Sunday, June 13, 2010

ಬದುಕಲ್ಲಿ ನಟಿಸಲು ಸಾಧ್ಯವೇ?



ಇಂಥದೊಂದು ಪ್ರಶ್ನೆಯನ್ನು ನಿಮ್ಮಲ್ಲಿ ಕೇಳಿದರೆ ಎಂಥ ಉತ್ತರ ಸಿಗಬಹುದು.? ಕೆಲವರು ಸಾಧ್ಯವಿಲ್ಲವೆಂದರೆ ಇನ್ನೂ ಕೆಲವರು ಅಸಾಧ್ಯವೆಂದು ಹೇಳಬಹುದು.

ಇಷ್ಟಕ್ಕು ಈ ಪ್ರಶ್ನೆ ಮೂಡಲು ಕಾರಣ ಇತ್ತೀಚೆಗೆ ನಾನು ನೋಡಿದ ಒಂದು ಅದ್ಬುತ ಸಿನಿಮಾ!


ಅದ್ಬುತವೆಂದ ಮಾತ್ರಕ್ಕೆ ಆತ್ಯುಕೃಷ್ಟ ತಾಂತ್ರಿಕತೆ ಹೊಂದಿದ ದುಬಾರಿ ವೆಚ್ಚದ ಅವತಾರ್ ಟೈಟಾನಿಕ್, ಡೈನೋಸಾರ್,...... ಸಾಲಿನ ಸಿನಿಮಾಗಳಾಗಲಿ, ಅಥವ ಅತ್ಯುತ್ತಮ ಕತೆ, ಚಿತ್ರಕತೆ, ಉತ್ತಮ ನಟನೆಯಿಂದಲೇ ಕಲಾಕೃತಿಗಳೆನಿಸಿದ ನೂರಾರು ಸಿನಿಮಾಗಳು ನಮ್ಮ ನೆನಪಿಗೆ ಬಂದುಬಿಡಬಹುದು. ಆದ್ರೆ ಅವುಗಳನ್ನು ಒಮ್ಮೆ ಬದಿಗೆ ಸರಿಸಿಬಿಡಿ. ಯಾವುದೇ ಅದ್ದೂರಿ ಸೆಟ್‍ಗಳಿಲ್ಲದೇ, ತಾಂತ್ರಿಕವಾಗಿಯೂ ಉತ್ತಮವಲ್ಲದ, ತೀರ ಸರಳವೆನಿಸುತ್ತಾ, ನೇರವಾದ, ಅದಕ್ಕಿಂತ ಸಹಜತೆಯನ್ನೇ ಕೃತಿಯನ್ನಾಗಿಸಿಕೊಂಡು, ಇರಾನಿನ ಪ್ರಖ್ಯಾತ ನಿರ್ಧೇಶಕ "ಜಾಫರ್ ಫನಾಯ್"ನ "ದಿ ಮಿರರ್" ಚಿತ್ರವನ್ನು ನೋಡಿದಾಗ ನನಗೆ ಮೂಡಿದ ಪ್ರಶ್ನೆಯಿದು.



ಇದರ ಕತೆಯೇ ಒಂದು ರೀತಿಯಲ್ಲಿ ವಿಭಿನ್ನಕ್ಕಿಂತ ವಿಭಿನ್ನವೆಂದು ನನ್ನ ಅನಿಸಿಕೆ. ಮೊದಲ ತರಗತಿ ಓದುತ್ತಿರುವ ಒಂದು ಪುಟ್ಟ ಸ್ಕೂಲ್ ಹುಡುಗಿ "ಮಿನಾ" ಮೇಲೆ ಕೇಂದ್ರಿಕೃತವಾಗಿ ಕೇವಲ ರಸ್ತೆಯ ಮೇಲೆ ಚಿತ್ರಿಕರಿಸಿದ ಚಿತ್ರವಿದು. ನೀವು ಸಿನಿಮಾವನ್ನು ನೋಡಲು ಪ್ರಾರಂಭಿಸಿದಾಗ ಆ ಪುಟ್ಟ ಹುಡುಗಿಯ ನಟನೆಯನ್ನು ನೋಡುತ್ತಾ ನೀವು ಆ ಪಾತ್ರದಲ್ಲಿ ಒಂದಾಗಿ ಆ ಹುಡುಗಿಯ ಎಲ್ಲಾ ಭಾವನೆಗಳು ನಿಮ್ಮಲ್ಲೂ ಉಂಟಾಗಿ ಆ ತನ್ಮಯತೆಯಿಂದ ಮೈಮರೆತಿರುವಾಗಲೇ, ಇನ್ನು ಮುಂದೆ ನಾನು ನಟಿಸೋಲ್ಲ, ನನಗಿಷ್ಟವಿಲ್ಲವೆಂದು ತನಗೆ ಕೃತಕವಾಗಿ ಕೈಗೆ ಹಾಕಿದ್ದ ಬ್ಯಾಂಡೇಜ್ ಕಿತ್ತು ಬಿಸಾಡಿ, ಅರ್ಧ ಸಿನಿಮಾ ನಡುವೆಯೇ ಇಡೀ ಸಿನಿಮಾ ತಂಡವನ್ನು ಬಿಟ್ಟು ಆ ಪುಟ್ಟ ಹುಡುಗಿ ಹೊರಬಂದಾಗ ನಿಮಗೆ ಹೇಗನ್ನಿಸಬಹುದು? ನೀವು ಕೂಡ ಮರುಕ್ಷಣವೇ ವಾಸ್ತವಕ್ಕೆ ಬಂದುಬಿಡುತ್ತೀರಿ. ನನಗೆ ಇಂಥ ಅವಕಾಶ ಸಿಕ್ಕಿದ್ದರೆ ಹೀಗೆ ಅರ್ಧಕ್ಕೆ ಕೈಯೆತ್ತಿ ಬರುತ್ತಿರಲಿಲ್ಲ. ಪೂರ್ತಿಯಾಗಿ ನಟಿಸಿ ಮುಗಿಸಿಕೊಡುತ್ತಿದ್ದೆ. ಈ ಹುಡುಗಿಗೇನು ಪೆಚ್ಚಾ? ಅಂತ ನನಗನ್ನಿಸಿದಂತೆ ನಿಮಗೂ ಅನ್ನಿಸುತ್ತದೆ. ಆ ಮಗುವಿನಿಂದಾಗಿ ಅರ್ಧಕ್ಕೆ ನಿಂತ ಸಿನಿಮಾ ಬಗ್ಗೆ ನಿರ್ಧೇಶಕ ಅಧೀರನಾಗುವುದಿಲ್ಲ. ಆದ್ರೆ ಇದೆಲ್ಲವನ್ನೂ ಮೀರಿ ಆ ಕ್ಷಣದಲ್ಲಿ ಆತನ ತಲೆ ಕೆಲಸ ಮಾಡಲಾರಂಭಿಸುತ್ತದೆ. ಇದುವರೆಗೂ ತನ್ನ ನಿಯಂತ್ರಣದಲ್ಲಿಯೇ ಇದ್ದ ಸಿನಿಮಾ ಕತೆಯನ್ನು, ಆ ಸನ್ನಿವೇಶದ ನಂತರ ಮುಂದೇನಾಗುತ್ತದೆಯೋ ನೋಡೇಬಿಡೋಣವೆಂದು ತನ್ನ ನಿಯಂತ್ರಣದಲ್ಲಿ ಇಲ್ಲದ ಮುಂದಿನ ಸನ್ನಿವೇಶಗಳನ್ನು ಯಥಾವತ್ತಾಗಿ ಚಿತ್ರೀಕರಿಸುವುದೇ ಆ ಚಿತ್ರದ ಸೊಬಗು. ಇಂಥದೊಂದು ಪ್ರಯತ್ನವನ್ನು ನಮ್ಮ ಕನ್ನಡ, ತಮಿಳು, ತೆಲುಗು...ಹೋಗಲಿ ಭಾರತದ ಯಾವುದೇ ಭಾಷೆಯಲ್ಲಿ ಮಾಡಲು ನಮ್ಮ ನಿರ್ಧೇಶಕರು ಸಿದ್ಧರಾಗುತ್ತಾರ?

ಸಿನಿಮಾಗೆ ಹಣ ಹಾಕಿ ಹಣವನ್ನೇ ವಾಪಸ್ಸು ಪಡೆಯುವ ಉದ್ದೇಶವನ್ನು ಹೊಂದಿರುವ ನಮ್ಮ ನಿರ್ಧೇಶಕರು, ನಿರ್ಮಾಪಕರುಗಳೆಲ್ಲಾ ತಮ್ಮ ಆತ್ಮತೃಪ್ತಿಗಾದರೂ ಒಮ್ಮೆ ಇಂಥದೊಂದು ಸಿನಿಮಾವನ್ನು ನೋಡಬೇಕು.

ಶಾಲೆ ಬಿಟ್ಟ ಕೂಡಲೇ ಗೇಟು ತೆರೆದುಕೊಂಡು ಹೊರಬರುವ ಪ್ರಾಥಮಿಕ ಶಾಲಾ ಮಕ್ಕಳು ರಸ್ತೆ ದಾಟುವುದರೊಂದಿಗೆ ಪ್ರ್‍ಆರಂಭವಾಗುತ್ತದೆ ಸಿನಿಮಾ. ಕಾಂಪೌಂಡ್ ಹೊರಗೆ ಕಾದು ಕುಳಿತ ಮಕ್ಕಳನ್ನು ಅವರವರ ತಂದೆ ತಾಯಿಯರು ಕರೆದುಕೊಂಡು ಹೋಗುತ್ತಿದ್ದರೂ ಅದೊಂದು ಪುಟ್ಟ ಹುಡುಗಿ ಹಾಗೇ ಕುಳಿತಿರುತ್ತದೆ. ನಿತ್ಯವೂ ಸರಿಯಾದ ಸಮಯಕ್ಕೆ ಬಂದು ಕರೆದುಕೊಂಡು ಹೋಗುವ ಆ ಮಗುವಿನ ತಾಯಿ ಇನ್ನೂ ಬಂದಿಲ್ಲವಾದ್ದರಿಂದ ಆ ಹುಡುಗಿ ಕಾಯುತ್ತಿರುತ್ತಾಳೆ. ಎಡಗೈ ಮುರಿದಿದ್ದರಿಂದಲೇ ಏನೋ ಅದಕ್ಕೆ ಬ್ಯಾಂಡೇಜ್ ಹಾಕಿಸಿಕೊಂಡಿದ್ದ ಆ ಮಗು ಸ್ಕೂಲ್ ಕಾಂಪೌಂಡ್ ಬಳಿ ನಿಂತುಕೊಂಡು ತನ್ನ ತಾಯಿಗಾಗಿ ಕಾಯುವ ಕೆಲವು ಕ್ಷಣಗಳನ್ನು ನೋಡುತ್ತಿದ್ದರೆ ನೀವು ಆ ಕ್ಷಣಕ್ಕೆ ನೀವು ಪಾತ್ರದಲ್ಲಿ ಒಂದಾಗಿಬಿಡುತ್ತೀರಿ. ಚಿತ್ರದಲ್ಲಿನ ಆ ಕ್ಷಣಗಳಲ್ಲಿ ಆ ಮಗು ಅನುಭವಿಸುವ ಆತಂಕ, ಕಾಯುವಿಕೆ, ಇನ್ನೂ ಬರದಿದ್ದಲ್ಲಿ ನಾನು ತಪ್ಪಿಸಿಕೊಂಡುಬಿಡುತ್ತೇನಾ? ಮರುಕ್ಷಣದಲ್ಲಿ ಇಲ್ಲ ಅಮ್ಮ ಬಂದೇ ಬರುತ್ತಾರೆ ಅನ್ನುವ ಭರವಸೆ ಇದೆಲ್ಲವನ್ನು ಸಹಜವಾಗಿ ಕಣ್ಣಿನಲ್ಲೇ ವ್ಯಕ್ತಪಡಿಸುವ ಆ ಮಗುವಿನ ನಟನೆ ನಿಮ್ಮನ್ನು ಬಾಲ್ಯದ ನೆನಪಿಗೆ ತಳ್ಳಿಬಿಡುತ್ತದೆ. ಅಮ್ಮ ಇನ್ನೇನು ಬಂದುಬಿಡುತ್ತಾರೆ ಅಲ್ಲಿನವರೆಗೆ ಸ್ವಲ್ಪ ಕಾಯುತ್ತಿರು ಅಂತ ಹೇಳುವ ಆಕೆಯ ಮತ್ತೊಬ್ಬ ಟೀಚರ್, ಆ ಟೀಚರನ್ನೇ ನೋಡಲು ಬರುವ ವ್ಯಾಪಾರಿ, ಅವರಿಬ್ಬರ ನಡುವೆ ವ್ಯಾಪಾರದ ವಿಚಾರದ ದಾಕ್ಷಿಣ್ಯಕ್ಕೆ ಮಗುವನ್ನು ಮನೆಗೆ ತಲುಪಿಸುತ್ತೇನೆ ಎಂದು ಒಪ್ಪಿಕೊಳ್ಳುವ ಆತನ ಮೊಪೆಡ್ ಮೇಲೆ ಆ ಮಗು ಜಾಗಮಾಡಿಕುಳಿತುಕೊಳ್ಳುವ ಪರಿ, ದಾರಿಯುದ್ದಕ್ಕೂ ಸಾಗುವ ಅವರಿಬ್ಬರ ಸಂಭಾಷಣೆ, ಅಷ್ಟರಲ್ಲಿ ಒಂದು ಬಸ್ ಸ್ಟ್ಯಾಂಡ್ ಕಂಡು ನನ್ನಮ್ಮ ಇಲ್ಲೆ ಬಸ್ ಹತ್ತೋದು ಅಂತ ಆ ಪುಟ್ಟ ಹುಡುಗಿ ಇಳಿದುಬಿಡುತ್ತಾಳೆ. ಮತ್ತೆ ಅಲ್ಲಿಗೆ ಬಂದ ಒಂದು ಬಸ್ಸನ್ನು ಹತ್ತಿಬಿಡುತ್ತಾಳೆ. ಬಸ್ಸಿನಲ್ಲಿ ಆವಳ ಅಮ್ಮ ಇರುವುದಿಲ್ಲ. ಆದ್ರೆ ಚಲಿಸುವ ಬಸ್ಸಿನಲ್ಲಿ ತಕ್ಷಣಕ್ಕೆ ಇಳಿಯುವಂತಿಲ್ಲ. ಆ ಬಸ್ಸು ಎಲ್ಲಿಗೋ ಕರೆದುಕೊಂಡು ಹೋಗುತ್ತದೆ. ಅಷ್ಟರಲ್ಲಿ ಈ ಹುಡುಗಿ ದಾರಿ ತಪ್ಪಿರುತ್ತಾಳೆ. ಅಮ್ಮ ಕಾಣುತ್ತಾಳ ಅಂತ ಆಗಾಗ ಕಿಟಕಿಯಲ್ಲಿ ನೋಡುತ್ತಿರುವಂತೆಯೇ ಬಸ್ಸಿನ ಕೊನೆ ನಿಲ್ದಾಣ ಬಂದುಬಿಡುತ್ತದೆ. ಆ ಬಸ್ ಚಾಲಕ ಈ ಹುಡುಗಿಯನ್ನು ಮತ್ತೊಬ್ಬ ಬಸ್ ಚಾಲಕನಿಗೆ ಮನೆತಲುಪಿಸುವಂತೆ ಜವಾಬ್ದಾರಿ ವಹಿಸುವುದು, ಆತನು ಮತ್ತೊಂದು ಬಸ್ಸಿನಲ್ಲಿ ಈಕೆಯನ್ನು ಕರೆದೊಯ್ಯುವುದು...ಹೀಗೆ ಆ ಹುಡುಗಿ ದಾರಿತಪ್ಪಿದ ಪುಟ್ಟಹುಡುಗಿಯಾಗಿಬಿಡುತ್ತಾಳೆ.

ಇಷ್ಟೆಲ್ಲದರ ನಡುವೆ ನಿರ್ಧೇಶಕರು ರಸ್ತೆಯಲ್ಲಿ, ಟ್ರಾಫಿಕ್ಕಿನಲ್ಲಿ, ಬಸ್ಸಿನಲ್ಲಿ, ನಡೆಯುವ ಸಂಭಾಷಣೆಗಳು, ಶಬ್ದಗಳನ್ನು ಯಥಾವತ್ತಾಗಿ ಸೇರಿಸಿರುವುದರಿಂದ ಚಿತ್ರಕ್ಕೆ ಮತ್ತಷ್ಟು ಸಹಜತೆಯನ್ನು ತಂದುಕೊಡುತ್ತಾರೆ. ಬಸ್ಸಿನಲ್ಲಿ ಜ್ಯೋತಿಷ್ಯ ಹೇಳುವ ಹೆಂಗಸು, ತನ್ನ ಸೊಸೆಯ ಮೇಲೆ ದೂರನ್ನು ಹೇಳುತ್ತಲ್ಲೇ ಮಗನನ್ನು ಹೊಗಳುತ್ತಾ ದಾರಿಯುದ್ದಕ್ಕೂ ವಟಗುಟ್ಟುವ ಮುದುಕಿ, ಅಗಾಗ ಇರಾನ್ ಕೊರಿಯಾ ಫುಟ್‍ಬಾಲ್ ಆಟದ ಬಗ್ಗೆ ಚರ್ಚೆಗಳು, ಬಸ್ಸಿನಲ್ಲಿ ಬರುವ ಬಿಕ್ಷುಕನ ಹಾಡು.........ಇಂಥ ಅನೇಕ ವಾಸ್ತವ ಚಿತ್ರಣವನ್ನು ಹಾಗೇ ಕಟ್ಟಿಕೊಡುತ್ತಲೇ....ಆ ಮಗು ಬಸ್ಸಿನಲ್ಲಿ ಆನುಭವಿಸುವ ಮುಗ್ದತೆ, ಆತಂಕ, ಗೊಂದಲ, ಭಯ, ಅದಕ್ಕೆ ತೀರ್ವತೆಯನ್ನು ತಂದುಕೊಡುವಂತೆ ನಡುವೆ ಆ ಹುಡುಗಿಯನ್ನು ಬಸ್ಸಿಂದ ಇಳಿಸಿಬಿಡುವ ನಿರ್ವಾಹಕ, ಗೊತ್ತಿಲ್ಲದ ಜಾಗದಲ್ಲಿ ಆ ಹುಡುಗಿ ಕಳೆದುಹೋಗಿರುವೆನೆಂಬ ಭಾವದಲ್ಲಿ ಅನುಭವಿಸುವ ಆತಂಕ, ಅದರ ಕಡೆಗೆ ಗಮನ ಕೊಡದೇ ತಮ್ಮದೇ ಲೋಕದಲ್ಲಿರುವ ಜನರು, ಅಮ್ಮ ಸಿಕ್ಕಿ ಇನ್ನೂ ನನ್ನನ್ನು ಮನೆಗೆ ಕರೆದುಕೊಂಡು ಹೋಗಲಿಲ್ಲವಲ್ಲ ಎನ್ನುವ ದಿಗಿಲಿಗೆ ಇನ್ನೇನು ಅವಳ ಕಣ್ಣಂಚಿನಿಂದ ಒಂದು ಹನಿ ಕೆನ್ನೆಯ ಮೇಲೆ ಇಳಿಯಬೇಕು ಎನ್ನುವಷ್ಟರಲ್ಲಿ ನೀವದನ್ನು ನೋಡುತ್ತಾ ಅನುಭವಿಸುತ್ತಾ ನಿಮ್ಮ ಕಣ್ತುಂಬಿ ಹನಿಯೊಂದು ಜಾರಿರುತ್ತದೆ. ಆ ಮಗುವಿನ ಕಣ್ಣಿಂದ ಒಂದೂ ಹನಿಯನ್ನು ದುಮುಕಿಸಿದೇ ಅದೇ ಭಾವದಿಂದ ನಿಮ್ಮ ಕಣ್ಮಂಚಲ್ಲಿ ಹನಿ ದುಮುಕಿಸುವುದು ಆ ನಿರ್ಧೇಶಕನ ಗೆಲವು. ಇಷ್ಟರ ಮಟ್ಟಿಗೆ ನಿಮ್ಮನ್ನು ಮಗುವಾಗಿಸುವ ನಿರ್ಧೇಶಕನನ್ನು ಮೀರಿ ಇಡೀ ಸಿನಿಮಾ ಇಲ್ಲಿಂದ ತಿರುವು ಪಡೆದುಕೊಳ್ಳುತ್ತದೆ. ಆಷ್ಟೊಂದು ಸಹಜವಾಗಿ ಅಭಿನಯಿಸಿದ್ದ ಆ ಪುಟ್ಟಹುಡುಗಿ ತನ್ನ ಎಡಗೈಗೆ ಕಟ್ಟಿದ್ದ ಬ್ಯಾಂಡೇಜ್ ಕಿತ್ತೆಸೆದು ನಾನು ಇನ್ನು ನಟಿಸೊಲ್ಲ ಅಂತ ಹೊರನಡೆದುಬಿಡುತ್ತಾಳೆ. ಯಾರು ಎಷ್ಟು ಹೇಳಿದರೂ ಆ ಹುಡುಗಿ ಒಪ್ಪುವುದಿಲ್ಲ. ಕೆಲವೊಮ್ಮೆ ಮಕ್ಕಳು ಹಟ ಹಿಡಿದರೆ ಏನು ಮಾಡಿದರೂ ಒಪ್ಪಿಕೊಳ್ಳುವುದಿಲ್ಲ. ಇಲ್ಲೂ ಅದೇ ಆಗುತ್ತದೆ. ಅಷ್ಟರಲ್ಲಿ ನೀವು ವಾಸ್ತವಕ್ಕೆ ಬಂದುಬಿಡುತ್ತೀರಿ. ಅರ್ಧಕ್ಕೆ ನಿಂತ ಸಿನಿಮಾ ಬಗ್ಗೆ ನೀವು ಸೇರಿದಂತೆ ಎಲ್ಲರೂ ಯೋಚಿಸುತ್ತಿದ್ದರೆ, ನಿರ್ಧೇಶಕ ಮುಂದೆ ಏನಾಗುತ್ತದೆಯೋ ನೋಡೋಣ, ಮತ್ತದೇ ಹುಡುಗಿಯನ್ನು ಹಿಂಭಾಲಿಸಿ ಸೂಟಿಂಗ್ ಮಾಡೋಣವೆಂದು ನಿರ್ಧರಿಸುತ್ತಾನೆ. ಇಲ್ಲಿಂದ ಮುಂದೆ ನಿಮಗೆ ಕಾಣಸಿಗುವುದು ಸಿನಿಮಾವಲ್ಲದ ಸಿನಿಮಾ.

ಇದುವರೆಗೂ ನಿರ್ಧೇಶಕರ ಅಣತಿಯಂತೆ ದಾರಿತಪ್ಪಿದ ಹುಡುಗಿಯಂತೆ ನಟಿಸಿದ್ದ ಆ ಪುಟ್ಟ ಹುಡುಗಿ, ಸಿನಿಮದಿಂದ ಅರ್ಧಕ್ಕೆ ಹೊರಬಂದಮೇಲೆ ಈಗ ನಿಜಕ್ಕೂ ಮನೆಗೆ ವಾಪಸ್ ಹೋಗಲು ದಾರಿಗೊತ್ತಿರುವುದಿಲ್ಲ. ಆಕೆಯ ಬಳಿ ಆಡ್ರೆಸ್ ಕೂಡ ಇರುವುದಿಲ್ಲ. ಇಲ್ಲಿಂದ ಮುಂದೆ ನಟನೆಯನ್ನು ಮೀರಿದ ಬದುಕಿನ ಕ್ಷಣಗಳನ್ನು ಹಾಗೆ ಸೆರೆಯಿಡಿಯಲು ಆ ಮಗುವಿಗೆ ಗೊತ್ತಿಲ್ಲದಂತೆ ಕ್ಯಾಮೆರಾ ಹಿಡಿದು ಆಕೆಯನ್ನು ಹಿಂಭಾಲಿಸುತ್ತಾರೆ..


ವಾಸ್ತವಕ್ಕೆ ತೀರ ಹತ್ತಿರವೆನ್ನುವಂತೆ ಸಿನಿಮಾ ತೆಗೆಯುವ ಇರಾನಿನ ನಿರ್ಧೇಶಕರು ಇಲ್ಲಿ ಅದಕ್ಕಿಂತ ಒಂದು ಹೆಜ್ಜೆ ಮುಂದೆ ಹೋಗಿ ಆಗುವ ಅನಿರೀಕ್ಷಿತ ಘಟನೆಯಿಂದ ಕತೆ ತಮ್ಮ ನಿಯಂತ್ರಣ ತಪ್ಪಿದಾಗಲೂ ಮುಂದೇನಾಗಬಹುದು ನೋಡೇಬಿಡೋಣ ಅಂತ ಪ್ರೇಕ್ಷಕನ ಕುತೂಹಲವನ್ನು ತಾವು ಅನುಭವಿಸುತ್ತಾ ಚಿತ್ರೀಕರಿಸಲು ಪ್ರಾರಂಭಿಸುತ್ತಾರೆ.

ಒಂದು ಸಿನಿಮಾ ಅಂದರೆ ಹಣ ಎನ್ನುವ ಈಗಿನ ಪ್ರಪಂಚದಲ್ಲಿ, ಸಿನಿಮಾ ಎನ್ನುವ ಮಾಧ್ಯಮ ಕಲೆಯನ್ನು ಪ್ರತೀಕ್ಷಣದ ಕುತೂಹಲವನ್ನು ಅನುಭವಿಸುತ್ತಾ, ಮುಂದಾಗುವ ಪ್ರತೀಕ್ಷಣವನ್ನು ಮಗುವಿನಂತೆ ಅಸ್ವಾದಿಸುತ್ತಾ, ನಮ್ಮನ್ನು ಹಾಗೆ ಅಸ್ವಾದಿಸುವಂತೆ ಮಾಡುವ ಜಾಪರ್ ಫನಾಯಿಗೆ ಹ್ಯಾಟ್ಸಪ್ ಹೇಳಲೇಬೇಕು. ಇಲ್ಲಿಂದ ಮುಂದೆ ತನಗೆ ಗೊತ್ತಿಲ್ಲದ ದಾರಿಯನ್ನು ಮಗು ಹುಡುಕಿಕೊಂಡು ಹೇಗೆ ಹೋಗುತ್ತದೆ. ಅದು ಸರಿಯಾಗಿ ಮನೆ ತಲುಪುತ್ತದಾ? ಸಿನಿಮಾಗೆ ನಟಿಸಿದಂತೆ ಅದರ ಭಾವನೆಗಳೂ ಇಲ್ಲೂ ವ್ಯಕ್ತವಾಗುತ್ತವಾ? ಅಥವ ಅದನ್ನು ಮೀರಿ ಮತ್ತೇನೋ ಹೊಸದು ನಮಗೆ ಕಾಣಸಿಗಬಹುದಾ? ಅನ್ನುವುದು ನನ್ನ ಕುತೂಹಲ. ಈ ಸಮಯದಲ್ಲಿ ನನಗೆ ಈ ಪ್ರಶ್ನೆ ಹುಟ್ಟಿದ್ದು.


ಹೌದು ನಾವು ನಿಜಬದುಕಿನಲ್ಲಿ ನಟಿಸಲು ಸಾಧ್ಯವಾ? ಅಂತ. ಇದೇ ಪ್ರಶ್ನೆ ನಿರ್ಧೇಶಕ ಜಾಫರ್ ಫನಾಯ್‍ಗೂ ಮೂಡಿರಬೇಕು. ಈಗ ನಿಮಗೂ ಮೂಡಿರಬೇಕಲ್ಲವೇ? ಮುಂದೇನಾಗುತ್ತದೆಯೋ ನೋಡೋಣ.

ಬಸ್ಸಿಳಿದು ಹೊರಗೆ ಬಂದು ಕುಳಿತುಕೊಂಡ ಆ ಪುಟ್ಟ ಹುಡುಗಿ ಏನು ಹೇಳಿದರೂ ಸಿನಿಮಾದಲ್ಲಿ ನಟಿಸಲು ಇಷ್ಟಪಡುವುದಿಲ್ಲ. ಕಾರಣ ಕೇಳಿದರೆ, "ನನಗೆ ಸಿನಿಮಾದಲ್ಲಿ ಆಳಲು ಹೇಳುತ್ತಾರೆ, ಇದನ್ನು ನನ್ನ ಗೆಳತಿಯರು ನೋಡಿದಾಗ ನನ್ನನ್ನು ಅಳುಮುಂಜಿ ಅಂತ ಅಂಗಿಸುತ್ತಾರೆ" ಅಂತ ಹೇಳುತ್ತಾಳೆ. ಅಲ್ಲಿಂದಾಚೆಗೆ ಅವಳೇ ತನಗೆ ಅಲ್ಲಲ್ಲಿ ಆಡ್ರೆಸ್ ಕೇಳುವುದು, ಯಾವುದೋ ಬಸ್ ಹತ್ತಿ ಮತ್ತೆಲ್ಲೋ ಇಳಿಯುವುದು, ಟ್ರಾಫಿಕ್ ಪೋಲಿಸ್‍ನವನನ್ನು ಕೇಳುವುದು, ಹೀಗೆ ಸಾಗುತ್ತಾಳೆ. ಹೀಗೆ ಅಲೆದು ಕೊನೆಗೊಮ್ಮೆ ಹೇಗೋ ಮನೆ ತಲುಪುತ್ತಾಳೆ. ಅಲ್ಲಲ್ಲಿ ನಿಂತು ತನಗೆ ಎಟುಕದ ಫೋನ್ ಭೂತಿಗೆ ನಾಣ್ಯವನ್ನು ಹಾಕಿ ಮನೆಗೆ ಫೋನ್ ಮಾಡುವುದು, ಟ್ಯಾಕ್ಸಿ ಹತ್ತಿ ತನ್ನಲ್ಲಿರುವ ಸ್ವಲ್ಪ ಹಣದಲ್ಲೇ ಟ್ಯಾಕ್ಸಿ ಹತ್ತಿ ಹೋಗುವುದು, ಕೊನೆಗೂ ಹೇಗೋ ಮನೆ ಸೇರಿಕೊಳ್ಳುತ್ತಾಳೆ.


ಸಿನಿಮಾ ಅಂತ್ಯವಾದ ಮೇಲೆ ಬದುಕಿನಲ್ಲಿ ಖಂಡಿತ ನಟಿಸಲು ಸಾಧ್ಯವಿಲ್ಲ ಅಂತ. ಸಿನಿಮಾ ನಟನೆಯಲ್ಲಿ ಎಲ್ಲಾ ಭಾವನೆಗಳಲ್ಲೂ ತೀರ್ವತೆಯನ್ನು ಬಯಸುತ್ತಾರೆ ನಿರ್ಧೇಶಕರು. ಪ್ರಾರಂಭದಲ್ಲಿ ಉತ್ತಮವಾಗಿ ಎಲ್ಲಾ ಭಾವನೆಗಳನ್ನು ಅದ್ಬುತವಾಗಿ ಕಣ್ಣಲ್ಲೇ ಬಿಂಬಿಸುವ ಆ ಮಗುವಿಗೆ ಇದ್ದಕ್ಕಿದ್ದಂತೆ ಅವೆಲ್ಲ ಇಷ್ಟವಿಲ್ಲದಂತಾಗಿಬಿಡುವುದು, ಅದು ಕೃತಕತೆಯೆನಿಸಿ ಅದರಿಂದ ಹೊರಬಂದುಬಿಡುವುದು ನೋಡಿದಾಗ, ಎಲ್ಲೋ ಒಂದು ಆ ಮಗುವಿನ ನಿರ್ಧಾರ ನಮ್ಮದೇ ಅನ್ನಿಸಿಬಿಡುತ್ತದೆ. ನಾವು ಕೂಡ ನಮ್ಮ ನಿತ್ಯ ಜೀವನದಲ್ಲಿ ನಮ್ಮ ಸಹಜ ಭಾವನೆಗಳನ್ನು ನಮಗರಿವಿಲ್ಲದಂತೆ ಮರೆತು ಯಾವುದೋ ಒತ್ತಾಸೆಗೆ, ಒತ್ತಡಕ್ಕೆ, ಮರ್ಜಿಗೆ, ಓಲೈಕೆಗೆ, ಮಣಿದು ನಟಿಸಲಾರಂಭಿಸಿಬಿಡುತ್ತೇವಲ್ವಾ? ಇಲ್ಲಿ ಮಗು ನಟನೆಯನ್ನು ದಿಕ್ಕರಿಸಿ ಹೊರಬಂದುಬಿಡುವುದು ನಮನ್ನೆಲ್ಲಾ ಆ ಕ್ಷಣದಲ್ಲಿ ಎಚ್ಚರಿಸಿದಂತಾಗಿಬಿಡುತ್ತದೆ. ಇದು ನಿರ್ಧೇಶಕನ ಉದ್ದೇಶವಾ? ಕುತೂಹಲವಾ? ಅವನಲ್ಲೂ ಮಗುವಿನಂತ ಆಸೆ ಮೊಳಕೆಯೊಡೆಯಿತಾ? ಇವೆಲ್ಲಾ ಸಿನಿಮಾ ನೋಡಿ ಮುಗಿದಾಗ ನನ್ನೊಳಗೆ ಮೂಡಿದ ಪ್ರಶ್ನೆಗಳು ಅಭಿಪ್ರಾಯಗಳು. ಇಷ್ಟೊಂದು ವಿಚಾರಗಳನ್ನೊಳಗೊಂಡ ಸಿನಿಮಾದಲ್ಲಿ ತಪ್ಪುಗಳಿಲ್ಲವೇ ಅಂತ ನಿಮಗನ್ನಿಸಬಹುದು. ಖಂಡಿತ ಅನೇಕ ತಪ್ಪುಗಳಿವೆ. ಮೊದಲರ್ಧ ವಿಭಿನ್ನ ಚಿತ್ರಕತೆಯಿಂದ ಬಿಗಿಯಾಗಿ ಸಾಗುವ ಸಿನಿಮಾ, ನಂತರ ಚಿತ್ರಕತೆಯಿಲ್ಲದೇ ಸಾಗುವುದರಿಂದ ಮೊದಲರ್ಧದಲ್ಲಿರುವ ಭಾವನೆಗಳ ತಾಕಲಾಟ ದ್ವಿತಿಯಾರ್ಧದಲ್ಲಿ ಇರುವುದಿಲ್ಲ. ಏಕೆಂದರೆ ಕ್ಯಾಮೆರಾ ಹುಡುಗಿಯನ್ನು ಹಿಂಬಾಲಿಸುವಾಗ ರಸ್ತೆಯ ನಡುವಿನ ಟ್ರಾಪಿಕ್ಕಿನಿಂದಾಗಿ ಅವಳು ಅನೇಕ ಸಲ ಮರೆಯಾಗಿಬಿಡುತ್ತಾಳೆ, ಅನೇಕ ಬಾರಿ ಅವಳನ್ನು ಕ್ಯಾಮೆರಾವೇ ಹುಡುಕಲಾರಂಭಿಸುತ್ತದೆ. ಆಗ ಅರೆರೆ ಇದೇನಿದು ಸಿನಿಮಾನಾ ಅನ್ನಿಸುವುದು ಅವಾಗಲೇ. ಸನ್ನಿವೇಶಗಳೇ ಆ ರೀತಿ ಇರುವಾಗ ಅವೆಲ್ಲಾ ತಪ್ಪುಗಳಲ್ಲವೆಂದು ನನ್ನ ಭಾವನೆ. ಪ್ರತಿಸಿನಿಮಾದಲ್ಲೂ ಒಂದು ಕ್ಲೈಮ್ಯಾಕ್ಸ್ ಇರುತ್ತದೆಯೆನ್ನುವುದು ಎಲ್ಲರ ಭಾವನೆ. ಇದೊಂಥರ ಕ್ಲೈಮ್ಯಾಕ್ಸ್ ಇಲ್ಲದೇ ಅಂತ್ಯವಾಗುವ ಸಿನಿಮಾವೆಂದು ಹೇಳಬಹುದು. ಇವೆಲ್ಲಾ ಈ " ದಿ ಮಿರರ್" ಸಿನಿಮಾ ನೋಡಿದಾಗ ಕಾಡಿದ ಅನುಭವಗಳು. ನಿಮಗೂ ಹೀಗೆ ಕಾಡುವಂತ ಅನುಭವ ಆಗಬೇಕಿದ್ದರೆ ಆ ಸಿನಿಮಾವನ್ನು ನೋಡಿ.

ನಿರ್ಧೇಶಕ ಜಾಫರ್ ಫನಾಯ್


೧೯೯೭ರಲ್ಲಿ ತಯಾರಾದ ಸಿನಿಮಾ ಇಸ್ತಾನ್‍ಬುಲ್ ಪಿಲ್ಮೊತ್ಸವದಲ್ಲಿ "ಗೋಲ್ಡನ್ ಟುಲಿಫ್, ಲೊಕಾರ್ನೋ ಫಿಲ್ಮ್ ಫಸ್ಟಿವಲ್‍ನಲ್ಲಿ "ಗೋಲ್ಡನ್ ಲೆಪ್ಪರ್ಡ್", ಸಿಂಗಪೂರ್ ಫಿಲ್ಮ್ ಫೆಸ್ಟಿವಲ್‍ನಲ್ಲಿ "ಸಿಲ್ವರ್ ಸ್ಕ್ರೀನ್ ಆವರ್ಡ್", ಬಹುಮಾನಗಳನ್ನು ಗೆದ್ದಿದೆ.

ಶಿವು.ಕೆ

60 comments:

ಸವಿಗನಸು said...

ಶಿವು ಸರ್,
ಛಾಯಾಕನ್ನಡಿಯಂತೆ ಸೊಗಸಾದ ನಿರೂಪಣೆಯೊಂದಿಗೆ ನಮಗೆ "ದಿ ಮಿರರ್" ತಿಳಿಸಿದ್ದೀರ...
ಸಿನಿಮಾ ನೋಡಬೇಕೆನಿಸುತ್ತಿದೆ....
ಅಭಿನಂದನೆಗಳು....

PaLa said...

ಸಕ್ಕತ್, ಒಳ್ಳೇ review.. ನೋಡ್ಬೇಕು ಫಿಲ್ಮ್ನ ಒಮ್ಮೆ.. thanks

ಕ್ಷಣ... ಚಿಂತನೆ... said...

ಶಿವು ಅವರೆ, ದಿ ಮಿರರ್‌ - ಇಂತಹ ಒಂದು ಸಿನಿಮಾದ ಬಗ್ಗೆ ಮಾಹಿತಿಯುಕ್ತ ವಿಮರ್ಶೆ(ಎನ್ನಬಹುದೆ?) ಕೊಟ್ಟಿದ್ದೀರಿ. ಸಿನಿಮಾ ನೋಡಬೇಕೆನಿಸಿದೆ.

ಕೆಲವು ಚಿತ್ರಗಳೇ ಹಾಗೆ ನಮ್ಮನ್ನು ತನ್ನೊಳಗೆ ಸೆಳೆದುಕೊಂಡುಬಿಡುತ್ತವೆ. ಈ ಕಥೆಯ ಬರಹ ಓದುತ್ತಿರುವಂತೆಯೇ ಭಾವುಕತೆಯುಂಟಾಗುತ್ತದೆ. ಒಳ್ಳೆಯ ಚಿತ್ರಣ ಕೊಟ್ಟಿದ್ದಕ್ಕೆ ಧನ್ಯವಾದಗಳು.
ಸ್ನೇಹದಿಂದ,

ಚುಕ್ಕಿಚಿತ್ತಾರ said...

ಶಿವು ಸರ್..
ಸಿನಿಮಾದ ಬಗ್ಗೆ ಒ೦ದು ಒಳ್ಳೆಯ ಕಲ್ಪನೆಯನ್ನು ಕಟ್ಟಿಕೊಟ್ಟಿದ್ದೀರಿ...ನೊಡಬೇಕೆನಿಸುತ್ತಿದೆ....
ಥ್ಯಾ೦ಕ್ಸ್...

ಸಾಗರಿ.. said...

ಶಿವೂ ಅವರೆ,
ನಮ್ಮ ಕನ್ನಡ ಚಿತ್ರಗಳಲ್ಲಿ ಹಾಡಿಗೆ ಅವಶ್ಯಕ್ಕಿಂತಲೂ ದೊಡ್ಡದಾಗಿ ಅಥವಾ ಸಣ್ಣದಾಗಿ ಬಾಯಿ ತೆಗೆದು ಹಾಡಿದಂತೆ ನಟಿಸುವಾಗಲಂತೂ ವ್ಯಾಆ ಅನ್ನಿಸಿಬಿಡುತ್ತದೆ. ವಾಸ್ತವತೆಯ ಬಗ್ಗೆ ಚುರೂ ಚಿಂತೆ ಇಲ್ಲದ ಚಿತ್ರಗಳೆ ಹೆಚ್ಚು(ಧರಾವಾಹಿಗಳೂ ಈಗ ಹಾಗೆಯೇ ಆಗಿಬಿಟ್ಟಿವೆ). ಇಂತಹ ವಾಸ್ತವಿಕತೆಯನ್ನೊಳಗೊಂಡ ಚಿತ್ರಗಳನ್ನು ನಿರೀಕ್ಷಿವುದೂ ನಮ್ಮ ತಪ್ಪೆನೋ ಎನ್ನಿಸುತ್ತದೆ. ಖಂಡಿತ ಈ ಚಿತ್ರವನ್ನು ನೋಡುವೆ.

Guruprasad said...

ಶಿವೂ,,
ನೀವು ಇದರ ಬಗ್ಗೆ ಫೋನ್ ನಲ್ಲಿ ಹೇಳಿದಾಗಲೇ , ತುಂಬಾ ಕುತೂಹಲ ಇತ್ತು,, ಇವಾಗ ನಿಮ್ಮ ನವಿರಾದ ಬರಹ ಓದಿ ಇನ್ನು ಜಾಸ್ತಿ ಆಗಿದೆ.... ಈ ಮೂವಿ ನ ಡೌನ್ಲೋಡ್ ಮಾಡಬೇಕು ಅಂತ ಅನ್ಕೊಂಡ್ ಸುಮ್ಮನೆ ಆಗಿದ್ದೆ..ಇವೊತ್ತೇ ಡೌನ್ಲೋಡ್ ಮಾಡಿ... ನೋಡುತ್ತೇನೆ....
ತುಂಬಾ ಥ್ಯಾಂಕ್ಸ್ ಒಳ್ಳೆಯ ಮೂವಿ ಯಾ ಪರಿಚಯ ಮಾಡಿಸಿದ್ದಕ್ಕೆ......
Guru

Dr.D.T.Krishna Murthy. said...

ಶಿವೂ ;ನಮ್ಮೆಲ್ಲರ ಬದುಕಿಗೂ ,ನೀವು ನಿರೂಪಿಸಿರುವ ಮಿರರ್
ಸಿನಿಮಾಕ್ಕೂ ಬಹಳಷ್ಟು ಸಾಮ್ಯವಿದೆ ಎನಿಸುವುದಿಲ್ಲವೇ?
ನಮ್ಮ ಬದುಕೂ ಅಷ್ಟೇ ಅನಿಶ್ಚಿತ!ಒಮ್ಮೊಮ್ಮೆ ಬದುಕಿನ ಪಾತ್ರಗಳು ಸಿನಿಮಾ ಪಾತ್ರಗಳಾಗಿಯೂ, ಸಿನಿಮಾ ಪಾತ್ರಗಳು ಬದುಕಿನ ಪಾತ್ರಗಳಾಗಿಯೂ ಬದಲಾದಂತೆ ಅನಿಸುತ್ತವೆ.ನಿಮ್ಮ ಪುಸ್ತಕ 'ವೆಂಡರ್ ಕಣ್ಣು 'ಓದಿದೆ.ಬಹಳಇಷ್ಟವಾಯಿತು.
ನಿಮ್ಮಿಂದ ಇನ್ನಷ್ಟು ಒಳ್ಳೆಯ ಪುಸ್ತಕಗಳು ಪ್ರಕಟವಾಗಲೆಂದು ಹಾರೈಸುತ್ತೇನೆ.ನಮಸ್ಕಾರ.

PARAANJAPE K.N. said...

ಒ೦ದು ಅತ್ಯುತ್ತಮ ಚಿತ್ರದ ರಿವ್ಯೂ ಮಾಡಿದ್ದೀರಿ, ದಿ ಮಿರರ್ ಎ೦ಬ ಚಿತ್ರಕ್ಕೆ ಕನ್ನಡಿ ಹಿಡಿದಿದ್ದೀರಿ. ನೋಡಬೇಕೆನಿಸಿದೆ.

ಮನಸು said...

ಈ ಸಿನಿಮದ ಬಗ್ಗೆ ನನ್ನ ಸ್ನೇಹಿತೆ ಹೇಳಿದ್ದಳು....ಇಂದು ನೀವು ಅದರ ಪ್ರತಿಬಿಂಬ ನೀಡಿದ್ದೀರಿ......ಧನ್ಯವಾದಗಳು

Subrahmanya said...

Superb. ನೋಡ್ಬೇಕು ಮೂವಿನ.

ಭಾಶೇ said...

ನೋಡಬೇಕು ಎನಿಸುವಂತೆ ಬರೆದಿದ್ದೀರ! ಚೆನ್ನಾಗಿದೆ

sunaath said...

ಒಂದು ಉತ್ತಮ ಸಿನೆಮಾದ ವಿವರ ಕೊಟ್ಟಿದ್ದಕ್ಕಾಗಿ ತುಂಬ ಧನ್ಯವಾದಗಳು.

ದಿನಕರ ಮೊಗೇರ said...

neevu ee movie bagge heLidaagalinda wait maaduttidde idara bagge odalu........ tumbaa dhanyavaada...... time maadikondu nodalebeku....

ಶಿವಪ್ರಕಾಶ್ said...

Good Review :)

ಮನದಾಳದಿಂದ............ said...

ಶಿವು ಸರ್,
ಒಂದು ಉತ್ತಮ ಚಿತ್ರದ ಬಗ್ಗೆ ಮಾಹಿತಿ ಕೊಟ್ಟಿದ್ದೀರಾ.........
ಧನ್ಯವಾದಗಳು

umesh desai said...

ಶಿವು ವಿವರಣೆ ನೀಡಿ ಚಿತ್ರ ನೋಡಿಸೋ ಚಿತಾವಣೆಯೇ...ಧನ್ಯವಾದಗಳು ಅನಿಸಿಕೆ ಹಂಚಿಕೊಂಡಿದ್ದಕ್ಕೆ,

ಸಾಗರದಾಚೆಯ ಇಂಚರ said...

ಶಿವೂ ಸರ್
ತುಂಬಾ ಚೆನ್ನಾಗಿ ವಿವರಿಸಿದ್ದೀರಿ
ಇಂಥಹ ಚಲನಚಿತ್ರಗಳು ಮನಸ್ಸಿಗೆ ಹೆಚ್ಚು ನಾಟುತ್ತವೆ

ಸೀತಾರಾಮ. ಕೆ. / SITARAM.K said...

ನನಗೆ ಆ೦ಗ್ಲ ಚಿತ್ರಗಳ ತಲೆಬುಡ ಅರ್ಥವಾಗೊಲ್ಲ. ನಿಮ್ಮ ಟಿಪ್ಪಣೆ ಓದಿ ಚಿತ್ರ ನೋಡಬೇಕೆನಿಸಿದೆ ಮತ್ತು ನೋಡಿದರೆ ಅರ್ಥ ಮನದಟ್ಟಾಗಿದೆ ಎ೦ದೆನಿಸುತ್ತಿದೆ. ಸೂಕ್ತ ಚೆ೦ದದ ನಿರೂಪಣೆ.

Rakesh Holla said...

Oh..Good article...After reading this article I feel to see this cinema...Thanks..

Snow White said...

tumba chennagide nimma katheya nirupana shyli..cinemane nodida haage aaithu sir..:) :)

ನಾಗರಾಜ್ .ಕೆ (NRK) said...

who all want to watch "The Mirror" movie, check out "UTV World Movies" channel. Shivanna thanks for writing abt movie. really its a good movie.

ಮಿಥುನ ಕೊಡೆತ್ತೂರು said...

chenda ide

ವನಿತಾ / Vanitha said...

Wow..Super:)) nodbeku movie yannu..aa hudugi sakat cute iddale..avala mukhada mugdate thumbaa ishta aaythu.

ತೇಜಸ್ವಿನಿ ಹೆಗಡೆ said...

ಶಿವು ಅವರೆ,

ಒಂದು ಉತ್ತಮ ಚಿತ್ರದ ಕುರಿತು ಬಹು ಉತ್ತಮವಾಗಿ ವಿಮರ್ಶಿಸಿದ್ದೀರಿ. ಒಳ್ಳೆಯ ಸಿನೆಮಾವೊಂದನ್ನು ಪರಿಚಯಿಸಿದ್ದಕ್ಕೆ ತುಂಬಾ ಧನ್ಯವಾದಗಳು. ತಪ್ಪದೇ ನೋಡುವೆ.

shivu.k said...

ಸವಿಗನಸು ಮಹೇಶ್ ಸರ್,

ಇದೊಂದು ಸೊಗಸಾದ ಸರಳ ಸಿನಿಮಾ. ನಿಮಗೆ ಅಲ್ಲಿ ಬೇಗ ಸಿಗಬಹುದು. ಪ್ರಯತ್ನಿಸಿ ನೋಡಿ..

ಧನ್ಯವಾದಗಳು.

shivu.k said...

ಪಾಲಚಂದ್ರ,

ಸಿನಿಮಾ ರಿವ್ಯೂ ಇಷ್ಟಪಟ್ಟಿದ್ದಕ್ಕೆ ಥ್ಯಾಂಕ್ಸ್. ಈ ಸಿನಿಮಾ ನೋಡಿದ ಮೇಲೆ ಹೇಗಿದೆಯೆಂದು ಹೇಳಿ.

shivu.k said...

ಚಂದ್ರು ಸರ್,

ಈ ಸಿನಿಮಾ ಸಿಕ್ಕಮೇಲೆ ಒಂದು ಬಾರಿ ತನ್ಮಯತೆಯಿಂದ ನೋಡುತ್ತಿರುವಾಗಲೇ ಇದರ ಬಗ್ಗೆ ಒಂದು ಲೇಖನವನ್ನು ಬರೆಯಬೇಕೆನಿಸಿತ್ತು. ಮತ್ತೆ ಮತ್ತೆ ನೋಡಿದ ಮೇಲೆ ಅದರ ಎಲ್ಲಾ ಸೂಕ್ಷ್ಮ ವಿವರಗಳನ್ನು ಗಮನಿಸಲು ಸಾಧ್ಯವಾಯಿತು. ವಿಮರ್ಶೆ ಇಷ್ಟಪಟ್ಟಿದ್ದಕ್ಕೆ ಥ್ಯಾಂಕ್ಸ್..

shivu.k said...

ಚುಕ್ಕಿ ಚಿತ್ತಾರ,

ಸಿನಿಮಾ ನೋಡಿದ ಮೇಲೆ ಅದನ್ನು ನನ್ನದೇ ಕಲ್ಪನೆಯಲ್ಲಿ ಬರೆದಿದ್ದೇನೆ. ಅದನ್ನು ಇಷ್ಟಪಟ್ಟಿದ್ದಕ್ಕೆ ಥ್ಯಾಂಕ್ಸ್..

shivu.k said...

ಸಾಗರಿಯವರೆ,

ಈ ಚಿತ್ರವನ್ನು ನೋಡಿದ ಮೇಲೆ ನಮ್ಮ ಸಿನಿಮಾಗಳನ್ನು ಧಾರವಾಹಿಗಳನ್ನು ನೋಡಿದರೆ ನೀವು ಹೇಳಿದಂತೆ ವ್ಯಾಕರಿಕೆಯುಂಟಾಗುತ್ತದೆ. ನಿಜಜೀವನಕ್ಕೆ ಹತ್ತಿರವಿರದೆ, ಜನರನ್ನು ಭ್ರಮೆಯಲ್ಲಿ ಮುಳುಗಿಸಿ, ಹೀರೋ, ಹೀರೋಯಿನ್‍ಗಳನ್ನು ಸೂಪರ್‍ಮ್ಯಾನ್‍ಗಳಂತೆ ಸೃಷ್ಟಿಸಿ, ಅವುಗಳನ್ನು ನೋಡಿದ ನಾವು ಆ ಹೀರೋಗಳಂತೆ ಭ್ರಮೆಯಲ್ಲಿ ತೇಲುವುದರಿಂದೇನು ಪ್ರಯೋಜನ. ಇಂಥ ನಿತ್ಯ ಸತ್ಯಗಳನ್ನು ತೆರೆಗೆ ತಂದರೆ ನಮ್ಮ ಬದುಕು ಮತ್ತಷ್ಟು ಸುಂದರಗೊಳ್ಳಲು ಸಹಕಾರಿಯಾಗುತ್ತದೆ ಅಲ್ವಾ...

ನಿಮ್ಮ ಉತ್ತಮ ಪ್ರತಿಕ್ರಿಯೆಗೆ ಧನ್ಯವಾದಗಳು.

shivu.k said...

ಗುರು,

ನೀವು ನಮ್ಮ ಮನೆಗೆ ಬಂದಾಗ ಈ ವಿಚಾರವನ್ನು ಮಾತಾಡಿದ್ವಿ. ಅದನ್ನೊಮ್ಮೆ ನೀವು ನೋಡಿ. ತುಂಬಾ ಖುಷಿಪಡುತ್ತೀರಿ. ಇಂಥ ಅನೇಕ ಸಿನಿಮಾಗಳನ್ನು ತೆಗೆದಿಟ್ಟಿದ್ದೇನೆ. ನಿದಾನವಾಗಿ ಒಂದೊಂದನ್ನೇ ನೋಡಿ ಬರೆಯುತ್ತೇನೆ. ಬರಹವನ್ನು ಇಷ್ಟಪಟ್ಟಿದ್ದಕ್ಕೆ ಧನ್ಯವಾದಗಳು.

shivu.k said...

ಡಾ.ಕೃಷ್ಣಮೂರ್ತಿ ಸರ್,

ಈ ಸಿನಿಮಾವನ್ನು ನೋಡಿದ ಮೇಲೆ ನಿಮ್ಮ ಅಭಿಪ್ರಾಯವೇ ನನ್ನ ಅಭಿಪ್ರಾಯವೂ ಆಗಿತ್ತು. ಅದನ್ನು ಹಾಗೆ ಬರೆಯಬೇಕೆನ್ನುವ ಉದ್ದೇಶವೂ ನನ್ನದಾಗಿತ್ತು. ಅದನ್ನು ನೀವು ಗುರುತಿಸಿದಿರೆಂದಮೇಲೆ ನನ್ನ ಬರವಣಿಗೆ ಸಾರ್ಥಕ.
ನನ್ನ ವೆಂಡರ್ ಕಣ್ಣು ಪುಸ್ತಕವನ್ನು ಓದಿದ್ದಕ್ಕೆ ಥ್ಯಾಂಕ್ಸ್...ನಿಮ್ಮ ಪ್ರೋತ್ಸಾಹ ಹೀಗೆ ಇರಲಿ..
ಧನ್ಯವಾದಗಳು.

shivu.k said...

ಪರಂಜಪೆ ಸರ್,

ನೀವು ಹೇಳಿದಂತೆ ಇದೊಂದು ಅತ್ಯುತ್ತಮ ಸಿನಿಮಾ. ತಪ್ಪದೇ ನೋಡಿ. ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು.

shivu.k said...

ಮನಸು ಮೇಡಮ್,

ಈ ಸಿನಿಮಾ ಬಗ್ಗೆ ಹೇಳಿದ ನಿಮ್ಮ ಗೆಳತಿಗೊಂದು ಥ್ಯಾಂಕ್ಸ್ ಹೇಳಿ. ಸಿನಿಮಾ ನೋಡಿದ ಮೇಲೆ ನಿಮ್ಮ ಅಭಿಪ್ರಾಯವನ್ನು ತಿಳಿಸಿ.

ಧನ್ಯವಾದಗಳು.

shivu.k said...

ಸುಬ್ರಮಣ್ಯ ಸರ್,

ಸಿನಿಮಾವನ್ನು ಸಾಧ್ಯವಾದಷ್ಟು ಬೇಗ ನೋಡಿ. ಥ್ಯಾಂಕ್ಸ್..

shivu.k said...

ಭಾಶೇ,

ಒಂದು ಒಳ್ಳೆಯ ಸಿನಿಮಾ ಎಲ್ಲರಿಗೂ ತಲುಪಲಿ ಎನ್ನುವ ಉದ್ದೇಶದಿಂದಲೇ ಬರೆದೆ. ಅದು ನಿಮಗೆ ತಲುಪಿದೆ. ಧನ್ಯವಾದಗಳು.

shivu.k said...

ಸುನಾಥ್ ಸರ್,

ಧನ್ಯವಾದಗಳು.

shivu.k said...

ದಿನಕರ್ ಸರ್,

ನಾವು ಫೋನಿನಲ್ಲಿ ಮಾತಾಡುವಾಗ ಈ ವಿಚಾರವನ್ನು ಮಾತಾಡಿದ್ದೆವು. ನೀವು ಬಿಡುವು ಮಾಡಿಕೊಂಡು ಸಿನಿಮಾ ನೋಡಿ ನಿಮ್ಮ ಅಭಿಪ್ರಾಯವನ್ನು ತಿಳಿಸಿ. ಮತ್ತೆ ನಿಮಗೆ "Indian Insects" ಪುಸ್ತಕವನ್ನು ಕಳಿಸಿದ್ದೇನೆ. ತಲುಪಿದ್ದಕ್ಕೆ ತಿಳಿಸಿ..

ಧನ್ಯವಾದಗಳು.

shivu.k said...

ಶಿವಪ್ರಕಾಶ್,

ಥ್ಯಾಂಕ್ಸ್..

shivu.k said...

ಮನದಾಳದ ಪ್ರವೀಣ್,

ಬೇಗ ಚಿತ್ರವನ್ನು ನೋಡಿ ನಿಮ್ಮ ಅಭಿಪ್ರಾಯವನ್ನು ತಿಳಿಸಿ..

ಧನ್ಯವಾದಗಳು.

shivu.k said...

ಉಮೇಶ್ ದೇಸಾಯಿ ಸರ್,

ಚಿತ್ರವನ್ನು ನೋಡಿಸೋ ಉದ್ದೇಶವೇನು ನನಗಿಲ್ಲ. ಆದ್ರೆ ಒಳ್ಳೆಯದನ್ನು ನೋಡಲಿ ಎನ್ನುವ ಉದ್ದೇಶವಷ್ಟೆ. ಅಂದ ಹಾಗೆ ನಾನು ಜಾಫರ್ ಫನಾಯ್ ಕಡೆಯವನಲ್ಲ[ತಮಾಷೆಗೆ]

ಪ್ರತಿಕ್ರಿಯೆಗೆ ಧನ್ಯವಾದಗಳು.

shivu.k said...

ಗುರುಮೂರ್ತಿ ಹೆಗಡೆ ಸರ್,

ನೀವು ಹೇಳಿದಂತೆ ಇಂಥ ಚಿತ್ರಗಳು ಖಂಡಿತ ಮನಸ್ಸಿಗೆ ನಾಟುತ್ತವೆ. ನಿತ್ಯ ಕೆಲಸಗಳ ನಡುವೆ ಇಂಥವನ್ನು ನೋಡಿದಾಗ ಮನಸ್ಸು ಒಂಥರ ನಿರಾಳವಾಗುವುದು ಖಚಿತ.

ಪ್ರತಿಕ್ರಿಯೆಗೆ ಧನ್ಯವಾದಗಳು

shivu.k said...

ಸೀತಾರಾಂ ಸರ್,

ಒಳ್ಳೆಯದನ್ನು ನೋಡುವುದಕ್ಕೆ ಭಾಷೆ ಆಡ್ಡ ಬರುವುದಿಲ್ಲ. ಇದು ಪರ್ಶಿಯನ್ ಭಾಷೆಯ ಇರಾನ್ ಸಿನಿಮಾ. ಚಿತ್ರದ ಜೊತೆಗೆ ಆಂಗ್ಲ subtitles ಇದ್ದಿದ್ದಕ್ಕೆ ನನಗೂ ಸಿನಿಮಾ ಅರ್ಥವಾಯಿತು. ನೀವು ಅದನ್ನು ನೋಡಿದರೆ ಸುಲಭವಾಗಿ ಅರ್ಥವಾಗುತ್ತದೆ. ಮತ್ತಷ್ಟು ಕೆಲವು ಉತ್ತಮ ಚಿತ್ರಗಳು ಸಿಕ್ಕಿವೆ. ಅದನ್ನು ಮುಂದೆ ಎಂದಾದರೂ ಬರೆಯುತ್ತೇನೆ.

ಮತ್ತೆ ನೀವು ಕೇಳಿದ "Indian insects" ಕಳಿಸಿದ್ದೇನೆ.

ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು

shivu.k said...

ರಾಕೇಶ್,

ನನ್ನ ಬರಹವನ್ನು ಓದಿ ಸಿನಿಮಾ ನೋಡಬೇಕೆನಿಸಿದ್ದಕ್ಕೆ ಥ್ಯಾಂಕ್ಸ್..

shivu.k said...

Snow white,

ನಾನು ಬರೆದಿದ್ದು ಕತೆಯಲ್ಲ. ಒಂದು "ದಿ ಮಿರರ್ " ಎನ್ನುವ ಇರಾನ್ ಸಿನಿಮಾ ಬಗ್ಗೆ ರೆವ್ಯೂ ಅಷ್ಟೆ. ನೀವು ಸಿನಿಮಾವನ್ನು ನೋಡಿ. ನಿಮ್ಮ ಅಭಿಪ್ರಾಯವನ್ನು ತಿಳಿಸಿ.

ಧನ್ಯವಾದಗಳು.

shivu.k said...

NRK,

ನೀವು ಹೇಳುವುದು ಸರಿಯಾಗಿದೆ. ಇಂಗ್ಲೀಷ್ "UTV world movies" ಚಾನಲ್ ನೋಡುತ್ತಿದ್ದರೆ ಇಂಥ ಅನೇಕ ಉತ್ತಮ ಸಿನಿಮಗಳನ್ನು ಹಾಕುತ್ತಾರೆ. ನನ್ನ ಬರಹವನ್ನು ಇಷ್ಟಪಟ್ಟಿದ್ದಕ್ಕೆ ಥ್ಯಾಂಕ್ಸ್..ಹೀಗೆ ಬರುತ್ತಿರಿ.

ಧನ್ಯವಾದಗಳು.

shivu.k said...

ಮಿಥುನ,

ಥ್ಯಾಂಕ್ಸ್.

shivu.k said...

ವನಿತಾ,

ಚಿತ್ರದಲ್ಲಿರುವ ಹುಡುಗಿ ನಿಜಕ್ಕೂ ಮುಗ್ದಮುಖ. ಒಮ್ಮೆ ನೋಡಿದರೆ ಮತ್ತೆ ಮತ್ತೆ ನೋಡಬೇಕೆನಿಸುತ್ತದೆ. ಮತ್ತೊಂದು ಸಿನಿಮಾ children of heavan" ನಲ್ಲೂ ಇರುವ ಪುಟ್ಟ ಹುಡುಗಿಯೂ ಇಷ್ಟೇ cute ಆಗಿದ್ದಾಳೆ ನಟಿಸಿದ್ದಾಳೆ ಕೂಡ.

ಬೇಗ ಸಿನಿಮಾವನ್ನು ನೋಡಿ ನಿಮ್ಮ ಅಭಿಪ್ರಾಯವನ್ನು ತಿಳಿಸಿ.

ಧನ್ಯವಾದಗಳು.

shivu.k said...

ತೇಜಸ್ವಿನಿ ಮೇಡಮ್,

ಒಂದು ಉತ್ತಮವಾದ ಸಿನಿಮಾವನ್ನು ನೋಡಿದಾಗ ಹೀಗೆ ಹಂಚಿಕೊಳ್ಳಬೇಕೆನ್ನುವ ಆಸೆ. ಅದನ್ನು ನಾನು ಮಾಡಿದ್ದೇನೆ. ಲೇಖನವನ್ನು ಮೆಚ್ಚಿದ್ದಕ್ಕೆ ಥ್ಯಾಂಕ್ಸ್.

shivu.k said...
This comment has been removed by the author.
AntharangadaMaathugalu said...

ಶಿವು ಸಾರ್...
ನೀವು ನೋಡಿದ ಉತ್ತಮ ಚಿತ್ರದ ವಿಷಯ ನಮ್ಮೊಡನೆ ಹಂಚಿಕೊಂಡಿದ್ದಕ್ಕೆ ಧನ್ಯವಾದಗಳು.

ಶ್ಯಾಮಲ

Snow White said...

sir naanu 'children of heaven' nodiddini..neevu helida tara tumba cute aagidale adaralliruva hudugi kooda :)
naanu helliddu cinemada katheyannu neevu varnisida reeti chennagide antha sir :)

kandita nodtini mirror cinemana :)vandanegalu :)

ಹರೀಶ ಮಾಂಬಾಡಿ said...

excellent

ಸುಧೇಶ್ ಶೆಟ್ಟಿ said...

Cinema nOdalE bEkenishuvashtu kuthoohala moodiside nimma niroopaNe....

download maadalu saadhyave antha noduttEne...

shivu.k said...

ಶ್ಯಾಮಲ ಮೇಡಮ್,

ಚಿತ್ರದ ಬರಹವನ್ನು ಮೆಚ್ಚಿದ್ದಕ್ಕೆ ಥ್ಯಾಂಕ್ಸ್...

shivu.k said...

Snow white,

ನೀವು ಹೇಳಿದಂತೆ children of heavan ಪುಟ್ಟ ಹುಡುಗಿ ತುಂಬಾ ಮುದ್ದಾಗಿದ್ದಾಳೆ.

ಕತೆಯನ್ನು ಬರಹ ರೂಪದಲ್ಲಿ ನಾನು ವರ್ಣಿಸಿರುವುದನ್ನು ಮೆಚ್ಚಿದ್ದಕ್ಕೆ ಥ್ಯಾಂಕ್ಸ್. ಹೀಗೆ ಬರುತ್ತಿರಿ..

ಮತ್ತೊಮ್ಮೆ ಧನ್ಯವಾದಗಳು.

shivu.k said...

ಹರೀಶ್,

ಥ್ಯಾಂಕ್ಸ್..

shivu.k said...

ಸುಧೇಶ್,

ನನ್ನ ಉದ್ದೇಶ ನೀವೆಲ್ಲಾ ಸಿನಿಮಾವನ್ನು ನೋಡಲೇಬೇಕೆನ್ನುವುದಲ್ಲ. ಚಿತ್ರ ನೋಡಿದಾಗ ನನಗನ್ನಿಸಿದನ್ನು ನೇರವಾಗಿ ಬರೆದಿದ್ದೇನೆ. ಪ್ರತಿಯೊಬ್ಬರು ಸಿನಿಮಾವನ್ನು ನೋಡುವ ರೀತಿ ವಿಭಿನ್ನವಾಗಿರುತ್ತದೆ ಅಲ್ಲವೇ..

ಬರಹ ಮೆಚ್ಚಿದ್ದಕ್ಕೆ ಧನ್ಯವಾದಗಳು.

shivu.k said...

Shivu!!
nimma review Odi ee cinema nODde. tumbaa isTavaaytu.
thank you
:-)
malathi S

Prashanth Arasikere said...

hi shivu nimma baraha node irlilla cinema bagge baraha tumba chennagide CD sikkre nodthini,..nimma hatra idre heli..bandu collect madthini..

shivu.k said...

ಪ್ರಶಾಂತ್

ನಿಮ್ಮ ಅಭಿಪ್ರಾಯಕ್ಕೆ ಥ್ಯಾಂಕ್ಸ್..

ಈ ಸಿನಿಮಾ ನನ್ನ ಬಳಿ ಇದೆ. ನೀವು ಬಿಡುವಾದಾಗ ಬನ್ನಿ. ನಾನು CD ಕೊಡುತ್ತೇನೆ..