Monday, August 30, 2010

"ಈ ಬಾಟಲಿಸ್ಟ್ ಯಾರು?"

ಇದೊಂದು ವಿಶೇಷ ಸೂಚನೆ:
ಗೆಳೆಯರೆ,

ನಮ್ಮ ತುಂತುರು ಪ್ರಕಾಶನದ ಪುಸ್ತಕಗಳಾದ ಜಲನಯನ, ಗುಬ್ಬಿ ಎಂಜಲು ಮತ್ತು ವೆಂಡರ್ ಕಣ್ಣು ಪುಸ್ತಕಗಳು. ಕರ್ನಾಟಕದಾದ್ಯಂತ ನವಕರ್ನಾಟಕ ಪುಸ್ತಕ ಮಳಿಗೆಗಳು, ಬೆಂಗಳೂರಿನ ಸ್ವಪ್ನ ಬುಕ್ ಹೌಸ್, ಗಾಂಧಿಬಜಾರಿನ ರಸ್ತೆಯಲ್ಲಿರುವ ಅಂಕಿತ ಪುಸ್ತಕ ಮಳಿಗೆ, ಜಯನಗರದ ಕೂಲ್ ಜಾಯಿಂಟ್ ಎದುರು ರಸ್ತೆಯಲ್ಲಿರುವ "ಟೋಟಲ್ ಕನ್ನಡ ಡಾಟ್ ಕಾಂ" ಅಂಗಡಿಯಲ್ಲಿ ದೊರೆಯುತ್ತದೆ.

ಪ್ರೀತಿಯಿಂದ...
ಶಿವು.ಕೆ

ತುಂತುರು ಪ್ರಕಾಶನ
-------------------------------------------------------------------------------------------------


 "ನಿಮ್ಮಲ್ಲಿ ಯಾರಾದರೂ ಬಾಟನಿಸ್ಟ್ ಇದ್ದಾರ?"  ಈಶ್ವರ ಪ್ರಸಾದ್ ಕೇಳಿದರು.
 
 "ಇಲ್ಲಸಾರ್ ಬೇಕಾದರೆ ಬಾಟಲಿಸ್ಟ್ ಸಿಗುತ್ತಾರೆ." ತಕ್ಷಣ ಪ್ರಕಾಶ್ ಹೆಗಡೆ ಉತ್ತರಿಸಿದರು.

"ಈ ಬಾಟಲಿಷ್ಟ್ ಯಾರು?"   ಈ ಪ್ರಶ್ನೆಯನ್ನು ಕೇಳಿದ್ದು ಈಶ್ವರ ಪ್ರಸಾದ್.

 "ಅದೇ ಸರ್, ಬಾಟಲಿಸ್ಟು," ಕೈಬಾಯಿ ಸನ್ನೆ ಮಾಡಿ ತೋರಿಸಿದರು.

 ಈಶ್ವರ ಪ್ರಸಾದ್ ಸೇರ್‍ಇದಂತೆ ನಮ್ಮ ಬ್ಲಾಗಿಗರೆಲ್ಲಾ ಎಷ್ಟು ಜೋರಾಗಿ ನಕ್ಕೆವೆಂದರೆ  ಹೊಟ್ಟೆ ಹಿಡಿದುಕೊಂಡು ಕೂರುವಷ್ಟು.


                                 -------------------------------

 "ಶಿವು ನಿಮ್ಮ ವಯಸ್ಸೆಷ್ಟು?"  ಈಶ್ವರ ಪ್ರಸಾದ್ ನಮ್ಮ ಜೊತೆ ಊಟ ಮಾಡುತ್ತಾ ನನ್ನನ್ನು ಕೇಳಿದರು.

 ನಾನು ನನ್ನ ವಯಸ್ಸು ಹೇಳಿದೆ.  ಮತ್ತೆ ಹಾಗೆ ಸುತ್ತ ಕುಳಿತಿದ್ದ ಪರಂಜಪೆ, ಉಮೇಶ್ ದೇಸಾಯಿ, ನಂಜುಂಡ,....ಹೀಗೆ ಒಬ್ಬೊಬ್ಬರಾಗಿ ಹೇಳುತ್ತಿದ್ದರು.  ಪ್ರಕಾಶ್ ಹೆಗಡೆ ಸರದಿ ಬಂತು.

 "ಪ್ರಕಾಶ್ ನಿಮ್ಮ ವಯಸ್ಸು ಎಷ್ಟು?"  ಮತ್ತೆ ಕೇಳಿದರು ಈಶ್ವರ ಪ್ರಸಾದ್,

 "ನೀವೇ ಹೇಳಿ ಸರ್,"

 "ನಾನು ಮರಗಳ ವಯಸ್ಸನ್ನು ಹೇಳಬಲ್ಲೆ. ಆದ್ರೆ ನಿಮ್ಮ ವಯಸ್ಸನ್ನು ಹೇಗೆ ಹೇಳುವುದು?"

 "ಹಾಗಾದ್ರೆ ಸರ್, ಮರಗಳ ವಯಸ್ಸನ್ನು ಹೇಗೆ ಗುರುತಿಸುವಿರಿ?

 "ಮರಗಳಿಗೆ ಬಂದಿರುವ ಹೊರಪದರಗಳ ಲೇಯರುಗಳಿಂದ."

 "ಹಾಗಾದರೆ ನನ್ನ ಲೇಯರಿನ ಟಯರನ್ನು[ಸೊಂಟದ ಸುತ್ತಳತೆ] ನೋಡಿ ನೀವು ಸುಲಭವಾಗಿ ನನ್ನ ವಯಸ್ಸು ಹೇಳಬಹುದು!"  
 ಊಟ ಮಾಡುತ್ತಿದ್ದವರೆಲ್ಲಾ ಈ ಮಾತು ಕೇಳಿ ನಗು ತಡೆಯಲಾಗಲಿಲ್ಲ.

                                        --------------------------------


ಇವೆರಡು ದಿನಾಂಕ ೨೯-೮-೨೦೧೦ರ ಭಾನುವಾರ ನಾವು ಬ್ಲಾಗಿಗರೆಲ್ಲಾ ತಿಪ್ಪಗೊಂಡನಹಳ್ಳಿ ಜಲಾಶಯದ ಬಳಿ ಇರುವ ಸಸ್ಯವನಕ್ಕೆ ಗಿಡನೆಡಲು ಹೋಗಿದ್ದಾಗ ಉಕ್ಕಿದ ನೂರಾರು ನಗೆಬುಗ್ಗೆಗಳಲ್ಲಿ ಇವೆರಡು ಸ್ಯಾಂಪಲ್.

 ಅವತ್ತು ಬೆಳಿಗ್ಗೆ ೨೮ ಬ್ಲಾಗಿಗರು ಬಸ್ಸಿನಲ್ಲಿ ಹೊರಟಾಗ ಬೆಳಿಗ್ಗೆ ಒಂಬತ್ತುಗಂಟೆ. ದಾರಿಯುದ್ದಕ್ಕೂ ಅಂತ್ಯಾಕ್ಷರಿ, ನಗು ಜೋಕು ಅನ್ನುವಷ್ಟರಲ್ಲಿ ತಿಪ್ಪಗೊಂಡನಹಳ್ಳಿ ಜಲಾಶಯ ಬಂದುಬಿಟ್ಟಿತ್ತು.  ಎಲ್ಲರು ಇಳಿದು ಈಶ್ವರ ಪ್ರಸಾದ್ ಹಿಂದೆ ನಡೆದೆವು. ಸ್ವಲ್ಪ ದೂರನಡೆಯುವಷ್ಟರಲ್ಲಿ ಒಂದು ಪುಟ್ಟ ಚಪ್ಪರವನ್ನು ಹಾಕಿದ ಜಾಗದ ಮುಂದೆ ನಿಂತರು. ನಮ್ಮ ಅದೃಷ್ಟಕ್ಕೆ ಮೋಡದ ವಾತಾವರಣವಿದ್ದು ಒಂಥರ ತಣ್ಣನೇ ಗಾಳಿ ಬೀಸುತ್ತಿದ್ದರಿಂದ ಎಲ್ಲರಿಗೂ ಒಂಥರ ಹಿತವೆನಿಸುತ್ತಿತ್ತು.  ಮೊದಲು ಎಲ್ಲರ ಪರಿಚಯವಾಯ್ತು. ಈಶ್ವರ ಪ್ರಸಾದ್ ಕೂಡ ತಮ್ಮ ಪರಿಚಯವನ್ನು ಮಾಡಿಕೊಂಡರು.

 ನಂತರ ಸ್ಥಳ ಮಹಾತ್ಮೆಯ ಬಗ್ಗೆ ತಿಳಿಸಲು ನವೀನ್[ಹಳ್ಳಿಹುಡುಗ]ಗೆ ಓದಲು ತೇಜಸ್ವಿಯವರು ಅನುವಾದ ಮಾಡಿದ ಕೆನೆತ್ ಆಂಡರ್ಸನ್‍ರವರ ಕಾಡಿನ ಕಥೆಗಳು ಮೂರನೇ ಭಾಗವಾದ "ಮುನಿಸ್ವಾಮಿ ಮತ್ತು ಚಿರತೆ" ಪುಸ್ತಕವನ್ನು ಕೊಟ್ಟರು. 
 
 ಮೊದಲಿಗೆ ಪರಸ್ಪರ ಪರಿಚಯ ಕಾರ್ಯಕ್ರಮ

ಅದರಲ್ಲಿ ನಾವು ನಿಂತ ಜಾಗ[ತಿಪ್ಪಗೊಂಡನಹಳ್ಳಿ ವಿಶೇಷತೆ], ಪರಿಚಯ, ವಾತವರಣದಲ್ಲಿನ ನೀರಿನ ಮಟ್ಟ, ಇತ್ಯಾದಿ ವಿಚಾರವನ್ನು ಅವರು ಎಲ್ಲರಿಗೂ ಅರ್ಥವಾಗುವಂತೆ ಹೇಳಿದ ರೀತಿ ತುಂಬಾ ಚೆನ್ನಾಗಿತ್ತು.  ನಡುವೆ ನಾವು ಬೆಂಗಳೂರಿನಲ್ಲಿ ಬಳಸುವ ನೀರು ಮತ್ತು ವಿಧ್ಯುತ್ತನ್ನು ಹೇಗೆ ನಮಗೆ ಗೊತ್ತಿಲ್ಲದಂತೆ ಪೋಲು ಮಾಡುತ್ತಿದ್ದೇವೆ ಸ್ವಲ್ಪ ಅಲೋಚನೆ ಮತ್ತು ಬುದ್ದಿವಂತಿಕೆಯನ್ನು ಉಪಯೋಗಿಸಿದರೇ ಎಷ್ಟು ವಿಧ್ಯುತ್ ಮತ್ತು ನೀರು ಉಳಿಸಬಹುದು ಎನ್ನುವುದನ್ನು ತಿಳಿಸಿಕೊಟ್ಟರು.  ನಾವು ಮನೆಯಲ್ಲಿ ತರಕಾರಿ ತೊಳೆದ ನೀರು, ಪಾತ್ರೆ ತೊಳೆದ ನೀರು, ಊಟವಾದ ಮೇಲೆ ಎಂಜಲನೀರು, ಇದನ್ನೆಲ್ಲಾ ಒಟ್ಟು ಮಾಡಿ ಇಟ್ಟರೆ ಮುಸುರೆ ನೀರು ಅನ್ನುತ್ತಾರೆ. ಅದೇ ನೀರನ್ನು ನಾವು ಒಂದು ಬಕೆಟಿನಲ್ಲಿ ಸಂಗ್ರಹಿಸಿ ನಮ್ಮ ಮನೆಗಳ ವರಾಂಡದಲ್ಲಿ, ಬಾಲ್ಕನಿಗಳಲ್ಲಿ ಎಲ್ಲವಿಧವಾದ ತರಕಾರಿ ಗಿಡಗಳನ್ನು ಬೆಳೆಸುತ್ತಾ ಇದೇ ನೀರನ್ನು ಅದಕ್ಕೆ ಉಣಿಸಿದರೆ, ಇಂಥ ನೀರನ್ನು ಎಷ್ಟು ಸಮಂಜಸವಾಗಿ ಬಳಸಬಹುದು ಮತ್ತು ಅದಕ್ಕೆ ತಕ್ಕಂತೆ ನಾವು ಹಾಕಿದ ತರಕಾರಿಗಳು ಎಷ್ಟು ಚೆನ್ನಾಗಿ ಯಾವುದೇ ರಸಾಯನಿಕ ಗೊಬ್ಬರಗಳಿಲ್ಲದೆಯೂ ಎಂಥ ಸಮೃದ್ದ ಫಲ ಕೊಡುತ್ತವೆ ಎನ್ನುವುದನ್ನು ತಮ್ಮ ಮನೆಯಲ್ಲಿ ಬೆಳೆದ ತರಕಾರಿಗಳನ್ನು ಉದಾಹರಿಸುತ್ತಾ ಹೇಳಿದಾಗ ನಾವು ಇದನ್ನು ಮಾಡಲು ಸಾಧ್ಯವಿದೆಯಲ್ಲಾ ಎನಿಸಿತ್ತು.  ಅವರ ಮಾತಿನ ನಡುವೆಯೇ ಅಲ್ಲಿಯೇ ನಮ್ಮಂತೆ ಬೆಳಸಿದ ಮರಗಳಲ್ಲಿ ಬಿಟ್ಟ ಸೀತಾಫಲ ಹಣ್ಣುಗಳನ್ನು ನಮಗೆ ತಿನ್ನಲು ಕೊಟ್ಟರು.  ಯಾವುದೇ ರಸಾಯನಿಕಗಳಿಲ್ಲದೇ ಬೆಳೆದ ಸೀತಾಫಲಹಣ್ಣುಗಳನ್ನಂತೂ ನಮ್ಮ ಬ್ಲಾಗಿಗರೂ ಮಕ್ಕಳಂತೆ ಸಂಭ್ರಮದಿಂದ ತಿನ್ನುತ್ತಾ ತಮ್ಮ ಹಳೆಯ ನೆನಪುಗಳನ್ನು ಮೆಲುಕು ಹಾಕಿಕೊಳ್ಳುತ್ತಿದ್ದರು.


 ಸ್ಥಳ ಪರಿಚಯ, ನೀರು, ವಿಧ್ಯುತ್ ಉಳಿಕೆ, ನೆಲದಲ್ಲಿ ನೀರನ್ನು ಹಿಂಗಿಸುವುದು ಹೇಗೆ ಎನ್ನುವುದನ್ನು  ನಮಗೆಲ್ಲಾ ವಿವರಿಸುತ್ತಿರುವ ಈಶ್ವರ ಪ್ರಸಾದ್


 ಈಶ್ವರ್ ಪ್ರಸಾದ್ ಪರಿಚಯವನ್ನು ನಾನು ಮಾಡಿಕೊಡಲೇ ಬೇಕು. ಚಿಕ್ಕಮಗಳೂರಿನಲ್ಲಿ ಕೆಲವರ್ಷ ನೆಲಸಿ, ಸಣ್ಣಮಟ್ಟದ ಫ್ಯಾಕ್ಟರಿ ತೆರೆದು, ಅದರಲ್ಲಿ ವಿಫಲರಾಗಿ ನಂತರ ತೇಜಸ್ವಿಯವರ ಜೊತೆ ಹದಿನೆಂಟು ವರ್ಷಗಳ ಒಡನಾಟದಿಂದ  ತಾವು ಕಲಿತ ಪರಿಸರ ಪಾಠ, ಅವರಿಂದ ಪ್ರತಿಯೊಂದು ವಿಚಾರಕ್ಕೂ ಬೈಸಿಕೊಳ್ಳುತ್ತಾ ಮುಂದುವರಿದಿದ್ದು,  ಅವರ ನಂತರ ನಾಗೇಶ್ ಹೆಗಡೆಯವರ ಒಡನಾಟ.  ಪ್ರೀತಿಯಿಂದ ನಾಗೇಶಣ್ಣ ಎನ್ನುವ ಇವರು ನಾಗೇಶ್ ಹೆಗಡೆ ಬರೆದ ಲೇಖನದ ವಿಚಾರಗಳನ್ನು ಕಾರ್ಯರೂಪಕ್ಕೆ ತರುವಲ್ಲಿ ಮುನ್ನುಗ್ಗುತ್ತಿದ್ದಾರೆ. ಕೆಲವು ವಿಚಾರಗಳಲ್ಲಿ ಯಶಸ್ವಿಯಾಗುತ್ತಿದ್ದಾರೆ.  ಅವರ ಮಾತುಗಳಲ್ಲಿನ ಆತ್ಮವಿಶ್ವಾಸವಂತೂ ನಮಗೆಲ್ಲಾ ಸ್ಪೂರ್ತಿಯೆನಿಸಿತ್ತು.  ಅವರು ಪರಿಸರದ ಬಗ್ಗೆ ತುಂಬಾ ತಿಳಿದುಕೊಂಡಿದ್ದಾರೆ. ಮಳೆಯ ನೀರು ಬಿದ್ದರೆ ಎಲ್ಲಿ ಹರಿದುಹೋಗುತ್ತದೆ, ಅದನ್ನು ಹೇಗೆ ತಡೆದು ನಿಲ್ಲಿಸಬಹುದು, ಹೇಗೆ ನೀರನ್ನು ಭೂಮಿಯೊಳಗೆ ಹಿಂಗಿಸಬಹುದು,  ಭೂಮಿಯೊಳಗೆ ನೀರು ಈಗ ಇರುವುದೆಷ್ಟು, ಮೊದಲು ಎಷ್ಟಿತ್ತು, ಇತ್ಯಾದಿ ವಿಚಾರಗಳನ್ನು ತಾವೇ ಖುದ್ದಾಗಿ  ಅಲ್ಲೆಲ್ಲಾ ಮಾಡಿರುವುದನ್ನು ತೋರಿಸಿದರು. ಇದಲ್ಲದೇ ನಮ್ಮ ಕಾಗದ ಬಳಕೆ, ನಾವು ಬಳಸುವ ಸೋಪು ಸಾಂಫು, ಇತ್ಯಾದಿಗಳಿಗೆ ಮರುಳಾಗುವ ಬದಲು ನಮ್ಮದೇ ಅಜ್ಜಿಕಾಲದ ಕೆಲವು ಉತ್ಪನ್ನಗಳಿಂದ ಹೇಗೆ ನಾವು ಹಣ ಮತ್ತು ಪರಿಸರವನ್ನು ಉಳಿಸಬಹುದು ಎನ್ನುವುದನ್ನು ತಿಳಿಸಿಕೊಟ್ಟರು.  ನಮ್ಮಗೊಂದು ಪುಟ್ಟ ಚಾರ್‍ಅಣದಂತೆ ನಡೆಸುತ್ತಾ ಅವರು ತಮ್ಮ ಪರಿಚಯದ ಕತೆಯನ್ನು ಹೇಳುತ್ತಿದ್ದರೇ ನಮಗೆಲ್ಲಾ ಆ ಸಮಯದಲ್ಲಿ ರೋಚಕವೆನಿಸಿತ್ತು.

 ಮುಂದೆ ಗಿಡನೆಡುವ ಕಾರ್ಯಕ್ರಮ.  ಅದಂತೂ ಒಂಥರ ಹೃದಯಸ್ಪರ್ಶಿಯಾಗಿತ್ತು. ಮೊದಲಿಗೆ ನಾನು ನನ್ನ ಶ್ರೀಮತಿಯ ಜೊತೆಗೂಡಿ "ಛಾಯಾಕನ್ನಡಿ" ಹೆಸರಿನಲ್ಲಿ ಹಿಪ್ಪೆಮರವನ್ನು ನೆಟ್ಟೆವು.  ಆ ಸಮಯದಲ್ಲಿ ಈಶ್ವರಪ್ರಸಾದ್ "ಹಿಪ್ಪೆಮರ ಸಾವಿರಕ್ಕೂ ಹೆಚ್ಚು ವರ್ಷ ಬದುಕುವಂತದ್ದು ನಿಮ್ಮ ಬ್ಲಾಗ್ ಹೆಸರು ಕೂಡ ಹಾಗೆ ಸಾವಿರ ವರ್ಷಗಳು ನೆನಪಿರಲಿ ಎಂದಾಗ ನಾನು ಭಾವುಕನಾಗಿದ್ದೆ.  ನಂತರ ಆಜಾದ್, ಸ್ವತಂತ್ರದ ಹೆಸರಿನಲ್ಲಿ ಗಿಡ ನೆಟ್ಟರು. ನಂತರ ಪ್ರಕಾಶ್ ಹೆಗೆಡೆ ದಂಪತಿಗಳು, ಸುಗುಣ ಮಹೇಶ್ ದಂಪತಿಗಳು, ದಿಲೀಪ್ ಹೆಗಡೆ ದಂಪತಿಗಳು, ಉಮೇಶ್ ದೇಸಾಯಿ ಕುಟುಂಬ, ನಂಜುಂಡ ಮತ್ತು ಚೇತನಭಟ್ ಕುಟುಂಬ ಗಿಡನೆಟ್ಟರು. ಆಮೇಲೆ ನಮ್ಮ ಬ್ಯಾಚುಲರ್ ಹೈಕಳಾದ, ಶಿವಪ್ರಕಾಶ್, ಗುರುಪ್ರಸಾದ್, ನವೀನ್[ಹಳ್ಳಿಹುಡುಗ], ಫ್ರಶಾಂತ್,  ರಾಘವೇಂದ್ರ, ಅನಿಲ್ ಬೆಡಗೆ, ಕೊನೆಯಲ್ಲಿ ಮೈಸೂರಿನ ನಿಮ್ಮೊಳಗೊಬ್ಬ ಬಾಲು ಹೆಸರಲ್ಲಿ ಸ್ವತಃ ಈಶ್ವರ ಪ್ರಸಾದ್ ಗಿಡನೆಟ್ಟರು.   ಒಬ್ಬರಿಗೆ ನೇರಳೆ ಗಿಡ ಸಿಕ್ಕರೆ ಮತ್ತೊಬ್ಬರಿಗೆ ಮಹಾಘನಿ, ಸೀತಾಫಲ, ಬೇವು, ಹೊಂಗೆ, ಹೀಗೆ ಅನೇಕ ಗಿಡಗಳು ಈಶ್ವರ ಪ್ರಸಾದರಿಂದ ತಮ್ಮ ವಿಶೇಷಣಗಳನ್ನು ಹೇಳಿಸಿಕೊಳ್ಳುತ್ತಾ ನಮ್ಮ ಬ್ಲಾಗ್ ಗೆಳೆಯರಿಂದ ನೆಡಲ್ಪಟ್ಟವು.  ನಡುವೆ ಫೋಟೊಗಾಗಿ ಫೋಸು, ನಗು, ಭಾವುಕತೆ, ಆನಂದ, ಜೋಕು, ಇತ್ಯಾದಿಗಳು ಚಾಲ್ತಿಯಲ್ಲಿದ್ದವು.


 ನನ್ನ ಶ್ರೀಮತಿ ಜೊತೆ ನಾನು "ಛಾಯಾಕನ್ನಡಿ" ಹೆಸರಿನಲ್ಲಿ ಹಿಪ್ಪೆ ಮರವನ್ನು ನೆಟ್ಟೆವು.


 ಆಜಾದ್ "ಸ್ವಾತಂತ್ರ"ದ ಹೆಸರಿನಲ್ಲಿ ಗಿಡನೆಟ್ಟರು.

  
ಉಮೇಶ್ ದೇಸಾಯಿ ಕುಟುಂಬ ಗಿಡ ನೆಟ್ಟರು.


 ದಿಲೀಪ್ ದಂಪತಿಗಳು ಗಿಡ ನೆಟ್ಟರು.

 ಪ್ರಶಾಂತ್ ಮತ್ತು ಆಶೀಷ್ ಇಬ್ಬರಿಗೂ ಗಿಡನೆಡುವಲ್ಲಿನ ಸಂಭ್ರಮ


 ಈಶ್ವರ ಪ್ರಸಾದ್ ನಿಮ್ಮೊಳಗೊಬ್ಬ ಬಾಲು[ಮೈಸೂರು]ಹೆಸರಿನಲ್ಲಿ  ಒಂದು ಗಿಡ ನೆಟ್ಟು ನೀರು ಹಾಕುತ್ತಿದ್ದಾರೆ!


 ನಿಮ್ಮ ಮಗ ಮತ್ತು ಶ್ರೀಮತಿ ಮಣ್ಣಿನ ಮಕ್ಕಳಾಗಿದ್ದರೆ ನೀವು ಹೀಗೆ ಫೋಸು ಕೊಡುವುದು ಯಾವ ನ್ಯಾಯ ಮಹೇಶ್ ಸರ್?


 ನಂಜುಂಡ ದಂಪತಿಗಳು ಮತ್ತು ಅವರ ಮಗ ಸೃಜನ್


 ನವೀನ್ ಹಳ್ಳಿ ಹುಡುಗನೇ ಸರಿ!


 ಪ್ರಕಾಶ್ ಹೆಗಡೆ ದಂಪತಿಗಳು



 ಗಿಡ ನೆಡುವುದರಲ್ಲಿ ಇಷ್ಟೊಂದು ಆನಂದವೇ!



                                                      ಬ್ರಹ್ಮಚಾರಿ ಶಿವಪ್ರಕಾಶ್


 ನಮ್ಮ ಅಧಿಕೃತ ಕಾರ್ಯಕ್ರಮಗಳ ನಡುವೆ ಕೆಲವು ಅನಧಿಕೃತ ಕಾರ್ಯಕ್ರಮಗಳು ನಡೆಯುತ್ತಿದ್ದವು. ಅವುಗಳು ಯಾವುವೆಂದರೆ, ಅದೇಕೋ ಗುರುಪ್ರಸಾದ್‍ಗೆ ಮನುಜರ ಫೋಟೊ ಕ್ಲಿಕ್ಕಿಸುತ್ತಾ ನಡುವೆ ಗಿಡಗಳ ಮುಳ್ಳುಗಳ ಫೋಟೊಗಳನ್ನು ಕ್ಲಿಕ್ಕಿಸುತ್ತಿದ್ದರು. ಎರಡೂ ಫೋಟೊಗಳ ನಡುವೆ ಯಾವಾ ಗೂಡಾರ್ಥಗಳಿವೆಯೋ ನೀವೇ ಕಂಡುಹಿಡಿಯಬೇಕು. ಹಾಗೇ ಹೊಸ ಮದುವೆ ಗಂಡು ದಿಲೀಪ್ ತಮ್ಮ ಶ್ರೀಮತಿಯಿಂದ ಬಿಡುವು ಸಿಕ್ಕಾಗಲೆಲ್ಲಾ ತರಾವರಿ ಸಣ್ಣ ಸಣ್ಣ ಹೂಗಳ ಫೋಟೊ ತೆಗೆಯಲು ನೆಲದ ಮೇಲೆ ಕೂತು ಮಲಗಿ ಇತ್ಯಾದಿ ಸರ್ಕಸ್ ಮಾಡುತ್ತಿದ್ದರು. ಪಕ್ಕದಲ್ಲಿ ಹೂಮನಸ್ಸಿನ ಮಡದಿಯನ್ನು ಬಿಟ್ಟು ಹೂಗಳ ಹಿಂದೆ ಏಕೆ ಬಿದ್ದಿರಬಹುದು?  ಚಿಪ್ಸ್ ಪಾಕೆಟ್ಟು ತೆರೆದು ಪುಟ್ಟ ಸೃಜನ್ ಕೈಗೆ ಕೊಟ್ಟು  ತಮ್ಮ ಬಾಯಿಗೆ ಹಾಕಿಸಿಕೊಳ್ಳುತ್ತಿದ್ದರು. ನವೀನ್ ತೇಜಸ್ವಿಯವರ ಪುಸ್ತಕ ಓದುವಾಗ ವಸುದೇಶ್ ಪಾಠಕ್ ಅಂತೂ ಅದ್ಯಾಕೋ ಪಕ್ಕದ ಪುಟ್ಟದ ಬಂಡೆಯ ಮೇಲೆ ಸುಮ್ಮನೇ ಏನೋ ಅಲೋಚನೆಯಲ್ಲಿ ಕುಳಿತುಬಿಟ್ಟಿದ್ದರು. ಅವರು ಪರಿಸರ, ತೇಜಸ್ವಿ ಬಗ್ಗೆ ಯೋಚಿಸುತ್ತಿದ್ದರೋ ಇನ್ನೇನು ಕನಸು ಕಾಣುತ್ತಿದ್ದರೋ ಗೊತ್ತಿಲ್ಲ.

ನಮಗೆ ಕಾಣದ್ದು ನಿಮಗೇನು ಕಂಡಿರಬಹುದು ದಿಲೀಪ್!


ಏಕಾಂತದಲ್ಲಿ ಚಿಂತನೆಯೋ? ಚಿಂತನೆಯಲ್ಲಿ ಏಕಾಂತವೋ?


ನನಗೆ ಬಿಟ್ಟು ಬೇರಾರಿಗೂ ಕೊಡಬೇಡ ಪುಟ್ಟ


ಗುರುಪ್ರಸಾದ್‍ರವರ ಮುಳ್ಳಿನ ಫೋಟೊ


 ಒಂದೊಂದೇ ಎಲೆಗಳನ್ನು ತೋರಿಸುತ್ತಾ "ಇದು ಯಾವ ಗಿಡದ್ದು" ಅಂತ ಕೇಳುತ್ತಿರುವ ಈಶ್ವರ ಪ್ರಸಾದ್.

 ಈ ನಡುವೆ ಸುಗುಣ ಮಹೇಶ್‍ರವರ ಮಗ ಮನುವಚನ ಒಂದು ತರಲೇ ಕೆಲಸ ಮಾಡಿಬಿಟ್ಟಿದ್ದ. ನೋಡುವುದಕ್ಕೆ ತರಲೇ ಕೆಲಸವಾದರೂ ಅದು ಎಲ್ಲರ ತಲೆಗೂ ಕೆಲಸ ಕೊಡುವಂತದ್ದಾಗಿತ್ತು.  ಅದೇನೆಂದರೆ ಆತ ಹತ್ತಾರು ಮರಗಳ ಎಲೆಗಳನ್ನು ಯಾರಿಗೂ ಗೊತ್ತಿಲ್ಲದಂತೆ ಕಿತ್ತು ತಂದಿದ್ದ.  ಗಿಡ ನೆಡುವ ಕಾರ್ಯಕ್ರಮವಾದ ನಂತರ ಅದನ್ನು ನೇರ ಈಶ್ವರ ಪ್ರಸಾದ್ ಕೈಗ್ ತಲುಪಿಸಿ ಈ ಎಲೆಗಳು ಯಾವ ಮರಗಳದ್ದು ಹೇಳಲೇಬೇಕು ಎಂದು ದುಂಬಾಲು ಬಿದ್ದಿದ್ದ. ಎಲ್ಲರಿಗಿಂತ ಒಂದು ಕೈ ಹೆಚ್ಚೇ ಕುತೂಹಲಿಯಾದ ಈಶ್ವರಪ್ರಸಾದ್  ಅದರಲ್ಲೂ ಒಂದು ಆಟ ಹೂಡಿಬಿಟ್ಟರು. ಅದೇನೆಂದರೆ ಎಲ್ಲರನ್ನು ಒಟ್ಟಿಗೆ ಸೇರಿಸಿದರು. ಒಂದೊಂದು ಎಲೆಯನ್ನು ತೋರಿಸುತ್ತಾ ಇದು ಯಾವ ಮರದ ಎಲೆ? ಎಂದು ಕೇಳುವುದು?  ಪ್ರಾರಂಭವಾಯಿತಲ್ಲ.  ಮತ್ತೆ ಮಕ್ಕಳಂತೆ ಎಲ್ಲರೂ ಕುತೂಹಲದಿಂದ ಒಂದೊಂದು ಎಲೆಗೂ ಉತ್ತರಿಸತೊಡಗಿದರು. ಸರಿ ಉತ್ತರ ಕೊಟ್ಟವರಿಗೆ ಬೆನ್ನು ತಟ್ಟುವಿಕೆ ಚಪ್ಪಾಳೆ. ಈ ಆಟದಲ್ಲಿ ಅನೇಕ ವಿಷಯಗಳು ಎಲ್ಲರ ಮನಸ್ಸಿನಲ್ಲಿ ಜಾಗ ಮಾಡಿಕೊಂಡವು. ಇದು ಮುಗಿಯಿತು ಎನ್ನುವಷ್ಟರಲ್ಲಿ ದೂರದಲ್ಲಿ ಹಕ್ಕಿಯೊಂದು ಕೂಗಿತು. ಅದನ್ನು ನೋಡಿ ನಮ್ಮ ಪ್ರಕಾಶ್ ಹೆಗಡೆ ಸುಮ್ಮನಿರಬೇಕಲ್ಲ. ಅವರು ಅದಕ್ಕೆ ಉತ್ತರವಾಗಿ ಕೂಗಿದರು. ಹೀಗೆ ಕೂಗಾಟ ಎಲ್ಲರಲ್ಲೂ ಶುರುವಾಯಿತು. ಕೊನೆಗೆ ಅದೇ ಒಂದು ಹೊಸ ಆಟವಾಗಿ ಪರಿವರ್ತನೆಯಾಗಿಬಿಟ್ಟಿತ್ತು.

 23.48 ಸೆಕೆಂಡು ಒಂದೇ ಸಮನೇ ಕೂಗಿದ ಪ್ರಕಾಶ್ ಹೆಗಡೆ

 ಈ ಆಟದ ನಿಯಮವೇನೆಂದರೆ ಯಾರು ಎಷ್ಟು ಸಮಯ ಕೂಗುತ್ತಾರೋ ನೋಡೋಣ ಎನ್ನುವ ಪರೀಕ್ಷೆ.   ಒಬ್ಬೊಬ್ಬರಾಗಿ ಉಸಿರು ಹಿಡಿದು ಬಿಡುವವರೆಗೆ ಕೂಗುವಂತದ್ದು.  ರಾಘು, ನವೀನ್, ಉಮೇಶ್, ಪರಂಜಪೆ, ಅನಿಲ್, ಗುರುಪ್ರಸಾದ್, ವಸುದೇಶ್, ಯುವಕರಾದಿಯಾಗಿ ಎಲ್ಲರೂ ಕೂಗಿದರು. ದಂಪತಿಗಳ ಪತಿಗಳಂತೂ  ತಮ್ಮ ಮಡದಿಯರನ್ನು ಮೆಚ್ಚಿಸಲೋಸುವೇನೋ ಸ್ವಲ್ಪ ಜೋರಾಗಿಯೇ ಕೂಗಿದರು. ಮದುವೆಯಾಗದ ಪಡ್ಡೇ ಹೈಕಳಂತೂ ಎಷ್ಟು ಜೋರಾಗಿ ಕೂಗಿದರೆಂದರೆ ದೂರದಲ್ಲಿರುವ ತಮ್ಮ ಮೆಚ್ಚಿನ ಗೆಳತಿಗೆ ಕೇಳುತ್ತಿದೆಯೇನೋ[ಹಾಗೆ ಅಂದುಕೊಂಡಿದ್ದು ಅವರ ಭಾವನೆ]ಅಂತ ಮಧುರವಾದ ಭಾವನೆಗಳನ್ನು ವ್ಯಕ್ತಪಡಿಸುತ್ತಾ ಕೂಗಿದರು.  ನಂತರ ಹೆಣ್ಣುಮಕ್ಕಳ ಸರಧಿ. ದಿವ್ಯ ಕೂಗಿದ್ದೂ ಯಾರ್‍ಇಗೂ ಕೇಳಿಸಲೇ ಇಲ್ಲ.  ಅದೇ ರೀತಿ ಇನ್ನೂ ದಂಪತಿಗಳಲ್ಲಿ ದಂಗಳ ಕೂಗು. ಅವರು ಕೂಗಿ ಕಿರುಚಿದ್ದು ಯಾರ್‍ಇಗೂ ಸರಿಯಾಗಿ ಕೇಳಿಸಲೇ ಇಲ್ಲ.  ನಿಮ್ಮ ಯಜಮಾನರ ಮೇಲೆ ಅದೆಷ್ಟು ವರ್ಷಗಳ ಸಿಟ್ಟಿದೆಯೋ ಜೋರಾಗಿ ಕೂಗಿ ತೀರಿಸಿಕೊಳ್ಳಿ ಎಂದು ನಾವೆಲ್ಲ ಅದೆಷ್ಟು ಸ್ಪೂರ್ತಿ ತುಂಬಿದರೂ ಚೇತನಭಟ್, ಇಬ್ಬರೂ ಆಶಾ ಅಕ್ಕಂದಿರು, ಶ್ರೀಮತಿ ಉಮೇಶ್ ದೇಶಾಯಿ, ಹೇಮಾ, ಪ್ರಗತಿ ಹೆಗಡೆ, ಸುಗಣಕ್ಕ.........ಯಾರ ಕೂಗೂ ಜೋರಾಗಿ ಕೇಳಿಸಲೇ ಇಲ್ಲ.  ಬಹುಶಃ ಇಲ್ಲೆಲ್ಲಾ ಕೂಗಾಡಿದರೇ ಏನು ಉಪಯೋಗ ಮನೆಯಲ್ಲಿ ತಮ್ಮ ಪತಿಗಳ ಮೇಲೆ ಪ್ರಯೋಗಿಸಿದರೆ ಉಪಯೋಗಕ್ಕೆ ಬರುತ್ತದೆ ಎಂದುಕೊಂಡು ನಮ್ಮ ಅಮಿಶಗಳನ್ನೆಲ್ಲ ತಿರಸ್ಕರಿಸಿಬಿಟ್ಟರು. ಈ ಸ್ಪರ್ಧೆಯ ಪೈಪೋಟಿಯಲ್ಲಿ ಈಶ್ವರ ಪ್ರಸಾದ್ ಸೇರಿದಂತೆ ಅನೇಕ ಯುವಕರು ಮುಂದಿದ್ದರೂ ಕೊನೆಗೂ ಈ ಕೂಗಾಟದಲ್ಲಿ  ಗೆದ್ದವರು ಪಕ್ಕುಮಾಮ. ಅವರು ಉಸಿರು ಹಿಡಿದು ೨೩.೫೨ ಸೆಕೆಂಡು ಕೂಗಿದ್ದರು. ಅವರಿಗೆ ಕೊನೆಯಲ್ಲಿ ಬಹುಮಾನ ಕೊಡಲಾಯಿತು. ಅವರಿಗೆ ಹತ್ತಿರವಾಗಿ ಕೂಗಿದವರು ಉಮೇಶ್ ದೇಸಾಯಿ ೧೯ ಸೆಕೆಂಡು. ಪಕ್ಕುಮಾಮನ ಮಗ ಆಶೀಶ್ ಕೂಡ ೧೪ ಸೆಕೆಂಡುಗಳವರೆಗೆ ಕೂಗಿದ್ದ.


       ಅದಾದ ನಂತರ ಊಟ.  ಊಟ ಸರಳವಾಗಿತ್ತು.  ಒಟ್ಟಿಗೆ ಕೂತು ಎಲ್ಲರೂ ಕೂತು ತಮಾಷೆ ಮಾಡುತ್ತಾ, ನಗುತ್ತಾ ಆನಂದಿಸುತ್ತಾ ತಮ್ಮ ಮನೆಮನೆಕತೆಗಳನ್ನು ಹೇಳುತ್ತಾ ತೃಪ್ತಿಯಿಂದ ಊಟಮಾಡಿದೆವು. ಊಟ ನಡುವೆ ಕೋತಿಗಳ ಕಾಟ ತಪ್ಪಿಸಲು ಕೆಲವು ಬಾರ್ಡರ್ ಸೆಕ್ಯುರಿಟಿ ಫೋರ್ಸ್[ರಾಘು,ನವೀನ್, ಅನಿಲ್]ನವರು ಕೈಯಲ್ಲಿದ್ದ ಕೋಲುಗಳನ್ನು ಗನ್ನುಗಳೆಂದುಕೊಂಡು ಫೋಸ್ ಕೊಡುತ್ತಾ ಕೋತಿಗಳಿಗೆ ಬೆದರಿಕೆ ಹಾಕುತ್ತಾ, ನಮ್ಮ ಊಟ ಸರಾಗವಾಗಿ ಆಗುವಂತೆ ನೋಡಿಕೊಂಡರು.

 ಹಳೆ ಪ್ಲಾಸ್ಟಿಕ್, ಹಳೇ ದಬ್ಬಾ. ಕೈಲೊಂದು ಮೊಬೈಲು..ಕಣೊ ಹೋಯಿ....
 ಊಟವಾದ ಮೇಲೆ ಒಂದು ಸಣ್ಣ ನಡಿಗೆ. ತಿಪ್ಪಗೊಂಡನಹಳ್ಳಿ ಜಲಾಶಯದ ಸೇತುವೆ ಮೇಲೆ ನಡೆದಿದ್ದು ನಿಜಕ್ಕೂ ಖುಷಿಯ ಅನುಭವ. ಅಲ್ಲಿಂದ ನಮ್ಮ ಪಯಣ ಅಲ್ಲಿನ ಅತಿಥಿ ಗೃಹಕ್ಕೆ.  ೧೯೩೦ರಲ್ಲಿ ಬ್ರಿಟಿಸರು ಕಟ್ಟಿದ ಆ ಆತಿಥಿಗೃಹ ನಮ್ಮನ್ನು ಮೋಡಿ ಮಾಡಿತ್ತು.  ಒಳಗೆ ಹೋಗುತ್ತಿದ್ದಂತೆ ಅಲ್ಲಿದ್ದ ಕೆಲಸಗಾರರು ನಮಗಾಗಿ ಕುಡಿಯಲು ನೀರು ಕೊಟ್ಟರು. ನಡುವೆ ಈಶ್ವರ ಪ್ರಸಾದ್ ಕಲ್ಲಹತ್ತಿ ಮರವನ್ನು ತೋರಿಸಿ ಅದು ಹೇಗೆ ಒಂದು ಬಂಡೆಸಿಕ್ಕಿದರೆ ಅದನ್ನು ಕೊರೆದು ಸೀಳಿಕೊಂಡು ತನ್ನ ಬೇರು ಬಿಟ್ಟುಕೊಂಡು ಹೋಗುತ್ತದೆ ಎನ್ನುವುದನ್ನು ವಿವರಿಸಿದರು.


 ಗೆಸ್ಟ್ ಹೌಸ್ ಒಳಗೆ ಒಂದು ಸಣ್ಣ ಪವರ್ ಪಾಯಿಂಟ್ ಕಾರ್ಯಕ್ರಮ. ೨೦೭೦ದಲ್ಲಿ ನಮ್ಮ ಪರಿಸ್ಥಿತಿ ಹೇಗಿರಬಹುದು ಎನ್ನುವುದರ ಬಗ್ಗೆ ತಿಳುವಳಿಕೆ ಮೂಡಿಸಲು ವಿಜ್ಞಾನಿ, ಮಾಜಿ ರಾಷ್ಟ್ರಪತಿ ಅಬ್ದುಲ್ ಕಲಾಂ ಬರೆದ ಪತ್ರವದು. ಎಲ್ಲರೂ ನೋಡುತ್ತಿದ್ದಂತೆ ನಮ್ಮ ಮಕ್ಕಳ ಮತ್ತು ಮೊಮ್ಮೊಕ್ಕಳ ಪರಿಸ್ಥಿತಿ ಹೇಗಿರಬಹುದು ಅನ್ನುವುದನ್ನು ಕಲ್ಪಿಸಿಕೊಂಡಾಗ ಎಲ್ಲರಿಗೂ ದಿಗಿಲಾಗಿತ್ತು.  ಎಲ್ಲರೂ ಗೆಸ್ಟ್ ಹೌಸಿನ ವರಾಂಡಕ್ಕೆ ಬಂದು ಗುಂಡಾಗಿ ಕುಳಿತೆವಲ್ಲ!  ಅಮೇಲೆ ನಡೆದಿದ್ದು ನಿಜಕ್ಕೂ ಫನ್.

 ಮೊದಲಿಗೆ ನಾನು ಕೆಲವು ಚುಟುಕು ಆಟಗಳನ್ನು ಆಡಿಸಿದೆ. ಅದರಲ್ಲಿ ಮೊದಲನೆಯದು ಗೋವಿಂದನ ಆಟ. ಗೋವಿಂದನ ಆಟದಲ್ಲಿ ಸಿಕ್ಕಿಕೊಂಡವರು ನಡುವೆ ಬಂದು ತಮಗೆ ತಿಳಿದ ನೃತ್ಯ ಮಾಡಬೇಕು. ಬೇರೆಲ್ಲೂ ಸಿಗದ ತರಾವರಿ ನೃತ್ಯಗಳು ಅವು. ಒಬ್ಬರ ನಾಚಿಕೆಯೇನು, ಮಗದೊಬ್ಬರ ನಡುಕುಲುಕುವೆಯೇನು, ಒಂದೇ ಎರಡೇ.... ನೋಡಲು ತರಾವರಿ ಸಿಕ್ಕಿದ್ದವು. ಅದಾದ ಮೇಲೆ ಒಬ್ಬೊಬ್ಬರಾಗಿ ತಮ್ಮ ಪಕ್ಕದವರ ಹೆಸರನ್ನು ಸೇರ್‍ಇಸಿಕೊಂಡು ಹೇಳುವ ಆಟ. ಇದಂತೂ ಬಲೇ ಮಜವಾಗಿತ್ತು. ಮೊದಲನೆಯವರಿಗೆ ತಮ್ಮ ಹೆಸರಿನ ಜೊತೆಗೆ ಪಕ್ಕದವರ ಹೆಸರು ಮಾತ್ರ ಹೇಳಬೇಕಿದ್ದರೆ ಕೊನೆಯವರಿಗೆ ಮೊದಲಿಂದ ಕೊನೆಯವರೆಗಿನ ಎಲ್ಲರ ಹೆಸರನ್ನು ಹೇಳಬೇಕಿತ್ತು. ಈ ಆಟವನ್ನು ಆಡಿಸಿದ್ದು ನಾನಾದ್ದರಿಂದ ಮೊದಲು ನನ್ನಿಂದಲೇ ಪ್ರಾರಂಭವಾಗಿತ್ತು. ಅದಕ್ಕೆ ನಾನು ಎಲ್ಲರ ಹೆಸರು ನೆನಪಿಸಿಕೊಂಡು ಹೇಳುವುದರಿಂದ ತಪ್ಪಿಸಿಕೊಂಡಿದ್ದೆ.

 ನಂತರ ಶುರುವಾಗಿದ್ದು ಗುರುಪ್ರಸಾದ್‍ರವರು ಆಡಿಸಿದ ಮೈಂಡ್ ಗೇಮ್.  ಎಲ್ಲರನ್ನೂ ನಾಲ್ಕು ಗುಂಪುಗಳಾಗಿ ವಿಂಗಡಿಸಿ ಆಡಿದ್ದ ಆಟವಂತೂ ನಿಜಕ್ಕೂ ಮರೆಯಲಾಗದ್ದು. ಈ ಆಟದಲ್ಲಿ ಮೊದಲಿಗೆ ನಮ್ಮ ಪರಿಚಯಿಸುವ ಕ್ರಮದಲ್ಲಿ ನಮ್ಮ ತಂಡ ಅದ್ಬುತವೆನ್ನುವ ಕ್ರಿಯೇಟಿವಿಟಿ ಪ್ರದರ್ಶಿಸಿ ಮುಂದೆ ಇದ್ದೆವು.  ಆದರೆ ನಂತರ ನಮಗೆ ಸಿಕ್ಕಿದ್ದೆಲ್ಲಾ ತುಂಬಾ ಕಷ್ಟದ್ದು. ಉಳಿದ ಮೂರು ತಂಡಗಳಿಗೆ ಒಂದಲ್ಲ ಒಂದು ಸುಲಭ ವಿಷಯಗಳು ಸಿಕ್ಕು ಅವರ ಅಂಕಗಳು ಸಹಜವಾಗಿ ನಮಗಿಂತ ಹೆಚ್ಚಾಗಿಬಿಟ್ಟವು.  ಇದೆಲ್ಲಾ ಮೋಸ, ನಮಗೆ ಅನ್ಯಾಯವಾಗಿದೆ, ಏಕೆಂದರೆ ನಮಗೆ ತುಂಬಾ ಕಷ್ಟ ವಿಷಯಗಳು ಸಿಕ್ಕಿವೆ. ನಮ್ಮ ಕಡೆ ಅದೃಷ್ಟವಿಲ್ಲ. ಆದರೂ ನಾವು ನಮ್ಮ ಶಕ್ತಿಮೀರಿ ಇಷ್ಟು ಅಂಕ ಗಳಿಸಿದ್ದೇವೆ. ಅದು ಉಳಿದವರು ಗಳಿಸಿದ ಅಂಕಗಳಿಗೆ ಹೋಲಿಸಿದರೆ ಎರಡರಷ್ಟು ಲೆಕ್ಕ ಎಂದು ತೆಗೆದುಕೊಳ್ಳಬೇಕೆಂದು ನಾವು ಅಪೀಲ್ ಮಾಡಿದರೂ ಜಡ್ಜುಗಳಾದ ಗುರುಪ್ರಸಾದ್ ಮತ್ತು ಶಿವಪ್ರಕಾಶ್ ನಮ್ಮ ಕಡೆ ಸ್ಕೋರು ಹೆಚ್ಚು ಕೊಡಲಿಲ್ಲ. ಕೊನೆಯಲ್ಲಿ ಶಿವಪ್ರಕಾಶನನ್ನು ನಿಶ್ಯಬ್ದವಾಗಿ ಕರೆದು "ನಿನದೊಂದು ಅಮೇಜಿಂಗ್ ಫೋಟೊ ತೆಗೆದಿದ್ದೇನೆ. ಅದನ್ನು ಯಾರಾದರೂ ಹುಡುಗಿ ನೋಡಿದರೆ ಕ್ಲೀನ್ ಬೋಲ್ಡ್, ಅದನ್ನು ನಿನಗೆ ಪರ್ಸನಲ್ಲಾಗಿ ಕಳಿಸುತ್ತೇನೆ. ನಮಗೆ ಹೆಚ್ಚು ಮಾರ್ಕ್ಸ್ ಹಾಕಿ ನಮ್ಮನ್ನು ಮೊದಲ ಸ್ಥಾನದಲ್ಲಿ ನಿಲ್ಲಿಸು" ಅಂತ ಆತನ ಕಿವಿಯಲ್ಲಿ ಹೇಳಿ ಮ್ಯಾಚ್ ಫಿಕ್ಸ್ ಮಾಡಿದರೂ ಆಟ ನನ್ನ ಕುತಂತ್ರಕ್ಕೆ ಸೊಪ್ಪು ಹಾಕದೇ ನಾನು ಈ ಮಾತನ್ನು ಹೇಳಿದ್ದೇ ಅಪರಾಧವಾಯಿತೇನೋ ಎನ್ನುವಂತೆ ಇದ್ದ ಸ್ಥಾನಕಿಂತ ಕೊನೆಯ ಸ್ಥಾನಕ್ಕೆ ತಳ್ಳಿಬಿಟ್ಟಿದ್ದ.

ಸುಗುಣಕ್ಕ, ದಿವ್ಯ, ಪ್ರಗತಿ, ದಿಲೀಪ್ ಮತ್ತು ನಾನಿದ್ದ ಸೃಜನಶೀಲತೆ ಎನ್ನುವ ನಮ್ಮ ತಂಡ ಕೊನೆಯ ಸ್ಥಾನಕ್ಕೆ ಬಿದ್ದರೆ, ಪ್ರಕಾಶ್ ಹೆಗಡೆ, ಹೇಮಾಶ್ರಿ, ಆಶೀಷ್, ಪ್ರಶಾಂತ್ ಮತ್ತು ವಸುದೇಶ್ ಇದ್ದ "ಕಾರಂತ" ತಂಡ ಮೂರನೇ ಸ್ಥಾನಕ್ಕಿಳಿದಿತ್ತು.  ಅಂಜಲಿ ಅಕ್ಕ, ನಂಜುಂಡ, ಮಹೇಶ್, ಮನು, ಮತ್ತು  .......ಇದ್ದ ಪೋಲಿ ಪಠಾಲಂ ತಂಡ ಹೆಸರಿಗೆ ಎರಡನೇ ಸ್ಥಾನವನ್ನು ಗಳಿಸಿತು. ಅಜಾದ್, ರಾಘು, ಚೇತನ, ಆಶಾಕ್ಕ ಮತ್ತು .........ಇದ್ದ "ಅಪ್ರತಿಮ ಕನ್ನಡಿಗರು" ತಂಡ ಮೊದಲನೇ ಸ್ಥಾನ ಗಳಿಸಿತು.

 ಕೊನೆಯಲ್ಲಿ ಕುಳಿತಲ್ಲೇ ಆಡುವ ಬಾಲ್ ಗೇಮ್. ಈ ಆಟದಲ್ಲಿ ಒಬ್ಬರಿಗೊಬ್ಬರೂ ಬಾಲನ್ನು ಕೊಡುತ್ತಾ ಹೋಗುವುದು. ಸಂಗೀತ ನಿಂತಾಗ ಬಾಲ್ ಯಾರ ಕೈಯಲ್ಲಿರುತ್ತದೋ ಅವರು ಔಟ್. ಹೀಗೆ ಎಲ್ಲರೂ ಔಟಾದ ನಂತರ ಕೊನೆಯಲ್ಲಿ ಗೆದ್ದಿದ್ದು ಪ್ರಗತಿ ಹೆಗಡೆ.


ಎಲ್ಲ ಮುಗಿಯಿತಲ್ಲ. ಕೊನೆಯಲ್ಲಿ ಒಂದು ಸುಂದರ ಗ್ರೂಪ್ ಫೋಟೊ.  ಅದಾದ ನಂತರ ಬಹುಮಾನ ಕಾರ್ಯಕ್ರಮ. ಬಹುಮಾನ ಏನು ಎನ್ನುವುದನ್ನು ನಾನು ಹೇಳಲಾರೆ. ಆ ಫೋಟೊಗಳನ್ನು ನಾನು ಕ್ಲಿಕ್ಕಿಸಲಾಗಲಿಲ್ಲ. ಪ್ರಕಾಶ್ ಹೆಗಡೆ ಇನ್ನಿತರರು ಕ್ಲಿಕ್ಕಿಸಿದ್ದಾರೆ ಅವರು ಬ್ಲಾಗಿಗೆ ಬಂದಾಗ ನೋಡಬೇಕು.
\
ಮುಂಗಾರು ಮಳೆಯ ಹಾಡನ್ನು ಕೆಟ್ಟದಾಗಿ ಆಡುವ ಬಹುಮಾನ ಗಿಟ್ಟಿಸಿದ ಗುರುಪ್ರಸಾದ್ ಹಾಡನ್ನು ಸೊಗಸಾಗಿ ಕೆಟ್ಟತನದಲ್ಲಿ ಹಾಡಿ ಎಲ್ಲರ ಮೆಚ್ಚುಗೆ ಗಳಿಸಿದರು.


ಚಿತ್ರಬಂಧವನ್ನು ಜೋಡಿಸುವಲ್ಲಿ ನಿರತರಾದ "ಕಾರಂತ" ತಂಡ.
ಎಲ್ಲವೂ ಮುಗಿದು ಹೊರಡುವಾಗ ಎಲ್ಲರ ಹೃದಯ ತುಂಬಿಬಂದಿತ್ತು. ಈಶ್ವರಪ್ರಸಾದರಿಗೆ ಆತ್ಮೀಯವಾದ ಧನ್ಯವಾದಗಳನ್ನು ಹೇಳಿ ಹೊರಟಾಗ ಇವತ್ತಿನ ದಿನವನ್ನು ನಮ್ಮ ದಿನವಾಗಿ ಪರಿವರ್ತಿಸಿಕೊಂಡು ಹೊರಗಿನ ಪ್ರಪಂಚವನ್ನು ಮರೆತು ಹಕ್ಕಿಯಂತೆ ಆಕಾಶದಲ್ಲಿ ತೇಲಿದ ಅನುಭವ. ಒಟ್ಟಾರೆ ಕಾರ್ಯಕ್ರಮದಲ್ಲಿ ನಾವು ಅನುಭವಿಸಿದ ಖುಷಿ, ಗೆಳೆತನದಲ್ಲಿನ ಮುಗ್ದತನ, ಹೊಸತನ್ನು ನೋಡಬೇಕು, ಕಲಿಯಬೇಕು ಎನ್ನುವ ಮಗುವಿನ ಮನಸ್ಸು, ಗಿಡನೆಡುವಾಗ ಮತ್ತು ಇಡೀದಿನವನ್ನು ನಮ್ಮದಾಗಿಸಿಕೊಂಡ ಸಾರ್ಥಕತೆ, ಹಕ್ಕಿಯಂತೆ ನಮ್ಮದೇ ಲೋಕದಲ್ಲಿ ಆಟವಾಡುತ್ತಾ ಕಂಡ ಕನಸು..........ಇನ್ನೂ ಏನೇನೋ ವರ್ಣಿಸಲು ಪದಗಳಲ್ಲ.

ನಂಜುಂಡ ಭಟ್ ಮತ್ತು ಚೇತನಭಟ್ ದಂಪತಿಗಳ ಮಗ ಸೃಜನ್ ನನ್ನ ಕ್ಯಾಮೆರಾಗೆ ಸೆರೆಯಾದದ್ದು ಹೀಗೆ!


ಮೊದಲ ಪ್ರಯತ್ನದಲ್ಲಿ ನಮ್ಮ ಬ್ಲಾಗ್ ವನಕ್ಕೆ ಹನ್ನೆರಡು ಗಿಡಗಳನ್ನು ನೆಟ್ಟಿದ್ದೇವೆ. ಮುಂದೆ ಅದು ನೂರಹನ್ನೆರಡು..ಸಾವಿರದ ಹನ್ನೆರಡು...ಅಮೇಲೆ ಲಕ್ಷ......ಹೀಗೆ ಮುಂದುವರಿಯಲು ನಮ್ಮಿಂದಾದ ಸಹಕಾರವನ್ನು ಮಾಡುತ್ತೇವೆ ಎಂದು ಎಲ್ಲರೂ ವಾಗ್ದಾನ ಮಾಡಿ ತಿಪ್ಪಗೊಂಡನಹಳ್ಳಿ ಬಿಟ್ಟು ನಮ್ಮ ಮಿನಿ ಬಸ್ ಹತ್ತಿದಾಗ ಸಮಯ ಆಗಲೇ ಏಳುಗಂಟೆದಾಟಿತ್ತು.


ಎಡದಿಂದ ಬಲಕ್ಕೆ ಆಜಾದ್, ಪ್ರಕಾಶ್ ಹೆಗಡೆ, ಆಶಾಅಕ್ಕ, ಈಶ್ವರ್ ಪ್ರಸಾದ್. ಮದ್ಯದ ಸಾಲಿನಲ್ಲಿ ನಿಂತವರು ಎಡದಿಂದ ಬಲಕ್ಕೆ: ಮನುವಚನ್, ದಿವ್ಯಹೆಗಡೆ, ಪ್ರಕಾಶ್ ಹೆಗಡೆಯವರ ಅಮ್ಮ, ಪ್ರಕಾಶ್ ಹೆಗಡೆಯವರ ಮಗ ಆಶೀಷ್, ಪರಂಜಪೆಯವರ ಶೀಮತಿ ಆಶಾ, ಪರಂಜಪೆ, ಉಮೇಶ್ ದೇಸಾಯಿ, ಅನಿಲ್ ಬೆಡಗೆ, ನಂಜುಂಡ ಭಟ್, ಸುಗುಣಕ್ಕ, ಚೇತನಭಟ್, ಅವರ ಕೈಯಲ್ಲಿ ಅವರ ಮಗ ಸೃಜನ್, ಉಮೇಶ್ ದೇಸಾಯಿಯವರ ಶ್ರೀಮತಿ ಅಂಜಲಿ, ನನ್ನ ಶ್ರೀಮತಿ ಹೇಮಾಶ್ರಿ. 
ಅರ್ಧಕುಳಿತವರು ಎಡದಿಂದ ಬಲಕ್ಕೆ:  ಶಿವು,  ವಸುದೇಶ್ ಪಾಠಕ್, ಗುರುಪ್ರಸಾದ್, ಶಿವಪ್ರಕಾಶ್,ರಾಘವೇಂದ್ರ, ನವೀನ್, ಪೂರ್ತಿ ಕುಳಿತವರು ಎಡದಿಂದ ಬಲಕ್ಕೆ:  ದಿಲೀಪ್ ಹೆಗಡೆ, ಪ್ರಗತಿ ಹೆಗಡೆ, ಸುನಿಧಿ, ಮಹೇಶ್.

ಇಡೀ ದಿನದ ಕಾರ್ಯಕ್ರಮದಲ್ಲಿ ನಾನು ಬರೆದಿದ್ದು ಸ್ವಲ್ಪ ಮಾತ್ರ. ಪ್ರತಿಯೊಂದು ಪ್ರಸಂಗವನ್ನು ಬರೆದರೆ ಹತ್ತಕ್ಕಿಂತ ಹೆಚ್ಚು ಲೇಖನಗಳಾಗುವುದು ಖಂಡಿತ. ಮತ್ತೆ ಇಡೀ ದಿನದ ದೊಡ್ಡ ಜೋಕ್ ಎಂದರೆ ಹೊರಡುವ ಕೊನೆ ಗಳಿಗೆಯ ಗಡಿಬಿಡಿಯಲ್ಲಿ ನಮ್ಮ ಕ್ಯಾಮೆರಾ ಭ್ಯಾಗನ್ನು ಮರೆತುಬಂದಿದ್ದು.  ಹಾಗಾಗಿ ನವೀನ್[ಹಳ್ಳಿಹುಡುಗನ ಸಣ್ಣ ಕ್ಯಾಮೆರವನ್ನು ಕಿತ್ತುಕೊಂಡು ಅದರಲ್ಲಿಯೇ ಕೆಲವು ಫೋಟೊಗಳನ್ನು ಕ್ಲಿಕ್ಕಿಸಿ ಸಮಾಧಾನ ಮಾಡಿಕೊಂಡಿದ್ದೆ.


ಚಿತ್ರಗಳು.
ಶಿವು.ಕೆ,  ನವೀನ್,  ಗುರುಪ್ರಸಾದ್,
ಶಿವಪ್ರಕಾಶ್,
ಲೇಖನ. ಶಿವು.ಕೆ

75 comments:

Badarinath Palavalli said...

ಚೆನ್ನಾಗಿದೆ ಸರ್, :-) ಒಳ್ಳೆ ಫೋಟೋಗಳನ್ನೂ ಹಾಕಿದ್ದೀರಿ.

ಅಂದ ಹಾಗೆ, ದಯಮಾಡಿ 9972570061 ಗೆ ಕರೆ ಮಾಡಿ. ನಿಮ್ಮ ಹತ್ತಿರ ಸ್ವಲ್ಪ ಮಾತನಾಡುವುದಿದೆ.

ನನ್ನ ಬ್ಲಾಗಿಗೆ ಒಮ್ಮೆ ಬಂದು ಹೋಗಿ...

ಶಿವಪ್ರಕಾಶ್ said...

shivu,
oLLe Report barediddiri...
naanu neeve First bandideeri (Last inda) anta announce maadiddu... :)
nannannu ellaru seri bramhachaari maadbeku anta ideeri ansutte :)

very nice photos and details :)

Thank you :)

ಮನಸಿನ ಮಾತುಗಳು said...

I got no words... :-)

Vl simply smile...tat says all ...

:-)
:-)
:-)

Naveen ಹಳ್ಳಿ ಹುಡುಗ said...

ಶಿವಣ್ಣ ಮತ್ತೊಮ್ಮೆ ಸಸ್ಯವನಕ್ಕೆ ಹೋಗಿ ಬಂದ ಅನುಭವ ಆಯಿತು.... ಮರೆಯಲಾಗದಂಥ ದಿನ...

Guruprasad said...

ಶಿವೂ,,,,
ಆ ಒಂದು ದಿನದ ಸಂಪೂರ್ಣ ಚಿತ್ರಣ,,,, ಒಂದು ಚೂರು ಬಿಡದೆ,, ಎಲ್ಲ ವಿಷಯಗಳನ್ನು ಹೇಳಿ,,, ತುಂಬಾ ಚೆನ್ನಾಗಿ ಬರೆದಿದ್ದೀರ... ಲೇಖನವನ್ನ.....
ಮತ್ತೊಮ್ಮೆ ಮೊನ್ನೆ ಭಾನುವಾರದ ದಿನದ ಸಂಪೂರ್ಣ ಆನಂದ , ಆಡಿದ ಆಟ ,,, ಕಲಿತ ಪಾಠ ,,ನಕ್ಕು ನಲಿದ ಸುಂದರ ಕ್ಷಣ ,, ಎಲ್ಲ ನೆನಪಿಗೆ ಬಂದಿತು,,,
ತುಂಬಾ ಧನ್ಯವಾದಗಳು,,,, ನಿಮ್ಮ ಇ ಸುಂದರ ಲೇಖನಕ್ಕೆ.... :-)

shridhar said...
This comment has been removed by the author.
ಕ್ಷಣ... ಚಿಂತನೆ... said...

ಸರ್‍, ನಿಮ್ಮ ಪ್ರವಾಸದ ಸವಿವರ ಚಿತ್ರ ಸಮೇತ ಕೊಟ್ಟಿದ್ದೀರಿ. ನನಗೆ ಬರಲಾಗಲಿಲ್ಲ. ಮುಂದಿನ ಬಾರಿ ಯತ್ನಿಸುವೆ. ಚೆಂದಾದ ಚಿತ್ರಗಳು.

ಸ್ನೇಹದಿಂದ,

shridhar said...

ಶಿವು ಸರ್,
ಈ ತರಹದ ಒಂದು ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು ಎಂಬುದೇ ಗೊತ್ತಾಗಲಿಲ್ಲವಲ್ಲ .. ಇಲ್ಲದಿದ್ದರೇ ನಾನು ಕೈಗೂಡಿಸುತ್ತಿದ್ದೆ
ಇರಲಿ ಮುಂದಿನ ಬಾರಿಯಾದರು ತಿಳಿಸಿ .. If free will try to join u all ..
ಮತ್ತೊಮ್ಮೆ ಎಲ್ಲರನ್ನು ಬೇಟಿ ಮಾಡುವ ಅವಕಾಶ miss ಆಯ್ತು ..

ನಿಮ್ಮ ವಿವರಣೆ , ಫೋಟೋ ಎಲ್ಲಾ ನೋಡಿ ತುಂಬ ಖುಶಿ ಆಯ್ತು .. ಬ್ಲಾಗ ಸ್ನೇಹಿತರೆಲ್ಲ ಸೇರಿ ಸಸ್ಯ ನೆಟ್ಟು ವನ ಮಹೋತ್ಸವವನ್ನು ಮಾಡಿದ್ದು ಇನ್ನು ಸಂತೋಷದ ವಿಚಾರ.

ಶ್ರೀಧರ್ ಭಟ್ಟ

ವಿ.ರಾ.ಹೆ. said...

ಚೆನ್ನಾಗಿದೆ . ಬ್ಲಾಗಿಗರು ಒಂದಾಗಿ ಇಂತಹ ಕೆಲಸದಲ್ಲಿ ತೊಡಗಿಕೊಂಡದ್ದು ಖುಷಿ ಮತ್ತು ಹೆಮ್ಮೆ ತರುವಂತದ್ದು.

ಈ ಸಸ್ಯವನ ಅಂದರೆ ಏನು, ಅದರಲ್ಲಿ ಏನಿದೆ, ನಾವು ಹೇಗೆ ಪಾಲ್ಗೊಳ್ಳಬಹುದು ಎನ್ನುವುದರ ಬಗ್ಗೆಯೂ ಸ್ವಲ್ಪ ವಿವರಗಳನ್ನು ತಿಳಿಸಿಕೊಟ್ಟಿದ್ದರೆ ಚೆನ್ನಾಗಿರುತ್ತದೆ.

ಸಾಗರಿ.. said...

ತಮ್ಮ ಖುಷಿಯ ಕ್ಷಣಗಳನ್ನು ನಮ್ಮೊಂದಿಗೆ ಹಂಚಿಕೊಂಡಿದ್ದಕ್ಕೆ ಧನ್ಯವಾದಗಳು.. ಅಂದಹಾಗೆ "ಗುಬ್ಬಿ ಎಂಜಲು" ಬಿಡುಗಡೆಯ ಸಮಾರಂಭದ ಬಗ್ಗೆ ಸೀತಾರಾಮ್ ಸರ್ ಬ್ಲಾಗಲ್ಲಿ, ಪ್ರಕಾಶಣ್ಣನ ಬ್ಲಾಗಲ್ಲಿ ಓದಿ ಖುಷಿಯಾಯ್ತು. ಹಿಪ್ಪೆಯಂತೆ ಹಸಿರಾಗಿರಲಿ ತಮ್ಮ ಹಾದಿ ಎಂದು ನನ್ನದೂ ಒಂದು ಹಾರೈಕೆ.

Prashanth Arasikere said...

hi shivu,

NImma sasi neduva karyakrama nodi tumba kushi ayhtu,olle kelasa madididdira munde hodaga namagu vishaya tilisidare navu barutteve..hagu adara jothe manranjane saha iddiddu nodi navu saha alli irabekittu annista ide..hige nimma maraneduva kayaka mundu variyali endu ashisuve...

ಮನಮುಕ್ತಾ said...

ಓದಿ ಖುಶಿಯಾಯ್ತು.

ಸೀತಾರಾಮ. ಕೆ. / SITARAM.K said...

ಅನುಭವವನ್ನಾ ಚೆನ್ನಾಗಿ ಹೇಳಿದ್ದಿರಾ! ಜೊತೆಗೆ ಸುಂದರ ಚಿತ್ರಗಳನ್ನೂ ಹೊಂದಿಸಿದ್ದಿರಾ...
ನಾವು ಬರದೆ ಇದ್ದುದ್ದಕ್ಕೆ ತುಂಬಾ ವ್ಯಥೆ ಪಟ್ಟುಕೊಳ್ಳುವಂತಾಗಿದೆ.

ಹಂಚಿಕೊಂಡಿದ್ದಕ್ಕೆ ಧನ್ಯವಾದಗಳು.

Lahari said...

ಪ್ರತಿಯೊಂದು ಫೋಟ ಕೂಡ ಆ ನೆನಪಿನ ಬುತ್ತಿಯಲ್ಲಿನ ಸಿಹಿಯನ್ನ ಹಂಚುವಂತಿವೆ ಒಂದು ವೇಳೆ ಜೊತೆಯಲ್ಲಿಯೆ ಇದ್ದಿದ್ದರೆ ಹಬ್ಬದ ಸಂಭ್ರಮದೊಂದಿಗೆ ಆ ಸವಿಯನ್ನ ಸವಿಯುವ ಅವಕಾಶ ಛೇ........... ತುಂಭಾನೆ ಮಿಸ್ ಆಯ್ತು! ಈಶ್ಪರ್ ಪ್ರಸಾದ್ ಸರ್ ಮತ್ತು ಶಿವು ಸರ್ ನೀವು ನಮ್ಮ ಬ್ಲಾಗಿನವರಿಗೆ ಮೊದಲ ಭೇಟಿಯ ಅನುಭವದ ರುಚಿಯನ್ನ ತುಂಭಾ ಚೆನ್ನಾಗಿ ತೋರಿಸಿದ್ದಿರಿ... ಮತ್ತೇ ಈ ರೀತಿ ಎಲ್ಲಾರು ಒಂದಾಗುವ ಮತ್ತೊಂದು ಗಳಿಗೆ ಬಂದರೆ ಮತ್ತೆಂದು ಯಾರು ಸಹಾ ಮಿಸ್ ಮಾಡಿಕೊಳ್ಳೊದಿಲ್ಲಾ ಅಂತ ಅನ್ಕೊಂಡಿದ್ದಿನಿ................ನನ್ನನ್ನು ಸೇರಿಸಿಕೊಂಡು. ತುಂಭಾ ಧನ್ಯವಾದಗಳು.........

Gubbachchi Sathish said...

ಒಳ್ಳೆಯ ಕೆಲಸ ಮಾಡಿದಿರಿ ಬ್ಲಾಗ್ ಮಿತ್ರರೆ.
ನಿಮಗೆಲ್ಲರಿಗೂ ನನ್ನ ಧನ್ಯವಾದಗಳು.

sunaath said...

ಸೃಜನನ ಫೋಟೋ ಸೂಪರ್‍!

balasubramanya said...

ಶಿವೂ ಯಾವುದೇ ಒಂದು ಕಾರ್ಯಕ್ಕೆ ಒಳ್ಳೆ ಆರಂಭ ಸಿಕ್ಕಿದರೆ ಹೇಗೆ ಚಲಿಸುತ್ತದೆ ನೋಡಿ.ಬಹಳ ಸುಂದರ ದಿನವನ್ನು ಒಳ್ಳೆ ಕಾರ್ಯ ಮಾಡುವ ಮೂಲಕ ಸಾರ್ಥಕ ಗೊಳಿಸಿದ್ದೀರ, ನನ್ನ ನೆಚ್ಚಿನ ಎಲ್ಲಾ ಬ್ಲಾಗಿಗರಿಗೂ ನನ್ನ ಕೃತಜ್ಞತೆಗಳು. ಹಾಗೆ ನನ್ನ ಬ್ಲಾಗಿನ ಹೆಸರಿನಲ್ಲಿ ಒಂದು ಗಿಡ ನೆಟ್ಟು ನೀರು ಹನಿಸಿದ ಮಿತ್ರ ರಾದ ಈಶ್ವರ ಪ್ರಸಾದ್ ರವರಿಗೆ ಧನ್ಯವಾದಗಳು.ನೀವು ಭೇಟಿನೀಡಿದ ಆ ಜಾಗದಲ್ಲಿ ನಾನಾ ಒಅರವಾಗಿ ಒಂದು ಗಿಡ ಬೆಳೆದರೆ ಅದಕಿಂತ ಪುಣ್ಯ ಇನ್ನೇನು.ನಾನು ಒಮ್ಮೆ ನನ್ನ ಗಿಡಕ್ಕೆ ಪ್ರೀತಿಯಿಂದ ಸ್ವಲ್ಪ ನೀರು ಹಾಕಿ ಗೊಬ್ಬರ ಹಾಕುವ ಆಸೆ ಇದೆ. ಇಷ್ಟರಲ್ಲೇ ನನ್ನ ಗಿಡವನ್ನು ಭೇಟಿಮಾಡಿ ಯೋಗಕ್ಷೇಮ ವಿಚಾರಿಸುವೆ.ಒಟ್ಟಿನಲ್ಲಿ ಇಂತಹ ಕಾರ್ಯ ನಿರಂತರವಾಗಿ ನಡೆಸೋಣ ಒಳ್ಳೆ ಹೃದಯಗಳಿಗೆ ಜಯವಾಗಲಿ.

AntharangadaMaathugalu said...

ಶಿವು ಸಾರ್...
ನಿಮ್ಮ ಚಿತ್ರಗಳೂ, ವಿವರಣೆಯೂ ಸೊಗಸಾಗಿವೆ....ಎಲ್ಲರ ಸಂತೋಷ ನೋಡಿ ನನಗೂ ಖುಷಿಯಾಯಿತು. ಧನ್ಯವಾದಗಳು

ಶ್ಯಾಮಲ

Dr.D.T.Krishna Murthy. said...

ನೀವೆಲ್ಲಾ ಖುಷಿ ಪಟ್ಟಿದ್ದೂ ಅಲ್ಲದೆ ತುಂಬಾ ಒಳ್ಳೆಯ ಕೆಲಸ ಶುರು ಮಾಡಿದ್ದೀರ.ಒಳ್ಳೆಯ ಫೋಟೋಗಳು.ಅದಕ್ಕೆ ತಕ್ಕ ಬರಹ.ಧನ್ಯವಾದಗಳು.ಬ್ಲಾಗಿಗರಿಗೆ ಜೈ ಹೋ !

ವನಿತಾ / Vanitha said...

ಶಿವು, ತುಂಬಾ ಕುಶಿಯಾಯ್ತು ನಿಮ್ಮ ಲೇಖನ ಓದಿ..ಎಷ್ಟು ಒಳ್ಳೆಯ ಪ್ರೋಗ್ರಾಮ್ಗಳನ್ನೆಲ್ಲ ಮಿಸ್ ಮಾಡಿ ಕೊಂಡೆವು.ಈಶ್ವರ ಪ್ರಸಾದ್, ಸಸ್ಯವನದ ಬಗ್ಗೆ ಒಳ್ಳೆಯ ಮಾಹಿತಿ ಕೊಟ್ಟಿದ್ದಕ್ಕೆ ತುಂಬಾ ಥ್ಯಾಂಕ್ಸ್.

umesh desai said...

ಶಿವು ನೀವು ತೆಗೆದ ವಸುಧೇಶ್ ಫೋಟೋ ಎಲ್ಲಿ ಅವರು ಕೂತಿದ್ದ ಜಾಗೆ ಮುಂದೆ ಹೊಯ್ಡಾಡುತ್ತಿದ್ದ ಗುಡಿಸಿಲಿನ ಹೊದಿಕೆ...ಒಳ್ಳೇ ಕಾಂಬಿನೇಶನ್ ಇತ್ತು.. ಅದೆಲ್ಲಿ?

ದಿನಕರ ಮೊಗೇರ said...

ಶಿವು ಸರ್,
ಕಾರ್ಯಕ್ರಮಕ್ಕೆ ಬರಲಾಗಲಿಲ್ಲ ಎನ್ನುವ ಬೇಸರ ಈಗಲೂ ಇದೆ.... ನಿಮ್ಮ ಲೇಖನ ಫೋಟೊ ನೋಡಿ ಖುಷಿಯಾಯಿತು..... ಪರಿಸರಕ್ಕಾಗಿ ತಮ್ಮ ಜೀವನ ಮುಡಿಪಾಗಿಟ್ಟಿರುವ ಈಶ್ವರ ಪ್ರಸಾದ್ ಥರದವರ ಜೊತೆ ಕೈ ಜೋಡಿಸಿದರೆ ನಮಗೂ ಆತ್ಮ ತ್ರಪ್ತಿ ದೊರೆಯುತ್ತದೆ..... ನೀವು ಈ ಕೆಲಸ ಮಾಡಿದ್ದರು ನಾನು ಮಾಡಿದ್ದಷ್ಟೆ ಖುಶಿ ನನಗಾಗುತ್ತಿದೆ..... ಮುಂದಿನ ಸಾರಿಯ ಸಸ್ಯವನಕ್ಕೆ ನನ್ನ ಕೊಡುಗೆ ಖಂಡಿತ ಇರುತ್ತದೆ ಸರ್........

ಹಳ್ಳಿ ಹುಡುಗ ತರುಣ್ said...

nice one sir... photos chenagi bandidde.... nimmellara parisara kalaji nijavaagiyu prashamshivanta kelasa...

Anonymous said...

ಶಿವು ಅವರೇ.. ಹೀಗೆಲ್ಲ ನೀವು ಹೋಗಿದ್ರೀ ಅಂತ ಗೊತ್ತೇ ಆಗ್ಲಿಲ್ಲ..ಒಂಥರ ಹೊಟ್ಟೆಕಿಚ್ಚು ಆಯ್ತು!
ಆದ್ರೆ ತುಂಬಾ ಚೆನ್ನಾಗಿ ಬರ್ದಿದೀರಾ..ಜೊತೆಗೆ ಅಷ್ಟೇ ಸುಂದರ ಫೋಟೋಸ್ ಕೂಡ!!..ಸ್ವತಹ ನೋಡಿದಂಗೆ ಆಯ್ತು ಬಿಡಿ. ಮುಂದಿನ ಸಲಕ್ಕೆ ನಂಗೂ ಹೇಳಕ್ಕೆ ಮರೀಬೇಡಿ!!

Narayan Bhat said...

ಚಿತ್ರ ಮತ್ತೆ ವಿವರಣೆ ಎಲ್ಲವೂ ಚೆನ್ನಾಗಿದೆ..ಖುಶಿಯಾಯ್ತು.

Dileep Hegde said...

ಶಿವಣ್ಣ..
ಬರಹ ಸಕತ್ ಆಗಿ ಬಂದಿದೆ.. ಎಲ್ಲ ಫೋಟೋಗಳೂ ಬೊಂಬಾಟ್..
ಮತ್ತೆ ನಾನು ಕ್ಯಾಮೆರಾ ಹಿಡಿದು ತುಂಬಾ ದಿನ ಆಗಿತ್ತು... ಆಲ್ಮೋಸ್ಟ್ 5 ತಿಂಗಳುಗಳ ನಂತರ ಈ ರೀತಿ ರಮ್ಯ ಪರಿಸರದಲ್ಲಿ ಕೈನಲ್ಲಿ ಕ್ಯಾಮೆರಾ ಇದ್ದಿದ್ದಕ್ಕೆ ಅಷ್ಟೊಂದು ಉತ್ಸುಕನಾಗಿ ಸಿಕ್ಕಿದ್ದನ್ನೆಲ್ಲಾ ಕ್ಲಿಕ್ಕಿಸುತ್ತಿದ್ದೆ..
ಕ್ಲಿಕ್ಕಿಸಿದ ಕೆಲವು ಫೋಟೋಗಳು ಖುಷಿ ಕೊಟ್ಟಿವೆ..

Manasa said...

SOOOOOOOOOOOPER .... ellaru tumbaa enjoy maadiddiraa... haage gida neduva (save planet) project kuda hammikondiddiri... Chitrakke takka lekhana, lekhanakke takka padagaLa jodaNe sogasaagide.... Thanks for sharing ShivaNNa :)

shivu.k said...

ನಾಗೇಶ್ ಹೆಗಡೆ ಹೀಗೆ ಪ್ರತಿಕ್ರಿಯಿಸುತ್ತಾರೆ.

ಪ್ರಿಯ ಶಿವೂ,
'ನಿಮ್ಮ ಸ್ಫೂರ್ತಿಯ ವನ' ಅಂತ ಹೇಳಬೇಡಿ. ಅದು ಈಗ ನಮ್ಮೆಲ್ಲರ ಸ್ಫೂರ್ತಿ ವನ ಆಗಿದೆ. ನೀವೆಲ್ಲ ಅಲ್ಲಿ ಹೋಗಿ ನಕ್ಕು ನಲಿದು ಗಿಡವನ್ನೂ ನೆಟ್ಟು ಬಂದು ನಮಗೆಲ್ಲ ಹೊಸ ಚೈತನ್ಯ ಕೊಟ್ಟಿದ್ದೀರಿ. ಈಶ್ವರ ಪ್ರಸಾದ ಇನ್ನು ಮೇಲೆ ಅತ್ತ ಇನ್ನೂ ಜಾಸ್ತಿ ಗಮನ ಕೊಡುತ್ತಾರೆ. ಅವರಿಗೆ ನಿಮ್ಮ ಸಹಕಾರ ಬೇಕು.
ನಿಮ್ಮ ವಿವರಣೆ ತುಂಬಾ ಚೆನ್ನಾಗಿದೆ. ಎಲ್ಲಿಂದ ಕಲಿತಿರೋ ಇಷ್ಟು ಚೆನ್ನಾಗಿ ಬರೆಯೋದನ್ನ. ನಿಮ್ಮ ಹೈಸ್ಕೂಲ್ ಕನ್ನಡ ಮೇಷ್ಟ್ರು ಯಾರು ಅನ್ನೋದನ್ನ ತಿಳಿಸಿ ನನಗೆ. ಅವರಿಗೊಂದು ಧನ್ಯವಾದ ಹೇಳಬೇಕು ಕನ್ನಡ ಮಾತೆಯ ಪರವಾಗಿ.
ಅಂದ ಹಾಗೆ ಗಂಡ ಹೆಂಡತಿ ಇಬ್ಬರ ಒಂದೇ ಜೋಡಿ ಇದ್ದಾಗ ಅವರು 'ದಂಪತಿ' ಅಷ್ಟೇ. 'ದಂಪತಿಗಳು ' ಅಲ್ಲ. ಎರಡು ಮತ್ತು ಇನ್ನೂ ಜಾಸ್ತಿ ಜೋಡಿ ಇದ್ದಾಗ ಮಾತ್ರ ಅಲ್ಲಿ 'ದಂಪತಿಗಳು' ಇರುತ್ತಾರೆ. ನಿಮ್ಮ ಬ್ಲಾಗಿಗರ ಕೂಟದ ವಿವರಣೆಯಲ್ಲಿ ಒಂದು ಬಾರಿ ಮಾತ್ರ ಸರಿಯಾಗಿ 'ದಂಪತಿಗಳು' ಎಂಬ ಪದ ಪ್ರಯೋಗ ಆಗಿದೆ.
ಪರವಾಗಿಲ್ಲ ಬಿಡಿ. ಅದೇನೂ ದೊಡ್ಡ ತಪ್ಪು ಅಲ್ಲ. ಟಿವಿ ವಾರ್ತೆಯಲ್ಲಿ ದಿನವೂ 'ಮುಖ್ಯ ಮಂತ್ರಿಗಳು' (ಎಷ್ಟು ಮುಖ್ಯ ಮಂತ್ರಿ ಇದ್ದಾರೋ ?) ಎಂದು ತಪ್ಪಾಗಿ ಹೇಳೋದು ನಮಗೆ ಸರಿಯೆಂದೇ ಅನಿಸುತ್ತದೆ ತಾನೇ? ನಾನು ನಿಮ್ಮ ಇಡೀ ಲೇಖನ ಓದಿದೆ ಅನ್ನೋದಕ್ಕೆ ಪ್ರೂಫ್ ಆಗಿ ಒಂದು 'ದಂಪತಿಗಳ' ಉದಾಹರಣೆ ಕೊಟ್ಟೆ ಅಷ್ಟೇ. ಚೆನ್ನಾಗಿ ಬರೆಯುತ್ತೀರಿ ಕೀಪಿಟಪ್.
ನಾಗೇಶ ಹೆಗಡೆ.

ಸಾಗರದಾಚೆಯ ಇಂಚರ said...

ಶಿವೂ ಸರ್

ಇದೆಲ್ಲ ನಾನು ಮಿಸ್ ಮಾಡಿಕೊಂಡೆ

ನಿಮ್ಮ ಬರಹ ಅಲ್ಲಿಗೆ ನಮ್ಮನ್ನು ಕರೆದುಕೊಂಡು ಹೋಯಿತು

PARAANJAPE K.N. said...

ತು೦ಬಾ ಚೆನ್ನಾಗಿದೆ, ಬರಹ ಮತ್ತು ಛಾಯಾಚಿತ್ರ. ನಿಮ್ಮೊಡನಿದ್ದ ನಾನು ಕಳೆದ ಅನುಭವ ಗಳನ್ನೂ ಮತ್ತೆ ಮೆಲುಕು ಹಾಕಿದೆ.

Ashok.V.Shetty, Kodlady said...

ಶಿವೂ ಸರ್,

ತಮ್ಮ ಖುಷಿಯ ಕ್ಷಣಗಳನ್ನು ನಮ್ಮೊಂದಿಗೆ ಹಂಚಿಕೊಂಡಿದ್ದಕ್ಕೆ ಧನ್ಯವಾದಗಳು.ನಿಮ್ಮ ಚಿತ್ರಗಳೆಲ್ಲಾ ಸೂಪರ್ ಸರ್ , ಓದಿ ಖುಷಿ ಆಯಿತು....

SSK said...

ಇದು ತುಂಬಾ ಮೋಸ , ಅನ್ಯಾಯ .......!
ಯಾಕ್ರೀ ಶಿವೂ ನಾನು ನಿಮಗೆಲ್ಲಾ ಒಂದೇ ದಿನಕ್ಕೆ ಬೇಸರವಾಗಿ ಬಿಟ್ಟೆನಾ ?
ಅದಕ್ಕೆ ನನಗೆ ಯಾವ ಸುಳಿವೂ ಕೊಡದೆ ನನ್ನ ಬಿಟ್ಟು ನೀವೆಲ್ಲಾ ಪಿಕ್ನಿಕ್ ಗೆ ಹೋಗಿ ಬಂದಿದ್ದೀರಾ.
ನಾನು ಏನು ಪಾಪ ಮಾಡಿದ್ದೆ? ನನ್ನ ನಂಬರ್ ಯಾರಿಗೂ ಕೊಟ್ಟಿಲ್ಲ ನಿಜ ಆದರೆ ನೀವು ಮುಂಚೆನೇ ಬ್ಲಾಗ್ನಲ್ಲಿ ಈ ವಿಷಯದ ಬಗ್ಗೆ
ತಿಳಿಸುತ್ತೀರಾ ಎಂದು ಕಾಯುತ್ತಾ ಇದ್ದೆ ......... :( :(

ಲೇಖನ ಮತ್ತು ಫೋಟೋಗಳು ತುಂಬಾ ಚೆನ್ನಾಗಿವೆ. ಅಲ್ಲಿ ಕಳೆದ ರಸ ಕ್ಷಣಗಳನ್ನು ಕಣ್ಣಿಗೆ ಕಟ್ಟುವಂತೆ ಬರೆದಿದ್ದೀರಿ.
ಸುಮನ ಅವರ ಹಾಗೆ ನನಗೂ ಹೊಟ್ಟೆಕಿಚ್ಚು ಬಂದಿದೆ ಇದಕ್ಕೆ ನೀವೇ ಕಾರಣ.

Pradeep said...

ಶಿವೂ ಅವರೇ! ತುಂಬಾ ಅಭಿನಂದನೆಗಳು. ಎಲ್ಲೆಡೆ ಮರ ಬೋಳಿಸುವ ಕಾರ್ಯ ನಡೆಯುತ್ತಿರುವಾಗ ನಿಮ್ಮೆಲ್ಲರ ವನಮಹೋತ್ಸವ ತುಂಬಾ ಸಂತೋಷದ ವಿಷಯ... ಚಿತ್ರಗಳು ಹಾಗೂ ಲೇಖನವೆರಡೂ ಚೆನ್ನಾಗಿವೆ... :)

ಸುಧೇಶ್ ಶೆಟ್ಟಿ said...

thumba chennagi enjoy maadidiri.. mumbai ge bandhu ivella miss maadikonde.... bengaloorige vaapaasu bandu bidona antha anisutta idhe :)

shivu.k said...

Badarinath palavalli ಸರ್,

ನನ್ನ ಬ್ಲಾಗಿಗೆ ಸ್ವಾಗತ.
ಫೋಟೊಗಳು ಮತ್ತು ಲೇಖನವನ್ನು ಮೆಚ್ಚಿದ್ದಕ್ಕೆ ಥ್ಯಾಂಕ್ಸ್...
ನಿಮಗೆ ಬಿಡುವು ಮಾಡಿಕೊಂಡು ಫೋನ್ ಮಾಡುತ್ತೇನೆ ಸರ್.

shivu.k said...

ಶಿವಪ್ರಕಾಶ್,

ರಿಪೋರ್ಟ್ ಇಷ್ಟಪಟ್ಟಿದ್ದಕ್ಕೆ ಥ್ಯಾಂಕ್ಸ್..

ಎಂಥ ಅಮಿಷಕ್ಕೂ ಬಲಿಯಾಗಿದೆ, ಗುಟ್ಟಾಗಿ ಹೇಳಿದರೂ ಒಪ್ಪದ ನೀವೆಂತ ಜಡ್ಜು! ಮತ್ತೆ ಮುಂದಿನ ಕಾರ್ಯಕ್ರಮಗಳಲ್ಲಿ ನಿಮಗೆ ಜಡ್ಜ್ ಆಗದಂತೆ ಮೊದಲು ನೋಡಿಕೊಳ್ಳಬೇಕು. ನಿಮ್ಮ ಬ್ರಹ್ಮಚಾರಿ ಪುಸ್ತಕದ ಎಫೆಕ್ಟ್ ನಿಮ್ಮನ್ನು ಎಲ್ಲರೂ ಅದೇ ರೀತಿ ಗುರುತಿಸುವಂತೆ ಮಾಡಿದೆ..

shivu.k said...

ದಿವ್ಯ,

ಥ್ಯಾಂಕ್ಸ್...

shivu.k said...

ನವೀನ್,

ಮತ್ತೆ ಸದ್ಯದಲ್ಲಿಯೇ ಹೋಗುವ ಅವಕಾಶ ಬರಬಹುದು. ಸಿದ್ದರಾಗಿರಿ...ಧನ್ಯವಾದಗಳು.

ಅನಂತ್ ರಾಜ್ said...

ಶಿವು ಸಾರ್...
ನಿಮ್ಮ ಚಿತ್ರಗಳೂ, ವಿವರಣೆಯೂ ಸೊಗಸಾಗಿವೆ...ಬ್ಲಾಗ ಸ್ನೇಹಿತರೆಲ್ಲ ಸೇರಿ ಸಸ್ಯ ನೆಟ್ಟು ವನ ಮಹೋತ್ಸವವನ್ನು ಮಾಡಿದ್ದು ತು೦ಬಾ ಸಂತೋಷದ ವಿಚಾರ.

ಅನ೦ತ್

ಮನಸಿನಮನೆಯವನು said...

ಹಾಗೇನೂ...

shivu.k said...

ಗುರು,

ನೀವು ಇಡೀ ಕಾರ್ಯಕ್ರಮದಲ್ಲಿ ಪರಿಪೂರ್ಣವಾಗಿ ಭಾಗವಹಿಸಿದ್ದರಿಂದ ನಿಮಗೆ ಎಲ್ಲವೂ ಇಷ್ಟವಾಗಿದೆ. ನೆನಪುಗಳನ್ನು ಮರುಕಳಿಸುವ ಆನಂದವೇ ಬೇರೆ ಅಲ್ಲವೇ...ಹೀಗೆ ನಮ್ಮ ಜೊತೆ ಬರುತ್ತಿರಿ...

ಧನ್ಯವಾದಗಳು.

shivu.k said...

ಚಂದ್ರು ಸರ್,

ಈ ಬಾರಿ ತಪ್ಪಿಸಿಕೊಂಡಿದ್ದಕ್ಕೆ ಬೇಸರಿಸಬೇಡಿ. ಮುಂದಿನ ಭಾಗಿ ಖಂಡಿತ ನಮ್ಮ ಜೊತೆ ಸೇರಿ...

ಧನ್ಯವಾದಗಳು.

shivu.k said...

ಶ್ರೀಧರ್ ಸರ್,

ಇದು ಕೊನೆಯ ಎರಡು ದಿನದಲ್ಲಿ ನಿಗದಿಯಾದ ಕಾರ್ಯಕ್ರಮ. ಮೊದಲು ಇದನ್ನು ಶುಕ್ರವಾರ ಬೆಳಿಗ್ಗೆ ಬಜ್‍ನಲ್ಲಿ ಹಾಕಲಾಯಿತು. ಮಧ್ಯಾಹ್ನದ ಹೊತ್ತಿಗೆ ಅನೇಕರು ಬರುವ ಉತ್ಸಾಹ ತೋರಿದರು. ಫೋನ್ ನಂಬರ್ ಕೊಟ್ಟರು. ಸಂಜೆವೇಳೆಗೆ ತೀರ್ಮಾನವಾಗಿಹೋಗಿತ್ತು. ಮುಂದಿನ ಭಾರಿ ಸ್ವಲ್ಪ ಬೇಗನೆ ಎಲ್ಲರಿಗೂ ತಿಳಿಸುತ್ತೇವೆ. ನೀವು ಖಂಡಿತ ನಮ್ಮ ಜೊತೆಯಾಗಬಹುದು..

ಚಿತ್ರಗಳು ಮತ್ತು ಲೇಖನವನ್ನು ಮೆಚ್ಚಿದ್ದಕ್ಕೆ ಧನ್ಯವಾದಗಳು.

shivu.k said...

ವಿ.ರಾ.ಹೆ.

ಥ್ಯಾಂಕ್ಸ್..

ನಮಗೂ ಇಂಥಹ ಕೆಲಸಗಳನ್ನು ಮಾಡಲು ಉತ್ಸಾಹವಿದೆ. ನಮ್ಮ ಹೃದಯವಂತ ಬ್ಲಾಗಿಗರು ಉತ್ಸಾಹ ತೋರಿದ್ದರಿಂದ ಇದೆಲ್ಲ ಸಾಧ್ಯವಾಯಿತು. ಸಸ್ಯವನ ತಿಪ್ಪಗೊಂಡನಹಳ್ಳಿ ಜಲಾಶಯದಲ್ಲಿದೆ. ಮತ್ತೆ ಒಂದಷ್ಟು ಅಲ್ಲಿಗೆ ಹೋಗಲು ಗಿಡನೆಡಲು ಕಾರ್ಯಕ್ರಮವನ್ನು ಹಾಕಿಕೊಂಡರೆ ನಾನು ಖಂಡಿತ ಎಲ್ಲ ವಿವರವನ್ನು ಕೊಡುತ್ತೇನೆ. ಅದಕ್ಕಾಗಿ ನನಗೆ ಫೋನ್ ಮಾಡಿದರೆ ಅಥವ ನಾಗೇಶ್ ಹೆಗಡೆಯವರಿಗೆ ಫೋನ್ ಮಾಡಿದರೆ ಪೂರ್ತಿ ವಿವರವನ್ನು ಕೊಡುತ್ತಾರೆ.

shivu.k said...

ಸಾಗರಿ,

ಚಿತ್ರಲೇಖನವನ್ನು ಇಷ್ಟಪಟ್ಟಿದ್ದಕ್ಕೆ ಧನ್ಯವಾದಗಳು. ಪುಸ್ತಕ ಬಿಡುಗಡೆ ವಿಚಾರಗಳನ್ನು ನಮ್ಮ ಗೆಳೆಯರ ಬ್ಲಾಗಿನಲ್ಲಿ ಓದಿತಿಳಿದುಕೊಂಡಿದ್ದೀರಿ..ಮತ್ತಷ್ಟು ವಿವರಗಳು ಮತ್ತು ತಮಾಷೆಗಳನ್ನು ನನ್ನ ಬ್ಲಾಗಿನಲ್ಲಿ ಹಾಕಿದ್ದೇನೆ. ಬಿಡುವು ಮಾಡಿಕೊಂಡು ಬನ್ನಿ..

ಧನ್ಯವಾದಗಳೂ.

shivu.k said...

ಪ್ರಶಾಂತ್,

ಇದೆಲ್ಲವೂ ಕೊನೆಗಳಿಗೆಯಲ್ಲಿ ಪ್ಲಾನ್ ಮಾಡಿದ್ದರಿಂದ ಹೆಚ್ಚು ಜನರಿಗೆ ತಿಳಿಸಲಾಗಲಿಲ್ಲ. ಮುಂದಿನ ಭಾರಿ ನಿಮಗೆ ಖಂಡಿತ ತಿಳಿಸುತ್ತೇವೆ.
ಧನ್ಯವಾದಗಳು.

shivu.k said...

ಮನಮುಕ್ತ,

ಥ್ಯಾಂಕ್ಸ್..

shivu.k said...

ಸೀತಾರಾಂ ಸರ್,

ನೀವು ಬರಲಿಲ್ಲವೆಂದು ಚಿಂತಿಸಬೇಡಿ. ನೀವು ಕಾರ್ಯಕ್ರಮದ ವಿವರಗಳನ್ನು ದೂರದಿಂದಲೇ ನಮ್ಮಿಂದ ತಿಳಿದುಕೊಳ್ಳುತ್ತಿದ್ದರಿಂದ ನಮ್ಮೊಂದಿಗೆ ಇದ್ದಂತೆ ಆಯಿತಲ್ಲವೇ..

ಇರಲಿ ಮುಂದಿನಭಾರಿ ಮುಂಚಿತವಾಗಿ ತಿಳಿಸುತ್ತೇವೆ.
ಚಿತ್ರಗಳು ಮತ್ತು ಲೇಖನವನ್ನು ಮೆಚ್ಚಿದ್ದಕ್ಕೆ ಧನ್ಯವಾದಗಳು.

shivu.k said...

Lahari,

ನಮ್ಮ ಕಾರ್ಯಕ್ರಮದಲ್ಲಿ ಎಲ್ಲವೂ ಪ್ಲಾನ್ ಮಾಡಿದಂತೆ ಚೆನ್ನಾಗಿ ಆಗಿತ್ತು. ಅದನ್ನು ಹಾಗೆ ನನ್ನ ಬ್ಲಾಗಿನಲ್ಲಿ ಹಾಕಿದ್ದೇನೆ. ಇದರಲ್ಲಿ ನಮ್ಮ ವಿಶೇಷವೇನು ಇಲ್ಲ. ಈಶ್ವರ ಪ್ರಸಾದ್ ನಿಜಕ್ಕೂ ಸಧ್ಯ ಪ್ರಾಕ್ಟಿಕಲ್ ಆಗಿ ಪರಿಸರವನ್ನು ಬೆಳೆಸುತ್ತಿದ್ದಾರೆ. ಅವರ ಜೊತೆ ನಾವೆಲ್ಲಾ ಕೈಜೋಡಿಸೋಣ. ನೀವು ಮುಂದಿನ ಭಾರಿ ಇಂಥಹ ಕಾರ್ಯಕ್ರಮಗಳಿಗೆ ನಮ್ಮ ಜೊತೆಗೂಡಿ. ಪರಿಸರಕ್ಕಾಗಿ ನಮ್ಮ ಅಳಿಲು ಸೇವೆಯನ್ನು ಮಾಡೋಣ...
ಚಿತ್ರಲೇಖನವನ್ನು ಮೆಚ್ಚಿದ್ದಕ್ಕೆ ಧನ್ಯವಾದಗಳು.

shivu.k said...

ಗುಬ್ಬಚ್ಚಿ ಸತೀಶ್,

ನಿಮ್ಮನ್ನು ನಮ್ಮ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಬೇಟಿಯಾದದ್ದು ನನಗೂ ಖುಷಿ. ಚಿತ್ರಲೇಖನವನ್ನು ಇಷ್ಟಪಟ್ಟಿದ್ದಕ್ಕೆ
ಥ್ಯಾಂಕ್ಸ್..

shivu.k said...

ಸುನಾಥ್ ಸರ್,

ಥ್ಯಾಂಕ್ಸ್.

shivu.k said...

ನಿಮ್ಮೊಳಗೊಬ್ಬ ಬಾಲು ಸರ್,

ನೀವು ನಮ್ಮ ಕಾರ್ಯಕ್ರಮಕ್ಕೆ ಜೊತೆಯಿರಲಿಲ್ಲವಾದರೂ ಮಾನಸಿಕವಾಗಿ ಅಲ್ಲಿಯೇ ಇದ್ದಿರಲ್ಲ...ಅದು ನಮಗೆ ಮೆಚ್ಚಿಗೆಯಾಗಿತ್ತು. ನಿಮ್ಮ ಹೆಸರಿನ ಗಿಡವನ್ನು ನಾವು ಈಶ್ವರಪ್ರಸಾದ್ ಕಡೆಯಿಂದಲೇ ನೆಡಿಸಿದೆವು. ನಿಮ್ಮ ಅಭಿಮಾನ ದೊಡ್ಡದು. ಮುಂದಿನ ಭಾರಿ ಇಂಥಹ ಕಾರ್ಯಕ್ರಮಗಳಿಗೆ ತಪ್ಪಿಸಿಕೊಳ್ಳಬೇಡಿ. ನಿಮ್ಮ ಪ್ರೋತ್ಸಾಹಕ್ಕೆ ಧನ್ಯವಾದಗಳು.

shivu.k said...

ಶ್ಯಾಮಲ ಮೇಡಮ್,

ನಮ್ಮ ಕಾರ್ಯಕ್ರಮದ ಸ್ವಲ್ಪ ಮಾತ್ರ ವಿವರಣೆಯನ್ನು ಇಲ್ಲಿಕೊಟ್ಟಿದ್ದೇನೆ. ಅದನ್ನು ಮೆಚ್ಚಿದ್ದಕ್ಕೆ ಥ್ಯಾಂಕ್ಸ್..ಹೀಗೆ ಬರುತ್ತಿರಿ..

shivu.k said...

ಡಾ.ಕೃಷ್ಣಮೂರ್ತಿ ಸರ್,

ನೀವು ದೂರದಲ್ಲಿದ್ದರೂ ನಮ್ಮೊಂದಿಗೆ ಎಲ್ಲ ಕೆಲಸಕ್ಕೂ ಪ್ರೋತ್ಸಾಹ ನೀಡುತ್ತಿದ್ದೀರಿ. ಅದಕ್ಕೆ ನಿಮಗೆ ಧನ್ಯವಾದಗಳು. ಮುಂದಿನ ಬಾರಿ ಜೊತೆಯಾಗಿ..

ಧನ್ಯವಾದಗಳು.

shivu.k said...

ವನಿತಾ,

ನೀವು ಬರುತ್ತಿರಾ ಅಂತ ಗೊತ್ತಾಗಿ ನಿಮಗೆ ಸೀಟು ಕಾದಿರಿಸಿದ್ದೆವು.[ತಮಾಷೆಗೆ] ನೀವು ನಮ್ಮ ಕಾರ್ಯಕ್ರಮದ ಚಿತ್ರಗಳು ಮತ್ತು ವಿವರಗಳನ್ನು ನೋಡಿ ಮೆಚ್ಚಿದ್ದಕ್ಕೆ ಥ್ಯಾಂಕ್ಸ್..

shivu.k said...

ಉಮೇಶ್ ಸರ್,

ನೀವು ಕೇಳಿದಂತೆ ವಸುದೇಶ್ ಫೋಟೊ ಹಾಕಿದ್ದೇನೆ. ಅದ್ರೆ ಹಿಂಭಾಗ ಗುಡಿಸಲಿರುವ ಚಿತ್ರವನ್ನು ನಾನು ತೆಗೆದಿಲ್ಲ.

shivu.k said...

ದಿನಕರ್ ಸರ್,

ನೀವು ಬೆಳಿಗ್ಗೆಯಿಂದಲೇ ನಮ್ಮ ಜೊತೆ ಫೋನಿನಲ್ಲಿ ಸಂಪರ್ಕದಲ್ಲಿದ್ದೂ ಪರೋಕ್ಷವಾಗಿ ಭಾಗವಹಿಸಿದ್ದೀರಿ. ಅದಕ್ಕೆ ಧನ್ಯವಾದಗಳು. ಈಶ್ವರ ಪ್ರಸಾದ್ ಬಗ್ಗೆ ಮುಂದೆ ಎಂದಾದರೂ ವಿವರವಾಗಿ ಬರೆಯಬೇಕು.ಅದಕ್ಕಾಗಿ ವಿವರವನ್ನು ಕಲೆಹಾಕುತ್ತಿದ್ದೇನೆ. ಮತ್ತೆ ಮುಂದಿನ ಭಾರಿ ನೀವು ನಮ್ಮೊಂದಿಗಿರುತ್ತೀರಿ ಎನ್ನುವ ನಂಬಿಕೆ ನನಗಿದೆ.

ಧನ್ಯವಾದಗಳು.

shivu.k said...

ಹಳ್ಳಿಹುಡುಗ ತರುಣ್,

ನಮ್ಮ ಪರಿಸರ ಕಾಳಜಿಯನ್ನು ಇಷ್ಟಪಟ್ಟಿದ್ದೀರಿ. ನೀವು ನಮ್ಮ ಜೊತೆ ಸೇರಿಕೊಳ್ಳಿ ಒಟ್ಟಾಗಿ ಅಳಿಲು ಸೇವೆಮಾಡೋಣ..

ಧನ್ಯವಾದಗಳೂ.

shivu.k said...

ಸುಮನಾ ಮೇಡಮ್,

ಖಂಡಿತ ಇದನ್ನು ರಹಸ್ಯವಾಗಿ ವ್ಯವಸ್ಥೆಮಾಡಿರಲಿಲ್ಲ. ಕೇವಲ ಎರಡು ದಿನದಲ್ಲಿ ತೀರ್ಮಾನಿಸಿದ್ದರಿಂದ ಎಲ್ಲರಿಗೂ ತಿಳಿಸಲಾಗಲಿಲ್ಲ. ಕೇವಲ ಬಜ್‍ನಲ್ಲಿ ಹಾಕಿ ಅದಕ್ಕೆ ಪ್ರತಿಕ್ರಿಯಿಸಿದವರಿಗೆ ಮಾತ್ರ ಗೊತ್ತಾಗಿದೆ. ನೀವೆಲ್ಲಾ ಇಷ್ಟೊಂದು ಉತ್ಸಾಹ ತೋರಿಸುತ್ತಿರುವುದು ನೋಡಿದರೆ ಮತ್ತೊಂದು ಬಾರಿ ಎಲ್ಲರಿಗೂ ತಿಳಿಸಿ ದೊಡ್ಡ ಪ್ರಮಾಣದಲ್ಲಿ ದೊಡ್ದ ಕಾರ್ಯಕ್ರಮವನ್ನು ಏಕೆ ಹಮ್ಮಿಕೊಳ್ಳಬಾರದು ಎನಿಸುತ್ತದೆ. ಆಗ ಮೊದಲು ನಿಮಗೆ ತಿಳಿಸುತ್ತೇವೆ. ಬಹುಷಃ ಇದರಿಂದ ನಿಮ್ಮ ಕೋಪ ಕಡಿಮೆಯಾಗಬಹುದು ಅಂದುಕೊಳ್ಳುತ್ತೇನೆ..
ಧನ್ಯವಾದಗಳು.

shivu.k said...

ನಾರಾಯಣ ಭಟ್ ಸರ್,
ನಿಮ್ಮನ್ನು ನಮ್ಮ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಬೇಟಿಯಾಗಿದ್ದು ಖುಷಿ.
ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು.

shivu.k said...

ದಿಲೀಪ್,
ಫೋಟೊಗ್ರಫಿ ಮೆಚ್ಚಿದ್ದಕ್ಕೆ ಥ್ಯಾಂಕ್ಸ್. ನೀವು ನಿಮ್ಮ ಕೆಲಸದ ನಡುವೆ ಬಿಡುವು ಮಾಡಿಕೊಂಡು ಇಂಥ ಕಾರ್ಯಕ್ರಮದಲ್ಲಿ ಭಾಗವಹಿಸುವುದು ನಮಗೂ ಮತ್ತಷ್ಟು ಉತ್ಸಾಹ ಬರುತ್ತದೆ. ನೀವು ಚೆನ್ನಾಗಿ ಭಾಗವಹಿಸಿದ್ದೀರಿ. ಅದಕ್ಕೆ ಥ್ಯಾಂಕ್ಸ್..

shivu.k said...

ಮಾನಸ ಮೇಡಮ್,

ನಮ್ಮ ಕಾರ್ಯಕ್ರಮವನ್ನು ಇಷ್ಟಪಟ್ಟಿದ್ದಕ್ಕೆ ಥ್ಯಾಂಕ್ಸ್.

ಕಳೆದ ತಿಂಗಳು ಅಜಾದ್ ಜೊತೆ ನಾನಿದ್ದಾಗ ನೀವು ಆಜಾದ್‍ಗೆ ಫೋನ್ ಮಾಡಿದಾಗ ನಾನು ನಿಮ್ಮೊಂದಿಗೆ ಮಾತಾಡಿದ್ದೆ. ನೀವು ಖುಷಿಯಾಗಿ ಮಾತಾಡಿದ್ದು ನನಗೂ ಖುಷಿಯಾಗಿತ್ತು. ಅಷ್ಟು ದೂರದ ದೇಶದಲ್ಲಿದ್ದೂ ನಮ್ಮನ್ನೆಲ್ಲಾ ಪ್ರೋತ್ಸಾಹಿಸುತ್ತಿರುವುದಕ್ಕೆ ಧನ್ಯವಾದಗಳು.

shivu.k said...

ನಾಗೇಶ್ ಹೆಗಡೆ ಸರ್,

ನಿಮ್ಮ ಪ್ರೋತ್ಸಾಹವೇ ಇದಕ್ಕೆಲ್ಲಾ ಕಾರಣ. ನೀವೊಂಥರ ನಮಗೆ ಗುರುಗಳು. ಮತ್ತೆ ನೀವು ಹೇಳಿದ ತಪ್ಪುಗಳನ್ನು ಮುಂದೆ ಖಂಡಿತ ತಿದ್ದಿಕೊಳ್ಳುತ್ತೇನೆ. ಮತ್ತೆ ನಾವು ಇನ್ನು ಮುಂದೆ ಈಶ್ವರ ಪ್ರಸಾದ್ ಜೊತೆ ಸಹಕರಿಸುತ್ತೇವೆ.
ಸಧ್ಯದಲ್ಲೇ ನಮ್ಮ ಕಾರ್ಯಕ್ರಮವನ್ನು ನೋಡಿ ಮತ್ತೊಂದು ಹೋಮಿಯೋಪತಿ ಡಾಕ್ಟರುಗಳು ಮತ್ತು ಗೆಳೆಯರು ಅಲ್ಲಿ ಔಷದೀಯ ಗಿಡಗಳನ್ನು ನೆಡುವ ಪ್ಲಾನ್ ಮಾಡುತ್ತಿದ್ದಾರೆ. ಅದರ ವಿವರಗಳನ್ನು ಸಧ್ಯದಲ್ಲಿಯೇ ನಿಮಗೆ ತಿಳಿಸುತ್ತೇನೆ.
ನಿಮ್ಮ ಪ್ರೋತ್ಸಾಹ ಹೀಗೆ ಇರಲಿ..

ಧನ್ಯವಾದಗಳು.

shivu.k said...

ಗುರುಮೂರ್ತಿ ಹೆಗಡೆ ಸರ್,

ನೀವು ದೂರದಲ್ಲಿದ್ದೂ ನಮ್ಮನ್ನೆಲ್ಲ ಪ್ರೋತ್ಸಾಹಿಸುವುದು ನಮಗೆಲ್ಲಾ ಖುಷಿ ವಿಚಾರ ಧನ್ಯವಾದಗಳು.

shivu.k said...

ಪರಂಜಪೆ ಸರ್,

ನೀವು ನಮ್ಮೊಂದಿಗೆ ಅಲ್ಲಿ ಕಳೆದ ಕ್ಷಣಗಳು ನಿಜಕ್ಕೂ ಸ್ಮರಣೀಯ..

ಧನ್ಯವಾದಗಳು.

shivu.k said...

Ashok odlady ಸರ್,

ನೀವು ದೂರದ ಮುಂಬೈನಿಂದ ನಮ್ಮ ಪುಸ್ತಕ ಬಿಡುಗಡೆ ಕಾರ್ಯಕ್ರಮಕ್ಕೆ ಬಂದು ಪೂರ್ತಿ ಭಾಗವಹಿಸಿದ್ದೂ ನಮಗಂತೂ ಮರೆಯಲಾಗದ ವಿಚಾರ. ಚಿತ್ರ ಲೇಖನವನ್ನು ಮೆಚ್ಚಿದ್ದಕ್ಕೆ ಥ್ಯಾಂಕ್ಸ್..

shivu.k said...

SSK ಮೇಡಮ್,

ನೀವು ನಮ್ಮ ಮೇಲೆ ಸಿಟ್ಟುಮಾಡಿಕೊಳ್ಳಬೇಡಿ. ನೀವು ನಮ್ಮಪುಸ್ತಕಬಿಡುಗಡೆ ಕಾರ್ಯಕ್ರಮದಲ್ಲಿ ಕೊನೆಯವರೆಗೂ ಇದ್ದವರು. ನಿಮ್ಮನ್ನು ಬಿಟ್ಟು ಹೋಗಬೇಕೆನ್ನುವ ಭಾವನೆ ನಮಗಿಲ್ಲ. ಮತ್ತೆ ನಿಮ್ಮ ಜೊತೆ ನಮಗೆ ಖಂಡಿತ ಬೇಸರವಿಲ್ಲ. ಇದೆಲ್ಲಾ ಕೇವಲ ಅಸಮರ್ಪಕ ಸಂಪರ್ಕಗಳಿಂದ ಆಗಿರುವ ತಪ್ಪುಗಳು. ಮುಂದಿನ ಭಾರಿ ಇದನ್ನು ಎಲ್ಲವನ್ನು ಮೊದಲೇ ತಿಳಿಸುತ್ತೇವೆ. ಸಾಧ್ಯವಾದರೆ ನನಗೆ ನಿಮ್ಮ ಫೋನ್ ನಂಬರ್ ಕೊಟ್ಟುಬಿಡಿ. ನನ್ನ ಫೋನ್ ನಂಬರ್ ನನ್ನ ಅಹ್ವಾನ ಪತ್ರಿಕೆಯಲ್ಲಿದೆ. ಅದಕ್ಕೆ ಮಾಡಿ. ನಿಮ್ಮ ನಂಬರನ್ನು ಸೇವ್ ಮಾಡಿಕೊಳ್ಳುತ್ತೇನೆ. ಎಲ್ಲ ಕಾರ್ಯಕ್ರಮಗಳಿಗೆ ಮೊದಲೇ ತಿಳಿಸುತ್ತೇನೆ...

ಚಿತ್ರಲೇಖನವನ್ನು ಇಷ್ಟಪಟ್ಟಿದ್ದಕ್ಕೆ ಥ್ಯಾಂಕ್ಸ್..

shivu.k said...

ಪ್ರದೀಪ್ ಸರ್,

ನೀವು ಹೇಳುತ್ತಿರುವುದು ನಿಜ. ಎಲ್ಲಡೆ ಹಾಗೆ ಆಗುತ್ತಿದೆ. ಅದಕ್ಕಾಗಿ ಇದು ನಮ್ಮ ಅಳಿಲು ಸೇವೆ.
ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು.

shivu.k said...

ಸುಧೇಶ್,

ನಾವು ಖಂಡಿತ ಇಡೀ ಕಾರ್ಯಕ್ರಮವನ್ನು ಆನಂದಿಸಿದ್ದೇವೆ. ಮುಂದಿನ ಭಾರಿ ಮೊದಲೇ ತಿಳಿಸುತ್ತೇನೆ. ಅಲ್ಲಿಂದ ಬಂದು ಭಾಗವಹಿಸಿ..ಪ್ರತಿಕ್ರಿಯೆಗೆ ಧನ್ಯವಾದಗಳು.

shivu.k said...

ಅನಂತ್‍ರಾಜ್ ಸರ್,

ಇದು ನಮ್ಮಕಡೆಯಿಂದ ಒಂದು ಅಳಿಲು ಸೇವೆ ಅನ್ನುವುದಕ್ಕಿಂತ ನಾವೆಲ್ಲ ಒಂದು ಕಡೆ ಸೇರುವ ನೆಪವಷ್ಟೆ. ಇದು ಇಷ್ಟು ಚೆನ್ನಾಗಿ ಆಗುತ್ತದೆ ಎನ್ನುವುದು ನಮಗೂ ಗೊತ್ತಿರಲಿಲ್ಲ.
ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು.

shivu.k said...

ಶಿವಶಂಕರ್ ಯಳವತ್ತಿ,

ಮುಂದಿನ ಬಾರಿ ತಪ್ಪಿಸಿಕೊಳ್ಳಬೇಡಿ.

shivu.k said...

ಕತ್ತಲೆ ಮನೆ..

ಹೌದು..

ದೀಪಸ್ಮಿತಾ said...

ಛೇ, ನನಗೆ ಅಸೂಯೆ ಆಗುತ್ತಿದೆ. ಬ್ಲಾಗಿಗರ ಕೂಟ ಮತ್ತು ಈ ಪಿಕ್‍ನಿಕ್ ಎರಡನ್ನೂ ಅನಿವಾರ್ಯ ಕಾರಣಗಳಿಂದ ಬರಲಾಗಲಿಲ್ಲ. ಮುಂದೆ ಇಂಥ ಕಾರ್ಯಕ್ರಮ ಇದ್ದರೆ ದಯವಿಟ್ಟು ತಿಳಿಸಿ, ಬರಲು ಖಂಡಿತ ಪ್ರಯತ್ನಿಸುವೆ

shivu.k said...

ಕುಲದೀಪ್ ಸರ್,

ಬೇಸರಿಸಬೇಡಿ. ಮುಂದಿನಭಾರಿ ಖಂಡಿತ ಹೇಳುತ್ತೇನೆ. ಬನ್ನಿ.

*ಚುಕ್ಕಿ* said...

ಶಿವೂ ಜಿ ನಮಸ್ತೆ, ನಿಮ್ಮ ಕಾರ್ಯಕ್ರಮದ ಅರ್ಥಪೂರ್ಣತೆ, ಜೊತೆ ಸೇರಿದ ಗೆಳೆಯರ ಸಂತಸ , ನಿಮ್ಮ ನಿರೂಪಣೆ ಎಲ್ಲಾ ನನ್ನಲ್ಲಿ ಹೊಟ್ಟೆ ಕಿಚ್ಚು ಮೂಡಿಸಿದೆ . ನಿಜಕ್ಕೂ ಸುಂದರವಾದ ಸ್ಮರಣೀಯ ಅನುಭವಗಳನ್ನು ಕಟ್ಟಿ ಕೊಟ್ಟಿದ್ದೀರ. ನಾನೂ ಕೂಡ ಅಲ್ಲಿ ಪಾಲ್ಗೊಲ್ಲಬಾರದಿತ್ತ ಅನಿಸಿಬಿಡ್ತು. ನಿಮ್ಮ ಬಗ್ಗೆ ತಿಳಿದಿದ್ದೆ. ಇದೆ ಮೊದಲ ಭಾರಿ ಬ್ಲಾಗ್ ಗೆ ಬಂದದ್ದು. ನಿಜಕ್ಕೂ ಕುಶಿಯಾಯಿತು.

ಒಮ್ಮೆ ನನ್ನ ಬ್ಲಾಗ್ ಗಳ ಕಡೆ ಕಣ್ಣು ಹಾಯಿಸಿ..

http://lingeshhunsur.blogspot.com
http://chukkisamsthe.blogspot.com
http://kannadaspardayodharu.blogspot.com
http://vishwamuki.blogspot.com
http://maduramaitri.blogspot.com
http://bittuhodavaligonduthanks.blogspot.com

ಪ್ರೀತಿಯಿರಲಿ...

ಲಿಂಗೆಶ್ ಹುಣಸೂರು..
ಬಿಂದುವಿನಿಂದ ಅನಂತದೆಡೆಗೆ......