ಅದೊಂದು ಅನಿರೀಕ್ಷಿತ ಬೇಟಿ
ಗೆಳೆಯ ಸಿಕ್ಕಿದ್ದ ಇಪ್ಪತ್ತು ವರ್ಷಗಳ ನಂತರ
ಉಭಯ ಕುಶಲೋಪರಿ, ಕಷ್ಟ
ಸುಖ, ಉದ್ಯೋಗ, ಮದುವೆ
ಆಚಾರ ವಿಚಾರಗಳು ಇಣುಕಿತ್ತು
ಕೈ ಕುಲುಕಿ, ಮನಕಲಕಿ
ಅತಿ ವಿನಯದ ನಾಗರೀಕತೆಯ ತೆರೆಯೊಳಗೆ
ಕೃತಕತೆ, ಇಗೋಗಳ ಪೊರೆಯೊಳಗೆ.
ಬಾಲ್ಯದಲ್ಲಿ
ಜೊತೆಗೂಡಿ ಆಡಿದ್ದು, ತಿಂದಿದ್ದು,
ರೇಗಿಸಿದ್ದು, ಕಿಚಾಯಿಸಿದ್ದು
ಅರಳಲು ಕಾತರಿಸುವ ಮೊಗ್ಗಿನ ಹಾಗೆ
ಎಲೆಯಿಂದ ಜಾರಿದ ಇಬ್ಬನಿ
ನಯವಾಗಿ ಹೂದಳದಲ್ಲಿ ಇಳಿದ ಹಾಗೆ.
ಎಲ್ಲವೂ ತೆರೆದ ಬೆತ್ತಲು ಮನಸ್ಸಿನೊಳಗೆ
ಹಸಿ ಹಸಿ ಮುಗ್ದತೆಯೊಳಗೆ.
ಅದೆಲ್ಲವೂ ಅಂದು ಹೂ ಪರಿಮಳದಂತೆ ವಾಸ್ತವ.
ಇಂದು ವಿದೇಶಿ ಪರಿಮಳದಂತೆ ಕೃತಕ.
ಬಾಲ್ಯದ ದಟ್ಟ ಸ್ನೇಹದ ಕುಚೇಲಗಳು
ಇಂದು ಆತ್ಮಿಯತೆ ಆಚೆಗಿನ
ಹೊರನೋಟದ ಚೇಲಗಳು.
ಈ ಕವನವನ್ನು ಬರೆದಿದ್ದು 1997 ರಲ್ಲಿ. ಆಗ ನನ್ನೊಳಗಿನ ಬರವಣಿಗೆಯ ತುಡಿತವೇ ಇಂಥ ಪುಟ್ಟ ಪುಟ್ಟ ಕವನಗಳು. ಓದಿ ನಿಮ್ಮ ಅಭಿಪ್ರಾಯವನ್ನು ತಿಳಿಸಿ.
ಶಿವು.ಕೆ
15 comments:
ವಾಸ್ತವಕ್ಕೆ ಹಿಡಿದ ಕನ್ನಡಿ ...
ಇಂದಿನ ಓಟದ ಬದುಕಲ್ಲಿ ನಾವು ನಿನ್ನೆಯ ಬೇಸರವನ್ನ ಅಲ್ಲೇ ಬಿಡದೆ, ಬೇಕಾದದ್ದನ್ನ, ಬೇಕಾದವರನ್ನ ...ಅಲ್ಲೇ ಬಿಟ್ಟು ಬಂದು ಎಂದು ಬೇಸರಿಸುತ್ತೇವೆ ....
ಶಿವು ಚನ್ನಾಗಿದೆ...ಕವನದ ವನದಲ್ಲಿ ವಿಹರಿಸಿ ನೆನೆದು ನೆನಪುಗಳ ನವಿರಾಗಿ ಚಲ್ಲಿದ್ದು... ಚನ್ನಾಗಿದೆ...
ಶಿವು ;ಸುಂದರ ಸೊಬಗಿನ ಕವನ.ಬಾಲ್ಯದ ನಿಜವಾದ ಸ್ನೇಹದ ದಿನಗಳ ಸೊಬಗೆ ಅಂದ!ನನ್ನ ಬ್ಲಾಗಿಗೂ ಬನ್ನಿ ಸ್ವಾಮಿ.ನಮಸ್ಕಾರ.
ಶಿವು ಸರ್, ಕವನ ಸಿಂಪ್ಲಿ ಸೂಪರ್ಬ...
ಸ್ನೇಹದಿಂದ,
ತುಂಬಾ ಚೆನ್ನಾಗಿದೆ ಕವನ.. ನೆನಪುಗಳು ಕಣ್ಣ ಮುಂದೆ ಬಂದವು
ಶಿವು ಸರ್...
ತುಂಬಾ ಸುಂದರ ಸಾಲುಗಳು...
ಎಲ್ಲವೂ...
ಶುರುವಿನಲ್ಲಿ ಸುಂದರವಾಗಿರುತ್ತವೆ...
ಬೆಳೆ..
ಬೆಳೆದ ಹಾಗೆ ..
ಬವಣೆಗಳೂ ಬೆಳೆದುಬಿಡುತ್ತವೆ...
ಬೇಡದ ಕಳೆಯಂತೆ...
ಯಾವಾಗಲೂ ..
ಹಸಿರಾಗಿರಲು ಸಾಧ್ಯ..
ನಿರ್ಮಲ ..
ಆಗಸದಂಥಹ ಮನಸಿದ್ದರೆ...
ಮಗುವಿನಂತೆ..
ಆಗತಾನೆ ಅರಳಿದ ಹೂವಿನಂತೆ...
ಸುಂದರ ಸಾಲುಗಳಿಗೆ ಅಭಿನಂದನೆಗಳು...
ಚೆನ್ನಾಗಿದೆ ಕವನ.. ವಾಸ್ತವ ಜೀವದಲ್ಲಿ ಭಾವನಾತ್ಮಕ ತೊಳಲಾಟ..
Vanana Shigehalli ಮೇಡಮ್,
ನಿಮ್ಮ ಅಭಿಪ್ರಾಯಕ್ಕೆ ಧನ್ಯವಾದಗಳು.
ಅಜಾದ್: ಧನ್ಯವಾದಗಳು.
ಡಾಕ್ಟರ್ ಕೃಷ್ಣಮೂರ್ತಿ ಸರ್,: ನನ್ನ ಕವನ ನಿಮ್ಮ ಬಾಲ್ಯದ ನೆನಪನ್ನು ಮರುಕಳಿಸಿದ್ದರೆ ಕವನ ಸಾರ್ಥಕವೆಂದುಕೊಳ್ಳುತ್ತೇನೆ. FB ಹಿಡಿತದಿಂದ ಬಿಡಿಸಿಕೊಂಡು ಎಲ್ಲರ ಬ್ಲಾಗಿಗೂ ಹೋಗುತ್ತಿದ್ದೇನೆ.
ಚಂದ್ರು ಸರ್,: ಧನ್ಯವಾದಗಳು.
ಪ್ರಕಾಶ್ ಸರ್,
ಬಾಲ್ಯದ ಸ್ಥಿತಿ ಈಗ ಇರುವುದಿಲ್ಲ ಅಲ್ಲವೇ...ಈಗೆಲ್ಲ ಬದುಕಿನ ಬಗೆಗಿನ ಹತ್ತಾರು ಚಿಂತೆಗಳು ಕಾಡುತ್ತವೆ..ಕವನವನ್ನು ಇಷ್ಟಪಟ್ಟು ಪ್ರತಿಕ್ರಿಯಿದ್ದಕ್ಕೆ ಧನ್ಯವಾದಗಳು.
ಸಂಧ್ಯಾ ಶ್ರೀಧರ್ ಭಟ್: ಪ್ರತಿಕ್ರಿಯೆಗೆ ಧನ್ಯವಾದಗಳು.
ಸುಗುಣಕ್ಕ: ಕವನವನ್ನು ಮೆಚ್ಚಿದ್ದಕ್ಕೆ ಧನ್ಯವಾದಗಳು.
ಶಿವು ಸರ್, ಕವನ ಸಿಂಪ್ಲಿ ಸೂಪರ್ಬ... ಸ್ನೇಹದಿಂದ,
Post a Comment