ಅಲ್ಲಿ ನನ್ನ ಗಮನ ಸೆಳೆದಿದ್ದು ಅಸ್ಸಾಂ ರಾಜ್ಯದ ಜಾನಪದ ಕಲೆಯಾದ "ಬಿಹು" ನೃತ್ಯ ಮತ್ತು ನೃತ್ಯ ಪ್ರದರ್ಶಿಸುವ ಸಹೋದರಿಯರು.
ಬಿಹು ನೃತ್ಯದ ಮತ್ತೊಮ್ಮೆ ಬರೆಯುತ್ತೇನೆ. ಯಾವುದೇ ಜನಪದ ಕಲೆಯಾದರೂ ಅದು ಬಂದಿರುವುದು ಹಳ್ಳಿಯಿಂದಲ್ಲವೇ. ಹಳ್ಳಿ ಅಂದ ಮೇಲೆ ಅದರ ಜೊತೆ ಜೊತೆಯಾಗಿ ಸರಳವಾಗಿ ಮುಗ್ಧತೆಯೂ ಕೂಡಿಬರುತ್ತದೆ. ಅದೇ ರೀತಿ ಇಲ್ಲಿ ಬಿಹು ನೃತ್ಯಗಾರ್ತಿಯರಾದ ಆಸ್ಸಾಂ ಸಹೋದರಿಯರು ಸಹಜ ಸರಳತೆಯಿಂದಾಗಿ ನನ್ನ ಗಮನ ಸೆಳೆದಿದ್ದರು.
ಇಂದಿನ ತಳುಕು ಬಳುಕಿನ ಕಾಲದಲ್ಲಿ ಅವರು ಈ ನೃತ್ಯ ಪ್ರಕಾರಕ್ಕಾಗಿ ಹಣೆಯ ಮೇಲೆ ಹಗಲವಾದ ಕೆಂಪು ಬೊಟ್ಟು. ಸಂಪೂರ್ಣ ಮೈಮುಚ್ಚಿಕೊಳ್ಳುವಂತರ ಅವರ ಸೀರೆ ಮತ್ತು ರವಿಕೆ, ಸರಿಯಾಗಿ ಮದ್ಯ ಬೈತಲೆ ತೆಗೆದು ಕೂದಲನ್ನೆಲ್ಲಾ ಓಟ್ಟು ಮಾಡಿ ಹಿಂದೆ ತುರುಬುಹಾಕಿರುವುದು, ತಲೆಯ ಹಿಂಬಾಗ ಮತ್ತು ತುರುಬಿನೊಳಗೆ ಸಿಕ್ಕಿಸಿಕೊಂಡಿರುವ ಅವರದೇ ಊರಿನ ನಯವಾಗಿ ತಿದ್ದಿ ತೀಡಿದ ಬಿದಿರಿನ ಕಡ್ಡಿ.
ಕೊರಳಿಗೆ ಸರಳವಾದ ಕಂದು ಬಣ್ಣದ ಮಣಿಹಾರ, ಸೌಂದರ್ಯವನ್ನೆಲ್ಲಾ ತಮ್ಮ ಮುಖಾರವಿಂದದ ಮುಗ್ದ ನಗುವಿನಲ್ಲೇ ಹೊರಹೊಮ್ಮಿಸುವ ಸಹಜತೆ, ನನ್ನ ಕ್ಯಾಮೆರಾ ಅಲರ್ಟ್ ಆದದ್ದೆ ಆಗ. ನೃತ್ಯ ಪ್ರದರ್ಶನ ಸಮಯ ಬಿಟ್ಟು ಬೇರೆ ಸಮಯದಲ್ಲಿ ಅವರು ಹೇಗಿರುತ್ತಾರೆ ಎನ್ನುವ ಕುತೂಹಲ ಬಂದಾಗ ಸುಮ್ಮನೆ ದೂರದಿಂದ ಕ್ಲಿಕ್ಕಿಸುತ್ತಾ ಹೋದೆ.
ಕಲೆಗಾಗಿ ತಮ್ಮ ಜೀವನವನ್ನೆ ಮುಡಿಪಾಗಿಟ್ಟಿರುವ ಈ ಸಹೋದರಿಯರು ನನ್ನ ಕ್ಯಾಮೆರಾ ಕಣ್ಣಿಗೆ ನಗುವಾಗಿ, ಗುಳಿಕೆನ್ನೆಯೊಳಗಿನ ಮುಗುಳ್ನಗುವಾಗಿ, ಭಾರತನಾರಿಯರ ಸ್ವತ್ತಾದ ನಾಚಿಕೆಯ ನೀರಾಗಿ, ಕಣ್ಣಲ್ಲೇ ಸಾವಿರ ಭಾವನೆಗಳನ್ನು ತೋರಿಸುವ ಮಗುವಾಗಿ, ಮಗುಮನಸ್ಸಿನ ಕುತೂಹಲಿಗಳಾಗಿ, ಪಕ್ಕಾ ಸಾಂಪ್ರದಾಯಿಕ ಮಹಿಳೆಯಾಗಿ, ಇವೆಲ್ಲಾ ಗುಣಗಳಿಗೆ ಕಿರೀಟದಂತಿರುವ ಮುಗ್ದತೆಯ ಪ್ರತಿರೂಪವಾಗಿ ಕಂಡರು.
ಇನ್ನು ಇವರ ಬಗ್ಗೆ ಹೆಚ್ಚಿಗೆ ಬರೆದರೆ ಕಲ್ಪನೆಯ ಕದ ತೆರೆದಂತಾಗಿ ವಾಸ್ತವ ಚಿತ್ರಗಳ ನಿಜ ಹೊಳಪುಗಳುಗಳು ಮಂಕಾಗುತ್ತವೆನ್ನುವ ಭಯ. ಬದಲಿಗೆ ಒಂದೊಂದೆ ಚಿತ್ರವನ್ನು ನಿದಾನವಾಗಿ ಆಸ್ವಾದಿಸೋಣ ಬನ್ನಿ. !
೧. ಹೆಣ್ಣಿಗೆ ಅಂದ........................ನಾಚಿಕೆ ಚಂದ...............ಕೈಸೆರೆಯಾದರೆ..................
೨. ಪಿಸುಮಾತೊಂದಾ........ಹೇಳಲೇ ನಾನೀಗಲೇ.......
೩. ಒಂದು ದಿನ ಎಲ್ಲಿಂದಲೋ......ನೀ ಬಂದೆ...........
೪. ಓ ಗುಣವಂತಾ.........ನೀನೆಂದೂ ನನ್ನ ಸ್ವಂತಾ..................................
ಯಾರೇ ನೀನು ಚೆಲುವೇ................ನಿನ್ನಷ್ಟಕ್ಕೆ ನೀನೆ ಏಕೆ ನಗುವೇ...................................
೬. ಚೆಲುವೆಯಾ ನೋಟ ಚೆನ್ನಾ...........ಒಲವಿನ ಮಾತು ಚೆನ್ನಾ.............
೭. ಕಣ್ಣು ರೆಪ್ಪೆ ಒಂದನೊಂದು ಮರೆವುದೇ..........ಅದು ಎಂದಾದರೂ ಬೇರೆ ಬೇರೆ ಇರುವುದೇ............
೮. ಮೌನವೇ ಆಭರಣಾ.............ಮುಗುಳ್ನಗೇ ಶಶಿಕಿರಣಾ................
೧೧. ನನ್ನ ಕಣ್ಣ ಕನ್ನಡಿಯಲ್ಲಿ.......ಕಂಡೇ ನಿನ್ನ ರೂಪ............
೧೦. ಕಣ್ಣು ಕಣ್ಣು ಕಲೆತಾಗ.............ಮನವೂ ಉಯ್ಯಾಲೆ ಆಡಿದೆ ಈಗ..............
೯. ಮೆಲ್ಲುಸುರೇ..........ಸವಿಗಾನ............. ಎದೆ ಝಲ್ಲನೇ............ಹೂವಿನ ಬಾಣ..............
೧೨. ನಗು ನಗುತಾ....ನಲಿ ನಲಿ................ ಏನೇ ಆಗಲಿ...............
೧೩. ನೋಟದಾಗೇ ನಗೆಯಾ ಮೀಟಿ......ಮೋಜಿನಾಗೆ ಎಲ್ಲೆಯ ದಾಟಿ..............
೧೪. ಇವಳು ಯಾರು ಬಲ್ಲೆ ಏನು........ಇವಳ ಹೆಸರ ಹೇಳಲೇನು.......... ಇವಳ ದನಿಗೆ ಕರಗಲೇನು
೧೫. ನೀರಿನಲ್ಲಿ ಅಲೆಯೋ ಉಂಗುರಾ.................... ಮನಸೆಳೆದನಲ್ಲಾ....... ಕೊಟ್ಟನಲ್ಲಾ.......ಕೆನ್ನೆ ಮೇಲೆ ಪ್ರೇಮದುಂಗುರಾ.........
೧೬. ಒಲವಿನ..... ಪ್ರಿಯಲತೆ......ಅವಳದೇ ಚಿಂತೇ......... ಅವಳ ಮಾತೆ........ಮಧುರ ಗೀತೆ... ಅವಳೇ ನನ್ನ ದೇವತೇ........
ಮುಂದಿನ ಬಾರಿ ಇದೇ ಸಹೋದರಿಯರ " ಈ ಸಂಭಾಷಣೆ.....ನಮ್ಮ ಈ ಪ್ರೇಮ ಸಂಭಾಷಣೆ........
ಚಿತ್ರ ಮತ್ತು ಲೇಖನ
ಶಿವು.
42 comments:
ಬಾವನೆಗಳ ಮುನ್ನುಡಿಗೆ ನಿಮ್ಮ ಕನ್ನಡಿ, ಫೊಟೊಗಳು ಚೆನ್ನಾಗಿದೆ, CKP ನಾನು ಹೊಗ್ತಾ ಇರುತ್ತೆನಿ ಶಿವು. ಚೆನ್ನಾಗಿದೆ
ಶಿವಣ್ಣ,
ನೀರಿನಲ್ಲಿ ಅಲೆಯ ಉಂಗುರ
ಭೂಮಿ ಮೇಲೆ ಹೋವಿನುಂಗುರ..
ಮನಸೆಳೆದ ನಲ್ಲ....ಕೊಟ್ಟನಲ್ಲ..
ಕೆನ್ನೆ ಮೇಲೆ ಸ್ನೇಹದುಂಗುರ..
ನಿಮ್ಮ ಸೋದರಿಯರು.. ತುಂಬಾ ಚೆನ್ನಾಗಿದ್ದರೆ..ಅವರ ಲಾಸ್ಯದ ದೃಶ್ಯವಿದ್ದರೆ ಚೆನ್ನಾಗಿರುತ್ತದೆ. ನಮಗೆ ವಿಭಿನ್ನ ಅನ್ನಿಸುವುದಂತು ಖಂಡಿತ
ಮೋಹನ್,
ಪ್ರತಿಕ್ರಿಯಿಸಿದ್ದಕ್ಕೆ ಥ್ಯಾಂಕ್ಸ್.
ಜಯಶಂಕರ್,
ಪ್ರತಿಕ್ರಿಯಿಸಿದ್ದಕ್ಕೆ ಥ್ಯಾಂಕ್ಸ್.
ನಮ್ಮೆಲ್ಲರ ಆನಂದಕ್ಕೆ ತಮ್ಮ ನೃತ್ಯ ಜೀವನವನ್ನೇ ಮುಡಿಪಾಗಿಟ್ಟಿರುವ ಇವರು ನನಗೂ, ನಿಮಗೂ, ನಮೆಗೆಲ್ಲರಿಗೂ ಸಹೋದರಿಯರು ಅಂತ ಹೇಳಿಕೊಳ್ಳುವುದಕ್ಕೆ ಹೆಮ್ಮೆ ಎನಿಸುತ್ತದೆ !
ಶಿವು ಸರ್,
ನಗುವಿನ ಎಲ್ಲ ಪ್ರಾಕಾರಗಳನ್ನು ಹಿಡಿದಿಟ್ಟಿದ್ದೀರಿ, ಚೆನ್ನಾಗಿದೆ ಬರಹ ಮತ್ತು ಚಿತ್ರಗಳು.
-ರಾಜೇಶ್ ಮಂಜುನಾಥ್
ಶಿವು ಸರ್...
ಫೋಟೊ ಮತ್ತು ಅದಕ್ಕೆ ಹೊಂದಿಸಿದ ಹಾಡು..
ಎರಡೂ ಒಂದಕ್ಕೊಂದು ಪೂರಕ...!
ತುಂಬಾ ಚಂದವಾಗಿದೆ...!
ರಾಜೇಶ್ ಮಂಜುನಾಥ್, ಪ್ರಕಾಶ್ ಸಾರ್,
ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು.
ಪ್ರಿಯ ಶಿವು.
ಅತಿ ರಮ್ಯ ಚಿತ್ರಗಳು ಮುಂಜಾನೆಯೆ ಮನಸೆಳೆದವು.ಅಸ್ಸಂನ ವಸಂತಾಗಮನದ ಈ ಬಿಹುನೃತ್ಯ ಈ ಸುಂದರಿಯರಷ್ಟೆ ಸುಂದರ.ಎಲ್ಲರ ಕಣ್ಣು ಸ್ಟೇಜ್ ಮೇಲಿರುವಾಗ ನೀವು ಪರದೆಯ ಹಿಂದೆ ಸರಿದದ್ದು ಸಾರ್ಥಕವಾಯಿತು.
ಅಶೋಕ ಉಚ್ಚಂಗಿ
http://mysoremallige01.blogspot.com/
sakhath photos shivu avre...CKP ge naanu regular visitor e.
ಆಶೋಕ್, ಲಕ್ಷ್ಮಿಯವರೆ,
ಪ್ರತಿಕ್ರಿಯಿಸಿದ್ದಕ್ಕೆ ಥ್ಯಾಂಕ್ಸ್....ಹೀಗೆ ಬರುತ್ತಿರಿ..
ಶಿವು,
ಪೋಟೋ ಮತ್ತೆ ತಲೆಬರಹ ಎರಡೂ ಸೂಪರ್.
--
PaLa
ಶಿವು,
ಎಷ್ಟು ಚಂದದ ಚಿತ್ರಗಳನ್ನು ಕೊಟ್ಟಿದ್ದೀರೋ, ಅಷ್ಟೇ ಚಂದದ
ಮೇಲ್ಬರಹಗಳನ್ನು ಕೊಟ್ಟಿದ್ದೀರಿ.
ಚಿತ್ರದ ಸೌಂದರ್ಯವನ್ನು ಆಸ್ವಾದಿಸುತ್ತಲೇ, ಕನ್ನಡ ಚಿತ್ರಗೀತೆಗಳ
ನೆನಪಿನಿಂದ ಮನಸ್ಸು ಪುಳಕಿತವಾಯಿತು.
ಶಿವಣ್ಣ..
ಸೂಪರ್ರು..ಅದೇನು ಅಕ್ಷರಗಳ ಹೊಳಪೋ...ನಿಜವಾಗಲೂ ಈ ಬರಹ ಬರೆದಿದ್ದೂ ಚೆಂದ..ಫೋಟೋಗಳು ಚೆಂದ..ಅವುಗಳ ಶೀರ್ಷಿಕೆಗಳು ಇನ್ನೂ ಚೆನ್ನ. "ಇಂದಿನ ತಳುಕು ಬಳುಕಿನ ಕಾಲದಲ್ಲಿ ಅವರು ಈ ನೃತ್ಯ ಪ್ರಕಾರಕ್ಕಾಗಿ ಹಣೆಯ ಮೇಲೆ ..."! ಹೇಳಿದ್ದೀರಿ. ಆದರೆ ನಮ್ಮಲ್ಲೂ ಭರತನಾಟ್ಯ ಅಥವಾ ಇನ್ಯಾವುದೇ ಸಾಂಪ್ರದಾಯಿಕ, ಜನಪದ ನೃತ್ಯ ಮಾಡೋರು ಅದೇ ರೀತಿ ಡ್ರೆಸ್ ಮಾಡ್ತಾರಲ್ವಾ? ಆದರೆ ಈವಾಗ ಅದೆಲ್ಲ "ಗತಕಾಲದ ಇತಿಹಾಸ"ಗಳಾಗುತ್ತಿರುವುದೇ ವಿಷಾದ ಅಲ್ಲವೇ?
-ತುಂಬುಪ್ರೀತಿ,
ಚಿತ್ರಾ
ಶಿವು,
ಚಿತ್ರಗಳು ಸೊಗಸಾಗಿವೆ.
ಸೊಗಸಾಗಿವೆ...
ಪಾಲಚಂದ್ರ, ಅನಿಲ್ ರಮೇಶ್, ಚೇತನ,
ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು.
ಸುನಾಥ್ ಸಾರ್,
ನನಗೆ ಚಿತ್ರಗಳ ಮೇಲಿರುವಷ್ಟು ಪ್ರೀತಿ ಹಳೆಯ ಹಾಡುಗಳ ಮೇಲು ಇದೆ. ಚಿತ್ರವನ್ನು ಆಸ್ವಾದಿಸಿದಕ್ಕೆ, ಹಳೆಯ ಹಾಡುಗಳಿಂದ ಪುಳಕಗೊಂಡಿದ್ದಕ್ಕೆ ಧನ್ಯವಾದಗಳು.
ಚಿತ್ರಾ,
ಬರವಣಿಗೆಯನ್ನು ಆಸ್ವಾದಿಸಿದ್ದಕ್ಕೆ ಮತ್ತು ಚಿತ್ರಗಳನ್ನು ಮೆಚ್ಚಿದ್ದಕ್ಕೆ, ಶೀರ್ಷಿಕೆಗಳನ್ನು ಮನದಲ್ಲಿಯೇ ಗುನುಗುನಿಸಿದ್ದಕ್ಕೆ ಥ್ಯಾಂಕ್ಸ್.
ಮತ್ತೆ ಎಲ್ಲಾ ನೃತ್ಯ ಪ್ರಕಾರಗಳಲ್ಲೂ ಕಲೆಗಾರರು ಯಾರಾಗಿರುತ್ತಾರೆ ಎನ್ನುವುದು ಮುಖ್ಯ. ನೃತ್ಯದಲ್ಲಿ ಅತ್ಯುನ್ನತ ಪರಿಣತಿ ಸಾಧಿಸಿದ ಕಲಾವಿದ/ದೆ ಜೊತೆಯಲ್ಲಿ ಸಹಜ ಮುಗ್ದತೆಯನ್ನು ಉಳಿಸಿಕೊಂಡಿದ್ದರೆ ಮಾತ್ರ ಇಂಥವೆಲ್ಲಾ ನಮಗೆ ನೋಡಲು ಸಿಗುತ್ತವೆ.
ಶಿವು,
ವಂಡರ್ಫುಲ್! ನೀವು ನನ್ನ ಬ್ಲಾಗಿಗೆ ಬಂದು ನಿಮ್ಮ ಬ್ಲಾಗ್ ಬಗ್ಗೆ ಬರೆಯದೇ ಇದ್ದರೆ ನನಗೆ ಇಷ್ಟು ಚಂದದ ಚಿತ್ರಗಳನ್ನು ನೋಡಲು ಸಿಗುತ್ತಲೇ ಇರಲಿಲ್ಲ.
ನನ್ನ ಗೂಗಲ್ ರೀಡರ್ಗೆ ನಿಮ್ಮ ಬ್ಲಾಗುಗಳನ್ನು ಇಳಿಸಿಯಾಯ್ತು. ಥ್ಯಾಂಕ್ಸ್!
ಕೇಶವ (www.kannada-nudi.blogspot.com)
ಕೇಶವ ಕುಲಕರ್ಣಿ ಸಾರ್,
ನನ್ನ ಬ್ಲಾಗಿಗೆ ಸ್ವಾಗತ. ಪ್ರತಿಕ್ರಿಯಿಸಿದ್ದಕ್ಕೆ ಥ್ಯಾಂಕ್ಸ್.
ಹೀಗೆ ಬರುತ್ತಿರಿ....
ಶಿವು, ಚಿತ್ರಗಳ ಜೊತೆ ಸೊಗಸಾದ ಸೂಕ್ತ ಗೀತೆಗಳನ್ನು ಕೊಟ್ಟು ಚಿತ್ರಲೇಖನಕ್ಕೆ ಹೊಸ ಆಯಾಮವನ್ನೇ ಕೊಟ್ಟಿದ್ದೀರಿ. ಬರೀ ಚೆನ್ನಾಗಿದೆ, ಸೊಗಸಾಗಿದೆ ಅಂತ ಹೇಳಿದರೆ ಸಾಲದು. ಅದ್ಭುತ, ಅದ್ಭುತ, ಪರಮಾದ್ಭುತ...
ತುಂಬಾ ಸುಂದರ...
ಎಲ್ಲಾ ಚಿತ್ರಗಳೂ ತುಂಬಾ ಚೆನ್ನಾಗಿವೆ. ಅದರಲ್ಲೂ ಆರನೆಯ ಮತ್ತು ಹತ್ತನೆಯ ಫೋಟೋಗಳಲ್ಲಿರುವ ಚೆಲುವೆಯರು ತುಂಬಾ ಇಷ್ಟವಾದರು.
ಮಲ್ಲಿಕಾರ್ಜುನ್,
ಪ್ರತಿಕ್ರಿಯಿಸಿದ್ದಕ್ಕೆ ಥ್ಯಾಂಕ್ಸ್.
ಮುತ್ತುಮಣಿ ಥ್ಯಾಂಕ್ಯು.............
ತೇಜಸ್ವಿನಿ ಮೇಡಮ್,
ಆರನೆ ಮತ್ತು ಹತ್ತನೆ ಫೋಟೊದಲ್ಲಿರುವ ಸಹೋದರಿ ಒಬ್ಬಳೆ ಅಲ್ಲವೇ ! ಇಷ್ಟಪಟ್ಟಿದ್ದಕ್ಕೆ ಥ್ಯಾಂಕ್ಸ್. ಹೀಗೆ ಬರುತ್ತಿರಿ...
ನೀರಿನಲ್ಲಿ ಅಲೆಯ ಉಂಗುರಾ.. ನನ್ನಿಷ್ಟದ ಹಾಡುಗಳಲ್ಲೊಂದು :-)
ಓಹ್!! ನಿಜವಾಗಿಯೂ ನನಗೆ ಗೊತ್ತೇ ಆಗಲಿಲ್ಲ!! ನೀವು ಹೇಳಿದ ಮೇಲೆ ಇನ್ನೊಮ್ಮೆ ನೋಡಿದೆ. ಹೌದು ಒಬ್ಬಳೇ. ಆದರೆ ನನಗೆ ಮಾತ್ರ ತಿಳಿಯಲಿಲ್ಲ ನೋಡಿ..ಎಷ್ಟೆಂದರೂ ಇದು ಛಾಯಾ ಕನ್ನಡಿ ಅಲ್ಲವೇ? ನನ್ನ ಕಣ್ಣಿಗೂ ಮಾಯೆ ಬಡಿದಿತ್ತೇನೋ...:)
ತಿದ್ದಿದ್ದಕ್ಕೆ ಧನ್ಯವಾದಗಳು.
ಹರೀಶ್, ಥ್ಯಾಂಕ್ಸ್.
ತೇಜಸ್ವಿನಿ ಮೇಡಮ್, ಮತ್ತೆ ಬಂದಿದ್ದಕ್ಕೆ ಮತ್ತು ಸಂಶಯ ಪರಿಹರಿಸಿಕೊಂಡಿದ್ದಕ್ಕೆ ಥ್ಯಾಂಕ್ಸ್.
ಶಿವು ರವರೆ.
ಫೋಟೋಸ್ ಮತ್ತೆ ನಿಮ್ಮ ಬರಹ ಎರಡು ತುಂಬಾ ಚೆನ್ನಾಗಿದೆ... ಒಳ್ಳೇ ಚೆಲುವೆಯರನ್ನೇ ಸೆರೆ ಹಿಡಿದಿದ್ದೀರಾ....
http://guruprsad.blogspot.com/ &
http://guru-prasadkr.spaces.live.com/blog/
Vow...Superb...shivanna...
Curiously waiting for "E sambaashane..."
ಗುರು,
ನಿಮ್ಮ ಪ್ರತಿಕ್ರಿಯೆಗೆ ಥ್ಯಾಂಕ್ಸ್.
ಸುಧೇಶ್,
ಪ್ರತಿಕ್ರಿಯಿಸಿದ್ದಕ್ಕೆ ಥ್ಯಾಂಕ್ಸ್. ಮತ್ತು ನಿಮ್ಮ ನಿರೀಕ್ಷೆಗಳನ್ನು ಹುಸಿಗೊಳಿಸುವುದಿಲ್ಲ.
ಎಂಥಾss ಸೊಗಸು..
wow superb..
ರಮೇಶ್,
ಪ್ರತಿಕ್ರಿಯಿಸಿದ್ದಕ್ಕೆ ಥ್ಯಾಂಕ್ಸ್.
ತುಂಬ ಚೆಂದದ ಚಿತ್ರಗಳು ಶಿವೂ ಅವರೇ.. keep going......... :)
http://kenecoffee.wordpress.com/
ವೈಶಾಲಿ ಮೇಡಮ್,
ಪ್ರತಿಕ್ರಿಯಿಸಿದ್ದಕ್ಕೆ ಥ್ಯಾಂಕ್ಸ್....ಹೀಗೆ ಬರುತ್ತಿರಿ....
ಶಿವು,
ಚಿತ್ರಗಳು ತುಂಬಾ ಇಷ್ಟವಾದವು. ಬಳಸಿಕೊಂಡ ಹಾಡುಗಳೂ.
ಸುಶ್ರುತ,
ಪ್ರತಿಕ್ರಿಯೆಗಾಗಿ ಥ್ಯಾಂಕ್ಸ್.
ಶಿವು, ತುಂಬಾ ಮುದ್ದಾಗಿವೆ ಫೊಟೊಗಳು. ಶೀರ್ಷಿಕೆಗಳೂ ಅದಕ್ಕೆ ತಕ್ಕಂತಿವೆ. ತುಂಬಾ ತಾಳ್ಮೆಯಿದೆ ನಿಮಗೆ. ಅಥವಾ ಆಸಕ್ತಿಯಾ?
ಸೊಗಸಾದ ಚಿತ್ರ ಬರಹ.
- ಪಲ್ಲವಿ ಎಸ್.
ಪಲ್ಲವಿ ಮೇಡಮ್,
ಪ್ರತಿಕ್ರಿಯಿಸಿದ್ದಕ್ಕೆ ತುಂಬಾ ಥ್ಯಾಂಕ್ಸ್.
ಫೋಟೋಗ್ರಫಿ ಬಗ್ಗೆ ನನಗೆ ಆಸಕ್ತಿ ಮತ್ತು ತಾಳ್ಮೆ ಯಾವುದು ಇದೆ ಅಂತ ನೀವೆ ತೀರ್ಮಾನಿಸಿ !
ಚಿತ್ರಗಳು ಮತ್ತು ಅದಕ್ಕೆ ಶಿರ್ಷಿಕೆಯಾಗಿ ಚಲನಚಿತ್ರಗೀತೆಗಳನ್ನು ಬಳಸಿರುವ ರೀತಿ ಚೆನ್ನಾಗಿದೆ
ಕುಮಾರ ರೈತರವರೆ,
ಮೊದಲಬಾರಿಗೆ ನನ್ನ ಬ್ಲಾಗಿಗೆ ಬಂದಿದ್ದೀರಿ...
ತುಂಬಾ ಥ್ಯಾಂಕ್ಸ್. ಹೀಗೆ ಬರುತ್ತಿರಿ....
ಆಹಾಂ! ಹೊಸ ವರ್ಷದ ಶುಭಾಶಯಗಳು. ಮತ್ತೆ ಹೊಸ ವರ್ಷಕ್ಕ ಹೊಸ ಟೋಪಿಗಳನ್ನು ಹಾಕಿದ್ದೇನೆ. ಟೋಪಿ ಹಾಕಿಕೊಳ್ಳಲು ಅಲ್ಲಲ್ಲ....ನೋಡಲು ಬನ್ನಿ.
ಚಿತ್ರಾ, ಬರವಣಿಗೆಯನ್ನು ಆಸ್ವಾದಿಸಿದ್ದಕ್ಕೆ ಮತ್ತು ಚಿತ್ರಗಳನ್ನು ಮೆಚ್ಚಿದ್ದಕ್ಕೆ, ಶೀರ್ಷಿಕೆಗಳನ್ನು ಮನದಲ್ಲಿಯೇ ಗುನುಗುನಿಸಿದ್ದಕ್ಕೆ ಥ್ಯಾಂಕ್ಸ್. ಮತ್ತೆ ಎಲ್ಲಾ ನೃತ್ಯ ಪ್ರಕಾರಗಳಲ್ಲೂ ಕಲೆಗಾರರು ಯಾರಾಗಿರುತ್ತಾರೆ ಎನ್ನುವುದು ಮುಖ್ಯ. ನೃತ್ಯದಲ್ಲಿ ಅತ್ಯುನ್ನತ ಪರಿಣತಿ ಸಾಧಿಸಿದ ಕಲಾವಿದ/ದೆ ಜೊತೆಯಲ್ಲಿ ಸಹಜ ಮುಗ್ದತೆಯನ್ನು ಉಳಿಸಿಕೊಂಡಿದ್ದರೆ ಮಾತ್ರ ಇಂಥವೆಲ್ಲಾ ನಮಗೆ ನೋಡಲು ಸಿಗುತ್ತವೆ.
Post a Comment