ಓಡಿದರು....ಓಡಿದರು...ಓಡಿದರು...ಇಂದು ಬೆಳಿಗ್ಗೆ[೩೧-೫-೨೦೦೯] ವರ್ಲ್ಡ್ ಟೆನ್ ಕೆ ಎನ್ನುತ್ತಾ ಬೆಂಗಳೂರಿನಲ್ಲಿ ಜನ ಓಡಿದರು.....
ನಾನು ಮುಂಜಾನೆ ಇವರ ಜೊತೆ ಓಡಬೇಕಿತ್ತು. ನನ್ನ ದಿನಪತ್ರಿಕೆ ಕೆಲಸದ ತೊಂದರೆಯಿಂದಾಗಿ ಓಡಲಾಗಲಿಲ್ಲ. ಹೋಗಲಿ ಫೋಟೋ ತೆಗೆಯೋಣವೆಂದು ವಿಧಾನ ಸೌಧದ ಮುಂದಿನ ರಸ್ತೆಯಲ್ಲಿ ಬೆಳಿಗ್ಗೆ ಏಳುವರೆಯ ಹೊತ್ತಿಗೆ ಕಾದು ನಿಂತಿದ್ದೆ. ಆಗ ಪ್ರಾರಂಭವಾಯಿತಲ್ಲ ಓಟ....
ಮೊದಲು ಯಾವುದಾದರೂ ಸ್ಪರ್ಧಾತ್ಮಕ ಚಿತ್ರಗಳನ್ನು ಕ್ಲಿಕ್ಕಿಸಬಹುದು ಅಂತ ಸೀರಿಯಸ್ಸಾಗಿ ಕ್ಲಿಕ್ಕಿಸತೊಡಗಿದೆ....ಸ್ವಲ್ಪ ಹೊತ್ತಿನ ನಂತರ ಆ ಸೀರಿಯಸ್ನೆಸ್ ಹೊರಟೇ ಹೋಯಿತು...ಕಾರಣ "ರನ್ ಮಾಡಿ ರನ್" ಅನ್ನುವುದನ್ನು ಬಿಟ್ಟು ಬೇರೆ ಏನೇನು ಮಾಡಿದರು ಅನ್ನುವುದು ಫೋಟೋ ಸಮೇತ ದಾಖಲಾಗತೊಡಗಿತು. ಎಲ್ಲಾ ತಮಾಷೆಯಾಗತೊಡಗಿತು. ವಿಧಾನಸೌಧದ ಮುಂದೆ ನಾನು ಕ್ಲಿಕ್ಕಿಸುತ್ತಿದ್ದಾಗ ಓಡುವುದನ್ನು ಬಿಟ್ಟು ಬೇರೆ ಏನೇನು ಮಾಡಿದರು ಅನ್ನುವ ತಮಾಷೆಯನ್ನು ಮುಂದಿನ ಭಾಗದಲ್ಲಿ ಚಿತ್ರ ಸಮೇತ ಬರೆಯುತ್ತೇನೆ.
ಈಗ ಅದಕ್ಕಿಂತಲೂ ಆಸಕ್ತಿಕರ ವಿಚಾರವನ್ನು ಇದೇ ಓಟದಲ್ಲಿ ನಾನು ಕಂಡೆನು. ಅದೇನೆಂದರೇ ಯಾರು ಯಾರು ಓಡಿದರು.?
ಅದನ್ನು ಗಮನಿಸಿದರೆ ದೊಡ್ಡ ಪಟ್ಟಿಯೇ ಆಗುತ್ತದೆ. ಅದಕ್ಕಾಗಿ ಕೆಲವನ್ನು ಮಾತ್ರ ತಿಳಿಸುತ್ತೇನೆ. ಫೋಟೋಗಳನ್ನು ನೋಡುತ್ತಾ ಓದಿಕೊಂಡು ಓದಿ.
ಮೊದಲು ವಿದೇಶಿ ಪಕ್ಕಾ ಓಟಗಾರರಿದ್ದರು, ಅವರ ಹಿಂದೆ ಅಂಗವಿಕಲ ವ್ಹೀಲ್ ಚೇರ್ ಓಟಗಾರರು, ಜೊತೆಗೆ ನಮ್ಮ ಸ್ವದೇಶಿ ಸ್ಪರ್ಧಾತ್ಮಕ ಓಟಗಾರರು, ನಂತರ ಬಂದರಲ್ಲ.....ಎಂಬತ್ತಕ್ಕೂ ಹೆಚ್ಚು ವಯಸ್ಸಾದ ವಯಸ್ಕರು ಅದಕ್ಕೆ ತದ್ವಿರುದ್ದವಾಗಿ ೧೦ ವರ್ಷದ ಮಕ್ಕಳು, ಹತ್ತು ಕಿಲೋ ಮೀಟರ್ ಸೀರಿಯಸ್ಸಾಗಿ ಓಡಿ ಇವತ್ತೇ ಹತ್ತು ಕೇಜಿ ತೂಕ ಇಳಿಸುವ ಧೃಡ ಸಂಕಲ್ಪ ಮಾಡಿದ ಸೀರಿಯಸ್ ಬೆವರಿನ ಮುಖಿಗಳು, ಅಯ್ಯೋ ಎನೋ ಓಡಿದರಾಯಿತು ಅಂದುಕೊಂಡ ಹಸನ್ಮುಖಿಗಳು, ಹತ್ತು ಕಿಲೋ ಮೀಟರ್ ಮುಗಿಯವವರೆಗೂ ಒಂದು ತೊಟ್ಟು ನೀರು ಕುಡಿಯೊಲ್ಲವೆಂದು ಸಫತಗೈದವರ ನಡುವೆಯೇ ನಿಮಿಷಕ್ಕೊಂದು ಗುಟುಕು ನೀರನ್ನು ಓಟದುದ್ದಕ್ಕೂ ಕುಡಿದವರು, ಇವರೆಲ್ಲಾ ಸೀರಿಯಸ್ಸ್ ಓಟಗಾರರು.
ಇವರ ನಡುವೆ ಮುಗುತಿಧಾರಿ ಸುಂದರ ಹುಡುಗಿಯರು, ಯುವತಿಯರು ಅವರನ್ನು ನೋಡುತ್ತಾ ಓಡಲಿಕ್ಕೆ ಬಂದ ಪಡ್ಡೆ ಹೈಕಳು, ಓಡುತ್ತಲೇ "ಕಣ್ಸನ್ನೆ ಕೈಕಾಲ್ ಸನ್ನೇಗಳನ್ನು" ಪಾಸ್ ಮಾಡುತ್ತಿದ್ದ ಕಾಲೇಜು ಯುವಕ ಯುವತಿಯರು, ಯುವ ಪ್ರೇಮಿಗಳು, ನವಜೋಡಿಗಳು, ವಿರಹಿಗಳು, ಗಟ್ಟಿ ಮಾತಿನ ಗಟ್ಟಿಗಿತ್ತಿ ಗೃಹಿಣಿಯರು, ಅವರ ಪಕ್ಕ ತಮ್ಮದೇ ಲೋಕದಲ್ಲಿ ಓಡುತ್ತಾ ವಿವರಿಸುತ್ತಿದ್ದ ಅಜ್ಜಂದಿರು ಓಡುತ್ತಿದ್ದಾರೆ.
ನೋಡಿ ಎಂಥೆಂಥವರು ಓಡುತ್ತಿದ್ದಾರೆ.!!

ಓಟ-ಬದುಕು ಎರಡರಲ್ಲೂ ಗೆಲ್ಲಬೇಕೆಂಬ ಛಲ...!!

ಓಟಕ್ಕೆ ವಯಸ್ಸಿನ ಅಂತರವಿದೆಯೇ?



ಎಲೇ ಹೆಣ್ಣೇ ನಿನ್ನ ಕೂದಲಿಗೆ ನನ್ನ ಕೂದಲು ಸವಾಲ್..!!

ಓಟಕ್ಕೆ ಎತ್ತರ-ಗಿಡ್ಡತನದ ತಡೆಯುಂಟೇ..!!


ಕೊಡಗಿನ ವೀರ ನೀನೆಲ್ಲೇ ಓಡು, ನಿನ್ನನ್ನು ಹಿಡಿಯಲು ನಾನು ಹಿಂದೆನೇ ಇದ್ದೇನೆ...

ನೀನು ಜಾನಿಢೆಫ್ ಆದರೆ ನಾನು ಆಧುನಿಕ ಅರ್ಧನಾರಿಶ್ವರಿ...ನಾನು ಪರಿಸರವಾದಿ...




ನಾವೆಲ್ಲಾ ಈ ವಿಧಾನಸೌಧದ ಮುಂದೆ ಓಡಬೇಕಾದ ಗತಿ ಬಂತಲ್ಲ...!!

ಮೀರಾ ನಿನ್ನ ಭಜನೆಯನ್ನು ಕೇಳುತ್ತಾ ನಾನು ಓಡುತ್ತಿದ್ದೇನೆ. ನಾನೇ ಗೆಲ್ಲೋದು...!!

ಹಲ್ಲುನೋವಿರಲಿ...ಕೈಗಳೇ ಇಲ್ಲದಿರಲಿ..ನಾವೂ ಓಡಿ ಗೆಲ್ಲುತ್ತೇವೆ....

ಅರೆರೆ...ಇಲ್ಲಿ ನೋಡಿ ನಮ್ಮ ಕೊಡಗಿನ ವೀರದಂಪತಿಗಳ ಜೊತೆಗೆ, ಮೈಸೂರು ಪೇಟಧಾರಿಗಳು, ನೇಪಾಳಿ ಟೋಪಿಧಾರರು, ಕವ್ವಾಲಿ ಹಾಡುವವರು, ನಮ್ಮದೇ ಸಂಸ್ಕೃತಿಯ ಪ್ರತೀಕದಂತ ವಸ್ತ್ರ ಧರಿಸಿದಂತ ಪುಟ್ಟ ಹುಡುಗಿಯೊಬ್ಬಳು ಅವರ ಜೊತೆ ಓಡುತ್ತಿದ್ದಾಳೆ. ನಡುವೆ ಮುಖಕ್ಕೆ ಬಣ್ಣ ಬಳಿದುಕೊಂಡ ಹುಡುಗರು, ನಮ್ಮ ಸಂಸ್ಕೃತಿಯ ಬಿಂಬಿಸುವ ವಸ್ತ್ರಗಳನ್ನು ತೊಟ್ಟಿದ್ದ ಕಿರುತೆರೆ ಕಲಾವಿದರು......ಹೀಗೆ ವಿವರಿಸಿದರೆ ನಿಮಗೆಲ್ಲಾ ಬೋರ್ ಆಗಿಬಿಡಬಹುದು ಅಂತ ನಿಲ್ಲಿಸಿದ್ದೇನೆ.
ನಾವೆಲ್ಲಾ ಭಾರತೀಯ ಸಂಷ್ಕೃತಿಯ ಪ್ರತೀಕಗಳು...
ನಟನೆಗೆ ವಿಶ್ರಾಂತಿ...ಈಗೇನಿದ್ದರೂ ಓಟ..

ಕ್ಲಿಕ್ಕಿಸಿದ್ದು ನೂರಾರಿದ್ದರೂ ಕೆಲವನ್ನು ಆಯ್ಕೆ ಮಾಡಿಕೊಂಡು ಬ್ಲಾಗಿಗೆ ಹಾಕಿದ್ದೇನೆ. ಇದರ ಜೊತೆಗೆ ಆನೇಕ ವೈವಿಧ್ಯತೆಯ ಟೋಪಿಗಳು ಸಿಕ್ಕಿವೆ. ಹಾಗೇ ಓಡುತ್ತಿರುವ ಭೂಪಟಗಳನ್ನು ಕ್ಲಿಕ್ಕಿಸುವಾಗ ಆದ ಅನುಭವಗಳೆಲ್ಲಾ ಮುಂದಿನ ಭಾರಿ.
ನಿಮಗೆ ಇಷ್ಟವಾದರೆ ಮುಂದಿನ ಬಾರಿ ಓಡುವುದಕ್ಕೆ ಬಂದವರು ಓಡುವುದನ್ನು ಬಿಟ್ಟು ಬೇರೆ ಏನೇನು ಮಾಡಿದರು ಬರೆಯುತ್ತೇನೆ...
ಚಿತ್ರ ಲೇಖನ
ಶಿವು.ಕೆ ARPS.