ಇದು ಪ್ರಕಾಶ್ ಹೆಗಡೆಯವರು ಬರೆದ "ರೀತಿ" ಕಥೆಯ ಮುಂದುವರಿದ ಭಾಗ ನನಗಿಂತ ಮೊದಲು ಪ್ರಕಾಶ್ ಹೆಗಡೆಯವರು, ಅಜಾದ್, ದಿನಕರ್ ಸರ್, ಪ್ರವೀಣ್, ಬಾಲು ಸರ್, ಬದರಿನಾಥ ಪಾಲವಳ್ಳಿ, ಸುಗುಣಕ್ಕ ಮತ್ತು ಸೀತರಾಂ ಸರ್ ಬರೆದಿದ್ದಾರೆ. ಅದರ ಮುಂದಿನ ಭಾಗ ನಾನು ಬರೆದಿದ್ದೀನೆ. ನೀವೆಲ್ಲ ಒಮ್ಮೆ ಓದಿ ನಿಮ್ಮ ಅಭಿಪ್ರಾಯವನ್ನು ತಿಳಿಸಿ..
ಪುಟ್ಟಣ್ಣಿ ತನ್ನ ಇಷ್ಟುದಿನದ ಬದುಕಿನಲ್ಲಿ ಎಂದೂ ಅಷ್ಟು ಗಟ್ಟಿಯಾಗಿ ಆತನ ಸುಕ್ಕುಗಟ್ಟಿದ್ದ ಕೈಗಳನ್ನು ಹಿಡಿದಿರಲಿಲ್ಲ. ಹಾಗಂತ ಅವಳ ಕೈಗಳೇನು ಯುವತಿಯ ಅಂಗೈನಂತೆ ಸುಕೋಮಲವಾಗಿರಲಿಲ್ಲ. ಅವಳ ಕೈಗಳು ಅವನಷ್ಟೇ ಸುಕ್ಕುಗಟ್ಟಿದ್ದವು. ಕಿಟ್ಟಾಣಿ ಸುಕ್ಕುಗಟ್ಟಿದ್ದ ತನ್ನ ಕೈಯಲ್ಲಿ ಅವಳ ಅಂಗೈಯನ್ನು ಹಿಡಿದಿದ್ದರೂ ಅದರಲ್ಲಿ ಸುಕ್ಕಿರಲಿಲ್ಲ. ಬದಲಾಗಿ ಆಗ ತಾನೆ ಹೊಸದಾಗಿ ಮದುವೆಯಾದ ಗಂಡು ಹೆಣ್ಣು ಸಪ್ತಪದಿ ತುಳಿದ ಮೇಲೆ ಅವಳ ಸೆರಗನ್ನು ಅವನ ಹೆಗಲ ಮೇಲಿನ ವಸ್ತ್ರಕ್ಕೆ ಗಂಟುಹಾಕಿ ಅವನ ಎಡಗೈ ಅಸ್ತದಿಂದ ಅವಳ ಬಲಗೈ ಅಸ್ತವನ್ನು ಹಿಡಿಸಿದಾಗ ಮೊದಲ ಭಾರಿಗೆ ಉಂಟಾಗುತ್ತದಲ್ಲ ಕಂಪರ್ಟ್ ಎನ್ನುವ ಅನುಭೂತಿ ಅದೇ ಇವತ್ತು ಅವಳಿಗೆ ಆಗಿತ್ತು. ಅವನ ಮಿದುವಾದ ಹಿಡಿತದಲ್ಲಿ ವಾತ್ಸಲ್ಯಮಯ ಅಪ್ಪನಿರಬಹುದಾ, ಮಮತೆಯ ಅಮ್ಮನಿರಬಹುದಾ, ಪುಟ್ಟ ಮಕ್ಕಳ ಅಂಗಾಲಿನಷ್ಟೇ ಮಿತವೆನಿಸುವ ಮುಗ್ದ ಮಗ ಅಥವ ಮಗಳಿರಬಹುದಾ, ಬದುಕಿಗೆ ದಾರಿ ತೋರುವ ಗುರುವಿರಬಹುದಾ, ಕೇಳಿದ್ದೆಲ್ಲಾ ಕೊಡುವ ದೇವರಿರಬಹುದಾ, ಇವೆಲ್ಲ ಭಾವಗಳ ಜೊತೆಗೆ ಕಾಮವನ್ನು ಪ್ರೇಮಮಯವನ್ನಾಗಿಸುವ ಗಂಡನಿರಬಹುದಾ? ನಿರೀಕ್ಷೆಯಿಲ್ಲದ ನಿಶ್ಕಲ್ಮಶ ಮನಸ್ಸಿನ ಜೀವದ ಗೆಳೆಯನಿರಬಹುದಾ? ಆ ಕ್ಷಣ ಅವಳೆಷ್ಟು ಯೋಚಿಸಿದರೂ ಉತ್ತರ ಸಿಗಲಿಲ್ಲ.
ಮೊದಲ ಭಾರಿಗೆ ಬದುಕಿನಲ್ಲಿ ಇಷ್ಟು ಗಾಢವಾದ ದಟ್ಟ ಅನುಭವವನ್ನು ಕೊಡುತ್ತಿರುವ ಆತನ ಅಂಗೈ ಹಿಡಿತವನ್ನು ಅನುಭವಿಸುತ್ತಿರುವ ನಾನು ಉತ್ತರವನ್ನೇಕೆ ಹುಡುಕಲು ಪ್ರಯತ್ನಿಸುತ್ತಿರುವೆ, ನಾನೆಂತ ದಡ್ಡಿ, ಕೆಲವೊಮ್ಮೆ ಇಂಥವಕ್ಕೆ ಅರ್ಥ ಹುಡುಕಲು ಪ್ರಯತ್ನಿಸಬಾರದು ಅನುಭವಿಸಿಬಿಡಬೇಕು ಅಂದುಕೊಂಡು ಎಲ್ಲವನ್ನು ಮರೆತು ಮಗುವಿನಂತೆ ಆತನ ಜೊತೆ ನಿದಾನವಾಗಿ ಹೆಜ್ಜೆ ಹಾಕತೊಡಗಿದಳು. ಅವರಿಬ್ಬರ ಹೆಜ್ಜೆಗಳು ಮುಂದೆ ಸಾಗಿದಂತೆ ಅವಳ ನೆನಪುಗಳ ಸುರುಳಿ ಹಿಂದಕ್ಕೆ ಓಡಲಾರಂಭಿಸಿತ್ತು.
ಅವರಿಬ್ಬರ ಹೆಜ್ಜೆಗಳು ಅದ್ಯಾಕೋ ವೇಗವಾಗಿರಲಿಲ್ಲ ಮತ್ತು ಒತ್ತಡವಂತೂ ಇರಲೇ ಇಲ್ಲ. ಏಕೆಂದರೆ ಅವರಿಬ್ಬರೂ ನವದಂಪತಿಗಳಾಗಿರಲಿಲ್ಲ. ಮದ್ಯವಯಸ್ಕರಂತೂ ಆಗಿರಲೇ ಇಲ್ಲ. ಈ ಮದ್ಯ ವಯಸ್ಕ ದಂಪತಿಗಳ ಬದುಕೇ ಹಾಗೆ. ಮಗ ಅಥವ ಮಗಳನ್ನು ಒಳ್ಳೆ ಸ್ಕೂಲಿಗೆ ಸೇರಿಸಬೇಕು, ಮಕ್ಕಳನ್ನು ಮದುವೆ ಮಾಡಬೇಕು, ಎದುರು ಮನೆಯ ಗೆಳತಿ ಕಾಂಜಿವರಂ ಸೀರೆ ಉಟ್ಟಿದ್ದಾಳೆ ನಾನು ಕೊನೇ ಪಕ್ಷ ಕ್ರೇಪ್ ಸಿಲ್ಕ್ ಸೀರೆಯನ್ನಾದರೂ ಉಡಬೇಕು, ಆತ ಸ್ಕೋಡ ತಗೊಂಡಿದ್ದಾನೆ ನಾನು ಕೊನೇ ಪಕ್ಷ ಮಾರುತಿ ಆಲ್ಟೋ ಕಾರಿನಲ್ಲಿ ಅವನ ಮುಂದೆ ಸಾಗಬೇಕು, ಅವನು ಮನೆ ಕಟ್ಟಿಸಿಬಿಟ್ಟಿದ್ದಾನೆ ನಾನು ಸೈಟಾನ್ನಾದರೂ ಕೊಳ್ಳಬೇಕು...ಹೀಗೆ. ಆದ್ರೆ ಆಗ ತಾನೆ ಮದುವೆಯಾದ ನವ ದಂಪತಿಗಳಿಗೆ ಪ್ರಪಂಚದ ಪರಿವೇ ಇಲ್ಲ. ಯಾವುದರ ಬಗ್ಗೆಯೂ ಚಿಂತೆಯಿಲ್ಲ. ಅವರಿಬ್ಬರೂ ಮೈಮರೆತು ಕುಳಿತರೆ, ನಿಂತರೆ, ನಡೆದರೆ, ಸಾಗಿದರೆ....ಹೀಗೇ ಏನಾದರಾಗಲಿ, ಪ್ರತಿಕ್ಷಣವೂ ವರ್ಣಿಸಲಾಗದ ಆನಂದ. ಅವರ ಕಣ್ಣಿಗೆ ಪ್ರಪಂಚ ಕಾಣುವುದಿಲ್ಲ. ಕಾಣುವುದೆಲ್ಲಾ ಅವರಿಬ್ಬರ ಬದುಕು ಮಾತ್ರ. ಹಾಗೆ ವಯಸ್ಸಾದ ದಂಪತಿಗಳಿಗೂ ಒಂಥರ ಹೀಗೇನೇ. ಎಲ್ಲಾ ಜವಾಬ್ದಾರಿಗಳನ್ನು ಮುಗಿಸಿ, ಒಬ್ಬರಿಗೊಬ್ಬರು ಹೆಗಲ ಮೇಲೆ ಕೈಗಳನ್ನು ಹಾಕಿಕೊಂಡು ಪ್ರಪಂಚವನ್ನು ಮರೆತು ಅನುಭವದ ದಾರಿಯಲ್ಲಿ ಸಾಗುತ್ತಿರುತ್ತಾರೆ. ಇಲ್ಲಿಯೂ ಹಾಗೆ ಅರವತ್ತು ದಾಟಿದ ಪುಟ್ಟಣ್ಣಿ ಮತ್ತು ಕಿಟ್ಟಾಣಿ ಸಾಗುತ್ತಿದ್ದಾರೆ ಅಂದುಕೊಂಡಿದ್ದರೆ ಕಿಟ್ಟಾಣಿ ಪ್ರಕಾರ ಹೌದು. ಅವನು ಬದುಕಿನ ಪ್ರತಿಕ್ಷಣ ಅನುಭವಿಸುತ್ತಾ ಇದ್ದವನು ಈಗಲೂ ಆಕೆಯ ಹಸ್ತದ ಹಿತವಾದ ಬಿಸಿಯನ್ನು ಅನುಭವಿಸುತ್ತಾ ಪ್ರಪಂಚವನ್ನೇ ಮರೆತು ತನ್ನದೇ ಲೋಕದಲ್ಲಿ ತೇಲುತ್ತಿದ್ದಾನೆ. ಆದ್ರೆ ಪುಟ್ಟಾಣಿ ವಿಚಾರದಲ್ಲಿ ಆಗಿಲ್ಲ. ಏಕೆಂದರೆ ಅವಳು ಈ ಕ್ಷಣವನ್ನು ಪೂರ್ತಿಯಾಗಿ ಅನುಭವಿಸದೇ ತನ್ನ ಯೌವ್ವನದ ನೆನಪಿನಲ್ಲಿ ಹಿಂದಕ್ಕೆ ಓಡುತ್ತಿದ್ದಾಳೆ.
ಅಪ್ಪನ ಇಷ್ಟದಂತೆ ಮದುವೆ, ನಾವಿಬ್ಬರೂ ಮೊದಲ ರಾತ್ರಿ ಒಬ್ಬರ ಮನಸ್ಸನ್ನು ಮತ್ತೊಬ್ಬರು ಅರಿತುಕೊಳ್ಳಲು ಪ್ರಯತ್ನಿಸಿದ್ದು ಆತನ ಹಳೆಯ ಪ್ರೇಮದ ಬಗ್ಗೆ ನನಗೆ ಮೂಡಿದ ಅಸಮದಾನ, ಅದೆಷ್ಟೋ ರಾಗಿಣಿ, ಜಯಂತುಗಳಿಂದ ಬಂದರು ಅವರಿಂದ ಉಂಟಾದ ಸಂಶಯಗಳು, ಗೆಳೆಯ ಗೆಳೆತಿಯರ ಬಗ್ಗೆ ಮೂಡಿದ ಸಂಶಯಗಳು.... ಒಂದಾ ಎರಡಾ,... ಮುಂದೆ ನಮ್ಮಿಬ್ಬರಲ್ಲಿ ಪುಟ್ಟ ವಿಚಾರಗಳಿಗೆ ಉಂಟಾದ ಹಟಗಳು, ಹೀಗೋಯಿಸಂಗಳು,...ಇವು ನಮ್ಮ ಬದುಕನ್ನೇ ನುಂಗಿ ನೀರು ಕುಡಿದಿದ್ದವು. ಇದರಲ್ಲಿ ತಪ್ಪು ಯಾರದು? ನನ್ನದ ಅಥವ ಕಿಟ್ಟಾಣಿದಾ! ಉತ್ತರ ಹುಡುಕಲು ಪ್ರಯತ್ನಿಸುತ್ತಿರುವಾಗಲೇ ನಮಗೆ ಒಂದು ಗಂಡು ಒಂದು ಹೆಣ್ಣು ಮಕ್ಕಳಾದವು. ಅವರ ಬೆಳವಣಿಗೆ, ಓದು, ಮದುವೆ....ಇವೆಲ್ಲದರ ನಡುವೆ ತಪ್ಪು ಯಾರದೂ ಅಂತ ಕಂಡುಕೊಳ್ಳುವ ಪ್ರಯತ್ನದಲ್ಲಿ ನಮ್ಮ ವಯಸ್ಸು ಅರವತ್ತು ದಾಟಿಬಿಟ್ಟೆವಲ್ಲ! ಉತ್ತರ ಸಿಕ್ಕಿತಾ ಅಂದುಕೊಂಡರೆ ಇಲ್ಲ.
ನಿತ್ಯ ಸಣ್ಣ ಸಣ್ಣದಕ್ಕೂ ಒಬ್ಬರಿಗೊಬ್ಬರೂ ಮುನಿಸಿಕೊಳ್ಳುತ್ತಿದ್ದನ್ನು ಬೆಳೆದ ಮಕ್ಕಳು ಗಮನಿಸಿದ್ದಾರೆ. ಅವರಿಬ್ಬರಿಗೂ ಅವರಿಷ್ಟಪಟ್ಟಂತೆ ಮದುವೆಯಾಗಿದೆ. ಈಗಿನ ಮಕ್ಕಳ ರೀತಿಯೇ ಬೇರೆ. ಬದುಕಿನ ಪ್ರತಿಕ್ಷಣವನ್ನು ಅನಂದಿಸುತ್ತಾರೆ. ಅವರ ಆನಂದದ ನಡುವೆ ನಮ್ಮನ್ನು ಗಮನಿಸಿದ್ದಾರೆ. ನಾವು ಏನನ್ನೋ ಕಳೆದುಕೊಂಡಿದ್ದೇವೆ ಅಂತ ಅವರಿಗನ್ನಿಸುವ ಹೊತ್ತಿಗೆ ನನಗೆ ಅರವತ್ತು ಚಿಟ್ಟಾಣಿಗೆ ಅರವತ್ತೈದು. ಒಂದು ವಾರ ನಮ್ಮನ್ನೆಲ್ಲಾ ಮರೆತು ಸುತ್ತಾಡಿಕೊಂಡು ಖುಷಿಯಾಗಿ ಬನ್ನಿ ಅಂತ ಒಂದು ಪ್ರವಾಸದ ಪ್ಯಾಕೇಜ್ ಮಾಡಿ ಕಳಿಸಿದ್ದಾರೆ. ಈ ಪ್ರವಾಸವಾದರೂ ಎಂಥದ್ದು ನಮ್ಮ ವಯಸ್ಸಿಗೆ ತಕ್ಕಂತೆ ದೇವಸ್ಥಾನ ತೀರ್ಥಕ್ಷೇತ್ರಗಳೊಂದು ಇಲ್ಲ. ಮೊದಲೆರಡು ದಿನ ರಿಸಾರ್ಟು, ನಂತರ ಕೆಮ್ಮಣ್ಣುಗುಂಡಿಯಂತ ಗಿರಿಧಾಮದಲ್ಲಿ ರೆಲ್ಯಾಕ್ಸು, ಅಲ್ಲಿಂದ ಮುಂದಕ್ಕೆ ನೇರವಾಗಿ ಪ್ರಖ್ಯಾತ ಜೋಗ್ ಫಾಲ್ಸ್. ನನ್ನ ತುಂಟ ಮಗಳಂತೂ "ಅಮ್ಮ ಇದು ನಿಮ್ಮಿಬ್ಬರಿಗೂ ಛಾನ್ಸ್ ಎರಡನೇ ಹನಿಮೂನ್ ಮುಗಿಸಿಕೊಂಡು ಬನ್ನಿ" ಅಂತ ಕಣ್ ಹೊಡೆದು ಕಳಿಸಿದ್ದು ಯಾಕೆಂದು ಈಗ ಅರ್ಥವಾಗುತ್ತಿದೆ.
ತಾವು ಉಳಿದುಕೊಂಡಿದ್ದ ರಿಸಾರ್ಟ್‍ನಿಂದ ಜೋಗ್ ಫಾಲ್ಸ್ ಒಂದು ಕಿಲೋಮೀಟರ್ ಇದ್ದಿದ್ದರಿಂದ ಇಬ್ಬರು ಕೈ ಕೈ ಹಿಡಿದು ನಡೆದುಕೊಂಡು ಹೋಗುತ್ತಿದ್ದಾರೆ. ಅರ್ಧ ಕಿಲೋಮೀಟರ್ ದಾರಿ ಸಾಗಿರಬೇಕು ತನ್ನದೇ ಹಳೆಯ ನೆನಪುಗಳಲ್ಲಿ ಮುಳುಗಿ ಹೋಗಿದ್ದ ಪುಟ್ಟಾಣಿ ಸಣ್ಣದೊಂದು ಕಲ್ಲನ್ನು ಎಡವಿ ಮುಗ್ಗರಿಸಿ ಬೀಳಬೇಕೆನ್ನುವಷ್ಟರಲ್ಲಿ ಗಟ್ಟಿಯಾಗಿ ಹಿಡಿದುಕೊಂಡ ಕಿಟ್ಟಾಣಿ ಅವಳನ್ನೊಮ್ಮೆ ನೋಡಿ " ಯಾವ ಲೋಕದಲ್ಲಿದ್ದೀಯ" ಕೇಳಿದ. ಅವಳು ಉತ್ತರಿಸಲಿಲ್ಲ ಅವನನ್ನೊಮ್ಮೆ ನೋಡಿ ನಕ್ಕಳಷ್ಟೇ. ಮುಂದೆ ಇಬ್ಬರ ನಡುವೆ ಮಾತಿರಲಿಲ್ಲ. ನಡುವೆ ಒಮ್ಮೆ ಕಿಟ್ಟಾಣಿಯ ಮುಖವನ್ನೊಮ್ಮೆ ಪುಟ್ಟಾಣಿ ತಿರುಗಿ ನೋಡಿದಳಲ್ಲ! ಅರೆರೆ ಇವತ್ತು ಇವರ ಮುಖ ತುಂಬಾ ಚೆನ್ನಾಗಿ ಕಾಣುತ್ತಿದೆಯಲ್ಲ! ಮುಖದಲ್ಲಿ ವಯಸ್ಸಾಗಿರುವುದು ಕಾಣುತ್ತಿದ್ದರೂ ನನ್ನ ಗಂಡನೆನ್ನುವ ಕಾರಣಕ್ಕೆ ತುಂಬಾ ಇಷ್ಟವಾಗುತ್ತಿದೆಯಲ್ಲಾ! ಈ ಇಷ್ಟಕ್ಕೆ ಕಾರಣವೇನು? ಮದುವೆಯಾದ ಹೊಸತರಲ್ಲಿ, ಮೊದಲ ರಾತ್ರಿಯಲ್ಲಿ ನಂತರದ ದಿನಗಳಲ್ಲಿ ಯುವ ಸುರಸುಂದರಾಂಗನಾಗಿದ್ದರೂ ಅವತ್ತಿಗಿಂತ ಇವತ್ತಿನ ಅವರ ತೃಪ್ತಿ ತುಂಬಿದ ಮುಖ ತುಂಬಾ ಅಪ್ಯಾಯಮಾನವಾಗುತ್ತಿದೆಯಲ್ಲ! ಮತ್ತೆ ಮತ್ತೆ ನೋಡಬೇಕೆನಿಸುತ್ತಿದೆಯಲ್ಲ! ಈ ರೀತಿ ಕದ್ದು ಮುಚ್ಚಿ ನೋಡುವುದರಲ್ಲಿ ಅದೊಂತದೋ ವರ್ಣಿಸಲಾಗದ ಖುಷಿಯಿದೆ. ಸಿಹಿಯನ್ನು ಸ್ವಲ್ಪ ಸ್ವಲ್ಪ ತಿಂದಷ್ಟು ರುಚಿ ಹೆಚ್ಚು. ಹಾಗೆ ಸ್ವಲ್ಪ ಸ್ವಲ್ಪವೇ ಆತನ ಮುಖವನ್ನು ಕಿರುಗಣ್ಣಿನಿಂದ ನೋಡುವುದರಲ್ಲಿ ವರ್ಣಿಸಲಾಗದ ಖುಷಿ ಮನಸ್ಸಿಗೆ. ಹಾಗೆ ದಾರಿಯುದ್ದಕ್ಕೂ ಅವನಿಗರಿವಿಲ್ಲದಂತೆ ಕಿರುಗಣ್ಣಿನಲ್ಲೇ ನೋಡುತ್ತಾ ಸಾಗಿದಳು. ಜೋಗ್ ಫಾಲ್ಸ್ ಬಂದೇ ಬಿಡ್ತು.
ಅದೆಷ್ಟೋ ವರ್ಷಗಳ ನಂತರ ಜೋಗ್ ಫಾಲ್ಸ್ ಇವತ್ತು ಈ ಕ್ಷಣದಲ್ಲಿ ಅವರಿಗೆ ತುಂಬಾ ಚೆನ್ನಾಗಿ ಕಾಣುತ್ತಿದೆ. "ಅರೆರೆ ಅಲ್ಲಿ ನೋಡ್ರಿ, ಜೋಗ್ ಫಾಲ್ಸ್ ನಡುವೆ ಕಾಮನ ಮೂಡಿದೆ" ವಾಹ್! ಸೂಪರ್ ಅಲ್ಲೇ ಮಗುವಿನಂತೆ ಕುಣಿದಾಡಿದಳು ಪುಟ್ಟಾಣಿ. ಜೋಗ್ ಫಾಲ್ಸ್ ಮುಂದೆ ಕಾಮನಬಿಲ್ಲು ಯಾವಾಗಲೂ ಬರುವುದಿಲ್ಲ. ಮತ್ತು ಎಲ್ಲರಿಗೂ ಕಾಣಿಸಿಕೊಳ್ಳುವುದಿಲ್ಲ. ಅಪರೂಪಕ್ಕೆ ಕಾಣಿಸುವ ಅದನ್ನು ನೋಡುವವರೇ ಅದೃಷ್ಟವಂತರು. ಅಂತ ಅದೃಷ್ಟ ನಮಗಿದೆಯಲ್ಲ ಅವರಿಬ್ಬರೂ ಕುಣಿದಾಡಿದರು.
"ಪುಟ್ಟಾಣಿ, ನಿನಗೊಂದು ವಿಶೇಷವನ್ನು ತೋರಿಸಲೇನೋ" ಹೇಳಿದ ಕಿಟ್ಟಾಣಿ ಪ್ರೀತಿಯಿಂದ.
ಕಾಮನಬಿಲ್ಲನ್ನು ಮೈಮರೆತು ಕಣ್ತುಂಬಿಕೊಳ್ಳುತ್ತಿದ್ದ ಪುಟ್ಟಾಣಿ ಆತನ ಮಾತು ಕೇಳಿ ಅವನತ್ತ ತಿರುಗಿದಳು.
" ಇಲ್ಲಿ ನೋಡೋ" ಅಂತ ಪ್ರೀತಿಯಿಂದ ಕರೆದು, "ನಿನಗೆ ಇದೇ ಕಾಮನಬಿಲ್ಲನ್ನು ನನ್ನ ಕಣ್ಣಲ್ಲಿ ತೋರಿಸುತ್ತೇನೆ"
"ಹೌದಾ, ಹೇಗೆ ತೋರಿಸ್ತೀರಿ"
ಆದ್ರೆ ಒಂದು ಷರತ್ತು. ನೀನು ನನ್ನ ಕಣ್ಣಲ್ಲಿ ಕಣ್ಣಿಟ್ಟು ಒಂದು ಕ್ಷಣವೂ ಮಿಟುಕಿಸದೇ ನೋಡಬೇಕು.
"ಒಹ್! ಖಂಡಿತ. ಆದ್ರೆ ನೀವು ಕಣ್ಣು ಮಿಟುಕಿಸುವುದಿಲ್ಲವೇ?
"ಇಲ್ಲ ಇಲ್ಲ ನಿನಗೆ ಕಾಮನಬಿಲ್ಲು ತೋರಿಸಲಿಕ್ಕಾಗಿ ನಾನು ಒಮ್ಮೆಯೂ ಕಣ್ಣು ಮಿಟುಕಿಸುವುದಿಲ್ಲ
ಇದೇ ಮಾತಾ? ನೀವು ಮಿಟುಕಿಸಿ ಸೋತರೇ?
ಸೋತರೆ ನೀನು ಏನು ಕೇಳಿದರೂ ಕೊಡಿಸುತ್ತೇನೆ, ನೀನು ಸೋತರೆ?
ನಾನು ಒಮ್ಮೆಯೂ ಕಣ್ಣು ಮಿಟುಕಿಸದೇ ನಿಮ್ಮ ಕಣ್ಣನ್ನೇ ನೋಡುತ್ತೇನೆ. ನಾನು ಮಿಟುಕಿಸಿದಲ್ಲಿ ನೀವು ಕೇಳಿದ್ದನ್ನು ಕೊಡುತ್ತೇನೆ. ಕಿಟ್ಟಾಣಿ ಒಂದು ಕಲ್ಲುಬೆಂಚಿನ ಮೇಲೆ ಕಾಮನ ಬಿಲ್ಲಿಗೆ ಅಭಿಮುಖವಾಗಿ ಖುಳಿತ.
ಆಯ್ತು ಈಗ ಪ್ರಾರಂಭಿಸೋಣವಾ? ಕೇಳಿದ ಕಿಟ್ಟಾಣಿ. ಆಯ್ತು ಎಂದಳು.
ಕಣ್ಣು ನಿದಾನವಾಗಿ ತೆರೆದ. ಅವನ ಕಣ್ಣಲ್ಲಿ ಕಣ್ಣಿಟ್ಟು ನೋಡತೊಡಗಿದಳು ಪುಟ್ಟಾಣಿ.
ಐದು ಸೆಕೆಂಡುಗಳಾಯಿತು. ಜೋಗ್ ಫಾಲ್ಸ್ ಜಲಪಾತದ ಮುಂದೆ ಸೃಷ್ಟಿಯಾಗಿದ್ದ ಕಾಮನಬಿಲ್ಲು ಅವನ ಕಣ್ಣಿನಲ್ಲಿ ನಿದಾನವಾಗಿ ಅಸ್ಪಸ್ಟವಾಗಿ ಅವಳಿಗೆ ಕಾಣತೊಡಗಿತು. ಹತ್ತು ಸೆಕೆಂಡುಗಳು ಕಳೆದವು. ಈಗ ಸ್ಪಷ್ಟವಾಗಿ ತುಂಬಾ ಚೆನ್ನಾಗಿ ಕಾಣುತ್ತಿದೆ ಕಾಮನಬಿಲ್ಲು. ಇಬ್ಬರಲ್ಲೂ ಗೆಲ್ಲಬೇಕೆನ್ನುವ ಚಲದಲ್ಲಿ ಒಮ್ಮೆಯೂ ಮಿಟುಕಿಸಲಿಲ್ಲ. ಅವಳ ದೃಷ್ಟಿ ಅವನ ದೃಷ್ಟಿಗೆ ಮತ್ತಷ್ಟು ನೇರವಾಯಿತು. ಇಬ್ಬರಲ್ಲಿ ಒಬ್ಬರೂ ಒಮ್ಮೆಯೂ ಮಿಟುಕಿಸುತ್ತಿಲ್ಲ. ಇನ್ನತ್ತು ಸೆಕೆಂಡುಗಳು ಕಳೆದವು. ನಿದಾನವಾಗಿ ಸ್ಪರ್ಧೆಯನ್ನು ಮರೆತ ಅವರಿಬ್ಬರ ಕಣ್ಣುಗಳು ನಿದಾನವಾಗಿ ಒಂದಾಗುತ್ತಿವೆ. ಈಗ ಪುಟ್ಟಣ್ಣಿಯ ಕಣ್ಣುಗಳಲ್ಲಿ ಅದೆಂತದೋ ವರ್ಣಿಸಲಾಗದ ಪ್ರೀತಿ ಮತ್ತು ಮಮತೆ ತುಂಬಿದ ಭಾವುಕತೆ ತುಂಬಿ ತುಳುಕುತ್ತಿರುವುದು ಅವನಿಗೆ ಅರಿವಾಗುತ್ತಿದೆ. ಜೊತೆಗೆ ತಾನು ಬದುಕಿನ ಇಷ್ಟು ವರ್ಷಗಳು ಅಹಂನಿಂದ ಅನುಭವಿಸಿದ ನೋವುಗಳು ಕಿಟ್ಟಾಣಿಗೆ ಕೊಟ್ಟ ಮಾನಸಿಕ ತೊಂದರೆಗಳೆಲ್ಲಾ ನೆನಪಾಗಿ ಮಾಡಿದ ತಪ್ಪುಗಳಿಗೆ ಪ್ರಾಯಶ್ಚಿತ್ತವೆನ್ನುವ ಅವಳ ಕಣ್ಣು ತುಂಬಿಕೊಳ್ಳುತ್ತಿವೆ. ಅವನ ಕಣ್ಣುಗಳಲ್ಲಿ ಮೂಡಿದ ಕಾಮನಬಿಲ್ಲು ನಿದಾನ ಪ್ರೀತಿಯ ಸಂಕೇತವಾಗಿ, ಪ್ರೀತಿಯಾಗಿ ಕಾಣುತ್ತಿದೆ. ಅವಳಿಗೆ ಕಿಟ್ಟಾಣಿಯ ಕಣ್ಣುಗಳನ್ನೇ ನೋಡುತ್ತಿದ್ದರೆ, ಮನಸ್ಸಿನಲ್ಲಿ ವರ್ಣಿಸಲಾಗದ ಭಾವ ತುಂಬಿಹೋಗುತ್ತಿದೆ. ಇನ್ನು ತಡೆಯಲಾಗುತ್ತಿಲ್ಲ ಆಹಂಕಾರವೆಲ್ಲಾ ನೀರಿನಂತೆ ಕರಗಿಹೋಗುತ್ತಿವೆ. ಪಶ್ಚಾತಾಪ ಮನದಲ್ಲಿ ತುಂಬಿಕೊಳ್ಳುತ್ತಿದೆ. ಮತ್ತೈದು ಸೆಕೆಂಡು ಕಳೆಯಿತಷ್ಟೆ ಅವಳಿಗರಿವಿಲ್ಲದಂತೆ ಮನತುಂಬಿ ಕಣ್ಣುಗಳಲ್ಲಿ ಆನಂದ ಭಾಸ್ಪ ಉಕ್ಕಿ ಬಂದೇ ಬಿಟ್ಟಿತ್ತು. ಅದನ್ನು ನೋಡುತ್ತಿದ್ದ ಚಿಟ್ಟಾಣಿಯ ಕಣ್ಣುಗಳಲ್ಲಿ ಆನಂದ ಬಾಷ್ಪ. ಅದ್ಯಾವ ಕ್ಷಣದಲ್ಲಿ ಕಿಟ್ಟಾಣಿಯ ಎದೆಗೆ ಅವಚಿಕೊಂಡಳೋ, ಅಷ್ಟೇ ವೇಗವಾಗಿ ಪುಟ್ಟಾಣ್ಣಿಯನ್ನು ಮಗುವಿನಂತೆ ತನ್ನ ತೋಳ ತೆಕ್ಕೆಯೊಳಗೆ ಸೆಳೆದುಕೊಂಡುಬಿಟ್ಟಿದ್ದಾನೆ. ಅವರಿಲ್ಲದಂತೆ ಈ ರೀತಿ ಒಬ್ಬರಿಗೊಬ್ಬರು ಶರಣಾಗಿಬಿಟ್ಟಿದ್ದರು. ಅಕ್ಕಪಕ್ಕದಲ್ಲಿ, ಅದರಾಚೆಗೆ ಹತ್ತಾರು ಜನರು ನೂರಾರು ಜನರು, ಎದುರಿಗೆ ಕಾಣುತ್ತಿರುವ ಜೋಗ್ ಫಾಲ್ಸ್, ಅದರೊಳಗೆ ಮೂಡಿಬಂದ ಕಾಮನಬಿಲ್ಲು ಅದರ ಮೇಲಿನ ಆಕಾಶ, ಕೆಳಗಿನ ಭೂಮಿ ಇದ್ಯಾವುದರ ಪರಿವೆ ಇಲ್ಲ. ಅದೆಷ್ಟು ಹೊತ್ತು ಹಾಗೆ ಗಾಡ ಆಲಿಂಗನದಲ್ಲಿ ಒಬ್ಬರಿಗೊಬ್ಬರು ಶರಣಾಗಿಬಿಟ್ಟಿದ್ದರು. ಇತ್ತ ಜೋಗ್ ಪಾಲ್ಸ್‍ನ ರಾಜ ರಾಣಿ, ರಾಕೆಟ್ ರೋರರ್, ಮತ್ತು ಕಾಮನಬಿಲ್ಲು ಇವರಿಬ್ಬರಲ್ಲಿ ಗೆದ್ದವರಾರು ಅಂತ ಮಾತಾಡುತ್ತಿದ್ದರೆ ಇತ್ತ ಪುಟ್ಟಾಣಿಯ ಬಲಗೈ ಕಿಟ್ಟಾಣಿಯ ಸೊಂಟವನ್ನು ಬಳಸಿದರೆ ಕಿಟ್ಟಾಣಿಯ ಎರಡೈ ಆಕೆಯ ಹೆಗಲನ್ನು ಬಳಸಿತ್ತು. ಇವರ ಕಣ್ಣಳತೆ ದಾರಿಯ ಕೊನೆಯಲ್ಲಿ ಇವರನ್ನೇ ನೋಡಿ ಆಶೀರ್ವಾದಿಸಿದ ಸೂರ್ಯ ನಿದಾನ ಅಸ್ತಂಗತನಾಗುತ್ತಿದ್ದ.
ಶಿವು.ಕೆ

14 comments:
Naviru navirada premabandhanada salugalu tumbive..
ಶಿವೂ, ನಿಮ್ಮೊಳಗೆ ಒಬ್ಬ ಅದ್ಭುತ ಕತೆಗಾರ ಮತ್ತು ಕಲೆಗಾರನನ್ನು ಕಂಡೆ..
ನಿಮ್ಮ ಬ್ಲಾಗ್ ನಿರಂತರ ಓದುತ್ತ ಬಂದ ಕಾರಣ ನಿಮ್ಮೊಳಗಿನ ವಿಶೇಷ ಪ್ರತಿಭೆಯನ್ನು ಗಮನಿಸಿದ್ದೆ.
ನನಗೆ ನಿಮ್ಮ ಬರಹಗಳಲ್ಲಿ ತುಂಬಾ ಇಷ್ಟ ಆಗೋದು ಅಂದರೆ, ವಿಭಿನ್ನತೆ ಮತ್ತು ಅದರೊಳಗೆ ಕಂಡೂ ಕಾಣದಂತೆ ಒಬ್ಬ ಶ್ರಮಜೀವಿ.
ಎಲ್ಲರೂ ಒಂದು ಯೋಚಿಸಿದರೆ ನಿಮ್ಮ ಯೋಚನಾ ರೀತಿನೇ ಬೇರೆ ಇರುತ್ತೆ ಮತ್ತು ಅದು ಬಹಳಷ್ಟು ಬಾರಿ ವಾಸ್ತವಕ್ಕೆ ತುಂಬಾ ಹತ್ತಿರ ಇರುತ್ತೆ.
ಈ ಕಥೆ ತುಂಬಾ ಇಷ್ಟವಾಯ್ತು. ನನ್ ಲಿಸ್ಟ್ ನಲ್ಲಿ ನಿಮಗೆ ಮೊದಲ ಬಹುಮಾನ...
ವಾಹ್!! ಸೊಪರ್ ಆಗಿದೆ ಶಿವು ಕಥೆ... ನಿಮ್ಮಲ್ಲಿ ಕಥೆಗಾರ ಎದ್ದು ಕಾಣುತ್ತಿದೆ... ತುಂಬಾ ಚೆನ್ನಾಗಿ ಬರೆದಿದ್ದೀರಿ
ಶಿವು ಸರ್...
ಕಥೆ ಸೊಗಸಾಗಿ ಮೂಡಿ ಬಂದಿದೆ... ಅದರಲ್ಲೂ ಮಾಗಿದ ಪ್ರೇಮ ಭಾವಗಳು ಇಷ್ಟವಾಯಿತು..
ಮುಂದಿನ ಖ್ಕೊ ಖ್ಖೋ ಯಾರು...??
ಶಿವು;ಕಥೆಯನ್ನೂ ಚೆನ್ನಾಗಿ ಮುಂದುವರಿಸಿದ್ದೀರಿ.
ಅಭಿನಂದನೆಗಳು.
ಶಿವೂ ಸರ್ ನಿಮ್ಮ ಕಲ್ಪನೆಗೆ ಜೈ ಹೋ , ಒಳ್ಳೆಯ ಮಾಗಿದ ಜೀವನದ ಪ್ರೇಮ ,ಪ್ರೀತಿಯ ಹರಿವನ್ನು ಸುಂದರ ಚಿತ್ತಾರವಾಗಿ ಬಿಡಿಸಿದ್ದೀರ , ವಾಸ್ತವ ಪ್ರೀತಿ ಅಂದರೆ ಇದು, ಇದನ್ನು ಅರ್ಥ ಮಾಡಿಕೊಂಡರೆ ಜೀವನ ಸಾರ್ಥಕ. ಒಳ್ಳೆಯ ಕಥೆ ಮುಂದುವರೆಸಿದ್ದೀರ ಅಭಿನಂದನೆಗಳು.
ಸುಂದರ ಪ್ರಾರಂಭ. ಮತ್ತೆ ತುಂಬಾ ಚೆನ್ನಾಗಿ ಮೂಡಿಬಂತು.. ಶಿವು ಸರ್ ಒಳ್ಳೆ ಪ್ರಯತ್ನ :)
ಹಹಹ, ಶಿವು..ಯಾಕೋ ಮದುವೆಯಾದ ದಿನಗಳನ್ನ ನೆನಪಿಸಿಕೊಂಡಂತಿದೆ... !!! ಬಹಳ ರಸಿಕತೆಯ ಲೇಪನ ಇಟ್ಟು ಕಥೆಗೆ ಸೊಗಸಾದ ತಿರುವು ಕಥೆಗೆ...ಮಿಂಚುಳ್ಳಿ ಕೊಟ್ಟೇ ಬಿಟ್ರು ಸರ್ಟಿಫಿಕೇಟ್...
ಈಗ ಕೊಖ್...ಯಾರಿಗೆ...
Shivu,
Nice story with beautful narration ;)
kate chennagi moodi bandide sir..
kathe nijakku chennaagi bandide.....
nimmallina kathegaaranannu ebbisi bareda kathe idu....
iLi vayassina prema kathana....
chennaagide...
ಮುಪ್ಪಿನ ಕಣ್ಣಿನಲ್ಲಿ ಬದುಕು ಸಾಗಿ ಬಂದ ದಾರಿಯನ್ನು ಮೆಳುಕಿಸಿ ಒಬ್ಬರನ್ನೊಬ್ಬರು ಬೆಸೆದುಕೊಂಡ ಬಗೆ ಎಳೆಎಳೆಯಾಗಿ ಚಿತ್ರಿಸುತ್ತಾ ಎಲ್ಲ ಮರೆತು ಒಂದಾಗುವ ಕಥೆಯಲ್ಲಿನ ತಮ್ಮ ಕಥೆಗಾರನ ಕೌಶಲ್ಯ ಅದ್ಭುತ ! ವಿನುತನತೆ ಇದೆ.
ಸೂಪರ್ ಆಗಿದೆ ಶಿವೂ!! ಎಲ್ಲರೂ ಕಥೆಯನ್ನೂ ನವದಂಪತಿಗಳ ಕೋನದಿಂದ ಮುಂದುವರೆಸಿದರೆ ನೀವು ಪೂರ್ತಿ ಮುಂದೆ ಹೋಗಿ ಬಿಟ್ಟಿದೀರ ! ಅದೂ ಕೂಡ ಎಷ್ಟು ಸುಂದರವಾಗಿ !!! ವಾಹ್ !
Hi shivu..
Tumba chendada..prema katana..
Post a Comment