ದಿನಾಂಕ ೨೬-೧೦-೨೦೧೦ ರಂದು ದ.ರಾ.ಬೇಂದ್ರೆ ರಾಷ್ಟ್ರೀಯ ಸ್ಮಾರಕ{ರಿ]ಧಾರವಾಡ ಸಂಸ್ಥೆಯವರು ಬಹುಮಾನ ವಿಜೇತ ಪುಸ್ತಕಗಳ ಅವಲೋಕನ ಮತ್ತು ಕೃತಿಕಾರರಿಗೆ ಬಹುಮಾನ ಸಮ್ಮಾನ ಮಾಡಿದರು ಅದರ ಕೆಲವು ಫೋಟೊಗಳು.
ಆಯ್ಕೆಗಾರರಾದ ರಂಗರಾಜ ವನದುರ್ಗರವರು "ಜಂಗಮ ಪಕೀರನ ಜೋಳಿಗೆ, ಮತ್ತು ವೆಂಡರ್ ಕಣ್ಣು ಪುಸ್ತಕಗಳನ್ನು ಅವಲೋಕಿಸಿದರು.
ಆಯ್ಕೆಗಾರರಲ್ಲಿ ಒಬ್ಬರಾದ ಜಗದೀಶ್ ಮಂಗಳೂರ್ ಮಠರವರು "ಯಜ್ಞ, ವಿಸ್ತರಣೆ, ಡಾ.ಬಸವರಾಜ ಮನ್ಸೂರ್ ಜೀವನಚರಿತ್ರೆ, ಗೋಡೆಗೆ ಬರೆದ ನವಿಲು" ಪುಸ್ತಕಗಳ ಬಗ್ಗೆ ಮಾತಾಡಿದರು.
ಮುಖ್ಯ ಅತಿಥಿಗಳಾದ ಜಯಂತ್ ಕಾಯ್ಕಿಣಿ ಸರ್ ಪುಸ್ತಕಗಳ ಬಗ್ಗೆ ಮಾತಾಡಿದ್ದು ಹೀಗೆ.....
ಕಾರ್ಯಕ್ರಮಕ್ಕೆ ಬಂದಿದ್ದ ಧಾರವಾಡದ ಸಾಹಿತ್ಯಾಭಿಮಾನಿಗಳು.
"ವೆಂಡರ್ ಕಣ್ಣು" ಬಗ್ಗೆ ನನ್ನ ಮಾತು
"ಡಾ.ಬಸವರಾಜ ಮನ್ಸೂರ್ ಜೀವನ ಚರಿತ್ರೆ" ಕೃತಿಕಾರ ಮಾರ್ತಾಂಡಪ್ಪ ಕತ್ತಿ
ತಮ್ಮ ವಿಸ್ತರಣೆ ಪುಸ್ತಕದ ಬಗ್ಗೆ ಮಾತಾಡಿದ ಶ್ರೀಧರ್ ಹೆಗೆಡೆ ಭದ್ರನ್.
ನಾಡಿನ ಖ್ಯಾತ ಕವಿಗಳಾದ ಸಿದ್ದಲಿಂಗ ಪಟ್ಟಣಸೆಟ್ಟಿಯವರು ನನಗೆ ಮಾತಾಡಿಸಲು ಸಿಕ್ಕಿದ್ದು ನನಗೆ ಮರೆಯಲಾಗದ ಅನುಭವ.
ನನಗೆ ಜಯಂತ್ ಕಾಯ್ಕಿಣಿ ಸರ್ ಈ ರೀತಿ ಸಿಕ್ಕಿದ್ದು ನನ್ನ ಸುಯೋಗ.
ಮೂವರು ಹರಟುತ್ತಿದ್ದಾಗ ನಮ್ಮನ್ನು ಕ್ಲಿಕ್ಕಿಸಿದ್ದು ಸಲೀಂ
"ಯಜ್ಞ" ಅನುವಾದ ಕೃತಿಗೆ ಬಹುಮಾನ ಗಳಿಸಿದ ಗೆಳೆಯ ಚಿದಾನಂದ್ ಸಾಲಿ ನನ್ನ ಕ್ಯಾಮೆರಾಗೆ ಸೆರೆಸಿಕ್ಕಿದ್ದು ಹೀಗೆ.
ಕವನ ವಿಭಾಗದಲ್ಲಿ ಪ್ರಶಸ್ಥಿ ಗಳಿಸಿದ ಗೆಳೆಯ ಆರೀಪ್ ರಾಜ ಸಿನಿಮಾದಲ್ಲಿ ಬುದ್ದಿವಂತ ವಿಲನ್ ಪಾತ್ರದಂತೆ ಕಾಣುತ್ತಾರಲ್ಲವೇ?
ಸಂಜೆ ಸೃಜನ ರಂಗಮಂದಿರದಲ್ಲಿ ಗಣ್ಯರ ಜೊತೆಗೆ ಪ್ರಶಸ್ಥಿ ವಿಜೇತರು.
ಕನ್ನಡ ನಾಡಿನ ಖ್ಯಾತ ಕವಿ ಚೆನ್ನವೀರಕಣವಿಯವರು ನಮ್ಮ ಕಾರ್ಯಕ್ರಮದಲ್ಲಿ
ಸಹಜ ಬೆಳಕಿನಲ್ಲಿ ಬೇಂದ್ರೆಯವರ ಫೋಟೊವನ್ನು ಸೆರೆಯಿಡಿದ ಬಾಗಲಕೋಟದ ಇಂದ್ರಕುಮಾರ್.
ಸೃಜನ ರಂಗಮಂದಿರದಲ್ಲಿ ಸಂಜೆ ಸಿಕ್ಕ ಹಿರಿಯ ಬ್ಲಾಗಿಗರಾದ ಸುನಾಥ್[ಸುಧೀಂದ್ರ ದೇಶಪಾಂಡೆ]ಸರ್
ಸಮಾರಂಭದಲ್ಲಿ ಖ್ಯಾತ ಸಾಹಿತಿಗಳು
ನಿನ್ನೆ ರಾತ್ರಿ ಬೆಂಗಳೂರಿಗೆ ಬಂದಾಗ ರಾತ್ರಿ ಹತ್ತು ಗಂಟೆ. ಇವತ್ತು ಬೆಳಿಗ್ಗೆ ಕೆಲವು ಫೋಟೊಗಳನ್ನು ಆಯ್ಕೆ ಮಾಡಿ ಬ್ಲಾಗಿಗೆ ಹಾಕಿದ್ದೇನೆ. ಮುಂದಿನ ಭಾರಿ ಧಾರವಾಡದ ಅನುಭವಗಳು.
ಚಿತ್ರಗಳು.: ಮುಂಡರಗಿಯ ಸಲೀಂ,
ಬಾಗಲಕೋಟದ ಇಂದ್ರಕುಮಾರ.
ಶಿವು.ಕೆ


















