ಮನುಷ್ಯರಲ್ಲಿ ಭಾವನಾತ್ಮಕ ಸಂಭಂದಗಳು ಹುಟ್ಟಿಕೊಂಡ ಮರುದಿನವೇ ಈ ಕಾನೂನು ಅನ್ನುವುದು ಹುಟ್ಟಿಕೊಂಡಿರಬೇಕು. ಏಕೆಂದರೆ ಅನಾದಿ ಕಾಲದಿಂದಲೂ ಮಾನವನ ಭಾವನೆಗಳು, ಅದರಿಂದ ಸೃಷ್ಟಿಯಾದ ಸಂಭಂದಗಳಿಂದಾಗಿ ಆತ ಬದುಕಿನಲ್ಲಿ ಸುಖ ನೆಮ್ಮದಿಯನ್ನು ಅನುಭವಿಸುತ್ತಿರುವಾಗಲೇ ಮತ್ತೊಂದು ದಿಕ್ಕಿನಲ್ಲಿ ದ್ವೇಷ ಅಸೂಯೆ ಇತ್ಯಾದಿ ಕೆಟ್ಟಗುಣಗಳೂ ಕೂಡ ಹುಟ್ಟಿಕೊಂಡವು. ಮುಂದೆ ಈ ಕೆಟ್ಟ ಗುಣಗಳು ಹೆಚ್ಚಾದಾಗ ಅದನ್ನು ನಿಯಂತ್ರಿಸಲು ಕಾನೂನು ಅಂತ ಮಾನವ ಸೃಷ್ಟಿಸಿಕೊಂಡ. ಇದು ಒಂಥರ ಮನುಷ್ಯನ ಏಳಿಗೆಗಾಗಿ ಮಾಡಿಕೊಂಡ ಒಂದು ಹೊಸ ವ್ಯವಸ್ಥೆ. ಇದು ಅನಾದಿ ಕಾಲದಿಂದಲೂ ಅದರದೇ ಆದ ರೂಪದಲ್ಲಿ ಚೌಕಟ್ಟಿನಲ್ಲಿ ಆಗಿನಿಂದ ಈಗಿನವರೆಗೆ ನಮಗೆ ಚಾಲ್ತಿಯಲ್ಲಿದೆ. ಆದರೆ ಮನುಷ್ಯನ ಸಂಭಂಧಗಳಲ್ಲಿ ಭಾವನೆಗಳು ಮಾತ್ರ ಸಾವಿರಾರು ವರ್ಷಗಳು ಕಳೆದರೂ ಮೂಲ ಅರ್ಥವನ್ನು ಮತ್ತು ಅದರ ಸಂತೋಷವನ್ನು ಕಳೆದುಕೊಳ್ಳದೇ ಇಂದಿನವರೆಗೂ ಮನಸ್ಸುಗಳಲ್ಲಿ ಹರಿದಾಡುತ್ತಿವೆ.
ನಾವು ಬದುಕಲು ಮಾಡಿಕೊಂಡಿರುವ ಕಾನೂನಿಗೂ ಮನುಷ್ಯನ ಭಾವನಾತ್ಮಕ ಸಂಭಂದಗಳಿಗೂ ಆಗಾಗ ಯುದ್ಧ ನಡೆಯುತ್ತಿರುತ್ತದೆ. ಸಾವಿರಾರು ವರ್ಷಗಳ ಹಿಂದಿನ ಕಾಡು, ಗುಡ್ಡಗಾಡಿನ ಜನಾಂಗ ನಂತರ ರಾಜರ ಆಡಳಿತ, ಆನಂತರ ಬಂದ ಪ್ರಜಾಪ್ರಭುತ್ವದ ಈ ದೀರ್ಘ ಅವಧಿಯಲ್ಲಿ ಕಾನೂನು ನೂರಾರು ರೂಪಗಳನ್ನು ಪಡೆದುಕೊಂಡಿದೆ. ಭಾವನಾತ್ಮಕ ವಿಚಾರಗಳು ಅದೆಷ್ಟೇ ಗಾಢವಾದ ಪರಿಣಾಮವನ್ನು ಬೀರುತ್ತಿದ್ದರೂ ಅಂತ್ಯದಲ್ಲಿ ಕಾನೂನೇ ಗೆಲ್ಲುವುದು ತಾನೆ. ಇದನ್ನು ನಾವು ಆಗಿನ ಕಾಲದಿಂದಲೂ ನೋಡುತ್ತಾ ಬಂದಿದ್ದೇವೆ. ಗಂಡ ಹೆಂಡತಿ ನಡುವೆ, ಅಪ್ಪ-ಮಕ್ಕಳು, ಪ್ರಜೆಗಳು-ರಾಜ, ಸರ್ಕಾರ-ಪ್ರಜೆಗಳು ಹೀಗೆ ಅವಲೋಕಿಸಿದಾಗ ಎಲ್ಲಾ ಸಮಯದಲ್ಲೂ ಕಾನೂನು ಗೆಲ್ಲುವುದು ಮತ್ತು ಗೆಲ್ಲಬೇಕೆಂದು ನಾವು ನೀವು ಆಶಿಸುತ್ತೇವೆ ಅಲ್ವಾ...ಆದರೂ ಇದನ್ನು ಮೀರಿ ಕೆಲವು ವಿಭಿನ್ನ ಸಂಧರ್ಭದಲ್ಲಿ ಕಾನೂನನ್ನು ಮೀರಿ ಭಾವನಾತ್ಮಕ ಸಂಭಂಧಗಳು ಹೇಗೆ ಗೆಲುವು ಸಾಧಿಸುತ್ತವೆ ಎನ್ನುವುದನ್ನು ಒಂದು ಸಿನಿಮಾದಲ್ಲಿ ಸೊಗಸಾಗಿ ತೋರಿಸಿದ್ದಾರೆ. ಅದು "The Terminal" ಎನ್ನುವ ಆಂಗ್ಲ ಸಿನಿಮ.
ಈ ಸಿನಿಮವನ್ನು ನೋಡಿದ ಮೇಲೆ ಇಂಥ ಅದ್ಬುತವಾದ ಸಿನಿಮವನ್ನು ನಿರ್ಧೇಶಿಸಿದವರಾರು ಅಂತ ನೋಡಿದರೆ ಅದು ಮತ್ಯಾರು ಅಲ್ಲ. ನನ್ನ ಮೆಚ್ಚಿನ ಸ್ಫಿಫನ್ ಸ್ಫಿಲ್‍ಬರ್ಗ್. ಆತನ ಕಪ್ಪುಬಿಳುಪಿನ "ಸಿಂಡ್ಲರ್ ಲಿಸ್ಟ್" ಸಿನಿಮವನ್ನು ನೋಡಿದಾಗಲೇ ಅತನ ಅಭಿಮಾನಿಯಾಗಿಬಿಟ್ಟಿದ್ದೆ. ನಡುವೆ ಜುರೇಸಿಕ್ ಪಾರ್ಕ್ ಕಮರ್ಸಿಯಲ್ ಸಿನಿಮ ಸರಣಿಯನ್ನು ನೋಡಿದಾಗ ಈತ ಎಲ್ಲ ವಿಧದ ಸಿನಿಮಾಗಳನ್ನು ತನ್ನ ನಿರ್ಧೇಶನದ ಸೂಕ್ಷ್ಮತೆಯನ್ನು ತೋರಿಸುವ ಕುಶಲತೆಯನ್ನು ಹೊಂದಿದ್ದಾನೆ ಅಂತ ಅವನ ಸಿನಿಮಾಗಳಿಗಾಗಿ ಕಾಯುತ್ತಿರುತ್ತೇನೆ. ಈಗ ಆತ ನಿರ್ಧೇಶಿಸಿದ ಟರ್ಮಿನಲ್ ಸಿನಿಮವನ್ನು ಒಮ್ಮೆ ಅವಲೋಕಿಸೋಣ.
ಈ ಚಿತ್ರದ ನಾಯಕ ವಿಕ್ಟರ್ ನವ್ರೋಸ್ಕಿ ತನ್ನ ಪುಟ್ಟ ದೇಶವಾದ ಕ್ರಕೋಜಿಯ ದಿಂದ ನ್ಯೂಯಾರ್ಕಿನ ಅಂತರರಾಷ್ಟ್ರೀಯ ವಿಮಾನ ನಿಲ್ದಾಣವಾದ JFKನಲ್ಲಿ ಇಳಿಯುತ್ತಾನೆ. ಅವನಿಗೆ ಆಂಗ್ಲ ಭಾಷೆ ಬರುವುದಿಲ್ಲ. ಆದ್ರೆ ಸ್ವಲ್ಪ ಸ್ವಲ್ಪ ಅರ್ಥ ಮಾಡಿಕೊಳ್ಳುತ್ತಾನೆ. ಅವನ ಪಾಸ್ ಫೋರ್ಟ್, ಇಮಿಗ್ರೇಷನ್ ಚೆಕ್ ಮಾಡುವ ಹೊತ್ತಿಗೆ ಅವನ ದೇಶದಲ್ಲಿ ಕ್ರಾಂತಿಯುಂಟಾಗಿ ಅಲ್ಲಿ ಸರ್ಕಾರವೇ ಇಲ್ಲದಂತಾಗಿರುವುದು ವಿಮಾನ ನಿಲ್ದಾಣದ ಟರ್ಮಿನಲ್‍ಗಳಲ್ಲಿ ಇರುವ ಟಿವಿಗಳಲ್ಲಿ ಬ್ರೇಕಿಂಗ್ ನ್ಯೂಸ್ ಆಗಿಬರುತ್ತಿರುತ್ತದೆ. ಈ ಅಂತರರಾಷ್ಟ್ರೀಯ ನಿಲ್ದಾಣದ ಟರ್ಮಿನಲ್ ಅಧಿಕಾರಿಯಾದ ಡಿಕ್ಸನ್ ದಕ್ಷ ಕಾನೂನು ಪಾಲಕ. ಆತನ ಕೈಗೆ ಸಿಕ್ಕಮೇಲೆ ಇವನ ಕತೆ ಮುಗೀತು. "You are the citizen of nowhere" ಅಂತ ಅವನ ಪಾಸ್ ಪೋರ್ಟ್ ಕಿತ್ತುಕೊಂಡು ಅತ್ತ ಅವನ ದೇಶವಾದ ಕ್ರಕೋಜಿಯಾಗೂ ಕಳಿಸದೆ, ಇತ್ತ ಅಮೇರಿಕಾಕ್ಕೂ ಬಿಡದೇ ವಿಮಾನ ನಿಲ್ದಾಣದ ಟರ್ಮಿನಲ್‍ನಲ್ಲಿ ಇರುವಂತೆ ಹೇಳಿ ಅವನಿಗೆ ಊಟದ ಕೂಪನ್ ಮತ್ತು ಅವನು ಇರುವ ಸ್ಥಳವಾದ ಗೇಟ್ ನಂಬರ್ ೬೭ ತಿಳಿಸಿ ಅವನನ್ನು ಸಿಸಿ ಕ್ಯಾಮೆರ ಮೂಲಕ ಗಮನಿಸಲಾರಂಭಿಸುತ್ತಾರೆ. ಅಲ್ಲಿಂದ ಮುಂದಕ್ಕೆ ನಡೆಯುವ ಕತೆಯೇ ನಿಮ್ಮ ಕುತೂಹಲ ಕೆರಳಿಸುತ್ತದೆ, ನೀವು ಅದೇ ಟರ್ಮಿನಲ್‍ನೊಳಗೆ ಒಬ್ಬರಾಗಿ ಈ ಕಥಾನಾಯಕನ ಚಲನವಲನವನ್ನು ಮೈಮರೆತು ವೀಕ್ಷಿಸುತ್ತೀರಿ. ಎಷ್ಟರಮಟ್ಟಿಗೆ ಎಂದರೆ ಚಿತ್ರ ಮುಗಿಯುವವರೆಗೂ.
ವಿಕ್ಟರ್ ನವ್ರೋಸ್ಕಿ ಪಡೆದುಕೊಂಡ ಊಟದ ಕೂಪನ್ನುಗಳನ್ನು ಅಲ್ಲಿ ಕುಳಿತುಕೊಳ್ಳುವ ಕುರ್ಚಿಯ ಮೇಲಿಟ್ಟು ಪಕ್ಕದಲ್ಲಿರುವ ಹುಡುಗಿಗೆ ಸಹಾಯ ಮಾಡುವಾಗಿನ ಸಮಯದಲ್ಲಿ ಮಾಡಿಕೊಳ್ಳುವ ಎಡವಟ್ಟಿನಿಂದ ಆತನ ಒಳ್ಳೆಯತನ ಮತ್ತು ಮುಗ್ದತೆ ನಿಮ್ಮೊಳಗೆ ಆವರಿಸಿಕೊಳ್ಳುತ್ತದೆ. ಊಟದ್ ಕೂಪನ್ನುಗಳು ಹಾರಿಹೋಗಿ ಕಸದ ಕಣ್ಣೆದುರಿಗೆ ಕಸದ ಬುಟ್ಟಿಗೆ ಸೇರಿ ಅದನ್ನು ವಾಪಸ್ಸು ಪಡೆದುಕೊಳ್ಳಲು ಕೇಳಿದರೆ ಅಲ್ಲಿ ಕಸಗುಡಿಸುವ "ನಿಮ್ಮಲ್ಲಿ ಅಪಾಯಿಂಟ್‍ಮೆಂಟ್ ಇದೆಯೇ" ಎನ್ನುತ್ತಾನೆ ಭಾಷೆಯ ತೊಂದರೆಯಿಂದಾಗಿ ಊಟದ ಕೂಪನ್ನುಗಳನ್ನು ಕಳೆದುಕೊಳ್ಳುವ ನವ್ರೋಸ್ಕಿ ಹಾಗೆ ಉಪವಾಸ ಬೀಳುತ್ತಾನೆ. ರಾತ್ರಿ ಅಲ್ಲಿ ಮಲಗಲು ಅಲ್ಲಿರುವ ಚೇರುಗಳನ್ನು ಎಳೆದುಕೊಳ್ಳುವಾಗ್ ಅವು ಸರಿಯಿಲ್ಲದಿರುವುದು ಗೊತ್ತಾಗಿ ಅವುಗಳ ರಿಪೇರಿ ಮಾಡುತ್ತಾನೆ. ಎಲ್ಲೆಲ್ಲೋ ಇರುವ ಚೇರುಗಳನ್ನು ಒಟ್ಟುಮಾಡಿ ಅದರಿಂದ ಬರುವ ಚಿಲ್ಲರೆ ಹಣದಿಂದ ಪುಟ್ಟ ಬರ್ಗರ್ ತಿಂದು ಹೊಟ್ಟೆ ತುಂಬಿಸಿಕೊಳ್ಳುತ್ತಾನೆ. ಇದು ಮುಖ್ಯ ಅಧಿಕಾರಿಯ ಕಣ್ಣಿಗೆ ಬಿದ್ದು ಆ ಕೆಲಸಕ್ಕೆ ಮತ್ತೊಬ್ಬನನ್ನು ನೇಮಿಸಿ ಇವನನ್ನು ಮತ್ತಷ್ಟು ಪರೀಕ್ಷೆಗೆ ಒಡ್ಡಿ ಅವನ ಹೊಟ್ಟೆಗೆ ಕಲ್ಲು ಹಾಕುತ್ತಾರೆ. ಮನುಷ್ಯನಿಗೆ ಬುದ್ದಿಗಿಂತ ಹೃದಯವಂತಿಕೆ ಮತ್ತು ಡೌನ್ ಟು ಅರ್ಥ್ ನಂತ ಸರಳತೆ ಇದ್ದರೆ ಪ್ರಪಂಚದಲ್ಲಿ ಎಲ್ಲಿ ಬೇಕಾದರೆ ಬದುಕಬಹುದು ಎನ್ನುವುದಕ್ಕೆ ಪಕ್ಕಾ ಉದಾಹರಣೆಯಾಗಿರುವ ನಾಯಕ ಅಂತ ಕಷ್ಟಕರ ಪರಿಸ್ಥಿತಿಯಲ್ಲೂ ತನ್ನ ಮುಗ್ದತೆಯಿಂದ ಅಲ್ಲಿಯೇ ಖುಷಿಯಿಂದ ಇರುತ್ತಾನೆ. ಮುಂದಿನ ರಾತ್ರಿ ಅವನು ಮಲಗುವಾಗ ಅಲ್ಲಿನ ಗೋಡೆ ಸರಿಯಿಲ್ಲದಿರುವುದನ್ನು ನೋಡಿ ಅದನ್ನು ರಾತ್ರೋ ರಾತ್ರಿ ಸರಿ ಮಾಡುತ್ತಾನೆ. ಆಗ ಗೊತ್ತಾಗುತ್ತದೆ ಅವನೊಬ್ಬ ಕಂಟ್ರಾಕ್ಟರ್. ಆದ್ರೆ ಆತ ಕಾರ್ಪೆಂಟರಿ ಕೆಲಸ ಮಾಡಬಲ್ಲ, ಪೇಯಿಂಟಿಂಗ್ ಮಾಡಬಲ್ಲ, ವಿಭಿನ್ನವಾದ ಅಲೋಚನೆಯಲ್ಲಿ ಗೋಡೆಗೆ ಸುಂದರವಾದ ವಿನ್ಯಾಸವನ್ನು ಕೊಡಬಲ್ಲ ಸಕಲ ವಿಧ್ಯಾ ಪಾರಂಗತನಾಗಿರುತ್ತಾನೆ. ಅದರಿಂದಾಗಿ ಹಾಳಾದ ಒಂದು ರೂಮಿನ ಗೋಡೆಯನ್ನು ರಾತ್ರೋ ರಾತ್ರಿ ಕಾರ್ಪೆಂಟರಿ ಕೆಲಸ ಮಾಡಿ ಸುಂದರವಾದ ಪೇಂಟ್ ಮಾಡಿ ಇಟ್ಟಿರುತ್ತಾನೆ. ಕೈಯಲ್ಲಿ ಕೆಲಸವಿದ್ದಲ್ಲಿ ದೇವರು ಹುಲ್ಲು ಮೇಯಿಸುತಾನ" ಎನ್ನುವಂತೆ ಅವನನ್ನು ಅದೇ ಕೆಲಸಕ್ಕೆ ತೆಗೆದುಕೊಳ್ಳುತ್ತಾರೆ.
ಅಲ್ಲಿಂದ ಮುಂದಕ್ಕೆ ಚಿತ್ರ ಅನೇಕ ತಿರುವುಗಳನ್ನು ಪಡೆದುಕೊಳ್ಳುತ್ತದೆ. ಇಮಿಗ್ರೇಷನ್ ಅಧಿಕಾರಿಣಿಗೂ ಮತ್ತು ಆಡುಗೆ ಕೆಲಸ ಮಾಡುವ ಹುಡುಗನಿಗೂ ಪ್ರೇಮದ ಸೇತುವೆಯಾಗಿ ಅವರಿಬ್ಬರ ಮದುವೆಯಾಗುತ್ತದೆ. ಸದಾ ಇವನನ್ನು ಸಂಶಯಿಸುವ ಗುಪ್ತಾ ಎನ್ನುವ ಭಾರತೀಯ ಮುದುಕ ಇವನಿಗೆ ತುಂಬಾ ಅತ್ಮೀಯನಾಗುತ್ತಾನೆ. ವಿಮಾನ ಸೇವಕಿಯೊಬ್ಬಳ ಅನಿರೀಕ್ಷಿತ ಪರಿಚಯದಿಂದಾಗಿ ಅವಳೊಂದಿಗೆ ಪರಿಶುದ್ಧ ಪ್ರೇಮ, ಹೀಗೆ ಸಿನಿಮಾ ಹತ್ತಾರು ತಿರುವುಗಳನ್ನು ಪಡೆದುಕೊಳ್ಳುತ್ತಾ ವಿಮಾನ ನಿಲ್ದಾಣದಲ್ಲಿ ಕೆಲಸ ಮಾಡುವವರೆಲ್ಲರೂ ಇವನನ್ನು ಅತ್ಯುತ್ತಮ ಗೆಳೆಯರನ್ನಾಗಿ ಮಾಡಿಕೊಳ್ಳುತ್ತಾರೆ, ಅವರೆಲ್ಲರಿಗೂ ಈತ ಮರೆಯಲಾಗದ ಆತ್ಮಿಯ ಬಂಧುವಾಗಿಬಿಡುತ್ತಾನೆ. ಅನೇಕ ಬಾರಿ ಇವನನ್ನು ದಾರಿ ತಪ್ಪಿ ತಪ್ಪು ಮಾಡುವಂತೆ ಮಾಡಿ ತಪ್ಪಿತಸ್ಥನಾಗಿ ಅಪರಾಧಿಯನ್ನಾಗಿಸಲು ಪ್ರಯತ್ನಿಸುವ ಮುಖ್ಯ ಅಧಿಕಾರಿಯ ಪ್ರಯತ್ನಗಳೆಲ್ಲ ಇವನ ಒಳ್ಳೆಯತನ ಮತ್ತು ಮುಗ್ದತೆಯಿಂದ ವಿಫಲವಾಗುವುದನ್ನು ನೀವು ಸಿನಿಮಾ ನೋಡಿ ಆನಂದಿಸುವಾಗಲೇ ನಿಮ್ಮ ಕಣ್ಣಂಚಲ್ಲಿ ನಿಮಗೆ ಗೊತ್ತಿಲದೇ ಹನಿ ಇಣುಕಿರುತ್ತದೆ. ಪೂರ್ತಿ ಸಿನಿಮಾ ಕತೆಯನ್ನು ಹೇಳಿದರೆ ನಿಮಗೆ ಸಿನಿಮಾ ನೋಡುವ ಥ್ರಿಲ್ ಮತ್ತು ಅದಕ್ಕಿಂತ ನೋಡುತ್ತಾ ಸಿಗುವ ಒಂದು ಅಪ್ಯಾಯತೆ ನಿಮ್ಮೊಳಗೆ ಉಂಟಾಗುವಂತದ್ದನ್ನು ನೀವೇ ಅನುಭವಿಸಬೇಕು!
ಅಲ್ಲಿಂದ ಮುಂದಕ್ಕೆ ಚಿತ್ರ ಅನೇಕ ತಿರುವುಗಳನ್ನು ಪಡೆದುಕೊಳ್ಳುತ್ತದೆ. ಇಮಿಗ್ರೇಷನ್ ಅಧಿಕಾರಿಣಿಗೂ ಮತ್ತು ಆಡುಗೆ ಕೆಲಸ ಮಾಡುವ ಹುಡುಗನಿಗೂ ಪ್ರೇಮದ ಸೇತುವೆಯಾಗಿ ಅವರಿಬ್ಬರ ಮದುವೆಯಾಗುತ್ತದೆ. ಸದಾ ಇವನನ್ನು ಸಂಶಯಿಸುವ ಗುಪ್ತಾ ಎನ್ನುವ ಭಾರತೀಯ ಮುದುಕ ಇವನಿಗೆ ತುಂಬಾ ಅತ್ಮೀಯನಾಗುತ್ತಾನೆ. ವಿಮಾನ ಸೇವಕಿಯೊಬ್ಬಳ ಅನಿರೀಕ್ಷಿತ ಪರಿಚಯದಿಂದಾಗಿ ಅವಳೊಂದಿಗೆ ಪರಿಶುದ್ಧ ಪ್ರೇಮ, ಹೀಗೆ ಸಿನಿಮಾ ಹತ್ತಾರು ತಿರುವುಗಳನ್ನು ಪಡೆದುಕೊಳ್ಳುತ್ತಾ ವಿಮಾನ ನಿಲ್ದಾಣದಲ್ಲಿ ಕೆಲಸ ಮಾಡುವವರೆಲ್ಲರೂ ಇವನನ್ನು ಅತ್ಯುತ್ತಮ ಗೆಳೆಯರನ್ನಾಗಿ ಮಾಡಿಕೊಳ್ಳುತ್ತಾರೆ, ಅವರೆಲ್ಲರಿಗೂ ಈತ ಮರೆಯಲಾಗದ ಆತ್ಮಿಯ ಬಂಧುವಾಗಿಬಿಡುತ್ತಾನೆ. ಅನೇಕ ಬಾರಿ ಇವನನ್ನು ದಾರಿ ತಪ್ಪಿ ತಪ್ಪು ಮಾಡುವಂತೆ ಮಾಡಿ ತಪ್ಪಿತಸ್ಥನಾಗಿ ಅಪರಾಧಿಯನ್ನಾಗಿಸಲು ಪ್ರಯತ್ನಿಸುವ ಮುಖ್ಯ ಅಧಿಕಾರಿಯ ಪ್ರಯತ್ನಗಳೆಲ್ಲ ಇವನ ಒಳ್ಳೆಯತನ ಮತ್ತು ಮುಗ್ದತೆಯಿಂದ ವಿಫಲವಾಗುವುದನ್ನು ನೀವು ಸಿನಿಮಾ ನೋಡಿ ಆನಂದಿಸುವಾಗಲೇ ನಿಮ್ಮ ಕಣ್ಣಂಚಲ್ಲಿ ನಿಮಗೆ ಗೊತ್ತಿಲದೇ ಹನಿ ಇಣುಕಿರುತ್ತದೆ. ಪೂರ್ತಿ ಸಿನಿಮಾ ಕತೆಯನ್ನು ಹೇಳಿದರೆ ನಿಮಗೆ ಸಿನಿಮಾ ನೋಡುವ ಥ್ರಿಲ್ ಮತ್ತು ಅದಕ್ಕಿಂತ ನೋಡುತ್ತಾ ಸಿಗುವ ಒಂದು ಅಪ್ಯಾಯತೆ ನಿಮ್ಮೊಳಗೆ ಉಂಟಾಗುವಂತದ್ದನ್ನು ನೀವೇ ಅನುಭವಿಸಬೇಕು!
ಕೊನೆ ಕೊನೆಯ ಹಂತಕ್ಕೆ ಬರುತ್ತಿದ್ದಂತೆ ಕತೆ ನಿಮ್ಮನ್ನು ಅವರಿಸಿಕೊಳ್ಳುತ್ತದೆ. ತನ್ನ ಆತ್ಮೀಯ ಪ್ರೇಮದ ಗೆಳತಿಯಲ್ಲಿ ಇಲ್ಲಿಗೆ ಬರಬೇಕಾದ ಸನ್ನಿವೇಶವನ್ನು ವಿವರಿಸುತ್ತಾನೆ. ಆತನ ತಂದೆ ಜಾಜ್ ಸಂಗೀತದ ಅಭಿಮಾನಿ. ೧೯೫೮ರಲ್ಲಿ ಪತ್ರಿಕೆಯಲ್ಲಿ ಬಂದ ಐವತ್ತೇಳು ಜನರ ಒಂದು ಫೋಟೋ ನೋಡಿ ಅವರೆಲ್ಲರಿಗೂ ಪತ್ರ ಬರೆದು ಅವರ ಆಟೋಗ್ರಾಫ್ ಸಹಿತ ಪಡೆದ ಪತ್ರವನ್ನು ಪೋಸ್ಟ್ ಪಡೆದುಕೊಂಡಿರುತ್ತಾರೆ ಒಬ್ಬರನ್ನು ಬಿಟ್ಟು. ಸಾಕ್ಸಫೋನ್ ದಂತಕತೆಯಾಗಿರುವ ಬೆನ್ನಿ ಗೋಲ್ಸನ್ ಎನ್ನುವ ಕಲಾವಿದನ ಆಟೋಗ್ರಾಪ್ ಪಡೆಯುವ ವೇಳೆಗೆ ಆತನ ತಂದೆ ಸತ್ತುಹೋಗುತ್ತಾನೆ. ಸಾಯುವ ಸಮಯದಲ್ಲಿ ಆತನ ತಂದೆ ಈ ವಿಚಾರವನ್ನು ನೀನು ಸಾಧ್ಯವಾದರೆ ಆವರ ಆಟೋಗ್ರಾಫ್ ಪಡೆದುಕೊ ಅಂತ ಹೇಳಿದಾಗ ನಮ್ಮ ನಾಯಕ ನವ್ರೋಸ್ಕಿ ಖಂಡಿತ ಪಡೆದುಕೊಳ್ಳುತ್ತೇನೆ ಅಂತ ಅಪ್ಪನಿಗೆ ಮಾತುಕೊಟ್ಟಿರುತ್ತಾನೆ. ಬೆನ್ನಿ ಗೋಲ್ಸನ್ ನ್ಯೂಯಾರ್ಕ ನಗರದಲ್ಲಿರುವುದು ತಿಳಿದು ಆತ ತನ್ನ ಕ್ರಕೋಜಿಯ ದೇಶದಿಂದ ಅಮೇರಿಕಾದ ನ್ಯೂಯಾರ್ಕ ವಿಮಾನ ನಿಲ್ದಾಣದಲ್ಲಿ ಇಳಿದ ಮೇಲೆ ಇದೆಲ್ಲ ಆಗಿಬಿಟ್ಟಿರುತ್ತದೆ. ಆತನ ಕತೆಯನ್ನು ಕೇಳಿದ ಇವನ ಗೆಳತಿ ಅವನಿಗಾಗಿ ಒಂದುದಿನದ ನ್ಯೂಯಾರ್ಕ್ ಪ್ರವಾಸವನ್ನು ವ್ಯವಸ್ಥೆಗೊಳಿಸುತ್ತಾಳೆ. ಅಲ್ಲಿಯವರೆಗೆ ಎಲ್ಲವೂ ಸರಿಯಾಗಿ ಸುಖಾಂತ್ಯವಾಯಿತು ಎನ್ನುವಷ್ಟರಲ್ಲಿ ಮತ್ತೆ ಕಾನೂನು ತೊಡಕು. ಅಷ್ಟರಲ್ಲಿ ಅವನ ದೇಶ ಕ್ರಾಂತಿಯಿಂದ ಮುಕ್ತವಾಗಿರುತ್ತದೆ. ವಾಪಸ್ಸು ಇನ್ನೇನು ತನ್ನ ದೇಶಕ್ಕೆ ಹೋಗಬೇಕೆನ್ನುವಷ್ಟರಲ್ಲಿ ಗುಪ್ತ ಎನ್ನುವ ಭಾರತೀಯ ಇವನು ಹೋಗುವ ವಿಮಾನವನ್ನೇ ತಡೆಯಿಡಿಯುತ್ತಾನೆ. ಇದರಿಂದ ವಿಮಾನ ಅನಿರೀಕ್ಷಿತ ಸಮಯದವರೆಗೆ ವಿಳಂಬವಾಗುತ್ತದೆ. ಇಲ್ಲಿಂದ ಮುಂದಕ್ಕೆ ನಿಜಕ್ಕೂ ಸಂಗರ್ಷವಾಗುವುದು ಕಾನೂನು ಮತ್ತು ಮಾನವೀಯ ಭಾವನೆಗಳೊಂದಿಗೆ. ಇಡೀ ವಿಮಾನ ನಿಲ್ದಾಣದ ಟರ್ಮಿನಲ್‍ನಲ್ಲಿ ಕೆಲಸ ಮಾಡುವ ಎಲ್ಲರೂ ಇವನು ಒಂದು ದಿನ ನ್ಯೂಯಾರ್ಕ್ ನಗರಕ್ಕೆ ಹೋಗಿ ಅವನ ತಂದೆ ಆಸೆ ಪೂರೈಸಲಿ ಅಂತ ಕಾನೂನನ್ನು ದಿಕ್ಕರಿಸಿ ಅವನನ್ನು ನ್ಯೂಯಾರ್ಕ್ ಸಿಟಿಗೆ ಕಳಿಸಿಕೊಡುತ್ತಾರೆ. ತನ್ನ ತಂದೆಯ ಆಸೆ ಪೂರೈಸಿದ ತೃಪ್ತಿಯಿಂದ ಅಲ್ಲಿಂದ ಹೊರಬಂದ ನಾಯಕ ಖುಷಿಯಿಂದ ಹೇಳುವ ಕೊನೆಯ ಮಾತು "ನಾನು ನನ್ನ ದೇಶಕ್ಕೆ ಹೋಗುತ್ತೇನೆ" ಅದು ಆತನ ದೇಶಪ್ರೇಮವನ್ನು ಸಾರುತ್ತದೆ.
"ಅವನ್ಯಾಕೆ ಇಲ್ಲಿಂದ ತಪ್ಪಿಸಿಕೊಂಡು ಹೋಗುತ್ತಿಲ್ಲ, ಬಹುಶಃ ಅವನು ತಲೆಕೆಟ್ಟವನಿರಬೇಕು"
ನಿನ್ನ ದೇಶದಲ್ಲಿ ಯುದ್ದವಾಗುತಿದೆ, ಈ ಸಮಯದಲ್ಲಿ ನೀನು ವಾಪಸ್ ನಿನ್ನ ದೇಶಕ್ಕೆ ಹೋಗುತ್ತೀಯಾ? ಅಂತ ಕೇಳಿದಾಗ ಆತ ಹೌದು ಹೋಗುತ್ತೇನೆ ಎನ್ನುತ್ತಾನೆ. ಇಲ್ಲ ಎಂದಿದ್ದಲ್ಲಿ ಆತನಿಗೆ ನ್ಯೂಯಾರ್ಕ್ ಸಿಟಿಯಲ್ಲಿ ರಾತ್ರಿ ಸುತ್ತಾಡಬಹುದು ಎನ್ನುವ ಅವಕಾಶವನ್ನು ಕೊಡುತ್ತಾರೆ. ಆರೆ ಆತ ತನ್ನ ದೇಶಾಭಿಮಾನದಿಂದಾಗಿ "ನನಗೆ ಕ್ರಕೋಜಿಯ ಭಯವಿಲ್ಲ, ಅದಕ್ಕಿಂದ ನಿಮ್ಮ ರೂಮ್ ಸ್ವಲ್ಪ ಭಯವನ್ನು ತರುತ್ತಿದೆ" ಎಂದು ಹೇಳಿ ನ್ಯೂಯಾರ್ಕ್ ಸುತ್ತುವ ಅವಕಾಶವನ್ನು ತಪ್ಪಿಸಿಕೊಳ್ಳುತ್ತಾನೆ.
ಹೀಗೆ ಹತ್ತಾರು ಸನ್ನಿವೇಶಗಳು ನಿಮ್ಮನ್ನು ವಿಧವಾಗಿ ಕಾಡಿಸುತ್ತವೆ.
ನಿನ್ನ ದೇಶದಲ್ಲಿ ಯುದ್ದವಾಗುತಿದೆ, ಈ ಸಮಯದಲ್ಲಿ ನೀನು ವಾಪಸ್ ನಿನ್ನ ದೇಶಕ್ಕೆ ಹೋಗುತ್ತೀಯಾ? ಅಂತ ಕೇಳಿದಾಗ ಆತ ಹೌದು ಹೋಗುತ್ತೇನೆ ಎನ್ನುತ್ತಾನೆ. ಇಲ್ಲ ಎಂದಿದ್ದಲ್ಲಿ ಆತನಿಗೆ ನ್ಯೂಯಾರ್ಕ್ ಸಿಟಿಯಲ್ಲಿ ರಾತ್ರಿ ಸುತ್ತಾಡಬಹುದು ಎನ್ನುವ ಅವಕಾಶವನ್ನು ಕೊಡುತ್ತಾರೆ. ಆರೆ ಆತ ತನ್ನ ದೇಶಾಭಿಮಾನದಿಂದಾಗಿ "ನನಗೆ ಕ್ರಕೋಜಿಯ ಭಯವಿಲ್ಲ, ಅದಕ್ಕಿಂದ ನಿಮ್ಮ ರೂಮ್ ಸ್ವಲ್ಪ ಭಯವನ್ನು ತರುತ್ತಿದೆ" ಎಂದು ಹೇಳಿ ನ್ಯೂಯಾರ್ಕ್ ಸುತ್ತುವ ಅವಕಾಶವನ್ನು ತಪ್ಪಿಸಿಕೊಳ್ಳುತ್ತಾನೆ.
ಹೀಗೆ ಹತ್ತಾರು ಸನ್ನಿವೇಶಗಳು ನಿಮ್ಮನ್ನು ವಿಧವಾಗಿ ಕಾಡಿಸುತ್ತವೆ.
ಒಂದೇ ವಿಮಾನ ನಿಲ್ದಾಣದ ಟರ್ಮಿನಲ್‍ನಲ್ಲಿ ನಡೆಯುವಂತ ಇಂಥ ಅದ್ಬುತವಾದ ಕತೆಯನ್ನು ಎಣೆದ ನಿರ್ದೇಶಕ ಸ್ಟೀಫನ್ ಸ್ಪಿಲ್‍ಬರ್ಗ್ ಗೆ ನಿಜಕ್ಕೂ ಅಭಿನಂದನೆ ಸಲ್ಲಿಸಬೇಕು ಇದೆಲ್ಲಕ್ಕಿಂತ ಮಿಗಿಲಾಗಿ ಇಡೀ ಚಿತ್ರದಲ್ಲಿ ನಾಯಕ ಟಾಮ್ ಹಾಂಕ್ ನಿಮ್ಮನ್ನು ಆವರಿಸಿಕೊಳ್ಳುತ್ತಾನೆ. ಕ್ಯಾಸ್ಟ್ ಅವೇ ಸಿನಿಮಾವನ್ನು ಮೊದಲು ನೋಡಿದಾಗ ನಾನು ಅವನ ಫ್ಯಾನ್ ಆಗಿಬಿಟ್ಟಿದೆ. ನಂತರ, ಫಾರೆಸ್ಟ್ ಗಂಫ್, ಸೇವಿಂಗ್ ಪ್ರವೈಟ್ ರಿಯಾನ್, ಗ್ರೀನ್ ಮೈಲ್, ಹೀಗೆ ಪ್ರತಿಯೊಂದು ಸಿನಿಮಾ ಕೂಡ ಅದ್ಬುತ ಕಲಾಕೃತಿಗಳೇ. ಈ ಸಿನಿಮದಲ್ಲಿ ಮೊದಲಿಗೆ ಕ್ರಕೋಜಿಯ ಪ್ರಜೆಯಾಗಿ ಅಧುನಿಕ ವಿಮಾನದಲ್ಲಿ ಕಳೆದುಹೋಗುವ ಮುಗ್ಧನಾಗಿ, ಯಾವುದೇ ಕ್ಷಣಕ್ಕೂ ಎಲ್ಲವನ್ನು ಸುಲಭವಾಗಿ ದೇವರು ಕೊಟ್ಟ ವರ ಎಂದುಕೊಂಡು ಭಾವೋದ್ವೇಗಕ್ಕೆ ಒಳಗಾಗದೇ ಸಿನಿಮಾ ನೋಡುವ ನಮ್ಮೊಳಗೆ ಭಾವೋದ್ವೇಗವನ್ನು ಉಕ್ಕಿಸುವ ಆತನ ನಟನೆಯನ್ನು ನಟನೆಯೆನ್ನಲು ಸಾಧ್ಯವಿಲ್ಲ. ಆತ ಅಲ್ಲಿ ಪಾತ್ರವಾಗಿ ಜೀವಿಸಿದ್ದಾನೆ. ಉಳಿದವರು ಪಾತ್ರಗಳು ಏನು ಕಡಿಮೆಯಿಲ್ಲ. ಯಾವುದೇ ಅದ್ಬುತ ತಾಂತ್ರಿಕತೆಯಿಲ್ಲದೇ ಕೇವಲ ಒಂದು ವಿಮಾನ ನಿಲ್ದಾಣದ ಟರ್ಮಿನಲ್ ಸೆಟ್‍ನಲ್ಲಿ ಯಾವುದೇ ಗಿಮಿಕ್ ಇಲ್ಲದೇ ಒಂದು ಚಿತ್ರವನ್ನು ತಯಾರಿಸಬೇಕಾದರೆ ಪಾತ್ರಧಾರಿಗಳ ನಟನೆಯೇ ಜೀವಾಳವಾಗಬೇಕಾಗುತ್ತದೆ. ಅದೆಲ್ಲವೂ ಈ ಚಿತ್ರದಲ್ಲಿದೆ. ಇಂಥ ಚಿತ್ರವನ್ನು ಮಿಸ್ ಮಾಡಿಕೊಳ್ಳಬೇಡಿ.
ಲೇಖನ : ಶಿವು.ಕೆ
11 comments:
ಖಂಡಿತ ಸರ್.
ನಿಮ್ಮ ವಿಮರ್ಶೆ ಓದಿದ ಮೇಲೆ ಸಿನಿಮಾ ಮಿಸ್ ಮಾಡಲು ಸಾಧ್ಯವಿಲ್ಲ.
ಚೆನ್ನಾಗಿದೆ.
ಸ್ವರ್ಣಾ
ಇದು ನನಗೂ ತುಂಬಾ ಇಷ್ಟವಾದ ಚಿತ್ರ. ಕೇವಲ ಒಂದು ವಿಮಾನ ನಿಲ್ದಾಣದಲ್ಲಿ ಪೂರ್ತಿ ನಡೆಯುವ ಕತೆ ತುಂಬಾ ಆಪ್ತವಾಗಿ ಚಿತ್ರಿತವಾಗಿದೆ. ಇದು ಒಂದು ಸತ್ಯಘಟನೆ ಪ್ರೇರಿತ ಎಂದು ಕೇಳಿದ್ದೇನೆ. ಇರಾನ್ ದೇಶದ ನಿರಾಶ್ರಿತನೊಬ್ಬ ಪ್ಯಾರಿಸ್ ವಿಮಾನ ನಿಲ್ದಾಣದಲ್ಲಿ ಸುಮಾರು ಹದಿನೆಂಟು ವರ್ಷ ವಾಸಿಸಿದ್ದ. ಅವನ ಕತೆಯೇ 'ಟರ್ಮಿನಲ್' ಚಿತ್ರಕ್ಕೆ ಪ್ರೇರಣೆ. ಭಾವನಾತ್ಮಕತೆ, ತಿಳಿ ಹಾಸ್ಯ, ಮುಗ್ಧತೆ ಎಲ್ಲವೂ ನೈಜವಾಗಿ ಮೂಡಿಬಂದಿದೆ. ನೀವು ಒಳ್ಳೆ ಚಿತ್ರ ವಿಮರ್ಶಕರೂ ಕೂಡ.
Its a very Nice movie and wonderful acting by Tom hanks ..... and the Wonderful set built for the Film.. The JFK Airport+
ಶಿವು,
ಒಂದು ಅತ್ಯುತ್ತಮ ಸಿನೆಮಾದ ಪರಿಚಯ ಮಾಡಿಕೊಟ್ಟದ್ದಕ್ಕಾಗಿ ತುಂಬಾ thanks.
ಸ್ವರ್ಣ: ನನ್ನ ವಿಮರ್ಶೆಯನ್ನು ಮೆಚ್ಚಿದ್ದಕ್ಕೆ ಥ್ಯಾಂಕ್ಸ್. ಸಿನಿಮಾ ನೋಡಿ ಖುಷಿಪಡಿ.
ಕುಲದೀಪ್ ಸರ್,
ಈ ಚಿತ್ರದ ಬಗ್ಗೆ ಇನ್ನಷ್ಟು ಮಾಹಿತಿಯನ್ನು ಕೊಟ್ಟಿದ್ದಕ್ಕೆ ಧನ್ಯವಾದಗಳು.ನನ್ನ ವಿಮರ್ಶೆಯನ್ನು ಮೆಚ್ಚಿದ್ದಕ್ಕೆ ಥ್ಯಾಂಕ್ಸ್.
ಶ್ರೀಧರ್ ಸರ್,
ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು.
ಸುನಾಥ್ ಸರ್,
ಥ್ಯಾಂಕ್ಸ್. ಬೇಗ ಸಿನಿಮ ನೋಡಿ.
"ಕತೆಯನ್ನು ಎಣೆದ ನಿರ್ದೇಶಕ "
'ಎಣೆದ' ಅಲ್ಲ ಸರ್, 'ಹೆಣೆದ'
nice movie shivu...
Add in some rose petals and other flower heads. Stir in food coloring. If names were exchanged write the nasty names on paper and cut them into labels and look at them and then burn or destroy them. "CEREAL BOX PRIZE" Copyright Jonathan Ian Mathers 2002-2007. Kangaroo is delicious and healthy.During my first weeks here, my husband/then boyfriend did something that you are never supposed to do to people: serve them a meal and, after they have finished, tell them they didn’t eat what they thought they did.
Post a Comment