆ. ಕೇರಳದಲ್ಲಿ ನಮಗೆ ಊಟ ಸೆಟ್ ಆಗಲಿಲ್ಲ. ಮದ್ಯಾಹ್ನ ನಾವು ಬಾಳೆಹಣ್ಣು ತಿಂದು ಸುಮ್ಮನಾಗುತ್ತಿದ್ದೆವು. ಅಲ್ಲಿ ಇಷ್ಟವಾದದ್ದು ಇಂಡಿಯನ್ ಕಾಫಿ ಹೌಸ್‍ನಲ್ಲಿ ಕಟ್ಲೆಟ್ ಮಾತ್ರ.

ಕಪ್ಪು ಬಟ್ಟೆಯ ಹುಡುಗಿ ನಾನು ಅವಳ ಕಡೆ ಹಿಡಿದಿದ್ದು ನೋಡಿ ನನ್ನತ್ತ ತಿರುಗಿ ಏನೋ ಹೇಳುತ್ತಿದ್ದಳು. ನಾನಂತೂ ಕ್ಲಿಕ್ಕಿಸುತ್ತಿದ್ದೆ. ಬೆವರು ಹರಿಯ ಬೇಕೆಂದರೆ ಕೇರಳಗೆ ಅಥವ ನಮ್ಮ ಉಡುಪಿ, ಮಂಗಳೂರಿಗೆ ಹೋಗಬೇಕು.
ಅಲ್ಲಿನ ಎಲ್ಲಾ ಹೋಟಲ್, ರಿಸಾರ್ಟ್‍ನವರು ವಿದೇಶಿಯರನ್ನು ದೃಷ್ಟಿಯಲ್ಲಿಟ್ಟುಕೊಂಡೆ ಎಲ್ಲಾ ಮಾಡುತ್ತಾರೆ. ಅವರಿಂದ ಹೆಚ್ಚು ಹಣ ವಸೂಲಿ ಮಾಡಬಹುದಲ್ವಾ...

ಧನ್ಯವಾದಗಳು.

shivu.k said...

ಗುರುಮೂರ್ತಿ ಸರ್,

ಚಿತ್ರ ಲೇಖನವನ್ನು ಮೆಚ್ಚಿದ್ದಕ್ಕೆ ಧನ್ಯವಾದಗಳು.

ಗಿರಿ said...

wow... photos n the captions are really superb... it shows ur perfection..

dhanyavadagaLu,
-Giri

sunaath said...

ಶಿವು,
ನಿಮ್ಮ ಕೇರಳದ ಫೋಟೋಗಳನ್ನು ನೋಡಿ ಹಾಗೂ ವಿವರಣೆ ಓದಿ, ಭಾರತದ ವಿವಿಧ ಮುಖಗಳನ್ನು ನೋಡುತ್ತಿರುವ ಅನುಭವವಾಯಿತು. ತುಂಬಾ ಸುಂದರವಾದ ಅನುಭವ. ಈ ಸಲದ ಚಿತ್ರಗಳಲ್ಲಿ ನೀರಿನಿಂದ ನೆನೆದ ಪುಟ್ಟ ಹುಡುಗಿಯ ಚಿತ್ರಗಳಂತೂ wonderful ಆಗಿವೆ.
ನಿಮಗೆ ಧನ್ಯವಾದಗಳು.

Umesh Balikai said...

ಶಿವು ಸರ್,

ಇಲ್ಲೇ ಧರ್ಮಸ್ಥಳಕ್ಕೆ ಹೋದರೂ ನಮಗೆ ಅದೇ ತರದ ಸೆಖೆ ಅಲ್ವಾ.. ಅಲ್ಲೂ ಬಿಸಿನೀರಿನ ಸ್ನಾನ ಮಾಡಬೇಕು ಅನ್ಸೊದೆ ಇಲ್ಲ. ಅಲೆಪ್ಪಿಯಲ್ಲಿ ಅಷ್ಟು ಸೆಖೆ ಅಂತಾನೆ ಅಲ್ಲಿನ ಜನ ಯಾವಾಗ್ಲೂ ಬಾರಿ ಪಂಚೆ ಸುತ್ತಿಕೊಂಡಿರ್ತಾರೆ ಅನ್ಸುತ್ತೆ.
ನೀರ ಮೇಲಿನ ಮಕ್ಕಳ, ನೀರ ಜೊತೆ ಗೆಳೆತನದ ಮಕ್ಕಳ, ಮತ್ತು ನೀರಿಗಂಟಿಕೊಂಡ ಮಕ್ಕಳ ಚಿತ್ರಗಳು ತುಂಬಾನೆ ಚೆನ್ನಾಗಿವೆ. ಶೀರ್ಷಿಕೆಗಳಂತೂ ಸಿಂಪ್ಲೀ ಸುಪರ್ಬ್!ಇನ್ನಷ್ಟು ಫೋಟೋಗಳಿಗಾಗಿ ಕಾಯ್ತಾ ಇದೀವಿ. ನಿಮ್ಮ ಪುಸ್ತಕಕ್ಕಂತೂ ತುಂಬಾ ದಿನದಿಂದ ಕಾಯ್ತಿದೀವಿ. ಶುಭಸ್ತ್ಯ ಶೀಘ್ರ ಮಸ್ತು ಆದಷ್ಟು ಬೇಗ ಬರಲಿ..

ಪ್ರೀತಿಯಿಂದ
- ಉಮೇಶ್

shivu.k said...

ಗಿರಿ,

ಫೋಟೊಗಳು ಮತ್ತು ಲೇಖನವನ್ನು ಮೆಚ್ಚಿದ್ದಕ್ಕೆ ಥ್ಯಾಂಕ್ಸ್...

shivu.k said...

ಸುನಾಥ್ ಸರ್,

ಭಾರತದ ವಿವಿಧ ಮುಖಗಳನ್ನು ನನಗೂ ಕ್ಯಾಮೆರಾದಲ್ಲಿ ಸೆರೆಹಿಡಿಯುವ ಆಸೆಯಿದೆ. ಮತ್ತೆ ನೀವು ಮೆಚ್ಚಿದ ಮಗುವಿನ ಫೋಟೋದ ಒಂದು ಸರಣಿಯೇ ಇದೆ.

ಪುಟ್ಟ ಲೇಖನ ಮತ್ತು ಚಿತ್ರಗಳನ್ನು ಮೆಚ್ಚಿದ್ದಕ್ಕೆ ಧನ್ಯವಾದಗಳು.

shivu.k said...

ಉಮೇಶ್ ಸರ್,

ನೀವು ಹೇಳಿದಂತೆ ದರ್ಮಸ್ಥಳ, ಉಡುಪಿ, ಹೀಗೆ ನಮ್ಮ ಕರಾವಳಿಯ ಯಾವ ಕಡೆಗೆ ಹೋದರೂ ಅಷ್ಟೇ ಸೆಕೆಯಾಗುತ್ತದೆ.ಹಾಗೆ ಮಳೆಯೂ ಬರುತ್ತದೆ. ಅಲ್ಲಿಯೂ ಯಾರಿಗೂ ಬಿಸಿನೀರು ಬೇಕೆನಿಸುವುದಿಲ್ಲ. ಮೂರು ವಿಧದ ಮಕ್ಕಳ ಚಿತ್ರಗಳನ್ನು ಮೆಚ್ಚಿದ್ದಕ್ಕೆ ಧನ್ಯವಾದಗಳು.
ನೀವು ಹೀಗೆ ನನ್ನ ಚಿತ್ರಗಳನ್ನು ನೋಡಿ ಪ್ರೋತ್ಸಾಹಿಸುತ್ತಿದ್ದರೆ ನಾನು ಖಂಡಿತ ಮತ್ತಷ್ಟು ಚಿತ್ರಗಳನ್ನು ಹಾಕುತ್ತೇನೆ..

ಧನ್ಯವಾದಗಳು.

Shweta said...

ಇಲ್ಲ ಶಿವು ಸರ್ .........ಬ್ಲೋಗಿನ ಹೆಸರನ್ನು ಬದಲಾಯಿಸಿ ನೋಡಿದ್ದೆ. ಸರಿ ಹೋಗುತ್ತಿಲ್ಲ. ಏನು ಮಾಡುವದೂ ತೋಚುತ್ತಿಲ್ಲ .
ಹೊಸದೊಂದು ಲೇಖನ ಹಾಕಿದ್ದೆ ....ಭೇಟಿ ಕೊಡಿ .ಥ್ಯಾಂಕ್ಸ್ ....-.ಶ್ವೇತ .

PARAANJAPE K.N. said...

ಶಿವೂ,
ನಿಮ್ಮ ಫೋಟೋ ನೋಡಿ, ಕೇರಳಕ್ಕೆ ಹೋಗಿ ಬರುವ ಆಸೆ ಉತ್ಕತವಾಗಿದೆ. ಹಿಂದೆ ಹೋಗಿದ್ದೆ, ಆದರೆ ಮತ್ತೆ ಹೋಗಬೇಕೆನಿಸಿದೆ. ಭಾರತದಲ್ಲಿ ಅತ್ಯ೦ತ ಕ್ಲೀನ್ ಮನುಷ್ಯರು ಯಾರು ಅಂತ ಒಬ್ಬರು interview ನಲ್ಲಿ ಪ್ರಶ್ನೆ ಕೇಳಿದರಂತೆ, ಹುಡುಗ ಕೇರಳದವರು ಅಂತ ಉತ್ತರ ಕೊಟ್ಟಿದ್ನಂತೆ, ಯಾಕೆ ಅ೦ತ ಕೇಳಿದರೆ, ಕೇರಳದವರು ದಿನಕ್ಕೆ ಮೂರೂ ಸಲ ಸ್ನಾನ ಮಾಡ್ತಾರೆ ಅಂದನಂತೆ. ನಿಮ್ಮ ಬ್ಲಾಗಿನ ಅತ್ಯಾಕರ್ಷಕ ಫೋಟೋ ನೋಡಿ ಖುಷಿಯಾಯ್ತು. ಇನ್ನಷ್ಟು ಸರಕು ಹೊರಬರಲಿ.

ಧರಿತ್ರಿ said...

ಶಿವಣ್ಣ ತುಂಬಾ ದಿನಗಳ ನಂತರ ನಿಮ್ಮ ಬ್ಲಾಗ್ ಕಡೆ ಕಣ್ಣುಹಾಯಿಸಿದ್ದೇನೆ. ಕೇರಳ ಟೂರ್ ಸಕತ್ ಬಿಡಿ..ನಾನಿನ್ನೂ ಕೇರಳ ನೋಡಿಲ್ಲ..ಆದ್ರೂ ಪ್ರಕೃತಿ ಸೌಂದರ್ಯ ಅನುಭವಿಸಲು ಕೇರಳ ಒಳ್ಳೆ ತಾಣ ಅಂತಾರೆ. ನಿಮ್ಮ ಲೇಖನದ ಜೊತೆಗೆ ಆ ಫೋಟೋಗಳು ಎಂದಿನಂತೆ ಮುದ ನೀಡಿದವು. ನಿಮ್ಮ ಪುಸ್ತಕದ ನಿರೀಕ್ಚೆಯಲ್ಲಿದ್ದೇನೆ. ನನ್ನ ಪ್ರೀತಿಯ ಹಾರೈಕೆಗಳು.
-ಧರಿತ್ರಿ

ಭಾರ್ಗವಿ said...

ಅಲಿಪ್ಪಿ ಬಗ್ಗೆ ಫೋಟೋ ಸಮೇತ ಲೇಖನ ತುಂಬಾ ಚೆನ್ನಾಗಿದೆ.
ರಸ್ತೆ ಪಕ್ಕದಲ್ಲಿ ಹೂವಿನ ಗಿಡ ಅಥವಾ ಮರಗಳನ್ನ ಬೆಳೆಸಿದ್ದು ನೋಡಿದ್ದು ಬಿಟ್ಟರೆ ಭತ್ತ ನೋಡಿದ್ದು ಇದೆ ಮೊದಲು:-).ಮಳೆ ಹನಿ ಫೋಟೋ ಸಹ ತುಂಬಾ ಇಷ್ಟವಾದವು.

ಜಲನಯನ said...

ಶಿವು...ನಿಮ್ಮ ಕೇರಳದ ಪ್ರವಾಸ ಬಹಳ ಮುದವಾಗಿ ಮಜವಾಗಿತ್ತು ಅನ್ನೋದಕ್ಕೆ ನಿಮ್ಮ ಚಿತ್ರಗಳು ನೋಟಕೊಟ್ಟರೆ ನಿಮ್ಮ ವಿವರಣೆ ಆನಂದದಿಂದ ಅವನ್ನು ಸವಿಯುವಂತೆ ಮಾಡಿವೆ...
ಆದ್ರೆ ನನಗೆ ನಿರಾಸೆಯಾದದ್ದು ನಾನು ೧೦-೧೪ ರ ವರೆಗೆ ಬೆಂಗಳೂರಲ್ಲಿದ್ದು ನಿಮ್ಮ ಮೊಬೈಲ್ ಗೆ ರಿಂಗಿಸಿ ಮೊಬೈಲ್ ಸುಂದರಿ ಮಂಗಳಾರತಿ ಮಾಡಿದ್ದು...ಮೂರು ಸರ್ತಿ ಪ್ರಯತ್ನಿಸಿ ಕೈಬಿಟ್ಟೆ..ನಿಮಗೆ ಮೈಲ್ ಸಹಾ ಮಾಡಿದೆ...ಮುಮ್ದಿನ ಬಾರಿಯಾದರೂ ಭೇಟಿಯ ನಿರೀಕ್ಷೆ...ಇಡಲೇ...???

ಚಿತ್ರಾ said...

ಶಿವೂ,
ಕೆಲ ಕಾರಣಗಳಿಂದ ಬ್ಲಾಗ್ ಗಳಿಗೆ ಎಂದಿನಂತೆ ಭೇಟಿ ಕೊಡಲಾಗುತ್ತಿಲ್ಲ . ಕ್ಷಮಿಸಿ. ನಿಮ್ಮ ಕೇರಳದ ಕಥೆಗಳು .. ಚೆನ್ನಾಗಿ ಬರುತ್ತಿವೆ ! ಫೋಟೋಗಳಂತೂ ಸೂಪರ್ !
ಅಂತೂ ಕೇರಳಕ್ಕೆ ಹೋದಾಗ ಬಿಸಿ ನೀರು ಕೇಳಬಾರದು ಎನ್ನುವುದನ್ನ ತಿಳಿಸಿದ್ದಕ್ಕೆ ಧನ್ಯವಾದಗಳು !

shivu.k said...

ಶ್ವೇತ ಮೇಡಮ್,

ನಿಮ್ಮ ಪ್ರತಿ ಹೊಸ ಲೇಖನಕ್ಕಾಗಿ ನನಗೆ ಮೇಲ್ ಮಾಡಿಬಿಡಿ.

ಮತ್ತೆ ಬ್ಲಾಗಿಗೆ ಬಂದಿದ್ದಕ್ಕೆ ಥ್ಯಾಂಕ್ಸ್...ನಿಮ್ಮ ಬ್ಲಾಗಿಗೆ ಬೇಟಿಕೊಡುತ್ತೇನೆ...

shivu.k said...

ಪರಂಜಪೆ ಸರ್,

ಬ್ಲಾಗಿನ ಚಿತ್ರಗಳು ಮತ್ತು ಲೇಖನವನ್ನು ನೋಡಿ ನಿಮಗೂ ಕೇರಳ ಪ್ರವಾಸ ಹೋಗುವ ಆಸೆಯಾಗಿದೆಯೆಂದರೆ ನನ್ನ ಶ್ರಮ ಸಾರ್ಥಕ. ಮತ್ತೆ ಕೇರಳದ ಜನ ಕ್ಲೀನ್ ಆಗಿದ್ದರೆಂದು ನೀವು ತಿಳಿದಿದ್ದರೆ ಅದು ತಪ್ಪು ಎಂದು ನನ್ನ ಭಾವನೆ. ನೀವೊಮ್ಮೆ ಹೋಗಿಬನ್ನಿ ನಂತರ ನಿಮ್ಮ ಅಭಿಪ್ರಾಯ ತಿಳಿಸಿ.
ಚಿತ್ರಗಳು ಮತ್ತು ಲೇಖನವನ್ನು ಮೆಚ್ಚಿದ್ದಕ್ಕೆ ಧನ್ಯವಾದಗಳು.

shivu.k said...

ಧರಿತ್ರಿ,

ಚಿತ್ರಗಳು ಮತ್ತು ಲೇಖನವನ್ನು ಮೆಚ್ಚಿದ್ದಕ್ಕೆ ಥ್ಯಾಂಕ್ಸ್..ಕೇರಳ ಪ್ರವಾಸ ಚೆನ್ನಾಗಿರುತ್ತದೆ ಬಿಸಿಲೊಂದನ್ನು ಬಿಟ್ಟು. ಮತ್ತೆ ನಿನ್ನ ಊರು ಸುತ್ತಾಟ ಮುಗಿಯತೆಂದುಕೊಂಡಿದ್ದೇನೆ. ಊರಿನ ಸಮಾಚಾರವನ್ನೊಂದಿಷ್ಟು ಹೊಸದಾಗಿ ಬರೆದರೆ ಓದುವ ಮನಸ್ಸಾಗುತ್ತದೆ. ಪುಸ್ತಕ ಸಿದ್ದತೆಯಲ್ಲಿದೆ.

ಧನ್ಯವಾದಗಳು.

shivu.k said...

ಭಾರ್ಗವಿ ಮೇಡಮ್,

ತುಂಬಾ ದಿನಗಳ ನಂತರ ಬಿಡುವು ಮಾಡಿಕೊಂಡು ಬಂದಿದ್ದೀರಿ. ಅಲೆಪ್ಪಿ ಚಿತ್ರಗಳು ಮತ್ತು ಲೇಖನವನ್ನು ಮೆಚ್ಚಿದ್ದೀರಿ. ನನಗೂ ನಿಮ್ಮಂತೆ ಕುತೂಹಲ ಉಂಟಾಗಿದ್ದು ರಸ್ತೆ ಬದಿಯಲ್ಲಿ ಬತ್ತದ ಪೈರು ಬೆಳೆದಿದ್ದು.
ಹೀಗೆ ಬರುತ್ತಿರಿ...ಧನ್ಯವಾದಗಳು.

shivu.k said...

ಜಲನಯನ ಸರ್,

ನಾನು ಕೇರಳ ಪ್ರವಾಸ ಮುಗಿಸಿ ವಾಪಸ್ ಆಗಸ್ಟ್ ೧೦ಕ್ಕೆ ಬಂದಿದ್ದೆ. ನೀವು ನಿಮ್ಮ ಮೊಬೈಲಿನಿಂದ ಮೊದಲು "೦" ಹಾಕಿ ನಂತರ ನನ್ನ ನಂಬರ್ ಡಯಲ್ ಮಾಡಿದ್ದರೆ ಸಿಕ್ಕಿಬಿಡುತ್ತಿತ್ತೆನೋ...ಏಕೆಂದರೆ ನಿಮ್ಮದು ವಿದೇಶಿ ಸಿಮ್ ಇದ್ದಿರಬಹುದು. ಇದು ನನ್ನ ಊಹೆ ಆಷ್ಟೆ.

ಮತ್ತೆ ನನಗೆ ಲಿಬಿಯದಿಂದ ಬಂದ ಉದಯ ಸರ್ ಫೋನ್ ಮಾಡಿ ಮಾತಾಡಿದ್ದಾರೆ. ನಿಮಗೆ ಹೇಗೆ ಸಿಗದಿರಲು ಸಾಧ್ಯ.
ಮತ್ತೆ ಅಲ್ಲಿಂದ ಬಂದ ತಕ್ಷಣ ಕೆಲವು ಕೆಲಸಗಳಲ್ಲಿ ಬ್ಯುಸಿಯಾಗಿಬಿಟ್ಟೆನಾದ್ದರಿಂದ ನಿಮ್ಮ ಮೇಲ್ ಗಮನಸಿಲಾಗಲಿಲ್ಲ. ಕ್ಷಮಿಸಿ..
ಹೋಗಲಿ ಬಿಡಿ. ಮತ್ತೊಮ್ಮೆ ಬಂದಾಗ ಖಂಡಿತ ಬೇಟಿಯಾಗೋಣ.


ಕೇರಳದ ಚಿತ್ರ-ಲೇಖನವನ್ನು ಮೆಚ್ಚಿದ್ದಕ್ಕೆ ಥ್ಯಾಂಕ್ಸ್...

shivu.k said...

ಚಿತ್ರಾ ಮೇಡಮ್,

ನಿಮ್ಮ ಕಡೆ ಹಂದಿಜ್ವರದ ಪ್ರಕರಣಗಳು ಹೆಚ್ಚು ಅಂತ ಪತ್ರಿಕೆಗಳಲ್ಲಿ ಓದಿದ್ದೇನೆ. ಬ್ಲಾಗಿನ ವಿಚಾರಗಳನ್ನು ಆಮೇಲೆ ನೋಡಿಕೊಳ್ಳೋಣ. ಮೊದಲು ಆ ರೋಗದಿಂದ ದೂರವಿರಿ. ಅದಕ್ಕೆ ಬೇಕಾದ ಎಲ್ಲಾ ಮುಂಜಾಗ್ರತೆಗಳನ್ನು ತೆಗೆದುಕೊಳ್ಳಿ. ನಿಮ್ಮ ಕುಟುಂಬದ ಆರೋಗ್ಯ ಚೆನ್ನಾಗಿದೆಯೆಂದು ಅಂದುಕೊಳ್ಳುತ್ತೇನೆ.

ಇಂಥ ಪರಿಸ್ಥಿತಿಯಲ್ಲೂ ಬ್ಲಾಗಿಗೆ ಬೇಟಿಕೊಟ್ಟು ಕೇರಳ ಲೇಖನಗಳನ್ನು ಮೆಚ್ಚಿದ್ದಕ್ಕೆ ಥ್ಯಾಂಕ್ಸ್...

Ittigecement said...

ಶಿವು ಸರ್....

ಕಳೆದ ಒಂದುವಾರದಿಂದ ವೈರಲ್ ಜ್ವರ....
ಇದೀಗ ತಾನೆ ಎದ್ದು ನಿಮ್ಮ ಬ್ಲಾಗ್ ನೋಡುತ್ತಿರುವೆ.....

ಅಲೆಪ್ಪಿಯ ಮೋಹಕ ದೃಶ್ಯಗಳು...
ಸೊಗಸಾದ ವಿವರಣೆಗಳು....

ಒಂದಕ್ಕಿಂತ ಒಂದು ಚಂದ....

ಅಭಿನಂದನೆಗಳು.....

PaLa said...

ಚೆಂದದ ಬರಹ

shivu.k said...

ಪ್ರಕಾಶ್ ಸರ್,

ವೈರಲ್ ಜ್ವರದಿಂದ ಬೇಗ ಹುಶಾರಾಗಿ ಹೊರಬನ್ನಿ. ಅಲೆಪ್ಪಿಯ ಚಿತ್ರಲೇಖನವನ್ನು ಮೆಚ್ಚಿದ್ದಕ್ಕೆ ಥ್ಯಾಂಕ್ಸ್...

shivu.k said...

ಪಾಲಚಂದ್ರ,

ಥ್ಯಾಂಕ್ಸ್...

Ranjita said...

ತುಂಬಾ ಚಂದದ ಚಿತ್ರಗಳು ಸರ್ ... ಆ 22 ನೆ ಫೋಟ ಅಂತು ಹಾಗೆ ಕಣ್ಣಿನಲ್ಲಿ ತುಂಬಿಕೊಂಡಿದೆ ... ನಿಮ್ಮ ಫೋಟೋ ಗಳನ್ನ ನೋಡಿದ್ರೆ ನನಗೂ ಹೀಗೆ ಚಂದದ ಚಿತ್ರಗಳನ್ನ ತಗೆಯೋಣ ಅನ್ಸುತ್ತೆ (ಆದ್ರೆ ಬರಲ್ಲ ಅದು ಬೇರೆ) ... ಅಸ್ಟೊಂದು ಸ್ಪೂರ್ತಿದಾಯಕವಾಗಿವೆ ....

ದಿನಕರ ಮೊಗೇರ said...

ಎಲ್ಲ ಫೋಟೋಗಳೂ ಸೂಪರ್ ಬಾಸ್..... ರಿಯಲಿ ನೈಸ್ ..... ಮುದ್ದು ಮುದ್ದು ಫೋಟೋಗಳು .....

Tool Kiếm BTC Đơn Giản said...

ಸುಂದರವಾದ, ಸುಂದರವಾದದ್ದು!