ಇವತ್ತು ಬೆಳಿಗ್ಗೆ ಏಳುಗಂಟೆಗೆ ಸನ್‍ಫೀಸ್ಟ್ ವರ್ಲ್ಡ್ ಟೆನ್ ಕೆ ಓಟ ಶುರುವಾಗುವ ಮೊದಲೇ ವಿಧಾನಸೌದದ ಮುಂದೆ ಕ್ಯಾಮೆರ ಜೊತೆಗೆ ಸಜ್ಜಾಗಿ ನಿಂತಿದ್ದರೂ ತಲೆಯೆಲ್ಲಿ ಗೊಂದಲ ಶುರುವಾಗಿತ್ತು. ಯಾವ ರೀತಿಯ ಫೋಟೊ ತೆಗೆಯಬೇಕು? ಅಂತ. ಓಟಗಾರರ ಫೋಟೊ ತೆಗೆಯೋಣವೆಂದರೆ ಎಲ್ಲ ಪತ್ರಿಕಾ ಛಾಯಾಗ್ರಾಹಕರೂ ಕೂಡ ಅದನ್ನೇ ಮಾಡುವುದು. ಅವರ ಗಮನವೆಲ್ಲಾ ಪ್ರಖ್ಯಾತ ಓಟಗಾರರ ಮೇಲೆ ಕೇಂದ್ರಿಕೃತವಾಗಿರುವುದು ಖಚಿತ. ನನಗೆ ಇವತ್ತಿನವರೆಗೆ ಪ್ರಖ್ಯಾತರ ಹಿಂದೆ ಮುಂದೆ ಕ್ಯಾಮೆರಾವನ್ನು ಹಿಡಿದುಕೊಂಡು ಓಡುವುದು ನನಗೆ ಅಭ್ಯಾಸವಿಲ್ಲ. ಮತ್ತೆ ಮಾಮೂಲಿ ನಾಗರೀಕರ ವೈವಿಧ್ಯತೆಗಳನ್ನು ಕ್ಲಿಕ್ಕಿಸೋಣವೆಂದರೆ ಅದನ್ನು ಕಳೆದ ವರ್ಷವೇ ಕ್ಲಿಕ್ಕಿಸಿ ನನ್ನ ಬ್ಲಾಗಿನಲ್ಲಿ ಹಾಕಿಬಿಟ್ಟಿದ್ದೇನೆ. ಅದಕ್ಕಿಂತ ಈಗ ಎಷ್ಟೇ ವೈವಿಧ್ಯತೆಯಿದ್ದರೂ ನಮ್ಮ ಓದುಗರೂ ಅದಕ್ಕೆ ಹೋಲಿಸಿ ಅದಕ್ಕಿಂತ ಚೆಂದವಿಲ್ಲವೆಂದು ಹೇಳಿಬಿಡುತ್ತಾರೆ. ಅವರು ಯಾಕೆ ನಾನೇ ಮೊದಲು ನೋಡಿಕೊಂಡಾಗ ಅದೆಷ್ಟೇ ಚೆನ್ನಾಗಿದ್ದರೂ ಅದು ಇಷ್ಟವಾಗುವುದಿಲ್ಲ. ನನಗೇ ಇಷ್ಟವಾಗದಿದ್ದಮೇಲೆ ಬೇರೆಯವರಿಗೆ ಹೇಗೆ ಇಷ್ಟವಾದೀತು? ಅಲ್ವಾ!
ಸರಿ ಮತ್ತೇನು ಮಾಡುವುದು! ಮತ್ತೆ ತಲೆಯಲ್ಲಿ ಗೊಂದಲ. ಅಷ್ಟರಲ್ಲಿ ಅನೇಕ ಪತ್ರಿಕಾ ಛಾಯಾಗ್ರಾಹಕರೂ ಅಲ್ಲಿ ಟಾಳಾಯಿಸತೊಡಗಿದ್ದರು. ಅವರು ಎಲ್ಲಾ ಕಡೆಯೂ ನನಗೆ ಸಿಗುತ್ತಾರೆ ಅದರಲ್ಲೇನು ವಿಶೇಷವೆಂದುಕೊಂಡು ಸುಮ್ಮನಾದೆ. ನನ್ನ ಮನಸ್ಸು ಸುಮ್ಮನಾದರೂ ನನ್ನ ಕಣ್ಣು ಮೊದಲೇ ಚಂಚಲ[ಇದು ನನ್ನ ಶ್ರೀಮತಿಯ ಅಭಿಪ್ರಾಯ]ಹಾಗೆ ನನಗೆ ಬೇಕೋ ಬೇಡವೋ ಅವರನ್ನೇ ನೋಡತೊಡಗಿತ್ತು. ಆಗ ಶುರುವಾಯಿತಲ್ಲ ಅವರ ಆಟ! ಅವರು ಯಾವ ರೀತಿಯ ಫೋಟೋ ತೆಗೆಯುತ್ತಿದ್ದಾರೋ ನನಗಂತೂ ಗೊತ್ತಿಲ್ಲ. ಅಥವ ಅವರೇ ಸ್ವಲ್ಪ ವಿಭಿನ್ನವಾಗಿ ಹೊಸತೇನನ್ನೋ ಕೊಡಬೇಕೆಂಬ ಸಂಕಲ್ಪದಿಂದ ಇಂಥವುಗಳನ್ನೆಲ್ಲಾ ಮಾಡುತ್ತಿದ್ದಾರೋ ಗೊತ್ತಾಗುತ್ತಿಲ್ಲ. ಆದ್ರೆ ನನಗೆ ಅದು ವೈರೈಟಿಯೆನ್ನಿಸತೊಡಗಿತು. ಮತ್ತೇಕೆ ತಡ ಅವರನ್ನೇ ಕ್ಲಿಕ್ಕಿಸು ಅಂತ ನನ್ನ ಮನಸ್ಸು ಹೇಳಿತು. ಮರುಮಾತಿಲ್ಲದೇ ನಾನು ಮತ್ತು ನನ್ನ ಕ್ಯಾಮೆರಾ ಓಟಗಾರರ ಹಿಂದೆ ಮುಂದೆ ಹಿಂಬಾಲಿಸದೇ, ನಮ್ಮ ಛಾಯಾಗ್ರಾಹಕರನ್ನು ಹಿಂಬಾಲಿಸತೊಡಗಿದವು. ಅದರ ಪರಿಣಾಮ! ನಾನು ಮತ್ತೆ ಅದನ್ನು ಬರೆದು ನಿಮಗೆ ಬೇಸರ ತರಿಸಲಾರೆ! ನೀವೇ ನೋಡಿಬಿಡಿ!
ಗೆಲ್ಲಲೇ ಬೇಕೆಂದು ಓಡುತ್ತಿರುವ ಇಬ್ಬರೂ ಓಟಗಾರರ ನಡುವೆ ನಮ್ಮ ವಿಡಿಯೋ ಕ್ಯಾಮೆರಾ ಮ್ಯಾನ್! ನೀವೇ ಹೇಳಿ ಈಗ ಯಾರಿಗೆ ಬಹುಮಾನ!

ಇವರೆಲ್ಲಾ ನಿಮ್ಮ ಫೋಟೋ ತೆಗೆಯುತ್ತಿದ್ದಾರೆ ಒಳ್ಳೇ ಫೋಸ್ ಕೊಟ್ಟುಬಿಡಿ!

ಅವರವರ ಕಾಯಕ ಅವರವಿಗೆ!

ಓಡುವ ಕಾಲುಗಳ ನಡುವೆ ಕ್ಯಾಮೆರಾವೋ? ಅಥವ ಕ್ಯಾಮೆರಾದೊಳಗೆ ಕಾಲುಗಳೋ! ನೀವೇ ಹೇಳಬೇಕು!
ಕಬ್ಬಿಣದ ಗೇಟಿನ ಹೊರಗೆ ಓಕೆ. ಒಳಗ್ಯಾಕೆ?!

ಅದೆಂಥ ತನ್ಮಯತೇ ಈ ಹಿರಿಯ ಛಾಯಾಗ್ರಾಹಕರಿಗೆ!

ಚುಚ್ಚುತ್ತಿರುವ ಕಬ್ಬಿಣದ ತುದಿಯಮೇಲೆ ಕುಳಿತು ಕ್ಲಿಕ್ಕಾಟ!

ಈ ಫೋಟೋದಲ್ಲಿ ಟ್ರಾಫಿಕ್ ಲೈಟಿನ ಜೊತೆಗೆ ಕ್ಯಾಮೆರಾ ಐದನೇ ಲೈಟಾದಂತೆ ಕಾಣುತ್ತದೆಯಲ್ಲವೇ!

ರಸ್ತೆ ವಿಭಜಕದ ಪಕ್ಕಾ ಕುಳಿತ ಈ ಛಾಯಾಗ್ರಾಹಕನಿಗೆ ಅದೆಂಥ ಚಿತ್ರದ ಕನಸಿರಬಹುದು!