Saturday, August 14, 2010

  
 ನಲ್ಮೆಯ ಗೆಳೆಯರೆ,


ಡಾ.ಆಜಾದ್‍ರವರ "ಜಲನಯನ" ಮತ್ತು ನನ್ನ "ಗುಬ್ಬಿ ಎಂಜಲು" ಪುಸ್ತಕಗಳ ಲೋಕಾರ್ಪಣೆ ಕಾರ್ಯಕ್ರಮಕ್ಕೆ  ನೀವೆಲ್ಲಾ ನಮ್ಮೊಟ್ಟಿಗಿದ್ದರೆ ಚೆನ್ನ.  ಇದೆ ನೆಪದಲ್ಲಿ ನಾವೆಲ್ಲಾ ಸೇರೋಣ. ಆನಂದಿಸೋಣ ಬನ್ನಿ.



  ನನ್ನ ಪುಸ್ತಕಕ್ಕೆ "ಗುಬ್ಬಿ ಎಂಜಲು" ಎನ್ನುವ ಹೆಸರು ಇಟ್ಟ ಕಾರಣವನ್ನು ಆನೇಕರು ಕೇಳಿದ್ದಾರೆ.   ಹೆಸರಿಗೊಂದು ಕತೆ ಇರಲೇಬೇಕಲ್ವ,  ಅದಕ್ಕಾಗಿ ನಾನು ಪುಸ್ತಕದಲ್ಲಿ ಬರೆದ ಲೇಖಕನ ಮಾತು ಕೂಡ ಒಂದು ಪುಟ್ಟ ಕತೆಯಾಗಿದೆ.  ಅದನ್ನು  ನಿಮ್ಮೊಂದಿಗೆ ಹಂಚಿಕೊಳ್ಳುತ್ತಿದ್ದೇನೆ.   




  ಶಿಶುವಿಹಾರ ಬಿಟ್ಟ ಕೂಡಲೇ ಓಡಿ ಬರುತ್ತಿದ್ದ ನನಗಾಗಿ ಕಾಯುತ್ತಿದ್ದಳು ನನ್ನ ತಂಗಿ. ಅವಳನ್ನು ನಾನು ಮನೆಯ ಹತ್ತಿರವಿರುವ ಅಂಗಡಿಗೆ ಕರೆದುಕೊಂಡು ಹೋಗಿ ಕಂಬಾರ್‍ಕಟ್ ಕೊಡಿಸಬೇಕೆಂದು ತನ್ನ ಪುಟ್ಟ ಅಂಗೈನಲ್ಲಿ ಐದು ಪೈಸೆಯಿಟ್ಟುಕೊಂಡು ಕಾಯುತ್ತಿರುತ್ತಿದ್ದಳು. ಪೈಸೆಗೊಂದರಂತೆ ಸಿಗುತ್ತಿದ್ದ ಅದು ನಮಗಿಬ್ಬರಿಗೂ ಇಷ್ಟವಾದ ತಿಂಡಿ. ಈಗಿನ ಒಂದು ರೂಪಾಯಿಯ ನಾಲ್ಕು ನಾಣ್ಯಗಳನ್ನು ಒಂದರ ಮೇಲೊಂದರಂತೆ ಜೋಡಿಸಿದಾಗ ಸಿಗುವ ಗಾತ್ರದಲ್ಲಿರುತ್ತಿತ್ತು.  ಬೆಲ್ಲದ ಪಾಕ, ಇನ್ನಿತರ ವಸ್ತುಗಳನ್ನು ಹಾಕಿ ತಯಾರಿಸುತ್ತಿದ್ದ ಅದಕ್ಕೆ ಒಂದು ಪುಟ್ಟ ಪ್ಲಾಸ್ಟಿಕ್ ಪೇಪರನ್ನು ಈಗಿನ ಚಾಕಲೇಟಿನಂತೆ ಸುತ್ತಿರುತ್ತಿದ್ದರು.  ಬಹುಶಃ ಆಗ ಚಾಕಲೇಟು ಇತ್ತೋ ಇಲ್ಲವೋ ಗೊತ್ತಿಲ್ಲ. ಅದ್ರೆ ಅದರ ಮೊದಲ ರೂಪ ಇದೇ ಇದ್ದಿರಬಹುದಾ ಅಂತ ನನಗೆ ಈಗ ಅನ್ನಿಸುತ್ತಿದೆ.  ಐದು ಪೈಸೆಗೆ ಐದು ಕಂಬಾರ್‍ಕಟನ್ನು ನನ್ನ ಕೈಲಿ ಕೊಡುತ್ತಿದ್ದಂತೆ ಒಂದನ್ನು ನನ್ನ ತಂಗಿಗೆ ಗೊತ್ತಾಗದ ಹಾಗೆ ಚಡ್ಡಿ ಜೇಬಿಗೆ ಹಾಕಿಕೊಂಡು ಉಳಿದ ನಾಲ್ಕನ್ನು ಅವಳ ಕೈಗೆ ಕೊಡುತ್ತಿದ್ದೆ. ಮೂರನ್ನು ತನ್ನ ಬಲಗೈನಲ್ಲಿ ಇಟ್ಟುಕೊಂಡು ಒಂದನ್ನು ನನಗಾಗಿ ಕೊಡುತ್ತಿದ್ದಳು.  ಅವಳನ್ನು ಅಂಗಡಿಗೆ ಕರೆದುಕೊಂಡು ಬಂದಿದ್ದಕ್ಕೆ ಬಕ್ಷೀಸಾಗಿ ಒಂದು ಕಂಬರ‍ಕಟ್ಟು ಸಿಕ್ಕಿತ್ತಲ್ಲ ಆಂತ ನಾನು ಖುಷಿಪಡುವಂತಿರಲಿಲ್ಲ. ಏಕೆಂದರೆ ಅವಳಿಗೆ ಅದರಲ್ಲಿ ಅರ್ಧ ನಾನು ಹಲ್ಲಿನಲ್ಲಿ ಕಚ್ಚಿ ತುಂಡು ಮಾಡಿ ಇನ್ನರ್ಧವನ್ನು ವಾಪಸ್ಸು ಅವಳಿಗೇ ಕೊಡಬೇಕಿತ್ತು. ಅಂಗಡಿಗೆ ಕರೆದುಕೊಂಡುಬಂದಿದ್ದಕ್ಕೆ ನನ್ನ ಬಕ್ಷೀಸು ಅರ್ಧ ಮಾತ್ರ. ಮತ್ತೆ ಪ್ಲಾಸ್ಟಿಕ್ ಕವರನ್ನು ಬಿಚ್ಚಿ ಹಾಗೆ ಹಲ್ಲಿನಲ್ಲಿ ನಾನು ಕಡಿಯುವಂತಿರಲಿಲ್ಲ. ಹಾಗೆ ನೇರವಾಗಿ  ಕಡಿದರೆ ಎಂಜಲಾಗುತ್ತದೆ ಅಂತ ಅದನ್ನು ಗುಬ್ಬಿ ಎಂಜಲು ಮಾಡಬೇಕಿತ್ತು.  ಗುಬ್ಬಿ ಎಂಜಿಲು ಎಂದರೆ ನಾನು ಹಾಕಿದ ಅಂಗಿಬಟ್ಟೆಯ ಒಳಗೆ ಅವಳು ಕೊಟ್ಟ ಕಂಬಾರ್‍ಕಟ್ಟನ್ನು ಅದೇ ಚಾಕಲೇಟುವಿನಂತೆ ಅಂಗಿಬಟ್ಟೆಯಲ್ಲಿ ಸುತ್ತಿ ನಂತರ ಹಲ್ಲಿನಲ್ಲಿ ಕಚ್ಚಿ ಎರಡು ತುಂಡುಗಳನ್ನು ಮಾಡಿ ಅದರಲ್ಲಿ ಒಂದನ್ನು ಅವಳು ಮತ್ತೆ ಎತ್ತಿ ಬಾಯಿಗೆ ಹಾಕಿಕೊಂಡ ಮೇಲೆ ನಾನು ಉಳಿದರ್ಧ ತುಂಡನ್ನು ತಿನ್ನಬೇಕಿತ್ತು.


 ಅಮೇಲೆ ಇದೇ ಕಂಬಾರ್‍ಕಟ್ಟು ಐದು ಪೈಸೆಗೆ ಒಂದು, ಹತ್ತು ಪೈಸೆಗೆ ಒಂದು ಅಂತ ಬೆಲೆ ಹೆಚ್ಚಾಗಿ ಅಮೇಲೆ ನಿದಾನವಾಗಿ ಮರೆಯಾಗಿಬಿಟ್ಟಿತ್ತು. ಬಹುಶಃ ಚಾಕಲೇಟ್ ಅದರ ಜಾಗವನ್ನು ಆಕ್ರಮಿಸಿಬಿಟ್ಟಿತ್ತೇನೋ. ಈಗ ಹಳ್ಳಿಗಳಲ್ಲೂ  ಸಿಗುತ್ತದೊ ಇಲ್ಲವೋ ಗೊತ್ತಿಲ್ಲ. ಅದರ ರುಚಿಯ ಸ್ವಾದದ ಸಂಭ್ರಮವೇ ಬೇರೆ. ಗುಬ್ಬಿ ಎಂಜಲು ಮಾಡಿ ಹಂಚಿಕೊಳ್ಳುವ ಆನಂದವೇ ಬೇರೆ.  ಸಿಕ್ಕುವ ತಿಂಡಿಯನ್ನು ಹಂಚಿಕೊಂಡು ತಿನ್ನಬೇಕೆನ್ನುವ ಆಸೆಯಿದ್ದರೂ ಹಲ್ಲಿನಲ್ಲಿ ಕಚ್ಚಿ ಎಂಜಲು ಮಾಡಬಾರದು, ಬೇಕಾದರೆ ಹೀಗೆ ಕಚ್ಚಿ ತುಂಡುಮಾಡಿ ಕೊಡಬಹುದು ಅಂತ ನನ್ನ ಅಜ್ಜಿ ತನ್ನ ಸೆರಗಿನೊಳಗಿಟ್ಟು ಮಾಡಿ ತೋರಿಸಿದಾಗ ಅದನ್ನೇ ನಾವಿಬ್ಬರೂ ಅನುಸರಿಸುತ್ತಿದ್ದವು.  ಇನ್ನು ನಾವು ಗೆಳೆಯರೆಲ್ಲಾ ಕೂಡಿ ತಿಂಡಿ ಹಂಚಿಕೊಳ್ಳುವಾಗ ಹೀಗೆ ಮಾಡಬೇಕಿತ್ತು. ಬಹುಶಃ ನನ್ನ ಗೆಳೆಯರ ಅಜ್ಜಿಯರು ಹೀಗೆ ಅವರಿಗೂ ಹೇಳಿಕೊಟ್ಟಿರಬೇಕೆಂದು ನನಗೆ ಅನಿಸುತ್ತದೆ. ಹಾಗಾದರೆ ನನ್ನ ಅಜ್ಜಿ ಮತ್ತು ಆಕೆಯ ಗೆಳತಿಯರು ಅವರ ಬಾಲ್ಯದಲ್ಲಿ ತಿಂಡಿಯನ್ನು ಹೀಗೆ ಗುಬ್ಬಿ ಎಂಜಲು ಮಾಡಿ ಹಂಚಿಕೊಂಡಿರಬಹುದಲ್ಲವೇ ಅಂತ ನನಗೆ ಅನ್ನಿಸಿದ್ದು ಸಹಜ.  


ಆಗ ಬಡವ ಶ್ರೀಮಂತ ಎನ್ನುವ ಭೇದ ಭಾವವಿರಲಿಲ್ಲ. ನಾವೆಲ್ಲಾ ಪುಟ್ಟ ಗೆಳೆಯರು ಒಟ್ಟಾಗಿ ಸೇರಿ ಆಡುತ್ತಿದ್ದೆವು. ಆಗ ನಮ್ಮ ಮನೆಗೆ ನನ್ನ ಗೆಳೆಯರು ಬಂದಾಗ ಎಲ್ಲರಿಗೂ ಅಮ್ಮ ತಿಂಡಿ ಕೊಡುತ್ತಿದ್ದಳು. ಹಾಗೆ ಅವರ ಮನೆಗೆ ಹೋದಾಗಲು ಅವರ ಅಮ್ಮಂದಿರಿಂದ ನಮಗೆಲ್ಲಾ ತಿಂಡಿ ತಿನಿಸುಗಳು ಸಿಗುತ್ತಿತ್ತು.  ಹೀಗಿನಂತೆ ಒಬ್ಬರ ಮನೆಯ ಮಕ್ಕಳು ಎದುರು ಮನೆಯ ಮಕ್ಕಳ ಜೊತೆ ಸೇರದಂತೆ ಬಾಗಿಲು ಹಾಕಿಕೊಳ್ಳುತ್ತಿರಲಿಲ್ಲ. ತೆರೆದ ಬಾಗಿಲುಗಳ ನಡುವೆ ನಾವೆಲ್ಲಾ ಓಡಾಡಿ ಆಡುತ್ತಿದ್ದೆವು. ನಮಗೆ ಸಿಗುವ ತಿಂಡಿಗಳನ್ನು ಹೀಗೆ ಹಂಚಿಕೊಂಡು ತಿನ್ನುತ್ತಿದ್ದೆವು. ಈ ಗುಬ್ಬಿ ಎಂಜಲು ಎನ್ನುವುದು ನಮಗೆಲ್ಲಾ ತಮಾಷೆ. ಆದರೆ ಅದಕ್ಕೆ ಅರ್ಥಪೂರ್ಣವಾದ ಭಾವವಿದೆ.  ಯಾವುದೇ ತಿನಿಸನ್ನು ಹಂಚಿಕೊಳ್ಳಬೇಕಾದರೂ ಹೀಗೆ ಗುಬ್ಬಿ ಎಂಜಲು ಮಾಡಿ ಕೊಡುವಾಗ ಅದರ ಸಿಹಿಯನ್ನು ಸವಿಯನ್ನು ಆ ಕ್ಷಣದ ಆನಂದವನ್ನು ಅನುಭವಿಸುತ್ತಾ ಹಂಚಿಕೊಳ್ಳಬೇಕೆನ್ನುವ ಮುಗ್ದ ಮನಸ್ಸಿತ್ತು. ಹಾಗೆ ಅದನ್ನು ಪಡೆದುಕೊಳ್ಳುವವನಿಗೂ ಇಷ್ಟಪಟ್ಟು ಸ್ವೀಕರಿಸಿ ತಿಂದು ಸಂಭ್ರಮಿಸುವ ಆಸೆಯಿತ್ತು.  


ಈ ಪುಸ್ತಕದಲ್ಲಿ ಇರುವ ಒಂದೊಂದು ಬರಹಗಳನ್ನು ಓದುವಾಗಲು ಮಗುವಿನಂತೆ ಮುಗ್ದವಾಗಿ ನಕ್ಕುಬಿಡಬಹುದು,  ಬುದ್ಧಿವಂತರಂತೆ  ಮುಗುಳ್ನಗು ಚಿಮ್ಮಿಸುತ್ತಾ ಮುಂದೆ ಸಾಗಬಹುದು, ಕೆಲವೊಮ್ಮೆ ಗಹಗಹಿಸಿ ನಕ್ಕು ಗೆಳೆಯರೊಂದಿಗೆ, ಹೆಂಡತಿಯೊಂದಿಗೆ, ಮಕ್ಕಳೊಂದಿಗೆ ಹಂಚಿಕೊಳ್ಳಬಹುದು, ಓದುತ್ತಾ ಕೆಲವೊಂದು ಲೇಖನಗಳಿಂದ ವಿಷಾಧ ಭಾವನೆಗಳು ತುಂಬಿ ಮೌನವಾಗಲೂ ಬಹುದು.  

  ಇದನ್ನು ಹೀಗೆ ಗುಬ್ಬಿ ಎಂಜಲು ಮಾಡುತ್ತಾ ಅದರ ಸವಿಯನ್ನು ಸವಿಯುತ್ತಾ ನಿಮ್ಮೊಂದಿಗೆ ಹಂಚಿಕೊಳ್ಳುತ್ತಿದ್ದೇನೆ. ನೀವು ಹಾಗೆ ಮುಗ್ದ ಭಾವನೆಯಿಂದ ನನ್ನ ಪುಸ್ತಕವನ್ನು ಸ್ವೀಕರಿಸುತ್ತೀರೆಂದು ಭಾವಿಸುತ್ತೇನೆ.



ವಿಶೇಷ ಸೂಚನೆನಮ್ಮ ಕಾರ್ಯಕ್ರಮದ ನಂತರ ನಾವು ಕೈಗೊಳ್ಳಬೇಕೆಂದುಕೊಂಡಿದ್ದ ಬ್ಲಾಗಿಗರ ಸಮಾವೇಶದ ಬಗ್ಗೆ ಹಿರಿಯ ಬ್ಲಾಗಿಗರ ಜೊತೆ ನಾವೆಲ್ಲ ಸೇರಿ ಒಂದು ವಿಚಾರ ಮಂಥನದ ಕಾರ್ಯಕ್ರಮದ ಯೋಚನೆಯನ್ನೂ ನಮ್ಮ ಹಿರಿಯ ಬ್ಲಾಗಿಗಳು ಹೊಂದಿದ್ದಾರೆ. ಇದನ್ನು ಗಮನದಲ್ಲಿಟ್ಟು ಹೆಚ್ಚು ಹೆಚ್ಚು ಬ್ಲಾಗಿಗರು ಕಾರ್ಯಕ್ರಮಕ್ಕೆ ಆಗಮಿಸಬೇಕಾಗಿ ಕೋರಿಕೆ.

ಪ್ರೀತಿಯಿಂದ
ಶಿವು.ಕೆ.


39 comments:

Nivedita Thadani said...

ಶಿವೂ ಸರ್

ಮನಪೂರ್ವಕ ಅಭಿನಂದನೆಗಳು
ನಿಮ್ಮ ಗುಬ್ಬಿ ಎಂಜಲು ಕಥೆ ನನ್ನ ಬಾಲ್ಯದ ನೆನಪನ್ನು ತಂದಿತು. ಕಂಬಾರ್‍ಕಟ್ಟು ನನ್ನ ಅಥವಾ ನಮ್ಮ ನೆಚ್ಚಿನ ಸಿಹಿ ತಿಂಡಿ ಆಗಿತ್ತು.

ದಿನಕರ ಮೊಗೇರ said...

namma ooralli ee reeti maaDodakke ' kaage enjalu' ennutteve... sogasaada peeThike nimma pustakada hesarige...

kaaryakramakke shubhavaagali.... naanoo baruttiddene sir...

best of luck....

ಸೀತಾರಾಮ. ಕೆ. / SITARAM.K said...

ಸಮಾರಂಬ ಯಶಸ್ವಿಯಾಗಿ ಪುಸ್ತಕಗಳಿಗೆ ಜನಮನ್ನಣೆ ದೊರೆಯಲಿ. ನಾನು ಕಾರ್ಯಕ್ರಮಕ್ಕೆ ಬರ್ತಾ ಇದ್ದೇನೆ.
ಗುಬ್ಬಿ-ಎಂಜಲು ಹಿನ್ನೆಲೆ ಚೆನ್ನಾಗಿದೆ.

balasubramanya said...

ಶಿವೂ ನಾನು ಮೈಸೂರಿನಿಂದ ಕಾರ್ಯಕ್ರಮಕ್ಕೆ ಬರ್ತಾ ಇದ್ದೇನೆ. ಹಲವಾರು ಉತ್ತಮ ಗೆಳೆಯರನ್ನು ಕಾಣುವ ಅವಕಾಶ.ಇನ್ನು ನೀವು ಗುಬ್ಬಿ ಎಂಜಲು ಬಗ್ಗೆ ನೀಡಿದ ವಿವರಣೆ ಚೆನ್ನಾಗಿದೆ. ನಾವು ಹಳ್ಳಿಯಲ್ಲಿ ಚಿಕ್ಕವನಾಗಿದ್ದಾಗ.ನನ್ನ ಅಕ್ಕನ ಜೊತೆ ಹೀಗೆ ತಿಂಡಿ ಹಂಚಿಕೊಂಡು ತಿಂದ ನೆನಪು ಬಂತು. ಇದಕ್ಕೆ ನಮ್ಮಲ್ಲಿ ಕಾಗೆ ಎಂಜಲು ಅಂತಿದ್ವು..ಬಹುಷಃ ಒಂದೊಂದು ಕಡೆ ಒಂದು ಹೆಸರು ಇದಕ್ಕೆ ಇರಬಹುದು.ಆದರೂ ನಿಮ್ಮ ಗುಬ್ಬಿ ಎಂಜಲು ಹಿಡಿಸಿದೆ.

ಅನಂತ್ ರಾಜ್ said...

ಗುಬ್ಬಿ ಎ೦ಜಲು ಕಥೆಯನ್ನು ಮನ ಮುಟ್ಟುವ೦ತೆ ನಿರೂಪಿಸಿದ್ದೀರಿ ಶಿವು ಅವರೆ. ಸಮಾರ೦ಭವು ಅತ್ಯ೦ತ ಯಶಸ್ವಿಯಾಗಲಿ ಎ೦ದು ಹಾರೈಸುತ್ತೇನೆ.

ಶುಭಾಶಯಗಳು
ಅನ೦ತ್

ವೆಂಕಟೇಶ್ ಹೆಗಡೆ said...

CONGRATS SIR , DEFIANTLY I WILL ATTEND YOUR FUNCTION

ಸವಿಗನಸು said...

ಶಿವು ಸರ್ ನಿಮಗೂ ಅಜಾದರಿಬ್ಬರಿಗೂ ಅಭಿನಂದನೆಗಳು.....
ಸಮಾರ೦ಭವು ಯಶಸ್ವಿಯಾಗಲಿ ಎ೦ದು ಹಾರೈಸುತ್ತೇನೆ.....

Snow White said...

gubbi enjalina kathe chennagide sir..nimma karyakrama yashasaswiyaagali endu aashisuve :)

suma

ಮನಸಿನ ಮಾತುಗಳು said...

ನಾನು ಬರುವೆ... :-)ನಿಮಗೆ All the bestu... :-)

shivu.k said...

ನಿವೇದಿತ ಮೇಡಮ್, ನನ್ನ ಗುಬ್ಬಿ ಎಂಜಲು ಕತೆ ಇಷ್ಟವಾಗಿದ್ದಕ್ಕೆ ಥ್ಯಾಂಕ್ಸ್...ಕಾರ್ಯಕ್ರಮಕ್ಕೆ ನೀವು ಬನ್ನಿ.
ಧನ್ಯವಾದಗಳು.

shivu.k said...

ದಿನಕರ್ ಸರ್,
ಕಾಗೆ ಎಂಜಲು ಮೊದಲು ಇಟ್ಟ ಹೆಸರು. ನಂತರ ಅದನ್ನು ಗೆಳೆಯ ನಾಗೇಂದ್ರ ಮುತ್ಮರ್ಡು ಜೊತೆ ಚರ್ಚಿಸಿ ಗುಬ್ಬಿ ಎಂಜಲು ಮಾಡಿದೆ. ಪೀಟಿಕೆ ಇಷ್ಟಪಟ್ಟಿದ್ದೀರಿ. ಕಾರ್ಯಕ್ರಮವನ್ನು ಖಂಡಿತ ಇಷ್ಟಪಡುತ್ತೀರಿ ಎನ್ನುವ ನಂಬಿಕೆ ನನಗಿದೆ. ನಿಮಗಾಗಿ ಕಾಯ್ತಿರುತ್ತೇವೆ.

shivu.k said...

ಸೀತಾರಾಂ ಸರ್,

ಗುಬ್ಬಿ, ಮತ್ತು ಜಲನಯನ ಜೊತೆಗೆ ಫೋಟೊಗ್ರಫಿ ಶೋ ಕೂಡ ವ್ಯವಸ್ಥೆ ಮಾಡುವ ಅಲೋಚನೆಯಿದೆ. ನಿಮ್ಮ ನಿರೀಕ್ಷೆಯಲ್ಲಿ.

shivu.k said...

ನಿಮ್ಮೊಳಗೊಬ್ಬ ಬಾಲು ಸರ್,

ನಿಮ್ಮ ತುಂಬು ಹೃದಯದ ಅಭಿಮಾನಕ್ಕೆ ನಾವು ಚಿರಋಣಿಗಳು. ನಿಮ್ಮ ನಿರೀಕ್ಷೆಯಲ್ಲಿ ನಾವಿದ್ದೇವೆ. ಗುಬ್ಬಿ ಎಂಜಲು ಕತೆ ಇಷ್ಟಪಟ್ತಿದ್ದಕ್ಕೆ ಥ್ಯಾಂಕ್ಸ್...

shivu.k said...

ಆನಂತ್ ಸರ್,

ಗುಬ್ಬಿ ಎಂಜಲು ಕತೆ ಇಷ್ಟಪಟ್ಟಿದ್ದಕ್ಕೆ ಥ್ಯಾಂಕ್ಸ್. ನೀವು ಕಾರ್ಯಕ್ರಮಕ್ಕೆ ಬರಲೇಬೇಕು. ನಿಮಗಾಗಿ ಕಾಯುತ್ತಿದ್ದೇವೆ.

shivu.k said...

ಆನಂತ್ ಸರ್,

ಗುಬ್ಬಿ ಎಂಜಲು ಕತೆ ಇಷ್ಟಪಟ್ಟಿದ್ದಕ್ಕೆ ಥ್ಯಾಂಕ್ಸ್. ನೀವು ಕಾರ್ಯಕ್ರಮಕ್ಕೆ ಬರಲೇಬೇಕು. ನಿಮಗಾಗಿ ಕಾಯುತ್ತಿದ್ದೇವೆ.

shivu.k said...

ನನ್ನೊಳಗಿನ ಕನಸು ವೆಂಕಟೇ ಹೆಗಡೆ ಸರ್,

ನೀವು ಬರತ್ತಿರುವುದು ನಿಜಕ್ಕೂ ಖುಶಿವಿಚಾರ. ನಿಮ್ಮ ನಿರೀಕ್ಷೆಯಲ್ಲಿ.

shivu.k said...

ಮಹೇಶ್ ಸರ್,

ನೀವು ತಪ್ಪಿಸಿಕೊಳ್ಳುವಂತಿಲ್ಲ. ನಾನು ಇಲ್ಲಿ ಎಲ್ಲರಿಗೂ ಹೇಳಿಬಿಟ್ಟಿದ್ದೇನೆ. ನಿಮ್ಮನ್ನು ನೋಡಲು ಅನೇಕರು ಕಾಯುತ್ತಿದ್ದಾರೆ.

shivu.k said...

ಸ್ನೋ ವೈಟ್ ಸುಮ ಮೇಡಮ್,

ಕಾರ್ಯಕ್ರಮಕ್ಕೆನೀವುಬರಬೇಕು. ಗುಬ್ಬಿ ಎಂಜಲು ಕತೆ ಇಷ್ಟಪಟ್ಟಿದ್ದಕ್ಕೆ ಥ್ಯಾಂಕ್ಸ್..

shivu.k said...

ದಿವ್ಯ,

ನಿಮ್ಮ ನಿರೀಕ್ಷೆಯಲ್ಲಿ..

ಸುಧೇಶ್ ಶೆಟ್ಟಿ said...

ನಿಮ್ಮ ಮುನ್ನುಡಿಯೇ ಹೇಳುತ್ತಾ ಇದೆ ನಿಮ್ಮ ಪುಸ್ತಕ ಅದ್ಭುತವಾಗಿದೆ ಎ೦ದು..... ನನಗೆ ಬರಲಾಗುತ್ತಿಲ್ಲ... ಇಲ್ಲಿ೦ದಲೇ ಶುಭ ಹಾರೈಸುತ್ತೇನೆ... :)

ಮುಖಪುಟಗಳು ತು೦ಬಾ ಚೆನ್ನಾಗಿವೆ :)

Unknown said...

ನನಗೂ ಬರಬೇಕೆಂದಿದೆ.. ಸಾಧ್ಯವಾದಷ್ಟು ಬರಲು ಪ್ರಯತ್ನಿಸುವೆ... ನಿಮಗೆ ಅಭಿನಂದನೆಗಳು..

ಸಾಗರಿ.. said...

ಶಿವೂ ಅವರೇ,
ತಮ್ಮ ಹಾಗೂ ಅಜಾದ್ ಅವರ ಪುಸ್ತಕದ ಮುಖಪುಟ ಬಹಳವೇ ಚೆನ್ನಾಗಿದೆ. ಪುಸ್ತ್ಕಗಳನ್ನು ಓದಲು ಕಾತುರರಾಗಿದ್ದೇವೆ. ಯಶಸ್ಸು ಹೀಗೆಯೇ ತಮ್ಮೊಂದಿಗಿರಲಿ.

shivu.k said...

ಸುಧೇಶ್,

ನೀವು ಮುಂಬೈನಿಂದಲೇ ಆರೈಸುತ್ತಿರುವುದು ನಮಗೆ ಖುಷಿಯ ಸಂಗತಿ. ಮುಖಪುಟದ ಜೊತೆಗೆ ಪುಸ್ತಕಗಳು ಇಷ್ಟವಾಗುತ್ತವೆ ಎಂದುಕೊಂಡಿದ್ದೇನೆ. ಧನ್ಯವಾದಗಳು.

shivu.k said...

ರವಿಕಾಂತ್ ಗೋರೆ ಸರ್,
ಫೋಟೊಗ್ರಾಫರುಗಳ ಛಾಯಾಚಿತ್ರ ಪ್ರದರ್ಶನವನ್ನು ಏರ್ಪಡಿಸುತ್ತಿದ್ದೇವೆ. ಬಿಡುವು ಮಾಡಿಕೊಂಡು ಬನ್ನಿ.

shivu.k said...

ಸಾಗರಿ ಮೇಡಮ್,

ಪುಸ್ತಕಗಳ ಮುಖಪುಟವನ್ನು ಮೆಚ್ಚಿದ್ದಕ್ಕೆ ಥ್ಯಾಂಕ್ಸ್..ನೀವು ಕಾರ್ಯಕ್ರಮಕ್ಕೆ ಬನ್ನಿ.

ಸುಮ said...

ಗುಬ್ಬಿಎಂಜಲು - ಹೆಸರು ಅರ್ಥಪೂರ್ಣವಾಗಿದೆ. ಶುಭಹಾರೈಕೆಗಳು . ಈ ಸಮಾರಂಭಕ್ಕೆ ಅನಿವಾರ್ಯ ಕಾರಣಗಳಿಂದ ಬರಲಾಗುತ್ತಿಲ್ಲ . ಎಲ್ಲ ಬ್ಲಾಗಿಗರನ್ನು ಭೇಟಿ ಮಾಡುವ ಅವಕಾಶ ತಪ್ಪಿದ್ದಕ್ಕೆ ಬೇಸರವಿದೆ. ಸಮಾರಂಭ ಯಶಸ್ವಿಯಾಗಲೆಂದು ಹಾರೈಸುತ್ತೇನೆ.

ಸಾಗರದಾಚೆಯ ಇಂಚರ said...

ಶಿವೂ ಸರ್

ಪುಸ್ತಕ ಬಿಡುಗಡೆ ಸಮಾರಂಬಕ್ಕೆ ಬರಲಾಗುವುದಿಲ್ಲ ಎಂಬ ನೋವಿದೆ

ಆದರೆ ಹ್ರದಯಪೂರ್ವಕ ಶುಭ ಹಾರೈಕೆಗಳು

PARAANJAPE K.N. said...

ನಾನು ಕಾರ್ಯಕ್ರಮಕ್ಕೆ ಬರ್ತಾ ಇದ್ದೇನೆ, ಶುಭಾಶಯ

ಬಾಲು said...

Shivu avare,

karyakrama yashasvi aagalendu haaraisuve. :)

Lahari said...

ಶಿವೂ...... ತುಂಭಾ ತುಂಭಾ ತುಂಭಾನೆ ಚೆನ್ನಾಗಿದೆ ನಿಮ್ಮ ಗುಬ್ಬಿ ಎಂಜಲು. ಯಾಕೆ ಗೊತ್ತಾ ನನಗೂ ಕೂಡ ಈ ರೀತಿಯ ಅನುಭವ ಹಾಗಿದೆ ನನ್ನ ಹಳೆಯ ನೆನಪುಗಳನ್ನ ಮತ್ತೆ ನೆನಪಿಸಿಕೊಳ್ಳುವಂತಾಯಿತು ಧನ್ಯವಾದಗಳು ನಿಮ್ಮ ಗುಬ್ಬಿ ಎಂಜಲಿಗೆ. ಈಗಲು ಸಿಗುತ್ತೆ ಆ ಕಂಬರ್ ಗಂಟ್ ನಮ್ಮ ಏರಿಯಾದಲ್ಲಿ.........

V.R.BHAT said...

ಬಹಳಸಲ ನಿಮ್ಮ ಬ್ಲಾಗಿಗೆ ನಾನು ಬಂದು ನಿಮ್ಮ ಭಾವಸ್ಪಂದನವೇ ಇಲ್ಲದೇ ಈಗೀಗ ಪ್ರತಿಕ್ರಿಯಿಸುತ್ತಿರಲಿಲ್ಲ, ಇರ್ಲಿ, ನಾನು ಬರುತ್ತಿದ್ದೇನೆ, ನೀವಿಬ್ಬರು ಹೆರುತ್ತಿರುವ ಮಗುಗಳನ್ನು ಹುಟ್ಟುವಾಗಲೇ ನೋಡುವುದಕ್ಕೆ ಮತ್ತು ಚಪ್ಪಾಳೆ ತಟ್ಟುವುದಕ್ಕೆ, ನಿಮ್ಮ ಕಾರ್ಯಕ್ರಮ ಅದ್ಧೂರಿಯಾಗಿ ಸಾಗಲಿ ಎಂದು ಈ ಕಡೆಯಿಂದಲೂ ಹೀಗೇ ಹಾರೈಸುತ್ತಿದ್ದೇನೆ.

ವನಿತಾ / Vanitha said...

ಶಿವು..ಓದುತ್ತಿದಾಗ ಕಣ್ಣೀರು..functionಗೆ ಶುಭವಾಗಲಿ :)ವರ್ಷದ ಕೊನೆಯಲ್ಲಿ ಬರುವ ಪ್ಲಾನ್ ಇದೆ.ಆಗ ನಿಮ್ಮ ಎರಡೂ ಪುಸ್ತಕವನ್ನು ಓದುತ್ತೇನೆ..

Unknown said...

ಶಿವೂ ಸರ್, ನಿಮಗೆ ಶುಭ ಹಾರೈಕೆಗಳು.

Gubbachchi Sathish said...
This comment has been removed by the author.
ಶಿವಪ್ರಕಾಶ್ said...

all the best sir..
waiting for super sunday :)

Gubbachchi Sathish said...
This comment has been removed by the author.
Gubbachchi Sathish said...

ಶಿವುರವರೇ!

ನಾನು ನಿಮ್ಮ ಬ್ಲಾಗ್ ಮತ್ತು "vendor kannu" (ಅಜಿತ್ ಕೌಂಡಿನ್ಯ, ಶಿಡ್ಲಘಟ್ಟ ಕೊಟ್ಟದ್ದು)ಪುಸ್ತಕದ ಅಭಿಮಾನಿ. ನಿಮ್ಮ ಎರಡನೆಯ ಪುಸ್ತಕಕ್ಕೆ ಕಾಯುತ್ತಿದ್ದೇನೆ. "ಗುಬ್ಬಿ ಎಂಜಲು" ಹೆಸರು ಚೆನ್ನಾಗಿದೆ. ಒಳ್ಳೆಯದಾಗಲಿ.

ನನ್ನ ಬ್ಲಾಗ್ www.nallanalle.blogspot.com ಗೆ ಭೇಟಿ ನೀಡಿ.

Anonymous said...

ಸರ್, ದೂರದ ಕಾರಣ ಸಮಾರಂಭಕ್ಕೆ ಬರಲಾಗುವುದಿಲ್ಲ,ನನ್ನ ಬೆಸ್ಟ್ ವಿಶಸ್ ಸಮಾರಂಭಕ್ಕೆ ಮತ್ತು ಪುಸ್ತಕಕ್ಕೆ!

ಮನಸಿನಮನೆಯವನು said...

ಈಗ ಜ್ಞಾಪಕ ಬಂತು..
"ನಾನು ಗೆಳೆಯರೊಡನೆ ಸೇರಿ 'ಗುಬ್ಬಿ ಎಂಜಲು' ಮಾಡಿ ತಿಂತಾ ಇದ್ದೆವು.."'