Friday, November 25, 2011

ನನ್ನ ಬಹುದಿನದ ಕನಸು



     ನನ್ನದೇ ಆದ ಫೋಟೊಗ್ರಫಿ ವೆಬ್‍ಸೈಟ್ ಮಾಡಿಕೊಳ್ಳುವ ನನ್ನ ಕನಸು ಇಂದು ನನಸಾಗಿದೆ. ಇವತ್ತಿನಿಂದ ತೆರೆದುಕೊಳ್ಳುವ ಮೂಲಕ ಹೊರಪ್ರಪಂಚಕ್ಕೆ ಲೋಕಾರ್ಪಣೆಯಾಗುತ್ತಿದೆ. ಇದರಲ್ಲಿ ಕಳೆದ ಹನ್ನೆರಡು ವರ್ಷಗಳಿಂದ ಸೆರೆಹಿಡಿದ ನನ್ನ ಮೆಚ್ಚಿನ ಪಿಕ್ಟೋರಿಯಲ್ ಫೋಟೊಗಳು, ಪಕ್ಷಿಗಳು, ಮ್ಯಾಕ್ರೋ ವಿಭಾಗದಲ್ಲಿ ಚಿಟ್ಟೆಗಳು ಮತ್ತು ಕೀಟಗಳು, ವನ್ಯಜೀವಿ ಪ್ರಪಂಚ, ಕ್ರೀಡಾ ಪಿಕ್ಟೋರಿಯಲ್ ಫೋಟೊ ವಿಭಾಗಗಳು, ಕ್ರಿಯೇಟೀವ್ ಫೋಟೊಗ್ರಫಿ, ಹೀಗೆ ನೂರಾರು ಚಿತ್ರಗಳನ್ನು ನನ್ನ ವೆಬ್‍ಸೈಟಿನ ..........ವಿಭಾಗವನ್ನು ಕ್ಲಿಕ್ಕಿಸಿದರೆ ನೀವೆಲ್ಲ ನೋಡಬಹುದು.

ಮತ್ತೊಂದು ವಿಚಾರವನ್ನು ನಿಮ್ಮೊಂದಿಗೆ ಹಂಚಿಕೊಳ್ಳಬೇಕೆನಿಸಿದೆ. ಅದು ಮದುವೆ ಇನ್ನಿತರ ಕಾರ್ಯಕ್ರಮಗಳ ಫೋಟೊಗ್ರಫಿಗೆ ಸಂಭಂದಿಸಿದ್ದು. ಇತ್ತೀಚೆಗೆ ಚಾಲ್ತಿಯಲ್ಲಿರುವ[ನಾನು ಈ ಫೋಟೊಗ್ರಫಿಗೆ ಕಳೆದ ಆರುತಿಂಗಳಿಂದ ತೊಡಗಿಕೊಂಡಿದ್ದೇನೆ.  ಈ ಟ್ರೆಂಡು ಕಳೆದ ಮೂರು ವರ್ಷದಿಂದ ಪ್ರಾರಂಭವಾಗಿದೆ]ಕ್ಯಾಂಡಿಡ್ ವೆಡ್ಡಿಂಗ್ ಫೋಟೊಗ್ರಫಿ. ನಮ್ಮ ಅನೇಕ ಗ್ರಾಹಕರು ಇಂಥ ಫೋಟೊಗ್ರಫಿ ಬೇಕೆಂದು ಕೇಳುತ್ತಿದ್ದಾರೆ. ಅದಕ್ಕಾಗಿ ನಾನೂ ಕೂಡ ಅದರಲ್ಲಿ ಹೆಚ್ಚಾಗಿ ತೊಡಗಿಸಿಕೊಳ್ಳುತ್ತಿದ್ದೇನೆ.  ಮುಖ್ಯವಾಗಿ ಇಂಥ ಫೋಟೊಗ್ರಫಿಗಾಗಿ ನನ್ನದೇ ಆದ ವೆಬ್ ಸೈಟು ಇರಬೇಕು ಅಂತ ಆಸೆಯಿತ್ತು.  ಅದು ಇವತ್ತು ತೆರೆದುಕೊಂಡಿದೆ.
ನನ್ನ ವೆಬ್ ಸೈಟಿನ ವಿನ್ಯಾಸದ ಕೆಲವು ಚಿತ್ರಗಳು ಇವು.


         

 ವೆಬ್ ಸೈಟಿನ ಲಿಂಕ್ ಗಾಗಿ ಇಲ್ಲಿ ಕ್ಲಿಕ್ಕಿಸಿ: 

http://www.shivuphotography.com

ನೀವೆಲ್ಲ ನೋಡಬೇಕೆನ್ನುವುದು ನನ್ನ ಆಸೆ.  ಖುಷಿಯಾದರೆ ನಿಮ್ಮ ಅಭಿಪ್ರಾಯವನ್ನು ತಿಳಿಸಿ. ಪ್ರೋತ್ಸಾಹ ನೀಡಿ.

ಶಿವು.ಕೆ

11 comments:

sunaath said...

ಶಿವು,
You are a genius, Shivu!
ಅದ್ಭುತವಾದ ಫೋಟೋಗಳನ್ನು ತೆಗೆದಿರುವಿರಿ. ತುಂಬ ಖುಶಿಯಾಗಿದೆ.

nimmolagobba said...

ಒಳ್ಳೆಯ ಖುಷಿಯಾದ ವಿಚಾರ ಹಂಚಿಕೊಂಡಿದ್ದೀರಿ , ನಿಮ್ಮ ವೆಬ್ಸೈಟ್ ಯಶಸ್ವಿಯಾಗಲಿ.ಅಭಿನಂದನೆಗಳು .

G S Hattigoudar said...

your blog and website are so nice. I like this. I followed your blog and I will mention your site name in my blog : www.jnanamukhi.blogspot.com

Manjunath said...

ತುಂಬಾ ಚೆನ್ನಾಗಿದೆ ಹೊಸ ವೆಬ್ ಸೈಟ್... ಶುಭವಾಗಲಿ ನಿಮಗೆ

ದಿನಕರ ಮೊಗೇರ said...

tumbaa ishTa aaytu sir...

best of luck...

ಕ್ಷಣ... ಚಿಂತನೆ... said...

Shivu avre,

idu khushiya vichaara. abhinandanegalu haagoo ee hosa jaalataana yashasviyaagi munduvareyali...

ಮನಸು said...

ವೆಬ್ ಸೈಟ್ ಪೂರ ನೋಡಿದೆ ಶಿವು, ತುಂಬಾ ಚೆನ್ನಾಗಿದೆ ಹೀಗೆ ಮತ್ತಷ್ಟು ಫೋಟೋಗಳು, ನಿಮ್ಮ ಪ್ರತಿಭೆಯ ಪಟ್ಟಿಗಳು ಬೆಳೆಯುತ್ತ ಹೋಗಲಿ...

ಗಿರೀಶ್.ಎಸ್ said...

your website is nice...with a good photos...All the very best..

Deep said...

Tumba channagide.. Nimma Sadhaneya Hadi yashasviyagali..

createam said...

ಬಹಳ ಚೆನ್ನಾಗಿದೆ

ಸೀತಾರಾಮ. ಕೆ. / SITARAM.K said...

ಚೆಂದದ ತಾಣ...