ಆತ್ಮೀಯ ಬ್ಲಾಗ್ ಗೆಳೆಯರೆ,
ನನ್ನ ಫೋಟೊಗ್ರಫಿ ಲೇಖನ ಹತ್ತು ಬರಹಕ್ಕೆ ಬಂದ ಪ್ರತಿಕ್ರಿಯೆಗಳ ಬಗ್ಗೆ ನಿಮಗೆ ಕೆಲವೊಂದು ಸ್ಪಷ್ಟವಾದ ವಿಚಾರಗಳನ್ನು ತಿಳಿಸಬೇಕಿದೆ.
ಮೊದಲಿಗೆ ನಾನು ಲೇಖನದ ವಿಚಾರವಾಗಿ ಅನೇಕ ಊರುಗಳ ಹೆಸರುಗಳನ್ನು ಬರೆದು ಅಲ್ಲಿರುವವರಿಗೆ ಇಂಗ್ಲೀಷ್ ಬರುವುದಿಲ್ಲವೆಂದು ಬರೆದಿರುವ ಪ್ರತಿಕ್ರಿಯೆಯ ಬಗ್ಗೆ. ನಾನು ಅನೇಕ ಊರುಗಳ ಹೆಸರನ್ನು ಬರೆದು ಅಲ್ಲಿರುವವರಿಗೆ ಇಂಗ್ಲೀಷ್ ಬರುವುದಿಲ್ಲವೆಂದು ಬರೆದಿದ್ದರ ಹಿಂದೆ ಯಾರನ್ನು ಅವಮಾನಿಸಬೇಕು ಅಂತ ಆಗಲಿ ಖಂಡಿತ ಇಲ್ಲ. ಅದು ಆತುರದಲ್ಲಿ ಬರೆದ ಒಂದು ಪ್ರತಿಕ್ರಿಯೆ. ಹಾಗೆ ಬರೆದಿದ್ದಕ್ಕಾಗಿ ನಾನು ಹೆಸರಿಸಿದ ಊರಿನ ಪ್ರತಿಯೊಬ್ಬರ ಬಳಿ ಈ ಮೂಲಕ ಕ್ಷಮೆಯಾಚಿಸುತ್ತೇನೆ.
ಇದು ನಾನು ಆತುರದಲ್ಲಿ ಬರೆದ ಪ್ರತಿಕ್ರಿಯೆ ಎನ್ನುವುದು ಇದನ್ನು ಓದುತ್ತಾ ಹೋದಂತೆ ನಿಮ್ಮ ಅರಿವಿಗೆ ಬರುತ್ತದೆ.
ನಾನು ಕಳೆದ ನಾಲ್ಕು ವರ್ಷಗಳಿಂದ ಬ್ಲಾಗ್ ಬರೆಯುತ್ತಿದ್ದೇನೆ. ನಾನು ಬರೆಯುವ ಲೇಖನಗಳು ನನ್ನ ಖುಷಿಗೆ ಸಂತೋಷಕ್ಕೆ. ಅದಕ್ಕೆ ಬಜ್ ನಲ್ಲಿ ಬ್ಲಾಗಿನಲ್ಲಿ ಹಾಕಿ ನಿಮ್ಮೊಂದಿಗೆ ಹಂಚಿಕೊಂಡಾಗ ಸಿಗುವ ಪ್ರತಿಕ್ರಿಯೆಗಳಿಂದಾಗಿ ಮತ್ತಷ್ಟು ಬರೆಯಲು ಸ್ಪೂರ್ತಿ ಸಿಗುತ್ತದೆ ಎನ್ನುವುದು ಎಲ್ಲರಿಗೂ ಗೊತ್ತಿರುವ ವಿಚಾರ. ಅದೇ ರೀತಿ ಫೋಟೊಗ್ರಫಿ ಲೇಖನಗಳನ್ನು ನನ್ನ ಖುಷಿಗಾಗಿಯೇ ಬರೆಯುತ್ತಿದ್ದೇನೆ ಅಷ್ಟೆ.
ಹಾಗೆ ಈ "ಕಲಾತ್ಮಕ ಫೋಟೊಗ್ರಫಿ ಓದುವುದು ಹೇಗೆ" ಲೇಖನವನ್ನು ನಾನು ಕಲಿತ ಪುಟ್ಟ ಫೋಟೊಗ್ರಫಿ ಅನುಭವವನ್ನು ನಿಮ್ಮೊಂದಿಗೆ ಹಂಚಿಕೊಳ್ಳುವ ಸಲುವಾಗಿ ಮಾತ್ರವೇ ಬ್ಲಾಗಿಗೆ ಮತ್ತು ಬಜ್‍ಗೆ ಹಾಕಿದ್ದು. ಎಂದಿನಂತೆ ನನ್ನ ಬ್ಲಾಗ್ ಗೆಳೆಯರು ಅದನ್ನು ಓದಿದರು. ಹೆಬ್ಬಾರರು, ನನ್ನ ಲೇಖನಕ್ಕೆ ಒಂದು ಕಾಮೆಂಟು ಹಾಕಿದರು. ಮಾನವ ಕಟ್ಟಿದ ಮನೆ ಇತ್ಯಾದಿಗಳಿದ್ದಲ್ಲಿ ಅದು ಲ್ಯಾಂಡ್ ಸ್ಕೇಪ್ ಆಗೊಲ್ಲವೆಂದು ಪ್ರತಿಕ್ರಿಯಿಸಿದರು. ಇಲ್ಲಿ ಒಂದು ವಿಷಯವನ್ನು ಸ್ಪಷ್ಟಪಡಿಸಬೇಕು. ಈ ಲೇಖನ ಪೂರ್ತಿಯಾಗಿ ಪಿಕ್ಟೋರಿಯಲ್ ಫೋಟೊಗ್ರಫಿಗೆ ಸಂಭಂದಿಸಿದ್ದು. ಮತ್ತೆ ನನ್ನ ಅನುಭವಕ್ಕೆ ಸಂಭಂದಿಸಿದ್ದು ಮಾತ್ರ. ಅವರು ಅಷ್ಟಕ್ಕೆ ಸೀಮಿತವಾದ ವಿಚಾರವನ್ನು ತೆರೆದಿಟ್ಟಿದ್ದರೆ ಅದಕ್ಕೆ ತಕ್ಕಂತೆ ಪ್ರತಿಕ್ರಿಯೆಯನ್ನು ನೀಡಿದ್ದರೆ ಇಷ್ಟೆಲ್ಲಾ ಅವಾಂತರಗಳಾಗುತ್ತಿರಲಿಲ್ಲ. ನನ್ನ ಲೇಖನ ಅದ್ಬುತವಾಗಿದೆಯೆಂದು ನಾನೆಲ್ಲಿಯೂ ಹೇಳುವುದಿಲ್ಲ. ಅದರಲ್ಲಿರುವ ವಿಚಾರ ಚರ್ಚೆಗೆ ಒಳಪಟ್ಟರೆ ನಾನು ಸೇರಿದಂತೆ ಅನೇಕರಿಗೆ ಹೊಸತನ್ನು ತಿಳಿದುಕೊಳ್ಳುವ ಅವಕಾಶ ಅಂತ ಪ್ರತಿಭಾರಿಯೂ ಅಂದುಕೊಳ್ಳುತ್ತೇನೆ. ಹೀಗಿರುವಾಗ ಅವರು ಪಿಕ್ಟೋರಿಯಲ್ ವಿಚಾರವಾಗಿ ತಿಳಿಸದೆ ಲ್ಯಾಂಡ್ ಸ್ಕೇಪ್ ಬಗ್ಗೆ ತಿಳಿಸಿ ನಾನು ಹೇಳಿದ್ದು ಲ್ಯಾಂಡ್ ಸ್ಕೇಪ್ ಅಲ್ಲವೆಂದು ಪ್ರತಿಕ್ರಿಯೆ ನೀಡಿದರು. ಹಾಗೆ ಕಂಪೋಜಿಷನ್ ವಿಚಾರವಾಗಿಯೂ ಕೂಡ. ಆಗ ಅವರ ಪ್ರತಿಕ್ರಿಯೆಗೆ ನಾನು ಅವರದೇ ಅನುಭವವವನ್ನು ನೆನಪಿಸಿ ಉತ್ತರ ನೀಡಿ ನಿಮ್ಮ ಅನುಭವವನ್ನು ಕೂಡ ಹಂಚಿಕೊಳ್ಳಿ ಅದಕ್ಕಾಗಿ ನೀವು ಇತ್ತೀಚೆಗೆ ತೆಗೆದ ಫೋಟೊಗಳನ್ನು ಹಾಕಿ ಹಂಚಿಕೊಳ್ಳಿ, ಮತ್ತೆ ಎಲ್ಲರೂ ಇಂಗ್ಲೀಷಿನಲ್ಲಿ ಬರೆಯುತ್ತಾರೆ. ನನಗೆ ಸುಲಭವಾಗಿ ಬರೆಯಲು ಗೊತ್ತಿರುವುದು ಕನ್ನಡ ಮಾತ್ರ, ನೀವು ಬರೆದ ಟಿಪ್ಸುಗಳನ್ನು ಅರ್ಥಮಾಡಿಕೊಳ್ಳಬೇಕಾದರೆ ಮೂರು ಸಲ ಓದಬೇಕಾಯ್ತು. ಹಾಗೆ ನನ್ನಂತೆ ನೂರಾರು ಸಾವಿರಾರು ಛಾಯಾಗ್ರಾಹಕರಿಗೆ ಇಂಗ್ಲೀಷ್ ಬರುವುದಿಲ್ಲ ಅವರೊಂದಿಗೆ ಈ ವಿಚಾರವನ್ನು ಹಂಚಿಕೊಳ್ಳಲಿಕ್ಕಾಗಿ ಬರೆಯುತ್ತಿದ್ದೇನೆ ಅಂತ ಹೇಳಿ ಕೆಲವು ಊರುಗಳ ಹೆಸರುಗಳನ್ನು ಬರೆದುಬಿಟ್ಟೆ. ಆ ಕ್ಷಣದಲ್ಲಿ ನನ್ನ ನೆನಪಿಗೆ ಬಂದಿದ್ದು ನನ್ನ ಗೆಳೆಯರ ಊರುಗಳು ಆದ್ದರಿಂದ ಆತುರದಲ್ಲಿ ಬರೆದುಬಿಟ್ಟೆನೇ ವಿನ: ಅದರ ಹಿಂದೆ ಯಾವ ಕೆಟ್ಟ ಉದ್ದೇಶವಾಗಲಿ ಅಥವ ಯಾರನ್ನಾದರೂ ಅವಮಾನಿಸಬೇಕೆಂದಾಗಲಿ ಅಲ್ಲ. ಹಳ್ಳಿಯಲ್ಲೇ ಇದ್ದು ಚೆನ್ನಾಗಿ ಓದಿ ಒಳ್ಳೆಯ ಸಾಪ್ಟ್ ವೇರು, ವಿಜ್ಞಾನಿಗಳು, ದೊಡ್ಡ ದೊಡ್ಡ ಕಂಪನಿಯಲ್ಲಿ ದೊಡ್ಡ ಹುದ್ದೆಯಲ್ಲಿದ್ದುಕೊಂಡು ಹವ್ಯಾಸವಾಗಿ ಫೋಟೊಗ್ರಫಿ ಮಾಡುತ್ತಿರುವವರು, ಚೆನ್ನಾಗಿ ಓದಿ ಹಳ್ಳಿಯಲ್ಲೇ ಕೃಷಿಯನ್ನು ಮಾಡುತ್ತಾ ಅತ್ಯುತ್ತಮ ಇಂಗ್ಲೀಷ್ ಲೇಖನಗಳನ್ನು ಬರೆಯುತ್ತಾ ಫೋಟೊಗ್ರಫಿ ಮಾಡುತ್ತಿರುವವರ ಮೇಲೆ ನನಗೆ ತುಂಬಾ ಗೌರವವಿದೆ. ನಮ್ಮ ಬದುಕಿಗೆ ಅವರೆಲ್ಲಾ ಮಾದರಿಯಾಗಿದ್ದಾರೆ. ಈ ಕಾರಣಕ್ಕೆ ಕಳೆದ ವರ್ಷ ಮುತ್ಮರ್ಡು ಊರು ಮತ್ತು ಊರಿನ ಹಿರಿಯ ಸಾಧಕರ ಬಗ್ಗೆ ನನ್ನ ಬ್ಲಾಗಿನಲ್ಲಿ ಲೇಖನವನ್ನು ಬರೆದಿದ್ದೇನೆ. ಆದ್ರೆ ಸತ್ಯ ಸಂಗತಿಯೆಂದರೆ ಈಗಲೂ ನಮ್ಮ ಬೆಂಗಳೂರಿನಲ್ಲಿಯೇ ಇಂಗ್ಲೀಷ್ ಬರದ ನೂರಾರು ಛಾಯಾಗ್ರಾಹಕರಿದ್ದಾರೆ, ಅದೇ ರೀತಿ ಕರ್ನಾಟಕದಾದ್ಯಂತ ಇರುವ ಸಾವಿರಾರು ಛಾಯಾಗ್ರಾಹಕರಲ್ಲಿ ನಾಲ್ಕು ಜನರಿಗೆ ಇಂಗ್ಲೀಷ್ ಬಂದರೆ ಇನ್ನೂ ನಲವತ್ತು ಜನರಿಗೆ ಇಂಗ್ಲೀಷ್ ಬರುವುದಿಲ್ಲವೆನ್ನುವುದು ಸತ್ಯಸಂಗತಿ. ನಾನು ಈ ಗುಂಪಿನಲ್ಲಿ ಒಬ್ಬನಾಗಿದ್ದು ಆ ಕ್ಷಣದಲ್ಲಿ ನನ್ನ ಅಲೋಚನೆಯೂ ಅದೇ ಆಗಿದ್ದರಿಂದ ಹಾಗೆ ಉತ್ತರಿಸಿದ್ದು ಬಿಟ್ಟರೆ ಇದರ ಹಿಂದೆ ಇನ್ಯಾವ ಕೆಟ್ಟ ಉದ್ದೇಶವು ಇರಲಿಲ್ಲ. ಇದೇ ಸಮಯಕ್ಕೆ ಹೆಬ್ಬಾರರು ತಮ್ಮ ಫೋಟೊಗ್ರಫಿ ಅನುಭವವನ್ನು ಹಂಚಿಕೊಳ್ಳುವ ಬದಲು "ಹಳ್ಳಿಜನರಿಗೆ ಇಂಗ್ಲೀಷ್ ಬರುವುದಿಲ್ಲವೆಂದು ಏಕೆ ಅಂದುಕೊಳ್ಳುತ್ತಿ" ನಿನಗೊಬ್ಬನಿಗೆ ಅರ್ಥವಾಯಿತಲ್ಲ ಅಷ್ಟು ಸಾಕು" ಅಂತ ವಿಷಯವನ್ನು ತಿರುಗಿಸಿದರಲ್ಲ. ಅಲ್ಲಿಗೆ ಇಡೀ ಫೋಟೊಗ್ರಫಿ ಲೇಖನದ ಅಭಿಪ್ರಾಯಗಳಿಗೆ ತಿರುವುಗಳು ಬಂದುಬಿಟ್ಟಿತ್ತು. ನಾನು ಹೆಸರಿಸಿದ್ದ ಊರುಗಳಲ್ಲಿರುವ ಗೆಳೆಯರಿಗೆ ಸಹಜವಾಗಿ ಈ ವಿಚಾರವಾಗಿ ಅಸಮಧಾನ ಶುರುವಾಗಿತ್ತು. ಒಬ್ಬರು ನಾನು ಬರೆದಿದ್ದು ತಪ್ಪು ಎಂದು ಇಂಗ್ಲೀಷಿನಲ್ಲಿ ಕಾಮೆಂಟ್ ಹಾಕಿದರು. ಅನೇಕರು ಬೇಸರ ಮಾಡಿಕೊಂಡಿದ್ದರು. ಅಷ್ಟರಲ್ಲಿ ಹೆಬ್ಬಾರ್ ಶಿಷ್ಯನೊಬ್ಬ ಅದೆಲ್ಲಿದ್ದನೋ ಬ್ಲಾಗಿಗೆ ಬಂದು ತುಂಬಾ ಕೆಟ್ಟದಾಗಿ ಪೇಜುಗಟ್ಟಲೆ ಕಾಮೆಂಟು ಹಾಕಿದ್ದ. ಅವನು ಏನು ಕೇಳುತಿದ್ದಾನೆ ಅಂತ ಅರ್ಥವಾಗಲಿಲ್ಲ. ಹೆಬ್ಬಾರರಿಗೆ ಅವಮಾನವಾಗಿದೆ ಅಂತ ಬೇರೆ ಹೇಳಿದ್ದ. ಹಾಗೆ ನೋಡಿದರೆ ಅವನು ನನಗೆ ತುಂಬಾ ಗೊತ್ತಿರುವವನೇ. ಬಹುಶಃ ಅವನ ಪ್ರತಿಕ್ರಿಯೆಯಲ್ಲಿನ ವಿಚಾರಗಳನ್ನು ನೋಡಿದಾಗ ಫೋಟೊಗ್ರಫಿ ಸಾಧನೆಯ ವೃತ್ತಿಮತ್ಸರವನ್ನಿಟ್ಟುಕೊಂಡಿದ್ದಾನೆಂದು ತಿಳಿಯಿತು. "ಶಿವು ನನ್ನನ್ನು ಪಿಕ್ಟೋರಿಯಲ್ ಫೋಟೊಗ್ರಫಿಗೆ ಎಲ್ಲಿಗೂ ಕರೆದುಕೊಂಡು ಹೋಗುವುದಿಲ್ಲ" ನನ್ನ ಇತರ ಫೋಟೊಗ್ರಫಿ ಗೆಳೆಯರ ಬಳಿ ಹೇಳಿದ್ದು ನೆನಪಾಗಿ ಅದರ ದ್ವೇಷ ಹೀಗೆ ಹೊರಬಂದಿರಬಹುದು ಅಂದುಕೊಂಡು ಅವನ ಎಲ್ಲಾ ಪ್ರಶ್ನೆಗಳಿಗೂ ಸಮಾಧಾನವಾಗಿಯೇ ಪ್ರತಿಕ್ರಿಯಿಸಿದ್ದೆ. ಇದಾದ ನಂತರ ಹೆಬ್ಬಾರರಿಗೆ ಮೇಲ್ ಮಾಡಿ ನೋಡಿ ಎಂಥ ಕಾಮೆಂಟುಗಳನ್ನು ಹಾಕುತ್ತಿದ್ದಾನೆ ಅಂತ ಕೇಳಿದಾಗ "ಅವನಿಗೆ ಹೇಳಿದ್ದೇನೆ ಈ ವಿಷಯವನ್ನು ಇಲ್ಲಿಗೆ ಬಿಡಿ" ಅಂತ ನನಗೆ ರಿಪ್ಲೆ ಮಾಡಿದರು. ನಾನು ಸುಮ್ಮನಾದೆ. ಅಲ್ಲಿಗೆ ಎಲ್ಲಾ ಮುಗಿಯಿತು ಅಂದುಕೊಳ್ಳುವಷ್ಟರಲ್ಲಿ ಮತ್ತೆ ಹೊಸದೊಂದು ಕಾಮೆಂಟು ಹಾಕಿದ್ದ. ಎರಡನೆ ಭಾರಿ ಹಾಕಿದ ಕಾಮೆಂಟಿನಲ್ಲಿ ಅವನು ಏನು ಬರೆದಿದ್ದಾನೆ ಅಂತ ಅರ್ಥವಾಗಲಿಲ್ಲ. ಅವನು ಫೋಟೊಗ್ರಫಿ ಬಗ್ಗೆ ಮಾತಾಡುತ್ತಿದ್ದಾನೋ, ಅಥವ ನನ್ನ ವಿಚಾರವನ್ನು ಹೇಳುತ್ತಿದ್ದಾನೋ ಗೊತ್ತಾಗಲಿಲ್ಲ ಆದ್ರೆ ಇಡೀ ಪ್ರತಿಕ್ರಿಯೆಯಲ್ಲಿ ಅಸೂಯೆ ಅವರಿಸಿತ್ತು. ಹೆಬ್ಬಾರ್ ಪ್ರತಿಕ್ರಿಯೆ ಪಡೆದೆ ಇದೆಲ್ಲವನ್ನು ಬರೆದಿದ್ದು ಅಂತ ಬೇರೆ ಹೇಳಿದ್ದ. ತಕ್ಷಣ ಹೆಬ್ಬಾರರಿಗೆ ಮತ್ತೊಂದು ಮೇಲ್ ಮಾಡಿ ಇದೆಲ್ಲ ಏನ್ ಸಾರ್? ಅಂದೆ. ಅದಕ್ಕೆ ಅವರು ಉತ್ತರಿಸದೇ ಸುಮ್ಮನಾದರು. ಆಗ ಎಲ್ಲಾ ಗೊತ್ತಾಯಿತು. ಇದೆಲ್ಲಾ ಪಕ್ಕಾ ವ್ಯವಸ್ಥಿತವಾಗಿರುವ ವಿಚಾರವೆಂದು. ಎರಡು ದಿನ ಅವನು ಬರೆದ ಅಸೂಯೆಯನ್ನು ನಮ್ಮ ಬ್ಲಾಗ್ ಗೆಳೆಯರು ಓದಿದರು. ಇವರ ಉದ್ದೇಶವೂ ಅದೇ ಆಗಿತ್ತು ಅನ್ನಿಸುತ್ತೆ. ಯಾಕೋ ತುಂಬಾ ಅವಮಾನವಾದಂತೆ ಆಯಿತು. ಒಂದು ಫೋಟೊಗ್ರಫಿ ಲೇಖನದ ವಿಚಾರ ಅರೋಗ್ಯಪೂರ್ಣ ಚರ್ಚೆಯಾಗುವುದು ಹೀಗೆ ದಾರಿ ತಪ್ಪಿ ನನಗೆ ಈ ಮಟ್ಟಿನ ಅವಮಾನವಾಗುವುದಕ್ಕೆ ಅದಕ್ಕೆ ಮೊದಲು ನನ್ನಿಂದಾದ ತಪ್ಪಿಗೆ ಕಾರಣ ನೀವು, ನನ್ನನ್ನು ಸುಮ್ಮನಿರಿಸಿ ನಿಮ್ಮ ಶಿಷ್ಯ ಬರೆದ ಎರಡನೇ ಪ್ರತಿಕ್ರಿಯೆಯನ್ನು ನೋಡುತ್ತಾ ಎಂಜಾಯ್ ಮಾಡಿದ್ರಿ" ಇದರಿಂದ ನನಗೆ ಅವಮಾನವಾಗಿದೆ. ನನ್ನ ಬರಹ ಮತ್ತು ಲೇಖನಗಳು ಪರೋಕ್ಷವಾಗಿ ಕಳಪೆ ಎನ್ನುವಂತೆ ಮಾತುಗಳು, ಅದಕ್ಕಾಗಿ ನನ್ನೆಲ್ಲಾ ಬಜ್ ಮತ್ತು ಬ್ಲಾಗ್ ಲೇಖನಗಳನ್ನು ಡಿಲಿಟ್ ಮಾಡುತ್ತಿದ್ದೇನೆ. ಇದರಿಂದ ನಿಮಗೆ ತೃಪ್ತಿಯಾದರೆ ಸಾಕು. ನನ್ನೊಳಗೆ ಆತ್ಮಾವಲೋಕನವಾಗಿ ಮತ್ತೆ ನನ್ನ ಬರವಣಿಗೆ ಚೆನ್ನಾಗಿದೆಯೆನಿಸುವವರೆಗೆ ನಾನು ಇಲ್ಲಿ ಬರೆಯುವುದಿಲ್ಲ." ಅಂತ ಒಂದು ದೀರ್ಘವಾದ್ ಪತ್ರವನ್ನು ಬರೆದು ಅವರಿಗೆ ಮೇಲ್ ಮಾಡಿ ನನ್ನಲ್ಲಾ ಬಜ್ ಮತ್ತು ಬ್ಲಾಗಿನ ಒಂದು ವರ್ಷದ ಲೇಖನಗಳನ್ನು ಡಿಲಿಟ್ ಮಾಡಿದ್ದೆ. ಅವರಿಂದ ಇನ್ನೂ ಉತ್ತರ ಬರಲಿಲ್ಲ.
ಮೂರು ದಿನ ಕಳೆಯಿತು. ಯಾವುದೇ ಕಾರಣಕ್ಕೆ ಗೆಳೆಯರೊಬ್ಬರಿಗೆ ಫೋನ್ ಮಾಡಿ ಸಹಜವಾಗಿ ಮಾತಾಡುವಾಗ ಪ್ರತಿಕ್ರಿಯೆಯಲ್ಲಿ ಬರೆದ ಊರುಗಳ ವಿಚಾರವಾಗಿ ತುಂಬಾ ಜನರು ಬೇಜಾರು ಮಾಡಿಕೊಂಡಿದ್ದಾರೆ ಅಂದಾಗ ಅವರಿಗೆ ಇದೆಲ್ಲವನ್ನು ವಿವರಿಸಿ ಹೇಳಿ ಸಾರಿ ಕೇಳಿದೆ. ಅವರು ಅರ್ಥಮಾಡಿಕೊಂಡರು. ಆದರೆ ಮರುಕ್ಷಣದಲ್ಲಿ ಇದು ಎಲ್ಲರ ಮನಸ್ಸಲ್ಲಿ ಎಷ್ಟು ಗಾಢವಾಗಿ ಅವರಿಗೆ ಬೇಸರ ತಂದಿರಬಹುದು ಅಂತ ಅಂದುಕೊಂಡಾಗ ಆತುರದಲ್ಲಿ ಮಾಡಿದ ತಪ್ಪು ನನ್ನನ್ನು ಕಾಡತೊಡಗಿತು. ಇನ್ನು ಸುಮ್ಮನಿರಲಾಗಲಿಲ್ಲ. ಮತ್ತೆ ಎಲ್ಲರಿಗೂ ಫೋನ್ ಮಾಡಿ ಇದೆಲ್ಲವನ್ನು ಅರ್ಥಮಾಡಿಸಲು ಸಾಧ್ಯವಿಲ್ಲವಲ್ಲ. ಅದಕ್ಕೆ ನೇರವಾಗಿ ಎಲ್ಲಿ ಆ ಪ್ರತಿಕ್ರಿಯೆಯನ್ನು ಬರೆದಿದ್ದೆನೋ ಅಲ್ಲಿಯೇ ಕ್ಷಮೆಯಾಚಿಸುವುದು ಒಳ್ಳೆಯದು ಅಂದುಕೊಂಡು ಇದೆಲ್ಲವನ್ನು ಬರೆದಿದ್ದೇನೆ. ಇದೆಲ್ಲ ಆಗಿರುವ ಸಂಗತಿ. ಇದೆಲ್ಲವನ್ನು ಬರೆಯುವ ಮೂಲಕ ನನ್ನೊಳಗಿನ ದುಗಡವನ್ನು ಹೊರಹಾಕಿದ್ದೇನೆ. ಹಾಗೆ ಇದಿಷ್ಟನ್ನು ವಿವರಿಸದಿದ್ದಲ್ಲಿ ಮತ್ತೆ ಈ ವಿಚಾರ ಬೇರೆ ಅರ್ಥವನ್ನು ಪಡೆದುಕೊಳ್ಳುವ ಅವಕಾಶವಿರುವುದರಿಂದ ಇದೆಲ್ಲ ಬರೆಯಬೇಕಾಯಿತು. ಹಾಗೆ ಯಾರಮೇಲು ತಪ್ಪು ಹೊರಿಸುತಿಲ್ಲ. ನನ್ನೊಳಗೆ ಆಗಿರುವ ತಪ್ಪುಗಳು ಕಾಡತೊಡಗಿದರಿಂದ ಇದೆಲ್ಲವನ್ನು ಬರೆಯಬೇಕಾಯ್ತು. ಮುಂದೆ ಇದನ್ನು ಮತ್ತೆ ಮುಂದುವರಿಸಿಕೊಂಡು ಹೋಗಲು ನನಗಿಷ್ಟವಿಲ್ಲ. ಈ ಲೇಖನದಿಂದ ಯಾರಿಗಾದರೂ ಬೇಸರವಾದಲ್ಲಿ ಅದಕ್ಕೂ ಮೊದಲೇ ಕ್ಷಮೆ ಕೇಳಿಬಿಡುತ್ತೇನೆ.
ಪ್ರೀತಿಯಿಂದ..
ಶಿವು.ಕೆ