ಇಷ್ಟೆಲ್ಲಾ ನೋಡುವಷ್ಟರಲ್ಲಿ ಅದೊಂದು ಬಣ್ಣದ ಚಿಟ್ಟೆ ಅಂತ ಗೊತ್ತಾಗಿಬಿಡುತ್ತದೆ ನಿಮಗೆ. ಅಷ್ಟು ದೊಡ್ಡ ಬೆಳ್ಳಿ ಪರಧೆಯಲ್ಲಿ ಅದರ ದೇಹದ ಪ್ರತಿಯೊಂದು ಭಾಗವನ್ನು ರಾಕ್ಷಸಾಕಾರದಲ್ಲಿ ನೋಡುತ್ತಾ ಮೈಮರೆಯುತ್ತಿರುತ್ತೀರಿ..ಅಲ್ಲವೇ...
ಮೊದಲ ಭಾರಿ ಒಂದು ಇಂಚು ಸುತ್ತಳತೆಯ ಬಣ್ಣದ ಚಿಟ್ಟೆಯನ್ನು ಮ್ಯಾಕ್ರೋ ಲೆನ್ಸ್ ಮೂಲಕ ನೋಡಿ ಕ್ಯಾಮೆರಾದಲ್ಲಿ ಕ್ಲಿಕ್ಕಿಸಿದಾಗ ನನಗೂ ನಿಮ್ಮಂತೆ ಅನುಭವವಾಗಿತ್ತು. ಮ್ಯಾಕ್ರೋ ಲೆನ್ಸ್ ಅನ್ನುವ ಆ ಅದ್ಭುತ ಲೆನ್ಸಿನ ತಾಕತ್ತೇ ಅಂತಹುದು. ಒಂದು ಕಣ್ಣನ್ನು ಮುಚ್ಚಿ ಮತ್ತೊಂದು ಕಣ್ಣಿನಲ್ಲಿ ಮ್ಯಾಕ್ರೋ ಲೆನ್ಸ್ ಹಾಕಿರುವ ಕ್ಯಾಮೆರಾ ಕಿಂಡಿಯಲ್ಲಿ ಕಾಣುವ ದೃಶ್ಯವನ್ನು ನೀವೊಮ್ಮೆ ನೋಡಬೇಕು. ಚಿಟ್ಟೆಯಾಗಲಿ, ಪುಟ್ಟ ಹೂವಾಗಲಿ, ಅರ್ದ ಇಂಚಿನಷ್ಟು ಉದ್ದದ ಹುಳುವಾಗಲಿ, ಮಿಡಿತೆಯಾಗಲಿ, ಜೀರುಂಡೆಯಾಗಲಿ, ಜೇಡವಾಗಲಿ, ಇರುವೆಗಳಾಗಲಿ, ಇಬ್ಬನಿಗಳಾಗಲಿ, ಜೇನುನೊಣವಾಗಲಿ, ಕೊನೆಗೆ ಮನೆನೊಣವಾಗಲಿ, ಪ್ರತಿಯೊಂದು ರಾಕ್ಷಸಕಾರದಲ್ಲಿ ಕಾಣುತ್ತವೆ. ಅದರ ಮೈಮೇಲಿನ ಸಣ್ಣ ಸಣ್ಣ ರೋಮಗಳು ನಮ್ಮ ಮನೆಯ ಕೊಳಾಯಿ ಪೈಪುಗಳಷ್ಟು ದೊಡ್ಡದಾಗಿ ಕಾಣುತ್ತಾ ನಮ್ಮನ್ನು ಬೆರಗಾಗಿಸುತ್ತವೆ.
ಹೀಗೆ ಮೊದಲು ನಾನು ಚಿಟ್ಟೆಯನ್ನು ಈ ರೀತಿ ನೋಡಿದ್ದು ನನ್ನ ಹಿರಿಯ ಛಾಯಾಗ್ರಾಹಕರ ಕ್ಯಾಮೆರಾ ಮತ್ತು ಅವರ ಮ್ಯಾಕ್ರೋ ಲೆನ್ಸ್ ಮುಖಾಂತರ. ಆಗ ನನ್ನ ಬಳಿ ಮ್ಯಾಕ್ರೋ ಲೆನ್ಸು ಇರಲಿಲ್ಲ. ನಮ್ಮ ಹಿರಿಯ ಛಾಯಾಗ್ರಾಹಕ ಗೆಳೆಯರ ಜೊತೆ ಚಳಿಗಾಲದ ಮುಂಜಾನೆ ಚಿಟ್ಟೆ ಫೋಟೊಗ್ರಫಿಗೆ ಹೋದಾಗ ಅವರ ಕ್ಯಾಮೆರಾ ಜೊತೆಗಿದ್ದ ಮ್ಯಾಕ್ರೋ ಲೆನ್ಸ್ ಮೂಲಕ ಆ ಅದ್ಭುತ ಲೋಕವನ್ನು ನೋಡಿ ಮನತುಂಬಿಸಿಕೊಳ್ಳುತ್ತಿದ್ದೆ. ಮೈಮರೆಯುತ್ತಿದ್ದೆ. ಆ ನಂತರವೇ ನಾನು ಇಂಥ ಒಂದು ಮ್ಯಾಕ್ರೋ ಲೆನ್ಸ್ ತೆಗೆದುಕೊಳ್ಳಬೇಕು ಅನ್ನಿಸಿತ್ತು. ನೋಡಲು ಪುಟ್ಟದಾದರೂ ಇದು ದುಬಾರಿ ಲೆನ್ಸ್. [ಒಂದು ಒಳ್ಳೆಯ ಅತಿ ಕಡಿಮೆ ಬೆಲೆಯದ್ದು ಬೇಕೆಂದರೂ ಇಪ್ಪತ್ತು ಸಾವಿರ ರೂಪಾಯಿಗಳಂತೂ ಬೇಕೇ ಬೇಕು]. ಹೇಗೋ ಒಂದು ವರ್ಷದಲ್ಲಿ ಹಣಕೂಡಿಸಿ ಒಂದು ಉತ್ತಮ ಮ್ಯಾಕ್ರೋ ಲೆನ್ಸ್ ಕೊಂಡುಕೊಂಡೆ. ನನ್ನ ಜೊತೆಗಾರನಾಗಿದ್ದ ಹಿಂದು ದಿನಪತ್ರಿಕೆಯಲ್ಲಿ ಛಾಯಾಗ್ರಾಹಕನಾಗಿ ಕೆಲಸ ಮಾಡುವ ಮುರಳಿ ಕೂಡ ಮ್ಯಾಕ್ರೋ ಲೆನ್ಸ್ ತೆಗೆದುಕೊಂಡ ಮೇಲೆ ಇಬ್ಬರೂ ಚಿಟ್ಟೆ ಫೋಟೊಗ್ರಫಿಗೆ, ಹೆಸರಘಟ್ಟ, ಬನ್ನೇರುಘಟ್ಟ,........ಹೀಗೆ ಬೆಂಗಳೂರು ದಾಟಿ ೨೫-೩೦ ಕಿಲೋಮೀಟರ್ ದಾಟಿ ಹೋಗುತ್ತಿದ್ದೆವು.
ನಾನು ಒಮ್ಮೆ ಹೀಗೆ ಚಳಿಗಾಲದ ಮುಂಜಾನೆ ಚಿಟ್ಟೆ ಫೋಟೋ ಕ್ಲಿಕ್ಕಿಸುವಾಗಲೇ ನನಗೆ ಫೋನ್ ಬಂತು.
"ಶಿವು, ಏನು ಮಾಡುತ್ತಿದ್ದೀರಿ"
"ನನಗೂ ಗೊತ್ತಿಲ್ಲ ಸರ್"
"ಹೋಗಲಿ ಬಿಡಿ, ನೀವು ಮನೆಗೆ ಹೋದ ಮೇಲೆ ಅದು ಯಾವ ಚಿಟ್ಟೆ, ಹೇಗೆ ಕ್ಲಿಕ್ಕಿಸಿದಿರಿ, ನಿಮ್ಮ ವಾತಾವರಣ ಇತ್ಯಾದಿಗಳನ್ನು ಹಾಗೆ ಬರೆದು, ಫೋಟೊ ಸಮೇತ ನನಗೆ ಕಳಿಸಿ" ಎಂದರು.
"ಸರಿ ಸರ್" ಅಂದವನ್ನು ಮತ್ತೆ ಕ್ಲಿಕ್ಕಿಸತೊಡಗಿದೆ.
[ನಾನು ಅವತ್ತು ಮುಂಜಾನೆ ಕ್ಲಿಕ್ಕಿಸುತ್ತಿದ್ದ ಚಿಟ್ಟೆ. ಇದರ ಹೆಸರು ಗೊತ್ತಿರಲಿಲ್ಲ. ಅವರ ಪುಸ್ತಕವನ್ನು ನೋಡಿದಾಗ ಅದು ಲೈಮ್ ಬಟರ್ ಪ್ಲೈ ಅಂತ ಗೊತ್ತಾಯಿತು.]
ಇಷ್ಟಾದರೂ ನಮ್ಮ ಮ್ಯಾಕ್ರೋ ಫೋಟೋಗ್ರಫಿ ಅಂತ ಹೇಳಿಕೊಳ್ಳುವಂತಿರಲಿಲ್ಲ. ಕಾರಣ ನಮಗೂ ಗೊತ್ತಿರಲಿಲ್ಲ. ಹೊಸ ಹುಮ್ಮಸ್ಸಿನಿಂದ ಹೋಗಿ ಆ ಚಳಿಯಲ್ಲಿ ಚಿಟ್ಟೆಗಳು, ಹುಳುಗಳನ್ನು ಹುಡುಕಿ ಕ್ಲಿಕ್ಕಿಸುತ್ತಿದ್ದೆವು. ನಾವು ಕ್ಲಿಕ್ಕಿಸಿದ ಚಿತ್ರಗಳನ್ನೆಲ್ಲಾ ದೇಶದಲ್ಲಿಯೇ ಅತ್ಯುತ್ತಮ ಮ್ಯಾಕ್ರೋ ಫೋಟೊಗ್ರಫಿಯಲ್ಲಿ ಪರಿಣತರಾದ ಟಿ.ಎನ್.ಎ ಪೆರುಮಾಳ್ರವರಿಗೆ ಏಕೆ ತೋರಿಸಬಾರದು ಅಂತ ನಾನು ಮುರುಳಿ ಅಂದುಕೊಂಡು ಅವರ ಮನೆಗೆ ಹೋದೆವು. ನಮ್ಮ ಫೋಟೊಗ್ರಫಿ ಮತ್ತು ನಮ್ಮ ಹುಮ್ಮಸ್ಸು, ಉತ್ಸಾಹವನ್ನು ನೋಡಿದ ಅವರು,
"ನೋಡಿ, ನಿಮ್ಮ ಉತ್ಸಾಹಕ್ಕೆ ನನ್ನ ಮೆಚ್ಚುಗೆಯಿದೆ. ಆದ್ರೆ ನೀವು ಕ್ಯಾಮೆರಾದಲ್ಲಿ ಕೆಲವೊಂದು ತಾಂತ್ರಿಕ ವಿಚಾರಗಳನ್ನು ಗಮನಿಸಬೇಕು ಎಂದು ಕೆಲವು ಟಿಪ್ಸ್ ಕೊಟ್ಟರು. ಮತ್ತು ಚಿಟ್ಟೆ ಮತ್ತು ಇನ್ನಿತರ ಹುಳುಗಳ ಫೋಟೋ ತೆಗೆಯುವ ಮೊದಲು ನೀವು ಕೆಲವೊಂದು ವಿಚಾರಗಳನ್ನು ಮೊದಲು ಅರಿತುಕೊಳ್ಳಬೇಕು. ಯಾವುದೇ ಚಿಟ್ಟೆಯ ಫೋಟೊ ತೆಗೆಯಬೇಕಾದರೆ, ಅದರ ಸಂಪೂರ್ಣ ಮಾಹಿತಿಯನ್ನು ನೀವು ತಿಳಿದಿರಬೇಕು. ಅದಕ್ಕಾಗಿ ನಿಮಗೊಂದು ಪುಸ್ತಕವನ್ನು ತರಿಸಿಕೊಡುತ್ತೇನೆ" ಅಂದರು.
ಫೀಲ್ಡ್ ಗೈಡ್ ಅಫ್ ಸೌತ್ ಇಂಡಿಯನ್ ಬಟರ್ ಪ್ಲೈಸ್ ಪುಸ್ತಕದ ಮುಖಪುಟ
ಫೀಲ್ಡ್ ಗೈಡ್ ಅಫ್ ಸೌತ್ ಇಂಡಿಯನ್ ಬಟರ್ ಪ್ಲೈಸ್ ಪುಸ್ತಕ ಹಿಂಬದಿ ರಕ್ಷಾ ಪುಟ
ಈಗ ಮುಖ್ಯ ವಿಚಾರ ಬರೋಣ. ಚಿಟ್ಟೆಗಳ ಪುಸ್ತಕವಾಯಿತು. ಈಗ ಭಾರತದಾಧ್ಯಂತ ಮಣ್ಣಿನೊಳಗೆ ಮತ್ತು ಮಣ್ಣ ಮೇಲೆ ಕಾಣಸಿಗುವ ವೈವಿಧ್ಯಮಯ ಹುಳುಗಳು ಮತ್ತು ಕಾಡುಹೂಗಳ ಬಗ್ಗೆ ಪುಸ್ತಕ ಮಾಡಲು ಹೊರಟಿದ್ದಾರೆ ಇದೇ ತಂಡದವರು. ಒಂದು ದಿನ ನನಗೆ ಇದೇ ಪೆರುಮಾಳ್ ಸರ್ ಅವರಿಂದ ಫೋನ್ ಕರೆಬಂತು.
"ಶಿವು, ನಿಮ್ಮ ಬಳಿ ಇರುವ ಎಲ್ಲಾ ಹುಳುಗಳ ಫೋಟೋ ಸಿಡಿ ಕಳಿಸಿ" ಅಂದರು. ನನ್ನ ಮ್ಯಾಕ್ರೋ ಫೋಟೊಗ್ರಫಿಗೆ ಗುರು ಸಮಾನರಾದ ಅವರು ಕೇಳಿದಾಗ ನಾನು ಮರು ಮಾತಾಡದೇ ನನ್ನಲ್ಲಿರುವ ಎಲ್ಲಾ ಹುಳುಗಳ ಚಿತ್ರಗಳನ್ನು ಸಿಡಿಯಲ್ಲಿ ಹಾಕಿ ಅವರಿಗೆ ಪೋಸ್ಟ್ ಮಾಡಿದೆ. ಮರುದಿನ ಪೆರುಮಾಳ ಸರ್ ಮತ್ತೆ ಫೋನ್ ಮಾಡಿದರು. "ಶಿವು, ನಾವು ಮತ್ತೆ ಒಂದು ಹೊಸ ಪುಸ್ತಕವನ್ನು ಹೊರತರಲು ಸಿದ್ಧತೆ ನಡೆಸಿದ್ದೇವೆ. ಈ ಬಾರಿಯ ಪುಸ್ತಕ ನಮ್ಮ ದೇಶದ ಭೂಮಿಯ ಮೇಲೆ ಮತ್ತು ಭೂಮಿಯೊಳಗಿರುವ ಹುಳು, ಹುಪ್ಪಟೆಗಳಿಗೆ ಸಂಭಂದಿಸಿದ್ದು. ನೀವು ತೆಗೆದ ಕೆಲವು ಹುಳುಗಳ ಚಿತ್ರಗಳನ್ನು ನಮ್ಮ ಪುಸ್ತಕಕ್ಕೆ ಬಳಸಿಕೊಳ್ಳಲು ನಿರ್ಧರಿಸಿದ್ದೇವೆ, ಅದಕ್ಕಾಗಿ ನಿಮ್ಮಿಂದ ಫೋಟೊಗಳನ್ನು ತರಿಸಿಕೊಂಡಿದ್ದು" ಅಂದರು. ನನ್ನ ಆನಂದಕ್ಕೆ ಪಾರವೇ ಇರಲಿಲ್ಲ. ಏಕೆಂದರೆ ಅವರದೇ ಪುಸ್ತಕವನ್ನು ಓದಿ ಕಲಿತು ಅಬ್ಯಾಸಮಾಡಿ ಕ್ಲಿಕ್ಕಿಸಿದ ಚಿತ್ರಗಳು ಕೆಲವು ವರ್ಷಗಳ ನಂತರ ಅವರದೇ ಪ್ರಕಾಶನದ ಮತ್ತೊಂದು ಪುಸ್ತಕಕ್ಕೆ ಬಳಕೆಯಾಗುವುದು, ಅದರ ಮೂಲಕ ಸಾವಿರಾರು ಜನರಿಗೆ ತಲುಪುವ ವಿಚಾರವೇ ಒಂದು ರೀತಿ ನನಗೆ ಥ್ರಿಲ್ ಎನ್ನಿಸುತ್ತಿದೆ.
ಇಂಡಿಯನ್ ಇನ್ಸೆಕ್ಟ್ಸ್ ಅಂಡ್ ಆರ್ಕಿಡ್ಸ್ ಪುಸ್ತಕದ ಮುಖಪುಟ
ನಿಮಗೆಲ್ಲರಿಗೂ ಇದು ಅಹ್ವಾನ ಪತ್ರಿಕೆ.
ಇದೇ ಜೂನ್ ಐದರಂದು, ರೇಸ್ ಕೋರ್ಸ್ ರಸ್ತೆಯಲ್ಲಿರುವ ಭಾರತೀಯ ವಿಧ್ಯಾಭವನದ ESV Hall ನಲ್ಲಿ ಬಿಡುಗಡೆಯಾಗುತ್ತಿದೆ. ಈ ಪುಸ್ತಕದಲ್ಲಿ ನಾನು ಕ್ಲಿಕ್ಕಿಸಿದ ಹುಳುಗಳ ಫೋಟೊಗಳು, ಅವುಗಳ ವಿವರಗಳಷ್ಟೇ ಅಲ್ಲದೇ ದೇಶದ ಪ್ರಖ್ಯಾತ ಮ್ಯಾಕ್ರೋ ಛಾಯಾಗ್ರಾಹಕರು ಕ್ಲಿಕ್ಕಿಸಿದ ನೂರಾರು ಹುಳುಗಳ ಫೋಟೊಗಳು ಮತ್ತು ಅದರ ವಿವರಗಳು ಈ ಪುಸ್ತಕದಲ್ಲಿವೆ. ಪುಸ್ತಕದ ಹೆಸರು "ಫೀಲ್ಡ್ ಗೈಡ್ ಅಫ್ ಇಂಡಿಯನ್ ಇನ್ಸೆಕ್ಟ್". ಇದು ನಿಜಕ್ಕೂ ಒಂದು ಅದ್ಭುತ ಪುಸ್ತಕ. ನೂರಾರು ಹುಳಗಳ ವಿವರ ಸಹಿತ ಚಿತ್ರಗಳಿರುವ ಇದು ನಿಜಕ್ಕೂ ಅದ್ಭುತ ಪುಸ್ತಕ.ಪ್ರತಿಯೊಬ್ಬರ ಮನೆಯಲ್ಲೂ ಇರಬೇಕಾದಂತವುದು. ಇಂಥ ಪುಸ್ತಕವೊಂದು ಮನೆಯಲ್ಲಿದ್ದರೇ ಮಕ್ಕಳು ಸೇರಿದಂತೆ ವಯಸ್ಸಾದ ಹಿರಿಯರಲ್ಲೂ ಪ್ರಕೃತಿ ಬಗ್ಗೆ ಸಹಜವಾಗಿ ಆಸಕ್ತಿ ಹುಟ್ಟಿಸುತ್ತದೆ. ಇನ್ನೂ ಇಂಥ ವಿಚಾರಗಳಲ್ಲಿ ಆಸಕ್ತಿಯಿರುವ ಛಾಯಾಗ್ರಾಹಕರಲ್ಲಿ ಇರಲೇ ಬೇಕಾದ ಪುಸ್ತಕ.
ಈ ಪುಸ್ತಕ ಇದೇ ಜೂನ್ ೫ನೇ ತಾರೀಖಿನಂದು ಸಂಜೆ ೪-೩೦ ಕ್ಕೆ ಬಿಡುಗಡೆಯಾಗುತ್ತಿದೆ. ಬನ್ನಿ ನಾವೆಲ್ಲಾ ಹುಳುಗಳು, ಕಾಡುಹೂಗಳ ಲೋಕಕ್ಕೆ ಜೊತೆಯಾಗಿ ಸಾಗೋಣ.
ಚಿತ್ರಗಳು ಮತ್ತು ಲೇಖನ.
ಶಿವು.ಕೆ
54 comments:
ಶಿವೂ ಸರ್,
ತುಂಬಾ ಖುಷಿಯಾಗುತ್ತಿದೆ....... ನಮಗೆ ತಿಳಿದ ಬ್ಲಾಗ್ ಸ್ನೇಹಿತರ ಉತ್ತಮ ಫೋಟೋಗಳು , ಒಂದು ಐತಿಹಾಸಿಕ ಪುಸ್ತಕದಲ್ಲಿ ಪ್ರಕಟವಾಗುತ್ತಿದೆ ಎಂದು.......... best of luck ಸರ್...... ಬ್ಲಾಗ್ ಕೂಟದಲ್ಲಿ ತನ್ನಿ ಸರ್.... ನಾನು ಪುಸ್ತಕ ಕೊಳ್ಳುತ್ತೇನೆ ..............
Hi Vhivu,
Nice article and wonderful pics. Many congratulations on the new book...!!!
One thing to be corrected... it is IMAX theater... not INAX.
Regards
Dr. Shyama Prasad Sajankila
ಶಿವು,
ನಿಮಗೆ ಅಭಿನಂದನೆಗಳು. ಸಮಾರಂಭಕ್ಕೆ ಶುಭ ಹಾರೈಕೆಗಳು.
Nice article and good information. All the best for you.
ಶಿವು,
ನನಗೆ ಇವತ್ತು ಈ ಕಾರ್ಯಕ್ರಮದ ಆಹ್ವಾನ ಪತ್ರಿಕೆ ಬಂತು. ತುಂಬ ಸಂತಸವಾಯಿತು. ನಿಮ್ಮಿಂದಾಗಿ ಪರಿಚಯಿಸಲ್ಪಟ್ಟು ನನ್ನ ಚಿತ್ರಗಳೂ ಈ ಪುಸ್ತಕದಲ್ಲಿ ಬೆಳಕು ಕಂಡಿವೆ.ನಿಮ್ಮದು ನಾಲ್ಕು ಚಿತ್ರಗಳು ಹಾಗೂ ನನ್ನವು ಏಳು ಚಿತ್ರಗಳು ಈ ಪುಸ್ತಕದಲ್ಲಿ ಪ್ರಕಟವಾಗಿರುವುದನ್ನು ನೀವು ಮ್ಯಾಕ್ರೋ(Photography) ಪ್ರೀತಿಯೊಂದಿಗೆ ಬೆರೆಸಿ ಬರೆದಿರುವುದು ತುಂಬ ಚೆನ್ನಾಗಿದೆ.
ಕಂಗ್ರಾಟ್ಸ್ ಶಿವು ಸರ್. ಪುಸ್ತಕ ಬಿಡುಗಡೆಗೆ ಬರಲು ಪ್ರಯತ್ನಿಸುತ್ತೇನೆ.
ರಸವತ್ತಾಗಿ ಕಥೆ ಹೇಳುತ್ತಾ ಹೋಗೋದು ನೋಡಿದಾಗ ಚಿಟ್ಟೆಗಳ ಫೋಟೋ ಬರುತ್ತೆನೋ ಅ೦ಥಾ ಕಾಯ್ತಾ ಇದ್ದೆ. ಹಾಗ೦ತ ಲೇಖನ ಓದದೇ ಮು೦ದೆ ಹೋಗಲಿಕ್ಕೂ ಆಗದಷ್ಟು ರಸವತ್ತು ವರ್ಣನೆ. ಕೊನೆಗೆ ಸಿಕ್ಕಿದ್ದು ಆಮ೦ತ್ರಣ. ಚೆನ್ನಗಿದೆ. ಸಿನೇಮಾ, ದೈತ್ಯ ಚಿಟ್ಟೆ, ಲೆನ್ಸ್, ತಮ್ಮ ಅನುಭವ, ಹುಳು ಕೊನೆಗೆ ಪುಸ್ತಕ, ತು೦ಬಾ ಚೆನ್ನಾಗಿ ಹೊ೦ದಿಸಿದ್ದಿರಾ....
ತಮ್ಮ ಕುಸುರಿ ಚೆನ್ನಾಗಿದೆ. ಪುಸ್ತಕ ಖ೦ಡಿತ ತೆಗೆದುಕೋಬೇಕು!
ಶಿವೂ;ಮೊದಲಿಗೆ ನಿಮ್ಮ ಚಿತ್ರಗಳು ಪ್ರಸಿದ್ದ ಪುಸ್ತಕವೊಂದರಲ್ಲಿ
ಪ್ರಕಟವಾಗುತ್ತಿರುವುದಕ್ಕೆ ನಿಮಗೆ ಹಾರ್ದಿಕ ಅಭಿನಂದನೆಗಳು.
ಇದು ಎಲ್ಲಾ ಬ್ಲಾಗಿಗರೂ ಹೆಮ್ಮೆ ಪಡುವ ವಿಷಯ.ನಿಮ್ಮ ಸಂತೋಷದಲ್ಲಿ ನಾವೂ ಭಾಗಿಗಳು.ನನ್ನ ಬ್ಲಾಗಿಗೂ ಭೇಟಿ ಕೊಡಿ ,ನಮಸ್ಕಾರ.
Hats off to you Shivu..
ಇಂತಹ ಇನ್ನು ಹೆಚ್ಚಿನ ಪುಸ್ತಕಗಳು ನಿಮ್ಮಿಂದ ಬರಲಿ..
ಶಿವು ಸರ್,
ನಿಮ್ಮ ಚಿತ್ರಗಳು ಒಂದು ಐತಿಹಾಸಿಕ ಪುಸ್ತಕದಲ್ಲಿ ಪ್ರಕಟವಾಗುತ್ತಿರುವುದು ನಮಗೆಲ್ಲ ಸಂತಸದ ವಿಷಯ. ಈ ಸಂತೋಷಕ್ಕಾಗಿ ನಿಮಗೆ ಹಾರ್ದಿಕ ಅಭಿನಂದನೆಗಳು.
Congradulations sir. ಶುಭವಾಗಲಿ.
ಶಿವೂ ಸರ್
ಉತ್ತಮ ಲೇಖನ
ನಂಗೆ ಬಿಡುಗಡೆಗೆ ಬರೋಕೆ ಆಗ್ತಾ ಇಲ್ಲ ಅನ್ನೋ ನೋವಿದೆ
ಸಮಾರಂಭದ ಬಗೆಗೆ ಬರೆಯಿರಿ
Congratulations shivu sir.
ದಿನಕರ್ ಸರ್,
ನೀವು ಹೇಳಿದಂತೆ ಇದು ಐತಿಹಾಸಿಕ ಪುಸ್ತಕವೆನ್ನುವುದು ಸರಿ. ಏಕೆಂದರೆ ಅವರ ಹಿಂದಿನ ಪುಸ್ತಕ ಎಷ್ಟು ದುಡ್ಡು ಕೊಟ್ಟರೂ ಸಿಗದಂತಾಗಿದೆ. ನೀವು ಹೇಳಿದಂತೆ ನಮ್ಮ ಕಾರ್ಯಕ್ರಮದಲ್ಲಿ ತರುತ್ತೇನೆ. ಆಸಕ್ತಿಯಿದ್ದವರು ಕೊಳ್ಳಬಹುದು.
ಧನ್ಯವಾದಗಳು.
Dr.Shyam Sajankila sir,
Welcome to my blog.
Thanks for your compliments and wishes.
And yesterday I saw in mantri mal multiplex name. that is Inax only.
thanks for coming once again.
keep in touch.
ಸುನಾಥ್ ಸರ್,
ನಿಮ್ಮ ಶುಭಾಶಯಗಳಿಗೆ ನನ್ನ ಧನ್ಯವಾದಗಳು.
ಬಾಲು ಸರ್,
ಧನ್ಯವಾದಗಳು ಮತ್ತು ಬಿಡುವು ಮಾಡಿಕೊಂಡು ಕಾರ್ಯಕ್ರಮಕ್ಕೆ ಬನ್ನಿ.
ಮಲ್ಲಿಕಾರ್ಜುನ್,
ಪರಿಚಯದ ವಿಚಾರ ಬಂದಾಗ ನನ್ನ ಹೆಗ್ಗಳಿಕೆಯೇನು ಇಲ್ಲ. ನನ್ನನ್ನು ಮೊದಲು ಪೆರುಮಾಳ್ ಸರ್ಗೆ ಪರಿಚಯಿಸಿದ ವ್ಯಕ್ತಿಯನ್ನು ನಾನು ಈ ಸಮಯದಲ್ಲಿ ನೆನಪಿಸಿಕೊಳ್ಳಬೇಕು ಅಲ್ಲವೇ. ಮತ್ತೆ ನಮ್ಮ ಇಷ್ಟು ದಿನದ ಶ್ರಮಕ್ಕೆ ಈಗ ಬೆಲೆ ಬರುತ್ತಿದೆ ಎನ್ನಿಸುತ್ತಿದೆ.
ಮತ್ತೆ ನನ್ನ ಚಿತ್ರಗಳು ಪುಸ್ತಕದಲ್ಲಿ ಪ್ರಕಟವಾಗುತ್ತಿರುವುದು ನಾಲ್ಕಲ್ಲ. ಆರು ಚಿತ್ರಗಳು.
ಧನ್ಯವಾದಗಳು.
ಸುಮಾ ಮೇಡಮ್,
ಧನ್ಯವಾದಗಳು. ನಿಮ್ಮನ್ನು ಕಾರ್ಯಕ್ರಮದಲ್ಲಿ ನಿರೀಕ್ಷಿಸುತ್ತೇನೆ.
ಸೀತಾರಾಂ ಸರ್,
ಚಿಟ್ಟೆ ಅಥವ ಹುಳುಗಳ ಫೋಟೋಗಳನ್ನು ಮ್ಯಾಕ್ರೋ ಲೆನ್ಸ್ ಮೂಲಕ ನೋಡುವ ಅನುಭವವೇ ಅಂಥವುದು. ಫೋಟೋ ತೆಗೆಯುವ ಮೊದಲು ಅದನ್ನು ಆಸ್ವಾದಿಸುದನ್ನು ಕಲಿತುಬಿಟ್ಟರೆ ಆ ಕ್ಷಣದಲ್ಲಿ ಪ್ರಪಂಚವೇ ನಮಗೆ ಸಿಕ್ಕಂತೆ ಆನಂದವಾಗುತ್ತದೆ.
ಪುಸ್ತಕ ಬಿಡುಗಡೆಯಾದಮೇಲೆ ಹೇಗಿದೆಯೆಂದು ಹೇಳುತ್ತೇನೆ. ನಂತರ ನಿಮಗೆ ಆಸಕ್ತಿಯಿದ್ದಲ್ಲಿ ನೀವು ಕೊಳ್ಳಬಹುದು.
ಲೇಖನ ಮೆಚ್ಚಿದ್ದಕ್ಕೆ ಧನ್ಯವಾದಗಳು.
ಡಾ.ಡಿ.ಟಿ.ಕೃಷ್ಣಮೂರ್ತಿ ಸರ್,
ನನ್ನ ಬ್ಲಾಗಿಗೆ ಸ್ವಾಗತ. ನಿಮ್ಮ ಅಭಿನಂದನೆಗೆ ನನ್ನ ಕಡೆಯಿಂದ ಧನ್ಯವಾದಗಳು. ಈ ವಿಚಾರವನ್ನು ಹಂಚಿಕೊಳ್ಳುವುದರಲ್ಲಿ ನನಗೂ ಸಂತೋಷವೆನಿಸುತ್ತೆ..
ಮತ್ತೆ ಬಿಡುವು ಮಾಡಿಕೊಂಡು ನಿಮ್ಮ ಬ್ಲಾಗನ್ನು ನೋಡುತ್ತೇನೆ ಸರ್.
ಹೀಗೆ ಬರುತ್ತಿರಿ.
ವನಿತಾ,
ಧನ್ಯವಾದಗಳು. ಹೀಗೆ ಬರುತ್ತಿರಿ..
ಮನದಾಳದ ಪ್ರವೀಣ್ ಸರ್,
ಅಂಥ ಪುಸ್ತಕದಲ್ಲಿ ನಾವು ಕ್ಲಿಕ್ಕಿಸಿದ ಚಿತ್ರಗಳು ಬರುತ್ತಿರುವುದು ನನಗೂ ಸಂತೋಷವಾಗಿದೆ.
ನಿಮ್ಮ ಅಭಿನಂದನೆಗೆ ಧನ್ಯವಾದಗಳು.
ಸುಬ್ರಮಣ್ಯ ಸರ್,
ಧನ್ಯವಾದಗಳು. ಕಾರ್ಯಕ್ರಮಕ್ಕೆ ಬನ್ನಿ.
ಗುರುಮೂರ್ತಿ ಹೆಗಡೆ ಸರ್,
ನೀವು ತುಂಬಾ ದೂರವಿದ್ದರೂ ಬರುವ ಆಸೆ ವ್ಯಕ್ತಪಡಿಸಿದ್ದೀರಿ. ಅಲ್ಲಿಂದಲೇ ನಿಮ್ಮ ಶುಭಾಶಯಗಳನ್ನು ಇಷ್ಟಪಟ್ಟು ಕಳಿಸುತ್ತಿದ್ದೀರಿ. ಅದಕ್ಕಾಗಿ ಧನ್ಯವಾದಗಳು.
ನಿಷಾ,
ಧನ್ಯವಾದಗಳು.
wow congrats!!!! ಒಳ್ಳೆ ಮಾಹಿತಿ ಸರ್, ನಾವು ಇಂತಹ ಕಾರ್ಯಕ್ರಮಗಳನ್ನು ಎಷ್ಟು ಮಿಸ್ ಮಾಡ್ಕೋತೀವಿ. ನಿಮಗೆ ಶುಭವಾಗಲಿ
ಶಿವು ಸರ್,
ಮೊದಲಿಗೆ ನಿಮಗೆ ಮತ್ತು ಮಲ್ಲಿಕಾರ್ಜುನ ಅವರಿಗೆ
ಹಾರ್ದಿಕ ಅಭಿನಂದನೆಗಳು.
ನಿಮ್ಮನ್ನು ಭೇಟಿಯಾದಾಗ ಈ ವಿಷಯವನ್ನು
ತಿಳಿಸಿದ್ದಿರಿ. ತುಂಬಾ ಖುಷಿಯಾಗಿದೆ.
ಪುಸ್ತಕವನ್ನು ಖಂಡಿತ ಕೊಂಡುಕೊಳ್ಳುತ್ತೆನೆ.
Congrats sir, unfortunately i will not be able to make it to this wonderful event.
Shivu,
Oh you were talking about that multiplex is it?
I was thinking about IMAX theaters....!
I am a regular reader of your posts with a very bad habit... of NOT POSTING a comment...!
Regards
Dr. Shyam Prasad Sajankila
ವಾವ್!
ಒಳ್ಳೆಯದಾಗಲಿ
ಶಿವೂ ಅವರೇ,
ತುಂಬಾ ಖುಷಿ ಅನ್ನಿಸ್ತುತ್ತಿದೆ. ಚಿಟ್ಟೆಗಳ ಬಗೆಗಿನ ನಿಮ್ಮ ಆಸಕ್ತಿ, ಚಿಟ್ಟೆಗಳ ಸುಂದರ ಫೋಟೋಗಳು ನಿಜಕ್ಕೂ ಪ್ರಶಂಸನೀಯ.
ನಿಮ್ಮ ಚಿತ್ರಗಳೂ ಪುಸ್ತಕದಲ್ಲಿ ಸೇರಿ ಪ್ರಕಟಣೆ ಆಗುತ್ತಿರುವುದು ಸಂತಸ.
ಅಭಿನಂದನೆಗಳು
-ಪ್ರಶಾಂತ್ ಭಟ್
ಶಿವು, ನಿಮ್ಮ ಚಿಟ್ಟೆ-ಕಥೆ ಬಹಳ ಚನ್ನಾಗಿದೆ..ಇದು ಎಲ್ಲರ (ಶಾಸ್ತ್ರಿಗಳು ಮತ್ತು ಪುಸ್ತಕಪ್ರೇಮಿಗಳು) ಪ್ರಿಯ ಪುಸ್ತಕವಾಗುತ್ತೆ ಅನ್ನೋದ್ರಲ್ಲಿ ಸಂಶಯವೇ ಬೇಡ...ನಿಮ್ಮ ಪುಸ್ತಕ ಬಿಡುಗಡೆ ಕಾರ್ಯಕ್ರಮಕ್ಕೆ ಶುಭಕೋರ್ತೇನೆ.
ಸಕ್ಕತ್ ಶಿವು, congrats.. ಈ ಶನಿವಾರ ವಯುಕ್ತಿಕ ಕೆಲಸವೊಂದಿದೆ.. ಅದು ಬೇಗನೆ ಮುಗಿದು ಸಾಧ್ಯವಾದರೆ ಭೇಟಿ ನೀಡುತ್ತೇನೆ.. ಇವೆರಡೂ ಪುಸ್ತಕ ನನಗೆ ಬೇಕು.. ಯಾವ ಮಳಿಗೆಯಲ್ಲಿ ಸಿಗುತ್ತದೆ ಎಂದೂ ತಿಳಿಸಿ
ಮನಸು ಮೇಡಮ್,
ನೀವು ಕಾರ್ಯಕ್ರಮವನ್ನು ಮಿಸ್ ಮಾಡಿಕೊಳ್ಳುತ್ತಿದ್ದೇನೆಂಬ ಬೇಸರ ಬೇಡ. ಆಗಸ್ಟ್ ನಲ್ಲಿ ನೀವು ಬೆಂಗಳೂರಿಗೆ ಈ ಪುಸ್ತಕವನ್ನು ತೋರಿಸುತ್ತೇನೆ.
ನಿಮ್ಮ ಅಭಿನಂದನೆಗೆ ಧನ್ಯವಾದಗಳು.
ಸಲೀಂ ನಿಮ್ಮ ಶುಭಾಶಯಕ್ಕೆ ಧನ್ಯವಾದಗಳು. ನಿಮ್ಮ ಉತ್ಸಾಹ ಮತ್ತು ಆಸಕ್ತಿಗೆ ಇಂಥ ಪುಸ್ತಕಗಳು ನಿಮ್ಮ ಬಳಿ ಇರಲೇ ಬೇಕು.
ಪುಸ್ತಕವನ್ನು ತೆಗೆದುಕೊಂಡ ಮೇಲೆ ಉತ್ತಮ ಮ್ಯಾಕ್ರೋ ಫೋಟೊ ಮಾಡಲಿಕ್ಕೆ ಈಗಿನಿಂದಲೇ ನನ್ನ ಕಡೆಯಿಂದ ಬೆಸ್ಟ್ ಅಪ್ ಲಕ್!
ಉದಯ ಹೆಗಡೆ,
ಈಗ ತಾನೆ ಒಂದು ಉತ್ತಮ SLR ತೆಗೆದುಕೊಂಡಿದ್ದೀರಿ. ಮತ್ತೆ ಸದ್ಯದಲ್ಲೇ ಒಂದು ಮ್ಯಾಕ್ರೋ ಲೆನ್ಸ್ ತೆಗೆದುಕೊಂಡುಬಿಡಿ. ನೀವು ಕಾರ್ಯಕ್ರಮವನ್ನು ತಪ್ಪಿಸಿಕೊಳ್ಳದಂತೆ ಬರಲು ಸಾದ್ಯವೇ ನೋಡಿ...
ಧನ್ಯವಾದಗಳು.
ಡಾ.ಶ್ಯಾಮ್ ಪ್ರಸಾದ್ ಶಾಜನ್ ಕಿಲ,
ಇನಾಕ್ಸ್, ಅಥವ ಐಮ್ಯಾಕ್ಸ್ ವಿಚಾರದಲ್ಲಿ ಗೊಂದಲ ಬೇಡ. ಅದು ಬರಹದಲ್ಲಿನ ಬಳಕೆಗಾಗಿ ಬರೆದದ್ದು.
ಮತ್ತೆ ನೀವು ನನ್ನ ಬ್ಲಾಗನ್ನು ನಿತ್ಯ ಓದುತ್ತಿರುವುದು ನನಗೆ ಖುಷಿ ತಂದಿದೆ. ನೀವು ಹಾಗೆ ಕಾಮೆಂಟು ಹಾಕಿದರೆ ನಿಮ್ಮ ಅಭಿಪ್ರಾಯ ನಮಗೂ ಗೊತ್ತಾಗುತ್ತದೆ. ಪ್ರಯತ್ನಿಸಿ..
ಧನ್ಯವಾದಗಳು.
ಭಾಶೇ!,
ಧನ್ಯವಾದಗಳು.
ಪಾಚು ಪ್ರಪಂಚದ ಪ್ರಶಾಂತ್ ಭಟ್,
ನಿಮಗೆ ಖುಷಿಯಾಗಿರುವುದು ನನಗೂ ಖುಷಿ. ಚಿಟ್ಟೆಗಳ ಬಗೆಗೆ ನನಗೆ ಮೊದಲಿನಿಂದಲೂ ಅಸಕ್ತಿ. ಅದನ್ನು ಹೀಗೆ ಹಂಚಿಕೊಳ್ಳುವುದರಲ್ಲೂ ಒಂಥರ ಖುಷಿ ಎನಿಸುತ್ತೆ.
ಬಿಡುವು ಮಾಡಿಕೊಂಡು ಕಾರ್ಯಕ್ರಮಕ್ಕೆ ಬನ್ನಿ.
ಧನ್ಯವಾದಗಳು.
ಚೈತ್ರಿಕಾ,
ಧನ್ಯವಾದಗಳು.
ಪಾಲಚಂದ್ರ,
ಶನಿವಾರ ಬಿಡುವು ಮಾಡಿಕೊಂಡು ಕಾರ್ಯಕ್ರಮಕ್ಕೆ ಬಂದುಬಿಡಿ. ಆ ಪುಸ್ತಕ ನನಗೆ ತಿಳಿದಂತೆ ಅಂಗಡಿಗಳಲ್ಲಿ ಸಿಗುವುದಿಲ್ಲ. ಏಕೆಂದರೆ ಮೊದಲನೇ ಪುಸ್ತಕವನ್ನು ನಾನು ಬೆಂಗಳೂರಿನ ಯಾವುದೇ ಅಂಗಡಿಗಳಲ್ಲಿ ಕೊಂಡುಕೊಳ್ಳಲಿಲ್ಲ. ಮತ್ತೆ ಅದು ನೀವು ಎಷ್ಟು ದುಡ್ಡು ಕೊಟ್ಟರೂ ಸಿಗುವುದಿಲ್ಲ. ಅದಕ್ಕಾಗಿ ಈ ಪುಸ್ತಕವನ್ನು ಕಾರ್ಯಕ್ರಮದಲ್ಲೇ ತೆಗೆದುಕೊಂಡುಬಿಟ್ಟರೆ ಒಳ್ಳೆಯದೆಂದು ನನ್ನ ಭಾವನೆ.
ಧನ್ಯವಾದಗಳು.
ಶಿವಣ್ಣ....
ತು೦ಬಾ ಸ೦ತೋಷವೆನಿಸುತ್ತಿದೆ! ಅಧ್ಭುತ ಸೃಷ್ಟಿಸುತ್ತಿದ್ದೀರಿ :) ಹೀಗೆ ಸಾಕಲಿ :)
ಶಿವು ಸರ್...
ಮುಂದೊಂದು ದಿನ ಫೋಟೊಗ್ರಫಿಯ ಬಗೆಗೆ..
ನಿಮ್ಮ ಮತ್ತು ಮಲ್ಲಿಕಾರ್ಜು ಅವರ ಸ್ವತಂತ್ರ ಪುಸ್ತಕಗಳು ಬರಲಿ...
ನಿಮಗೂ...
ಮಲ್ಲಿಕಾರ್ಜುನರಿಗೂ... ಹೃತ್ಪೂರಕ ಅಭಿನಂದನೆಗಳು...
ಸುಧೇಶ್,
ನಿಮ್ಮ ಅಭಿಪ್ರಾಯಕ್ಕೆ ಧನ್ಯವಾದಗಳು.
ಪ್ರಕಾಶ್ ಸರ್,
ನಿಮ್ಮ ಆಸೆಯಂತೆ ಆ ಪ್ರಯತ್ನದಲ್ಲಿದ್ದೇವೆ. ನಿಮ್ಮ ಅಭಿನಂದನೆಗೆ ಧನ್ಯವಾದಗಳು.
ಶಿವು ಸರ್,
ಶುಭಾಶಯಗಳು.
ಹೊಸ ಪುಸ್ತಕ ಹೊರಬರುತ್ತಿರುವ ಮಾಹಿತಿ ಕೊಟ್ಟಿದ್ದಕ್ಕೆ ಧನ್ಯವಾದಗಳು.ಪುಸ್ತಕದಲ್ಲಿ ನೀವು ತೆಗೆದ ಫೋಟೊಗಳೂ ಇರುವುದು ಕನ್ನಡಿಗರಿಗೆ ಹೆಮ್ಮೆಯ ಸಂಗತಿ.
ಕುಸುಮಾ ಸಾಯಿಮನೆ
ಶಿವೂ, ನಿಮಗೆ ಹಾರ್ದಿಕ ಅಭಿನ೦ದನೆಗಳು. ನಿಮ್ಮ ಲೇಖನದ ಮಾಹಿತಿ-ಚಿತ್ರಗಳು ಎಲ್ಲವೂ ತು೦ಬ ಚೆನ್ನಾಗಿವೆ. ಪುಸ್ತಕ ಬಿಡುಗಡೆಗೆ ಬರಲಾಗುತ್ತಿಲ್ಲ. ಅ೦ದು ನಾನು ಊರಿಗೆ ಹೋಗಬೇಕಿದೆ. ಶುಭವಾಗಲಿ.
ಶಿವು ಸರ್,
ಶುಭಾಶಯಗಳು.
ಹೊಸ ಪುಸ್ತಕ ಹೊರಬರುತ್ತಿರುವ ಮಾಹಿತಿ ಕೊಟ್ಟಿದ್ದಕ್ಕೆ ಧನ್ಯವಾದಗಳು.ಪುಸ್ತಕದಲ್ಲಿ ನೀವು ತೆಗೆದ ಫೋಟೊಗಳೂ ಇರುವುದು ಕನ್ನಡಿಗರಿಗೆ ಹೆಮ್ಮೆಯ ಸಂಗತಿ.
ಕುಸುಮಾ ಸಾಯಿಮನೆ
ಪರಂಜಪೆ ಸರ್,
ಪುಸ್ತಕದಲ್ಲಿರುವ ಮಾಹಿತಿಯನ್ನು ಕೊಟ್ಟಿದ್ದೇನೆ. ತೊಂದರೆಯಿಲ್ಲ. ಮತ್ತೆ ಬಿಡುವಾದಾಗ ಪುಸ್ತಕವನ್ನು ನಿಮಗೆ ತೋರಿಸುತ್ತೇನೆ.
ಧನ್ಯವಾದಗಳು.
ಕುಸುಮಾ ಮೇಡಮ್,
ನಮಗಾಗುವ ಸಂತೋಷವನ್ನು ಹಂಚಿಕೊಳ್ಳುವುದರಲ್ಲಿ ಆನಂದ ಹೆಚ್ಚು. ಬಿಡುವು ಮಾಡಿಕೊಂಡು ಕಾರ್ಯಕ್ರಮಕ್ಕೆ ಬನ್ನಿ.
ಧನ್ಯವಾದಗಳು.
ಶಿವು..ಮೊನ್ನೆ ಸಿಂಗಾಪುರದಲ್ಲಿ ಪಕ್ಷಿಗಳ ಪಾರ್ಕಿಗೆ ಹೋಗಿದ್ದಾಗ ನಿಮ್ಮನ್ನ ತುಂಬಾ ನೆನಪಿಸಿಕೊಂಡೆ! ನಿಮ್ಮ ಕ್ಯಾಮರಾ ಕಣ್ಣಲ್ಲಿ ಅವುಗಳು ಹೇಗೆ ಬರುತಿದ್ವೋ ಅಂತ! ತುಂಬಾ ಸುಂದರವಾದ ಲೇಖನ..
ಸುಮನಾ ಮೇಡಮ್,
ಸಿಂಗಪೂರ್ ನಲ್ಲಿ ನನ್ನನ್ನು ನೆನಪಿಸಿಕೊಂಡಿದ್ದಕ್ಕೆ ಥ್ಯಾಂಕ್ಸ್..
ಸದ್ಯ ಈಗ ಆ ಪುಸ್ತಕ ಬಿಡುಗಡೆಯಾಗಿದೆ. ಒಂದು ಅದ್ಬುತವಾದ ಪುಸ್ತಕ.
ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು.
Post a Comment