Tuesday, July 14, 2009

ಮಳೆಯಲ್ಲಿ ಫೋಟೊ ತೆಗೆಯಲಿಕ್ಕೆ ಹೋದರೆ ಹಿಂಗೆಲ್ಲಾ ಆಗುತ್ತಾ!

ನಾನೆಂದು ಮಳೆಯಲ್ಲಿ ಫೋಟೋಗ್ರಫಿ ಮಾಡಿರಲಿಲ್ಲವಾದ್ದರಿಂದ ಈ ಬಾರಿ ಪ್ರಯತ್ನಿಸೋಣವೆಂದುಕೊಂಡು ನನ್ನ ದೇಹಕ್ಕೊಂದು ಮಳೆ ರಕ್ಷಕವಚ ತೊಟ್ಟು ಹಾಗೂ ಕ್ಯಾಮೆರಾಗೂ ರಕ್ಷಾಕವಚವನ್ನು ಹಾಕಿ ಬೆಂಗಳೂರಿನ ರಸ್ತೆಗಳು, ಹೆಸರುಘಟ್ಟ ರಸ್ತೆಗಳು, ಚಿಕ್ಕಮಗಳೂರಿನ ರಸ್ತೆಗಳಲೆಲ್ಲಾ ಓಡಾಡಿದೆ. ಇದೇ ಮೊದಲ ಬಾರಿ ಕ್ಯಾಮೆರಾ ನನ್ನ ಮಾತು ಕೇಳದೆ ಹದ್ದು ಮೀರಿ ವರ್ತಿಸಿದೆ. ನನ್ನ ನಿರೀಕ್ಷೆಗಳೆಲ್ಲಾ ತಲೆಕೆಳಗಾಗಿ "ಗಣೇಶನನ್ನು ಮಾಡು ಅಂದರೆ ಅವನಪ್ಪನನ್ನು ಮಾಡಿ ತೋರಿಸುತ್ತೇನೆ" ಅಂತ ತನಗಿಷ್ಟಬಂದಂತೆ ಚಿತ್ರ ವಿಚಿತ್ರವಾದ ಫೋಟೋಗಳನ್ನು ಕ್ಲಿಕ್ಕಿಸಿದೆ. ಕೊನೆಗೆ ವಿಧಿಯಿಲ್ಲದೇ ನಾನು ಕೂಡ ಅದು ಕ್ಲಿಕ್ಕಿಸಿಕೊಟ್ಟ ಫೋಟೋಗಳ ದಾರಿಯನ್ನೇ ಹಿಡಿಯಬೇಕಾಯಿತು. ಅವುಗಳಲ್ಲಿ ಕೆಲವನ್ನು ನಿಮಗಿಲ್ಲಿ ತೋರಿಸಲಿಚ್ಚಿಸುತ್ತೇನೆ.


೧. ಹಿಂಬಾಗದಲ್ಲಿ ಹಸಿರು ಮತ್ತು ಕೆಂಪು ಬಣ್ಣದ ಬಸ್ಸಿನ ಪಕ್ಕದಲ್ಲೇ ವೇಗವಾಗಿ ತೂರಿ ಬಂದ ಬೈಕ್ ಸವಾರನ ಎದುರು ಕೆಂಪು ಬಣ್ಣದ ಕಾರು ವೇಗವಾಗಿ ಅವನ ಮೇಲೆ ಹರಿಯಬೇಕೆ.! ವೇಗವಾಗಿ ಬರುತ್ತಿರುವ ಕಾರಿನೊಳಗೆ ಅವನೇ ಬೈಕಿನ ಸಮೇತ ಸೇರಿಕೊಳ್ಳುತ್ತಿದ್ದಾನೋ...ಅಥವ ಕಾರೇ ವೇಗವಾಗಿ ಆಕ್ಟೋಪಸ್‌ನಂತೆ ಅವನನ್ನು ತನ್ನ ಬಣ್ಣದೊಳಗೆ ಸೆಳೆದುಕೊಳ್ಳುತ್ತಿದೆಯೋ....ಚಿತ್ರವನ್ನು ನೋಡಿದರೆ, "ಎಲ್ಲರೊಳಗೊಂದಾಗು ಮಂಕುತಿಮ್ಮ" ಎನ್ನುವ ಡಿವಿಜಿ ಯವರ ಮಾತು ನೆನಪಾಗುತ್ತದಲ್ಲವೆ!
೨. ಆಹಾ! ಈ ಚಿತ್ರವನ್ನು ನೋಡಿ. "ಬಾ ಮುತ್ತುಕೊಡುವೆ ಗೆಳೆಯನೆ ನನ್ನ ಮುದ್ದು ರಾಜ" ಅಂತ ಒಬ್ಬರಿಗೊಬ್ಬರು ಹಾಡಿಕೊಳ್ಳುತ್ತಾ ಎರಡು ಹೆಲ್ಮೆಟ್ ತಲೆಗಳು ಒಬ್ಬರಿಗೊಬ್ಬರು ಮುಖಾಮುಖಿ ಎಷ್ಟೊಂದು ಹತ್ತಿರ ಬಂದಿದ್ದಾರೆ ಅನ್ನಿಸುತ್ತೆ ಅಲ್ಲವೇ...ಎದುರು ಬದುರಾಗಿ ಅವರು ಬಂದಿರುವ ವೇಗಕ್ಕೆ ಅವರು ಕುಳಿತಿರುವ ಬೈಕುಗಳೇ ಮಾಯಾವಾಗಿಬಿಟ್ಟಿವೆ.!
೩. ಈ ಚಿತ್ರದಲಂತೂ ಒಂದು ಹಸುವು ತನ್ನ ಹಿಂಬಾಗಕ್ಕೆ ಇಬ್ಬರು ಸವಾರರಿರುವ ಆಕ್ಟಿವ್ ಹೋಂಡ ದ್ವಿಚಕ್ರವಾಹನವನ್ನು ವೆಲ್ಡ್ ಮಾಡಿಕೊಂಡು ವೇಗವಾಗಿ ಎಳೆದುಕೊಂಡು ಹೋಗುತ್ತಿರುವಂತೆ ಕಾಣುತ್ತದೆ. ಮುಂದಿನ ದಿನಗಳಲ್ಲಿ ಪೆಟ್ರೋಲ್ ಕಾಲಿಯಾದಾಗ ಈ ರೀತಿ ಎಳೆದುಕೊಂಡು ಹೋಗುವಂತ ಪರಿಸ್ಥಿತಿಯ ಮುನ್ಸೂಚನೆಯೇ?!೪. ಈ ಚಿತ್ರವನ್ನು ನೋಡಿದರೆ "ಎಂಥ ಮರುಳಯ್ಯ ಇದು ಎಂಥ ಮರುಳು....... ಅನಂತನಾಗ್ ಹಾಡು ನೆನಪಾಗುವುದಿಲ್ಲವೇ!. ಇಲ್ಲಿ ಮಳೆಯಲ್ಲಿ ಕೊಡೆಯಿಡಿದು ನಡೆಯುತ್ತಿರುವ ಹುಡುಗಿಯರಿಗೆ ಕಾಲುಗಳೇ ಇಲ್ಲವಲ್ಲ...ಕಾಲಿಲ್ಲದ ಭೂತಗಳು ನೆನಪಾದರೇ ನನ್ನ ತಪ್ಪಲ್ಲ.!೫. ಆರೆರೆ...! ಚಿತ್ರದಲ್ಲಿ ತಲೆಯ ಮೇಲೆ ಮಂಕ್ರಿ ಹೊತ್ತು ನಡೆಯುತ್ತಿರುವ ಮೂರು ಜನ ಹಳ್ಳಿ ಹುಡುಗಿಯರಿಗೆ ಕಾಲುಗಳ ಜೊತೆಗೆ ಎದೆಮಟ್ಟದವರೆಗೆ ದೇಹವೂ ಇಲ್ಲವಲ್ಲ...! ಆಣೆ ಮಾಡಿ ಹೇಳುತ್ತೇನೆ ಇದರಲ್ಲಿ ನನ್ನ ಕೈವಾಡವೇನು ಇಲ್ಲ. ನಿಮ್ಮ ಹೊಗಳಿಕೆ ತೆಗೆಳಿಕೆ ವಿಚಾರಣೆಯೆಲ್ಲಾ ನನ್ನ ಕ್ಯಾಮೆರಾ ಕಡೆಗೆ....!


೬. ಈ ಕೆಂಪು ಬಸ್ಸನ್ನು ನೋಡಿ! ಮುಂದಿನ ಚಕ್ರಗಳಿಲ್ಲದೆಯೂ ಅದೆಷ್ಟು ವೇಗವಾಗಿ ಓಡುತ್ತಿದೆ......ಈ ಕಲಿಗಾಲದಲ್ಲಿ ಇನ್ನೂ ಏನೇನು ಆಗುತ್ತದೋ ಆ ದೇವರೇ ಬಲ್ಲ....


೭. ಇಲ್ಲಂತೂ "ನಿನ್ನೊಳು ಮಾಯೆಯೋ.....ಮಾಯೆಯೊಳು ನೀನೋ" ದಾಸರ ಹಾಡು ನೆನಪಾಯಿತು. "ನೀವೇ ನೋಡಿ ಆಟೋದೊಳು ಬೈಕು ಸವಾರರೋ, ಬೈಕೊಳು ಆಟೋನೋ....." ಅನ್ನಿಸುತ್ತಲ್ಲವೇ....ಆಟೋದೊಳಗೆ ಸೇರಿಕೊಳ್ಳುತ್ತಾ ನಿದಾನವಾಗಿ ಕರಗುತ್ತಿರುವ ದ್ವಿಚಕ್ರ ವಾಹನ ಸವಾರರ ತಲೆಗಳು ಮಾತ್ರ ಕಾಣಿಸುತ್ತಿವೆ. ಹಾಗೇ ಆಟೋದ ಮುಂದಿನ ಚಕ್ರಕ್ಕೆ ಆಕ್ಟೀವ್ ಹೋಂಡದ ಹಿಂಭಾಗದ ಚಕ್ರವೂ ಗಾಢಪ್ರೇಮಿಯಂತೆ ಒಂದಾಗಿಬಿಟ್ಟಿದೆಯಲ್ಲಾ...!


ಈ ಇಷ್ಟೆಲ್ಲಾ ಚಿತ್ರಗಳ ನಡುವೆಯೂ ಒಂದಷ್ಟು ಶುದ್ಧ ಮಳೆ ಚಿತ್ರಗಳನ್ನು ಕ್ಯಾಮೆರಾ ಕ್ಲಿಕ್ಕಿಸಿದೆ. ಅವುಗಳಲ್ಲಿ ಕೆಲವನ್ನು ಇಲ್ಲಿ ನಿಮ್ಮೊಂದಿಗೆ ಹಂಚಿಕೊಳ್ಳುವಾಸೆ. ಇವುಗಳನ್ನು ನೋಡಿ ನಿಮಗೆ ಜಡಿಮಳೆ, ತುಂತುರು ಮಳೆ, ಸೋನೆಮಳೆ, ಮಳೆನಿಂತ ಮಳೆ, ದೋ ಎಂದು ಹಗಲುರಾತ್ರಿ ಸುರಿಯುವ ಮಳೆಯಂತ ಜೋರುಮಳೆಯಲ್ಲಿ ನೆನೆದ ಅನುಭವವಾದರೆ ಅದನ್ನು ನನ್ನೊಂದಿಗೆ ಹಂಚಿಕೊಳ್ಳಿ....ಆಗದಿದ್ದರೂ ಹಂಚಿಕೊಳ್ಳಿ.


೮. ತುಂತುರು ಮಳೆಯಲ್ಲಿ ಬೆಂಗಳೂರಿನ ಪ್ಯಾಲೆಸ್ ರಸ್ತೆಯಲ್ಲಿ ವೇಗವಾಗಿ ಸಾಗುತ್ತಿರುವ ಕೆಂಪು ಕಾರು


೯. ಸಂಪಿಗೆ ರಸ್ತೆಯ ಜೋರುಮಳೆಯಲ್ಲಿ ಒಂದು ಸಂಜೆ.....೧೦. ಹೆಸರು ಘಟ್ಟ ರಸ್ತೆಯಲ್ಲಿ ಸೋನೆಮಳೆಯಲ್ಲಿ ಜೋರಾಗಿ ಸಾಗುತ್ತಿರುವ ಸ್ಕಾರ್ಪಿಯೋ ಕಾರು...


೧೧.ಮಾರ್ಗೋಸ ರಸ್ತೆಯಲ್ಲಿ ಒಂದು ಸಂಜೆ ದೋ ಎಂದು ಸುರಿಯುವ ಮಳೆ.....೧೨. ಹೆಸರುಘಟ್ಟ ರಸ್ತೆಯಲ್ಲಿ ಜಿಟಿಜಿಟಿಮಳೆಯಲ್ಲಿ ಈ ಬೈಕ್ ಸವಾರ....


೧೩. ಮತ್ತದೇ ಹೆಸರು ಘಟ್ಟ ರಸ್ತೆಯಲ್ಲಿ ಅದೇ ಮಳೆಯಲ್ಲಿ ಮತ್ತೊಬ್ಬ ಬೈಕ್ ಸವಾರ....೧೪. ಚಿಕ್ಕಮಗಳೂರಿನ ರಸ್ತೆಯಲ್ಲಿ ಮದ್ಯಾಹ್ನ ಕಾಲೇಜು ಹುಡುಗಿಯರ ಗುಂಪು ಜೋರುಮಳೆಯಲ್ಲಿ ಸಾಗಿಹೋಗಿದ್ದು ಹೀಗೆ....


೧೫.ಜೋರು ಮಳೆಯಲ್ಲಿ ಚಿಕ್ಕಮಗಳೂರಿನ ಎಂ.ಜಿ ರಸ್ತೆ...

೧೬. ಮತ್ತೊಂದು ಕಡೆಯಿಂದ ಚಿಕ್ಕಮಗಳೂರಿನ ಎಂ.ಜಿ ರಸ್ತೆ. ಜೋರು ಮಳೆಯಲ್ಲಿ.....

೧೭. ಮಳೆ ನಿಂತೂ ಹೋದ ಮೇಲೆ ಪುಟಾಣಿಯೊಂದು ಸ್ಕೂಲಿಂದ ಬರುತ್ತಿದೆ..


ಮುಂದಿನ ಲೇಖನದಲ್ಲಿ ಇನ್ನಷ್ಟು ಮಳೆ ಚಿತ್ರಗಳೊಂದಿಗೆ ಯಾರು ನಿರೀಕ್ಷಿಸದ ರೀತಿಯಲ್ಲಿ ಮಳೆ ಮಾಡಿದ ಅನಾಹುತದ ಸತ್ಯಘಟನೆಯನ್ನು ಹೇಳುತ್ತೇನೆ. ಅಲ್ಲಿಯವರೆಗೆ ಈ ಮಳೆಯಲ್ಲಿ ನೆನೆಯುತ್ತಿರಿ....


ಚಿತ್ರ ಮತ್ತು ಲೇಖನ
ಶಿವು.ಕೆ ARPS.

115 comments:

ಸುಶ್ರುತ ದೊಡ್ಡೇರಿ said...

ರೀ ಶಿವು, ಹೀಗೆ ಏನೇನೋ ಟೆಕ್ನಿಕ್ ಉಪ್ಯೋಗ್ಸಿ ಫೋಟೋ ತೆಗ್ದು ನಮ್ಮನ್ನ ಮರುಳು ಮಾಡ್ತೀರಾ? ಇರಿ ನಿಮ್ಗೆ, ಮಾಡ್‌ಸ್ತೀನಿ.. :P

ಅಹರ್ನಿಶಿ said...

ಶಿವೂ,
ಎಲ್ಲಾ ಚಿತ್ರಗಳೂ ಚೆನ್ನಾಗಿವೆ,ಕೊನೆಯ ಪುಟ್ಟಿಯ ಚಿತ್ರ ಸೂಪರ್.

Pramod said...

ನಿಮ್ಮ 'ಮೋಷನ್ ಬ್ಲರ್' ಫೋಟೋಗ್ರಾಫಿ ಚೆನ್ನಾಗಿದೆ.
http://www.smashingmagazine.com/2009/04/22/the-ultimate-photography-round-up/
ಹಾಗೇನೆ ಇಲ್ಲಿರುವ "ತು೦ಬಾ ತು೦ಬಾ" ಸಕ್ಕತ್ತಾಗಿರುವ ಚಿತ್ರಗಳನ್ನೂ ನೋಡಿಬಿಡಿ.

shivu said...

ಸುಶ್ರುತ,

ನಾನು ಏನು ಹೊಸ ಟೆಕ್ನಿಕ್ ಉಪಯೋಗಿಸಿಲ್ಲ ಕಣ್ರೀ...ಮೊದಲ ನಾಲ್ಕು ಫೋಟೋಗಳು ನನಗರಿವಿಲ್ಲದಂತೆ ಬಂದಿದ್ದು. ತಕ್ಷಣ ಅದು ಹೇಗಾಯಿತು ಅಂತ ಅಲ್ಲೇ ಅರಿತು ಅದಕ್ಕೆ ತಕ್ಕಂತೆ ಸ್ವಲ್ಪ ಪ್ರೋಯೋಗ ಮಾಡಿದೆ ಅಷ್ಟೇ. ಇದರಲ್ಲಿ ಕಣ್ಕಟ್ಟು ಏನು ಇಲ್ಲ ನೀವು ಮರುಳಾಗುವುದು ಬೇಡ...enjoy ಮಾಡಿದರೆ ಸಾಕು...ಅಲ್ವಾ...

ಧನ್ಯವಾದಗಳು.

shivu said...

ಅಹರ್ನಿಶಿ ಶ್ರೀಧರ್ ಸರ್,

ಎಲ್ಲಾ ಚಿತ್ರಗಳ ಜೊತೆ ಕೊನೆಯ ಪುಟ್ಟಿಯ ತುಂಬಾ ಇಷ್ಟಪಟ್ಟಿದ್ದಕ್ಕೆ ಥ್ಯಾಂಕ್ಸ್...ಆ ಫೋಟೋ ಕೂಡ ನನಗೂ ಇಷ್ಟ..ಆ ಪುಟಾಣಿಯ ಐದಾರು ಫೋಟೋಗಳಿವೆ...

shivu said...

ಪ್ರಮೋದ್,

ಮೊದಲಿಗೆ ನಾನು ನಾರ್ಮಲ್ ಆಗಿ ಮಳೆ ಫೋಟೋ ತೆಗೆದೆ. ನಂತರ ಒಂದಷ್ಟು ಪ್ರಯೋಗಾತ್ಮಕವಾಗಿ ಕೆಲವು ತಾಂತ್ರಿಕ[ಕ್ಯಾಮೆರಾದಲ್ಲಿ]ಬದಲಾವಣೆ ಮಾಡಿದಾಗ ಈ ರೀತಿ ಮೋಷನ್ ಎಫೆಕ್ಟ್ ಬಂತು. ಮತ್ತೆ ನೀವು ಕೊಟ್ಟ ಲಿಂಕ್ ನೋಡಿದೆ. ಅದರಲ್ಲಿರುವ ವಿವರಣೆ ಸಹಿತ ಫೋಟೋಗಳು ತುಂಬಾ ಚೆನ್ನಾಗಿವೆ...ಥ್ಯಾಂಕ್ಸ್....

ಸಂತೋಷ್ ಚಿದಂಬರ್ said...

sir... ella photogalu super :) ಮಗುವಿನ ಫೋಟೋವೊಂತು ತುಂಬಾ ಮುದ್ದಾಗಿದೆ

shivu said...

ಸಂತೋಷ್,

ತುಂಬಾ ದಿನಗಳಾದ ಮೇಲೆ ನನ್ನ ಬ್ಲಾಗಿಗೆ ಬಂದಿದ್ದೀರಿ...ಫೋಟೋಗಳನ್ನು ಮೆಚ್ಚಿದ್ದಕ್ಕೆ ಥ್ಯಾಂಕ್ಸ್...

ಮಲ್ಲಿಕಾರ್ಜುನ.ಡಿ.ಜಿ. said...

ಶಿವು,
ಫೋಟೋಗ್ರಫಿ ಪಂಡಿತರ ಲೆಕ್ಕಾಚಾರಗಳಿಗೆ ಸರಿಯಾಗಿ ಲಾತ ಕೊಟ್ಟಿದ್ದೀರಿ. ಬ್ಲರ್ ಇರಬಾರದು, ಹೀಗಿರಬೇಕು ಹಾಗಿರಬೇಕು ಎನ್ನುವವರು ಇವುಗಳನ್ನು ನೋಡಿ ಇದರಲ್ಲಿರುವ ಸೊಗಸನ್ನೂ ಆನಂದಿಸುವಂತಿದೆ. ಎಲ್ಲವೂ ಸೊಗಸಾಗಿದೆ. ಚಿಕ್ಕಮಗಳೂರಿನಲ್ಲಿ ತೆಗೆದ ಆ ಮಗು ಚಿತ್ರ ತುಂಬಾ ಚೆನ್ನಾಗಿದೆ. ಹೊಸ ಪ್ರಯೋಗಕ್ಕೆ ಅಭಿನಂದನೆಗಳು.

Dr. B.R. Satynarayana said...

ಚಿತ್ರಗಳನ್ನು, ಅವುಗಳಿಗೆ ನೀವು ನೀಡಿರುವ ವಿವರಣೆಯನ್ನು ನೋಡಿ, ಓದಿ ಮುಗಿಸುವಷ್ಟರಲ್ಲಿ ನಾನಂತೂ ಒದ್ದೆಯಾಗಿದ್ದೆ. ಹೊರಗೆ ಮಳೆ ಸುರಿಯುತ್ತಿದೆ! ಅದ್ಭುತವಾದ ಕೆಲಸ ಶಿವು. ಮತ್ತೆ ಮತ್ತೆ ನೋಡಬೇಕೆನ್ನಿಸುವ ಚಿತ್ರಗಳು. ನಾನೊಮ್ಮೆ ಕುಂದಾಪುರದಲ್ಲಿ ಸೆಮಿನಾರಿಗೆ ಹೋಗಿದ್ದಾಗ, ಮಳೆಯ ಜೋರನ್ನು ವಿಡಿಯೋ ಮಾಡಿಕೊಂಡು ಬಂದಿದ್ದೆ. ಅಲ್ಲಿಯೂ ಅಷ್ಟೆ ಮಳ ಬಂದರೆ ಸಾವಿರಾರು ಕೊಡೆಗಳು ರಸ್ತೆಯಲ್ಲಿ ಅಸಡಾ ಬಸಡಾ ಚಲಿಸುತ್ತಿರುವಂತೆ ಕಾಣುತ್ತದೆ. ಕುಂದಾಪುರದಲ್ಲಿ ಮಳೆ ಬಂದರೆ ಜನಜೀವನ ನಿಲ್ಲುವುದಿಲ್ಲ. ಬೆಂಗಳೂರಿನಲ್ಲಿ ಮಳೆ ಬಂದರೂ ಜನಜೀವನ ನಿಲ್ಲುವುದಿಲ್ಲವಾದರೂ ಟ್ರಾಫಿಕ್ ಜಾಮ್ ಆಗೇ ತೀರುತ್ತದೆ ಅಲ್ಲವೇ? ಮಳೆಯಲ್ಲಿ ಟ್ರಾಫಿಕ್ ಜಾಮ್ ಆಗುವುದನ್ನೇ ಒಂದಷ್ಟು ಫೋಟೋಗಳನ್ನು ನೀವು ತೆಗೆಯಿರಿ. ನೋಡಿ ಆನಂದಿಸೋಣ.

ನನ್ ಮನೆ said...

ಕೊನೆ ಚಿತ್ರ ತುಂಬಾ ಹಿಡಿಸ್ತು...

VENU VINOD said...

last one really refreshing one...good work Shivu

shivu said...

ಮಲ್ಲಿಕಾರ್ಜುನ್,

ಫೋಟೋಗ್ರಫಿಯಲ್ಲೂ ಲೆಕ್ಕಾಚಾರವಿದೆ, ಅದು ಬೇಕು. ಆದರೆ ಅದಕ್ಕೆ ಸಿಕ್ಕಿಹಾಕಿಕೊಂಡರೇ ಹೊಸದಕ್ಕೆ ತೆರೆದುಕೊಳ್ಳಲು ಸಾಧ್ಯವಾಗುವುದಿಲ್ಲ.. ಇನ್ನೂ ಅನೇಕ ಚಿತ್ರಗಳು ವಾಟರ್ ಕಲರ್ ಪೈಂಟಿಂಗ್‍ ನಂತೆ ಬಂದಿವೆ.ಇದೊಂದು ಹೊಸ ಪ್ರಯೋಗವಷ್ಟೆ. ಅದನ್ನೆಲ್ಲಾ ಇಲ್ಲಿ ಬ್ಲಾಗಿನಲ್ಲಿ ಹಂಚಿಕೊಳ್ಳುತ್ತಿದ್ದೇನೆ..ಚಿಕ್ಕಮಗಳೂರಿನಲ್ಲಿ ಮಗುವಿನ ಫೋಟೋ ತೆಗೆಯುವಾಗ ನೀವು ಜೊತೆಯಲ್ಲೇ ಇದ್ದಿರಲ್ಲ..

ಧನ್ಯವಾದಗಳು.

shivu said...

ಡಾ.ಸತ್ಯನಾರಾಯಣ ಸರ್,

ನೀವು ಮಳೆ ಫೋಟೋಗಳನ್ನು ನೋಡಿ ಮತ್ತು ವಿವರಣೆಯನ್ನು ಓದಿ ಒದ್ದೆಯಾಗಿದ್ದ್ರೀರಿ...ನಾನು ಎಲ್ಲಾ ಮಳೆ ಫೋಟೋ ತೆಗೆಯುವಷ್ಟರಲ್ಲಿ ಪೂರ್ತಿ ಒದ್ದೆಯಾಗಿಬಿಟ್ಟಿದ್ದೆ. [ಆದ್ರೆ ಕ್ಯಾಮೆರಾ ನೆನೆಸಲಿಲ್ಲ.]ಮಳೆಯಲ್ಲಿ ಕುಂದಾಪುರ ಅನುಭವ ಹೇಳಿದ್ದೀರಿ...ಮತ್ತೆ ನೀವು ಹೇಳಿದಂತೆ ಮಳೆಯಲ್ಲಿ ಟ್ರಾಫಿಕ್ ಜಾಮ್ ಫೋಟೋ ತೆಗೆಯಲು ಪ್ರಯತ್ನಿಸುವೆ ಸರ್.

ಧನ್ಯವಾದಗಳು.

shivu said...

ವೀರೇಶ್,

ಕೊನೆಯ ಮಗು ಚಿತ್ರ ಇಷ್ಟಪಟ್ಟಿದ್ದಕ್ಕೆ ಥ್ಯಾಂಕ್ಸ್...

shivu said...

ವೇಣು ವಿನೋದ್,

ಫೋಟೋಗ್ರಫಿ ಕೆಲಸವನ್ನು ಮೆಚ್ಚಿದ್ದಕ್ಕೆ, ಮಗುವಿನ ಫೋಟೋ ಇಷ್ಟಪಟ್ಟಿದ್ದಕ್ಕೆ ಥ್ಯಾಂಕ್ಸ್..

ನಿಮ್ಮ ಬ್ಲಾಗಿನ ಕತೆ ಓದಿದೆ ಚೆನ್ನಾಗಿದೆ...

ಹೀಗೆ ಬರುತ್ತಿರಿ...ಧನ್ಯವಾದಗಳು.

dileephs said...

Shivu...

Sakkat photo matte sakkat vivaraNe... tumbaa ishta aaytu... Naanu oorina maLe tumbaa miss maaDkotideeni...

shivu said...

D.M.GhanaShyam said,

very good nodide, chennagide. adre blur anistu. nam murthy kuda ondistu male photos tegdidare. ninge kalistini nodi opinion kodu.

shivu said...

ದಿಲೀಪ್,

ಮಳೆ ಫೋಟೋ ಮತ್ತು ವಿವರಣೆ ಮೆಚ್ಚಿಕೊಂಡಿದ್ದಕ್ಕೆ ಥ್ಯಾಂಕ್ಸ್..ಫೋಟೋಗಳನ್ನು ನೋಡಿ ನಿಮ್ಮೂರಿನ ಮಳೆ ನೆನಪಾಗಿತಾ...ಒಮ್ಮೆ ಹೋಗಿ ಮಳೆಯಲ್ಲಿ ನೆನೆದು ಬಂದು ಬಿಡಿ...

ಟಿ ಜಿ ಶ್ರೀನಿಧಿ said...

"ತುಂತುರು ಮಳೆಯಲ್ಲಿ .. ಕೆಂಪು ಕಾರು" super! motion blur photos tegyakke naanoo try maadtane ideeni... result matra sonne :-)

Shweta said...

super concept shivu sir!
I have started following your blogs.
Keep up !

shivu said...

ಘನಶ್ಯಾಮ್,

ಫೋಟೋಗಳು ಬ್ಲರ್ ಅಂತ ನಿಮಗೆ ಅನ್ನಿಸಿರಬಹುದು. ಕೆಲಸ ಪ್ರೋಯೋಗಾತ್ಮಕವಾದಾಗ ಪಲಿತಾಂಶ ಹೀಗಿರುತ್ತದೆ. ಮಳೆಯ ಗಾಢ ಅನುಭವ ಚಿತ್ರದಲ್ಲಿ ಕಾಣಬೇಕು ಅನ್ನುವುದು ನನ್ನ ಉದ್ದೇಶ. ಇಲ್ಲಿರುವ ಕೆಲವನ್ನು ನಿಮ್ಮೂರಲ್ಲೇ ಕ್ಲಿಕ್ಕಿಸಿದ್ದು. ನೀವು ಸದ ಮನೆ-ಅಫೀಸಿನಲ್ಲಿ ಕಂಪ್ಯೂಟರಿನ ಮುಂದೆ ಕುಳಿತು ಬ್ಯುಸಿ ಅನ್ನುವ ಬದಲು ಸ್ವಲ್ಪ ನಿಮ್ಮಲ್ಲಿರುವ ಕ್ಯಾಮೆರಾ ಹಿಡಿದು ಹೊರಬನ್ನಿ. ನಿಮಗೂ ಇಂಥವು ಸಿಗಬಹುದು. ಮತ್ತೆ ಮೂರ್ತಿ ಎರಡು ದಿನ ನಮ್ಮ ಜೊತೆ ಇದ್ದರೂ ತೋರಿಸಲೇ ಇಲ್ಲವಲ್ಲ. ಮೂರ್ತಿ ಚೆನ್ನಾಗಿ ಫೋಟೋ ತೆಗೆಯುತ್ತಿದ್ದಾನೆ. ಅವನ ಪ್ರಯತ್ನಕ್ಕೆ ನಿಮ್ಮೆಲ್ಲರ ಫೋತ್ಸಾಹವಿರಲಿ. ಮತ್ತೆ ಆತ ತೆಗೆದ ಫೋಟೋಗಳನ್ನು ನನಗೆ ಮೇಲ್ ಮಾಡಿ, ನನ್ನ ಪ್ರತಿಕ್ರಿಯೆ ನೀಡುತ್ತೇನೆ.
ಧನ್ಯವಾದಗಳು.

Anonymous said...

super photos kanri... chaaya kannadi maaya kannadi tara ide

ಚಿತ್ರಾ said...

ಶಿವೂ,
ಮಳೆಯ ಚಿತ್ರಗಳು ಬಹಳ ಚೆನ್ನಾಗಿವೆ ! ಹಾಗೆಯೇ ನಿಮ್ಮ ಕ್ಯಾಮೆರಾದ ಸ್ಪೀಡೂ ಕೂಡ ! ಹೀಗೆ ನಿಮ್ಮ ಪ್ರಯೋಗಗಳನ್ನು ನಮ್ಮೊಡನೆ ಹಂಚಿಕೊಳ್ಳುತ್ತಿರಿ.
ಮಳೆಯಲ್ಲಿ ಮಾಯವಾಗುತ್ತಿಹ ಸುಂದರಿಯರು , ಒಂದರೊಡನೊಂದು ಸೇರಿಹೋಗುತ್ತಿರುವ ವಾಹನಗಳು ... ಎಲ್ಲವು ಬಹಳ ಇಷ್ಟವಾದವು.
ಅಂದಹಾಗೆ ನಾನು ಕೆಲವು ಹಾಡುಗಳನ್ನು ಹಾಡಿದ್ದೇನೆ . ಕೇಳಬನ್ನಿ ! ತುಂಬಾ ದಿನಗಳಿಂದ ನಿಮ್ಮ ಹೆಜ್ಜೆಯಿಲ್ಲ .

ಅನಿಲ್ ರಮೇಶ್ said...

ಶಿವು,
ಕೆಂಪು ಕಾರಿನ ಚಿತ್ರ ಮತ್ತು ಕೊನೆಯ ಚಿತ್ರ ತುಂಬಾ ಇಷ್ಟ ಆಯ್ತು.

-ಅನಿಲ್

ಬಾಲು said...

ಹೌದು ಶಿವೂ ಅವರೇ, ಮೊನ್ನೆ ವಾರಾಂತ್ಯ ಊರಿಗೆ ಹೋಗಿದ್ದೆ, ಮಲೆನಾಡಲ್ಲಿ ಒಳ್ಳೆ ಮಳೆ ಬರ್ತಾ ಇದೆ. ಸರಿ ಒಂದಿಷ್ಟು ಫೋಟೋ ತೆಗೆದೆ. ಆಮೇಲೆ ಸ್ನೇಹಿತರಿಗೆ ತೋರಿಸಿದರೆ ಇದು ಡಿಜಿಟಲ್ ಕ್ಯಾಮೆರಾ ದಲ್ಲೇ ತೆಗೆದಿದ್ದ? ಅಥವಾ ಸ್ಕ್ಯಾನ್ ಮಾಡಿದ ಫೋಟೋ ಗಳ ಅಂತ ಸ್ನೇಹಿತರು ಕೇಳ್ತಾ ಇದ್ರೂ. ಒಟ್ಟಾರೆ ಒರಿನ ಮಳೆ ನೆನಪಿಗೆ ಅಂತ ತೆಗೆದ ಒಂದಿಷ್ಟು ಫೋಟೋಗಳು ಪೂರ ಕರಾಬು.

ಆದರೆ ನಿಮ್ಮ ಎಲ್ಲ ಫೋಟೋ ಗಳು ಚೆನ್ನಾಗಿ ಬಂದಿದೆ! ಏನು ಮಾಡಿದಿರಿ? ಕ್ಯಾಮೆರಾ ಗು ಏನಾದ್ರು ಲಂಚ ಕೊಟ್ರ?

ಸುಧೇಶ್ ಶೆಟ್ಟಿ said...

maleya chithragalu thumba chennagi moodi bandive.. blur photography kooda.. nimma vivarane innu ishta aayithu....

innu yenenu kithaapathi maadtheero neevu shivanna:) Yello hogbitri:)

sathyavaada ghatane bega helbidi maththe:)

shivu said...

ಟಿ.ಜಿ ಶ್ರೀನಿಧಿ,

ಕೆಂಪು ಕಾರನ್ನು ಇಷ್ಟಪಟ್ಟಿದ್ದಕ್ಕೆ ಥ್ಯಾಂಕ್ಸ್...ನೀವು ಮತ್ತೆ ಮತ್ತೆ ಪ್ರಯತ್ನಿಸಿದರೆ ಯಶಸ್ಸು ಖಂಡಿತ....all the best..

shivu said...

Swetha,

Welcome to my blog. thanks for watching my photographs and following my blogs.

shivu said...

ವಿಜಯಕನ್ನಂತ ಸರ್,

ನೀವು ಪ್ರಯೋಗವನ್ನು ಮೆಚ್ಚಿ ನನ್ನ ಛಾಯಾಕನ್ನಡಿಯನ್ನು ಮಾಯಾಕನ್ನಡಿಗೆ ಹೋಲಿಸಿದ್ದೀರಿ..ಧನ್ಯವಾದಗಳು. ಹೀಗೆ ಬರುತ್ತಿರಿ...

shivu said...

ಚಿತ್ರಾ ಮೇಡಮ್,

ನನ್ನ ಹೊಸ ಪ್ರಯೋಗದ ಚಿತ್ರಗಳನ್ನು ಮಲ್ಲಿಕಾರ್ಜುನ್ ಜೊತೆ ಇಷ್ಟಪಟ್ಟವರಲ್ಲಿ ನೀವು ಒಬ್ಬರು. ಅಲ್ಲಿಗೆ ನನ್ನ ಹೊಸ ಪ್ರಯತ್ನ ಕೆಲವರಿಗಾದರೂ ತಲುಪಿತಲ್ಲ..ನೀವು ಇಷ್ಟಪಟ್ಟ ಚಿತ್ರಗಳಿಗೆ ಆ ಎಫೆಕ್ಟ್ ಬರಲು ತುಂಬಾ ತಿಣುಕಾಡಿದ್ದೆ. ಈಗ ಖುಷಿಯಾಯ್ತು...

ಮತ್ತೆ ಕಳೆದ ಒಂದು ಹತ್ತು ದಿನದಿಂದ ನನ್ನ ಮನೆಯಲ್ಲಿ ಇಂಟರ್‌ನೆಟ್ ಇರಲಿಲ್ಲವಾದ್ದರಿಂದ ಯಾರ ಬ್ಲಾಗಿಗೂ ಬರಲಾಗಿರಲಿಲ್ಲ. ಇವತ್ತೆ ಮನೆಗೆ ಹೊಸ ಬ್ರಾಡ್‍ಬ್ಯಾಂಡ್ ಕನೆಕ್ಷನ್ ಬಂತು. ಇನ್ನೂ ಮುಂದೆ ಎಲ್ಲರ ಬ್ಲಾಗುಗಳನ್ನೂ ನೋಡಬೇಕಿದೆ...ಖಂಡಿತ ನಿಮ್ಮ ದ್ವನಿಯನ್ನು ಕೇಳಲು ಬರುತ್ತೇನೆ...

ಧನ್ಯವಾದಗಳು.

shivu said...

ಅನಿಲ್,

ಮಳೆಯಲ್ಲಿನ ಚಿತ್ರಗಳನ್ನು ಇಷ್ಟಪಟ್ಟಿದ್ದಕ್ಕೆ ಥ್ಯಾಂಕ್ಸ್..ಹೀಗೆ ಬರುತ್ತಿರಿ...

shivu said...

ಬಾಲು ಸರ್,

ಕ್ಯಾಮೆರಾಗೆ ನಾನು ಖಂಡಿತ ಲಂಚ ಕೊಟ್ಟಿಲ್ಲ. ಆದ್ರೆ ನಾನು ಅದರ ಮಾತು ಕೇಳುವಂತೆ, ಅದು ನನ್ನ ಮಾತು ಕೇಳುವಂತೆ ಅಲಿಖಿತ ಒಪ್ಪಂದವಾಗಿಬಿಟ್ಟಿದೆ. ಅದಕ್ಕೂ ಮೀರಿ ಪ್ರೆಂಡ್ ಆಗಿಬಿಟ್ಟಿದ್ದೇವೆ. ಮತ್ತೆ ನೀವು ನಿಮ್ಮ ಕ್ಯಾಮೆರಾದ ಗೆಳೆಯರಾಗಿಬಿಡಿ..ನಿಮಗೆ ಬೇಕಾದ ಹಾಗೆ ಪಲಿತಾಂಶ ಬರುತ್ತೆ.[ಮತ್ತೇನಿಲ್ಲ ಪ್ರೆಂಡ್ ಆಗುವುದೆಂದರೆ ಆತನ ಬಗ್ಗೆ ಅರಿಯುವುದಲ್ಲವೇ...ಹಾಗೇ ಇಲ್ಲೂ ನಿಮ್ಮ ಕ್ಯಾಮೆರಾಬಗ್ಗೆ ಚೆನ್ನಾಗಿ ಅರಿತು ತಾಂತ್ರಿಕವಾಗಿ ಬಳಸುವುದನ್ನು ಕಲಿತುಬಿಟ್ಟರೆ ಆಯಿತಲ್ಲ].
ಮಳೆ ಫೋಟೋ ಮೆಚ್ಚಿದ್ದಲ್ಲದೇ, ನಿಮ್ಮ ಊರಿನ ಫೋಟೋ ತೆಗೆದ ಅನುಭವ ಹೇಳಿದ್ದೀರಿ ..ಥ್ಯಾಂಕ್ಸ್..

sunaath said...

ಶಿವು,
ನೀವು ಸೂಪರ್ ಫೋಟೋಗ್ರಾಫರ ಕಣ್ರೀ!

rakesh holla said...

All photos are excellent...

shivu said...

ಸುದೇಶ್,

ಪ್ರಯೋಗಾತ್ಮಕ ಮಳೆಯ ಫೋಟೋಗಳನ್ನು ಇಷ್ಟಪಟ್ಟಿದ್ದಕ್ಕೆ ಮತ್ತು ಅದರ ವಿವರಣೆ ಮೆಚ್ಚಿದ್ದಕ್ಕೆ ಧನ್ಯವಾದಗಳು.

ಹೊಸ ವಿಚಾರವನ್ನು ಹುಡುಕಿಕೊಂಡುಹೋಗಿ ಕಿತಾಪತಿ ಮಾಡದಿದ್ದಲ್ಲಿ ನನಗೆ ನಿದ್ರೆ ಬರೋಲ್ಲ. ಅದರ ಪಲಿತಾಂಶವೇ ಇದು...

ಮುಂದಿನ ಲೇಖನ ಖಂಡಿತ ಮಳೆ ಅನಾಹುತದ ಬಗ್ಗೆ ಇರುತ್ತೆ..

ಧನ್ಯವಾದಗಳು.

shivu said...

ಸುನಾಥ್ ಸರ್,

ಧನ್ಯವಾದಗಳು..ನಿಮ್ಮ ಪ್ರೋತ್ಸಾಹ ನನ್ನನ್ನು ಮತ್ತಷ್ಟು ಸ್ಫೂರ್ತಿಗೊಳಿಸುತ್ತೆ...

shivu said...

ರಾಕೇಶ್,

ಫೋಟೋಗಳನ್ನು ಮೆಚ್ಚಿದ್ದಕ್ಕೆ ಧನ್ಯವಾದಗಳು.

ಶಂಕರ ಪ್ರಸಾದ said...

ನಿಮ್ಮ ಚಿತ್ರಗಳನ್ನು ನೋಡಿದೆ ಹಾಗು ಲೇಖನವನ್ನು ಓದಿದೆ. ಬಹಳ ಸರ್ಕಸ್ ಮಾಡಿದೀರ ಅಂತಾ ಕಾಣ್ಸುತ್ತೆ? ಮಳೆಯಲ್ಲಿ ಇಷ್ಟೊಂದು ವೈವಿಧ್ಯತೆ ಇರೋ ಫೋಟೋಗಳನ್ನು ತೆಗೆದಿದ್ದೀರ..ನಿಮಗೆ ಹಾಗು ನಿಮ್ಮ ಕ್ಯಾಮೆರಾಗೆ ಏನೂ ಆಗ್ಲಿಲ್ವಾ? ಕ್ಯಾಮೆರಾ ಹಾಗು ಲೆನ್ಸನ್ನು ಚೆನ್ನಾಗಿ ನೋಡ್ಕೊಳಿ ಶಿವೂ, ಅವು ನಿಮ್ಮ ಕಣ್ಣುಗಳ ಹಾಗೆ. ಲೆನ್ಸಿಗೆ, ಕ್ಯಾಮೆರಾಗೆ ತೇವ ಬಿದ್ದರೆ ಫಂಗಸ್ (ಬೂಸ್ಟು) ಹಿಡಿಯುತ್ತದೆ. ಶೂ, ಲೆದ್ದರ್ ಬ್ಯಾಗುಗಳಲ್ಲಿ ಇಡೋ ಸಿಲಿಕಾನ್ ಜೆಲ್ಲಿನ ಪ್ಯಾಕೆಟ್ ಇಡ್ತಾರಲ್ಲ, ನಿಮ್ಮ ಲೆನ್ಸ್ ಹಾಗು ಕ್ಯಾಮೆರಾ ಬ್ಯಾಗಿನಲ್ಲಿ ಎರಡ್ಮೂರು ಪ್ಯಾಕೆಟ್ ಹಾಕಿ ಇಡಿ. ಅದು ತೇವವನ್ನು ಹೀರಿಕೊಳ್ಳುತ್ತೆ.
ಜೊತೆಗೆ ಮಳೆ ಬರೋವಾಗ ಬೆಂಗಳೂರಲ್ಲಿ ಹುಶಾರು ಸಾರ್. ಎಲ್ಲೆಲ್ಲಿ ತೆರೆದ ಚರಂಡಿ ಇರುತ್ತೋ ಆ ದೇವ್ರಿಗೇ ಗೊತ್ತು. ಇನ್ನೂ ಕಚಡಾ ಅಂದ್ರೆ ಮಳೆ ಬಂದಾಗ ಜನರು, ದನಗಳ ಹಾಗೆ ಅಡ್ಡಾದಿಡ್ಡಿ ಓಡಾಡ್ತಾರೆ.

ಕಟ್ಟೆ ಶಂಕ್ರ

ವನಿತಾ said...

ಎಲ್ಲ ಫೋಟೋ ಗಳು ಒಂದಂಕಿಂತ ಒಂದು ಸೂಪರ್..ತುಂಬ ಚೆನ್ನಾಗಿವೆ...

ರೂpaश्री said...

ಮಳೆಯ ಚಿತ್ರಗಳು ಡಿಫೆರೆಂಟಾಗಿ, ಚೆನ್ನಾಗಿವೆ! ಹಾಗೆಯೇ ನಿಮ್ಮ ವಿವರಣೆ ಕೂಡ ! ಹೀಗೆ ಹೊಸ ಹೊಸ ಪ್ರಯೋಗಗಳನ್ನು ಮಾಡುತ್ತಿರಿ, ಇಲ್ಲಿ ಹಂಚಿಕೊಳ್ಳುತ್ತಿರಿ.
ಒಂದರೊಳಗೊಂದು ಸೇರಿಹೋಗುತ್ತಿರುವ ವಾಹನಗಳು, ಪುಟಾಣಿ ಫೋಟೋ ಬಹಳ ಇಷ್ಟವಾದವು:)

umesh desai said...

ಶಿವು ಫೋಟೋಗ್ರಫಿಯ ಬಗ್ಗೆ ಹೇಳುವಷ್ಟು ನಾ ತಿಳಿದಿಲ್ಲ ಆದರೆ ಮಳೆಯಲ್ಲಿನೆನೆದವರ ಛಾಯೆ ನಿಮ್ಮ ಕನ್ನಡಿಯಲ್ಲಿ ಅದ್ಭುತವಾಗಿ
ಮೂಡಿ ಬಂದಿದೆ....

Harihara Sreenivasa Rao said...

kanndiya chaayegaarare
nimma chitragalalli maleya haniyee ellavalla?adara moolakavoo camara technique torisi. chitraglu hosa anubhavavannu needuttave.Idkkagi dhanyavaadaglu.
Dr.Harihara Sreenivasa Rao

shivu said...

ಶಂಕರ್ ಪ್ರಸಾದ್ ಸರ್,

ನಿಮ್ಮ ಪ್ರತಿಕ್ರಿಯೆ ತುಂಬಾ ಚೆನ್ನಾಗಿದೆ. ಕ್ಯಾಮೆರಾ ಹೊಂದಿರುವ ಎಲ್ಲರಿಗೂ ತಿಳಿದುಕೊಳ್ಳುವಂತ ವಿಚಾರ. ಅನೇಕ ಗೆಳೆಯರಿಗೆ ಉಪಯೋಗವಾಗುತ್ತೆ...

ಮತ್ತೆ ನನ್ನ ವೈವಿಧ್ಯತೆಯ ಮಳೆ ಫೋಟೋಗ್ರಫಿ ಮೆಚ್ಚಿದ್ದಲ್ಲದೇ ನನ್ನ ಬಗ್ಗೆಯೂ ಕಾಳಜಿ ತೋರಿಸಿದ್ದಕ್ಕೆ ತುಂಬಾ ಥ್ಯಾಂಕ್ಸ್..

ಮತ್ತೆ ನೀವು ಹೇಳಿದಂತೆ ಈಗಿನ ವಾತವರಣದಲ್ಲಿ ತೇವಾಂಶದಿಂದ ಫಂಗಸ್ ಬರುವ ಸಾಧ್ಯತೆ ಜಾಸ್ತಿ ಇರುವುದರಿಂದ ನಾನು ಯಾವಾಗಲು ಸಿಲಿಕಾನ್ ಜೆಲ್ ಕ್ಯಾಮೆರಾ ಜೊತೆಯಲ್ಲಿ ಇಟ್ಟೇ ಇರುತ್ತೇನೆ.

ಮತ್ತೆ ನೀವು ಹೇಳಿದಂತೆ ನಾವು ಫೋಟೋ ತೆಗೆಯುವಾಗ ಎಷ್ಟು ಹುಶಾರಾಗಿದ್ದರೂ ಸಾಲದು. ನಿಮ್ಮ ಮಾತನ್ನು ನಾನು ಮುಂದೆ ಗಮನದಲ್ಲಿಸಿಕೊಂಡು ಎಚ್ಚರವಾಗಿರುತ್ತೇನೆ...

ಮತ್ತೊಮ್ಮೆ ಧನ್ಯವಾದಗಳು

shivu said...

ವನಿತಾ,

ಮಳೆ ಫೋಟೋಗಳನ್ನು ಮೆಚ್ಚಿದ್ದಕ್ಕೆ ಧನ್ಯವಾದಗಳು.

shivu said...

ರೂಪಶ್ರೀ,

ಮಳೆ ಫೋಟೋಗಳ ಜೊತೆ ನನ್ನ ಬರಹವನ್ನು ಮೆಚ್ಚಿದ್ದೀರಿ...

ನನ್ನ ಹೊಸ ಹೊಸ ಪ್ರಯೋಗಗಳಿಗೆ ನಿಮ್ಮ ಪ್ರೋತ್ಸಾಹ ಹೀಗೆ ಇರಲಿ...ಧನ್ಯವಾದಗಳು.

shivu said...

ಉಮೇಶ್ ದೇಸಾಯಿ ಸರ್,

ನನ್ನ ಚಿತ್ರ ಲೇಖನದಲ್ಲಿ ಮಳೆಯಲ್ಲಿ ನೆನೆದವರ ಛಾಯೆಯನ್ನು ಕನ್ನಡಿಯ ಪ್ರತಿಬಿಂಬದಂತೆ ಗುರುತಿಸಿದ್ದೀರಿ...

ಧನ್ಯವಾದಗಳು.

shivu said...

ಹರಿಹರ ಶ್ರೀನಿವಾಸರಾವ್ ಸರ್,

ನನ್ನ ಛಾಯಾ ಕನ್ನಡಿಗೆ ಸ್ವಾಗತ. ಮಳೆ ಚಿತ್ರಗಳು ನಿಮಗೆ ಹೊಸ ಆನುಭವವನ್ನು ನೀಡಿದ್ದಕ್ಕೆ ಧನ್ಯವಾದಗಳು. ಮತ್ತೆ ಚಿತ್ರದಲ್ಲಿ ಮಳೆಹನಿಗಳೇ ಇಲ್ಲವೆಂದು ಹೇಳಿ ಅವುಗಳ ಬಗ್ಗೆ ತೊಡಗಿಸಿಕೊಳ್ಳಲು ಸ್ಪೂರ್ತಿ ನೀಡಿದ್ದೀರಿ. ಸದ್ಯದಲ್ಲೇ ಖಂಡಿತವಾಗಿ ಮಳೆಹನಿಗಳದ್ದೇ ಒಂದಷ್ಟು ಫೋಟೋಗ್ರಫಿ ಮಾಡಿ ಮುಂದಿನ ಲೇಖನಗಳಲ್ಲಿ ಬ್ಲಾಗಿಗೆ ಹಾಕುತ್ತೇನೆ...

ಧನ್ಯವಾದಗಳು.

b.saleem said...

ಶಿವು ಸರ್,
ಮಳೆಯಲ್ಲಿ ತೆಗೆದ ಫೊಟೊಗಳು ತುಂಬಾ ಚನ್ನಾಗಿವೆ.
ಬಹುಶಃ ಪ್ಯಾನಿಂಗ ಮಾಡುವ ಪ್ರಯತ್ನ ಮಾಡಿದ್ದಿರಿ ಅನ್ಸುತ್ತೆ.

b.saleem said...

ಶಿವು ಸರ್,
ಮಳೆಯಲ್ಲಿ ತೆಗೆದ ಫೊಟೊಗಳು ತುಂಬಾ ಚನ್ನಾಗಿವೆ.
ಬಹುಶಃ ಪ್ಯಾನಿಂಗ ಮಾಡುವ ಪ್ರಯತ್ನ ಮಾಡಿದ್ದಿರಿ ಅನ್ಸುತ್ತೆ.

ನಮ್ಮನೆ.. SWEET HOME..... said...

ಶಿವು ಅವರೆ...

ನಿಮ್ಮ ಬ್ಲಾಗಿಗೆ ಬಂದರೆ ತುಂಬಾ ಖುಷಿಯಾಗುತ್ತದೆ...
ಲೇಖನಗಳು, ಫೋಟೊಗಳು...
ಎಲ್ಲವೂ ಚೆನ್ನಾಗಿರುತ್ತದೆ...

ಈ ಬಾರಿಯ ಫೋಟೊಗಳು ಸೂಪರ್ ...!

congrats..

asha prakash

pradeep said...

ಚಿತ್ರಗಳು ಚೆನ್ನಾಗಿ ಮೂಡಿ ಬಂದಿವೆ ಸಾರ್ :-) ಒಂಥರಾ special effect ಇದ್ದಂತೆ! ಚಲಿಸುತ್ತಿರುವಾಗ ತೆಗೆದವುಗಳು ತಾನೆ?! ;-)

ಮುತ್ತುಮಣಿ said...

ಭಾಳ ಚೆನ್ನಾಗಿದೆ ಫೋಟೋಗಳು,

ಒಂದು ಅರೆಕ್ಷಣ ನಮ್ಮ ಕಣ್ಣ ಮುಂದೆ ನಡೆದು ಹೋಗುವ ಚಮತ್ಕಾರವನ್ನು ನೀವೂ ನಿಮ್ಮ ಕ್ಯಾಮರಾ ಸೇರಿಕೊಂಡು ಸೆರೆಹಿಡಿದು ಸ್ಟಿಲ್ಲ್ ಮಾಡಿಬಿಟ್ಟಿದ್ದೀರಲ್ಲಾ?

shivu said...

ಸಲೀಮ್,

ಫೋಟೊಗಳು ಇಷ್ಟವಾಯಿತಾ...ಇಲ್ಲಿ ತೆಗೆದಿರುವ ಫೋಟೋಗಳಲ್ಲಿ ಕೆಲವು ಚಲಿಸುವ ವಸ್ತುಗಳಾಗಿರುವುದರಿಂದ ಅವುಗಳಿಗೆ ಪ್ಯಾನಿಂಗ್ ತಂತ್ರ ಉಪಯೋಗಿಸಿದ್ದೇನೆ. ಇನ್ನು ಕೆಲವಕ್ಕೆ ಬೇರೆ ತಂತ್ರ ಉಪಯೋಗಿಸಿದ್ದೇನೆ...

ಧನ್ಯವಾದಗಳು.

shivu said...

ಆಶಾ ಮೇಡಮ್,

ನಿಮ್ಮ ಬ್ಲಾಗಿನ ಹೆಸರು ಚೆನ್ನಾಗಿದೆ.

ನನ್ನ ಬ್ಲಾಗಿಗೆ ಬಂದರೇ ನಿಮಗೆ ಇಷ್ಟವಾಗುವ ಲೇಖನ ಮತ್ತು ಫೋಟೋಗಳು ಸಿಗುತ್ತೆ. ನಮ್ಮ ಮನೆಗೆ ಬಂದರೇ ಇನ್ನೂ ಬೇರೆ ಬೇರೆ ಇಷ್ಟವಾಗುವ ವಿಚಾರಗಳು ಸಿಗುತ್ತೆ ಯಾವಾಗ ಬರ್ತೀರಿ...?

ಧನ್ಯವಾದಗಳು.

shivu said...

ಪ್ರದೀಪ್,

ಮಳೆ ಚಿತ್ರಗಳು ಸ್ಪೆಷಲ್ ಎಫೆಕ್ಟ್ ಬರುವ ಹಾಗೆ ಸ್ವಲ್ಪ ತಂತ್ರಗಾರಿಕೆ ಉಪಯೋಗಿಸಿದ್ದೇನೆ ಅಷ್ಟೆ . ನಿಮಗೆ ಅದರ ಅನುಭವವಾಗಿದೆಯೆಂದಮೇಲೆ ನನ್ನ ಪ್ರಯತ್ನ ಸಾರ್ಥಕವಾಗಿದೆ. ಮತ್ತೆ ಈ ಫೋಟೋಗಳೆಲ್ಲಾ ನಾನು ಚಲಿಸದೇ ಕ್ಲಿಕ್ಕಿಸಿದ್ದೇನೆ..

ಧನ್ಯವಾದಗಳು.

shivu said...

ಮುತ್ತುಮಣಿ ಮೇಡಮ್,

ತುಂಬಾ ದಿನಗಳ ನಂತರ ನನ್ನ ಬ್ಲಾಗಿಗೆ ಬಂದಿದ್ದೀರಿ..ಸ್ವಾಗತ...ಮತ್ತೆ ನಿತ್ಯವೂ ಕಾಣುತ್ತಿದ್ದ ಈ ಚಿತ್ರಗಳನ್ನು ಸೆರೆಯಿಡಿಯುವ ಆಸೆ ಇತ್ತೀಚೆಗೆ ಕೈಗೂಡಿದ್ದರಿಂದ ನಿಮ್ಮ ಜೊತೆಗೆಲ್ಲಾ ಹಂಚಿಕೊಂಡಿದ್ದೇನೆ..

ನೀವು ಇಷ್ಟಪಟ್ಟಿದ್ದಕ್ಕೆ ಥ್ಯಾಂಕ್ಸ್...

Archu said...

honda activa + cow = too good!!

ರಾಜೀವ said...

ಶಿವು ಸರ್,

ನಿಮ್ಮ ಈ ಚಿತ್ರಗಳನ್ನು ನೋಡಿ, ಆಫೀಸಿನ ಒಳಗಿದ್ದರೂ, ಮಳೆಹನಿಯ ಸ್ಪರ್ಶವಾದಂತಾಯಿತು. ಒಂತರಾ ಸ್ನಿಗ್ಧ ಭಾವನೆ. ಥ್ಯಾಂಕ್ಸ್.

ಒಂದು ವರುಷದಿಂದ ಕೊಂಡು ಕೊಳ್ಳಬೇಕೆಂದಿದ್ದ ಕ್ಯಾಮೆರಾವನ್ನು ಇತ್ತೀಚೆಗೆ ಕೊಂಡೆ. ಆದರೆ ಕ್ಯಾಮೆರಾ ಇನ್ನು ನನ್ನ ಮಾತು ಕೇಳ್ತಾ ಇಲ್ಲ. ಇನ್ನೂ ಕಲಿಯಬೇಕಾಗಿದೆ.

ನಿಮ್ಮ ಹುಡುಕಾಟ, ಹುಡುಗಾಟ ಇನ್ನೂ ಮುಂದುವರೆಯಲಿ.

PARAANJAPE K.N. said...

ಶಿವೂ
ನಿಮ್ಮ ಕ್ಯಾಮರಾ ತ೦ತ್ರಗಾರಿಕೆ, ನಿಮ್ಮೊಳಗಿರುವ ಪ್ರತಿಭೆ, ಎಲ್ಲವೂ ಈ ಚಿತ್ರಗಳಲ್ಲಿ ವ್ಯಕ್ತವಾಗಿದೆ. ನಿಮ್ಮದು ಅಪರೂಪದ ಪ್ರತಿಭೆ. ಬರಹ-ಚಿತ್ರ ಎರಡೂ ಖುಷಿ ಕೊಟ್ಟಿತು.

Prashanth Arasikere said...

hi..shivu..hegidira..

nimma photos bagge helodu enu illa ella chennage bandide..adakke bekadre tuntaru(male)photo..antha kari bahudu..magu photo..aste mugdavagi bandide..waiting for the next..

shivu said...

ಅರ್ಚನ ಮೇಡಮ್,

ಧನ್ಯವಾಡಗಳು...ಹೀಗೆ ಬರುತ್ತಿರಿ....

shivu said...

ರಾಜೀವ್ ಸರ್,

ಕೊನೆಗೂ ಹೊಸ ಕ್ಯಾಮೆರಾ ಹೊಂದಿದ್ದೀರಲ್ಲ ಅಭಿನಂದನೆಗಳು. ಮತ್ತೆ ಕ್ಯಾಮೆರ ನಿಮ್ಮದು ಜೊತೆಗೆ ಹೊರಗಿನ ಪ್ರಪಂಚವೂ ನಿಮ್ಮದೇ...ಇನ್ಯಾಕೆ ತಡ ಅಫೀಸಿನಿಂದ ಹೊರಬಿದ್ದು ಕ್ಲಿಕ್ಕಿಸುತ್ತಿರಿ ದಿನಕಳೆದಂತೆ ಕ್ಯಾಮೆರಾ ನಿಮ್ಮ ಮಾತು ಕೇಳಲಾರಂಭಿಸುತ್ತದೆ...

ಮತ್ತೆ ಅಫೀಸಿನಲ್ಲಿದ್ದರೂ ನನ್ನ ಮಳೆ ಚಿತ್ರಗಳು ಮಳೆ ಅನುಭವ ತರಿಸಿದ್ದರೆ ನನ್ನ ಪ್ರಯತ್ನ ಸಾರ್ಥಕ.

ಧನ್ಯವಾದಗಳು.

shivu said...

ಪರಂಜಪೆ ಸರ್,

ಮಳೆ ಚಿತ್ರಗಳು ನಿಮಗೆ ಹೊಸ ಅನುಭವ ಕೊಟ್ಟಿದ್ದಕ್ಕೆ ಧನ್ಯವಾದಗಳು...ನಿಮ್ಮ ಪ್ರೋತ್ಸಾಹ ಹೀಗೆ ಇರಲಿ...

shivu said...

ಪ್ರಶಾಂತ್,

ಮಳೆಯ ಫೋಟೋಗಳನ್ನು ತುಂತುರು ಫೋಟೋಗಳೆಂದು ಕರೆದಿದ್ದೀರಿ...ಕೆಲವು ಜೋರು ಮಳೆಯ ಫೋಟೋಗಳು ಇವೆ ಸಾರ್, ಮಗು ಫೋಟೋ ಇಷ್ಟಪಟ್ಟಿದ್ದೀರಿ. ಮುಂದೆ ಇನ್ನಷ್ಟು ಹೊಸದನ್ನು ನಿರೀಕ್ಷೆ ಮಾಡುವ ನಿಮಗೆ ನಿರಾಶೆ ಮಾಡೋಲ್ಲ ಹೀಗೆ ಬರುತ್ತಿರಿ....

Guru's world said...

ಶಿವೂ,
ಹೊಸ ಪ್ರಯೋಗ ಚೆನ್ನಾಗಿ ಇದೆ.....ನಿಮಗೂ ಒಳ್ಳೆ ಅನುಭವ ಅಂತಃ ಕಾಣುತ್ತೆ.....ಮತ್ತಸ್ಟನ್ನು ನೀರಿಕ್ಷಿಸುತ್ತಾ ಇದ್ದೇನೆ....

ತೇಜಸ್ವಿನಿ ಹೆಗಡೆ- said...

ವಿಭಿನ್ನ ರೀತಿಯಲ್ಲಿ ತೆಗೆದ ಫೋಟೋಗಳು ಚೆನ್ನಾಗಿವೆ. ಅದರಲ್ಲೂ ದನದ ಫೋಟೋ ಮತ್ತೂ ವಿನೂತನವಾಗಿದೆ. ಪ್ರಯತ್ನ ಹೀಗೇ ಮುಂದುವರಿಯಲಿ.

shivu said...

ಗುರು,

ಮಳೆಯ ಫೋಟೋ ತೆಗೆಯುವಾಗ ಆದ ಆನುಭವ ತುಂಬಾ ಚೆನ್ನಾಗಿತ್ತು. ಆದ್ರೆ ನಾನು ಪೂರ್ತಿ ಒದ್ದೆಯಾಗುತ್ತಿದ್ದುದು ಗ್ಯಾರಂಟಿ. ಮತ್ತಷ್ಟು ಹೊಸ ಫೋಟೋಗಳನ್ನು ಮುಂದಿನ ಲೇಖನದಲ್ಲಿ ಹಾಕುತ್ತೇನೆ...

ಧನ್ಯವಾದಗಳು.

shivu said...

ತೇಜಸ್ವಿನಿ ಮೇಡಮ್,

ನೀವು ಬ್ಯುಸಿಯಾಗಿದ್ದರೂ ತುಂಬಾ ದಿನಗಳ ನಂತರ ನನ್ನ ಬ್ಲಾಗಿಗೆ ಬಂದಿದ್ದೀರಿ..ಸ್ವಾಗತ. ಮಳೆಯ ಚಿತ್ರಗಳಲ್ಲಿ ಪ್ರತಿಯೊಬ್ಬರಿಗೂ ಒಂದೊಂದು ಚಿತ್ರಗಳು ಇಷ್ಟವಾಗುತ್ತಿವೆ..ನಿಮಗೊಂದು ಚಿತ್ರ ಇಷ್ಟವಾಗಿದೆ...ಹೀಗೆ ಬಿಡುವು ಮಾಡಿಕೊಂಡು ಬರುತ್ತಿರಿ..ಧನ್ಯವಾದಗಳು.

ಜಿ.ಎಸ್.ಬಿ. ಅಗ್ನಿಹೋತ್ರಿ said...

very nice.

shivu said...

ಅಗ್ನಿಹೋತ್ರಿ ಸರ್,

ಧನ್ಯವಾದಗಳು.

jampanicsrao said...

Dear Mr. Shivu,

Congrats and best wishes to you to start the blog

photos in the rain - appears to be superseeding modern art and the presence mind while shooting is laudable.

congrats once againg
may god bless u to continue u r work
Dr. J. Chandrasekhara Rao
vijayawada

ಸಿಮೆಂಟು ಮರಳಿನ ಮಧ್ಯೆ said...

ಶಿವು ಸರ್....

ಬಹಳ ಸೊಗಸಾಗಿದೆ....

ನೀವು ಈ ಫೋಟೊಗಳನ್ನು ತೆಗೆಯಲು ಪಟ್ಟಿರುವ ಶ್ರಮ ನನ್ನ ಕಣ್ಣ ಮುಂದೆ ಬರುತ್ತಿದೆ...

ನಿಮ್ಮ ಶ್ರಮಕ್ಕೆ ತಕ್ಕ ಪ್ರತಿಫಲ ಬೇಗನೆ ಸಿಗಲೆಂದು ಹಾರೈಸುವೆ...

ಶಿವು ಸರ್...

ನನಗೆ ನಿಮ್ಮನೆಗೆ ಆಹ್ವಾನ ಇಲ್ಲವಾ...?
(ತಮಾಷೆಗೆ)

ಚಂದದ ಫೋಟೊಗಳಿಗೆ ಅಭಿನಂದನೆಗಳು...

shivu said...

Dr. J. Chandrasekhara Rao sir,

you are the best wellwisher to me. I remember we met in mysore train that was my great moment.

please come to my blog regularly and encourage me.

Thanks for your blesses, wishes and comments...

shivu said...

ಪ್ರಕಾಶ್ ಸರ್,

ಮಳೆಯ ಫೋಟೋ ಮೆಚ್ಚಿದ್ದಕ್ಕೆ ಧನ್ಯವಾದಗಳು.

ಬ್ಲಾಗಿನಲ್ಲಿ ಹಾಕಿರುವ ಫೋಟೋಗಳೆಲ್ಲಾ ಬ್ಲಾಗಿಗಾಗಿ ತೆಗೆದಂತವು. ಮತ್ತೆ ಸ್ಪರ್ಧಾತ್ಮಕವಾಗಿ ತೆಗೆದಂತ ಫೋಟೋಗಳು ಬೇರೆ ಇವೆ. ಅವುಗಳನ್ನು ಸ್ಪರ್ಧೆಗಳಿಗೆ ಕಳಿಸಲು ಸಿದ್ಧಮಾಡಿಕೊಳ್ಳುತ್ತಿದ್ದೇನೆ.

ನೀವು ನಮ್ಮನೆಗೆ ಬರಲು ನಾನು ಕರೆಯಬೇಕೆ! ನಿಮಗೆ ಸದಾ ಸ್ವಾಗತವಿದೆ. ಇಷ್ಟಕ್ಕೂಮೊದಲ ಬಾರಿ ನೀವು ನಮ್ಮನೆಗೆ ಬಂದಿದ್ದು ಆಚಾನಕ್ಕಾಗಿ ಅಲ್ಲವೇ...ಆ ರೀತಿ ಯಾವಾಗ ಬೇಕಾದರೂ ಬರಬಹುದು.

ಕ್ಷಣ... ಚಿಂತನೆ... Think a while said...

ಶಿವು ಸರ್‍,

ಕೆಲವು ದಿನಗಳ ಹಿಂದೆ ನಾನು ಮಳೆಯಲ್ಲಿ ಫೋಟೋ ತೆಗೆಯಲು ಹೋಗಿದ್ದೆ ಎಂದು ನನ್ನ ಬ್ಲಾಗಿನಲ್ಲಿ ಬರೆದಿದ್ದಿರಿ. ಇದೀಗ ಫೋಟೋಗಳನ್ನು ನೋಡಿ ನಿಜಕ್ಕೂ ಅಚ್ಚರಿಯಾಯಿತು. ಏಕೆಂದರೆ, ಫೋಟೋಗಳು ನಮ್ಮ ಊಹೆಗಳಿಗೆ ಸಿಲುಕದಂತೆ ತನ್ನದೇ ಆದ ವಿಭಿನ್ನ ಚಿತ್ರಗಳಾಗಿ ಮೂಡಿಬಂದಿವೆ.

ಆಟೋ ಮತ್ತು ದ್ವಿಚಕ್ರವಾಹನದ ಒಂದು ಚಿತ್ರ ನೋಡಿದಾಗ ನನಗೆ ನೆನಪಾಗಿದ್ದು ಒಂದು ಘಟನೆ. ಕೆಲವು ವರ್ಷಗಳ ಹಿಂದೆ, ಒಬ್ಬ ವಿದ್ಯಾರ್ಥಿಯ ಫೋಟೋ (ಭೂತವಾಗಿ) ಜೆರಾಕ್ಸ್ ಪ್ರತಿಯಾಗಿ ಬಿಕರಿಯಾಗಿದ್ದವು. ಅದಕ್ಕೆ, ಇವನ್ನೇ ಘೋಸ್ಟ್ (ಗಹೊಸತ) ಫೋಟೋಗ್ರಫಿ ಕಲೆ ಎನ್ನಬಹುದೇ?

ಒಟ್ಟಿನಲ್ಲಿ ಫೋಟೋಗಳು ಸೂಪರ್‌. ಅದರಲ್ಲಿಯೂ ಆ ಪುಟ್ಟ ಬಾಲಕಿಯದು. ಅದು ಒಂದು ಜಾಹಿರಾತಿಗೆ ಹೇಳಿದಂತಿದೆ.

ಸಸ್ನೇಹಗಳೊಂದಿಗೆ,

ಚಂದ್ರಶೇಖರ ಬಿ.ಎಚ್.

shivu said...

ಕ್ಷಣ ಚಿಂತನೆ ಸರ್,

ಕಳೆದ ವಾರ ಮಳೆ ಫೋಟೊ ತೆಗೆಯಲು ಹೋಗುತ್ತೇನೆಂದು ನಿಮಗೆ ಹೇಳಿದ್ದೆ. ನಾನು ತೆಗೆದ ಮಳೆ ಫೋಟೋಗಳು ನಿಮಗೆ ವಿಭಿನ್ನವೆನಿಸಿದ್ದರೆ ನನ್ನ ಪ್ರಯತ್ನ ಸಾರ್ಥಕ.

ಮತ್ತೆ ಫೋಟೋಗ್ರಫಿಯಲ್ಲಿ ಲೆನ್ಸ್, ಷಟರ್‌ಸ್ಫೀಡ್, ಅಪರ್ಚರ್, ಡೆಪ್ತ್ ಆಪ್ ಫೀಲ್ಡ್, ಪ್ಯಾರಲಲ್, ಫೋಕಸ್ ಪಾಯಿಂಟ್, ಐಎಸ್ಒ, ಮೋಟರ್ ಡ್ರೈವ್, exposer componsation, ಇತ್ಯಾದಿಗಳನ್ನು ಚೆನ್ನಾಗಿ ತಿಳಿದುಕೊಂಡು ಸರಿಯಾಗಿ ಬಳಸಿಕೊಳ್ಳುವುದರ ಜೊತೆಗೆ ವಸ್ತುವಿನ ಆಯ್ಕೆ, ಚೌಕಟ್ಟು, ಅದಕ್ಕೆ ತಕ್ಕಂತೆ ಪ್ರತಿಕ್ರಿಯಿಸುವ ವೇಗ, ಅದೆಲ್ಲಕ್ಕಿಂತ ಮನಸ್ಸಿನಲ್ಲಿ ನಮಗೆ ಎಂಥ ಚಿತ್ರ ಬೇಕು ಎನ್ನುವ ಸ್ಪಷ್ಟ ಕಲ್ಪನೆ ಇದ್ದಲ್ಲಿ ಅದ್ಭುತವನ್ನು ಸಾಧಿಸುವ ಅವಕಾಶವಿದೆ ಸರ್. ನೀವು ಹೇಳಿದಂತೆ ಘೋಸ್ಟ್ ಚಿತ್ರಗಳನ್ನು ಇನ್ನೂ ಪರಿಣಾಮಕಾರಿಯಾಗಿ ಕ್ಲಿಕ್ಕಿಸಬಹುದು...

ನಿಮ್ಮ ಅನಿಸಿಕೆಯನ್ನು ತಿಳಿಸಿದ್ದಕ್ಕೆ ಧನ್ಯವಾದಗಳು..

ಪಾಚು-ಪ್ರಪಂಚ said...

Shivu sir..

photography nalli idoo ondu kaleye..?? maleya anubhava tumbaa hitavaagiruttade.. adanna sundara vichitra photogala moolakha nenapisiddakke thanks..

Koneya chitra tumbaa hidisitu.

-Prashanth Bhat

shivu said...

ಪ್ರಶಾಂತ್,

ಫೋಟೊಗ್ರಫಿಯಲ್ಲಿ ಕಲೆಯ ಪ್ರಕಾರಗಳು ತುಂಬಾ ವಿಶಾಲವಾಗಿವೆ. ಅವುಗಳಲ್ಲಿ ಇದು ಒಂದು. ಮಳೆಯ ವಿಚಿತ್ರಗಳು ಫೋಟೋಗಳು ನಿಮಗೆ ವಿಭಿನ್ನ ಆನುಭವವನ್ನು ಕೊಟ್ಟಿದೆಯೆಂದಿರಿ...ಧನ್ಯವಾದಗಳು.

ಅಂತರ್ವಾಣಿ said...

ಶಿವಣ್ಣ,
ಕೆಲವೊಂದು ಫೋಟೋಗಳು ಅಂತು Natural ಆಗಿ ಬಂದಿದ್ದು ಅನ್ನುವುದ್ದಕ್ಕೆ ಆಗೋದಿಲ್ಲ. Photoshop ಕೆಲ್ಸ ಅನಿಸುತ್ತದೆ. ಆದರೂ ಇಂತಹ ವಿಚಿತ್ರ ಫೋಟೋ ಬರುತ್ತವೆ ಮಳೆಯಲ್ಲಿ ಅಂತ ಗೊತ್ತಾಯಿತು.

shivu said...
This comment has been removed by the author.
shivu said...

ಜಯಶಂಕರ್,

ಮಳೆ ಚಿತ್ರಗಳೆಲ್ಲಾ ಸಹಜವಾಗಿ ಮೂಡಿಬಂದಿದ್ದು. ಮತ್ತು ಕ್ಯಾಮೆರಾ ತಂತ್ರವನ್ನು ಚೆನ್ನಾಗಿ ಅರಿತಿದ್ದರೇ ಇನ್ನೂ ಏನೇನೋ ಪಲಿತಾಂಶ ಬರುತ್ತವೆ.

ಮತ್ತು ಇದು ಒಂದೇ ತೆಗೆದ ದಿನ ಫೋಟೋಗಳಲ್ಲ, ಸುಮಾರು ಹದಿನೈದು ದಿನ ನಾನು ಮಳೆಯಲ್ಲಿ ನೆನೆದುಕೊಂಡೆ ಕ್ಯಾಮೆರಾದ ಹಿಡಿದಿದ್ದೇನೆ. ನಿಜಕ್ಕೂ ನನಗೇ ಬೇಕಾದ ಪಲಿತಾಂಶ ಇದಲ್ಲ. ಆದೃಷ್ಟಕ್ಕೆ ಇಂಥವು ಸಿಕ್ಕಿವೆ ಬ್ಲಾಗಿನಲ್ಲಿ ಹಾಕಿದ್ದೇನೆ. ನಿಜಕ್ಕೂ ನನಗೆ ಬೇರೆ ರೀತಿಯ[Art] ಸ್ಪರ್ಧಾತ್ಮಕ ಮಳೆ ಚಿತ್ರಗಳು ಬೇಕಿತ್ತು ಕೊನೆಗೆ ಅವು ಸಿಕ್ಕಿವೆ. ಅದಕ್ಕೆ ಇಂಥ ಸಾಹಸಗಳೆಲ್ಲಾ.
ಇಲ್ಲಿರುವ ಯಾವುದು ಕೂಡ ಫೋಟೋಶಾಪ್‌ನಲ್ಲಿ ಕ್ರಿಯೇಟ್ ಆಗಿದ್ದಲ್ಲ ಮತ್ತು ಇಷ್ಟು perfect ಆಗಿ ಫೋಟೋಶಾಫ್‌ನಲ್ಲಿ ಕ್ರೇಯೇಟ್ ಮಾಡಲು ಸಾಧ್ಯವಿಲ್ಲ...

ಕೆಲವು ಚಿತ್ರಗಳು ವಿಚಿತ್ರ ಮತ್ತು ಅಸಾದ್ಯವೆನಿಸಿದ್ದು ಸೃಷ್ಟಿಯಾದಾಗ ಇದನ್ನು ಕಂಪ್ಯೂಟರ್‌ನಲ್ಲಿ ಮಾಡಿದ್ದ ಅಥವ ಡಿಜಿಟಲ ಕ್ರಿಯೇಷನ್ ಅಲ್ವ ಅಂತ ಹೇಳುತ್ತಾರೆ ಹಾಗೆ ನಿಮಗೂ ಅನ್ನಿಸಿರಬಹುದು.

ಧನ್ಯವಾದಗಳು.

ಜಿ.ಎಸ್.ಬಿ. ಅಗ್ನಿಹೋತ್ರಿ said...

nice... eno magic madiddira.....:)

shivu said...

ಅಗ್ನಿಹೋತ್ರಿ,

ಥ್ಯಾಂಕ್ಸ್....ಮ್ಯಾಜಿಕ್ ಏನು ಮಾಡಿಲ್ಲ. ಜಯಶಂಕರ್‌ಗೆ ಕೊಟ್ಟ ಉತ್ತರವನ್ನು ನೋಡಿ...

Gjogi said...

ಶಿವೂ
ಎಲ್ಲಾ ಚಿತ್ರಗಳೂ ತುಂಬ ಚೆನ್ನಾಗಿದೆ.ನಮ್ಮಲ್ಲಿ ತುಂಬ ಮಳೆ ಬರ್ತಾ ಉಂಟು ಮಾರೆಯರೆ.

shivu said...

Gjogi,

ಹೆಸರು different ಅನ್ನಿಸಿದೆ...ನನ್ನ ಬ್ಲಾಗಿಗೆ ಸ್ವಾಗತ...ಮಳೆಯಚಿತ್ರಗಳನ್ನುಮೆಚ್ಚಿದ್ದಕ್ಕೆ ಥ್ಯಾಂಕ್ಸ್...ನಿಮ್ಮಲ್ಲಿ ಮಳೆ ಹೆಚ್ಚು. ಅದನ್ನೆಲ್ಲಾ ಕ್ಲಿಕ್ಕಿಸುತ್ತಾ ಮನಸ್ಸಿನಲ್ಲಿ ಆನಂದಿಸಿ...

ಜಲನಯನ said...

ಇದೇನು ಶಿವು ಬಹಳ ದಿನಗಳಿಂದ ಏನೂ ಪೋಸ್ಟ್ ಮಾಡಿಲ್ಲ ಎಂದುಕೊಳ್ಳುತ್ತಿರುವಂತೆಯೇ...ಸಮಯ-ಸ್ಪೂರ್ತಿಯ ವಿಭಿನ್ನ ಮತ್ತು ನಿಮ್ಮದೇ ಛಾಪಿನ ಚಿತ್ರಗಳೊಂದಿಗೆ...ಹಾಜರ್...!!!
ಚನ್ನಾಗಿವೆ..ಒಂದಕ್ಕೊಂದು ಶೆಡ್ಡುಹೊಡಿಯೋ ತರಹ...ಬಹುಶಃ ಇವನ್ನ ತೆಗೆಯೋ ಭರಾಟೆಯಲ್ಲಿ ನೆಗಡಿ-ಗಿಗಡಿ ಏನಾದ್ರೂ ಬಂದಿತ್ತೆ..??

shivu said...

ಜಲನಯನ ಸರ್,

ನೀವು ಯಾಕೆ ನನ್ನ ಬ್ಲಾಗಿನ ಕಡೆ ಬಂದಿಲ್ಲವೆಂದುಕೊಳ್ಳುತ್ತಿದ್ದೆ. ಮತ್ತೆ ಈ ಮುಂಗಾರಿನಲ್ಲಿ ಮಳೆಯ ಫೋಟೊಗಳನ್ನು ಕ್ಲಿಕ್ಕಿಸಬೇಕೆಂದು ತುಂಬಾ ದಿನದ ಕನಸು. ಈಗ ಮೊದಲ ಭಾಗ ಅನಾವರಣಗೊಂಡಿದೆ. ಎರಡನೇ ಭಾಗ ಸದ್ಯದಲ್ಲಿಯೇ ಹಾಕುತ್ತೇನೆ...

ಮತ್ತೆ ನೀವು ಹೇಳಿದಂತೆ ಮಳೆ ಫೋಟೋತೆಗೆಯುವಾಗ ಅದರ ಪರಿಣಾಮವಿರಲೇಬೇಕಲ್ಲವೇ ಸರ್. ಖಂಡಿತ ಎರಡು ದಿನ ಜ್ವರ, ಒಂದು ವಾರ ಶೀತ ನೆಗಡಿ, ಕೆಮ್ಮುಗಳೆಲ್ಲಾ ಅತಿಥಿಗಳಾಗಿ ಬಂದು ಹೋದರು.

ಚಿತ್ರಗಳನ್ನು ಮೆಚ್ಚಿದ್ದಕ್ಕೆ ಧನ್ಯವಾದಗಳು.

shivu said...
This comment has been removed by the author.
jayalaxmi said...

ಫೋಟೋಸ್ ಸೊಗಸಾಗಿವೆ ಶಿವು ಅವರೆ, ಅದರಲ್ಲೂ ಮೊದಲಿನ ೬-೭ ಫೋಟೋಗಳಂತೂ ತುಂಬಾನೆ ಇಷ್ಟ ಆದ್ವು.

ರೂಪಾ said...

ಶಿವು
ಫೋಟೋಸ್ ಅರ್ಧ ಬಂದಿರೋದನ್ನ ಚೆನ್ನಾಗಿ ತರ್ಕಿಸಿದ್ದೀರಾ
ಈ ತಿಂಗಳ ಮೊದಲನೇ ವಾರ ಸಕಲೇಶಪುರದಲ್ಲಿ ನಾನು ತೆಗೆದ ಚಿತ್ರಗಳು ಸುಮಾರು ಹೀಗೆ ಇವೆ

shivu said...

ಜಯಲಕ್ಷ್ಮಿ ಮೇಡಮ್,

ಮೊದಲ ಏಳು ಪೋಟೋಗಳು ವಿಭಿನ್ನವಾಗಿವೆ. ನೀವು ಅವುಗಳನ್ನು ಗುರುತಿಸಿ ಮೆಚ್ಚಿದ್ದೀರಿ. ಧನ್ಯವಾದಗಳು.

shivu said...

ರೂಪರವರೇ,

ಫೋಟೋಗಳು ಅರ್ಧ ಬಂದಿದ್ದರೂ ಅದಕ್ಕೂ ಒಂದು ಕಾರಣವಿರುತ್ತಲ್ವ...ಏನೋ ಮಾಡಲು ಹೋಗಿ ಏನೋ ಆದರೇ ಅದಕ್ಕು ಒಂದು ಕಾರಣವಿರುತ್ತೆ ನೋಡಿ ಹಾಗೆ ಆಯಿತು. ಈ ಮಳೆಚಿತ್ರಗಳ ಕತೆ.

ತುಂಬಾ ದಿನಗಳ ನಂತರ ನನ್ನ ಬ್ಲಾಗಿಗೆ ಬಂದಿದ್ದೀರಿ...ಹೀಗೆ ಬರುತ್ತಿರಿ. ಧನ್ಯವಾದಗಳು.

jithendra hindumane said...

ಪ್ರಿಯ ಶಿವು ಸಾರ್‍, ನಿಮ್ಮ ಫೋಟೋಸ್ ನೋಡಿ ಸ್ಟನ್
ಆದೆ.... ತುಂಬಾ ಉತ್ತಮ ಫೋಟೋಗಳು ಸಾರ್‍.
ನನ್ನ ಬ್ಲಾಗ್ ಬಂದು ನೋಡಿದ್ದಕ್ಕೆ ಧನ್ಯವಾದಗಳು.
ನಿಮ್ಮ ಎದುರು ನಾನೆಲ್ಲಿ ಸಾರ್‍...?

shivu said...

ಜಿತೇಂದ್ರ ಸರ್,

ನನ್ನ ಬ್ಲಾಗಿಗೆ ಸ್ವಾಗತ. ನೀವು ನನ್ನ ಚಿತ್ರಗಳನ್ನು ಮೆಚ್ಚಿದ್ದಕ್ಕೆ ಧನ್ಯವಾದಗಳು. ಮತ್ತೆ ನನ್ನ ಫೋಟೊ ನೋಡಿ ಸ್ಟನ್ ಆಗಬೇಡಿ. ನಾವೆಲ್ಲಾ ಕಲಿಕೆಯ ಹೆಜ್ಜೆ ಹಾಕುತ್ತಿದ್ದೇವೆ. ನೀವು ಕಲಿಯುತ್ತಿದ್ದೀರಿ. ನಾನು ಒಂದಿಂಚು ಮುಂದಿರಬಹುದು ಅಷ್ಟೇ. ನಿಮಗೂ ಇದು ಸಾದ್ಯ. ಹೀಗೆ ಬರುತ್ತಿರಿ...

Prabhuraj Moogi said...

ಕೊನೇ ಮಗು ಫೋಟೊ ಸಕತ್ತಾಗಿದೆ, ಮೊಷನ ಫೋಟೊಗ್ರಫಿ ಬಹಳ ಚನ್ನಾಗಿ ಮಾಡಿದ್ದೀರಿ. ಮಳೇಲೂ ಕೂಡ ನಿಮ್ಮ ಫೋಟೊಗ್ರಾಫಿ ನಿಂತಿಲ್ಲ ಬಿಡಿ.

shivu said...

ಪ್ರಭು,

ಫೋಟೊಗ್ರಫಿಗೆ ಎಲ್ಲಾಕಾಲವೂ ಪ್ರಶಸ್ತ. ನಮಗೆ ಅದರ ಬಗ್ಗೆ ಇಚ್ಛಾಸಕ್ತಿ ಇರಬೇಕು. ಮಗುವಿನ ಫೋಟೊ ಜೊತೆಗೆ ಮೋಷನ್ ಫೋಟೊಗಳನ್ನು ಗುರುತಿಸಿದ್ದೀರಿ...

ಧನ್ಯವಾದಗಳು.

Chandina said...

ಫೋಟೊಗ್ರಫಿಯ ಹಲವು ತಂತ್ರಗಳ ಬಗ್ಗೆ ಸಾಕಷ್ಟು ಮಾಹಿತಿ ನೀಡುತ್ತಿರುವುದು ಅಭಿನಂದನಾರ್ಹವಾಗಿದೆ.

-ಚಂದಿನ

PaLa said...

ಮೋಶನ್ ಬ್ಲರ್ ಚಿತ್ರಗಳು ಕ್ರಿಯೇಟಿವ್ ಆಗಿದೆ

shivu said...

ಚಂದಿನ ಸರ್,

ಮತ್ತೆ ನನ್ನ ಬ್ಲಾಗಿಗೆ ಬಂದಿದ್ದಕ್ಕೆ ಧನ್ಯವಾದಗಳು. ಹೀಗೆ ಬರುತ್ತಿರಿ...

shivu said...

ಪಾಲಚಂದ್ರ,

ಧನ್ಯವಾದಗಳು.

Divya Hegde said...

ಶಿವು ಸರ್,
ನಿಮ್ಮ ಈ ಲೇಖನ ನನಗೆ ತುಂಬಾ ಇಷ್ಟ ಆಯ್ತು .ಮಳೆಯಲ್ಲಿ ಫೋಟೋ ತೆಗೆದೆರೆ ಹೇಗೆಲ್ಲಾ ಆಗಬಹುದು ಎನ್ನುವ ಬಗ್ಗೆ ಒಳ್ಳೆಯ ಚಿತ್ರಣ ನೀಡಿದ್ದೀರ.
ಫೋಟೋಗಳು ಒನ್ ತರಹ ಭಿನ್ನವಾಗಿದ್ದರೂ ನೈಜ್ಯವಾಗಿವೆ...:):)

shivu said...

ದಿವ್ಯ ಮೇಡಮ್,

ಮಳೆ ಫೋಟೋಗಳನ್ನು ಇಷ್ಟವಾಯಿತಾ...ಅವು ನಿಮ್ಮ ದೃಷ್ಟಿಯಲ್ಲಿ ಭಿನ್ನವೆನಿಸಿದ್ದಕ್ಕೆ ಧನ್ಯವಾದಗಳು ಹೀಗೆ ಬರುತ್ತಿರಿ...

Ranjita said...

ತುಂಬಾ ಚೆನ್ನಾಗಿದೆ ಸರ್ .. ಮೊದಲನೆಯ ಫೋಟೋ ತುಂಬಾ ಇಷ್ಟ ಆಯ್ತು .. ಕ್ಯಾಮೆರಾ ಯುಸ್ ಮಾಡಕ್ಕೆ ಬರದೇ ಒಮ್ಮೊಮ್ಮೆ ನಾ ತೆಗೆದ ಫೋಟೋಗಳು ಹೀಗೆ ಆಗಿದ್ದಿದ್ದೆ :P ..... ಟೆಕ್ನಿಕ್ ಯುಸ್ ಮಾಡಿ ಅವೆಲ್ಲ ಮಾಡಕ್ಕೆ ಬರಲ್ಲ .. :)

shivu said...

ರಂಜಿತಾ ಮೇಡಮ್,

ನನ್ನ ಬ್ಲಾಗಿಗೆ ಸ್ವಾಗತ. ಮಳೆ ಫೋಟೋಗಳನ್ನು ಇಷ್ಟಪಟ್ಟಿದ್ದಕ್ಕೆ ಧನ್ಯವಾದಗಳು.

ನನಗೂ ನಿಮ್ಮ ಹಾಗೆ ಏನೋ ಮಾಡಲು ಹೋಗಿ ಏನೋ ಸಿಕ್ಕಿದಾಗ ಅದು ಹೇಗೆ ಸಿಕ್ಕಿತು ಅಂತ ಯೋಚಿಸಿದಾಗ ಅದರ ತಾಂತ್ರಿಕತೆ ತಿಳಿಯಿತು. ನಂತರ ಉಳಿದದ್ದನ್ನು ಕ್ಲಿಕ್ಕಿಸುತ್ತಾ ಬಂದೆ ಅದರ ಪಲಿತಾಂಶವೇ ಇದು...ಹೀಗೆ ಬರುತ್ತಿರಿ...

shivu said...

nimma photo lekhanagalu patanga , tea maruvavaru, grameena pratibhe , innu interesting andre nimma photo bahala channagittu . hage neevomme marketge hogi allina shrama jeevigala karyada hagge photo clikkisidare channagirittade
dhanyavadagau
shantha

nivedita said...

ಫೋಟೋ ಎಲ್ಲ ತುಂಬಾ ಚೆನ್ನಾಗಿ ಬಂದಿವೆ. ಹೊಸ ಟೆಕ್ನೋಲೋಜಿ ಉಪಯೋಗಿಸಿದ ಹಾಗೆ ಅನಿಸುತ್ತದೆ.

shivu said...

ಶಾಂತರವರೆ,

ನನ್ನಲ್ಲಾ ಲೇಖನಗಳನ್ನು ಓದಿ ನಿಮ್ಮ ಅಭಿಪ್ರಾಯಗಳನ್ನು ಮೇಲ್ ಮಾಡಿದ್ದೀರಿ..ಧನ್ಯವಾದಗಳು ಹೀಗೆ ಬರುತ್ತಿರಿ...

ಶಿವು.

shivu said...

ನಿವೇದಿತ ಮೇಡಮ್,

ನನ್ನ ಬ್ಲಾಗಿಗೆ ಸ್ವಾಗತ...ನಾನು ಈ ಮಳೆಚಿತ್ರಗಳನ್ನು ಕ್ಲಿಕ್ಕಿಸಲು ಹೊಸ ಟೆಕ್ನಾಲಜಿಯನ್ನು ಉಪಯೋಗಿಸಿಲ್ಲ ಮೊದಲು ಅನೇಕರು ಇದನ್ನು ಉಪಯೋಗಿಸಿರುವುದನ್ನು ನಾನು ಮಾಡಿದ್ದೇನೆ. ಧನ್ಯವಾದಗಳು. ಹೀಗೆ ಬರುತ್ತಿರಿ...

ವಿನುತ said...

ಪ್ರವಾಸದಿ೦ದಾಗಿ ಬ್ಲಾಗ್ ಗಳಿಗೆ ಭೇಟಿ ಕೊಡಲು ಸಾಧ್ಯವಾಗಿರಲಿಲ್ಲ. ಕ್ಷಮೆಯಿರಲಿ.
ಎಲ್ಲ ಹೊಸ ಪ್ರಯೋಗಗಳ ಕ್ರೆಡಿಟ್ ಪೂರ್ತಿ ಕ್ಯಾಮೆರಾಗೇ ಕೊಟ್ಟರೂ, ಕೊನೆಯ ಮಗುವಿನ ಫೋಟೋದ ಕ್ರೆಡಿಟ್ ಮಾತ್ರ ನಿಮಗೇ. ತು೦ಬಾನೇ ಮುದ್ದಾಗಿದೆ.

SHREE.NET said...

nan hatra profeshanal cemera ide adre adna maleli togomDu hOgOkke bhaya. yaake andre oMdu saari nanna bhava maida sangamadalli phOto tegitIni aMta hOgi cyaamarana purtiyaagi nIralli mulugisbiTTa. adanna ripEri maaDsodakke nanage 6000 saavira rupaayi karcu baMtu.
naanu saha hesarughaTTAda rasteyalliruva baaNaavara railvegET hattira iro apaarTmeMTnalli vaasa maadtaaiddIni. saadhyavaadre namage nimma muKa darshana maaDsi
nimma phOToagaLu tuMba chennaagive.
nimage Enaadru paravaagilla aadre cyaamraana maatra yaa kaaraNkkU nIrige haakbEDi.

SHREE.NET said...

hi shiva kumar avare, nan hatra profeshanal cemera ide. adre adna maleli togomDu hOgOkke bhaya. yaake andre oMdu saari nanna bhava maida sangamadalli phOto tegitIni aMta hOgi cyaamarana purtiyaagi nIralli mulugisbiTTa. adanna ripEri maaDsodakke nanage 6000 saavira rupaayi karcu baMtu.
naanu saha hesarughaTTAda rasteyalliruva baaNaavara railvegET hattira iro apaarTmeMTnalli vaasa maadtaaiddIni. saadhyavaadre namage nimma muKa darshana maaDsi
nimma phOToagaLu tuMba chennaagive.
nimage Enaadru paravaagilla aadre cyaamraana maatra yaa kaaraNkkU nIrige haakbEDi.
thank you
Ramesh C

KARTHIK said...
This comment has been removed by the author.
KARTHIK said...

ಶಿವು , ಸೂಪರ್ ಆಗಿದೆ ಈ ನಿಮ್ಮ ಚಿತ್ರಗಳು :)

shivu.k said...

Karthik Bhat : thanks