" ಮೊಬೈಲಿನ ಮೇಲೆ ಅದರ ಮಾಡೆಲ್ ನಂಬರ್ ಯಾಕಿರೊಲ್ಲ.."
" ನಿನ್ ತಲೆ ನಿನ್ನ್ ಮುಖದ ಮೇಲೆ ನೀನು ಸುಬ್ಬ ಅಂತ ಹೆಸರಿದೆಯ...? ಇಲ್ಲವಲ್ಲ...ಹಾಗೇ ಅದರ ಮೇಲು ಇರಲ್ಲ..."
" ಆದ್ರೆ ಇದೇ ಮಾಡಲ್ ನಂಬರಿನ ಮೊಬೈಲ್ ಇವರತ್ರ ಇದೆ. ಹಾಗೇ ನಿಮ್ಮ ಅಪ್ಪನತ್ರನೂ ಇದೆ. ಇವೆರಡರು ನೋಡಲಿಕ್ಕೆ ಒಂದೇ ತರಹ ಇದೆ. ಅದ್ರೂ ಅದು ನಿಮ್ಮಪ್ಪನದು.....ಇದು ಇವರದು ಇದು ಹೇಗೆ ಗೊತ್ತಾಗುತ್ತೆ...."
"ಇವನು ಸಿಕ್ಕಾಪಟ್ಟೆ ತರಲೆ....ಆದ್ರೂ ಇವನು ಫೂರ್ಣ ಪ್ರಜ್ಞ. ನಮ್ಮ ಕ್ಲಾಸಲ್ಲಿ ಇವನ ತರಾನೇ ಇದ್ದಾನೆ. ನೋಡಲಿಕ್ಕೆ ಇವನೇ....ಅದ್ರೆ ಅವನು ಫೂರ್ಣಪ್ರಜ್ಞನಲ್ಲ. ಅವನು ಅಪ್ರಮೇಯ.....ಈಗ ಗೊತ್ತಾಯ್ತಲ್ಲ..ಮಾಡೆಲ್ ಒಂದೇ. ಅದ್ರೆ ತಂದೆ ತಾಯಿ ಬೇರೆ."
------------- ------------------------
" ಶೆಟಲ್ ಕಾಕ್ ಹೋದ್ರೆ ಹೊಸದು ತರಬಹುದು ಜೀವ ಹೋದ್ರೆ ತರಲಿಕ್ಕೆ ಆಗುತ್ತಾ..." ಬ್ಯಾಟ್ಮಿಂಟನ್ ಆಡುತ್ತಿದ್ದಾಗ ರಸ್ತೆಯಲ್ಲಿ ವೇಗವಾಗಿ ಬಂದ ಟೂವೀಲರ್ ನೋಡಿ ಎರಡನೇ ತರಗತಿಯ ಆಲೋಕ್ ಕೇಳಿದ...
" ಆಯ್ಯೋ....ಹೋಗೋ....ನಾನಿಲ್ಲ ಅಂದ್ರೆ ನನಗೆ ಇನ್ನೋಬ್ಬ ತಮ್ಮ ಇದ್ದಾನೆ.." ಗಣೇಶ ಪ್ರತಿಕ್ರಿಯಿಸಿದ್ದ....
ಇವರಿಬ್ಬರ ಮಾತನ್ನು ದೂರದಿಂದ ಗಮನಿಸಿದ್ದ ನಾನು ಆ ಕ್ಷಣ ದಂಗಾಗಿದ್ದೆ...
ಹಾಗೆ ಹೇಳಿದ ಗಣೇಶನ ಜೀವನದ ಮುಖ್ಯ ಗುರಿ ರೇಡಿಯೋ ಜಾಕಿ ಆಗುವುದಂತೆ.
-------------- ----------------------
" ಅಂಕಲ್ ನೀವು ನಿಮ್ಮ ಗಾಡಿ ಅಲ್ಲಿ ನಿಲ್ಲಿಸುವಂತಿಲ್ಲ.."
"ಯಾಕೋ ಪ್ರೇರಿತ್"
" ಅಂಕಲ್ ನಾನು ಸೈಕಲ್ ನಮ್ಮ ಓಣಿಯಲ್ಲಿ ಕಲಿತಿದ್ದೀನಲ್ವ...? ನಮ್ಮ ಮನೆಯಿಂದ ಓಣಿಯ ಗೇಟಿನವರೆಗೆ ಹೋಗಿ ಅಲ್ಲಿ ವಾಪಸ್ ಯೂ ಟರ್ನ್ ತೆಗೆದುಕೊಳ್ಳಲು ನಿಮ್ಮ ಗಾಡಿ ನನಗೆ ಆಡ್ಡವಾಗುತ್ತೆ. ಅದಕ್ಕೆ ಇಲ್ಲಿ ನಿಲ್ಲಿಸಿ" ಅವನು ವಯಸ್ಸು ನಾಲ್ಕು. ಆದ್ರೆ ಅವನಿಂದ ಬಂದ ಆರ್ಡರನ್ನು ನಾನು ಪ್ರತೀದಿನ ಪಾಲಿಸುತ್ತಿದ್ದೇನೆ.
---------- ---------------------- -------------
"ಯಾಕೇ ಇಷ್ಟು ತಡವಾಗಿ ಬಂದೆ ?" ಮೈಸೂರಿಂದ ಬೇಸಿಗೆ ರಜೆಗಾಗಿ ಬಂದಿದ್ದ ಅಮಿತ್ ಕೇಳಿದ್ದ. ಅವನು ೯ನೇ ತರಗತಿ.
"ಬಸ್ ವೆರಿ ಸ್ಲೋ. ಅದಕ್ಕೆ ಲೇಟಾಗಿಬಿಡ್ತು ಕಣೋ..." ಆಗ ತಾನೆ ಬಂದ ತೇಜಸ್ವಿನಿ ಉತ್ತರ. ಅವಳು ಮೊದಲ ಪಿ.ಯು.ಸಿ.
"ಮತ್ತೆ ನಿಮ್ಮ ಕಡೇ ಹೇಗೇ ಸಮಾಚಾರ ?"
"ನೋ ಪ್ರಾಬ್ಲಂ ಕಣೋ...ಚಲ್ತಾ ಹೈ...ಅದ್ಸರಿ ಅಲ್ಲಿ ವೆದರ್ ಹೇಗೇ ಕೂಲ್ ಆಗಿದೆಯಾ...?"
"ಪರ್ವಾಗಿಲ್ಲ.......ಆದ್ರೆ ನಿಮ್ಮ ಕಡೆಯಷ್ಟು ತಂಪಿಲ್ಲ ನೋಡು.....?"
"ಹೌದು ನಿಮ್ಮ ರೆಸಲ್ಟ್ ಯಾವಾಗ ಬರುತ್ತೆ?"
"ನಮ್ಮದು ಹದಿನೈದನೇ ತಾರೀಖು. ನಿಮ್ಮ ಪರೀಕ್ಷೆ ಪಲಿತಾಂಶ ಯಾವಾಗ ?"
"ನಮ್ಮದು ದಿಸ್ ಮಂಥ್ ಟೆಂತ್ ಗೆ ಬರುತ್ತೆ."
ಅವರಿಬ್ಬರ ನಡುವೆ ಮಾತು ಸಾಗಿತ್ತು. ಅಷ್ಟರಲ್ಲಿ ಅಲ್ಲಿಗೆ ಪ್ರಶಾಂತ್ ಬಂದ. ಅವನು ೭ನೇ ತರಗತಿ.
" ಹೇ ಪೌಡ್ರು......ಎಲ್ಲಿ ಹೋಗಿದ್ಯೋ..." ಅವನನ್ನು ನೋಡಿ ತೇಜಸ್ವಿನಿ ಕೇಳಿದಳು.
"ಮನೆಗೆ ಹೋಗಿದ್ದೆ ಕಣೆ ಸೆಂಟು....". ಅವಳ ಮಾತಿಗೆ ಪ್ರಶಾಂತನ ಉತ್ತರ.
"ಅರೆರೆ ಇದೇನೇ, ನೀನು ಇವನನ್ನು ಪೌಡ್ರು ಅಂತೀಯಾ..?" ಅಮಿತ್ ಕೇಳಿದ ಆಶ್ಚರ್ಯದಿಂದ.
"ಹೂ ಕಣೋ ಇವನು ಹುಡುಗ ಅಲ್ವಾ ಅದಕ್ಕೆ ಅವನ ಹೆಸರು ಪೌಡ್ರೂ...ಅಂತೀವಿ..".
"ಅಂಗಾದ್ರೆ ಹುಡುಗಿಯರಿಗೆ ಸೆಂಟ್ ಅನ್ನಬೇಕಾ...."
"ಹೌದು ನನಗಿವಳು ಪೌಡ್ರು ಅಂದ್ರೆ ನಾನು ಇವಳನ್ನು ಸೆಂಟು ಅಂತೀನಿ.."...ಪ್ರಶಾಂತ್ ತಟ್ಟನೆ ಹೇಳಿದ್ದ.
ಅಲ್ಲೇ ನಿಂತು ಇವರ ಮಾತು ಕೇಳಿಸಿಕೊಳ್ಳುತ್ತಿದ್ದ ನಾನು ಅವರ ಬಳಿ ಹೋದೆ.
ಅಮಿತ್ ಬಂದು ಒಂದು ವಾರವಾಗಿತ್ತು. ನನಗಾಗಲೇ ಗೆಳೆಯನಾಗಿಬಿಟ್ಟಿದ್ದ. ಇವರ ಮಾತುಗಳನ್ನೆಲ್ಲಾ ಕೇಳಿ ಅವನಿಗೆ ಸಿಟ್ಟು ಬಂದಿರಬೇಕು. ನಾನು ಬರುವುದನ್ನೇ ಕಾಯುತ್ತಿದ್ದವನು,
"ನೋಡಿ ಅಂಕಲ್ ಇವರಿಬ್ಬರ ಮಾತುಗಳು...! ಥೂ....ಇವರಿಬ್ಬರದೂ ಅದೇನು ಭಾಷೇನೋ.....ಇವಳು ಪೌಡ್ರು ಅಂತಾಳೆ..ಅವನು ಸೆಂಟು ಅಂತಾನೆ. ಮತ್ತೆ ಇವಳ ಮಾತಿನಲ್ಲಿ ಅದೇಷ್ಟು ಇಂಗ್ಲೀಷ್ ಪದಗಳು ಇವೆ ನೋಡಿ....ನಿಮ್ಮ ಬೆಂಗಳೂರಿನವರೇ ಹೀಗೆ! ಎಲ್ಲಾ ಭಾಷೆಯನ್ನು ಕನ್ನಡಕ್ಕೆ ಮಿಕ್ಸ್ ಮಾಡಿ ಮಾತಾಡೋದು....ಇಲ್ಲಿ ನೋಡಿ..ನಮ್ಮ ಮೈಸೂರಿನವರದೂ ಅಚ್ಚ ಕನ್ನಡ, ಮಂಗಳೂರಿನವರದು ಸ್ವಚ್ಚ ಕನ್ನಡ, ಅದ್ರೆ ನಿಮ್ಮ ಬೆಂಗಳೂರಿನವರದು ಕಚ್ಚಾ ಅಥವ ಮಿಕ್ಸ್ ಕನ್ನಡ ಕಣ್ರೀ...."
ಅಮಿತ್ ಮಾತನ್ನು ನಾನು ಒಪ್ಪಿಲೇ ಬೇಕಾಗಿತ್ತು...
-------------- -------------- --------------
ನಮ್ಮ ಓಣೀಯ ಮಕ್ಕಳಿಗೆ ನನ್ನ ಸ್ಕೂಟಿಯ ಮೇಲೆ ಕೂತುಕೊಳ್ಳಬೇಡಿ ಅಂದಿದ್ದೆ. ಅದರ ಸೆಂಟರ್ ಸ್ಟ್ಯಾಂಡ್ ಸರಿಯಾಗಿಲ್ಲದ ಕಾರಣ ಕೂತರೆ ಬಿದ್ದುಹೋಗುತ್ತದೆಂಬ ಭಯ ನನಗೆ. ಆದರೂ ನಾನಿಲ್ಲದಾಗ ಅವರು ಕೂತುಬಿಡುತ್ತಿದ್ದರು....ಅದನ್ನು ಬದಲಾಯಿಸಲು ಪ್ರಯತ್ನಿಸಿದರೂ ನನ್ನ ಗಾಡಿಯ ಮಾಡೆಲ್ ಈಗ ಬರುತ್ತಿಲ್ಲವಾದ್ದರಿಂದ ಅದರ ಸ್ಪೇರ್ ಪಾರ್ಟುಗಳು ಸಿಗುತ್ತಿರಲಿಲ್ಲವಾದ್ದರಿಂದ ನಾನು ಅದನ್ನೇ ಮೇನೇಜ್ ಮಾಡಬೇಕಿತ್ತು. ಇನ್ನೂ ಸೈಡ್ ಸ್ಟ್ಯಾಂಡ್ ಮೊದಲೇ ಹಾಳಾಗಿತ್ತು...ಅದರ ಕತೆಯೂ ಹೀಗೆ ಆಗಿತ್ತು.
ನಮ್ಮ ಹುಡುಗರಿಗೆ ಇದೆಲ್ಲಾ ಕತೆ ವಿವರಿಸಿದಾಗ ಅಲ್ಲೇ ಇದ್ದ ಅಮಿತ್ "ಬನ್ನಿ ಅಂಕಲ್ ನಾನು ಕೊಡಿಸುತ್ತೀನಿ" ಅಂದ.
ನನಗೆ ಸಿಗದಿರುವುದು ಮೈಸೂರಿನವನಾದ ಇವನಿಗೆ ಹೇಗೆ ಸಾಧ್ಯ ಅಂದುಕೊಂಡರೂ ಕುತೂಹಲಕ್ಕಾಗಿ ಅವನ ಜೊತೆ ಹೊರಟೆ. ಅಲ್ಲಿಗೆ ಹೋಗುವ ಮೊದಲು ನನ್ನ ಗಾಡಿಯ ಮಾಡೆಲ್ ತಯಾರಾದ ವರ್ಷ ಎಲ್ಲವನ್ನು ನನ್ನ ಬಳಿ ಕೇಳಿ ತಿಳಿದುಕೊಂಡಿದ್ದ. ಅಧಿಕೃತ ಸ್ಪೇರ್ ಪಾರ್ಟ್ ಷೋ ರೂಂಗೆ ಹೋದೆವು.
"ಸರ್ ಎರಡು ಸಾವಿರದ ಮೂರರಲ್ಲಿ ತಯಾರಾದ ಸ್ಕೂಟಿಯ ಸೆಂಟರ್ ಸ್ಟ್ಯಾಂಡ್ ಕೊಡಿ.!"
"ಅದು ಇಲ್ಲಪ್ಪ.."
" ಯಾಕಿಲ್ಲ..."
"ಆ ಮಾಡೆಲ್ ಬರುತ್ತಿಲ್ಲವಾದ್ದರಿಂದ ಅದರ ಸ್ಪೇರ್ಸ್ ಕೂಡ ಬರುತ್ತಿಲ್ಲ..."
"ಹಾಗಾದರೆ ಈ ಸ್ಕೂಟಿಯನ್ನೇನು ಮಾಡಬೇಕು ?"
"ಬೇಕಾದ್ರೆ ನೀವು ಬೇರೆ ಲೋಕಲ್ ಆಟೋ ಸ್ಪೇರ್ಸ್ ಅಂಗಡಿಯಲ್ಲಿ ಪ್ರಯತ್ನಿಸಬಹುದು.!"
"ನಿಮ್ಮ ಕಂಪನಿಯ ಗಾಡಿ ನೀವು ಮಾರಿದ ಮೇಲೆ ಅದು ರಸ್ತೆ ಮೇಲೆ ಓಡಾಡುವವರೆಗೂ ಅದರ ಸ್ಪೇರ್ಸ್ ತಯಾರಿಸುತ್ತಿರಬೇಕು ಮತ್ತು ಮಾರ್ರಬೇಕು ಅಲ್ವಾ ಸರ್ ?"
"ಹೌದಪ್ಪ ನಿನ್ನ ಮಾತು ಒಪ್ಪುತ್ತೀನಿ..ಅದ್ರೆ ಕಂಪನಿಯವರಿಗೆ ಮೇಲಾಧಿಕಾರಿಗಳಿಗೆ ಇದು ಗೊತ್ತಾಗಲ್ವಲ್ಲ..."
"ಅವರಿಗೆ ಗೊತ್ತಾಗಲಿಲ್ಲವೆಂದ ಮೇಲೆ ಅಂಗಡಿ ಯಾಕೆ ಇಟ್ಟುಕೊಂಡಿದ್ದೀರಿ...ಬಾಗಿಲು ಮುಚ್ಚಿಬಿಟ್ಟು ಮನೆಗೆ ಹೋಗಿ ಮಲಕ್ಕೊಳ್ಳಿ. !"
ಅಮಿತ್ನ ಪಟ್ ಪಟ್ ಪಟಾಕಿಯಂತ ಮಾತಿಗೆ ಅಂಗಡಿಯವನು ಚೆನ್ನಾಗಿ ಬೈಯ್ಯಬಹುದು ಅಂದುಕೊಂಡಿದ್ದೆ. ಅದರೆ ಅವನು ಈ ಹುಡುಗನ ಪಟಾಕಿಯಂತ ಮಾತಿಗೆ ಮಂಕಾಗಿದ್ದ. ಅಮಿತ್ ಮಾತ್ರವಲ್ಲ ನಮ್ಮ ಓಣಿಯ ಎಲ್ಲಾ ಮಕ್ಕಳು ಹೀಗೇನೇ. ಪಟ್ ಪಟ್ ಪಟಾಕಿಯ ಹಾಗೆ. ಯಾವಾಗಲು ಹೀಗೆ ಸಿಡಿಯುತ್ತಿರುತ್ತಾರೆ.[ನಮ್ಮ ಓಣಿಯ ಮಕ್ಕಳು ಮಾತ್ರವಲ್ಲ ನಿಮ್ಮ ಓಣಿಯ ಮಕ್ಕಳು ಹೀಗೇನೇ. ನೀವು ಗಮನಿಸಬೇಕಷ್ಟೆ.]
ಹೊಸಮನೆಗೆ ಬಂದು ಮೂರು ತಿಂಗಳಾಗಿತ್ತು. ಕೆಲಸದ ಒತ್ತಡದಿಂದ ಆಯಾಸ ಪರಿಹರಿಸಿಕೊಳ್ಳಲು ಸಂಜೆ ಒಂದು ಗಂಟೆ ಈ ಮಕ್ಕಳ ಜೊತೆ ಬ್ಯಾಟ್ಮಿಂಟನ್, ಕ್ರಿಕೆಟ್, ಮಾತುಕತೆಗಳು ಅಂತ ಕಳೆಯುತ್ತಿದ್ದೇನೆ. ಈಗ ಬೇಸಿಗೆ ರಜೆ. ಅದರ ಪರಿಣಾಮವೇ ಈ ಲೇಖನ.. ಬರೆದಷ್ಟು ದೊಡ್ಡದಾಗುತ್ತಾ ಹೋದ ಈ ಲೇಖನ ನಿಮಗೆಲ್ಲಾ ಓದಲು ಬೋರಾಗಬಾರದೆಂದು ಸಾಕಷ್ಟು ಟ್ರಿಂ ಮಾಡಿದ್ದೇನೆ. ಓದಿ ಖುಷಿಯಾದರೆ ನನಗೂ ಖುಷಿ...
ಲೇಖನ
ಶಿವು.ಕೆ ARPS.
73 comments:
ಶಿವೂ ಸರ್,
ಸುಪೆರ್ಬ್!!!
ತುಂಬಾ ಚೆನ್ನಾಗಿದೆ, ಮತ್ತು ಮನಸ್ಸಿಗೆ ಉಲ್ಲಾಸ ನೀಡುತ್ತದೆ ಬರಹ. ಮೊನ್ನೆ ಊರಿಗೆ ಹೋಗುವಾಗ ತಾಯಿ-ಮಗ ಪಕ್ಕದ ಸೀಟಿನಲ್ಲಿ ಕುಳಿತಿದ್ದರು, ಮಗ ೬-೭ ವರ್ಷದವನಿರಬಹುದು ಸ್ವಚ್ಚವಾದ ಕನ್ನಡದಲ್ಲಿ ಮಾತನಾಡುತ್ತಿದ್ದ, ತಾಯಿ ತನ್ನ ಹರುಕು-ಮುರುಕು ಇಂಗ್ಲೀಷನ್ನು ಕನ್ನಡಕ್ಕೆ ಬೆರೆಸಿ ಇಡೀ ಬಸ್ಸಿನ ಜನರೆಲ್ಲರ ಆಕರ್ಷಣೆಯ ಕೇಂದ್ರ ಬಿಂದುವಾಗಿದ್ದಳು ಮಹಾತಾಯಿ.
ಅದ್ಯಾಕೆ ಇಂತಹ ದುರವಸ್ಥೆ ನಮ್ಮ ಭಾಷೆಗೆ ಅರ್ಥವಾಗುತ್ತಿಲ್ಲ.
ರಾಜೇಶ್,
ಮೊದಲು ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು....
ಮಕ್ಕಳ ಜೊತೆಗೆ ಸಮಯ ಕಳೆದರೆ ಮನಸ್ಸಿಗೆ ರಿಲ್ಯಾಕ್ಸ್ ಸಿಗುವುದು ಗ್ಯಾರಂಟಿ...ಬರೆದಿದ್ದು ತುಂಬಾ....ಅದರಲ್ಲಿ ಬ್ಲಾಗಿಗೆ ಹಾಕಿದ್ದು ೨೫ ಭಾಗ ಮಾತ್ರ...
ನಮ್ಮ ಬೆಂಗಳೂರಿನ ಜನರಿಗೆ [ನಾನು ಸೇರಿದಂತೆ ]ಭಾಷ ವಿಚಾರದಲ್ಲಿ ಚಕ್ರವ್ಯೂಹದಲ್ಲಿ ಸಿಕ್ಕಿಹಾಕಿಕೊಂಡಂತೆ ಆಡುತ್ತೇವೆ ಅಲ್ಲವೇ....ಇದರಿಂದ ಬಿಡುಗಡೆ ಹೊಂದುವುದು ಯಾವಾಗಲೋ.
ಮತ್ತೊಮ್ಮೆ ಧನ್ಯವಾದಗಳು.
makkala jothe naavu makkalaagi kuniyuvaaga siguva kushine bere. nivu baredaddu 100% sathya.
innu benglur bahse na a devre mechchabeku. kaleda vaara ranga shakarakke hogidde. iddiddu kannada haasya naataka, ellaru hutta benglurigane annuva haagittu. ticket counter nallu english mathadodu. olagade nataka nodutta english nalli comment kododu!!! olle aparichita naduve koothu nataka nodida haage aithu!!
ನಿಜ.. ಮಕ್ಕಳ ಜೊತೆ ಸಮಯ ಹೋದದ್ದೇ ಗೊತ್ತಾಗುವುದಿಲ್ಲ..
ಇಲ್ಲೂ ಅಷ್ಟೇ, ಕೆಳಗಿನ ಮನೆಯ ಮಗು ಬೆಳಗ್ಗೆ ನಾನು ಹೊರಡುವಾಗ ಎದ್ದಿದ್ದರೆ, ಅದರ ನಗು ಮುಖ ನೋಡಿ ಹೊರಟರೆ ದಿನ ಪೂರ್ತಿ ಚೆನ್ನಾಗಿರುತ್ತದೆ.
ಶಿವಣ್ಣ..
ಮಕ್ಕಳ ಜೊತೆ ನೀವೂ ಮಗುವಾದ ಖುಷಿಯ ಕ್ಷಣ ನಮಗೂ ಖುಷಿ ಕೊಡ್ತು. ಮಕ್ಕಳು ಯಾರಿಗೆ ತಾನೇ ಇಷ್ಟವಾಗೊಲ್ಲ? ಮನಸ್ಸಿಗೆ ದುಗುಡ-ದುಮ್ಮಾನ ಎಲ್ಲಾ ಮರೆತುಹೋಗುತ್ತೆ ಅಲ್ವಾ? ಎಂದಿನಂತೆ ಚೆಂದದ ಬರಹ,...ಜೊತೆಗೆ ಟ್ರಿಮ್ಮಾಗೂ ಇದೆ.
-ಧರಿತ್ರಿ
ಸರ್,
ಬೇಸರವೇನಿಲ್ಲ ಮಕ್ಕಳ ಮಾತು ಕೇಳುತ್ತ ಇದ್ದರೆ ಕೇಳುತ್ತಲೇ ಇರಬೇಕೆನಿಸುತ್ತೆ... ಚೆನ್ನಾಗಿ ಬರೆದಿದ್ದೀರಿ.. ಮೈಸೂರಿನ ಹುಡುಗ ಬಾರಿ ಚುರುಕು ಅನ್ಸುತ್ತೆ ಹ ಹಾ ಹಹಾ..
ಅವರುಗಳ ಒಂದೊಂದು ಮಾತು ಸೂಪರ್!!!!!!
ಈಗಿನ ಮಕ್ಕಳೆ ಹಾಗೆ. ಅವರಿಗೆ ಏನು ತೋಚತ್ತೊ ಅದನ್ನು ಕಿಂಚಿತ್ತು ತಡೆಯದೇ ಹೇಳುತ್ತಾರೆ. ನಮ್ಮ ಮನೆಯ ಪಕ್ಕದ ಮನೆಯಲ್ಲೂ ಇದ್ದಾರೆ.ಅವರ ಅಮ್ಮಂದಿರ ಗೋಳು ಹೇಳತೀರದು..!!
ಮಕ್ಕಳೊಂದಿಗೆ ಇದ್ದರೆ ನಾವೂ ಎಷ್ಟೇಲ್ಲಾ ತಿಳಿಯಬಹುದು ಅಲ್ವಾ!!
ಬಾಲು ಸರ್,
ಮಕ್ಕಳ ಜೊತೆಗಿನ ಅನುಭವದ ಆನಂದವೇ ಬೇರೆ..ಅದನ್ನು ಅನುಭವಿಸಿದವನೇ ಪುಣ್ಯವಂತ...
ಇನ್ನೂ ನೀವು ಹೇಳಿದಂತ ಅನುಭವ ನನಗೂ ಆಗಿದೆ...ಮತ್ತೆ ಹೆಚ್ಚಾಗಿ ಕನ್ನಡ ಸಿನಿಮಾ ಮಂದಿರಗಳಲ್ಲಿ ನಾವು ಟಿಕೆಟ್ ತೆಗೆದುಕೊಳ್ಳುವಾಗ, ಒಳಹೋದಾಗ ಇದೇ ಅನುಭವವಾಗಿದೆ...ಇನ್ನೂ ಕೆಲವು ಕಛೇರಿಗಳಲ್ಲಂತೂ ಅಲ್ಲಿ ಮಾತಾಡುವ ಬಾಷೆಯಂತೂ ಕಲಗಚ್ಚಾಗಿ ಬಿಟ್ಟಿದೆ...
ಧನ್ಯವಾದಗಳು..
ಜ್ಯೋತಿ ಮೇಡಮ್,
ನಿಮ್ಮ ಕೆಳಗಿನ ಮಗುವಿನ ಸದಾ ಹಾಗೆ ಇರಲಿ...ನಿಮಗೆ ಪ್ರತಿದಿನ ಸಂತೋಷ ತರಲಿ...
ಕೆಲಸದ ಬ್ಯುಸಿಯ ನಡುವೆ ನನ್ನ ಬ್ಲಾಗನ್ನು ನೋಡಿ ಪ್ರತಿಕ್ರಿಯಿಸಿದ್ದೀರಿ...ಧನ್ಯವಾದಗಳು...
ಧರಿತ್ರಿ,
ಇತ್ತೀಚಿನ ಕೆಲಸದ ಒತ್ತಡದಲ್ಲಿ ನನಗೆ ರೆಲ್ಯಾಕ್ಸ್ ಆಗಲು ಈ ಮಕ್ಕಳಿಲ್ಲದಿದ್ದರೇ...ನನಗಂತೂ ತುಂಬಾ ಬೇಸರವಾಗಿಬಿಡುತ್ತಿತ್ತು....ಅವರಿಗಾಗಿ ಈ ಲೇಖನ...
ಮತ್ತೆ ಟ್ರಿಮ್ ಮಾಡಿದ ಲೇಖನವನ್ನು ಇಷ್ಟಪಟ್ಟಿದ್ದಕ್ಕೆ ಥ್ಯಾಂಕ್ಸ್...ಹೀಗೆ ಬರುತ್ತಿರು...
ಮನಸು ಮೇಡಮ್,
ಮಕ್ಕಳ ಬಗ್ಗೆ ಎಷ್ಟು ಬರೆದರೂ ಕಡಿಮೆಯೆನಿಸುತ್ತದೆ. ಈ ಲೇಖನದ ಪೂರ್ತಿ ಭಾಗವನ್ನು ಹಾಕಲೆತ್ನಿಸಿದರೆ ಇದರ ನಾಲ್ಕರಷ್ಟು ಆಗುತ್ತದೆ...ಅದನ್ನು ಈ ಮಟ್ಟಕ್ಕೆ ಟ್ರಿಮ್ ಮಾಡಿದ್ದೇನೆ..
ಮತ್ತೆ ಮೈಸೂರಿನ ಹುಡುಗ ಅಮಿತ್. ಅವನಿಗೆ ನಾನಂದ್ರೆ ಇಷ್ಟ. ಸದ್ಯ ಇನ್ನೂ ಇಲ್ಲೇ ಇದ್ದಾನೆ. ಅವನ ಬಗ್ಗೆ ಬರೆದರೆ ಅದೇ ಮತ್ತೊಂದು ಲೇಖನವಾಗುವಷ್ಟು ಮೆಟೀರಿಯಲ್ಲು ಅವನಿಂದ ಸಿಕ್ಕಿದೆ...ಮುಂದೆ ಎಂದಾದರೂ ಬರೆಯುತ್ತೇನೆ...
ಧನ್ಯವಾದಗಳು.
ನಿತಿನ್,
ಮಕ್ಕಳ ಬಗ್ಗೆ ನಿಮ್ಮ ಮಾತು ನಿಜ. ಅವರು ನಿಜಕ್ಕೂ ಪಟಾಕಿಗಳೇ. ಯಾವಾಗ ಸಿಡಿಯುತ್ತಾರೋ ಗೊತ್ತಾಗುವುದಿಲ್ಲ..ಇದೆಲ್ಲಾ ನಮ್ಮ ಓಣಿಯ ಮಕ್ಕಳನ್ನು ಗೆಳೆಯ/ಗೆಳತಿಯರನ್ನಾಗಿ ಮಾಡಿಕೊಂಡ ಅನುಭವ. ಅವರಿಂದ ನನಗೇ ತುಂಬಾ ವಿಚಾರಗಳು ತಿಳಿಯುತ್ತಿವೆ...
ನಮ್ಮ ಓನರ್ ಮನೆಯಲ್ಲಿ ಅವರ ಮಕ್ಕಳು ಕೊಡುವ ಕಾಟ, ಮಾತುಗಳು ಎಲ್ಲಾ ಕೇಳುತ್ತಿರುತ್ತೇನೆ. ಅವರಿಗೆ ಸಂಕಟ. ನನಗೆ ಒಳಗೊಳಗೆ ನಗು...enjoy ಮಾಡುತ್ತಿರುತ್ತೇನೆ..
ಧನ್ಯವಾದಗಳು.
ಶಿವು,
ಎಲ್ಲಾ ಮಾತುಗಳು ಪಟ್ ಪಟ್ ಪಟಾಕ್ಷಿ ಇದ್ದ ಹಾಗೇ ಇವೆ!
ನಮ್ಮ ಬೇಸರದ ಕ್ಷಣಗಳನ್ನು ದೂರ ಮಾಡುವುದು ಮಕ್ಕಳೇ. ಅವರ ಯೋಚನಾಲಹರಿಗಳು ಬದುಕಿನತ್ತ ನಮ್ಮನ್ನು ಕರೆದೊಯ್ಯುತ್ತವೆ
ಮುಕ್ತ ಮನಸಿನಿಂದ ಮಾತನಾಡುವ ಮಕ್ಕಳ ಮಾತುಗಳು ಇಷ್ಟವಾದವು.
ಧನ್ಯವಾದಗಳು
ಶಿವು- ಪುಟ್ಟ ಪಾಪ್ ಕಾರ್ನ್ ತರ ಚಟ ಪಟ ಸಿಡೀತಾ ಮಾತಾಡಿದ್ರೆ...ಪುಟ್ಟಿ ಪುಟಿ ಪುಟಿದು ಕುಣಿಯುತ್ತಾ ಅವನಿಗೆ ಉತ್ತರ ಕೊಡೋದು..ನೋಡೋದು ಎಷ್ಟು ಚಂದವೋ ಅಷ್ಟೇ ಕರ್ಣ ಮೋಹಕ ಮಕ್ಕಳ ಸಂಭಾಷಣೆ. ಮನೆಯಲ್ಲಿ ಮೂರ್ನಾಲ್ಕು ಮಕ್ಕಳಿದ್ದು ಟಿವಿ ಮುಂದೆ ಕುಂತು programme ನೋಡುತ್ತಾ ಅವರ ಮಾತುಗಳನ್ನು ಗಮನಿಸಿಯೂ ಗಮಿನಿಸದಂತೆ ಆಲಿಸುತ್ತಿದ್ದರೆ ಟಿವಿ ಗಿಂತ ಹೆಚ್ಚು ಮನರಂಜನೆ ಸಿಗುವುದಂತೂ ಖಂಡಿತ..
ಒಳ್ಳೆಯ ನವಿರು ಲಾಸ್ಯ-ಹಾಸ್ಯ ತುಂಟತನದ ಲೇಖನ ಪದ ಬಳಕೆ ನಿಮ್ಮ ಕ್ಯಾಮರಾದ ಲೈಟ್, ಅಪರ್ಚರ್, ಸ್ಪೀಡ್ ಗಳಷ್ಟೇ ಕರಾರುವಕ್ಕಾಗಿ ಬಳಸಿದ್ದೀರಿ..ಮುಂದುವರೆಯಲಿ
ಚಿತ್ರ ಮೋಡಿಯ ಜೊತೆಗೆ ಪದ ಸಂಪದ...
ಸುನಾಥ್ ಸರ್,
ಇನ್ನಷ್ಟು ದೊಡ್ಡ ದೊಡ್ಡ ಪಟಾಕಿ[ಬಾಂಬು]ಗಳು ಇದ್ದವು. ಎಲ್ಲವನ್ನೂ ಟ್ರಿಮ್ ಮಾಡಿದ್ದೇನೆ..ಪಟಾಕಿಗಳನ್ನು ಮೆಚ್ಚಿದ್ದಕ್ಕೆ ಧನ್ಯವಾದಗಳು
ಹರೀಶ್,
ಕಳೆದೊಂದು ತಿಂಗಳಿಂದ ನನ್ನ ಬೇಸರವನ್ನು ಕಳೆದಿದ್ದು ಈ ಮಕ್ಕಳೇ. ನಿಮ್ಮ ಅಭಿಪ್ರಾಯದಂತೆ ಹೊಸ ಆಲೋಚನೆಗೂ ಆನಂದಕ್ಕೂ ಮನಸ್ಸು ವಾಲಿದ್ದಂತೂ ನಿಜ..
ಹೀಗೆ ಬರುತ್ತಿರಿ..ಧನ್ಯವಾದಗಳು.
ಶಿವಪ್ರಕಾಶ್,
ಮಕ್ಕಳ ಮನಸ್ಸೇ...ಮುಕ್ತ...ಮುಕ್ತ...ಮುಕ್ತ..ಅಲ್ಲವೇ...
ಜಲನಯನ ಸರ್,
ಖಂಡಿತವಾಗಿಯೂ ನಿಮ್ಮ ಅಭಿಪ್ರಾಯದಂತೆ ಎಲ್ಲಾ ಮಕ್ಕಳು ಪಾಪ್ ಕಾರ್ನ್ನಂತೆ ಸಿಡಿಯುತ್ತಿರುತ್ತವೆ....ನಿಮ್ಮ ಮನೆಯ ಮಕ್ಕಳ ಆಟ ಪಾಟ ಮಾತು..ಪಟ ಪಟ ಪಟಾಕಿ, ಚಟ ಚಟ ಚಟಾಕಿಗಳನ್ನೆಲ್ಲಾ ಬರೆಯಿರಿ. ತುಂಬಾ ಚೆನ್ನಾಗಿರುತ್ತದೆ....ಓದಲು ಕಾಯುತ್ತೇನೆ...
ಮತ್ತೆ ನನ್ನ ಬರವಣಿಗೆಯಲ್ಲಿ ಯಾವುದೇ ಗಿಮಿಕ್ ಮಾಡದೇ ಮಕ್ಕಳ ಮಾತುಗಳನ್ನು ನೇರ ಕೇಳಿದ್ದೇನೆ. enjoy ಮಾಡಿದ್ದೇನೆ. ಅದನ್ನೇ ನೇರವಾಗಿ ಬರೆದಿದ್ದೇನೆ. ಆದರೂ ನನ್ನ ಬರವಣಿಗೆಯನ್ನು ಕ್ಯಾಮೆರಾದ ಲೈಟ್, ಅಪಾರ್ಚರ್, ಸ್ಫೀಡ್...ಇಂಥವಕ್ಕೆ ಹೋಲಿಸಿದ್ದಕ್ಕೆ ಧನ್ಯವಾದಗಳು ಸರ್,
ಶಿವು, ಚಂದದ ಲೇಖನ; ಮುದಕೊಡುವ ಮಾತುಗಳು. ನಮ್ಮ ಮನಸ್ಸೂ ಮಕ್ಕಳ ಮನಸ್ಸಿನಂತೆ ಮುಕ್ತವಾಗಿದ್ದರೆ ಎಷ್ಟು ಚಂದ. ಸಮಾಜದ ಕಟ್ಟುಕಟ್ಟಳೆಗಳೆಲ್ಲ ಆ ಮಕ್ಕಳ ಬುದ್ಧಿಯನ್ನೂ ಬಾಯಿಯನ್ನೂ ಕಟ್ಟಿಹಾಕದಿರಲಿ (ಅಥವಾ ಹಾಗಾಗುವ ಮೊದಲೇ ಇನ್ನಷ್ಟು ಚಟ್ ಪಟ್ ಪಟಾಕಿಗಳನ್ನು ದಾಖಲಿಸಿಬಿಡಿ). ಧನ್ಯವಾದಗಳು.
ಶಿವೂ,
ನಿಮ್ಮ ಛಾಯಾಚಿತ್ರಗಳ ಸಹಿತ ಬರುವ ಲೇಖನಗಳ ಮಾಲೆಗಿ೦ತ ಭಿನ್ನವಾದ ಫೋಟೋಗಳಿಲ್ಲದ ಸರಳಸು೦ದರ ಬರಹವಿದು. ಇಷ್ಟವಾಯ್ತು. ಹೌದು, ನೀವ೦ದ೦ತೆ ಈಗಿನ ಮಕ್ಕಳು ಚಿನಕುರಳಿಯ೦ತೆ, ಪಟಾಕಿಯ೦ತೆ ಮಾತಿನ ಮಲ್ಲರು. ನನ್ನ ಮಗ 5-6 ವರ್ಷದವನಿದ್ದಾಗ, ಅ೦ದರೆ ಈಗ ಸುಮಾರು ೧೦ವರುಷದಹಿ೦ದೆ ನಾನು ಯಾರದೋ ಒತ್ತಾಯಕ್ಕೆ ಮಣಿದು Modicare product ಗಳ network ಗೆ ಸೇರಿದ್ದೆ. ಆ ಪ್ರಾಡಕ್ಟ್ ಗಳ ಬಗ್ಗೆ ನನ್ನ ಮಗ ಚಟಪಟನೆ ವಿವರಣೆ ಕೊಟ್ಟು ಮನೆಗೆ ಬ೦ದವರಿಗೆಲ್ಲ ಮಾರುತ್ತಿದ್ದ. (ನನಗೆ ಅ೦ತಹ ಕೆಲಸ ಮಾಡುವ ಚಾಕ ಚಕ್ಯತೆ ಇರಲಿಲ್ಲ) ಮತ್ತು ಬ೦ದವರೆಲ್ಲರ ಮೆಚ್ಚುಗೆಗೂ ಪಾತ್ರನಾಗುತ್ತಿದ್ದ. ಆದರೆ ನಾನು ಗಮನಿಸಿದ ವಿಚಾರ ವೆ೦ದರೆ ಸಣ್ಣ ವಯಸ್ಸಿನಲ್ಲಿ ತು೦ಬಾ ಮಾತಾಡುವ ಮಕ್ಕಳು ಹದಿಹರೆಯಕ್ಕೆ ಬರುತ್ತಿದ್ದ೦ತೆ ತು೦ಬ ಕಡಿಮೆ ಮಾತಾಡುತ್ತಾರೆ. ಈಗ ನನ್ನ ಮಗನೂ ಹಾಗೆ ಆಗಿದ್ದಾನೆ, ತು೦ಬಾ ಮೌನಿ, ಹಿ೦ದೆ ಅಷ್ಟೊ೦ದು ಮಾತನಾಡುತ್ತಿದ್ದವನು ಇವನೇನಾ ಎನ್ನುವಷ್ಟು. ನಿಮ್ಮ ಲೇಖನ ಓದಿ ನನಗೆ ಅದೆಲ್ಲ ನೆನಪಾಯಿತು.
ಕುಲದೀಪ್ ಸರ್,
ನಿಮ್ಮ ಆಸೆಯೇ ನನ್ನ ಆಸೆಯೂ ಕೂಡ. ಆದರೇ ಅದೇನೋ ಬೆಳೆಯುತ್ತಾ ಅವರ ಮಾತುಗಳನ್ನು ಸಮಾಜ ಕಿತ್ತುಕೊಂಡುಬಿಡುತ್ತದೆ. ಇದು ಸಮಾಜದ ತಪ್ಪೋ..ಅಥವ ಮಾತಾನಾಡದಂತೆ ಸುಮ್ಮನಾಗುವ ಮಕ್ಕಳ ತಪ್ಪೋ ಆ ದೇವರೇ ಬಲ್ಲ...
ನಿಮ್ಮ ಪ್ರೋತ್ಸಾಹದ ಮಾತುಗಳಿಂದಾಗಿ ಮುಂದಿನ ಲೇಖನಗಳಲ್ಲಿ ಇನ್ನಷ್ಟು ಪಟಾಕಿ, ಚಟಾಕಿ, ಸುರುಸುರು ಬತ್ತಿ ರಾಕೆಟ್, ಭೂಚಕ್ರ,[ಈ ರೀತಿ ಎಲ್ಲಾ ವಿಧದ ಮಾತು]ಗಳನ್ನು ಅವರ ಬೇಸಿಗೆ ಕಳೆಯುವ ಮುನ್ನ ದಾಖಲಿಸಿಬಿಡುತ್ತೇನೆ
ಹೀಗೆ ಬರುತ್ತಿರಿ...ಧನ್ಯವಾದಗಳು.
ಪರಂಜಪೆ ಸರ್,
ಈ ಬರಹವನ್ನು ನನ್ನ ಫೋಟೋಗ್ರಫಿ ಬರಹಗಳಿಗಿಂತ ವಿಭಿನ್ನವೆಂದು ನಿಮಗನ್ನಿಸಿದ್ದರೆ ನಾನು ಬರೆದದ್ದಕ್ಕೂ ಸಾರ್ಥಕ.
ಮತ್ತು ಇಂದಿನ ಮಕ್ಕಳು ಪಟಾಕಿಗಳೇ...ನಿಮ್ಮ ಮಗನ ಅನುಭವವನ್ನು ಹಂಚಿಕೊಂಡಿದ್ದೀರಿ...ಮತ್ತೆ ನಾನು ಚಿಕ್ಕವನಾಗಿದ್ದಾಗ ನಿಮ್ಮ ಮಗನಿಗೆ ತದ್ವಿರುದ್ದವಾಗಿದ್ದೆ...ಯಾರೊಂದಿಗೂ ಮಾತಾಡದೇ ಮೌನಿಯಾಗಿದೆ...ಆದ್ರೆ ಈಗ ಕಲ್ಲನ್ನು ಮಾತಾಡಿಸುವಷ್ಟು[ಆತ್ಮರತಿ ಅಂದುಕೊಳ್ಳಬೇಡಿ]ಆತ್ಮವಿಶ್ವಾಸ ಬಂದುಬಿಟ್ಟಿದೆ..ಹಾಗೇ ನಡೆದುಕೊಳ್ಳುತ್ತೇನೆ ಕೂಡ...ಇದು ಹೇಗಾಯಿತೋ ನಾ ಕಾಣೆ.
ಸಾಧ್ಯವಾದರೆ ಎಂದಾದರೂ ನನ್ನ ಬಾಲ್ಯವನ್ನು ಬರೆಯತ್ತೇನೆ...ಹೀಗೆ ಬರುತ್ತಿರಿ ಧನ್ಯವಾದಗಳು.
ಶಿವು ಅವರೇ, ಶೀರ್ಷಿಕೆ ವಿಚಿತ್ರವಾಗಿದ್ದರೂ ಲೇಖನ ಚೆನ್ನಾಗಿದೆ. ಓದುತ್ತಾ ಹೋದಂತೆ ಲೇಖನ ಮುಗಿದದ್ದೇ ತಿಳಿಯಲಿಲ್ಲ!
ಮೊನ್ನೆ ಗುರುವಾರ ನಾನು ನನ್ನ ತವರಿಗೆ ಹೋಗಿದ್ದೆ, ಅಕ್ಕಂದಿರು ಬಂದಿರುವರು ಎಂದು! ಅಲ್ಲಿ ಮಕ್ಕಳ ಆಟೋಟಗಳಲ್ಲಿ 3 ದಿನಗಳು 3 ನಿಮಿಷಗಳಂತೆ ಕಳೆದು ಹೋದವು!! ಮತ್ತೆ ನಾನು ಭಾನುವಾರ ಮುಂಜಾನೆಯೇ 5.30 ರ ಬಸ್ಸಿಗೆ ಹೊರಟು ಬರುವವಳಿದ್ದೆ, ಆದರಿಂದ ಅವರ ಮಕ್ಕಳಿಬ್ಬರೂ, ಚಿಕ್ಕಮ್ಮ ಬೆಳಿಗ್ಗೆ ಬೇಗ ಹೊರಟುಬಿಡುತ್ತಾರೆ, ಎಚ್ಚರವಾಗದಿದ್ದರೆ ಮಾತನಾಡಿಸಲು ಆಗುವುದಿಲ್ಲ ಎಂದು ಅವರೂ ಸಹ ನಮ್ಮೊಂದಿಗೆ ಸರಿ ರಾತ್ರಿ 2 ಗಂಟೆಯವರೆಗೂ ಎಚ್ಚರವಾಗಿದ್ದುಕೊಂಡು, ಆಟವಾಡುತ್ತಾ, ನಗುತ್ತಾ, ನಮ್ಮನ್ನೆಲ್ಲಾ ಅವರ ಮುಗ್ಧತೆಯ ಮಾತುಗಳಿಂದ ರೇಗಿಸುತ್ತಾ, ನಗಿಸುತ್ತಿದ್ದರು.
ಮಕ್ಕಳೊಂದಿಗಿನ ಒಡನಾಟ ಜೀವನದ ಅಮೂಲ್ಯ ಕ್ಷಣಗಳಾಗಿ, ನೆನಪಿನಲ್ಲಿ ಉಳಿದುಬಿಡುತ್ತದೆ!!! ಅಲ್ಲವೇ?
ಶಿವು,
ನಿಜಕ್ಕೂ ಚಟ ಪಟ ಸಿಡಿಯುವಂತಹ ಮಾತುಗಳನ್ನಾಡುವ ನಿಮ್ಮ ಓಣಿಯ ಮಕ್ಕಳು, ಅವರ ಹೆಸರಿನಂತೆಯೇ ಸೊಗಸಾಗಿದೆ. ಅದನ್ನು ನೀವಿಲ್ಲಿ ನಮಗೆ ತೋರಿಸಿರುವ ರೀತಿಯೂ ಅಷ್ಟೇ ಸುಂದರವಾಗಿದೆ. ಮುಗ್ಧತೆ ಮೀರಿ ತಿಳುವಳಿಕೆ ಬಂದಿರದ ವಯಸ್ಸಿನಲ್ಲಿ ಅವರಾಡುವ ಮಾತುಗಳನ್ನು ಹಾಗಾಗೇ ಕ್ಯಾಮೆರಾದ ಮೂಲಕ ಚಿತ್ರ ಸೆರೆಹಿಡಿದಂತೆ ಸೆರೆಹಿಡಿದು ತೋರಿಸಿದ್ದೀರಿ. ಇಲ್ಲಿ ಚಿತ್ರವಿರದೆಯೂ ನಮಗೆ ಚಿತ್ರ ಕಾಣಿಸುತ್ತದೆ(ಚಿತ್ರಣ).
SSK ಮೇಡಮ್,
ಇತ್ತೀಚೆಗೆ ಲೇಖನದ ಶೀರ್ಷಿಕೆಗಳನ್ನು ವಿಭಿನ್ನವಾಗಿ ಖಯಾಲಿ ನನಗೆ ಶುರುವಾಗಿದೆ...
ಮಕ್ಕಳ ಬಗೆಗಿನ ಲೇಖನ ದೊಡ್ಡದಾಗಿತ್ತು. ಅದನ್ನು ನೀವು ಬೇಸರವಿಲ್ಲದಂತೆ ಓದಿದ್ದು ನನಗೆ ಖುಷಿ ತಂದಿದೆ. ಮತ್ತೆ ನಾನು ಇಲ್ಲಿ ಬರೆದ ಲೇಖನಕ್ಕಿಂತ ನೀವು ಸೇರಿದಂತೆ ಅನೇಕರು ತಮ್ಮ ಮಕ್ಕಳೊಂದಿಗಿನ ಅಭಿಪ್ರಾಯಗಳನ್ನು ಧಾರಳವಾಗಿ ಹಂಚಿಕೊಳ್ಳುತ್ತಿದ್ದ್ದೀರಿ...ಅದರಿಂದ ನನಗಂತೂ ತುಂಬಾ ಖುಷಿಯಾಗುತ್ತಿದೆ. ನನ್ನೊಂದಿಗೆ ಹಂಚಿಕೊಳ್ಳುತ್ತಿರುವ ಪ್ರತಿಯೊಬ್ಬರೂ ಅವರವರ ಬ್ಲಾಗಿನಲ್ಲಿ ಮಕ್ಕಳ ಬಗ್ಗೆ ಅವರ ಒಡನಾಟದ ಬಗ್ಗೆ ಲೇಖನಗಳನ್ನು ಬರೆದರೆ ಎಲ್ಲರೂ ಓದುವಂತಾಗುತ್ತದೆ...ಆ ನಿಟ್ಟಿನಲ್ಲಿ ಎಲ್ಲರೂ ಪ್ರಯತ್ನಿಸಲಿ ಅನ್ನೋದು ನನ್ನ ಅನಿಸಿಕೆ.
ಲೇಖನ ಮೆಚ್ಚಿದ್ದಕ್ಕೆ ಮತ್ತು ನಿಮ್ಮ ಮಕ್ಕಳೊಂದಿಗಿನ ಅನುಭವವನ್ನು ಹಂಚಿಕೊಂಡಿದ್ದಕ್ಕೆ ಧನ್ಯವಾದಗಳು..
ನಿಮ್ಮ ಇ ಬರಹ , ಚಿಕ್ಕ ಮಕ್ಕಳ ಥರ ತುಂಬ cute ಆಗಿ ಮೂಡಿ ಬಂದಿದೆ.... ಓದಿ ಮುಗಿಸಿದ್ದೆ ಗೊತ್ತಾಗಲಿಲ್ಲ.... ಹೌದು ಈಗಿನ generation ಮಕ್ಕಳು ಸಿಕ್ಕಾಪಟ್ಟೆ ಚೂಟಿ ....ಸಕತ್ ಮಾತಾಡ್ತಾರೆ......ಅವರು ಆಡುವ ಮಾತನ್ನು ಕೇಳೋಕೆ ಚೆಂದ....ನಾನು ಬಿಡುವಿನಲ್ಲಿ ಇಂಥ ಮಕ್ಕಳ ಜೊತೆ ಬೇರೆಯುತ್ತಿನಿ...ಕೆಲವೊಮ್ಮೆ ಅವರು ಕೇಳುವ ಪ್ರಶ್ನೆಗೆ ನಮ್ಮ ಬಳಿ ಉತ್ತರವೇ ಇರುವುದಿಲ್ಲ.....ನಾವು ಅದನ್ನು ಯೋಚಿಸಿರುವುದೇ ಇಲ್ಲ ಅಸ್ತು ಚಿಕ್ಕ ವಯಸ್ಸಿಗೆ ಯೋಚಿಸಿ,,, ಅಂತ ಪ್ರಶ್ನೆ ಕೇಳಿರುತಾರೆ.....
ಒಟ್ನಲ್ಲಿ ಇವರ ಜೊತೆ ಇರೋವಾಗ ಟೈಮ್ ಹೋಗೋದೇ ಗೊತ್ತಾಗೊಲ್ಲ.. ಅಂತು ನಿಮಗೆ ಒಂದು ಒಳ್ಳೆ ಕಂಪನಿ ಸಿಕ್ಕ ಹಾಗೆ ಇದೆ.... enjoye ಮಾಡಿ.......
ಗುರು
ಮಲ್ಲಿಕಾರ್ಜುನ್,
ಚಟ್ ಪಟ್ ಅಂತ ಸಿಡಿಯುವ ಮಕ್ಕಳು ನಮ್ಮ ಓಣಿಯಲ್ಲಿ ಮಾತ್ರವಲ್ಲ ಎಲ್ಲಾ ಕಡೆಯೂ ಇದ್ದಾರೆ. ಅವರ ಜೊತೆ ಸಮಯ ಕಳೆದರೆ ಸಾಕು ಅವು ಸಿಡಿಯುವುದು ಗೊತ್ತಾಗುತ್ತದೆ...ಮತ್ತೆ ನಾನು ಇಲ್ಲಿ ವಿಶೇಷವಾಗಿ ಏನನ್ನು ಬರೆದಿಲ್ಲ. ಅದರ ಅವಶ್ಯಕತೆಯೂ ಬೇಕಿಲ್ಲವೆನಿಸುತ್ತೆ. ಸುಮ್ಮನೆ ಅವರಾಡುವ ಮಾತುಗಳನ್ನು ದಾಖಲಿಸಿಕೊಂಡು ಹೋಗಿದ್ದೇನೆ ಆಷ್ಟೇ. ಬರವಣಿಗೆಯೂ ಚಿತ್ರಗಳ ಹಾಗೆ ಕಾಣುವುದಕ್ಕೆ ಕಾರಣ ನನ್ನ ಕ್ಯಾಮೆರಾ ದೃಷ್ಟಿಕೋನವಿರಬಹುದು...
ಲೇಖನ ಮೆಚ್ಚಿದ್ದಕ್ಕೆ ಧನ್ಯವಾದಗಳು.
ಗುರು,
ಮಕ್ಕಳ ಬಗೆಗಿನ ನಿಮ್ಮ ಅಭಿಪ್ರಾಯ ಸರಿಯಾಗಿದೆ. ಅವರು ಜೊತೆ ಇದ್ದಾಗ ಸಮಯ ಹೋಗುವುದು ಗೊತ್ತಾಗೋದೆ ಇಲ್ಲ. ಅವರ ಜೊತೆ ನಾವು ಮಕ್ಕಳಾಗುವ ಆನಂದವೇ ಬೇರೆ. ನೀವು ಅದನ್ನು ಅನುಭವಿಸಿದ್ದೀರಿ...ಇನ್ನಷ್ಟು ಸಮಯ ಕಳೆಯಿರಿ. ಮಜಾ ಮಾಡಿ...ಸಾಧ್ಯವಾದರೆ ಅವುಗಳನ್ನು ಬ್ಲಾಗಿನಲ್ಲಿ ಬರೆಯಿರಿ...
ಧನ್ಯವಾದಗಳು.
ನಮ್ಮ ಓಣಿಯ ಮಕ್ಕಳು ಮಾತ್ರವಲ್ಲ ನಿಮ್ಮ ಓಣಿಯ ಮಕ್ಕಳು ಹೀಗೇನೇ. ನೀವು ಗಮನಿಸಬೇಕಷ್ಟೆ ಎನ್ನುವ ನಿಮ್ಮ ಮಾತು ನೂರಕ್ಕೆ ನೂರರಷ್ಟು ಸರಿ. ನಾನೂ ಇದನ್ನು ಗಮನಿಸಿದ್ದೇನೆ. ಆದರೆ ಇಂಥಹುದನ್ನೆಲ್ಲಾ ಇಷ್ಟೊಂದು ಸೊಗಸಾಗಿ ಬ್ಲಾಗಿಸಬಹುದೆಂದು ನನಗೆ ತೋಚಿರಲಿಲ್ಲ. ಅವನ್ನು ಅನುಭವಿಸಿ, ಮತ್ತೆ ಸಂದರ್ಭ ಬಂದಾಗ ನೆನಪು ಮಾಡಿಕೊಂಡು ಎಂಜಾಯ್ ಮಾಡುತ್ತಿರುತ್ಥೇನೆ, ಅಷ್ಟೆ. ಜೊತೆಗೆ ಒಂದೆರಡಾದರೂ ಫೋಟೋ ಇರಬೇಕಿತ್ತು ಶಿವು.
Shivu,
makkalondige neevu beretheerendaadare khushiyaagirtheeri.
any way makkaLa nirmala preethi nimmondigirali.
With regards
Preethi
ಸತ್ಯನಾರಾಯಣ ಸರ್,
ಮಕ್ಕಳ ಲೇಖನ ಮೆಚ್ಚಿದ್ದಕ್ಕೆ ಧನ್ಯವಾದಗಳು...ನೀವು ಇದನ್ನು enjoy ಮಾಡಿ. ಇದನ್ನು ಬರೆಯೋದು ತುಂಬಾ ಸುಲಭ ಸರ್. ನೀವೇನು ವಿಶೇಷ ಪ್ರಯತ್ನ ಮಾಡದೇ ನಿಮ್ಮದೇ ಶೈಲಿಯಲ್ಲಿ[ಹೈಸ್ಕೂಲ್ ದಿನಗಳು ಲೇಖನಗಳ ಹಾಗೆ]ಬರೆದರೂ ತುಂಬಾ ಚೆನ್ನಾಗಿರುತ್ತೆ ಸರ್. ಪ್ರಯತ್ನಿಸಿ...
ಮತ್ತೆ ಇಲ್ಲಿ ಮತ್ತೊಂದು ವಿಚಾರ. ನೀವು ಈ ಲೇಖನಕ್ಕೆ ಫೋಟೋ ಬೇಕೆಂದು ಬಯಸಿದ್ದೀರಿ..ನನಗೂ ಫೋಟೋ ಹಾಕಬೇಕೆಂದು ಇಷ್ಟ. ಆದರೆ ಈ ವಿಚಾರದಲ್ಲಿ ಈ ಮಕ್ಕಳ ಜೊತೆ ನಾನು ಸೋತಿದ್ದೇನೆ...ನಾನು ಅವರಿಗೆ ಪರಿಚಯವಾಗಿರುವುದೋ ಫೋಟೋಗ್ರಾಫರ್ ಆಗಿ. ನಾನು ಯಾವಾಗ ಕ್ಯಾಮೆರಾ ಕೈಯಲ್ಲಿಡಿದರೂ ಅವರು ಅಲರ್ಟ್ ಆಗಿ ಫೋಸ್ ಕೊಡಲು ಸಿದ್ಧವಾಗಿಬಿಡುತ್ತಿದ್ದರು. ಆಗ ಆ ಫೋಟೋಗಳು ಸಹಜವಾಗಿರದೇ ಮದುವೆ ರಿಸೆಪ್ಷನ್ ಫೋಟೋಗಳಾಗಿಬಿಡುತ್ತಿದ್ದವು. ಎಂದಿನಂತೆ ನನಗೆ ಅವರ ಸಹಜ ಆಟ ಪಾಟದ ಮಾತುಕತೆಗಳ ಭಾವನೆಗಳ ಫೋಟೋ ಬೇಕಿದ್ದರೂ ಕ್ಲಿಕ್ಕಿಸಲಾಗಲಿಲ್ಲ...ಅದ್ದರಿಂದ ಈ ಲೇಖನ ಫೋಟೋ ಇಲ್ಲದ ಲೇಖನವಾಗಿದೆ...
ಧನ್ಯವಾದಗಳು.
ಪ್ರೀತಿ ಮೇಡಮ್,
ನನ್ನ ಬ್ಲಾಗಿಗೆ ಸ್ವಾಗತ. ಮಕ್ಕಳೊಂದಿಗೆ ನಿಜಕ್ಕೂ ಆನಂದವಿರುತ್ತದೆ..ಮತ್ತು ನಿಮ್ಮ ಮಾತಿನಂತೆ ನಿರ್ಮಲವಾಗಿರುತ್ತದೆ....ಅದನ್ನು ನಿಮ್ಮೊಂದಿಗೆ ಹಂಚಿಕೊಳ್ಳುತ್ತಿದ್ದೇನೆ....ಹೀಗೆ ಬರುತ್ತಿರಿ
ಧನ್ಯವಾದಗಳು
Sir, tumba sakathagidi..
ಶಿವೂ ಲೇಖನ ಚನ್ನಾಗಿದೆ.. ಮತ್ತೆ ನಂದೊಂದು ಸ್ಕೂಟಿ ಮಾರಾಟಕ್ಕಿದೆ.. ಮಾರೋ ಮೊದಲು ಸೆಂಟರ್ ಸ್ಟ್ಯಾಂಡ್ ತೆಗೆಡಿದಲಾ ?
ಚೆನ್ನಾಗಿದೆ... ಮಕ್ಕಳ ಜೊತೆ ಮಾತಾಡೋದೇ ಕಷ್ಟ.. ಮತ್ತು ಅದು ತುಂಬಾ ಇಷ್ಟ.. :-)
ಶಿವು,
ನೀವು ಏನೇನಲ್ಲ enjoy ಮಾಡುತ್ತೀರಲ್ಲ! ಮಕ್ಕಳೊಂದಿಗೆ ಆಟವಾಡುತ್ತ ಅವರೊಂದಿಗೆ ಸಂಭಾಷಿಸುತ್ತ ಮಗುವಾಗುವ ನೀವು ನಿಜಕ್ಕೂ creative! ಆ ಗುಣ ಎಲ್ಲರಿಗೂ ಬರೊಲ್ಲ. ಅವರ ಮಾತುಕತೆಯನ್ನು ಬರಹದಲ್ಲಿ ವ್ಯಕ್ತಪಡಿಸಿ ನಮ್ಮನ್ನೂ ಅದರಲ್ಲಿ involve ಮಾಡಿದ್ದಕ್ಕೆ ತುಂಬಾ thanks.
ಸರ್, ಇವರೆಲ್ಲಾ ಈಗಿನ ಅಂದರೆ ಇಂದಿನ ತಲೆಮಾರಿನ ಮಕ್ಕಳು. ೨೦ರ ಕೊನೆಯ ೨೧ರ ಆದಿಯ (ಶತಮಾನ) ಮಕ್ಕಳು. ಅವು ಅಷ್ಟು ಚುರುಕು. ಕೆಲವೊಮ್ಮೆ ಇವರ ಮಾತುಗಳು ಖುಷಿಕೊಟ್ಟರೂ, ಮಗದೊಮ್ಮೆ ಇವರ ಈ ನಡವಳಿಕೆಗಳಿಂದ ಏನು ತೊಂದರೆಯಾದೀತೋ ಎಂಬ ಆತಂಕವೂ ಪೋಷಕರಲ್ಲಿ ಮನೆಮಾಡಿರುತ್ತದೆ.
ಲೇಖನ ಚುರುಕಾಗಿದೆ. ಧನ್ಯವಾದಗಳು.
ಸಂತೋಷ್ ಚಿದಂಬರಂ,
ಧನ್ಯವಾದಗಳು.
ಶಮ ಮೇಡಮ್,
ಲೇಖನ ಮೆಚ್ಚಿದ್ದಕ್ಕೆ ಧನ್ಯವಾದಗಳು...ಮತ್ತೆ ನಿಮ್ಮ ಸ್ಕೂಟಿ ೨೦೦೩ ಇಸವಿಯದು ಆಗಿದ್ದರೆ ಸೆಂಟರ್ ಮತ್ತು ಸೈಡ್ ಸ್ಟ್ಯಾಂಡ್ ಎರಡು ನನಗೆ ಬೇಕಿದೆ..ತೆಗೆದಿಡಿ...
ಧನ್ಯವಾದಗಳು
ರವಿಕಾಂತ್ ಗೋರೆ ಸರ್,
ಮಕ್ಕಳ ಜೊತೆ ಮಾತಾಡೋದು ನಿಜಕ್ಕೂ ಕಷ್ಟವಲ್ಲ...ಅದಕ್ಕಿಂತ ಸುಲಭವಾದ್ದದ್ದು ಮತ್ತೊಂದಿಲ್ಲ..ನೀವು ಮತ್ತೊಮ್ಮೆ ಪ್ರಯತ್ನಿಸಿ...
ಧನ್ಯವಾದಗಳೂ.
ಉದಯ್ ಸರ್,
ಲೇಖನವನ್ನು ಮೆಚ್ಚಿದ್ದಕ್ಕೆ ಅದರ ಅನುಭವವನ್ನು ನೀವು feel ಮಾಡಿದ್ದಕ್ಕೆ ಧನ್ಯವಾದಗಳು. ಅದೇನೋ ಗೊತ್ತಿಲ್ಲ ಸರ್, ಎಲ್ಲಾ ಕಡೆ ಮಜಾ ಮಾಡಬೇಕೆನಿಸುತ್ತೆ...ಆಹಾಂ! ಇವತ್ತು ಬೆಳಿಗ್ಗೆ ಟಿಫನ್ ಮಾಡುವಾಗ ಆಡುಗೆಯ ಬಗ್ಗೆ ಒಂದು ಹೊಸ ಕಾನ್ಸೆಪ್ಟ್ ಬಂತು ಅದರ ಒಂದು ಪ್ಯಾರ ಬರೆದಿದ್ದೀನಿ...[ನಾನೇನು ಆಡುಗೆ ಮಾಡೋಲ್ಲ]ನಂತರ ಅದನ್ನು ಮುಂದುವರಿಸಿಕೊಂಡು ಹೋಗಬೇಕಿದೆ..ನೋಡಬೇಕು ಏನು ಅನುಭವವಾಗುತ್ತೋ ಅಂತ...
ಧನ್ಯವಾದಗಳು.
ಕ್ಷಣ ಚಿಂತನೆ ಸರ್,
ಈಗಿನ ಮಕ್ಕಳ ಬಗ್ಗೆ ನಿಮ್ಮ ಅಭಿಪ್ರಾಯ ಸರಿ...ನನಗೂ ಸ್ಪೇರ್ಸ್ ಅಂಗಡಿಯವನ ಬಳಿ ಅಮಿತ್ ಮಾತಾಡಿದಾಗ ಭಯವಾಗಿತ್ತು...
ಧನ್ಯವಾದಗಳು.
ತುಂಬಾ ಚೆನ್ನಾಗಿದೆ ಲೇಖನ!! ಮಕ್ಕಳ ಜೊತೆಗಿದ್ದರೆ ಹೊತ್ತು ಕಳೆಯುವುದೇ ತಿಳಿಯೊಲ್ಲ. ಚಟ್ ಪಟ್ ಅಂತ ಅರಳು ಹುರಿದಂತೆ ಮಾತಾಡುವ ಮಕ್ಕಳ ಮಾತು ಬಲು ಚಂದ.
ನನ್ನ ಮಗಳೊಂದಿಗೆ ಆಟವಾಡಲು ಕೆಳಗಿನ ಮನೆಯ ೨ ವರುಷದ ’ಜೆಸ್ಸಿ’ ಬರ್ತಾಳೆ. ಮರದ ಮೇಲೆ ಕುಳಿತ ಹಕ್ಕಿಯನ್ನ ನೋಡಿ ಹೇಳ್ತಾಳೆ "birdiee get off the tree NOW or you will fall" ಅಂತ:)
ಕಿರಣ್ ಸರ್,
ನನ್ನ ಬ್ಲಾಗಿಗೆ ಸ್ವಾಗತ. ಈ ಮಕ್ಕಳ ಲೇಖನ ಓದುತ್ತಾ ನಿಮ್ಮ ಮಗಳ ಜೊತೆಗಿನ ಮತ್ತು ಆಕೆಯ ಗೆಳತಿ "ಜೆಸ್ಸಿ" ವಿಚಾರಗಳನ್ನು ಹಂಚಿಕೊಂಡಿದ್ದೀರಿ...ಹೀಗೆ ಬರುತ್ತಿರಿ. ಧನ್ಯವಾದಗಳು
ತು೦ಬಾ ಖುಷಿಯಾಯಿತು ಶಿವಣ್ಣ... ಬೋರ್ ಆಗಲಿಲ್ಲ...
ಈಗಿನ ಮಕ್ಕಳು ಚಿನಕುರುಳಿಯ೦ತೆ ಮಾತನಾಡುತ್ತಿದ್ದರೆ ಅದನ್ನು ಕೇಳುವುದೇ ಒ೦ದು ಖುಷಿ.
Namaskara Shivu,
baraha chennagide :)
makalu ida kadde galate, tuntatta abba thale kedisutare....
nivu helidu sari yella onniya makalu higene, nanu namma area ge
"SANTHANA LAKSHMI " area anta karithini sikapatte tuntaru idare :)
hige bareuthiri :)
ಸುಧೇಶ್,
ಲೇಖನ ಬೋರ್ ಆಗಿಲ್ಲವೆಂದಿರಿ. ಧನ್ಯವಾದಗಳು...
ಹೀಗೆ ಬರುತ್ತಿರಿ..
ವೀಣಾ ಮೇಡಮ್,
ಮಕ್ಕಳ ಲೇಖನವನ್ನು ಮೆಚ್ಚಿದ್ದಕ್ಕೆ ಥ್ಯಾಂಕ್ಸ್...ನಿಮ್ಮ ಸಂತಾನಲಕ್ಷ್ಮಿ ಓಣಿ, ಅಲ್ಲಿನ ಮಕ್ಕಳ ಬಗ್ಗೆ ಬರೆಯಿರಿ...ಓದಲು ನಾನಿದ್ದೇನೆ...
ಹೀಗೆ ಬರುತ್ತಿರಿ.... ಮತ್ತೊಮ್ಮೆ ಧನ್ಯವಾದಗಳು
ಶಿವೂ ಸರ್,
ತಡವಾಗಿ ಬಂದಿದ್ದಕ್ಕೆ ಕ್ಷಮೆ ಇರಲಿ, ಕಾರಣ ನಿಮಗೆ ಹೇಳಿದ್ದೇನೆ. ತುಂಬಾ ಮುದ ನೀಡುವ ಬರಹ, ಭಾಷೆಯ ಅಳಿವು ಉಳಿವು ನಮ್ಮಿಂದಲೇ ಸಾದ್ಯ, ಚಿಂತನೆಗೆ ನಿಮ್ಮ ಬರಹ ದಾರಿ ಮಾಡಿಕೊಟ್ಟಿದೆ.
ಹೌದು ಶಿವಣ್ಣ.. ಜೀವನದ ಬಹು ಮುಖ್ಯ ಪಾಠಗಳ್ಳನ್ನ ನಮ್ಮ ಪುಟ್ಟಾಣಿಗಳಿಂದಲೇ ಕಲಿಯಬಹುದು... ಲೇಖನ ತುಂಬ ಚೆನ್ನಾಗಿದೆ..
ಗುರುಮೂರ್ತಿ ಹೆಗಡೆ ಸರ್,
ನೀವು ತಡವಾಗಿ ಬಂದಿದ್ದಕ್ಕೆ ಬೇಸರವಿಲ್ಲ...ನಿಮ್ಮ ಹೊಸ ಇತ್ತೀಚಿನ ಹೊಸ ಪ್ರವಾಸದ ಲೇಖನವನ್ನು ನಾನು ನಿರೀಕ್ಷಿಸುತ್ತಿದ್ದೇನೆ....ಲೇಖನ ಮೆಚ್ಚಿದ್ದಕ್ಕೆ ಮತ್ತು ಭಾಷೆಯ ಬಗ್ಗೆ ನಿಮ್ಮ ಕಾಳಜಿಗೆ ಧನ್ಯವಾದಗಳು..
ನವೀನ್,
ನಿಮ್ಮ ಮಾತು ನಿಜ ಮಕ್ಕಳು ಒಂದು ದೊಡ್ಡ ಕುತೂಹಲದ ಸಂತೆಯಂತೆ. ಅವರಿಂದ ಕಲಿಯುವುದು ತುಂಬಾ ಇದೆ...ಧನ್ಯವಾದಗಳು.
ಶಿವು ಅವರೆ,
ಮಕ್ಕಳ ಜೊತೆಗಿದ್ದರೆ ಹೊತ್ತು ಕಳೆಯುವುದೇ ತಿಳಿಯೊಲ್ಲ... ನಮ್ಮೆಲ್ಲಾ ಚಿಂತೆ, tension ಮರೆಯುವಂತೆ ಮಾಡ್ತಾರೆ!!
ಲೇಖನ ಓದಿ ಖುಶಿ ಆಯ್ತು...
ರೂಪ,
ಮಕ್ಕಳ ಬಗೆಗಿನ ಲೇಖನ ಮೆಚ್ಚಿದ್ದಕ್ಕೆ ಧನ್ಯವಾದಗಳು ಹೀಗೆ ಬರುತ್ತಿರಿ ಧನ್ಯವಾದಗಳು.
ತು೦ಬಾ ಚೆನ್ನಾಗಿದೆ ನಿಮ್ಮ ಅನುಭವಗಳು. ಹ೦ಚಿಕೊ೦ಡದ್ದಕ್ಕೆ ಧನ್ಯವಾದಗಳು. ಮಕ್ಕಳೇ ಹಾಗೆ. ಒತ್ತಡ ನಿವಾರಕರು :)
ವಿನುತಾ,
ಮಕ್ಕಳ ಬಗೆಗಿನ ಲೇಖನ ಓದುತ್ತಾ...ಹೊಸದಾದ "ಒತ್ತಡ ನಿವಾರಕರು" ಶೀರ್ಷಿಕೆ ಕೊಟ್ಟಿದ್ದೀರಿ...ತುಂಬಾ ಚೆನ್ನಾಗಿದೆ...ಧನ್ಯವಾದಗಳು.
ಮಕ್ಕಳ ಮಾತು ಕೇಳೋಕೆ ಚೆನ್ನಾಗಿರುತ್ತವೆ. ಅದಕ್ಕೆ ಅಲ್ವಾ ನಾನು ಶಿಶುವಾಣಿ ಬರೆಯುತ್ತಾಯಿರುತ್ತೇನೆ.
ಶಿವು... ಬಹಳ ದಿನ ಆದ್ಬೇಲೆ ಬ್ಲಾಗ್ ಕಡೆ ಬಂದೆ.. ಮಕ್ಕಳ ಮಾತು ಎಷ್ಟು ಚೆನ್ನಾಗಿರುತ್ತೆ ಅಲ್ವಾ?
ಶಿವು
ನಿಮ್ಮ ಲೇಖನ ಓದಿ..
ನನಗೊಂದು ಜಾನಪದ ಹಾಡು ನೆನಪಾಗುತ್ತಿದೆ..
"ಕೂಸು ಇದ್ದ ಮನೆಗೆ ಬೀಸಣಿಕೆ ಯಾತಕ...?
ಕೂಸು ಕಂದಯ್ಯ ಒಳ ಹೊರಗ ಆಡಿದರ...
ಬೀಸಣಿಕೆ ಗಾಳಿ ಸುಳಿದಾವ.."
ಮಕ್ಕಳ ಸಂಗಡ ನಿಮ್ಮ ಅನುಭವಗಳು....
ಸುಂದರ ಶೈಲಿಯಲ್ಲಿ..
ಚಂದವಾಗಿ ಮೂಡಿ ಬಂದಿದೆ..
ನಿಮ್ಮ ಫೋಟೊಗಳ ಥರಹ...
ಅಭಿನಂದನೆಗಳು...
shivu
thumba sogassgide lekhana.makkala jothe mathu..oh adu yentha relax anthiya?magala jothe 10 nimishada maathu idee dinada shrama maya!
adbuthavaada lekha.inthade innu bare.
srujan
ಜಯಶಂಕರ್,
ನಿಮ್ಮ ಶಿಶುವಾಣಿ ನನಗಿಷ್ಟ. ನಿಮ್ಮಷ್ಟು ಮಕ್ಕಳ ಬಗ್ಗೆ ಬರೆಯದಿದ್ದರೂ ಅಪರೂಪಕ್ಕೊಮ್ಮೆ ಬರೆಯುತ್ತೇನೆ...
ಧನ್ಯವಾದಗಳು.
ಹರೀಶ್,
ನೀವು ನಿತ್ಯ ಆನ್ಲೈನ್ನಲ್ಲಿದ್ದರೂ ನೀವೆಷ್ಟು ಬ್ಯುಸಿ ಅಂತ ನನಗೆ ಗೊತ್ತು. ನೀವು ನನ್ನ ಬ್ಲಾಗನ್ನು ನಿತ್ಯ ನೋಡುತ್ತೀರಿ ಅನ್ನೋದು ಗೊತ್ತು. ಬಿಡುವು ಮಾಡಿಕೊಂಡು ಕಾಮೆಂಟಿಸಿದ್ದೀರಲ್ಲ...ಅದಕ್ಕೆ ಥ್ಯಾಂಕ್ಸ್...
ಹೀಗೆ ನಿಮಗೆ ಬಿಡುವಾಗುತ್ತಿರಲಿ....
ಪ್ರಕಾಶ್ ಸರ್,
ಜಾನಪದ ಹಾಡು ನೆನಪಿಸಿದ್ದಕ್ಕೆ ಮತ್ತು ಲೇಖನವನ್ನು ಮೆಚ್ಚಿದ್ದಕ್ಕೆ ಥ್ಯಾಂಕ್ಸ್.
ಸೃಜನ್,
ಕೊನೆಗೂ ಮಾತಿಗೆ ಸಿಕ್ಕಿದ್ದಿರಲ್ಲ...ವಸುಧೇಂದ್ರ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಸಿಕ್ಕವರು. ನಿಮ್ಮ ಪೆಪ್ಪರ್ಮೆಂಟ್ ಸಿಹಿಯಾಗಿದೆ...ಮಗಳ ಜೊತೆಯಾಟವನ್ನು ಪೆಪ್ಪರ್ಮೆಂಟ್ನಲ್ಲಿ ಬರೆಯಿರಿ....ನಾನಂತೂ ಓದಲು ಬರುತ್ತೇನೆ....
ಲೇಖನ ಮೆಚ್ಚಿದ್ದಕ್ಕೆ ಥ್ಯಾಂಕ್ಸ್....ಹೀಗೆ ಬರುತ್ತಿರಿ...
ಹ್ಹ ಹ್ಹ . . ಶಿವು ಸರ್,
ಈಗಿನ ಮಕ್ಕಳು ತುಂಬಾ ಚೂಟಿ... ಹಾಗೆಯೇ ತುಂಬಾ ಬುದ್ಧಿವಂತರೂ ಕೂಡ ಇರ್ತಾರೆ.. ನನ್ನ ಸಹೋದರಿಯ, ನಾಲ್ಕು ವರ್ಷದ ಮಗಳಿಗೆ "ಚಪಾತಿ, ಎರಡು ತರದ ಪಲ್ಯ ಮಾಡೋಕೆ ಕಲಿತುಕೊಳ್ಳೆ.. ನಿನ್ನೇ ಮದ್ವೆ ಆಗ್ತೀನಿ" ಅಂದ್ರೆ, " ನಾನು ಚಪಾತಿ ಮಾತ್ರ ಮಾಡಿ ಕೊಡ್ತೀನಿ, ಪಲ್ಯ ಬೇಕಿದ್ರೆ ನೀನೆ ಮಾಡ್ಕೋಬೇಕು" ಅಂತಾಳೆ.. ಕೆಲವು ಸಾರಿ ಅವರ ಅತಿಯಾದ ಬುದ್ಧಿವಂತಿಕೆ ನಮಗೆ ಭಯವನ್ನೂ ತರಿಸುತ್ತೆ.. ಎಲ್ಲಿ ನಮ್ಮ ನಿಯಂತ್ರಣ ತಪ್ಪಿ ಹೊಗ್ತಾರೋ ಅಂತ..
ಹಾಂ, ಅಮಿತ್ ನ ಬಾಯಲ್ಲಿ.. ಮೈಸೂರು ಅಚ್ಚ ಕನ್ನಡ , ಮಂಗಳೂರು ಸ್ವಚ್ಛ ಕನ್ನಡದ ಜೊತೆ, ನಮ್ಮ ಧಾರವಾಡದ ಗಂಡು ಕನ್ನಡನೂ ಇರಬೇಕಿತ್ತು ಅನ್ನಿಸ್ತು.. :).. ಸುಮ್ನೇ ತಮಾಷೆಗೆ..
ಎಂದಿನ ಚಂದದ ಬರಹಕ್ಕೆ ಅಭಿನಂದನೆಗಳು.
-ಉಮೀ
ಒಹ್ ಓಣಿ ಮಕ್ಕಳ ಸಂಭಾಷಣೆ ತುಣುಕುಗಳು ಬಹಳ ಚೆನ್ನಾಗಿವೆ, ನಮ್ಮನೆ ಹತ್ರನೂ ಮಕ್ಕಳಿವೆ, "ನಾನು ದಾಸ, ಮಚ್ಚು ನೊಡೀದೀಯ ತಾನೆ" ಅಂತ ಹೆದರಿಸ್ತಾವೆ, ಅವರ ಕ್ಲಾಸಿನ ಹುಡುಗಿ "ಡವ್!!" ಅಂತೆ ಅದೆಲ್ಲ ಕೇಳಲೇಬೇಡಿ... ಕೆಟ್ಟು ಕುಲಗೆಟ್ಟೂ ಹೋಗಿವೆ.. ಇನ್ನು ಕೆಲ ಪುಟಾಣಿಗಳಿವೆ "ಅಂಕಲ ನಿಮ್ಮ ಅಂಟಿ ಎಲ್ಲಿ" ಅಂತವೆ... ಊರಲ್ಲಿ ಅಂದ್ರೆ.. ನಿಮ್ದೂ ಪಾಪು ಇದೇನಾ ಅಂತ ಕೇಳ್ತವೇ ಅವುಗಳ ಮುಗ್ಧತೆಗೆ ಏನು ಹೇಳಲಿ...
ಉಮೇಶ್ ಸರ್,
ನಿಮ್ಮ ಮಾತು ನಿಜ....ಅವರ ಮಾತುಗಳು ಕೆಲವೊಮ್ಮೆ ನಮಗೆ ಉತ್ತರಿಸಲಾಗದಷ್ಟು ತಬ್ಬಿಬ್ಬುಗೊಳಿಸುತ್ತವೆ...
ಅಮಿತ್ ಬಾಯಲ್ಲಿ ಬಂದಿದ್ದನ್ನು ನೇರವಾಗಿ ಬರೆದಿದ್ದೇನೆ...ಅವನು ಧಾರವಾಡದ ಕನ್ನಡದ ಬಗ್ಗೆ ಮಾತಾಡಾಲಿಲ್ಲ...
ಹೀಗೆ ಬರುತ್ತಿರಿ...ಧನ್ಯವಾದಗಳು.
ಪ್ರಭು,
ನಿಮ್ಮ ಓಣಿಯ ಮಕ್ಕಳು ಮಾಸ್ ಶೈಲಿಯ ಸಿನಿಮಾ ಪ್ರಭಾವದಿಂದಾಗಿ ಹಾಗೆ ಮಾತಾಡುತ್ತಿರಬಹುದು...
ಲೇಖನ ಮೆಚ್ಚಿದ್ದಕ್ಕೆ ಧನ್ಯವಾದಗಳು...ಹೀಗೆ ಬರುತ್ತಿರಿ...ಧನ್ಯವಾದಗಳು.
Shivu avare,
Nimma article chennagi baridhidheera. Aadhare, swalpa art Photography goo othu kodi. Namappanige helthini, nalli yella, Candid shots aagidhe. Nimma photography shyli allilla. Baraha Chennagidhe.
Satish
ಸತೀಶ್ ಸರ್,
ನೀವು ನನ್ನ ಬ್ಲಾಗಿಗೆ ಬಂದು ನನ್ನ ಲೇಖನವನ್ನು ಓದಿ ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು....ನಿಮ್ಮ ಸಲಹೆಯನ್ನು ಮುಂದಿನ ಲೇಖನಗಳಲ್ಲಿ ಆಳವಡಿಸಿಕೊಳ್ಳಲು ಪ್ರಯತ್ನಿಸುತ್ತೇನೆ...
ಧನ್ಯವಾದಗಳು...
Post a Comment