ಬ್ಲಾಗ್ ಗೆಳೆಯರಿಗೆ ನಮಸ್ಕಾರ.
ನನ್ನದೇ ಕೆಲವು ವೈಯಕ್ತಿಕ ಕಾರಣಗಳು ಮತ್ತು ಬಿಡುವಿಲ್ಲದ ಕೆಲಸದಿಂದಾಗಿ ನನ್ನ ಛಾಯಕನ್ನಡಿ ಬ್ಲಾಗ್‍ನಲ್ಲಿ ಇತ್ತೀಚೆಗೆ ಏನನ್ನು ಬರೆಯಲಾಗಿರಲಿಲ್ಲ. ಈಗ ಮತ್ತೆ ಬರೆಯುವ ಉತ್ಸಾಹ ಮೂಡಿಸಿರುವುದು ಇವತ್ತು ನನಗೆ ಬಂದ ಈ ಪತ್ರ.
ಈ ಪತ್ರವನ್ನು ಬರೆದ ವೆಂಕಟೇಶ್‍ರವರು ನನಗೆ ಪರಿಚಯವಿಲ್ಲ. ಎಲ್ಲಿಂದಲೋ ನನ್ನ ಪುಸ್ತಕವನ್ನು ಪಡೆದುಕೊಂಡು ಓದಿ ನಂತರ ಅವರ ಅಭಿಪ್ರಾಯವನ್ನು ನನಗೆ ಈ ಪತ್ರದ ಮೂಲಕ ಬರೆದು ಮತ್ತೆ ಬರವಣಿಗೆಯಲ್ಲಿ ತೊಡಗಿಸಿಕೊಳ್ಳುವಂತ ಸ್ಪೂರ್ತಿ ನೀಡಿದ್ದಾರೆ. ಸಮುದ್ರದ ಉಪ್ಪು-ಬೆಟ್ಟದ ನೆಲ್ಲಿಕಾಯಿ ಒಂದಾಗುವ ಹಾಗೆ ಕಣ್ಣಿಗೆ ಕಾಣದ ದೂರದ ಓದುಗರೊಬ್ಬರು ನನ್ನ "ಗುಬ್ಬಿ ಎಂಜಲು" ಲಲಿತಪ್ರಬಂಧಗಳನ್ನು ಓದಿ ಇಷ್ಟಪಟ್ಟು ತಮ್ಮ ಅಭಿಪ್ರಾಯವನ್ನು ಈ ಪತ್ರದ ಮೂಲಕ ಬರೆದು ಕಳೆದುಹೋಗಿದ್ದ ನನ್ನ ಉತ್ಸಾಹ ಮತ್ತು ಸ್ಫೂರ್ತಿಯನ್ನು ನೀಡಿ ಮತ್ತೆ ಪಟ್ಟಾಗಿ ಕೂತು ಬರೆಯುವಂತೆ ಪ್ರೇರೇಪಿಸುತ್ತಿದ್ದಾರೆ!
ನನಗಾದ ಸಂತೋಷವನ್ನು ನಿಮ್ಮೊಂದಿಗೆ ಹೀಗೆ ಹಂಚಿಕೊಳ್ಳಬೇಕೆನಿಸಿತು. ಅವರ ಪತ್ರದ ಪ್ರತಿ ನಿಮಗಾಗಿ.
ಪ್ರಿಯ ಮಿತ್ರರೇ,
ನಮಸ್ಕಾರ,
ಈಗಷ್ಟೇ ನಿಮ್ಮ ಲಲಿತ ಪ್ರಬಂಧಗಳ ಬರಹಗಳಾದ "ಗುಬ್ಬಿ ಎಂಜಲು" ಪುಸ್ತಕ ಓದಿದೆ.
ನನ್ನ ಸ್ನೇಹಿತನಿಂದ ಎರವಲು ಪಡೆದು ಓದಿದ ನಿಮ್ಮ ಈ ಕೃತಿ ನಿಜಕ್ಕೂ ನನಗೆ ಸಂತೋಷವಾದುದಲ್ಲದೇ ವಿಸ್ಮಯವೂ ಆಯ್ತು. ಈಗ ಲಲಿತ ಪ್ರಬಂಧಗಳನ್ನು ಬರೆಯುವವರು ವಿರಳವಾಗುತ್ತಿರುವಾಗ ಹೀಗೆ ತುಂಬ ಸರಳವಾಗಿ ಫ್ರೆಷ್‍ನೆಶ್ ಆಗಿ ನಗೆ ಉಕ್ಕಿಸುವ ನಿಮ್ಮ ಒಂದೊಂದು ಅಂಕಣಗಳು ಸೊಗಸಾಗಿವೆ. ಎಲ್ಲಕ್ಕಿಂತ ಮುಖ್ಯವಾಗಿ ಗುಬ್ಬಿಗಳ ಮುಖಪುಟ ಹೊಂದಿರುವ ಚಿತ್ರ ತುಂಬ ಆಕರ್ಷಕವಾಗಿದೆ. ಈ ಹಿಂದೆ ಪೂರ್ಣಚಂದ್ರ ತೇಜಸ್ವಿಯವರ ಮಿಂಚುಳ್ಳಿ, ಹೆಜ್ಜೆ ಮೂಡದ ಹಾದಿ, ಪುಸ್ತಕದಲ್ಲಿ ಮುಖಪುಟ ಹಕ್ಕಿಗಳಿಂದ ಹೊರಬಂದಿತ್ತು. ಆದರೆ ಬಹುದಿನಗಳ ಬಳಿಕ ಗುಬ್ಬಿಗಳು ಮತ್ತೆ ಕಾಣಿಸಿದೆ ನಿಮ್ಮ ಪುಸ್ತಕದಲ್ಲಿ ಸ್ವತಃ ಅನುಭವಗಳ ಮೂಲಕ!
ಜಿರಲೆ, ಬಾಲ್ಡಿತಲೆ, ತಲೆಕೂದಲುಗಳ ಪುರಾಣ, ಟೀ, ಯಶವಂತಪುರ ಸಂತೆ, ರೈಲುನಿಲ್ದಾಣ, ಸ್ವಿಮ್ಮಿಂಗ್ ಪುರಾಣ...ಪ್ರತಿ ವಿಷಯದ ಬರಹಗಳು ವಿಭಿನ್ನವಾಗಿವೆ. ಆದರೆ ಟೂ ವೀಲರ್ ಪುರಾಣದ ಕಥೆ ನನ್ನದೊಂದು ಸಂದೇಹ ಸ್ಕೂಟರ್, ಹೋಂಡ, ಕೈನೆಟಿಕ್ ಹೊರತುಪಡಿಸಿದರೆ, ಬೈಕ್‍ಗಳಿಗೆಲ್ಲಾ ನಂಬರ್ ಪ್ಲೇಟ್ ಸ್ವಲ್ಪ ಮೇಲೆ ಇರುತ್ತದೆ. ನಾಯಿಗಳು ಅಷ್ಟೋಂದು ಮೇಲೆ ಕಾಲೆತ್ತುವ ಸಾಹಸ ಮಾಡುವುದಿಲ್ಲ. ಇನ್ನು ನಂಬರ್ ಬರೆಯುವವರು ಹುಡುಕಿಕೊಂಡು ಬರುತ್ತಾರ ಅಂತ ಅನ್ನಿಸ್ತು ಅಷ್ಟೇ! ಅದರಲ್ಲೂ ನೀವು ಬೆಂಗಳೂರನ್ನು ಕೇಂದ್ರವನ್ನಾಗಿಸಿ ಬರೆದಿದ್ದೀರಲ್ಲ ಈ ಬರಹಗಳು ಸ್ವಲ್ಪ ಹೆಚ್ಚೇ ಖುಷಿಕೊಟ್ಟಿತು. ಮಲ್ಲೇಶ್ವರ ರೈಲ್ವೇ ನಿಲ್ಡಾಣ, ಯಶವಂತಪುರ ಸಂತೆಯಲ್ಲಿ ನಾನು ಓಡಾಡಿದ್ದೇನೆ. ಆದರೆ ನಿಮ್ಮ ಲೇಖನ ಓದಿದಾಗ ಆ ಹಳೆಯ ನೆನಪೇ ಬಂತು: ನಿಮ್ಮ ಬರಹ ಶೈಲಿ ಸೊಗಸಾಗಿದೆ. ಚೊಚ್ಚಲ ಕೃತಿ "ವೆಂಡರ್ ಕಣ್ಣು" ಓದಬೇಕೆನಿಸಿದೆ. ಆದರೆ ಪುಸ್ತಕ ಸಿಕ್ಕಿಲ್ಲ. ಹಾಗೆ ನಿಮ್ಮ ಸುಂದರ ಛಾಯಾಚಿತ್ರಗಳನ್ನು ಪ್ರಕೃತಿಯ ಹಕ್ಕಿಗಳನ್ನು ನೋಡುವಾಸೆಯಿದೆ. ನಿಮಗೆ ಇನ್ನೂ ಇಂತಹ ಇತ್ತಮ ಕೃತಿ ಬರೆಯುವ ಅವಕಾಶ ಕೂಡಿಬರಲಿ. ನಿಮಗೆ ಶುಭವಾಗಲಿ....

ಸಂಪರ್ಕದಲ್ಲಿರಿ....
ಸ್ನೇಹದಿಂದ....ವೆಂಕಟೇಶ್ ಸಿ.ಅರ್.
ಸ್ನೇಹದಿಂದ....ವೆಂಕಟೇಶ್ ಸಿ.ಅರ್.
ಬದುಕಿನಲ್ಲಿ ಆಗಾಗ ಸ್ಪೂರ್ತಿ ನೀಡಲು ಇಂಥವರು ಬೇಕಲ್ಲವೇ...ಪ್ರತಿಯೊಬ್ಬರಿಗೂ ಇಂಥವರು ಸಿಕ್ಕಲಿ, ಸ್ಪೂರ್ತಿ ನೀಡಲಿ ಎಂದು ಹಾರೈಸುತ್ತಾ.
ಪ್ರೀತಿಯಿಂದ..
ಶಿವು.ಕೆ
21 comments:
ವಾಹ್..!! ಗ್ರೇಟ್ , ನಿಜಕ್ಕೂ ಸ್ಪೂರ್ತಿದಾಯಕ ಪತ್ರ.. ಬರಹಗಾರರಿಗೆ ಇದಕ್ಕಿಂತ ಸ್ಪೂರ್ತಿ ಬೇಕೆ.
ಹಾಡಿಗೆ ಚಪ್ಪಾಳೆ...ಚಿತ್ರಕ್ಕೆ ಹೂ ಮಾಲೆ, ನಾಟ್ಯಕ್ಕೆ ಫಲಕ, ಬರಹಕ್ಕೆ ಇನ್ನೊಂದು ಅಭಿನಂದನಾ ಬರಹದ ಪತ್ರ..ಇವೆ ಸ್ಪೂರ್ತಿಗೆ ಸೆಲೆಗಳು..ಅಭಿನಂದನೆಗಳು
ಸುಗುಣಕ್ಕ,,,
ಹೌದು...ಇಂಥವೂ ಆಗಾಗ ನಮಗೆ ಬೇಕಲ್ವಾ..ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು.
ಶ್ರೀಕಾಂತ್ ಮಂಜುನಾಥ್ ಸರ್,
ನಿಮ್ಮ ಅಭಿಪ್ರಾಯ ನೂರಕ್ಕೆ ನೂರರಷ್ಟು ನಿಜ. ಪ್ರತಿಕ್ರಿಯೆಗೆ ಧನ್ಯವಾದಗಳು.
ಮತ್ತೆ ಬರೆಯಿರಿ.. ಮತ್ತೆ ಕ್ಲಿಕ್ಕಿಸಿ..
ನಿಜಕ್ಕೂ ಸ್ಫೂರ್ತಿದಾಯಕ ಪತ್ರ.. ಅಭಿನಂದನೆಗಳು.. ಹೊಸ ಸ್ಫೂರ್ತಿ ಇನ್ನಷ್ಟು ಬರಹಗಳಿಗೆ ನಾಂದಿಯಾಗಲಿ..
ಓದುಗರ ಆಸಕ್ತಿ ಮತ್ತು ನಿಮ್ಮ ಪ್ರಬಂಧಗಳ ಗಹನತೆ ಎರಡೂ ವಿದಿತ ನಿಮ್ಮ ಲೇಖನದಿಂದ. ಓದುಗನಿಗೆ ಇಷ್ಟವಾದರೆ ಅದೇ ಧನ್ಯತೆ ಲೇಖಕನಿಗೆ. ನಿಮ್ಮ ಗುಬ್ಬಿ ಎಂಜಲಿಗೂ ಅಭೂತ ಯಶಸ್ಸು ಸಿಗಲಿ ಎಂದು ಹಾರೈಕೆ.
ಮಿಂಚುಳ್ಳಿ:
ಖಂಡಿತ...ಥ್ಯಾಂಕ್ಸ್..
ದಿಲೀಪ್ ಹೆಗಡೆ:
ಹೌದು...ಖಂಡಿತ ಬರೆಯುತ್ತೇನೆ...ಧನ್ಯವಾದಗಳು.
ಅಜಾದ್:
ಇಂಥ ಪತ್ರಗಳು ನೀಡುವ ಖುಷಿಯನ್ನು ವಿವರಿಸಲಾಗದು...ನಿಮ್ಮ ಆರೈಕೆಗೆ ಧನ್ಯವಾದಗಳು.
congrats sir...
innashTu bareyiri.....
ಹಾಡೂ ಹಕ್ಕಿಗೂ ಕೆಲವೊಮ್ಮೆ ಬಿರುದು ಸನ್ಮಾನಗಳು ಬೇಕು .ಇನ್ನೂ ಚನ್ನಾಗಿ ಹಾಡಲು !!!
ಬರೆದ ಸಾರ್ಥಕತೆ ಕಾಣುವುದು ಓದುಗರ ಸ್ಪಂದನೆಯಲ್ಲಿ , ನಿಮ್ಮ ಅನುಭವ ಚೆನ್ನಾಗಿದೆ. ಬ್ಲಾಗ್ ಲೋಕಕ್ಕೆ ಮತ್ತೆ ಬಂದದ್ದು ಸಂತಸ ತಂದಿದೆ. ಅಭಿನಂದನೆಗಳು ಶಿವೂ ಸಾರ್.
ಓದುಗನೇ ಇಲ್ಲದ ಮೇಲೆ ಬರಹಗಾರನಿಗೆ ಎಂತ ಕೆಲಸ. ನಿಮಗೆ ಇಂತಹ ಓದುಗ ಸಿಕ್ಕಿದ್ದು ನನಗೆ ಬಹಳ ಖುಷಿ ತಂದಿತು. ಅತ್ಯಂತ ಸ್ಪೂರ್ತಿದಾಯಕ ಪತ್ರ.
dinakar sir: thanks
ದಯಾನಂದ: ನಿಮ್ಮ ಮಾತು ನಿಜ ಪ್ರತಿಕ್ರಿಯೆಗೆ ಥ್ಯಾಂಕ್ಸ್.
ಬಾಲು ಸರ್,
ಬಿಡುವಿಲ್ಲದ ಕಾರ್ಯಕ್ರಮದ ನಡುವೆ ಇಂಥ ಪತ್ರಗಳು ಮತ್ತೆ ನಮ್ಮನ್ನು ಹೊಸ ಉತ್ಸಾಹ ಮೂಡಿಸುತ್ತವೆ...ಮತ್ತೆ ಬರೆಯುವ ಪ್ರಯತ್ನದಲ್ಲಿದ್ದೇನೆ.ಧನ್ಯವಾದಗಳು.
ಬದರಿನಾಥ್ ಸರ್,
ಓದುವವರಿದ್ದಾಗಲೇ ಬರೆಯುವ ಉತ್ಸಾಹ ಮೂಡುವುದು...ನಿಜ. ಧನ್ಯವಾದಗಳು.
ಶಿವು ಸರ್,
ಅವರ ಪತ್ರ ಹಾಗೂ ನಿಮ್ಮ ಪುಸ್ತಕ ಎರಡೂ ಸ್ಪೂರ್ತಿದಾಯಕ......ಅಭಿನಂದನೆಗಳು ಸರ್...
ನನ್ನ ಗೆಳೆಯ ವೆಂಕಟೇಶ್ ನಿಜಕ್ಕೂ ಒಬ್ಬ ಅದ್ಭುತ ವಿಮರ್ಶೆಗಾರ. ಪುಸ್ತಕಗಳನ್ನೂ ಓದುವುದೆಂದರೆ ಇವನಿಗೆ ಬಲು ಇಷ್ಟ.. ದಿನದಲ್ಲಿ ಒಂದು ಗಂಟೆ ಒಂದಲೆಂದೇ ಸಮಯವನ್ನೂ ಮೀಸಲಿಡುತ್ತಾನೆ. ನಿಜಕ್ಕೂ ಇಂಥ ವಿಮರ್ಶೆ ಬರಹಗಾರರಲ್ಲಿ ಸ್ಪೂರ್ತಿಯನ್ನು ತುಂಬುತ್ತದೆ.
Post a Comment