ನೀ ಭಾವಪೂರ್ಣವಾಗಿ ನಕ್ಕು
ಅದೆಷ್ಟು ವರ್ಷಗಳು ಕಳೆದವು?
ಎದೆಯಾಳದಲ್ಲಿದ್ದ ಮುಗ್ಧನಗೆಯನ್ನು
ಬೊಗಸೆ ತುಂಬಾ ಚೆಲ್ಲಿದ್ದು
ನಮ್ಮೂರ ಜಾತ್ರೆಯಲ್ಲಲ್ಲವೇ!
ಮೊಗ್ಗಿನ ಮುಗ್ಧತೆ ಹೂವಿಗೆಲ್ಲಿ
ಬರಬೇಕು ಅಲ್ಲಿದ್ದ ಹೂಗಳು
ಸ್ಪರ್ಧಿಸಲಾಗದೆ ಸೋತು ಬಾಡಿದ್ದವು
ಅಂದೇ ಕೊನೆ ನಗು ಮಾಯವಾಗಿತ್ತು
ಜೊತೆಗೆ ಮನೆಯಂಗಳದ ಪಾರಿಜಾತ
ಸುವಾಸನೆ ಬೀರಲು ಮರೆಯಿತು
ಮರುಭೂಮಿ ಹೃದಯದಲ್ಲಿದ್ದ
ಓಯಸಿಸ್ ಬತ್ತಿಹೋಯಿತು
ಮುಂಜಾವು ಸುಪ್ರಭಾತ ನಿಲ್ಲಿಸಿತ್ತು
ಕೊರಳ ಸರದ ನೀಲಿಮುತ್ತು
ನಿರಾಸೆಯಿಂದ ಜಾರಿ ಉರುಳಿಹೋಯ್ತು
ಕಾರಣ, ಇಷ್ಟವಿಲ್ಲದ ಮದುವೆ
ಗಂಡ, ವಿಧವೆ ಪಟ್ಟ, ಸಮಾಜ
ಎದೆಯಲ್ಲಿದ್ದ ಆಸೆ ಆವಿಯಾಗಿ ನಿರಾಶೆ
ನಿಟ್ಟುಸಿರು ಮೊಳೆಯಂತೆ ಹೊಕ್ಕಿರಬಹುದು
ನೂರು ಮಾತಲ್ಲಿ ಸಾವಿರಾರು
ಮೌನದಲಿ ಕಚ್ಚಿಚುಚ್ಚಿ
ಸಮಾಜ ನಿನ್ನನ್ನು ಕೊಂದಿರಬಹುದು
ಆದರೆ "ನಿನ್ನತನ" ಉಳಿದಿದೆಯಲ್ಲ
ಅದಕ್ಕಾಗಿ, ಅದನ್ನು ಆರಾಧಿಸುವ
ನನಗಾಗಿ ನೀ ನಗಬೇಕು, ಮಾಗಿಯಲ್ಲಿ
ಮೂಕವೇದನೆಗೊಂಡರೂ ಭುವಿ ವಸಂತಋತು
ಬಂದಾಗ ನಕ್ಕು ಅರಳುತ್ತಾಳೆ ಹೇಳು
ನಾನ್ಯಾವ ಋತುವಿನ ಕೊನೆಯಲ್ಲಿ
ಕುಳಿತು ಕಾಯಲಿ?
ಗೆಳೆಯರೆ ಇದನ್ನು ಓದಿ ಅಪರೂಪಕ್ಕೊಂದು ಹೊಸ ಕವನ ಈಗ ನಾನು ಬರೆದಿದ್ದೇನೆ ಎಂದುಕೊಳ್ಳಬೇಡಿ. ಇದನ್ನು ಬರೆದಿದ್ದು ಈಗಲ್ಲ 1997 ರಲ್ಲಿ. ಆಗ ಈ ಕವನ 1997ರ ಫೆಬ್ರವರಿ 23ರಂದು ಕರ್ಮವೀರ ವಾರಪತ್ರಿಕೆಯ "ಬಾ ಕವಿತಾ" ಕಾಲಂನಲ್ಲಿ ಪ್ರಕಟವಾಗಿತ್ತು. ಆಗಿನ ಮನಸ್ಥಿತಿಯಲ್ಲಿ ಬರೆದ ಕವನವಿದು. ಅದ್ಯಾಕೋ ಈಗ ನಿನ್ನೆ ಓದಿದಾಗ ಬ್ಲಾಗಿಗೆ ಹಾಕಬೇಕೆನ್ನಿತು. ಓದುವಾಗ ಕವನದಲ್ಲಿ ಒಳಾರ್ಥವಿದ್ದಲ್ಲಿ ಅದು ನಿಮ್ಮ ಕಲ್ಪನೆಗೆ ತಕ್ಕಂತೆ ರೂಪುಗೊಳ್ಳಲಿ ಎನ್ನುವ ಕಾರಣಕ್ಕೆ ಯಾವುದೇ ಚಿತ್ರವನ್ನು ನಾನು ಹಾಕಲು ಇಷ್ಟಪಡಲಿಲ್ಲ. ಓದಿ ನಿಮ್ಮ ಅಭಿಪ್ರಾಯವನ್ನು ತಿಳಿಸಿ.
ಕವನ
ಶಿವು.ಕೆ
59 comments:
ಚೆನ್ನಾಗಿದೆ...
ಸೊಗಸಾದ ಕವನ ಬರೆದಿದ್ದೀರಿ ಆಗಲೇ..
ಈಗಲೂ ಬರೆಯಿರಿ..
ಚೈತ್ರಿಕಾ...
ಥ್ಯಾಂಕ್ಸ್.
ಕತ್ತಲೆ ಮನೆ,
ಕವನ ಇಷ್ಟಪಟ್ಟಿದ್ದಕ್ಕೆ ಥ್ಯಾಂಕ್ಸ್. ನೀವು ಹೇಳಿದಂತೆ ಪ್ರಯತ್ನಿಸುತ್ತೇನೆ.
TUMBA CHENNAGIDE SIR...
Very nice!
Arthgarbita kavana!
ನನ್ನೊಳಗಿನ ಕನಸು ವೆಂಕಟೇಶ್ ಹೆಗಡೆ ಸರ್,
ಥ್ಯಾಂಕ್ಸ್..
ಭಾಶೇ,
ತುಂಬಾ ಧನ್ಯವಾದಗಳು.
ಸೊಗಸಾದ ಕವನ ಶಿವೂ ಸರ್.
ಶಿವಣ್ಣ,
ತುಂಬಾ ಚನ್ನಾಗಿದೆ.
ಶಶಿ ಅಕ್ಕ,
ಹಳೆಯ ಕವನವನ್ನು ಇಷ್ಟಪಟ್ಟಿದ್ದಕ್ಕೆ ಥ್ಯಾಂಕ್ಸ್.
ಪ್ರವೀಣ್,
ಥ್ಯಾಂಕ್ಸ್.
ಶಿವು,
ತುಂಬ ಭಾವಪೂರ್ಣ ಕವನ ಬರೆದಿದ್ದೀರಿ. Keep writing.
ಚಂದದ ಕವಿತೆ ಶಿವು ಸರ್ :)
ಸುನಾಥ್ ಸರ್,
ಕವನದ ಭಾವನೆಗಳು ಅರ್ಥವಾಗಿದ್ದಕ್ಕೆ ಥ್ಯಾಂಕ್ಸ್..
ಶರತ್ ಚಂದ್ರ,
ಮತ್ತೆ ಬೆಂಗಳೂರಿಗೆ ಬಂದಿರಲ್ಲ...ಕವನ ಮೆಚ್ಚಿದ್ದಕ್ಕೆ ಥ್ಯಾಂಕ್ಸ್.
nimmalli kavana bareyuva prathibhe idhe yendhu thorisibittiralla shivanna :) nimma bEre kavana odhidha nenapilla nange... neevu eega kavana bareyuvudhannu nillisiddeero hege?
ಹೇಳು
ನಾನ್ಯಾವ ಋತುವಿನ ಕೊನೆಯಲ್ಲಿ
ಕುಳಿತು ಕಾಯಲಿ?
E saalu thumba hidisithu :)
"ಅವತ್ತು ನಿಮ್ಮ ಮನೆಗೆ ನಾನು ಅಜಾದ್ ಸರ್ ಬಂದಾಗ ನೀವು ಹೇಳಿದ್ರೆ ಕವನ ಎಲ್ಲಾ ಹೇಗೆ ಬರಿತಿರ ನಾನು ಮೊದ್ಲು ಬರಿತ ಇದ್ದೆ ಈಗ ಬರಿತ ಇಲ್ಲಾ" ಅಂತ ನೋಡಿ ನೋಡಿ ನೀವು ಎಷ್ಟು ಚನ್ನಾಗಿ ಬರ್ದಿದಿರಾ ಈಗ್ಲೂ ಬರೀರಿ ಚನ್ನಾಗಿರುತ್ತೆ ಸೊಗಸಾಗಿ ಬರಿಯುತ್ತಿರ..:)
ಅಣ್ಣ, ಕವನ ತುಂಬಾ ಸುಂದರವಾಗಿದೆ
ನಿಮ್ಮ ಕವನ ಪ್ರಕಟವಾಗಿದ್ದಕ್ಕೆ Congrats :-)
"ಮೊಗ್ಗಿನ ಮುಗ್ಧತೆ ಹೂವಿಗೆಲ್ಲಿ
ಬರಬೇಕು,
ಅಲ್ಲಿದ್ದ ಹೂಗಳು
ಸ್ಪರ್ಧಿಸಲಾಗದೆ ಸೋತು ಬಾಡಿದ್ದವು" wow super
ಶಿವು;ಕವನ ಸೂಪರ್.ಮತ್ತೆ ಬರೆಯಲು ಶುರುಮಾಡಿ.ಧನ್ಯವಾದಗಳು.
ತುಂಬಾ ಸೊಗಸಾದ ಕವನ. ಶಿವೂ ಅವರೇ, ಕವನ ಬರೆಯೋದನ್ನೇಕೆ ನಿಲ್ಲಿಸಿದ್ರಿ? ಈ ಕವನ ತುಂಬಾ ಇಷ್ಟವಾಯಿತು. ಬರೆಯುತ್ತಿರಿ.. :)
ಚೆನ್ನಾಗಿದೆ... :-)
ಚೆನ್ನಾಗಿದೆ.
ಶಿವು ಸರ್,
ಸುಂದರವಾದ ಕವಿತೆ
ಅಂದೇ ಕೊನೆ ನಗು ಮಾಯವಾಗಿತ್ತು
ಜೊತೆಗೆ ಮನೆಯಂಗಳದ ಪಾರಿಜಾತ
ಸುವಾಸನೆ ಬೀರಲು ಮರೆಯಿತು
ಎಂತಹ ಸುಂದರ ಕಲ್ಪನೆ
kavana chennagide... aadare eega yake barita illa munduvarisi
ನಿಮ್ಮ ಛಾಯಾಚಿತ್ರಕ್ಕೆ ಪುರಸ್ಕಾರ ದೊರೆತಿರುವುದಕ್ಕೆ ಮೊದಲಾಗಿ ಅಭಿನಂದನೆಗಳು, ಕವನ ಚೆನ್ನಾಗಿದೆ.
ಶಿವು ಅವರೆನಿಮ್ಮ ಇನ್ನೊಂದು ರೂಪದ ಅನಾವರಣ ಆಗಿದೆ. ಕವಿತೆ ಚೆನ್ನಾಗಿದೆ ಯಾಕೆ ಕವಿತೆ ಬರೆಯುವುದನ್ನು
ನಿಲ್ಲಿಸಿದ್ದು ಇನ್ಮುಂದೆ ನಿಮ್ಮಿಂದ ಅಪೇಕ್ಷೆಗಳಿವೆ....ಕವಿತೆ ಬರೀರಿ
ಹಳೇ ಕವನಗಳು ಏನೇನೋ ನೆನಪುಗಳನ್ನು ಮೀಟುತ್ತವೆ. ಆ ಕವನ ಹುಟ್ಟುವ ಗಳಿಗೆಯಲ್ಲಿ ಘಟಿಸಿದ ಯಾವುದೋ ಘಟನೆ ಥಟ್ಟನೆ ನೆನಪಿಗೆ ಬರುತ್ತದೆ.
ತನ್ನ ಛಾಪನ್ನು ಎದೆಯಲ್ಲಿ ಉಳಿಸಿ ಹೋಗುವ ಲಕ್ಷಣ ಒಂದು ಒಳ್ಳೆ ಕವನದ್ದು. ಈ ಕವನ ಆ ಸಾಲಿಗೆ ಸೇರುತ್ತದೆ.
Shivu, You are multitalented..keep it up..:)
ಶಿವು ಸರ್...
ಬಹಳ ದಿನಗಳ ಹಿಂದೆ ನೀವು ಬರೆದ ಕವನ ಓದಿ ಬಹಳ ಇಷ್ಟಪಟ್ಟಿದ್ದೆ...
ತುಂಬಾ ಭಾವಪೂರ್ಣವಾಗಿ ಬರೆಯುತ್ತೀರಿ...
ಇನ್ನಷ್ಟು ಬರೆಯಿರಿ...
ಅಭಿನಂದನೆಗಳು ಚಂದದ ಕವನಕ್ಕೆ...
ಶಿವು ಸರ್,
ತುಂಬಾ ತುಂಬಾ ಸೊಗಸಾಗಿದೆ ಸಾಲುಗಳು ...ಅದರಲ್ಲೂ ಈ ಸಾಲುಗಳು ಇಷ್ಟ ಆಯ್ತು...
ಅದಕ್ಕಾಗಿ, ಅದನ್ನು ಆರಾಧಿಸುವ
ನನಗಾಗಿ ನೀ ನಗಬೇಕು, ಮಾಗಿಯಲ್ಲಿ
ಮೂಕವೇದನೆಗೊಂಡರೂ ಭುವಿ ವಸಂತಋತು
ಬಂದಾಗ ನಕ್ಕು ಅರಳುತ್ತಾಳೆ ಹೇಳು
ನಾನ್ಯಾವ ಋತುವಿನ ಕೊನೆಯಲ್ಲಿ
ಕುಳಿತು ಕಾಯಲಿ?
ಕವನ ಬರೆಯಿರಿ ಸರ್....
ಸೂಪರ್... ಚೆನ್ನಾಗಿದೆ..
ತುಂಬಾ ಚೆನ್ನಾಗಿದೆ
chennagide sir
kavana munduvareyali
ಸುಧೇಶ್,
ಇದು ಹೊಸ ಕವನವಲ್ಲ. ಮತ್ತೆ ಈಗ ನಾನು ಕವನ ಬರೆಯುತ್ತಿಲ್ಲ. ನನ್ನ ಬ್ಲಾಗ್ ಪ್ರಾರಂಭದಲ್ಲಿ ಮತ್ತು ನಡುವೆ ಮೂರು ಕವನಗಳನ್ನು ಹಾಕಿದ್ದೇನೆ. ಇಷ್ಟಪಟ್ಟಿದ್ದಕ್ಕೆ ಥ್ಯಾಂಕ್ಸ್.
ದೊಡ್ಡಮನೆಮಂಜು,
ನೀವು ಅಜಾದ್ ಜೊತೆ ನಮ್ಮ ಮನೆಗೆ ಬಂದು ರಾತ್ರಿ ಹತ್ತುಗಂಟೆಯವರೆಗೂ ತುಂಬಾ ಮಾತಾಡಿದ್ದು ನನಗಂತೂ ಖುಶಿಯಾಯ್ತು..ನೋಡೋಣ ನಿಮ್ಮ ಪ್ರೋತ್ಸಾಹ ಮತ್ತೆ ಕವನ ಬರೆಯಲು ಪ್ರೇರೇಪಿಸುತ್ತೇನೋ..ಧನ್ಯವಾದಗಳು.
ನಾಗರಾಜ್,
ಕವನವನ್ನು ಮೆಚ್ಚಿದ್ದೀರಿ..ಆದ್ರೆ ಈಗ ಇಂಥದ್ದು ಬರೆಯಲು ಪ್ರಯತ್ನಿಸಿದರೆ ಅದೇಕೋ ಸುಳ್ಳು ಅನ್ನಿಸಿಬಿಡುತ್ತೆ..ಬಹುಶಃ ಹತ್ತು ವರ್ಷದ ಅಂತರ ಕಾರಣವಾ? ಗೊತ್ತಿಲ್ಲ..ಈಗ ನೇರವಾಗಿ ಸಹಜವಾಗಿ ಬರೆಯಬೇಕು ಅನ್ನಿಸುತ್ತೆ...ಮೆಚ್ಚಿದ್ದಕ್ಕೆ ಥ್ಯಾಂಕ್ಸ್.
ಡಾಕ್ಟರ್ ಕೃಷ್ಣಮೂರ್ತಿ ಸರ್,
ಖಂಡಿತ ಮುಂದೆ ಬರೆಯಲು ಪ್ರಯತ್ನಿಸುತ್ತೇನೆ..ನಿಮ್ಮ ಪ್ರೋತ್ಸಾಹಕ್ಕೆ ಧನ್ಯವಾದಗಳು.
ಪ್ರದೀಪ್,
ಕವನ ನಿಮಗೇ ಅಷ್ಟೋಂದು ಇಷ್ತವಾಯ್ತ...ಥ್ಯಾಂಕ್ಸ್. ನಿಮ್ಮ ಸ್ಫೂರ್ತಿಯುತ ಮಾತು ನನಲ್ಲಿ ಹೊಸಕವನವನ್ನು ಬರೆಸಬಹುದು..ಧನ್ಯವಾದಗಳು.
ಸಲೀಂ,
ನಿಮ್ಮ ಜೊತೆ ಫೋನಿನಲ್ಲಿ ಮಾತಾಡಿದಾಗ ನಾನು ಕವನಗಳ ಬಗ್ಗೆ ಹೇಳಿದ್ದೆ. ನೀವು ಹಾಕಬೇಕೆಂದು ಒತ್ತಾಯಿಸಿದಾಗ ನನಗೂ ಸ್ವಲ್ಪ ಬದಲಾವಣೆಯಿರಲಿ ಎಂದು ಹಾಕಿದೆ. ತುಂಬಾ ಜನರು ಮೆಚ್ಚಿದ್ದಾರೆ...ನಿಮಗೆ ಥ್ಯಾಂಕ್ಸ್..
ಸುಗುಣಕ್ಕ,
ನೀವೆಲ್ಲಾ ಸರಾಗವಾಗಿ ಬರೆದಷ್ಟು ಸುಲಭವಾಗಿ ನನಗೆ ಕವನ ಬರೆಯಲು ಸಾಧ್ಯವಿಲ್ಲ. ಪ್ರಯತ್ನಿಸುತ್ತೇನೆ..
ಉಮೇಶ್ ದೇಸಾಯಿ ಸರ್,
ನಮ್ಮಿಂದ ಹೊಸ ನಿರೀಕ್ಷೆಗಳನ್ನು ಬಯಸಿದ್ದೀರಿ..ಥ್ಯಾಂಕ್ಸ್. ನೋಡೋಣ ಯಾವಾಗ ನನ್ನ ಅಲೋಚನೆಗಳಿಗೆ ಕವನದ ರೂಪ ಬರುತ್ತದೋ ಆಗ ಖಂಡಿತ ಬರೆಯುತ್ತೇನೆ..ಧನ್ಯವಾದಗಳು.
ಭದ್ರಿನಾಥ್ ಪಾಲವಳ್ಳಿ,
ನಿಮ್ಮ ಪ್ರತಿಕ್ರಿಯೆಯೇ ಒಂದು ಕವನದಂತೆ ಇದೆ. ನಿಮ್ಮ ಜೊತೆ ಫೋನಿನಲ್ಲಿ ಮಾತಾಡಿದಾಗ ನೀವು ಕೊಟ್ಟ ವಿಚಾರದ ಬಗ್ಗೆ ಲೇಖನ ಶುರುಮಾಡಿದ್ದೇನೆ. ಕೆಲವೇ ದಿನಗಳಲ್ಲಿ ಅದು ಹೊರಬರುತ್ತದೆ..ನೋಡಬೇಕು ಏನಾಗುತ್ತದೋ ಅಂತ...ಅದಕ್ಕಾಗಿ ಧನ್ಯವಾದಗಳು.
ವನಿತಾ,..
ಥ್ಯಾಂಕ್ಸ್..ನಿಮ್ಮ ಪ್ರೋತ್ಸಾಹ ಹೀಗೆ ಇರಲಿ...
ದಿನಕರ್ ಸರ್,
ನೀವು ಕವನದ ಭಾವವನ್ನು ಅರ್ಥೈಸಿಕೊಂಡಿದ್ದಕ್ಕೆ ಥ್ಯಾಂಕ್ಸ್..ಮುಂದೆ ಬರೆಯಲು ಪ್ರಯತ್ನಿಸುತ್ತೇನೆ..
ಕವನ ಚೆನ್ನಾಗಿದೆ ಎಂದು ಮೆಚ್ಚಿದವರಿಗೆಲ್ಲಾ...ಧನ್ಯವಾದಗಳು.
ಕವನ ಓದಿದೆ, ಚೆನ್ನಾಗಿದೆ. ನಿಮಗೆ ಬರೆಯುವ ಚಟ ಹಿ೦ದಿನಿ೦ದಲೂ ಇತ್ತೆನ್ನುವುದು ಸಾಬೀತಾಯಿತು. ಮುಂದುವರಿಸಿ, ಗುಡ್
ನಿಮ್ಮೊಳಗಿರುವ ಕವಿಗೆ ಅಭಿನಂದನೆಗಳು.
ಶಿವು ಅವರೆ, ಕವನ ಸೊಗಸಾಗಿದೆ. ಮುಂದುವರೆಸಿ.
ಸ್ನೇಹದಿಂದ,
ಎದೆಯಲ್ಲಿದ್ದ ಆಸೆ ಆವಿಯಾಗಿ ನಿರಾಶೆ
ನಿಟ್ಟುಸಿರು ಮೊಳೆಯಂತೆ ಹೊಕ್ಕಿರಬಹುದು
ನೂರು ಮಾತಲ್ಲಿ ಸಾವಿರಾರು
ಮೌನದಲಿ ಕಚ್ಚಿಚುಚ್ಚಿ
ಸಮಾಜ ನಿನ್ನನ್ನು ಕೊಂದಿರಬಹುದು
ಶಿವು,ಒಳ್ಳೆಯ ಕವನ. ಮೇಲಿನ ಸಾಲುಗಳು ಉತ್ತಮ ಸಾಲುಗಳು.ಇನ್ನೂ ಹೆಚ್ಚಿನ ಸ೦ಖ್ಯೆಯ ಮೌಲ್ಯಯುತ ಕವನಗಳು ನಿಮ್ಮಿ೦ದ ಬರಲಿ.
ನಮಸ್ಕಾರಗಳೊ೦ದಿಗೆ,
ನಿಮ್ಮವ ನಾವಡ.
ಶಿವು ಅವರೇ,
ನಿಜಕ್ಕೂ ಭಾವಪೂರ್ಣ ಕವನ.
ತುಂಬಾ ಚೆನ್ನಾಗಿದೆ
ಪರಂಜಪೆ ಸರ್,
ಬರೆಯುವ ಚಟ ತುಂಬಾ ದಿನದಿಂದ ಇತ್ತು. ಆಗ ಕವನವನ್ನು ಮಾತ್ರ ಬರೆಯುತ್ತಿದ್ದೆ. ಈಗ ಬರೆಯಲಾರೆ ಏಕೋ ಗೊತ್ತಿಲ್ಲ. ಪದ್ಯಕ್ಕಿಂತ ಗದ್ಯ ಸುಲಭವೆನಿಸುತ್ತದೆ. ಮೆಚ್ಚಿದ್ದಕ್ಕೆ ಧನ್ಯವಾದಗಳು.
ಗುಬ್ಬಚ್ಚಿ ಸತೀಶ್,
ನನ್ನೊಳಗೊಬ್ಬ ಕವಿ ಇದ್ದಾನೆ ಅಂದಿದ್ದಕ್ಕೆ ಥ್ಯಾಂಕ್ಸ್.
ಚಂದ್ರು ಸರ್,
ಧನ್ಯವಾದಗಳು.
k.s Raghavendra sir,
ನನ್ನ ಬ್ಲಾಗಿಗೆ ಸ್ವಾಗತ.
ನನ್ನ ಕವನದಲ್ಲಿ ಕೆಲವು ಸಾಲುಗಳನ್ನು ಇಷ್ಟಪಟ್ಟಿದ್ದೀರಿ. ಧನ್ಯವಾದಗಳು;. ಹೀಗೆ ಬರುತ್ತಿರಿ..
ಅಪ್ಪ-ಅಮ್ಮ ಬ್ಲಾಗ್ ಒಡೆಯರೆ,
ನಿಮ್ಮ ಹೆಸರು ತಿಳಿಯಲಿಲ್ಲ ನನ್ನ ಬ್ಲಾಗಿಗೆ ಮೊದಲ ಬಾರಿ ಬಂದಿದೀರಿ..ನಿಮಗೆ ಸ್ವಾಗತ. ಕವನ ಮೆಚ್ಚಿದ್ದಕ್ಕೆ ಥ್ಯಾಂಕ್ಸ್.
sir chenagide kavana sir. .. bahala artha baddavaagide....
andu bareyutidda nivu ee naduve yake sir kavana bareyodila.. bariri sir chenaagi baritiri...
ಹಳ್ಳಿ ಹುಡುಗ ತರುಣ್,
ಖಂಡಿತ ಪ್ರಯತ್ನಿಸುತ್ತೇನೆ..ನಿಮ್ಮ ಪ್ರೋತ್ಸಾಹಕ್ಕೆ ಧನ್ಯವಾದಗಳು.
ಚೆನ್ನಾಗಿದೆ ಕವನ ಪ್ರಯತ್ನ. ಈಗಲು ಪ್ರಯತ್ನಿಸಬಹುದು.
Post a Comment