Tuesday, September 7, 2010

ಆತ ಮತ್ತು ಪರದೆ.



       ಆತ ಹುಲ್ಲಿನ ಮೇಲೆ ಚಿತ್ರ ಬಿಡಿಸುತ್ತಿದ್ದ. ನಂತರ ಅದಕ್ಕೊಂದು ಕವನವನ್ನು ಗೀಚುತ್ತಿದ್ದ. ಮುಗಿಸಿದ ಮೇಲೆ ನೋಡಿದರೆ ಅದು ಯಾರ್‍ಇಗೂ ಕಾಣುತ್ತಿರಲಿಲ್ಲ.  ಕಾಣುತ್ತಿಲ್ಲವಲ್ಲವೆಂದು ಮರದ ಕಾಂಡದ ಮೇಲೆ ಗೀಜಿದ. ಅದು ಕೂಡ ಯಾರಿಗೂ  ಕಾಣಲಿಲ್ಲ. ನೀರಿನ ಬಳಿಗೆ ಓಡಿದ. ನೀರು ಪಾರದರ್ಶಕವಾಗಿ ಕಾಣುತ್ತಿತ್ತಲ್ಲ. ಇದರ ಮೇಲೆ ಬರೆದರೆ, ಚಿತ್ರ ತೆಗೆದರೆ ಕಾಣಬಹುದು ಅಂತ ಅದರ ಮೇಲು ತನ್ಮಯತೆಯಿಂದ ಚಿತ್ರಬಿಡಿಸಿದ.  ಇನ್ನೇನು ಮುಗಿದು ಎಲ್ಲರಿಗೂ ಕಾಣಬೇಕು ಅನ್ನುವಷ್ಟರಲ್ಲಿ ಜೋರಾದ ಗಾಳಿಯೊಂದು ಬೀಸಿ ನೀರಿನ ಮೇಲೆ ಉಂಗುರಾಕಾರದ ಪುಟ್ಟ ಪುಟ್ಟ ಅಲೆಗಳೆದ್ದು ಬೇರೆಯವರು ನೋಡುವ ಮೊದಲೇ ಇಡೀ ಚಿತ್ರವನ್ನು ಕಲಕಿ ಬಿಟ್ಟವು.  ಆದರೂ ಆತ ತನ್ನ ಪ್ರಯತ್ನವನ್ನು ಬಿಡದೆ ಕೈಗೆ ಸಿಕ್ಕವಸ್ತುಗಳ ಮೇಲೆಲ್ಲಾ ಚಿತ್ರ ಬಿಡಿಸುವುದು, ಪದ್ಯ-ಗದ್ಯ ಗೀಜುವುದು ನಡೆದೇ ಇತ್ತು.

       ಹೀಗೆ ಒಂದು ದಿನ ಆತ ತನ್ನ ಕಾಯಕದಲ್ಲಿರುವಾಗ ಒಂದು ಆಯತಾಕಾರದ ಬಿಳಿ ಪರಧೆ ಅವನ ಮುಂದೆ ನಿಂತಿತು.  ನೋಡಲು ಬೆಳ್ಳಂಬೆಳ್ಳಗಿನ ಈ ಪರಧೆಯನ್ನು  ನೋಡಿ ಅವನಿಗೆ ಆಶ್ಚರ್ಯವಾಯಿತು.
   "ನೀನು ಯಾರು?" ಕೇಳಿದ.

"ಕಣ್ಣು ಕಾಣೊಲ್ವ, ನಾನು ಬಿಳಿ ಪರದೆ" ಹೇಳಿತು.

 "ನೀನು ಬಿಳಿಯಾಗಿರುವುದರಿಂದ ಹಾಗೆ ಹೇಳಬಹುದು.  ಆದ್ರೆ ನೀನು ಎಲ್ಲಿಂದ ಬಂದೆ? ನನ್ನ ಬಳಿಯೇಕೆ ಬಂದೆ."
 
"ನೋಡು ಎಲ್ಲಿಂದ ಬಂದೆ, ಹೇಗೆ ಬಂದೆ ಅನ್ನುವ ಕಾರಣ ತಿಳಿದುಕೊಳ್ಳುವುದಕ್ಕಿಂತ ನಾನು ನಿನ್ನ ಬಳಿಗೆ ಬಂದಿರುವ ಕಾರಣವನ್ನು ಹೇಳುತ್ತೇನೆ ಕೇಳು, ನೀನು ಏನೇನೋ ಮಾಡುತ್ತಿದ್ದಿಯಲ್ಲ, ಅದನ್ನೆಲ್ಲ ಹುಲ್ಲು, ಗಿಡ, ಮರ, ನೆಲ ಗಾಳಿ, ನೀರು ಇವೆಲ್ಲದರ ಮೇಲೆ ಮಾಡಿದರೆ ಅದು ನಿನಗೊಬ್ಬನಿಗೆ ಗೊತ್ತಾಗುತ್ತದೆ ವಿನಃ ಬೇರೆ ಹೊರಪ್ರಪಂಚಕ್ಕೆ ಗೊತ್ತಾಗುವುದಿಲ್ಲ.  ಅದರ ಬದಲಾಗಿ ನಾನು ಬಿಳಿಪರದೆಯಾದ ನನ್ನ ಮೇಲೆ ನೀನು ಚಿತ್ರವನ್ನು ರಚಿಸಬಹುದು, ಕತೆ, ಕವಿತೆ ಗೀತೆ,.............ಏನು ಬೇಕಾದರೂ ಬರಿ.  ನೀನು ಬರೆದ ಮರುಕ್ಷಣವೇ ನಾನು ಹಾರಿಹೋಗಿ ಪ್ರಪ್ರಂಚದ ಮೂಲೆ ಮೂಲೆಗೂ ಕ್ಷಣಮಾತ್ರದಲ್ಲಿ ತಲುಪಿ ನಿನ್ನ ಚಿತ್ರಗಳು, ಬರಹಗಳು,.........ಎಲ್ಲವನ್ನು ನಿನ್ನ ಗೆಳೆಯರಿಗೆ, ಗೆಳೆಯರಲ್ಲದವರಿಗೆ, ಗೆಳಯರಾಗಬಯಸುವವರಿಗೆ, ಇನ್ನೂ.............ಅನೇಕರಿಗೆ ತಲುಪಿಸುತ್ತೇನೆ. ಅವರಿಂದ ಸುದ್ಧಿಯನ್ನು ಪ್ರತಿಕ್ರಿಯೆಯನ್ನು ನಿನಗಾಗಿ ನಾನು ಹೊತ್ತು ತರುತ್ತೇನೆ."  


        ಅದರ ಮಾತು ಕೇಳಿ ಅವನಿಗೆ ತಕ್ಷಣ ಏನು ಹೇಳಬೇಕೆಂದು ಗೊತ್ತಾಗಲಿಲ್ಲ. ಆತ ಯೋಚಿಸಿದ. ಹೌದು ನನ್ನ ಭಾವ, ಬರಹ, ಚಿತ್ರಗಳನ್ನು ಹಂಚಿಕೊಳ್ಳಲು ಹೊಸದೇನನ್ನೋ ಹುಡುಕುತ್ತಿದ್ದ ಅವನಿಗೆ ಇದೊಂತರ ಕುತೂಹಲ ಕೆರಳಿಸಿತ್ತು. ಇರಲಿ ನೋಡೋಣವೆಂದು ಮೊದಲು ಪ್ರಯತ್ನಿಸಿದ.  ಅಷ್ಟು ಚೆನ್ನಾಗಿ ಬರಲಿಲ್ಲ.  ಮತ್ತೆ ಮತ್ತೆ ಪ್ರಯತ್ನಿಸಿದಾಗ ಅದು ಕೆಲವೇ ದಿನಗಳಲ್ಲಿ ಅವನ ಹಿಡಿತಕ್ಕೆ ಹದಕ್ಕೆ ಬಂತು. ಶುರುವಾಯಿತಲ್ಲ.   ಮೊದಮೊದಲು ಬೇರೆಯವರು ಗಮನಿಸುತ್ತಿದ್ದಾರೆ ಎನ್ನುವುದಕ್ಕಾಗಿ ಒಂದಷ್ಟು ಚಿತ್ರಗಳನ್ನು ಬಿಡಿಸಿದರೂ, ಅದು ಸ್ವಲ್ಪ ದಿನಗಳಲ್ಲೇ ಬೋರು ಹೊಡೆಯತೊಡಗಿತು.  ಮುಂದೆ ಅವನು ಆ ಪರದೆಯ ಮೂಲಕ ತನ್ನನ್ನು ನೋಡಿಕೊಳ್ಳಲು ಪ್ರಯತ್ನಿಸಿದ.  ಬೇರೆಯವರಿಂದ ಹೊಸತನ್ನು ನಿರೀಕ್ಷಿಸುವ ಆತ ತನ್ನಿಂದಲೂ ಹೊಸತು ಪ್ರತಿಬಾರಿಯೂ ಇರಬೇಕು  ಅದಕ್ಕಾಗಿ ಒಂದಷ್ಟು ಶ್ರಮ, ತಾಳ್ಮೆ, ತುಡಿತ, ಕಾತುರ, ಕುತೂಹಲವನ್ನು  ತನ್ನೊಳಗೆ ಆಳವಡಿಸಿಕೊಂಡ. ಪರಿಣಾಮ ಮುಂದೆ ಬರುವ ಗದ್ಯಗಳು, ಚಿತ್ರಗಳು ಆತನಿಗೆ ಖುಷಿಕೊಡತೊಡಗಿದವು.  ಪರದೆಯ ಮೂಲಕ ಮೂಡಿಸುವ ಪ್ರತಿಯೊಂದು ಕೃತಿಯೂ ಆತನಿಗೆ ಖುಷಿ ಕೊಡುತ್ತಿತ್ತು.  ತಾನು ಮಾಡುವುದು ಮೊದಲು ನನಗೇ ಇಷ್ಟವಾಗದಿದ್ದಲ್ಲಿ ಬೇರೆಯವರಿಗೆ ಹೇಗೆ ಇಷ್ಟವಾಗುತ್ತದೆ, ಎನ್ನುವ ಒಂದೇ ಮಾನದಂಡವನ್ನು ಇಟ್ಟುಕೊಂಡು ತನ್ನ ಕೆಲಸ ಮುಂದುವರಿಸಿದ. ನಿದಾನವಾಗಿ ಎಲ್ಲರೂ ಅವನನ್ನು ಗುರುತಿಸತೊಡಗಿದರು.  ಈತನ ಕೃತಿಗಳು ಪರದೆಯಲ್ಲಿ ಮೂಡಿದ ತಕ್ಷಣ ಯಾವುದೋ ದೇಶದ ಗೆಳೆಯರು ತಕ್ಷಣ ಓಡಿಬಂದು ಅದನ್ನು ಇಷ್ಟಪಟ್ಟು ತಮ್ಮ ಮೆಚ್ಚಿಗೆ ಸೂಚಿಸಿ ಹೋಗುತ್ತಿದ್ದರು.

     ಸಾವಿರಾರು ಮೈಲುಗಳಷ್ಟು ದೂರವಿರುವ ಅವರೇ ಹೀಗೆ ಪರದೆಯಲ್ಲಿ ತಕ್ಷಣಕ್ಕೆ ಕಾಣಿಸಿಕೊಳ್ಳುತ್ತಿದ್ದಾರಲ್ಲ,  ನನಗೂ ಹಾಗೆ ಅವರಂತೆ ಅವರ ಸ್ಥಳಕ್ಕೆ ಹೋಗಿ ಅವರ ಕಲೆ, ಸಾಹಿತ್ಯವನ್ನು ನೋಡಿ, ಓದಿ ಆನಂದಿಸುವ ಸಾಧ್ಯವಾ?  ಅಂದುಕೊಂಡು ಕೊನೆಗೊಂದು ದಿನ ಆ ಪರದೆಯೊಳಗೆ ಕಾಲಿಟ್ಟ. ಅವನು ಒಳಬರುವುದನ್ನೆ ಕಾಯುತ್ತಿದ್ದ ಅದು  ಕೆಲವೇ ಕ್ಷಣಗಳಲ್ಲಿ ಅವನಿಷ್ಟಪಟ್ಟ ಸ್ಥಳಕ್ಕೆ ಅವನನ್ನು ಇಳಿಸಿತು. ಅಷ್ಟೇ ಅಲ್ಲದೇ ಆತ ಬಯಸಿದ ವ್ಯಕ್ತಿಯೊಂದಿಗೆ ಪತ್ರವ್ಯವಹಾರ, ಮಾತುಕತೆ ಇತ್ಯಾದಿಗಳನ್ನು ಖುಷಿಯಿಂದ ನಡೆಸಲು ಅವಕಾಶ ಮಾಡಿಕೊಟ್ಟಿತ್ತು.  ಅಲ್ಲಿನ ಗೆಳೆಯರನ್ನು ಮಾತಾಡಿಸಿಬರುವುದು, ಮೆಚ್ಚುಗೆ ವ್ಯಕ್ತಪಡಿಸುವುದು, ಖುಷಿಪಡುವುದು, ಹೀಗೆ ಎಲ್ಲವೂ ಕ್ಷಣಮಾತ್ರದಲ್ಲಿ ಸಾಧ್ಯವಾಗುತ್ತಿತ್ತು. ನಿಜಕ್ಕೂ ಇದೊಂತರ ಮಾಯಾಪರದೆಯೇ ಸರಿ ಎಂದುಕೊಂಡು ತನ್ನ ಕೆಲಸ ಮುಂದುವರಿಸಿದ.  ಒಂದು ವರ್ಷ ಕಳೆಯುವಷ್ಟರಲ್ಲಿ ಆತ ಬಹು ಜನಪ್ರಿಯನಾಗಿದ್ದ. ಅವನ ಚಿತ್ರಗಳು, ಸಾಹಿತ್ಯಗಳು ಪುಸ್ತಕದ ರೂಪದಲ್ಲಿ ಬಂದವು.  ಎರಡನೇ ವರ್ಷದಲ್ಲಿ ಅವನ ರಚನೆಯ ವೇಗ ಮತ್ತಷ್ಟು ಹೆಚ್ಚಾಯಿತು. ಮುಂದೆ ಆತ ಅದೆಷ್ಟು ವೇಗದಲ್ಲಿದ್ದನೆಂದರೆ ಹಿಂದಿರುಗಿ ಬರಲಾಗದಷ್ಟು ವೇಗವನ್ನು ತಲುಪಿದ್ದ. ಆತನಿಗೆ ಸಾವಿರಾರು ಸಹೃದಯರು, ಗೆಳೆಯರು ಸಿಕ್ಕಿ  ಅವರ ಪ್ರೋತ್ಸಾಹದಿಂದ ಪರದೆಯಲ್ಲಿ ಮೂಡಿದ ಮತ್ತಷ್ಟು ಅಕ್ಷರಗಳು ಎರಡನೇ ಪುಸ್ತಕ ರೂಪದಲ್ಲಿ ಬಂದವು.  ಈ ಸಮಯದಲ್ಲಿ ಆತನೂ ಪರದೆಯೊಳಗೆ ಹಾರಿ ತನ್ನ ಗೆಳೆಯರ ಜೊತೆಗಿನ ಸಂಭ್ರಮದಲ್ಲಿ ಯಾವರೀತಿ ಮೈಮರೆತಿದ್ದನೆಂದರೆ, ಕೊನೆ ಕೊನೆಯಲ್ಲಿ ತನಗೆ ದಾರಿ ತೋರ್‍ಇಕೊಟ್ಟ ಪರದೆಯನ್ನು ಮರೆತುಬಿಟ್ಟಿದ್ದ.   ಎಲ್ಲಾ ಸಂಭ್ರಮ ಮುಗಿಯಿತು.  ಗೆಳೆಯರೆಲ್ಲಾ ಮತ್ತೆ ಅವರವರ ಮನೆಗೆ ಹೋದರು.  

             ಈತ ಪರದೆಯ ಹೊರಗೆ ಬಂದು ಎಂದಿನಂತೆ ತನ್ನ ಕಾಯಕದಲ್ಲಿದ್ದಾಗ ಆತನ ಆರನೇ ಇಂದ್ರಿಯ ಅವನಿಗೆ ಏನೋ ಒಂದು ಸೂಚನೆ ಕೊಡುತ್ತಿತ್ತು. ಆದರೆ ಅದು ಏನು ಅಂತ ಗೊತ್ತಾಗಲಿಲ್ಲ. ಅವನ ಬುದ್ದಿಮಟ್ಟಕ್ಕೆ ಗೊತ್ತಾಗದಿದ್ದರೂ ಆವನ ಮನಸ್ಸಿನಲ್ಲಿ ನಾನೇನು ತಪ್ಪು ಮಾಡಿದ್ದೇನೆ ಎನ್ನುವ ಅಪರಾಧಿ ಮನೋಭಾವನೆ ಕಾಡತೊಡಗಿತು.  ಒಂದು ವಾರ ಕಳೆಯುವಷ್ಟರಲ್ಲಿ  ಅದೇನೆಂದು ಗೊತ್ತಾಗಿಬಿಟ್ಟಿತಲ್ಲ!  "ಛೇ ನಾನು ಇಂಥ ಕೆಲಸವನ್ನು ಮಾಡಬಾರದಾಗಿತ್ತು.  ನನಗೆ ಇಷ್ಟು ಖುಷಿ, ತೃಪ್ತಿಯನ್ನು ಕೊಟ್ಟ ಪರದೆ ನನಗೆ ಸಿಕ್ಕಿ ಆಗಲೇ ಎರಡು ವರ್ಷಗಳು ಕಳೆದುಹೋಗಿ ಮೂರನೇ ವರ್ಷ ಶುರುವಾಗಿಬಿಟ್ಟಿದೆಯಲ್ಲ!  ನಾನು ಅದನ್ನೇ ಮರೆತಿದ್ದೆನೆಂದು ಅರಿವಾಗಿತ್ತು.  ಯಶಸ್ಸಿನ ಅಮಲು ತಲೆಗೇರಿದ್ದು ಗೊತ್ತಾಗಿ ಆತನ ಮೇಲೆ ಆತನಿಗೆ ನಾಚಿಕೆಯಾಗಿತ್ತು.  ದೂರದಿಂದ ಯಾರೋ ಕಪಾಳಕ್ಕೆ ಬಾರಿಸಿದಂತೆ ಆಗಿತ್ತು.  ಮತ್ತೆ ಪರದೆಯ ಬಳಿ ಬಂದು ತನ್ನಿಂದಾದ ತಪ್ಪಿಗಾಗಿ ಕ್ಷಮೆಯನ್ನು ಕೇಳಿದ.  ನಂತರ ಅದರ ಮೂರನೇ ವರ್ಷದ ಹುಟ್ಟುಹಬ್ಬವನ್ನು ಖುಷಿಯಿಂದ ಆಚರಿಸಿದ.  ಇದನ್ನೆಲ್ಲಾ ದೂರದಿಂದ ನೋಡುತ್ತಿದ್ದ ಪರದೆ ಇವನ ಅವಾಂತರಗಳನ್ನು ಕಂಡು ಮುಗ್ದವಾಗಿ ನಗುತ್ತಿತ್ತು.

ಗೆಳೆಯರೆ ಕತೆ ಇಷ್ಟವಾಯಿತಾ!  ಅಂದ ಹಾಗೆ ಇದು ಯಾರದೋ ಕತೆಯಲ್ಲ.  ನನ್ನದೇ ಕತೆ.  ಆತ ನಾನು.  ಪರದೆಯೆನ್ನುವುದು ನನ್ನ ಮೆಚ್ಚಿನ ಛಾಯಾಕನ್ನಡಿ ಬ್ಲಾಗ್ ಪರದೆ.  ಅದಕ್ಕೆ  ಇದೇ ಅಗಷ್ಟ್ ೨೯ಕ್ಕೆ ಎರಡು ವರ್ಷ ತುಂಬಿ ಮೂರನೇ ವರ್ಷಕ್ಕೆ ಕಾಲಿಟ್ಟಿದೆ.  ಎರಡು ತುಂಬಿ ಮೂರನೇ ವರ್ಷಕ್ಕೆ ಹಂಬೆಗಾಲಿಟ್ಟ ಪುಟ್ಟ ಮಗುವಾದರೂ ನನ್ನಲ್ಲಿ ಅದೆಷ್ಟು ಬದಲಾವಣೆಯನ್ನು ತಂದಿದೆಯಲ್ವಾ.... ನನ್ನ ನಿತ್ಯ ಕೆಲಸದಲ್ಲಿ, ಯಶಸ್ಸಿನಲ್ಲಿ ಅದರ ಹುಟ್ಟಿದ ದಿನಾಂಕವನ್ನೇ ಮರೆತುಬಿಟ್ಟಿದ್ದೆನಲ್ಲಾ ಅಂತ ಗೊತ್ತಾಗಿ ನನ್ನ ಮೇಲೆ ನನಗೆ ಬೇಸರವಾಗಿತ್ತು.  ಅದಕ್ಕಾಗಿ ನನ್ನದೊಂದು ಕ್ಷಮಾಪಣೆಯ ರೂಪದಲ್ಲಿ ಈ ಕತೆಯನ್ನು ಬರೆದು ನನ್ನ ಮೆಚ್ಚಿನ, ಮುದ್ದಿನ ಛಾಯಾಕನ್ನಡಿಗಾಗಿ ಮೂರನೇ ವರ್ಷದ ಉಡುಗೊರೆಯನ್ನು ಕೊಡುತ್ತಿದ್ದೇನೆ. ನೀವು ಕೂಡ ಅದನ್ನು  ಹಾರೈಸುತ್ತಾ,  ಪ್ರೋತ್ಸಾಹಿಸುತ್ತೀರಲ್ವಾ?
 
ಪ್ರೀತಿಯಿಂದ...ಶಿವು.ಕೆ ಮತ್ತು ಛಾಯಾಕನ್ನಡಿ.

ಕತೆ ಮತ್ತು ಚಿತ್ರ
ಶಿವು.ಕೆ

62 comments:

Shweta said...

Shivu sir,

Happy bday to ChaayaKannadi.

olleya blog,hechchu ayushya galisali,olleya mannane sigali.

Chaithrika said...

ಕಥೆ ಚೆನ್ನಾಗಿದೆ... ಛಾಯಾಕನ್ನಡಿಗೆ ಶುಭಾಶಯ ಹೇಳಿದ ವಿಧಾನವೂ ನವೀನವಾಗಿದೆ.

ಸೀತಾರಾಮ. ಕೆ. / SITARAM.K said...

NICE
CONGRATS

b.saleem said...

ಶಿವು ಸರ್,
ಛಾಯಾಕನ್ನಡಿಗೆ ಕಥೆಯ ಕೊಡುಗೆ ಚನ್ನಾಗಿದೆ.
ಸದಾ ಹೊಸತನವನ್ನು ಕೊಡುತ್ತಿರುವ ಛಾಯಾಕನ್ನಡಿಗೆ
ಹುಟ್ಟು ಹಬ್ಬದ ಶುಭಾಶಯಗಳು.

shridhar said...

ವಿಭಿನ್ನ ಶೈಲಿಯಲ್ಲಿ ಶುಭಾಶಯ ಹೇಳಿದ ಪರಿ ಇಷ್ಟವಾಯ್ತು ..
ಕಥೆಯಲ್ಲಿನ ಭಾವನೆ , ಕಲ್ಪನೆ ಚೆನ್ನಾಗಿದೆ .

ಛಾಯಾಕನ್ನಡಿಗೆ be lated Bday wishes ...

ಇನ್ನು ಹೆಚ್ಚು ಹೆಚ್ಚಿ ಲೇಖನಗಳು ಬರಲಿ .

JAY said...

ಶಿವೂ ಅಣ್ಣ ...ನಿಮ್ಮ ಛಾಯಾ ಕನ್ನಡಿ ಪರದೆ ಇನ್ನೂ ಎತ್ತರಕ್ಕೆ ಹಾರುವಂತಾಗಲಿ..ಛಾಯಾ ಕನ್ನಡಿಗೆ ಹುಟ್ಟು ಹಬ್ಬದ ಶುಭಾಶಯಗಳು..

ಕ್ಷಣ... ಚಿಂತನೆ... said...

ಅಭಿನಂದನೆಗಳು ಶಿವು ಅವರೆ,

ನಿಮ್ಮ ಕಲ್ಪನೆಯ ಕಥೆ ಚೆನ್ನಾಗಿತ್ತು. ಕುತೂಹಲ ಉಂಟುಮಾಡಿತ್ತು.

ಹೆಚ್ಚು ಹೆಚ್ಚು ಚಿತ್ರ-ಬರಹಗಳು, ಹೊಸತರ ಹುಡುಕಾಟ ಇವೆಲ್ಲ ನಿಮ್ಮ ಛಾಯಾಕನ್ನಡಿಯಲ್ಲಿ ಕಾಣಿಸಿಕೊಳ್ಳಲಿ..

ಸ್ನೇಹದಿಂದ,

kanasu said...

ಶಿವೂ ಅವರೇ...

ಅದ್ಭುತವಾದ ಛಾಯಾಚಿತ್ರಗಳನ್ನೇ ತೆಗೆಯುತ್ತೀರಿ ಅಂದುಕೊಂಡಿದ್ದೆ .. ಆದ್ರೆ ನೀವು ಇಷ್ಟು ಸೊಗಸಾಗಿ ಬರೀತೀರಿ ಕೂಡ ಎಂದು ಈಗ ಗೊತ್ತಾಯ್ತು...

ಕಲ್ಪನೆ ತುಂಬಾ ಚೆನ್ನಾಗಿದೆ
ಅಂಡ್ ಆಫ್ ಕೋರ್ಸ್ ಹ್ಯಾಪಿ ಬರ್ತ್ಡೇ ಟು ಛಾಯಾಕನ್ನಡಿ .. :)

Gubbachchi Sathish said...

ಅದಕ್ಕೆ ಹೇಳುವುದು ಹತ್ತಿದ ಏಣಿ ಒದೆಯಬಾರದು ಅಂತಾ. ಕಡೆಗೂ ನೀವು ಮರೆತಿಲ್ಲ. ನಿಮಗೆ ಒಳ್ಳೆಯದಾಗಲಿ.

Guruprasad said...

ತುಂಬಾ ಚೆನ್ನಾಗಿ ಇದೆ,,, ಛಾಯಾ ಕನ್ನಡಿಗೆ ಹುಟ್ಟಿದ ಹಬ್ಬದ ಶುಭಾಶಯಗಳು ..... ಈ ಪರದೆ ಹೇಗೆ,,, ತುಂಬಾ ಒಳ್ಳೆ ಯಾ ವಿಭಿನ್ನ ವಾದ ಬರಹಗಳನ್ನು ಕೊಟ್ಟು ನಮ್ಮನ್ನು ರಂಜಿಸುತ್ತಿರಲಿ..... :-)

Guru

ವನಿತಾ / Vanitha said...

ಶುಭಾಶಯಗಳು:)

Dr.D.T.Krishna Murthy. said...

NICE SHIVU.HEARTY CONGRATS.

umesh desai said...

ಶಿವು ಇಂದು ಎರಡನೇ ಚೆನ್ನಾದ ಬ್ಲಾಗ್ ಓದಿದೆ ಇನ್ನೊಂದು ಸುಶ್ರುತಂದು
ಅಭಿನಂದನೆಗಳು ಹಿಗೆಯೇ ನಿಮ್ಮ ಛಾಯಾಕನ್ನಡಿ ಬೆಳೆಯಲಿ,ಹೊಳೆಯಲಿ...

ನನ್ನ ಮನದ ಭಾವಕೆ ಕನ್ನಡಿ ಹಿಡಿದಾಗ said...

channagidae sir ....congrats and all the best

ಸಾಗರದಾಚೆಯ ಇಂಚರ said...

ಶಿವೂ ಸರ್

ನಿಮ್ಮ ಬ್ಲಾಗ್ ಇನ್ನೂ ಹೆಚ್ಚೆಚ್ಚು ಹೊಸ ಹೊಸ ಸುದ್ದಿ ನೀಡಲಿ

ನಿಮ್ಮ ಸಾಧನೆಗೆ ಅಭಿನಂದನೆಗಳು

ಸುಂದರ ಬರಹ

balasubramanya said...

ಪ್ರೀತಿಯ ಶಿವೂ ಅಕ್ಕರೆ ಇಂದ ಹುತ್ತ್ತುಹಾಕಿದ ಛಾಯ ಕನ್ನಡಿಗೆ ಎರಡುವರ್ಷ . ಈ "ನೆರಳಿನ ದರ್ಪಣ '" ಎಲ್ಲರ ಮೆಚ್ಚಿನ ಬ್ಲಾಗು ಬಹುಷಃ ಹಲವಾರು ಬ್ಲಾಗಿಗರಿಗೆ ವಿವಿಧ ಬಗೆಯ ಮಾಹಿತಿಗಳ ರಸದೌತಣ ನೀಡಿದ ಈ ಬ್ಲಾಗಿನ ಒಡೆಯ ಶಿವೂ ಇಂದು ಬ್ಲಾಗಿಗರ ಮನದ ನೆಚ್ಚಿನ ಗೆಳೆಯ . ನಿಮ್ಮ ಈ ಬ್ಲಾಗಿನ ಜ್ಯೋತಿ ನಿರಂತರ ಉಳಿದು ನಿಮ್ಮ ಕೀರ್ತಿ ಪತಾಕೆ ಹಾರಿಸಲಿ.ಹಾಗೆ ನಿಮ್ಮ ಬ್ಲಾಗಿಗೆ ನನ್ನ ಹೃದಯ ಪೂರ್ವಕ ಶುಭಾಶಯಗಳು.

sunaath said...

ಶುಭಾಶಯಗಳು,ಶಿವು. ನಿಮ್ಮ ಮಾಯಾಪರದೆ ನಮ್ಮನ್ನು ಯಾವಾಗಲೂ ರಂಜಿಸುತ್ತಿರಲಿ.

Ittigecement said...

ಶಿವು ಸರ್...

"ಛಾಯಾಕನ್ನಡಿ" ಇನ್ನಷ್ಟು ಬೆಳಗಲಿ...
ಬ್ಲಾಗಿಗರಿಗೆಲ್ಲ ಸ್ಪೂರ್ತಿ ಕೊಡಲಿ...

ನೀವು ಕಥೆ ಬರೆದ ಶೈಲಿ ತುಂಬಾ ಚೆನ್ನಾಗಿದೆ...

ಇನ್ನಷ್ಟು ಕಥೆಗಳು ಬರಲಿ...

Nisha said...

ಛಾಯಾ ಕನ್ನಡಿಗೆ ಹುಟ್ಟಿದ ಹಬ್ಬದ ಶುಭಾಶಯಗಳು

ಶಿವಪ್ರಕಾಶ್ said...

Happy Birthday to Chaayakannadi :)

Manju M Doddamani said...

ಶುಭವಾಗಲಿ ;) ಛಾಯ ಕನ್ನಡಿಯಲ್ಲಿ ಇನ್ನಷ್ಟು ಲೇಖನಗಳು ಮೂಡಿ ಬರಲಿ

Anonymous said...

ಶಿವು,
ಒಂದಿಷ್ಟು, ಅಕ್ಷರ-ಕಾಗುಣಿತಗಳ ಕಡೆಗೆ ಗಮನ ಹರಿಸಿದರೆ ಇನ್ನೂ ಚೆನ್ನಾಗಿರುತ್ತದೆ. ಆಗ ನಿಮ್ಮ ಛಾಯಾಚಿತ್ರಗಳಂತೇ ಬರಹಗಳೂ ಅತ್ಯಾಕರ್ಷಕವಾಗುತ್ತವೆ! ಪ್ರಯತ್ನಿಸಿ. ಕಾಗುಣಿತ ಗೊಂದಲವಾದರೆ ಬರಹ ನಿಘಂಟು ಬಳಸಬಹುದು. ಮುಖ ಸ್ತುತಿಗಿಂತ ವಾಸ್ತವವೇ ಉತ್ತಮವಲ್ಲವೇ?
- ಪೂರ್ಣಿಮಾ

Prashanth Arasikere said...

hi,
shivu

Nimma blog 3 varshada huttu habba ke shubashaya hage adannu marethu kathe rupdalli tumba chennagi nenpuskondidra...all the best.

ಗಣೇಶ್ ಕಾಳೀಸರ said...

ಛಾಯಾ ಕನ್ನಡಿಗೆ ಹುಟ್ಟು ಹಬ್ಬದ ಶುಭಾಶಯಗಳು...
ಹೀಗೇ ಉತ್ತಮ ಬರಹ ಹಾಗೂ ಛಾಯಾಚಿತ್ರಗಳ ನಿರೀಕ್ಷೆಯಲ್ಲಿ..
-ಗಣೇಶ್ ಕಾಳೀಸರ

Ashok.V.Shetty, Kodlady said...

Shivu sir,

nammellara 'chaya kannadi' ge huttuhabbada haardhika subhashayagalu.....kathe chennagide...heege innu hecchu hechhu vishyagalu nimma ee blog nalli kaanisikollali....

ದಿನಕರ ಮೊಗೇರ said...

ಶಿವು ಸರ್,
ಕಥೆ ಸುಪ್ಪರ್..... ಅದರಲ್ಲಿ ಇರುವ ಅರ್ಥವೂ ಚೆನ್ನಾಗಿದೆ..... ನಿಮ್ಮ ಬ್ಲೊಗ್ ಹುಟ್ಟುಹಬ್ಬಕ್ಕೆ ಶುಭಾಶಯ...... ನಮ್ಮ ನಿಮ್ಮ ಬ್ಲೊಗ್ಭಂಧ ಹೀಗೆ ಇರಲಿ..... ಇನ್ನೂ ಹೆಚ್ಚಿನ ಕಥೆ, ಕವನ, ಪುಸ್ತಕಗಳು ನಿಮ್ಮಿಂದ ಬರಲಿ...

Laxman (ಲಕ್ಷ್ಮಣ ಬಿರಾದಾರ) said...

ಅಭಿನಂದನೆಗಳು

ಮನಸಿನಮನೆಯವನು said...

ಓದುತ್ತಿದ್ದಂತೆ ಹೀಗೆಯೇ ಕೊನೆ ಮಾಡುತ್ತೀರಿ.. ಎಂದು ಊಹಿಸಿದ್ದೆ..
ನಿಮ್ಮ ಪಯಣ ಮುಂದುವರೆಯಲಿ..ಶುಭಾಶಯಗಳು..

Snow White said...

congratulations sir :)

AntharangadaMaathugalu said...

ಶಿವು ಸಾರ್...
ಓದಲು ಶುರು ಮಾಡಿದೊಡನೇ ಅದೇಕೋ ಒಳಗುಟ್ಟು ಗೊತ್ತಾಗಿ ಬಿಟ್ಟಿತ್ತು.... :-) ಅಭಿನಂದನೆಗಳು ನಿಮಗೂ ಹಾಗೂ ನಿಮ್ಮ "ಛಾಯಾ ಕನ್ನಡಿ"ಗೂ.......

ಶ್ಯಾಮಲ

Subrahmanya said...

ಶುಭಾಶಯಗಳು ಸರ್. ’ಕನ್ನಡಿ’ ಹೊಳೆಯುತ್ತಲೇ ಇರಲಿ.

shivu.k said...

ಶ್ವೇತ ಮೇಡಮ್,

ನನ್ನ ಛಾಯಾಕನ್ನಡಿ ಬ್ಲಾಗನ್ನು ಇಷ್ಟಪಡುತ್ತೀರಿ. ನಿಮ್ಮ ಹಾರೈಕೆಗೆ ಧನ್ಯವಾದಗಳು.

shivu.k said...

chaithrika,

ಕತೆಯನ್ನು ಇಷ್ಟಪಟ್ಟು ಛಾಯಕನ್ನಡಿಗೆ ಹಾರೈಸಿದ್ದೀರಿ. ಅದಕ್ಕಾಗಿ ಧನ್ಯವಾದಗಳು.

shivu.k said...

ಸೀತಾರಾಂ ಸರ್,

ಥ್ಯಾಂಕ್ಸ್..

shivu.k said...

ಸಲೀಂ,
ಛಾಯಾಕನ್ನಡಿಯನ್ನು ಇಷ್ಟಪಟ್ಟು ಓದುವುದರಲ್ಲಿ ನೀವು ಒಬ್ಬರು. ನಿಮ್ಮ ಅಭಿನಂದನೆಗೆ ಧನ್ಯವಾದಗಳು.

shivu.k said...

ಶ್ರೀಧರ್ ಸರ್,

ಕತೆಯನ್ನು ವಿಭಿನ್ನವೆಂದು ಇಷ್ಟಪಟ್ಟಿದ್ದೀರಿ. ಅದಕ್ಕಾಗಿ ಮತ್ತು ಶುಭಾಶಯಕ್ಕೆ ಧನ್ಯವಾದಗಳು

shivu.k said...

ನವೀನ್,

ಪರದೆ ಎನ್ನುವ ಪದವನ್ನು ಹೊಸದಾಗಿ ಏನು ಹೊಳೆಯದಿದ್ದಿದ್ದಕ್ಕಾಗಿ ಬಳಸಿದೆ. ನಿಮ್ಮ ಹಾರೈಕೆ ಧನ್ಯವಾದಗಳು.

shivu.k said...

ಚಂದ್ರು ಸರ್,

ಕತೆ ನಿಮ್ಮ ಮನಸ್ಸಿನಲ್ಲಿ ಕುತೂಹಲ ಕೆರಳಿಸಿದ್ದರೆ ನನ್ನ ಬರಹ ಸಾರ್ಥಕ. ನಿಮ್ಮ ಪ್ರೋತ್ಸಾಹವೇ ನನಗೆ ಹೊಸತನ್ನು ಹುಡುಕಿಕೊಂಡು ಹೋಗುವಂತೆ ಮಾಡುತ್ತದೆ. ನಿಮ್ಮ ಹಾರೈಕೆಗೆ ಧನ್ಯವಾದಗಳು.

shivu.k said...

ಕನಸು,

ಛಾಯಾಚಿತ್ರಗಳು ನನ್ನ ಕಣ್ಣುಗಳು. ಹಾಗೆ ಕಾಣಿಸಿದ ವಿಚಾರಗಳನ್ನು ಮನಸ್ಸಿನಲ್ಲಿ ಆನಂದಿಸುತ್ತೇನೆ. ಹಾಗೆ ಅದನ್ನು ಬರಹದ ರೂಪದಲ್ಲಿ ಕೊಡಲು ಪ್ರಯತ್ನಿಸುತ್ತೇನೆ. ನೀವು ಬರಹವನ್ನು ಮೆಚ್ಚಿದ್ದಕ್ಕೆ ಥ್ಯಾಂಕ್ಸ್..ಹೀಗೆ ಬರುತ್ತಿರಿ.

shivu.k said...

ಗುಬ್ಬಚ್ಚಿ ಸತೀಶ್,

ನಿಮ್ಮ ಮಾತು ಸತ್ಯ. ನಾನು ಕೆಲಸಗಳ ಮತ್ತು ಇತರ ಸಂಭ್ರಮಗಳ ನಡುವೆ ಛಾಯಾಕನ್ನಡಿಯನ್ನು ಮರೆತಿದ್ದೆ. ಅದಕ್ಕಾಗಿ ಈ ಕತಾಲೇಖನ. ನಿಮ್ಮ ಹಾರೈಕೆಗೆ ಥ್ಯಾಂಕ್ಸ್..

shivu.k said...

ಗುರು ಥ್ಯಾಂಕ್ಸ್.

ಛಾಯಾಕನ್ನಡಿ ನನಗೆ ಪರದೆಯಂತೆ ಕಲ್ಪಿಸಿಕೊಂಡಿದ್ದನ್ನು ನೀವು ಇಷ್ಟಪಟ್ಟಿದ್ದಕ್ಕೆ ಮತ್ತು ಛಾಯಾಕನ್ನಡಿಗೆ ವಿಶ್ ಮಾಡಿದ್ದಕ್ಕೆ.

shivu.k said...

ವನಿತಾ,

ಥ್ಯಾಂಕ್ಸ್..

shivu.k said...

ಡಾ.ಕೃಷ್ಣ ಮೂರ್ತಿ ಸರ್,

ಥ್ಯಾಂಕ್ಸ್.

shivu.k said...

ಉಮೇಶ್ ದೇಸಾಯ್ ಸರ್,

ನಿಮ್ಮ ಇಷ್ಟದ ಬ್ಲಾಗುಗಳಲ್ಲಿ ನನ್ನ ಛಾಯಾಕನ್ನಡಿಯೂ ಒಂದು ಅಂತ ತಿಳಿದು ಖುಷಿಯಾಯ್ತು..ನಿಮ್ಮ ಶುಭಾಶಯಕ್ಕೆ ಧನ್ಯವಾದಗಳು.

shivu.k said...

ಶ್ರೀಕಾಂತ್ ಸಿ.ಬಿ.

ನನ್ನ ಬ್ಲಾಗಿಗೆ ಸ್ವಾಗತ. ನಿಮ್ಮ ಹಾರೈಕೆಗೆ ಥ್ಯಾಂಕ್ಸ್.

shivu.k said...

ಗುರುಮೂರ್ತಿ ಹೆಗೆಡೆ ಸರ್,

ದೂರದಿಂದಲೇ ನನ್ನ ಬ್ಲಾಗನ್ನು ಹೆಚ್ಚು ನೋಡುವುದರಲ್ಲಿ ನೀವು ಒಬ್ಬರು. ನಿಮ್ಮ ಹಾರೈಕೆ ಪ್ರೋತ್ಸಾಹ ಹೀಗೆ ಇರಲಿ.

ಧನ್ಯವಾದಗಳು.

shivu.k said...

ನಿಮ್ಮೊಳಗೊಬ್ಬ ಬಾಲು ಸರ್,

ನೀವು ಹೇಳಿದ "ನೆರಳಿನ ದರ್ಪಣ" ಹೆಸರು ಚೆನ್ನಾಗಿದೆ. ನಾನು ನನ್ನ ಸಂಭ್ರಮದ ನಡುವೆ ಈ ಮಟ್ಟಕ್ಕೆ ನನ್ನನ್ನು ಎಳೆತಂದ ಬ್ಲಾಗನ್ನು ಮರೆತಿದ್ದರಿಂದ ಪ್ರಾಯಶ್ಚಿತ್ತವಾಗಿ ಈ ಕತೆಯನ್ನು ಬರೆಯಬೇಕಾಯಿತು. ಅದನ್ನು ಮೆಚ್ಚಿ ಛಾಯಾಕನ್ನಡಿಗೆ ಹಾರೈಸಿದ್ದೀರಿ. ಅದಕ್ಕಾಗಿ ಧನ್ಯವಾದಗಳು.

shivu.k said...

ಸುನಾಥ್ ಸರ್,

ನನ್ನ ಮಾಯಾಪರದೆಯ ಮೇಲೆ ನಿಮ್ಮ ಪ್ರೀತಿ ಹೀಗೆ ಇರಲಿ.

shivu.k said...

ಪ್ರಕಾಶ್ ಹೆಗಡೆ ಸರ್,

ಕತೆಯನ್ನು ಇಷ್ಟಪಟ್ಟಿದ್ದಕ್ಕೆ ಥ್ಯಾಂಕ್ಸ್. ಅದನ್ನು ಆತುರದಲ್ಲಿ ಬರೆದಿದ್ದೆ.
ಛಾಯಾಕನ್ನಡಿಗೆ ನಿಮ್ಮ ಹಾರೈಕೆ ಹೀಗೆ ಇರಲಿ.

shivu.k said...

ನಿಷಾ,

ಥ್ಯಾಂಕ್ಸ್. ಹೀಗೆ ಬರುತ್ತಿರಿ.

shivu.k said...

ಶಿವಪ್ರಕಾಶ್,

ಥ್ಯಾಂಕ್ಸ್.

shivu.k said...

ದೊಡ್ಡಮನಿ ಮಂಜು,

ಛಾಯಾಕನ್ನಡಿಗೆ ನಿಮ್ಮ ಹಾರೈಕೆ ಹೀಗೆ ಇರಲಿ..ಧನ್ಯವಾದಗಳು.

shivu.k said...

ಪೂರ್ಣಿಮ ಹೆಸರಿನಲ್ಲಿ ಅನಾನಿಮಿಯಸ್ ಆಗಿ ಕಳಿಸಿರುವವರಿಗೆ,

ನಿಮ್ಮ ಅಭಿಪ್ರಾಯಗಳನ್ನು ಖಂಡಿತ ಸ್ವೀಕರಿಸುತ್ತೇನೆ. ಆತುರದಲ್ಲಿ ಬರೆದ ಕತೆ ಇದು ಅದಕ್ಕೆ ಹೀಗೆ ಆಗಿದೆ. ಮತ್ತೆ ಇದು ಮುಖಸ್ತುತಿಯಂತೂ ಅಲ್ಲ ಸತ್ಯವನ್ನು ಬರೆದಿದ್ದೇನೆ. ಅದು ನಿಮಗೆ ಅಜೀರ್ಣವಾಗಿಬಹುದು ಅಂತ ನನ್ನ ಅನಿಸಿಕೆ. ಮತ್ತೆ ನನ್ನ ಗೆಳೆಯರು ಅನಾನಿಮಿಯಸ್‍ಗೆ ಪ್ರತಿಕ್ರಿಯೆಗಳಿಗೆ ಉತ್ತರಿಸಬೇಡಿ ಎಂದು ಹೇಳಿದರೂ ನಾನು ಉತ್ತರಿಸುತ್ತಿದ್ದೇನೆ. ನೀವು ಒಳ್ಳೆಯದನ್ನು ಅಧಿಕೃತವಾಗಿ ಹೇಳಲು ಭಯವೇಕೆ? ಮತ್ತೆ ಹೀಗೆ ಮರೆಯಲ್ಲಿ ನಿಂತು ಹೇಳುವುದೇಕೆ? ಮುಂದೆ ಹೀಗೆ ಹಿಂಬದಿಯಲ್ಲಿ ನಿಲ್ಲುವ ಬದಲು ನೇರಬಂದರೆ ನಮಗೂ ಖುಶಿ.ಏನೇಳ್ತೀರಿ?

shivu.k said...

ಪ್ರಶಾಂತ್ ಅರಸೀಕೆರೆ,

ಕತೆಯ ರೂಪದಲ್ಲಿ ಛಾಯಾಕನ್ನಡಿಗೆ ಮೂರು ವರ್ಷ ತುಂಬಿದ್ದನ್ನು ಹೇಳಿದ್ದನ್ನು ನೀವು ಮೆಚ್ಚಿದ್ದಕ್ಕೆ ಥ್ಯಾಂಕ್ಸ್. ಹೀಗೆ ಬರುತ್ತಿರಿ.

shivu.k said...

ಗಣೇಶ್ ಕಾಳಿಸರ್,

ನಿಮ್ಮ ಶುಭಾಶಯಗಳಿಗೆ ಥ್ಯಾಂಕ್ಸ್..ಹೀಗೆ ಬರುತ್ತಿರಿ.

shivu.k said...

ಆಶೋಕ್ ಒಡಲಾಡಿ ಸರ್,

ನೀವು ಛಾಯಾಕನ್ನಡಿಯನ್ನು "ನಮ್ಮೆಲ್ಲರ ಛಾಯಾಕನ್ನಡಿ" ಎಂದಿರುವುದು ನನಗೆ ಖುಷಿ. ಕತೆಯನ್ನು ಮೆಚ್ಚಿ ಹಾರೈಸುತ್ತಿರುವ ನಿಮಗೆ ನನ್ನ ಧನ್ಯವಾದಗಳು.

shivu.k said...

ದಿನಕರ್ ಸರ್,

ಕತೆ, ಬ್ಲಾಗ್ ಎಲ್ಲವನ್ನು ಸೂಪರ್ ಎಂದು ಹಾರೈಸುತ್ತಿರುವ ನಿಮಗೆ ಧನ್ಯವಾದಗಳು. ಹೀಗೆ ನಿಮ್ಮ ಪ್ರೋತ್ಸಾಹವನ್ನು ನಿರೀಕ್ಷಿಸುತ್ತೇನೆ.
ಧನ್ಯವಾದಗಳು.

shivu.k said...

ಲಕ್ಷಣ ಬಿರದಾರ ಸರ್,

ಥ್ಯಾಂಕ್ಸ್.

shivu.k said...

ಕತ್ತಲೆ ಮನೆ,

ನೀವೊಬ್ಬರು ಕತೆಯನ್ನು ಅಂತ್ಯವನ್ನು ಓದುವಾಗಲೇ ತಿಳಿದುಕೊಂಡಿದ್ದು ಸೂಪರ್..ನಿಮ್ಮ ಹಾರೈಕೆ ಹೀಗೆ ಇರಲಿ.

shivu.k said...

snow white,

ಥ್ಯಾಂಕ್ಸ್.

shivu.k said...

ಶ್ಯಾಮಲಾ ಮೇಡಮ್,

ನಿಮಗೂ ಕತೆಯ ಒಳಗುಟ್ಟು ಗೊತ್ತಾಗಿಬಿಟ್ಟಿತಾ! ಛಾಯಾಕನ್ನಡಿಗೆ ನಿತ್ಯ ಬರುವವರಲ್ಲಿ ನೀವು ಒಬ್ಬರು. ನಿಮ್ಮ ಶುಭಾಶಯಗಳಿಗೆ ಧನ್ಯವಾದಗಳು.

shivu.k said...

ಶುಬ್ರಮಣ್ಯ ಸರ್,

ಛಾಯಾಕನ್ನಡಿಯನ್ನು ಪ್ರಕಾಶಿಸುವಂತೆ ಮಾಡುವುದಕ್ಕೆ ನಿಮ್ಮ ಪ್ರೋತ್ಸಾಹ ಹೀಗೆ ಇರಲಿ..

ಧನ್ಯವಾದಗಳು.