Friday, April 1, 2011

ನದಿತಟದಲ್ಲಿ



ಕಾಣದ ಅವಳಿಗಾಗಿ
ದಿನಕ್ಕೊಂದು ಕವನ ಬರೆಯುತ್ತಿದ್ದೆ
ನದಿತಟದಲ್ಲಿ ಕುಳಿತು
ದೋಣಿಗಳಲ್ಲಿ ಪದಗಳನ್ನು ತೇಲಿಬಿಡುತ್ತಿದ್ದೆ

ತುಂಟ ಮೀನೊಂದು ನೀರಿಂದ
ಚಿಮ್ಮಿ ಕಣ್ಣು ಮಿಟುಕಿಸಿ ಹಾರಿಳಿದಾಗ
ತುಂತುರು ಮಳೆಯಲ್ಲಿ ಕೋಲ್ಮಿಂಚು
ಭೂರಮೆಯ ಛಾಯಾಚಿತ್ರ ಕ್ಲಿಕ್ಕಿಸಿ ಮರೆಯಾದಾಗ
ಕೊಂಬೆಯಲ್ಲಿದ್ದ ಮೈನ ಹಕ್ಕಿ
ಇನಿಯನಿಗೆ ಕಿಸಕ್ಕನೆ ಕಚಗುಳಿಯಿಟ್ಟಾಗ
ಮಕರಂದವೀರಿದ ಪತಂಗವನ್ನೇ
ನೋಡುತ್ತಾ ಹೂ ಸಂಕೋಚದಿ ನಾಚಿಕೊಂಡಾಗ

ಅವಳ ಕಾಣಲೆತ್ನಿಸಿ ಕಾಣದೇ
ಕವನ ಬರೆದು ದೋಣಿಯಾಗಿ ತೇಲಿಬಿಡುತ್ತಿದ್ದೆ.

ಅಂದು ಹಾಗಾಗಲಿಲ್ಲ
ಮೈನ ಜೋಡಿಯಿಲ್ಲ, ಮಿಂಚೊಳೆಯಲಿಲ್ಲ,
ಪತಂಗ ಬರಲಿಲ್ಲ, ಮೀನು ಚಿಮ್ಮಲಿಲ್ಲ
ಪ್ರಕೃತಿಗೆ ಪ್ರತಿರೂಪವಾಗಿ ಎದುರಲ್ಲಿ
ಅವಳಲ್ಲಿ  ಎಲ್ಲಾ ಅಡಗಿರುವಾಗ ಪ್ರಕೃತಿಗೆಲ್ಲಿ ಬೆಲೆ
ಕ್ರಿಯಾಕರ್ಮಕ್ಕೆಲ್ಲಿ ನೆಲೆ?

ಲೇಖನಿ ತುಂಬಿದ್ದರೂ ದಂಡಿ ಪದಗುಚ್ಛಗಳು ಮನದಲ್ಲಿದ್ದರೂ
ದೋಣಿ ಇರಲಿ ಕವನ ಕಾಗದದ
ಮೇಲೆ ಇಳಿದು ತೇಲುತ್ತಿಲ್ಲ

ನಿಸರ್ಗ ನಿದ್ರಿಸುತ್ತಿತ್ತೆ? ನಾನದರಲ್ಲಿ ಸೇರಿದ್ದೆನೇ?
ಒಂದೇ ದಿನ ಅವಳು ಮಾಯ
 ಪ್ರಕೃತಿಗೆ ಸ್ಪರ್ಧಿಯೆಲ್ಲಿ, ನನ್ನ ಕವನಕ್ಕೆ ಕೊನೆ ಎಲ್ಲಿ

ಎಂದಿನಂತೆ ಕಾಣದ ನನ್ನವಳಿಗಾಗಿ
ದಿನಕ್ಕೊಂದು ಕವನ ಬರೆಯುತ್ತಿದ್ದೆ
ನದಿತಟದಲ್ಲಿ ಕುಳಿತು
ದೋಣಿಗಳನ್ನು ಪದಗಳನ್ನು ತೇಲಿಬಿಡುತ್ತಿದ್ದೆ.


       ಇದು ಈಗ ಬರೆದ ಕವನವಲ್ಲ.  2001 ನೇ ಜುಲೈ ತಿಂಗಳಲ್ಲಿ ಬರೆದಿದ್ದು.  ನಂತರ ಆಗ ಹೊಸ ದಿಗಂತ ಮಾಸಪತ್ರಿಕೆಯಲ್ಲಿ ದಿನಾಂಕ 22-12-2001 ರಲ್ಲಿ ಪ್ರಕಟವೂ ಆಗಿತ್ತು.   ಆಂಗ್ಲ ಕವಿಯೊಬ್ಬ ಹೇಳಿದಂತೆ ನಾವು ಬರೆದಿದ್ದನ್ನು ಒಂಬತ್ತು ವರ್ಷ ಎಲ್ಲೂ ಪ್ರಕಟಿಸದೆ...ಒಂಬತ್ತನೇ ವರ್ಷದ ನಂತರ ಮತ್ತೊಮ್ಮೆ ನಾವೇ ಓದಿದಾಗ ಅದು ನಿಜಕ್ಕೂ ಇಷ್ಟವಾದರೇ ನಂತರ ಅದು ಇಡೀ ಪ್ರಪಂಚಕ್ಕೆ ಇಷ್ಟವಾಗುತ್ತದಂತೆ...ಈ ಮಾತನ್ನು ಏಕೆ ಹೇಳುತ್ತಿದ್ದೇನೆಂದರೆ...ಒಂಬತ್ತು ವರ್ಷದ ಹಿಂದೆ ಬರೆದ ನನ್ನ ಕವಿತೆಗಳನ್ನು ಈಗ ಓದುತ್ತಿದ್ದೇನೆ. ಅವು ಯಾಕೋ ಇಷ್ಟವಾಗುತ್ತಿವೆ ಅದರಲ್ಲಿ ಇದು ಮೊದಲನೆಯದು. ಆಗ ಪ್ರಕಟವಾಗಿದ್ದರೂ ಈಗ ಮತ್ತೊಮ್ಮೆ ಓದಿದಾಗ ಒಂಥರ ಇಷ್ಟವಾಯಿತು. ಆಗ ಹುಡುಗಾಟದ ಮನಸ್ಥಿತಿಯಲ್ಲಿ ಬರೆದಿದ್ದರೂ ನಿಮಗೂ ಇಷ್ಟವಾಗಬಹುದು  ಅಂತ ಬ್ಲಾಗಿಗೆ ಹಾಕಿದ್ದೇನೆ.

 ಚಿತ್ರ ಮತ್ತು ಕವನ: ಶಿವು.ಕೆ



40 comments:

sunaath said...

ಶಿವು,
ಒಂಬತ್ತು ವರ್ಷಗಳ ಹಿಂದೆ ನೀವು ಬರೆದ ಈ ಕವನ ನನಗೆ ತುಂಬಾ ಇಷ್ಟವಾಯಿತು. ಇದನ್ನು ಮೊದಲೇ ಏಕೆ ನೀವು ಬ್ಲಾಗಿನಲ್ಲಿ ಹಾಕಲಿಲ್ಲ? ನಿಮ್ಮಲ್ಲಿರುವ ಕವಿಯನ್ನು ಹಾಗು ಕಾವ್ಯಸತ್ವವನ್ನು ಈ ಕವನ ಸೊಗಸಾಗಿ ಬಿಂಬಿಸುತ್ತಿದೆ. ನಿಮ್ಮ ಇತರ ಅಪ್ರಕಟಿತ ಕವನಗಳೂ ಹೊರಬರಲಿ.
ಎರಡನೆಯದಾಗಿ, ಕಾಗದದ ದೋಣಿಗಳ ಫೋಟೋ ಬಹಳ ಚೆನ್ನಾಗಿದೆ.
ನಿಮಗೆ ಅನೇಕ ಅಭಿನಂದನೆಗಳು.

ಸವಿಗನಸು said...

ಶಿವು,
ಒಂಬತ್ತು ವರ್ಷಗಳ ಹಿಂದೆಯೇ ಬರೆದ ಕವನ ಸೊಗಸಾಗಿದೆ.....
ಖರ ಸಂವತ್ಸರದಲ್ಲಿ ಒಂದೊಂದಾಗಿ ಎಲ್ಲ ಹೊರ ಬರಲಿ....
ಯುಗಾದಿ ಶುಭಾಶಯಗಳು....

ಆನಂದ said...

ತುಂಬಾ ಸೊಗಸಾಗಿದೆ.
ಅವಳು ಬರಲಿಲ್ಲ, ಕವಿತೆಗೆ ಬರವಿಲ್ಲ..
ನಿಮ್ಮ ಉಳಿದ ಕವಿತೆಗಳನ್ನು ಎದುರು ನೋಡುತ್ತಿದ್ದೇನೆ

ಮನಸು said...

tumba chennagide

ನಾಗರಾಜ ಭಟ್ಟ said...

ತುಂಬಾ ಸುಂದರವಾದ ಕವನ ...ಕಾಗದದ ದೋಣಿಗಳ ಫೋಟೋ ಇನ್ನೂ ಸುಂದರ .

ನಾಗರಾಜ್ .ಕೆ (NRK) said...

Shivanna, Super . . .

KalavathiMadhusudan said...

shivu sir ravare nimagashte alla..nanaguu kuuda tumbaa ishtavaayitu.doniyalli telibitta kavana.. wwwaaaw...dhanyavaadagalu.

ಗಿರೀಶ್.ಎಸ್ said...

shivanna,kavana chennagide,

AntharangadaMaathugalu said...

ಶಿವೂ ಸಾರ್
ಒಂಬತ್ತು ವರ್ಷಗಳ ದೀರ್ಘ ಅಜ್ಞಾತವಾಸ ಅನುಭವಿಸಿ ಹೊರಬಂದ ಕವನ ಚೆನ್ನಾಗಿದೆ... ಚಿತ್ರ ಕೂಡ ಸುಂದರವಾಗಿದೆ. ಈಗ ಹೊರಬಂದಿರುವ ಅಕ್ಕನನ್ನು ಅನುಸರಿಸಿ ತಂಗಿಯಂದಿರು ಒಬ್ಬೊಬ್ಬರಾಗಿ ಹೊರ ಜಗತ್ತು ಕಾಣಲಿ.. ಖರ ಸಂವತ್ಸರದ ಹೊಸ ಗಾಳಿ ಸೇವಿಸಲಿ... ನಿಮಗೂ ನಿಮ್ಮ ಕುಟುಂಬಕ್ಕೂ ಹೊಸ ಸಂವತ್ಸರದ ಹಾರ್ದಿಕ ಶುಭಾಶಯಗಳು... :-)

ಶ್ಯಾಮಲ

shivu.k said...

ಸುನಾಥ್ ಸರ್,
ಆಗಿನ ಮನಸ್ಥಿತಿಯಲ್ಲಿ ಬರೆದ ಕವನ. ಯಾಕೋ ನಾನು ಆಗ ಬರೆದ ಕವನಗಳನ್ನು ಬ್ಲಾಗಿಗೆ ಹಾಕುವ ಮನಸ್ಸಾಗಲಿಲ್ಲ. ಈಗ ನೀವೆಲ್ಲಾ ಇಷ್ಟಪಡುತ್ತೀರಿ ಅನ್ನುವುದಾದರೆ ಖಂಡಿತ ಇನ್ನುಳಿದ ಕವನಗಳನ್ನೆಲ್ಲಾ ಬ್ಲಾಗಿಗೆ ಹಾಕುವೆ. ಅದಕ್ಕೆ ತಕ್ಕಂತೆ ಫೋಟೊ ನನ್ನ ಸ್ಟಾಕಿನಲ್ಲಿ ಹುಡುಕಿದೆ. ಎರಡನ್ನು ಮೆಚ್ಚಿದ್ದಕ್ಕೆ ಥ್ಯಾಂಕ್ಸ್.

shivu.k said...

ಮಹೇಶ್ ಸರ್,

ಆಗ ಬರೆದ ಕವನವನ್ನು ನೀವು ಈಗ ಮೆಚ್ಚಿದ್ದಕ್ಕೆ ಥ್ಯಾಂಕ್ಸ್..ನಿಮ್ಮ ಅನಿಸಿಕೆಯಂತೆ ನಿದಾನವಾಗಿ ಒಂದೊಂದು ಕವನವನ್ನು ಬ್ಲಾಗಿಗೆ ಹಾಕುವೆ..ನಿಮಗೂ ಮತ್ತು ನಿಮ್ಮ ಕುಟುಂಬಕ್ಕೂ ಯುಗಾದಿ ಹಬ್ಬದ ಶುಭಾಶಯಗಳು.

shivu.k said...

ಆನಂದ ಸರ್,
ನಮ್ಮ ಮನಸ್ಸಿನಲ್ಲಿ ಅವಳಿದ್ದರೆ ಕವಿತೆಗೆಲ್ಲಿ ಜಾಗ.ಅಲ್ವಾ?
ಮೆಚ್ಚಿದ್ದಕ್ಕೆ ಥ್ಯಾಂಕ್ಸ್..ಖಂಡಿತ ಉಳಿದ ಕವಿತೆಗಳನ್ನು ಹಾಕುತ್ತೇನೆ..

shivu.k said...

ಸುಗುಣಕ್ಕ,,

ಥ್ಯಾಂಕ್ಸ್.

shivu.k said...

ನಾಗರಾಜ ಭಟ್ ಸರ್,

ಕವನ ಮತ್ತು ಫೋಟೊವನ್ನು ಮೆಚ್ಚಿದ್ದಕ್ಕೆ ಥ್ಯಾಂಕ್ಸ್.

shivu.k said...

ನಾಗರಾಜ್,

ಥ್ಯಾಂಕ್ಸ್.

shivu.k said...

ಕಲರವ,

ಕವನ ಇಷ್ಟಪಟ್ಟಿದ್ದೀರಿ. ಹೀಗೆ ಬರುತ್ತಿರಿ..ನಿಮ್ಮ ಪ್ರೋತ್ಸಾಹ ಹೀಗೆ ಇರಲಿ...ಧನ್ಯವಾದಗಳು.

shivu.k said...

ಗಿರೀಶ್,

ಥ್ಯಾಂಕ್ಸ್.

shivu.k said...

ಶ್ಯಾಮಲ ಮೇಡಮ್,

ಹೌದು. ಈಗ ಅನ್ನಿಸಿದೆ. ಎಲ್ಲ ಕವನಗಳನ್ನು ಬ್ಲಾಗಿಗೆ ಹಾಕಬೇಕು ಅಂತ. ನಿಮ್ಮೆಲ್ಲರ ಪ್ರೋತ್ಸಾಹದಿಂದಾಗಿ ಮತ್ತಷ್ಟು ಕವನಗಳನ್ನು ಬರೆಯುವ ಆಸೆಯುಂಟಾಗುತ್ತಿದೆ. ನಿಮಗೂ ಮತ್ತು ನಿಮ್ಮ ಕುಟುಂಬಕ್ಕೂ ಕೂಡ ಖರ ಸಂವತ್ಸರದ ಯುಗಾದಿಯ ಶುಭಾಶಯಗಳು.

ಸೀತಾರಾಮ. ಕೆ. / SITARAM.K said...

chennagide kavana

Digwas Bellemane said...

ಕವನ ತು೦ಬಾ ಚೆನ್ನಾಗಿದೆ...

shivu.k said...

ದಿಗ್ವಾಸ್..
ಥ್ಯಾಂಕ್ಸ್.

shivu.k said...

ಸೀತಾರಾಮ್ ಸರ್,

ಧನ್ಯವಾದಗಳ.

Ashok.V.Shetty, Kodlady said...

Shivu sir,

estu neelavaagideyo ashte sundaravada Kavana...Tumbaa Chennagide...

umesh desai said...

shivu sir, good poem touching.

shivu.k said...

ಆಶೋಕ್ ಸರ್,

ಕವನ ಮೆಚ್ಚಿದ್ದಕ್ಕೆ ಥ್ಯಾಂಕ್ಸ್.

shivu.k said...

ಉಮೇಶ್ ದೇಸಾಯ್ ಸರ್,

ಧನ್ಯವಾದಗಳು.

ಚುಕ್ಕಿಚಿತ್ತಾರ said...

nice poem shivu sir..

ಸಾಗರದಾಚೆಯ ಇಂಚರ said...

Sundara kavana sir

"ಖರ"ನಾಮ ಸಂವತ್ಸರದ ಹಾರ್ದಿಕ ಶುಭಾಶಯಗಳು.

Chaithrika said...

ಕವನ ಚೆನ್ನಾಗಿದೆ.
ಫೋಟೋ ಸೂಪರ್.

ದಿನಕರ ಮೊಗೇರ said...

sir,
sundara chitrakke honduva adbhuta kavana idu.
tumbaa ishTa aaytu......

shivu.k said...

ಚುಕ್ಕಿಚಿತ್ತಾರ ಮೇಡಮ್,

ಧನ್ಯವಾದಗಳು.

shivu.k said...

ಗುರುಮೂರ್ತಿ ಹೆಗಡೆ ಸರ್,

ಧನ್ಯವಾದಗಳು ಮತ್ತು ನಿಮಗೂ ಖರ ಸಂವತ್ಸರದ ಶುಭಾಶಯಗಳು.

shivu.k said...

ಚೈತ್ರಿಕಾ...
ಥ್ಯಾಂಕ್ಸ್.

shivu.k said...

ದಿನಕರ್ ಸರ್,

ಚಿತ್ರ ಮತ್ತು ಕವನವನ್ನು ಮೆಚ್ಚಿದ್ದಕ್ಕೆ ಥ್ಯಾಂಕ್ಸ್.

ಕ್ಷಣ... ಚಿಂತನೆ... said...

ಶಿವು, ಅವರೆ, ಕವನ ಮತ್ತು ಅದರ ಜೊತೆಗಿನ ಫೋಟೋ ಇಷ್ಟವಾಯಿತು. ನಿಮ್ಮ ಇನ್ನಷ್ಟು ಕವನಗಳನ್ನೂ ಬ್ಲಾಗಿಗೆ ಹಾಕಿರಿ.

ಸ್ನೇಹದಿಂದ,

shivu.k said...

ಕ್ಷಣ ಚಿಂತನೆ ಚಂದ್ರು ಸರ್,

ಕವನ ಮತ್ತು ಚಿತ್ರವನ್ನು ಇಷ್ಟಪಟ್ಟಿದ್ದಕ್ಕೆ ಥ್ಯಾಂಕ್ಸ್. ಖಂಡಿತ ಮುಂದಿನ ಭಾರಿ ಇನ್ನಷ್ಟು ಕವನಗಳನ್ನು ಹಾಕುತ್ತೇನೆ.

ಸುಧೇಶ್ ಶೆಟ್ಟಿ said...

ನಿಮ್ಮ ಕವನಗಳನ್ನು ಈಗಾಗಲೇ ಹಲವು ಬಾರಿ ಬ್ಲಾಗಿನಲ್ಲಿ ಓದಿರುವುದರಿ೦ದ ನೀವು ಉತ್ತಮ ಕವನಕಾರರೂ ಅನ್ನುವುದೂ ಸಾಭೀತಾಗಿದೆ :)

ಈ ತರಹ ಆಗಾಗೇ ಒಳ್ಳೊಳ್ಳೆಯ ಕವನಗಳು ಹಾಕುತ್ತಿರಿ ಶಿವಣ್ಣ... ತು೦ಬಾ ಚೆನ್ನಾಗಿರುತ್ತದೆ :)

Rudramurthy said...

ಶಿವು ಸರ್,

’ನವ-ವಸಂತ’ ದ ಗಾಳಿ ಇವಾಗ ಬೀಸಿ ನಿಮ್ಮ ಸುಂದರ ಕವನದ ಕಂಪು ಹೊತ್ತು ತಂದಿದೆ. ಭಾವುಕತೆಯ ಸಾರ ತುಂಬಾ ಸೊಗಸಾಗಿ ಬಿಂಬಿತವಾಗಿದೆ, ಹಾಗೆ ಅರ್ಥಪೂರ್ಣ ಚಿತ್ರ ಕೂಡ.
ಹಳೆ ಸರಕುಗಳ ಸರಮಾಲೆ ನಿರೀಕ್ಷಿಸುತ್ತಾ...
- ಮೂರ್ತಿ.

shivu.k said...

ಸುಧೇಶ್,
ನನ್ನ ಕವನಗಳನ್ನು ಇಷ್ಟಪಡುತ್ತಿರುವುದಕ್ಕೆ ಥ್ಯಾಂಕ್ಸ್. ಮತ್ತಷ್ಟು ಕವನಗಳನ್ನು ಹಾಕುತ್ತೇನೆ.

shivu.k said...

ರುದ್ರಮೂರ್ತಿ ಸರ್,

ನನ್ನ ಬ್ಲಾಗಿಗೆ ಸ್ವಾಗತ.
ನಿಮ್ಮ ಕಾವ್ಯಾತ್ಮಕ ಪ್ರತಿಕ್ರಿಯೆ ಇಷ್ಟವಾಯಿತು..ಖಂಡಿತ ನಿಮ್ಮ ನಿರೀಕ್ಷೆಗಳನ್ನು ಹುಸಿಗೊಳಿಸೊಲ್ಲ...ನಿದಾನವಾಗಿ ಬ್ಲಾಗಿಗೆ ಹಾಕುತ್ತೇನೆ..
ಧನ್ಯವಾದಗಳು ಹೀಗೆ ಬರುತ್ತಿರಿ...