ದೋಸೆ ತೆಳ್ಳಗಿದ್ದು...ಚೆನ್ನಾಗಿದ್ದರೂ....ಮೂರನೆಯದು ಬೇಡವಾಗಿತ್ತು.
"ಯಾಕ್ರೀ ಇತ್ತೀಚೆಗೆ ಸರಿಯಾಗಿ ಏನು ತಿಂತಾಯಿಲ್ಲಾ?.......,
ಬೇಡ ಮರಿ........,ಡಯಟ್ಟು....ಸ್ಲಿಮ್ಮು.....
ಹ್ಯಾಂಡ್ಸಮ್ಮಾಗಿ.......ಹೆಣ್ಣು ನೋಡಲಿಕ್ಕೆ ಹೋಗಬೇಕೇನ್ರಿ.......
ಆಗಲ್ಲ ಕಣೋ....ಮೊನ್ನೆ ರಾತ್ರಿ ಮದುವೆ ಊಟ.........
ಅದು ಚೆನ್ನಾಗಿತ್ತಲ್ರೀ.................
"ಅದು ಇವತ್ತು ಬೆಳಿಗ್ಗೆ ಕ್ಲಿಯರ್ ಆಯ್ತು.........."
"ನಿನ್ನೆ ತಿಂದಿದ್ದು ಇನ್ನೂ ಹೊಟ್ಟೆಯಲ್ಲಿದೆ."
ಮೂರನೆ ದೋಸೆ ಇನ್ನು ಅವಳ ಕೈಯಲ್ಲೇ ಇದೆ........"ಅದಕ್ಕೇನೀಗ.........."
ಮೂರನೇ....ದೋಸೆಗೆ......ಜಾಗವಿಲ್ಲ........
ಹೇಮಾಶ್ರೀ ಮೌನವಾಗಿ ನನ್ನ ಮುಖವನ್ನೇ ನೋಡಿದಳು.....
"ಅವರವರ ಕರ್ಮಕ್ಕೆ ಅವರವರೇ ಹೊಣೆ..".
ಅಂದಳು. ಆಡುಗೆ ಮನೆಕಡೆಗೆ ಹೊರಟಳು....ನಾನು ಕೈ ತೊಳೆದಿದ್ದೆ.
"ಹಳೇ ಪಾತ್ರೇ......ಹಳೇ ಕಬ್ಬಿಣಾ...... ಹಳೇ ಪೇಪರ್.......ತನ್ ಹೋಯಿ....."
ಹೇಮಾಶ್ರಿ ಹಾಡು ಗುನುಗುತ್ತಿದ್ದಾಳೆ ಆಡುಗೆ ಮನೆಯಲ್ಲಿ.
ಇದೊಂದನ್ನೇ ಬೆಳಿಗ್ಗೆಯಿಂದಾ ಗುನುಗುತ್ತಿದ್ದಾಳೆ.
ನನಗಂತೂ ಅಚ್ಚರಿ!...ಅವಳ ಹಾಡು ಅದಲ್ಲ......
ನಿಜಕ್ಕೂ ಅವಳು ಪ್ರತಿದಿನ ಭಕ್ತಿ ಭಾವದಿಂದ
ಅವಳಿಷ್ಟದ ಭಜನೆ "ಬಾಲಗೋಪಾಲ" ಗುನುಗುತ್ತಿದ್ದಳು.
ಮತ್ತೆ ಮತ್ತೆ "ಹಳೆ ಪಾತ್ರೆ.....ಹಳೆ ಕಬ್ಬಿಣಾ.......".
ಇದ್ಯಾಕೋ ಅತಿ ಅನ್ನಿಸಿತು... ನನಗೂ ರೇಗಿತ್ತು.
ಇಷ್ಟು ಬೇಗ ಅವಳ ಅಭಿರುಚಿ ಬದಲಾಗಿಹೋಯಿತಾ ?......
"ತತ್...ಬೆಳಿಗ್ಗೆಯಿಂದ ಅದೆಂಥ ಹಾಡದು ? "
"ಆ ಹಾಡಿನ ಮೇಲೆಂತ ಆಕರ್ಷಣೆಯೇ ನಿಂದು ? "
"ನಿಮಗೆ ಭೂಪಟದ ಮೇಲೇಕೆ ಆಷ್ಟು ಆಕರ್ಷಣೆ ?"
ನನ್ನ ಮಾತು ನನಗೆ ತಿರುಗುಬಾಣವಾಗಿತ್ತು.
ಭೂಪಟಗಳ ಪ್ರಭಾವ ಪಲಿತಾಂಶ...ಈ ರೀತಿ ನಮ್ಮ ಮನೆಯಲ್ಲಿ.
ಭೂಫಟದ ಖಯಾಲಿಯಿಂದಾಗಿ ನಮ್ಮ ಮನೆಯ ಟೆರಸ್ಸಿನ ಮೇಲೆ ಹೋಗಿ ಕ್ಯಾಮೆರಾ ಹಿಡಿದಾಗ ಅಲ್ಪಸ್ವಲ್ಪ ಸಿಕ್ಕವು. ಸಮಾಧಾನವಾಗಲಿಲ್ಲ... ಕೊನೆಗೆ ಫೋಟೊಗ್ರಫಿ ವಿಚಾರದಲ್ಲಿ ಕೇಳಿದ್ದನು ಕೊಡುವ ನನ್ನ ಅಚ್ಚುಮೆಚ್ಚಿನ ಮಲ್ಲೇಶ್ವರಂ ರೈಲ್ವೇ ನಿಲ್ದಾಣದ ಸೇತುವೆ ಮೇಲೆ ನಿಂತೆ.
ಮೊಬೈಲ್ ರಿಂಗಾಯಿತು. ವಿಂಧ್ಯಾಳ ಫೋನು...."ಹಲೋ ಹೇಳು ಮರಿ.............."
"ಏನ್ ಮಾಡ್ತಿದ್ದೀರಿ....."
"ಚಲಿಸುವ ಭೂಪಟಗಳ ಹಿಂದೆ ಬಿದ್ದಿದ್ದೇನೆ........."
"ಎಲ್ಲಿ....ಹೇಗೆ.....ಇಂಥ ಜಾಗದಲ್ಲಿ....ಹೀಗೀಗೆ........"
"ನಿನಗೆ ಈ ಹುಚ್ಚು ಯಾವಾಗ ಬಿಡುತ್ತೆ ?............"
"ಪ್ರಪಂಚದಲ್ಲಿ ನಡೆದಾಡುವ ಭೂಪಟಗಳು ಇಲ್ಲವಾದಾಗ!!. "
"ಅದು ಆಸಾಧ್ಯ.!! "
"ಈ ಖಯಾಲಿಯೂ ಕೂಡ. "
"ಸುಂದರ ಹುಡುಗಿಯರು ಓಡಾಡುತ್ತಾರೆ ಇಲ್ಲಿ..." ಮಾತು ಬದಲಿಸಿದೆ.
"ಹೌದಾ !! ಹೇಮಾಶ್ರೀ ಫೋನ್ ನಂಬರ್ ಕೊಡಿಲ್ಲಿ........."
"ಉಪಯೋಗವಿಲ್ಲ.....ಅವಳೇ ಕಳುಹಿಸಿದ್ದಾಳೆ. ನನ್ನ ಕಾಟ ತಡೆಯಲಾಗದೆ. "
ಆ ಕಡೆಯಿಂದ ಮೌನ...ಸ್ವಲ್ಪ ಹೊತ್ತಿನ ನಂತರ......
"ನಿನಗೆ ಒಳ್ಳೇ ಬುದ್ದಿ ಬರಲಿ ಅಂತ ದೇವರಲ್ಲಿ ಪ್ರಾರ್ಥಿಸುತ್ತೇನೆ"............"
"ಥ್ಯಾಂಕ್ಸ್.........." ಫೋನ್ ಕಟ್ಟಾಯಿತು.
ಚಲಿಸುವ ಭೂಪಟಗಳ ಕಡೆಗೆ ಕ್ಯಾಮೆರಾ ಕಣ್ಣು ನೆಟ್ಟಿತ್ತು.
"ಕ್ಲಿಕ್...ಕ್ಲಿಕ್.....ಕ್ಲಿಕ್........." ಶಬ್ದ ಶುರುವಾಗಿತ್ತು.....
೧. ಬ್ರೆಜಿಲ್ ದೇಶದ ಭೂಪಟ.......
ಬ್ರೆಜಿಲ್ ದಕ್ಷಿಣ ಅಮೇರಿಕಾ ಖಂಡದ ಅತಿ ದೊಡ್ಡ ದೇಶ. ರಾಜಧಾನಿ ಬ್ರಸಿಲಿಯಾ. ಕಾಫಿ ಅಲ್ಲಿನ ಮುಖ್ಯ ಬೆಳೆ. ಈ ದೇಶದಲ್ಲಿ ಉತ್ತರ ಮತ್ತು ದಕ್ಷಿಣ ಎರಡು ಕಡೆಗಳಿಂದ ನೂರಾರು ಉಪನದಿಗಳು ಸೇರಿ ದೇಶದ ಜೀವನದಿಯಾಗಿದೆ...ಪುಟ್ಬಾಲ್ ಇಲ್ಲಿನ ಜನರ ಜೀವ...ಮತ್ತು ಉಸಿರು... ಸಾವೋ ಪೋಲೋ, ರಿಯಾಡಿಜನೈರೋ, ಪೋರ್ಟೋ ಅಲ್ಜಿರೊ, ಸಾಲ್ವಡಾರ್, ಇತರ ಪ್ರಮುಖ ನಗರಗಳು... ಭಾಷೆ : ಪೋರ್ಚುಗೀಸ್. ಕರೆನ್ಸಿ: ರಿಯಲ್. ದೇಶದ ಶೇಕಡ ೮೫ ರಷ್ಟು ಜನರು ವಿದ್ಯಾವಂತರಾಗಿದ್ದಾರೆ...
೨. ದಕ್ಷಿಣ ಕೊರಿಯಾ ದೇಶದ ಭೂಪಟ.....
ದಕ್ಷಿಣ ಕೊರಿಯಾ ಏಷ್ಯಾ ಖಂಡದಲ್ಲಿದೆ....ಇತ್ತೀಚಿನ ಅರ್ಥಿಕ ಬೆಳವಣಿಗೆಯಿಂದಾಗಿ ಏಷ್ಯಾದ ಹುಲಿಗಳಲ್ಲಿ ಒಂದು ಎಂದು ಖ್ಯಾತಿ ಗಳಿಸಿದೆ.. ಕಬ್ಬಿಣ, ,ಮತ್ತು ಅದರ ಉತ್ಪನ್ನಗಳು, ಎಲ್.ಜಿ, ಎಲೆಕ್ಟ್ರಾನಿಕ್ಸ್ ವಸ್ತುಗಳು, ಮತ್ತು ಹ್ಯುಂಡೋ ಕಂಪನಿಯ ಕಾರುಗಳಿಂದಾಗಿ ಇತ್ತೀಚಿಗೆ ತುಂಬಾ ಖ್ಯಾತಿಗಳಿಸಿದೆ... ರಾಜಧಾನಿ ಸಿಯೋಲ್. ಈ ದೇಶದಲ್ಲಿ ಜನಸಂಖ್ಯೆ ಹೆಚ್ಚು. ಸಿಯೋಲ್ ನಲ್ಲಿಯೇ ಒಂದುವರೆ ಕೋಟಿ ಜನ ನೆಲೆಸಿದ್ದಾರೆ....ಶೇಕಡ ೯೮ ರಷ್ಟು ಜನರು ವಿದ್ಯಾವಂತರು...ಭಾಷೆ : ಕೊರಿಯನ್.೩. ಶ್ರೀಲಂಕಾ ದೇಶದ ಭೂಪಟ.......
ನಮ್ಮ ಭಾರತದ ದಕ್ಷಿಣದಲ್ಲಿದೆ ಈ ಶ್ರೀಲಂಕ ದೇಶ. ಸ್ವಾಭಾವಿಕ ಕಾಡುಗಳಿಂದ ಈ ದೇಶ ಸುತ್ತಲು ಸಮುದ್ರದಿಂದ ಸುತ್ತುವರಿದ್ದಿದ್ದು ದ್ವೀಪವೆನಿಸಿದೆ.. ರಾಜಧಾನಿ: ಕೊಲಂಬೋ. ಟೀ, ರಬ್ಬರ್, ತೆಂಗು ಮತ್ತು ಭತ್ತ ಮುಖ್ಯ ಬೆಳೆಗಳು. ಭಾಷೆ : ಸಿಂಹಳಿ, ತಮಿಳು, ಅಂಗ್ಲ. ರಾಜಧಾನಿ ಕೊಲಂಬೋ ಆಗಿದ್ದು ದೇಶದ ಪ್ರಮುಖ ಬಂದರು ಕೂಡ ಆಗಿದೆ....ಇತರೆ ನಗರಗಳು ಕ್ಯಾಂಡಿ, ಗಾಲೆ.. ದೇಶದ ಶೇಕಡ್ ೫೭ ರಷ್ಟು ಜನರು ವಿದ್ಯಾವಂತರು. ಕರೆನ್ಸಿ: ರುಪಾಯಿ.
೪. ಥೈಲ್ಯಾಂಡ್ ದೇಶದ ಭೂಪಟ.........
ಬ್ಯಾಂಕಾಕನ್ನು ರಾಜಧಾನಿಯಾಗಿ ಹೊಂದಿರುವ ಥೈಲ್ಯಾಂಡ್ ಏಷ್ಯಾ ಖಂಡದಲ್ಲಿದೆ....ಭತ್ತ, ತೆಂಗು, ತಂಬಾಕು ಮುಖ್ಯಬೆಳೆಗಳು...ಇತ್ತೀಚಿನ ಪ್ರವಾಸೋದ್ಯಮ ಬೆಳವಣಿಗೆಯಿಂದಾಗಿ ದೇಶ ಅಭಿವೃದ್ಧಿ ಪಥದತ್ತ ಸಾಗುತ್ತಿದೆ...ಇಲ್ಲಿನ ಜನರು ಥಾಯ್, ಚೀನಿ, ಆಂಗ್ಲ ಭಾಷೆಗಳನ್ನು ಮಾತನಾಡುತ್ತಾರೆ.. ನಾಮ್, ಯೋಮ್, ಮೆಕಾಂಗ್ ಮುಖ್ಯನದಿಗಳು...ದೇಶದ ಶೇಕಡ ೯೫ ರಷ್ಟು ಜನರು ವಿದ್ಯಾವಂತರು....ಕರೆನ್ಸಿ: ಬಹಟ್.
೫. ಇದು ಪ್ರಕಾಶ್ ಹೆಗಡೆಯವರ ತಲೆಹಿಂಭಾಗದ ಭೂಪಟ...ಇಥಿಯೋಪಿಯಾ ದೇಶಕ್ಕೆ ಹೋಲಿಕೆಯಾಗಿದೆಯಲ್ವೇ....
ಬೆಕ್ಕಸ ಬೆರಗಾಗುವ ಇನ್ನಷ್ಟು ಭೂಪಟಗಳು...ಮುಂದಿನಬಾರಿ...!!
ಚಿತ್ರ ಮತ್ತು ಲೇಖನ...
ಶಿವು....
78 comments:
ಶಿವು ಅಣ್ಣ
ಈ ಭೂಪಟವನ್ನೇ ಕಾಯುತಿದ್ದೆ ಛಾಯಚಿತ್ರ ಚೆನ್ನಾಗಿ ಬಂದಿದೆ. ಅದರಲ್ಲೂ ಪ್ರಕಶಣ್ಣನ ಇಥಿಯೋಪಿಯಾ ದೇಶದ ಭೂಪಟ ನೋಡಿ ನಗು ತಡೆದು ಕೊಳ್ಳೊದಿಕ್ಕೆನೇ ಅಗಿಲ್ಲ. ಮಿತವಾದ ಮಾತು ಭೂಪಟಕ್ಕೆ ಮತ್ತಷ್ಟು ಮೆರುಗು ಕೋಟ್ಟಿದೆ ದನ್ಯವಾದಗಳು ಅಣ್ಣ ಹಾಗೂ ಕ್ಷಮೆ ಇರಲಿ ಪ್ರಕಾಶಣ್ಣ
ಅಂತೂ ಪ್ರಕಾಶರನ್ನೂ ಮಾಡೆಲ್ ಮಾಡ್ಕೊಂಡ್ರಿ :)
ಸೂಪರಾಗಿದೆ ಈ ಬಾರಿಯ ಚಿತ್ರಗಳೂ, ಮತ್ತೆ ನಿಮ್ಮ ನಿರೂಪಣೆ ಕೂಡ
--
ಪಾಲ
ರೀ ಶಿವು ಅವರೇ,
ಅದು ಎಲ್ಲಿಂದ ಹುಡುಕ್ಕೊಂಡು ಬರ್ತಿರಾ ರೀ, ಇವನ್ನೆಲ್ಲ ?
ನಿಮ್ಮ ತಾಳ್ಮೆ ಹಾಗು ಭೂಪಟ ಜ್ಞಾನಕ್ಕೆ ಮೆಚ್ಚಲೇ ಬೇಕು..
Hats off !!
ಭೂಪಟಗಳ ಜೊತೆಗೆ ನಿಮ್ಮಿಬ್ಬರ ಸಂಭಾಷಣೆ ಕೂಡಾ ಚೆನ್ನಾಗಿದೆ.
ಮುಂದಿನ ಭೂಪಟಗಳು ಬಂದಾಗ ಮೊದಲನೆಯವರಾಗಿಬನ್ನಿ......
ನೀವು ಹೇಳಿದಂತೆ ಬಂದಿಲ್ಲವಾದರೂ ಟಾಪ್ ೧೦ಲ್ಲಿ ಬಂದಿದ್ದೇನೆ:-).
>>ಇದು ಪ್ರಕಾಶ್ ಹೆಗಡೆಯವರ ತಲೆಹಿಂಭಾಗದ ಭೂಪಟ...
ಇಟ್ಟಿಗೆ ಸಿಮೆಂಟ್ ಪ್ರಕಾಶರೇ?
ಬರಹ ಶೈಲಿ ಹಿಡಿಸಿತು.
ಚಿತ್ರಗಳು ಸೂಪರ್.
ನಮ್ಮ ದೇಶದ ಭೂಪಟದ ನಿರೀಕ್ಷೆಯಲ್ಲಿ.
-ಅನಿಲ್.
ಬರೀ ಬೋಳುತಲೆಯನ್ನೇ ತೋರಿಸ್ತೀರಲ್ರೀ....ಮಾಡೆಲ್- ಗಳ ಮುಖವನ್ನೂ ತೋರಿಸ್ರೀ....!!!
ಅಶೋಕ ಉಚ್ಚಂಗಿ.
ಶಿವು ಸರ್...
ಅಂತೂ ಈ ಇಟ್ಟಿಗೆ ಸಿಮೆಂಟ್ ತಲೆ ಇದಕ್ಕಾದರೂ
ಮೊಡೆಲ್ ಆಯಿತು...
ಹ್ಹಾ..ಹ್ಹಾ...
ನನ್ನ ಬ್ಲಾಗಿನ "ಏಲಕ್ಕಿ ಬೆಳೆಗಾರ" ರೈತರ
ಫೋಟೊ ಹಿಡಿಯಲು ಹೋದಾಗ ನಿಮ್ಮ ತಾಳ್ಮೆ ಕಂಡೆ...
ನಾವು ಎರಡು ತಾಸಿನಲ್ಲಿ ಹಿಡಿದದ್ದು ಬರೊಬ್ಬರಿ ೨೦೦ ಫೋಟೊಗಳು /..
ಅದರಲ್ಲಿ "ಏಲಕ್ಕಿ ರೈತ" ನಾಲ್ಕೇ ಜನ...
ಅಷ್ಟಾದಾರೂ ನಿಮ್ಮ ಉತ್ಸಾಹ, ತಾಳ್ಮೆಗೆ ನಾನು ಬೆರಗಾಗಿದ್ದೇನೆ...
ಈ ತಲೆಗಳಿಗೆ..
ಎಲ್ಲಿಂದ , ಹೇಗೆ ಭೂಪಟ
ಜೋಡಿಸುತ್ತೀರಿ.. ಮಾರಾಯರೆ..?
ಇಥೋಪಿಯಾದ ಬಗೆಗೆ ನಿಮಗೆ ಗೊತ್ತಾ..?
ಆ ದೇಶದಲ್ಲಿ ಕಳೆದ ಹನ್ನೆರಡು ವರ್ಷಗಳಿಂದ.
ಮಳೆಯೇ ಇಲ್ಲ....
ಇಲ್ಲಿ ನನ್ನ ತಲೆ ಕೂದಲು ಉದುರುತ್ತಿದೆಯಾ..??
ಹ್ಹಾ..ಹ್ಹಾ... ಮಜವಾಗಿದೆ..!
ನನಗೂ ,ನಮ್ಮನೆಯವರೂ ನಕ್ಕೂ ನಕ್ಕೂ ಸುಸ್ತಾಗಿದ್ದೇವೆ...!
ಹ್ರದಯ ಪೂರ್ವಕ ಅಭಿನಂದನೆಗಳು...
ಗುರುವೇ,
ಇನ್ನೆಷ್ಟು ಜನಕ್ಕೆ ಮ್ಯಾಪ್ ಹಾಕ್ತ್ಯಾ ??
ನನ್ಹತ್ರ ಇನ್ನೊದು ಪ್ರಶ್ನೆ ಇದೆ, ವಿವಿಧಾಕಾರ ಇರೋ ಬಾಂಡ್ಲಿಗಳ ಫೋಟೋ ಏನೋ ತೆಗೀತೀರ, ಆದ್ರೆ, ಕರೆಕ್ಟಾಗಿ ಯಾವ ದೇಶಕ್ಕೆ ಮ್ಯಾಕ್ ಆಗತ್ತೆ ಅಂತಾ ಹೆಂಗೆ ಕಂಡು ಹಿಡೀತೀರಾ?
ಕಟ್ಟೆ ಶಂಕ್ರ
ಹೇಮಾಶ್ರೀ ಅವರೆ, ನೀವು ಶಿವು ಅವರ ಕಿವಿ ಹಿಂಡದಿದ್ದರೆ ದಿನಕಳೆದಂತೆ ಅವರು ಮನೆಗೇ ಬರುತ್ತಾರೆ ಎನ್ನುವುದು ಗ್ಯಾರಂಟಿ ಇಲ್ಲ!!. ಶಿವು ಅವರೇ ಕೆಲವು ಬರಹಕ್ಕೆ ಫೋಟೊಗಳೆ ಮಾತಾಡಿಬಿಡುತ್ತದೆ.ನಿಮ್ಮದು ಅಷ್ಟೆ.ತಕ್ಕುದಾದ ಬೇಕಾದಷ್ಟೆ ಅಕ್ಷರ ರೂಪ.ಇನ್ನೂ ಆ ನಡೆದಾಡುವ ಭೂಪಟದ ಬಗ್ಗೆ ಹೇಳುವ ಹಾಗೇ ಇಲ್ಲ ಬಿಡಿ!!
ರೋಹಿಣಿ ಪುಟ್ಟಿ....
ಈ ಬಾರಿ ಭೂಪಟಕ್ಕೆ ನೋಡಲು ನೀನು ಮೊದಲನೆಯವಳು.. ಪ್ರಕಾಶ್ ಹೆಗಡೆಯವರ ತಲೆಗೆ ಸಿಕ್ಕಿದ್ದು ಈ ಇಥಿಯೋಫಿಯಾ ದೇಶ....
ಭೂಪಟದ ಜೊತೆಗೆ ಲೇಖನವನ್ನು ಮೆಚ್ಚಿದ್ದಕ್ಕೆ ಥ್ಯಾಂಕ್ಸ್...ಹೀಗೆ ಬರುತ್ತಿರು....
ಪಾಲಚಂದ್ರ,
ಎರಡನೆ ಭೂಪಟಕ್ಕೆ ತುಂಬಾ ಕಷ್ಟ ಪಡಬೇಕಾಯಿತು...
ಹೆಗಡೆಯವರ ಪುಟ್ಟ ಬೋಳುತಲೆಗೆ ಭೂಪಟ ಹುಡುಕುವುದು ಕಷ್ಟವಾಯಿತು...ಕೊನೆಗೂ ಸಿಕ್ಕಿತು....ಏಕೆಂದರೆ ಅವರು ನಮ್ಮ ಬ್ಲಾಗಿನಲ್ಲಿ ಪ್ರಸಿದ್ದ ಮಾಡೆಲ್ ಅಲ್ಲವೇ....
ಬ್ರೆಜಿಲ್ ದೇಶದ ಭೂಪಟ ತುಂಬಾ ಚೆನ್ನಾಗಿ ಮುಡಿದೆ ಬಕ್ಕ ತಲೆಯಲ್ಲಿ. ದಿಟ್ಟೋ ಇದೆ....!!! :)
ಶಿವಪ್ರಕಾಶ್,
ಲೇಖನ ಮೆಚ್ಚಿದ್ದಕ್ಕೆ ಥ್ಯಾಂಕ್ಸ್....ಮತ್ತೆ ತಾಳ್ಮೆಯ ವಿಚಾರ, ಹುಡುಕಾಟದ ವಿಚಾರದಲ್ಲಿ...ಗೊತ್ತಿಲ್ಲ...ನನ್ನ ಬಳಿ ಸದಾ ಮೂರು ಭೂಪಟದ ಪುಸ್ತಕಗಳಿವೆ....ಅದನ್ನು ತಿರುವಿಹಾಕುವುದರಲ್ಲಿ ಏನೋ ಅನಂದ...ಅದಕ್ಕೆ ನನ್ನಾಕೆ ಲೇಖನದಲ್ಲಿ ಹಾಗೆ ಹೇಳಿದ್ದು....ಹೀಗೆ ಬರುತ್ತಿರಿ...ಥ್ಯಾಂಕ್ಸ್...
ಭಾರ್ಗವಿ ಮೇಡಮ್,
ಈ ಬಾರಿ ಬೇಗ ಬಂದಿದ್ದೀರಿ...ಥ್ಯಾಂಕ್ಸ್....ಮತ್ತೆ ನಮ್ಮಿಬ್ಬರ ನಡುವೆ ನಡೆದ ಸಂಭಾಷಣೆಗಳು ಸತ್ಯ....ಇನ್ನೂ ದೊಡ್ಡದಿತ್ತು...ನಾನೆ ಬೋರ್ ಆಗುತ್ತದೆಂದು ಚಿಕ್ಕದು ಮಾಡಿದೆ....'
ಏಪ್ರಿಲ್ ೧ ಮೂರ್ಖರ ದಿನಾಚರಣೆಯಲ್ಲಿ ಮತ್ತಷ್ಟು ಭೂಪಟಗಳು ಬರುತ್ತವೆ...
ಅನಿಲ್,
ನಿಮ್ಮ ಅನಿಸಿಕೆ ಸರಿಯಾಗಿದೆ...ಅದು ನಮ್ಮ ಇಟ್ಟಿಗೆ ಜೊತೆ ಬೆರೆಸಿದ ಸಿಮೆಂಟಿನ ಪ್ರಕಾಶ್ ಹೆಗಡೆಯವರದೇ ಕಣ್ರೀ...
ಬರಹ ಮೆಚ್ಚಿದ್ದಕ್ಕೆ ಥ್ಯಾಂಕ್ಸ್....ನಿಮ್ಮ ನಿರೀಕ್ಷೆ ಹುಸಿಗೊಳಿಸೊಲ್ಲ...ಪ್ರಯತ್ನಿಸುತ್ತೇನೆ....
:)
ಆಶೋಕ್,
ಬೋಳುತಲೆಯಲ್ಲೇ ಇರುವುದು ಮಜಾ...ಅವರ ಮುಖ ತೋರಿಸಲಿಕ್ಕೆ ಅವರೇನು ಮಿಸ್.universe, ಅಥವ ಮಿಸ್.world, ಅಥವ ಮಿಸ್.ಏಷ್ಯಾ ಪೆಸಿಪಿಕ್ ಅಲ್ಲವಲ್ಲ....
ಮುಖವನ್ನು ತೋರಿಸಿದರೆ ನೀವು ಇತ್ತ ತಿರುಗಿ ನೋಡುವುದು ಇಲ್ಲ...
ನೋಡೋಣ....ಸುಂದರಾಂಗಿಯ ಮುಖವಿದ್ದು....ನನಗೆ ಭೂಪಟ ಸಿಕ್ಕರೆ ನಿಮ್ಮ ಪುಣ್ಯ....ನನ್ನದೂ ಕೂಡ....
ಶಂಕರ್ ಸರ್,
ದಿನದ ೨೪ ಗಂಟೆ ಕೈಯಲ್ಲಿ ಮ್ಯಾಪ್ ಹಿಡಿದುಕೊಂಡು...ಬೋಳುತಲೆಗಳನ್ನು ಹೋಲಿಸಿಕೊಳ್ಳುತ್ತಾ...ಹುಡುಕುತ್ತಾ...
ಈ ವಿಚಾರದಲ್ಲಿ ನನ್ನ ಶ್ರೀಮತಿಯಿಂದ ಚೆನ್ನಾಗಿ ಬೈಸಿಕೊಂಡಿದ್ದೇನೆ...
ನೀವು ಟಾಯ್ಲೆಟ್ ಬಾಕ್ಸಿನ ಮೇಲೆ ಸೀರಿಯಸ್ಸಾಗಿ ತಲೆಕೆಡಿಸಿಕೊಂಡಿರುವಷ್ಟೇ....ಅದಕ್ಕಿಂತ ಹೆಚ್ಚಾಗಿ ನಾನು ಮ್ಯಾಪುಗಳ ಬಗ್ಗೆ ಮಗ್ನನಾಗಿರುವುದರಿಂದ, ಕೆಲವೊಮ್ಮೆ ಪ್ರಪಂಚದ ಎಲ್ಲಾ ದೇಶಗಳ, ರಾಜ್ಯಗಳ, ತಾಲ್ಲೂಕು, ನಗರ...ಎಲ್ಲಾ ಮ್ಯಾಪುಗಳು ಹೋಲಿಕೆ ಸಿಗುತ್ತವೆ...ಅದರ ಫಲವೇ ಇದು...
ಶಿವೂ ,
ಮತ್ತೊಮ್ಮೆ ಭೂಗೋಳ ಪರಿಚಯ ಮಾಡಿಸಿದ್ದಕ್ಕಾಗಿ ವಂದನೆಗಳು !ನಂಗೊಂದು ಸಣ್ಣ ಡೌಟ್ !ನೀವು ಕಂಡ ಬೋಳು ತಲೆಗಳನ್ನೆಲ್ಲ ಫೋಟೋ ತೆಗೆದು ಆಮೇಲೆ ಅದಕ್ಕೆ ಹೊಂದುವಂಥ ಭೂಪಟ ಹುಡುಕುತ್ತೀರಾ? ಅದಕ್ಕೆಷ್ಟೆಲ್ಲ ತಲೆಖರ್ಚು ಮಾಡಬೇಕು ಸ್ವಾಮಿ! ನೋಡಿ,ಹೀಗೆ ಮಾಡ್ತಾ ನಿಮ್ಮ ಸದ್ಯಕ್ಕೆ ನಿತ್ಯ ’ಕರಿವರ್ಣ’(?) ದ ಕಾಡಿನಂತಿರುವ ನಿಮ್ಮ ತಲೆಯಲ್ಲಿ ಭೂಪಟ ಮೂಡಿಬಿಡಬಹುದು! ಜೋಪಾನ !
ಅಂದಹಾಗೇ, ಪ್ರಕಾಶರ ಇಥಿಯೋಪಿಯಾ ಭೂಪಟ ಚೆನ್ನಾಗಿ ಮೂಡಿದೆ ! ಅದು ಸಹರಾ ಮರುಭೂಮಿಯಂತೆ ಹಬ್ಬಲು ಹೆಚ್ಚು ದಿನ ಬೇಕಾಗಲಿಕ್ಕಿಲ್ಲ ! ಹಿ ಹಿ ಹಿ
ನಿತಿನ್,
ನನ್ನ ಶ್ರೀಮತಿಗೆ ಹೀಗೆ ಹೇಳಿರುವವರಲ್ಲಿ ನೀವು ಎಷ್ಟನೆಯವರೋ...
ಆದರೂ ಸರಿಯಾಗಿ ಊಟದ ಸಮಯಕ್ಕೆ ಮನೆಗೆ ಹೋಗಿ ಬಂದುಬಿಡುತ್ತೇನೆ....
ಇನ್ನೂ ಬರವಣಿಗೆ ಬಗ್ಗೆ ಹೇಳುವುದಾದರೆ ಇದು ನಮ್ಮ ಮನೆಯಲ್ಲಿ ಭೂಪಟಗಳಿಗೆ ಟೋಪಿಗಳಿಗೆ ಬದಲಾಗಿ ನನ್ನಾಕೆಯಿಂದ ಜುಗಲ್ಬಂದಿ ಶುರುವಾಗಿರುತ್ತದೆ....ಅದರ ಆಯ್ದ ರೂಪವಷ್ಟೇ.ಇದು....
ಮತ್ತಷ್ಟು ಭೂಪಟಗಳು ಏಪ್ರಿಲ್ ೧ ನೇ ಮೂರ್ಖರ ದಿನ ಬರುತ್ತವೆ...ಆಗ ಮತ್ತೊಮ್ಮೆ ಬನ್ನಿ....
hi shivu... youhave explored the world....and 've to say hats off...but then i fear.. what would be the "state" of my head!!
ಶಿವು,
Sorry for the Delay!!!Power Problem!
Motion ಮತ್ತು Emotion ಬಗ್ಗೆ ಬರೆದು ಪ್ರಪಂಚದ Exploration ಮಾಡ್ಸಿದ್ದೀರ!!!
ಪ್ರಕಾಶ್ ಹೆಗಡೆಯವರು ಹೇಳಿದಂತೆ ಆ ಭೂಪಟ(ದೇಶ)ದ ಯಾವುದೋ ವಿಸ್ಮಯದ ಅಂಶ ಅದನ್ನು ಹೊಂದುವ ತಲೆಯಲ್ಲಿರಬದುದೇನೋ?! ಒಂದಕ್ಕೊಂದು ಯಾವುದೋ 'ತಂತು' ಜೋಡನೆಯಿರಬಹುದು!!
ನೀವು ಬ್ಲಾಗ್ ಲೋಕದ ವಾಸ್ಕೋಡೆಗಾಮ!!
Around the World in Eight Blogs!!!
HATS OFF....
ಶಿವುರವರೇ,
ಇದೊಂದು ನಾ ಕಂಡ ಹೊಸ ಖಯ್ಯಾಲಿ. ವಿಚಿತ್ರವಾದರೂ ಸತ್ಯ :)
ನಿಮ್ಮ ಈ ಅಭಿರುಚಿಗೆ, ಅದರ ಹಿಂದಿರುವ ಪರಿಶ್ರಮಕ್ಕೆ ಅಭಿನಂದನೆಗಳು.
ನೀವು ಹೀಗೆ ಭೂಪಟಗಳ ಚಿತ್ರ ತೆಗೆಯುವುದು, ಭೂಪಟಗಳ ವಾರಸುದಾರರಿಗೆ ಗೊತ್ತಿದೆಯಾ?
ಹುಶಾರು ಶಿವು.. ಹಿಂಗೆ ನೀವು ಕೆಮೆರಾ ಹಿಡ್ಕೊಂಡು ಓಡಾಡ್ತಿದೀರಿ ಅಂತ ಗೊತ್ತಾದ್ರೆ ಬೋಳರೆಲ್ಲಾ ’ತಲೆಮರೆಸಿಕೊಂಡು’ ಓಡಾಡ್ತಾರೆ ಇನ್ಮೇಲೆ..!
ಶಿವು ಅವರೆ, ನಿವು ಭೂಪಟ ಗಳ ಬಗ್ಗೆ ಬಹಲ ಸ೦ಶೊದನೆ ಮಡುತ್ತಾ ಇದ್ದಿರಾ, ಇನ್ನು ಹೆಚ್ಚಿನ ಫೊಟೊ ಗಳು ಸಿಗಲಿ ಎ೦ದು ಹಾರೈಸುವೆ.
ಇ ಭೋಪಟ ನೊಡಿ ನಗು ತಡೆಯಲಾರದೆ, ಹೊಟ್ಟೆಯಲ್ಲಿ ಹುಣ್ಣು ಗಳು ಆಗಿರುವ ಸಾಧ್ಯತೆ ಇದೆ!!!!
superoo super... :)
ಶಿವೂ ಸರ್,
ಭೂಪಟಗಳು ಬಹಳ ಮಸ್ತಾಗಿವೆ ಹ ಹ ಹ ... ಇವೆಲ್ಲ ಭೂಪಟಗಳನ್ನು ಪ್ರಿಂಟ್ ತಗೊಂಡು ನಮ್ಮ ಮಗನಿಗೆ ಹೇಳಿಕೋಡೋಣವೆನಿಸಿದೆ ಹ ಹ ಹ .... ನಿಜ ಭೂಪಟ ನೋಡಿದರೆ ಮಕ್ಕಳು ಅರ್ಥ ಮಾಡ್ಕೊಳ್ಳೋದು ಕಡಿಮೆ ಹ ಹ ಹ ಈ ರೀತಿ ಉದಾಹರಣೆಗಳನ್ನ ಕೊಟ್ಟರೆ ಬೇಗ ತಿಳಿದುಕೊಳ್ಳುತ್ತಾರೆ ...
ನಿಮ್ಮ ತಾಳ್ಮೆ ಯೋಜನೆ ಎಲ್ಲವು ಚೆನ್ನಾಗಿದೆ ಕಸದಲ್ಲಿ ರಸವೆನ್ನೋ ಹಾಗೆ ಮನುಸ್ಯನ ದೇಹದಲ್ಲೇ ಹಾಸ್ಯ ಮೂಡಿಸಿದ್ದೀರಿ ... ಮುಂದುವರಿಸಿ...
ಧನ್ಯವಾದಗಳು ಹಾಸ್ಯಲೋಕಕ್ಕೆ ಕರೆತಂದಿದಕ್ಕೆ ....
ಪ್ರಕಾಶ್ ಸರ್,
ನಿಮ್ಮ ತಲೆ ಸದ್ಯಕ್ಕೆ ಇಥಿಯೋಫಿಯಾ ಭೂಪಟವಾಗಿದೆ...
ಇಥಿಯೋಫಿಯಾದಲ್ಲಿ ಮಳೆಯಿಲ್ಲ...ಬೆಳೆಯಿಲ್ಲ...
ಮುಂದೆ ಅದು ಸಹರ ಮರುಭೂಮಿ ಆಗುವ ಭರವಸೆಯನ್ನು ಚಿತ್ರಾ ಹೆಗಡೆ ಕೊಟ್ಟಿದ್ದಾರೆ.....
ಅಂದಮೇಲೆ ಮರುಭೂಮಿಯಲ್ಲಿ ಮರಳು ಇದ್ದ ಹಾಗೆ ಆಯ್ತು...
ಇನ್ನೂ ಸಿಮೆಂಟಿನ ವಿಚಾರಕ್ಕೆ ಬಂದರೆ ಯಾರಿಗೂ ಹೊಳೆಯದ ವಿಚಾರಗಳು, ಅಡ್ಡ ಹೆಸರುಗಳು, ನಿಮ್ಮ ತಲೆಯಲ್ಲಿ ಸಿಮೆಂಟ್ ಕಾಂಕ್ರೀಟಿನ ಹಾಗೆ ಗಟ್ಟಿಯಾಗಿ ಸೇರಿಬಿಡುತ್ತವೆ.....ಇದೆಲ್ಲದರ ಪಲಿತಾಂಶ....
ನಿಮ್ಮ ತಲೆ ಭೂಪಟದ ಮಾಡೆಲ್ ಆಗಿರುವುದು...
ನಿಮ್ಮ ಮನೆಯವರೆಲ್ಲಾ ಅದರಲ್ಲೂ ಆಶಿಸ್...ಮನಪೂರ್ವಕವಾಗಿ ನಗುವುದನ್ನು ನಾನು ನೋಡಿಲ್ಲ.....ಆ ಹುಡುಗನದು ಒಳಗೊಳಗಿನ ನಗು...ನೋಡಬೇಕು.....
ಮತ್ತೆ ಏಲಕ್ಕಿ ಬೆಳೆಗಾರರಿಗಾಗಿ ಬೇಟಿಯಾಗೋಣ...ಅವರ ಬೆಳೆಗೆ ತಕ್ಕ ಬೆಲೆ ಸಿಗುತ್ತಿಲ್ಲವಂತೆ ನಾವೇನಾದ್ರು ಮಾಡಲು ಸಾದ್ಯವೇ ಅಂತ ನೋಡೋಣ...ಹಹಹ....
ತೇಜಸ್ವಿನಿ ಮೇಡಮ್,
ಭೂಪಟಗಳನ್ನು ಮೆಚ್ಚಿದ್ದಕ್ಕೆ ಥ್ಯಾಂಕ್ಸ್....ಹೀಗೆ ಬರುತ್ತಿರಿ...
ಚಿತ್ರಾ ಮೇಡಮ್,
ಮತ್ತೊಮ್ಮೆ ಭೂಪಟಗಳನ್ನು ನೋಡಿ ನಕ್ಕಿದ್ದಕ್ಕೆ ಥ್ಯಾಂಕ್ಸ್....
ಈ ಐದು ಭೂಪಟ ಸಿಗಲು ಮತ್ತೆ ಸುಮಾರು ನಾಲ್ಕುನೂರಕ್ಕೂ ಹೆಚ್ಚು ಫೋಟೊ ಕ್ಲಿಕ್ಕಿಸುದ್ದುಂಟು....ಫೋಟೊ ತೆಗೆಯುವಾಗ ಸುಮ್ಮನೆ ಎಲ್ಲವನ್ನೂ ತೆಗೆಯುವುದು....ನಂತರ ಅದಕ್ಕೆ ಹೊಂದುವಂಥ ನಕಾಶೆಗಳನ್ನು ಹುಡುಕುತ್ತಾ ಕೂರುವುದು...
ಮತ್ತೆ ಇದಕ್ಕಾಗಿ ನಾನೇನು ನನ್ನ ಬುದ್ಧಿಯನ್ನು ಖರ್ಚು ಮಾಡಿಲ್ಲ....ಮತ್ತೆ ನನ್ನ ಕರಿವರ್ಣ ಕಾಡು ಹಾಗೆ ಇರುತ್ತದೆ...ಕಾರಣ ನನ್ನ ಹೆರಿಡಿಟಿ...
ಹಾಗೂ ನಿಮ್ಮ ಮಾತನ್ನು ಇಟ್ಟಿಗೆ ಸಿಮೆಂಟಿಗೆ ಅಲ್ಲಲ್ಲ ಪ್ರಕಾಶ್ ಹೆಗಡೆಯವರಿಗೆ ತಿಳಿಸಿದ್ದೇನೆ...ಧನ್ಯವಾದಗಳು...
ಕೃಷ್ಣವಾಣಿ ಸರ್,
ನಿಮ್ಮ ಹೆಸರು ಹರಿಕೃಷ್ಣ ಅಲ್ಲವೇ....ಅನಂತಪುರದವರು..ನೀವು ನನ್ನ ಬ್ಲಾಗನ್ನು ತಪ್ಪದೇ ನೋಡುತ್ತಿರುವುದು ನನಗೆ ತುಂಬಾ ಖುಷಿಯಾಯಿತು..
ನಿಮಗೀಗ ನಿಮ್ಮ ತಲೆಯ ಭೂಪಟದ ಬಗ್ಗೆ ಚಿಂತೆಯಾಗಿದೆಯಲ್ಲವೇ....ನಿಮ್ಮ ತಲೆ ಫೋಟೊ ತೆಗೆದು ನನಗೆ ಕಳಿಸಿ....ನಂತರ ಅದಕ್ಕೊಂದು ಭೂಪಟ ಖಂಡಿತ ಹೊಂದಿಸೋಣ...Thanks...
ಮಲ್ಲಿಕಾರ್ಜುನ್,
ಮೊದಲಿಗೆ ಬರವಣಿಗೆಯಲ್ಲಿನ ಮತ್ತು ದೇಹದಲ್ಲಿನ Motion ಗುರುತಿಸಿದ್ದಕ್ಕೆ ಥ್ಯಾಂಕ್ಸ್....
ನಿಮಗೆ ಗೊತ್ತೆ....ಮೋಷನ್[ಟಾಯ್ಲೆಟ್ಟಿನಲ್ಲಿದ್ದಾಗಲೂ]
ನಲ್ಲಿದ್ದಾಗಲೂ ಒಳ್ಳೇ ಎಮೋಷನ್ನಲ್ಲಿ ಕೈಯಲ್ಲಿ ನಕಾಶೆ ಪುಸ್ತಕ ಹಿಡಿದು..exploration
ನಡೆದಿರುತ್ತದೆ...ಮೊದಲನೆಯದು ಗೊತ್ತಾಗದ ಹಾಗೆ...ಎರಡನೆಯದು ಗೊತ್ತಾಗುತ್ತಾ ಮುಗಿದಿರುತ್ತದೆ....
ತಲೆಗೂ ಮತ್ತು ಭೂಪಟಕ್ಕೂ ನಮಗೆ ಕಾಣದ ತಂತುವಾಗಿರುವುದು....ಇದೇ ಇರಬೇಕು...
ಮತ್ತೆ ನೀವು ಹೇಳಿದ ವಾಸ್ಕೋಡೆಗಾಮ ಕಂಡು ಹಿಡಿದ ವೆಸ್ಟ್ ಇಂಡೀಸ್ ದ್ವೀಪಗಳ ಚಿತ್ರ ವಿಚಿತ್ರ ಭೂಪಟಗಳು...ಒಂದಷ್ಟು ಬೋಳು ತಲೆಗಳಿಗೆ ಹೊಂದಿಕೆಯಾಗುತ್ತಿವೆ...!!!
ವಿನುತಾ ಮೇಡಮ್,
ನನ್ನ ಖಯಾಲಿಯನ್ನು ಮೆಚ್ಚಿದವರಲ್ಲಿ ಮೊದಲಿಗರೂ ನೀವು...ಥ್ಯಾಂಕ್ಸ್...
ಇಲ್ಲಿರುವ ಯಾವ ನಡೆದಾಡುವ ಭೂಪಟ[ವಾರಸುದಾರರಿಗೂ] ಇದು ಗೊತ್ತಿಲ್ಲ....
ಇಟ್ಟಿಗೆ ಸಿಮೆಂಟಿನ ಪ್ರಕಾಶ್ ಹೆಗಡೆಯವರು ಅವರಾಗೆ ಬಂದು ನನ್ನ ಕ್ಯಾಮೆರಾಕ್ಕೆ ಬಲಿಪಶುವಾದ್ದರಿಂದ ಅವರೊಬ್ಬರಿಗೆ ತಿಳಿದಿದೆ...ಹೀಗೆ ಬರುತ್ತಿರಿ....
ಸುಶ್ರುತ,
ಬೋಳು ತಲೆಯವರು ತಲೆಮರೆಸಿಕೊಂಡು ಟೋಪಿ ಹಾಕಿಕೊಂಡರೂ ಅದರ ಫೋಟೊವನ್ನು ತೆಗೆಯುತ್ತೇನಲ್ಲ...ಮತ್ತೆ ಮುಂದೆ ಬೇಸಿಗೆಯಲ್ಲಿ ಸೆಕೆಗೆ ಟೋಪಿ ಹಾಕುವುದಿಲ್ಲವಾದ್ದರಿಂದ ನನ್ನ ಕೆಲಸ ಸುಲಭ...ಏನಂತೀರಿ...!!
ಶಿವೂ,
ಸ್ವಲ್ಪ ತಡವಾಗಿ ಬ೦ದೆ. ನಮ್ಕಡೆ ಕೆಲವು ಚಲಿಸುವ ಭೂಗೊಳಗಳಿವೆ ಮಾರಾಯ್ರೇ. ಹೊಸ ಹೊಸ ದೇಶ ಗಳ ಭೌಗೋಳಿಕ ವಿನ್ಯಾಸವನ್ನು ಸೆರೆಹಿಡಿಯಬಹುದು. ಯಾವಾಗ ಬರ್ತಿರಿ ಹೇಳಿ ? ತು೦ಬಾ ಚೆನ್ನಾಗಿದೆ. ಇನ್ನೆಷ್ಟಿದೆ ನಿಮ್ಮ ಖಜಾನೆಯಲ್ಲಿ ಇ೦ತಹ ಫೋಟೋ ಸ೦ಗ್ರಹ. ಫೋಟೋಗಳಿಗೆ ಸ೦ವಾದಿಯಾಗಿ ಬರೆದ ಪುಟ್ಟ ಲೇಖನ ಕೂಡ ಚೆನ್ನಾಗಿದೆ. ನನ್ನ ಬ್ಲಾಗ್ ನೋಡಿದಿರಾ ? ಹೊಸ ಪೋಸ್ಟ್ ಇದೆ.
ಬಾಲು ಸರ್,
ಭೂಪಟಗಳ ಬಗ್ಗೆ ನಿಮ್ಮ ಅಭಿಪ್ರಾಯಕ್ಕೆ ಮತ್ತು ಆರೈಕೆಗೆ ಥ್ಯಾಂಕ್ಸ್....
ಮುಂದಿನ ಏಪ್ರಿಲ್ ೧ ಮೂರ್ಖರ ದಿನದ ಹೊಸ ಭೂಪಟಗಳಿಂದಾಗಿ ನಕ್ಕೂ ನಕ್ಕೂ.. ಹೊಟ್ಟೆ ಹುಣ್ಣೂ...ಇತ್ಯಾದಿಗಳಿಗಾಗಿ ಮಾತ್ರೆ ಓಷದಿ ಕೊಡುವ ಪ್ರಯೋಜಕರನ್ನು ಹುಡುಕುತ್ತಿದ್ದೇನೆನಾದ್ದರಿಂದ ಹುಣ್ಣು ಬರಿಸಿಕೊಳ್ಳಬಹುದು...
ಸಂತೋಷ್, ಥ್ಯಾಂಕ್ಸ್...ಕಣ್ರೀ....
ಮತ್ತದೇ ರಾಗ..ಅದೇ ಹಾಡು...
'ಹಳೇ ಪಾತ್ರೆ..ಹಳೇ ಕಬ್ಬಿಣ..ಹಳೇ ಪೇಪರ್ರು...' ಇದ್ದಂಗೆ!!!
ಶಿವಣ್ಣ..
ಭೂಪಟ ಚೆನ್ನಾಗಿದೆ..ಪ್ರಕಾಶ ಹೆಗಡೆಯವರ ಬೊಂಬಾಟ್ ತಲೆಯನ್ನಿ ಬ್ಲಾಗಿನಲ್ಲಿ ಇಳಿಸಿಬಿಟ್ರೀ. ನಿಜ ಹೇಳಲಾ? ನಂಗಿನ್ನು ಮಾತಾಡಕೆ ಹೆದರಿಕೆ ಯಾಗುತ್ತೆ ನಿಮ್ಮಿಬ್ಬರ ಜೊತೆ..! ನೀವು ತಲೆ, ಟೋಪಿ ಹುಡುಕುತ್ತಾ ಇದ್ದೀರಾ..ಪ್ರಕಾಶ್ ಹೆಗಡೆಯವರೂ ನಿಮ್ಮ ಚಾಳಿ ಕಲಿತುಬಿಟ್ಟು ಏಲಕ್ಕಿ ಬೆಳೆಗಾರರನ್ನು ಬ್ಲಾಗಿನಲ್ಲಿ ತಂದು ಹಾಕಿದ್ದಾರೆ. ಇನ್ನು ನಮ್ಮ ಮುಖದಲ್ಲಿ ಇನ್ನೇನೆಲ್ಲ ನಿಮ್ಮಂಥ 'ಮುಕ್ಕಣ್ಣ'ರಿಗೆ ಕಾಣಿಸುತ್ತೋ? ದೇವರೇ ಬಲ್ಲ.
ಈ ಭೂಪಟಗಳ ಕೆಳಗೆ..ದೇಶದ ಹೆಸರು ಮಾತ್ರವಲ್ಲ..ಅಲ್ಲಿನ ಜನಸಂಖ್ಯೆ, ಜೀವನ, ಆಹಾರಪದ್ಧತಿ ಎಲ್ಲಾ ಹಾಕ್ಬಿಡಿ..ಆಮೇಲೆ ಶಾಲೆಗೆ ಹೋಗುವ ಪುಟಾಣಿ ಮಕ್ಕಳೂ ಬಂದು ನಿಮ್ಮ 'ಭೂಪಟ' ನೋಡ್ತಾರೆ...! ಅಂತೂ ಮತ್ತೊಮ್ಮೆ 'ನಡೆದಾಡುವ ಭೂಪಟ'ಗಳನ್ನು ನೋಡೋಕೆ ಅವಕಾಶ ಮಾಡಿಕೊಟ್ರೀ. ಧನ್ಯವಾದಗಳು.
-ಪ್ರೀತಿಯಿಂದ,
ಚಿತ್ರಾ
ಪರಂಜಪೆ ಸರ್,
ಲೇಖನ ಮತ್ತು ಫೋಟೊ ಮೆಚ್ಚಿದ್ದಕ್ಕೆ ಥ್ಯಾಂಕ್ಸ್...ಭೂಗೋಳದ ಫೋಟೊಗಳು ಇನ್ನೂ ಇವೆ....ಮತ್ತು ಅವುಗಳ ಕೃಷಿ ಸದಾ ಚಾಲ್ತಿಯಲ್ಲಿರುತ್ತದೆ....ಬಿಡುವು ಮಾಡಿಕೊಂಡು ನಿಮ್ಮ ಕಡೆಯೂ ಬರುತ್ತೇನೆ.....ಖಂಡಿತ....
ಚಿತ್ರ ಮರಿ,
ಎಂದಿನಂತೆ ನನ್ನ ಹಳೇ ಕ್ಯಾಮೆರಾ, ಹಳೇ ಶಿವು, ಹಳೇ ಪ್ರಕಾಶ್ ಹೆಗಡೆಯವರ ಭೂಪಟದ ಜೊತೆಗೆ ಹೊಸದನ್ನು ಮೆಚ್ಚಿದೀಯಾ....
ಮತ್ತೆ ನಮ್ಮ ಜೊತೆ ಮಾತಾಡಲಿಕ್ಕೆ ಹೆದರಿಕೆಯಾಗುತ್ತೆ ಅಂತ ಹೇಳುತ್ತಲೇ ಮೊದಲಿಗಿಂತ ಹೆಚ್ಚು ಮಾತಾಡಿ ನನ್ನನ್ನು ಹೆದರಿಸುತ್ತೀಯಾ ಅನ್ನೋ ಭಯ ನನಗೆ...
ಮತ್ತೆ ನಿನ್ನ ಅನಿಸಿಕೆಯಂತೆ ಭೂಪಟದ ಜೊತೆ ಸ್ವಲ್ಪ ಆ ದೇಶಗಳ ಪರಿಚಯವನ್ನು ಹಾಕಿದ್ದೇನೆ....ಇಂಥ ಐಡಿಯಾ ಕೊಟ್ಟಿದ್ದಕ್ಕೆ ಥ್ಯಾಂಕ್ಸ್....
ಶಿವು,
ನನ್ನ ಭೋಗೋಲಜ್ಞಾನ ವಿಸ್ತಾರವಾಗುತ್ತಾ ಇದೆ.
ದಯವಿಟ್ಟು ಮುಂದುವರೆಸಿ.
adbuthvaada talegalu, nimma creativityge nanna johargalu super ,mattade sarlavaada baravanige
ಸುನಾಥ್ ಸರ್,
ಭೂಪಟಗಳನ್ನು ಕೊಡುವ ಕಾಯಕದಲ್ಲಿ ನನ್ನ ಜ್ಞಾನವೂ ವಿಸ್ತಾರವಾಗುತ್ತಿದೆ ಸರ್.....ಥ್ಯಾಂಕ್ಸ್...
ಅಜಿತ್ ಕೌಂಡಿನ್ಯ,
ಭೂಪಟಗಳು ಮತ್ತು ಬರವಣಿಗೆಯನ್ನು ಮೆಚ್ಚಿದ್ದಕ್ಕೆ ಥ್ಯಾಂಕ್ಸ್...
simply superb sir... you have got the exact maps that match... nice creativity...
ಪ್ರಭುರಾಜ್,
ಥ್ಯಾಂಕ್ಸ್......ಕಣ್ರೀ.....
ಶಿವಣ್ಣ
ಈ ಕೆಲಸ ಸುಲಭ ಅಲ್ಲ. ಗೊತ್ತಿಲ್ಲದ ಹಾಗೆ ಫೋಟೋ ತೆಗೆದು, ಅದನ್ನು ೧೫೦ಕ್ಕೂ ಹೆಚ್ಚು ದೇಶಗಳ ಭೂಪಟಗಳ ಜೊತೆ ಹೋಲಿಸಿ, ನಮಗೆ ಭೂಗೋಳ ಕಲಿಸೋದು.
ನಮಗಂತು ಒಳ್ಳೆ ಮಜ.. ನಿಮ್ಮ ಫೋಟೋಗಳನ್ನು ನೋಡುತ್ತ..
ಪ್ರಕಾಶಣ್ಣ ಬೇಜಾರಾಗ ಬೇಕಿಲ್ಲ, ನಾನು ಶಿವಣ್ಣವರ ತಲೆ ಫೋಟೊ ತೆಗೆದು(ಸ್ವಲ್ಪ ವರ್ಷಗಳ ನಂತರ) ನನ್ನ ಬ್ಲಾಗಿನಲ್ಲಿ ಹಾಕುವೆ..
ನಮಸ್ಕಾರ ಶಿವು ಅವರೇ....
ಭೂಗೋಳದ ಪಾಠವನ್ನು ಇಷ್ಟು ಸ್ಪಷ್ಟವಾಗಿ, ಸುಂದರವಾಗಿ, ಸುಲಲಿತವಾಗಿ ಇಲಸ್ಟ್ರೇಷನ್ಗಳ ಮೂಲಕ (ಅದೂ ತಲೆಯಲ್ಲಿ ಮೂಡಿದ ಚಿತ್ತಾರಗಳ ಸಹಿತ) ಕ್ಯಾಮೆರಾಕಣ್ಣಿನಿಂದ ಹುಡುಕಿ, ಕೆದಕಿ, ಕುತೂಹಲದೊಂದಿಗೆ ವಿವರಿಸುವ, ರಾಷ್ಟ್ರಗಳ ಪರಿಚಯ ಮಾಡಿಸುತ್ತಿರುವ ನಿಮಗೆ ಮತ್ತು ಛಾಯಾಕನ್ನಡಿ ತನ್ನ ಮಾಯೆಯಿಂದ ಮೋಡಿಮಾಡುತ್ತಾ ಮಾಹಿತಿದಾಯಕವಾಗಿದೆ. ಹೀಗೇ ಭೂಗೋಳದ ಪರಿಚಯ (ವಿಶ್ವಕೋಶವನ್ನು) ತೋರಿಸಿರಿ.
ಧನ್ಯವಾದಗಳು.
ಬೆಳಿಗ್ಗೆ powercut ಆಗಿದ್ದರಿಂದ ಈಗ ಮನೆಗೆ ಬಂದು ನೋಡಿದರೆ ಯಥಾಪ್ರಕಾರ ನನ್ನ ಸ್ಥಾನ ೫೦ರ ಗಡಿ ದಾಟಿದೆ. ಕೊರಿಯಾ ದೇಶದ ಭೂಪಟ ಬಹಳ ಚೆನ್ನಾಗಿದೆ. ಎಲ್ಲಾ ದೇಶಗಳ ಭೂಪಟಗಳೂ ಆ ಬೋಳುತಲೆಗಳಿಗೆ ಬಹಳ ಚೆನ್ನಾಗಿ ಹೊಂದಿಕೊಂಡಿದೆ.
ಹಾಯ್ ಶಿವೂ ಸರ್,
ಆಫೀಸ್ ಕೆಲಸದ ಒತ್ತಡದಿಂದ ನಿಮ್ಮ ಬ್ಲಾಗ್ ಕಡೆಗೆ ಬರಲಾಗಲಿಲ್ಲ...!!
ಅದ್ಭುತ ಕಲ್ಪನೆ ಸರ್, ನಿಮ್ಮ ಭೂಗೋಳ ಜ್ಞಾನಕ್ಕೆ ಅಭಿನಂದನೆಗಳು..
ಅಂದದ ಚಿತ್ರ ಮತ್ತು ಅಷ್ಟೇ ಸುಂದರ ಬರಹ...ತುಂಬಾ
ಇಷ್ಟವಾಯಿತು...!
-ಪ್ರಶಾಂತ್ ಭಟ್
ಜಯಶಂಕರ್,
ನೀವು ಹೇಳಿದಂತೆ ಈ ಕೆಲಸ ಸುಲಭವಲ್ಲ....ಈ ಅನುಭವ ಇತ್ತೀಚೆಗೆ ಪ್ರಕಾಶ್ ಹೆಗಡೆಯವರಿಗೆ ನನ್ನ ಜೊತೆ ಆಗಿದೆ...ಅದ್ರೆ ಒಮ್ಮೆ ಫೋಟೊ ತೆಗೆದುಬಿಟ್ಟರೆ ಶುರುವಾಗುತ್ತಲ್ಲ...ನಕಾಶೆ ಹುಡುಕುವ ಕೆಲಸ...ಅದನ್ನು ಹುಡುಕುವಾಗ ನನಗೆ ಎಲ್ಲಾ ದೇಶಗಳ, ರಾಜಧಾನಿ, ಕರೆನ್ಸಿ, ಹವಾಗುಣ, ಜನಾಂಗ, ಭಾಷೆ , ಸಂಶ್ಕೃತಿ, ಆಟ ಊಟ...ಬೆಳೆ...ಅಭಿವೃದ್ದಿ....ಎಲ್ಲವನ್ನು ನನಗರಿವಿಲ್ಲದಂತೆ ತಿಳಿದುಕೊಳ್ಳುತ್ತಿರುತ್ತೇನೆ....
ಎಂಥ ಮಜಾ ಅಲ್ವಾ...
ಕ್ಷಣ...ಚಿಂತನೆ....ಸರ್,
ನಿಮ್ಮ ಬ್ಲಾಗ್ ಹೆಸರೇ ಚೆನ್ನಾಗಿದೆ...ಭೂಪಟ ಮತ್ತು ಲೇಖನವನ್ನು ಮೆಚ್ಚಿದಕ್ಕೆ ಥ್ಯಾಂಕ್ಸ್...ಮತ್ತು ನಿಮ್ಮ ಪ್ರೋತ್ಸಾಹದಾಯಕ ಮಾತುಗಳು ನನಗೆ ಟಾನಿಕ್ ನಂತಿದೆ...ಥ್ಯಾಂಕ್ಸ್...
ಚಂದ್ರ ಕಾಂತ ಮೇಡಮ್,
ನನಗೂ power cut ತೊಂದರೆ ತುಂಬಾ ಇದೆ...
ಭೂಪಟವನ್ನು ಮೆಚ್ಚಿದ್ದಕ್ಕೆ ಥ್ಯಾಂಕ್ಸ್....ಕೊರಿಯಾ ಅಂದ್ರೆ ನಿಮಗಿಷ್ಟಾನ...ಅದೊಂದನ್ನು ಹೆಚ್ಚು ಇಷ್ಟಪಟ್ಟಿರಲ್ಲ...ಅದಕ್ಕೆ..ಕೇಳಿದೆ...ಥ್ಯಾಂಕ್ಸ್....
ಪ್ರಶಾಂತ್ ಭಟ್,
ನಿಮ್ಮ ಕೆಲಸದ ಒತ್ತಡದ ನಡುವೆಯೂ ನನ್ನ ಬ್ಲಾಗ್, ಭೂಪಟ ಮತ್ತು ಲೇಖನ ಮೆಚ್ಚಿದ್ದಕ್ಕೆ ಥ್ಯಾಂಕ್ಸ್...
ನಿಮಗೆ ಗೊತ್ತಾ... ಶಿವಣ್ಣ....
ನಿಮ್ಮ ಭೂಪಟ (ಯಾವುದೇ ಹೊಸ ಪೋಸ್ಟ್) ನೋಡಿದ ಮೇಲೆ ದಿನಕ್ಕೆ ೨-೩ ಬಾರಿ ಕಾಮೆಂಟ್ಸ್ ಓದೋದು...
ಎಷ್ಟಾಗಿದೆ ಎಂದು ಲೆಕ್ಕ ಹಾಕೋದು....
ಕಾಮೆಂಟ್ಸ್ಗೆ ನೀವು ಬರೆದ ಉತ್ತರ ಓದೋದು .... ಹೀಗೆ ಮುಂದುವರೆಯುತ್ತೀ ನನ್ನ ಸರ್ವೇ....
ನನಗೆ ಅನಿಸಿದ್ದು... ಅನಿಸದೆ ಇರೋದು....ಎಲ್ಲ ಬಂದು ಬಿಟ್ಟಿರುತ್ತೆ....
ಬರಹಗಳ ಬೆನ್ನೆಲಬು....ಕಾಮೆಂಟ್ಸ್ ಅಲ್ವಾ.....?
ನಿಮಗೆ ಅಭಿನಂದನೆಗಳು ನನ್ನ ಕಡೆಯಿಂದ...
ಕಾಡಿನಲ್ಲಿ ಕೂತು ಬರಿಬಹುದು ಅಂದಿದ್ದೀರಿ .....
ಆಫಿಸ್ನಲ್ಲಿಯೇ ಕುಳಿತು ಒಂದು ಕವನ ಬರದು ಬ್ಲಾಗ್ಗೆ ಹಾಕಿಬಿಟ್ಟೆ ....
ಅಭಿಪ್ರಾಯ ತಿಳಿಸುತ್ತೀರಲ್ಲ ....
ಹ್ಹೆ ಹ್ಹೆ ಹ್ಹೆ.... :-) :-) :-)
ಎಲ್ಲಿ ಸಿಗ್ತಾರೆ ಕಣ್ರೀ ನಿಮಗೆ ಏ ಥರಾ ತಲೆಯವ್ರು!
ನಿಮ್ಮನ್ನ ಭೂಗೋಲ ಶಾಸ್ಥ್ರಕ್ಕೆ ಪ್ರಾಧ್ಯಾಪಕರನ್ನಾಗಿ ನೇಮಿಸಿದ್ರೆ, ೧೦೦% ವಿದ್ಯಾರ್ಥಿಗಳು 1st class ಪಾಸ್ ಆಗೋದಂತೂ ಖಂಡಿತ!!!
ಕೃಪಾ ಅಕ್ಕ ,
ನಿಮ್ಮ ಕೆಲಸ ಸರ್ವೇ ಡಿಪಾರ್ಟ್ ಮೆಂಟಿನಲ್ಲಾ ! ನನ್ನ ಪ್ರತೀ ಬರಹವನ್ನು ಈ ರೀತಿ ಸರ್ವೇ ಮಾಡುತ್ತೀರಿ ಅಂತ ನನಗೆ ಗೊತ್ತಿರಲಿಲ್ಲ....ಈ ರೀತಿಯೂ ಪ್ರೋತ್ಸಾಹ ಸಹಕಾರ ನೀಡುತ್ತಿರುವುದು...ನನಗೆ ಖುಷಿ ತರುತ್ತಿದೆ...
ನೀವೇಳಿದಂತೆ ಕಾಮೆಂಟುಗಳು ಬರಹದ ಜೀವಾಳ ಮತ್ತು ಹೊಸ ಲೇಖನದ ವಸ್ತುಗಳಿಗೆ ಸ್ಪೂರ್ತಿ, ಜವಾಬ್ದಾರಿಯನ್ನು ನೆನಪಿಸುವ ಕೆಲಸವನ್ನು ಮಾಡುತ್ತಿರುತ್ತವೆ....
ಮತ್ತೆ ನಿಮ್ಮ ಬರವಣಿಗೆಯ ತಾಕತ್ತು ಎಂಥದ್ದು ಅಂತ ನನಗೆ ಬಂದ ನಿಮ್ಮ ಮಿಂಚಂಚೆಗಳಲ್ಲಿ ಕಂಡಿದ್ದೇನೆ...ನನ್ನನ್ನು ಮೇಪ್ಲವರ್ ನಾ ಮೋಹನ್ ಸರ್ ಬ್ಲಾಗಿಗೆ, ಬರವಣಿಗೆಗೆ ಪ್ರೋತ್ಸಾಹ ನೀಡಿದರು....ಅವರ ಸಹಕಾರವನ್ನು ನಾನು ಇನ್ನೊಬ್ಬರಿಗೆ ಮುಟ್ಟಿಸುವುದು[pay forward ಸಿನಿಮಾದ ಹಾಗೆ] ಮಾಡಿದ್ದೇನೆ....
ಬರವಣಿಗೆಗೆ ಪ್ರಾರಂಬಿಸಿದ್ದಕ್ಕೆ ಅಭಿನಂದನೆಗಳು...
ಧನ್ಯವಾದಗಳು...
ಪ್ರದೀಪ್,
ಭೂಪಟ ಮೆಚ್ಚಿದ್ದಕೆ ಥ್ಯಾಂಕ್ಸ್...
ಪಿ.ಯು.ಸಿ ಯ ವರೆಗೆ ಇತ್ತು...ಪದವಿಗೆ ಬಂದಾಗ ನನ್ನ ಇಷ್ಟದ ವಿಷಯ ಭೂಗೋಳ ಇರಲಿಲ್ಲ...ಮತ್ತೆ ನನ್ನದು ಕಾಮರ್ಸ್ ಬೇರೆ...
ಕೊನೆಗೆ ಈ ರೀತಿ ನನ್ನ ಆಸೆಯನ್ನು ಪೂರೈಸಿಕೊಳ್ಳುತ್ತಿದ್ದೇನೆ...ಧನ್ಯವಾದಗಳು...
sadhya... nanna photo nimma chaaya kannaDige sikkilla.. ildidre... idu noDI iDee bhogOLa anta nanna bOLu talena tOrisi biDtidreno... sadhya naanu bachaav.. :)
Shivu,
Sooooper kanri...Next yavaga baratte antha kaayo thara maaDtheera neevu!
ವಿಜಯಕನ್ನಂತ ಸರ್,
ನನ್ನ ಬ್ಲಾಗಿಗೆ ಸ್ವಾಗತ. ಮತ್ತೆ ನೀವು ಬೋಳು ತಲೆ ಅಂತ ಹೇಳಿಬಿಟ್ಟಿದ್ದೀರಿ...ಅಂದಮೇಲೆ ಅರ್ದ ನನ್ನ ಕ್ಯಾಮೆರಾ ಸಿಕ್ಕಹಾಗೆ....ಒಂದಲ್ಲ ಒಂದು ದಿನ ನಿಮ್ಮ ತಲೆ ಭೂಪಟವಾಗುತ್ತದೆ ನಂಬಿಕೆಯಿದೆ ನನಗೆ.
ಹೀಗೆ ಬರುತ್ತಿರಿ...ಥ್ಯಾಂಕ್ಸ್.....
ಫೂರ್ಣಿಮಾ ಮೇಡಮ್,
ಮತ್ತೆ ನನ್ನ ಭೂಪಟಗಳು ನಿಮ್ಮ ಕುತೂಹಲ ಕೆರಳಿಸಿದ್ದಕ್ಕೆ ಥ್ಯಾಂಕ್ಸ್....ಏಪ್ರಿಲ್ ೧ ರ ಮೂರ್ಖರ ದಿನಕ್ಕೆ ಮತ್ತೆ ಹೊಸ ಭೂಪಟಗಳನ್ನು ಹಾಕುತ್ತೇನೆ....ಹಾಗೆ ಮತ್ತೆ ಬನ್ನಿ...ಥ್ಯಾಂಕ್ಸ್....
ಶಿವು ಅವರೇ ನಿಮ್ಮ ಈ (ವಿ)ಚಿತ್ರ-ಲೇಖನ ತುಂಬಾ ಚೆನ್ನಾಗಿದೆ. ನಿಮ್ಮ ಹುಡುಕಾಟಕ್ಕೆ ಸಿಕ್ಕ ಪ್ರತಿಫಲ ಿದು. ಹೀಗೆಯೇ ನಿಮ್ಮ ಹುಡುಕಾಟ ಮುಂದುವರೆಯಲಿ, ನಮಗೂ ಅದರ ಲಾಭ ಸಿಗಲಿ;
ಶಿವೂ ಅವರೇ,
ಈಗ ನಿಮಗೆ ಪ್ರಪಂಚದಲ್ಲಿರುವ ಎಲ್ಲಾ ರಾಷ್ಟ್ರ, ರಾಜ್ಯಗಳ ಪರಿಚಯ ಆಗಿರಬಹುದಲ್ಲ!
ಪ್ರಕಾಶಣ್ಣನ ತಲೆಯಲ್ಲಿ ಇಥಿಯೋಪಿಯ! ಸೂಪರ್!
ಬೆಂಗಳೂರಿನ ಹವೆ, ನೀರಿನಿಂದ ನನ್ನ ಕೂದಲು ಹೇಗೆ ಉದುರುತ್ತಿದೆ ಎಂದರೆ ಇನ್ನೊದು ವರ್ಷದಲ್ಲಿ ನನ್ನ ತಲೆಯಲ್ಲೂ ಯಾವುದಾದರೂ ದೇಶ ಕಂಡು ಬಂದರೆ ಆಶ್ಚರ್ಯ ಇಲ್ಲ ;-)
ಚೆನ್ನಾಗಿದೆ ಸರ್.. ಇವನ್ನೆಲ್ಲಾ ಪಠ್ಯ ಪುಸ್ತಕದಲ್ಲಿ ಅಳವಡಿಸಿದರೆ ಹೇಗೆ??
ಮಕ್ಳಿಗೆ ಬಲು ಬೇಗ ತಲೆಗೆ ಹೋಗೋದರಲ್ಲಿ ಅನುಮಾನವಿಲ್ಲ..:)
ಸತ್ಯನಾರಾಯಣ ಸರ್,
ನನ್ನ ಬ್ಲಾಗಿಗೆ ಸ್ವಾಗತ...
ಲೇಖನ ಮತ್ತು ಭೂಪಟಗಳನ್ನು ಮೆಚ್ಚಿದ್ದಕ್ಕೆ ಥ್ಯಾಂಕ್ಸ್....
ನಿಮ್ಮೆಲ್ಲರ ಪ್ರೋತ್ಸಾಹವೇ ನನ್ನ ಹುಡುಕಾಟ...ಸಿಕ್ಕ ಫಲವನ್ನು ಹಂಚಿಕೊಳ್ಳುವುದರಲ್ಲಿ ನನಗೆ ಖುಷಿ.....
ಜ್ಯೋತಿ ಮೇಡಮ್,
ನಿಮ್ಮ್ ಅಭಿಪ್ರಾಯ ಸರಿ.....ಭೋಳುತಲೆಗಳ ಹಿಂದೆ ಮತ್ತು ಭೂಪಟಗಳ ಮುಂದೆ ಇದ್ದು ಇದ್ದು....ನನಗೆ ಯಾವ ತಲೆಯನ್ನೇ ನೋಡಲಿ....ಅದು ಇಂಥ ನಕಾಶೆ ಆಗಬಹುದೇ ಅನ್ನಿಸುವ ಮಟ್ಟಿಗೆ ಪರಿಣತಿ ಹೊಂದಿದ್ದೇನೆ ಅನ್ನಿಸುತ್ತೆ......ಜೊತೆಗೆ ಅ ದೇಶಗಳ ಒಳಹೊರ ವಿಚಾರಗಳಲ್ಲೂ ಕೂಡ.....
ಮತ್ತೆ ನೀವು ಕೂದಲು ಉದುರುತ್ತಿದೆ ಎಂದಿದ್ದೀರಿ....ಬೆಂಗಳೂರಿನ ನೀರು ಹವೆಗೆ ನನ್ನ ಕೂದಲು ಉದುರುವುದಿಲ್ಲವಾದ್ದರಿಂದ ನೀವು ಹೆಣ್ಣು ಮಕ್ಕಳು ಕೂದಲು ಉದುರುವ ಬಗ್ಗೆ ನೆಗೆಟೀವ್ ಆಗಿ ಯೋಚಿಸಬಾರದು...ಆ ಯೋಚನೆಯಿಂದಲೇ...ಆಗಬಾರದ್ದು ಆಗಿ ಅಗುವ ಸಾಧ್ಯತೆ ಉಂಟು..... ಈ ಭೂಪಟದ ತರಲೆಗಳೆಲ್ಲಾ ಗಂಡಸರಿಗೆ ಮಾತ್ರ....ನೀವೆಲ್ಲಾ ಚೆನ್ನಾಗಿರಬೇಕು.. ನೆಮ್ಮದಿಯಾಗಿರಿ....
ಪ್ರತಿಕ್ರಿಯಿಸಿದ್ದಕ್ಕೆ ಥ್ಯಾಂಕ್ಸ್....
ರಂಜಿತ್ ಸರ್,
ಭೂಪಟದ ಪುಸ್ತಕಗಳ ಬಗ್ಗೆ ಐಡಿಯಾ ಕೊಟ್ಟಿದ್ದಕ್ಕೆ ಥ್ಯಾಂಕ್ಸ್...ಇನ್ನೊಂದಿಪ್ಪತ್ತು ಭೂಪಟಗಳಾಗಲಿ....ಅಮೇಲೆ ಅದರ ಬಗ್ಗೆ ಪಾಸಿಟೀವ್ ಆಗಿ ಯೋಚಿಸಬಹುದು.....
maaraayre hosa post yavaaga
ಹರೀಶ್,
ನಿಮಗೆ ಭೂಪಟ ಬೇಸರವಾಯಿತಾ ! ಅಥವ ಮುಂದಿನ ಭೂಪಟಗಳನ್ನು ನಿರೀಕ್ಷಿಸಿದ್ದೀರಾ....
ಸೂಪರ್...
ಈ ನಡೆದಾಡುವ ಭೂಪಟಗಳ ಚಿತ್ರ ಸೆರೆ ಹಿಡಿಯುವುದಲ್ಲದೇ ಅದು ಯಾವ ದೇಶದ ನಿಜ ಭೂಪಟಕ್ಕೆ ಹೋಲಿಕೆಯಾಗುತ್ತೆ ಅಂತ ಬೇರೆ ಹುಡುಕಿ ತೆಗೆಯುತ್ತೀರಲ್ಲ... ನಿಮ್ಮ ಭೂಗೋಳ ಶಾಸ್ತ್ರ ಜ್ಞಾನ ಮೆಚ್ಚಲೇಬೇಕು ಸರ್.
ಉಮಿ ಸರ್,
ಕೊನೆಯಲ್ಲಿ ಬಂದರೂ ಭೂಪಟ ಮತ್ತು ಲೇಖನ ಮೆಚ್ಚಿದ್ದಕ್ಕೆ ಥ್ಯಾಂಕ್ಸ್..ಈ ಹವ್ಯಾಸದಲ್ಲಿ ನನಗೆ ಬೇಕೋ ಬೇಡವೋ..ಭೂಗೋಳದ ಜ್ಞಾನವಂತೂ ವೃದ್ದಿಯಾಗುತ್ತಿದೆ..!! ಥ್ಯಾಂಕ್ಸ್...ಹೀಗೆ ಬರುತ್ತಿರಿ...
ಶಿವೂ ಸರ್,
ಕೆಲಸದೊತ್ತಡದಿಂದ ಭೂಗೋಳ ತರಗತಿಗೆ ತಡವಾಗಿ ಬಂದೆ ಕ್ಷಮೆಯಿರಲಿ... ನಿಮ್ಮ ಫೋಟೋಗಳಿಗೆ, ಅದಕ್ಕೆ ಹೊಂದುವ ಭೂಪಟಕ್ಕೆ, ಮತ್ತು ಅದನ್ನು ಹೊಂದಿಸುವ ನಿಮ್ಮ ತಾಳ್ಮೆಗೆ ಕೋಟಿ ಕೋಟಿ ನಮಸ್ಕಾರ. ತುಂಬಾ ಚೆನ್ನಾಗಿದೆ.
ರಾಜೇಶ್,
ತಡವಾಗಿ ಬಂದರೂ ತೊಂದರೆಯಿಲ್ಲ...ಲೇಖನ ಮತ್ತು ಭೂಪಟಗಳನ್ನು ಮೆಚ್ಚಿದ್ದಕ್ಕೆ ಥ್ಯಾಂಕ್ಸ್....
ಶಿವು ಸರ್,
ಸೂಪರ್,ಎಕ್ಸಲೆ೦ಟ್ ಹಾಗು ಹ್ಯಾಟ್ಸ್ ಆಫ್.
ಎ೦ತಹ ಅಧ್ಬುತ ಕಲ್ಪನೆ ಹಾಗೂ ವಿನ್ಯಾಸ.ಮೊದಲನೇ ಭಾಗ ನೋಡಿದ್ದೆ..ಈಗ ಎರಡನೇದೂ ........ನಾನಿರುವ ತಾ೦ಜಾನಿಯ ದೇಶದ ಬೋಳುತಲೆ ನಿಮಗಿನ್ನೂ ಸಿಕ್ಲಿಲ್ವ...
Post a Comment